Job · chapter 27 · verse 13
Job 27:13 in Kannada
ಇದು ದುಷ್ಟ ಮನುಷ್ಯನಿಗೆ ದೇವರಿಂದ ಬಂದ ಪಾಲಾಗಿದೆ; ಬಲಾತ್ಕಾರಿಗಳು ಸರ್ವ ಶಕ್ತನಿಂದ ಹೊಂದುವ ಬಾಧ್ಯತೆ ಇದೇ.
Idu dushta manushyanige devarinda banda paalaagide; balaatkaarigalu sarva shaktaninda honduva baadhyate ide.
Job 27:13 in English
- King James Version (KJV)
- This [is] the portion of a wicked man with God, and the heritage of oppressors, [which] they shall receive of the Almighty.
- World English Bible (WEB)
- “This is the portion of a wicked man with God, the heritage of oppressors, which they receive from the Almighty.
- American Standard Version (ASV)
- This is the portion of a wicked man with God, And the heritage of oppressors, which they receive from the Almighty:
- Bible in Basic English (BBE)
- This is the punishment of the evil-doer from God, and the heritage given to the cruel by the Ruler of all.
- Darby Translation (DBY)
- This is the portion of the wicked man with God, and the heritage of the violent, which they receive from the Almighty: —
- Webster's Bible (WBS)
- This [is] the portion of a wicked man with God, and the heritage of oppressors, [which] they shall receive of the Almighty.
- Young's Literal Translation (YLT)
- This [is] the portion of wicked man with God, And the inheritance of terrible ones From the Mighty they receive.
Read in context
- 11ದೇವರ ಸಹಾಯದಿಂದ ನಿಮಗೆ ಬೋಧಿಸು ವೆನು; ಸರ್ವಶಕ್ತನಲ್ಲಿ ಇರುವವುಗಳನ್ನು ಮರೆ ಮಾಡೆನು.
- 12ಇಗೋ, ನೀವೆಲ್ಲರೂ ದೃಷ್ಟಿಸಿದ್ದೀರಿ; ಯಾಕೆ ಈ ಪ್ರಕಾರ ಕೇವಲ ವ್ಯರ್ಥವಾಗಿ ಹೋಗಿ ದ್ದೀರಿ?
- 13ಇದು ದುಷ್ಟ ಮನುಷ್ಯನಿಗೆ ದೇವರಿಂದ ಬಂದ ಪಾಲಾಗಿದೆ; ಬಲಾತ್ಕಾರಿಗಳು ಸರ್ವ ಶಕ್ತನಿಂದ ಹೊಂದುವ ಬಾಧ್ಯತೆ ಇದೇ.
- 14ಅವನ ಮಕ್ಕಳು ಹೆಚ್ಚಿದರೆ ಖಡ್ಗಕ್ಕೆ ಗುರಿಯಾಗುವರು; ಅವನ ಸಂತ ತಿಯವರು ರೊಟ್ಟಿಯಿಂದ ತೃಪ್ತಿಹೊಂದರು.
- 15ಅವ ನಿಗೆ ಉಳಿದವರು ಮರಣದಲ್ಲಿ ಹೂಣಲ್ಪಡುವರು; ಅವನ ವಿಧವೆಗಳು ಅಳದೆ ಇರುವರು.
Cross references
- Job 20:19–29 ಯೋಬನು 20:19–29ದೀನರನ್ನು ಜಜ್ಜಿ ತೊರೆ ದುಬಿಟ್ಟನು; ತಾನು ಕಟ್ಟದ ಮನೆಯನ್ನು ಕೆಡವಿ ಬಿಟ್ಟನು. ನಿಶ್ಚಯವಾಗಿ ಅವನು ತನ್ನ ಹೊಟ್ಟೆಯಲ್ಲಿ ಸೌಖ್ಯ ತಿಳುಕೊಳ್ಳುವದಿಲ್ಲ; ತನಗೆ ಇಷ್ಟವಾದದರಲ್ಲಿ ಏನೂ ಉಳಿಸಿಕೊಳ್ಳುವದಿಲ್ಲ. ಅವನ ಊಟದಲ್ಲಿ ಏನೂ ಉಳಿಯದು; ಆದದರಿಂದ ಅವನ ವಸ್ತುಗಳನ್ನು ಯಾರೂ ನೋಡುವದಿಲ್ಲ. ಅವನ ಪೂರ್ಣತೆಯ ಹೆಚ್ಚಿಗೆಯಲ್ಲಿ ಅವನಿಗೆ ಇಕ್ಕಟ್ಟಾಗಿದೆ; ದುಷ್ಟರ ಕೈಗಳೆಲ್ಲಾ ಅವನ ಮೇಲೆ ಬರುವವು. ಏನಾಗುವದಂದರೆ ಅವನ ಹೊಟ್ಟೆಯನ್ನು ತುಂಬು ವದಕ್ಕಿರುವಾಗ ದೇವರು ತನ್ನ ಕೋಪದ ಉರಿಯನ್ನು ಅವನ ಮೇಲೆ ಕಳುಹಿಸುವನು; ಅವನ ಆಹಾರಕ್ಕಾಗಿ ಅವನ ಮೇಲೆ ಸುರಿಸುವನು. ಅವನು ಕಬ್ಬಿಣದ ಆಯುಧಕ್ಕೆ ಓಡಿಹೋದರೆ ಹಿತ್ತಾಳೆಯ ಬಿಲ್ಲು ಅವ ನನ್ನು ತಿವಿಯುವದು. ಅವನು ಎಳೆದರೆ ಅದು ಬೆನ್ನಿನಿಂದ ಹೊರಡುವದು; ಅವನ ಪಿತ್ತದೊಳಗಿಂದ ಮಿಂಚುವ ಖಡ್ಗ ಬರುವದು; ಅವನ ಮೇಲೆ ಹೆದರಿಕೆ ಗಳು ಅವೆ. ಎಲ್ಲಾ ಅಂಧಕಾರವು ಅವನ ಗುಪ್ತ ಸ್ಥಳಗಳಲ್ಲಿ ಇಡಲ್ಪಟ್ಟಿದೆ; ಯಾರೂ ಹೊತ್ತಿಸದ ಬೆಂಕಿ ಅವನನ್ನು ತಿನ್ನುವದು; ಅವನ ಗುಡಾರದಲ್ಲಿ ಉಳಿ ದವನು ನಾಶವಾಗುವನು. ಆಕಾಶಗಳು ಅವನ ಅಕ್ರಮವನ್ನು ಪ್ರಕಟಮಾಡುವವು; ಭೂಮಿಯು ಅವನಿಗೆ ವಿರೋಧವಾಗಿ ಏಳುವದು. ಅವನ ಮನೆಯ ಆದಾಯವು ತೊಲಗಿ ಹೋಗುವದು; ಅವನ ಕೋಪದ ದಿವಸದಲ್ಲಿ ಅದು ಕರಗಿ ಹೋಗುವದು.ದುಷ್ಟಮನುಷ್ಯನಿಗೆ ದೇವರಿಂದ ಬರುವ ಪಾಲೂ ದೇವರಿಂದ ಅವನಿಗೆ ನೇಮಿಸಲ್ಪ ಟ್ಟಿರುವ ಬಾಧ್ಯತೆಯೂ ಇದೇ. ದುಷ್ಟಮನುಷ್ಯನಿಗೆ ದೇವರಿಂದ ಬರುವ ಪಾಲೂ ದೇವರಿಂದ ಅವನಿಗೆ ನೇಮಿಸಲ್ಪ ಟ್ಟಿರುವ ಬಾಧ್ಯತೆಯೂ ಇದೇ.
- Job 15:20–35 ಯೋಬನು 15:20–35ದುಷ್ಟನು ತನ್ನ ದಿವಸಗಳಲ್ಲೆಲ್ಲಾ ವೇದನೆ ಪಡು ತ್ತಾನೆ; ವರುಷಗಳ ಲೆಕ್ಕವು ಬಲಾತ್ಕಾರಿಗೆ ಮರೆಯಾಗಿದೆ. ಭಯಂಕರವಾದ ಶಬ್ದ ಅವನ ಕಿವಿಗಳಲ್ಲಿ ಅದೆ; ವೃದ್ಧಿಯಲ್ಲಿರುವಾಗ ಹಾಳುಮಾಡುವವನು ಅವನ ಮೇಲೆ ಬರುತ್ತಾನೆ. ಕತ್ತಲೆಯೊಳಗಿಂದ ಹಿಂದಿರುಗು ತ್ತೇನೆಂದು ಅವನು ನಂಬುವದಿಲ್ಲ; ಅವನ ಕತ್ತಿಯು ಅವನಿಗಾಗಿ ಕಾದಿದೆ. ಅವನು ರೊಟ್ಟಿಗೊಸ್ಕರ ಅದು ಎಲ್ಲಿ ಎಂದು ಅಲೆಯುತ್ತಾನೆ; ಕತ್ತಲೆಯ ದಿನ ತನ್ನ ಕೈ ಹತ್ತಿರ ಸಿದ್ಧವಾಗಿದೆ ಎಂದು ತಿಳಿದಿದ್ದಾನೆ. ಇಕ್ಕಟ್ಟೂ ಸಂಕಟವೂ ಅವನನ್ನು ಹೆದರಿಸಿ, ಯುದ್ದಕ್ಕೆ ಸಿದ್ಧವಾದ ಅರಸನಂತೆ ಅವನ ಮೇಲೆ ಬೀಳುತ್ತವೆ. ದೇವ ರಿಗೆ ವಿರೋಧವಾಗಿ ತನ್ನ ಕೈಚಾಚಿ, ಸರ್ವಶಕ್ತನಿಗೆ ವಿರೋಧವಾಗಿ ಬಲಗೊಂಡಿದ್ದಾನೆ. ಅವನೆದುರಿಗೆ ಕುತ್ತಿಗೆಯಿಂದಲೂ ತನ್ನ ಗುರಾಣಿಯ ದಪ್ಪವಾದ ಗುಬ್ಬಿಯಿಂದಲೂ ಓಡುತ್ತಾನೆ. ತನ್ನ ಮುಖವನ್ನು ಕೊಬ್ಬಿನಿಂದ ಮುಚ್ಚಿಕೊಂಡು, ತನ್ನ ನಡುವಿನ ಮೇಲೆ ಬೊಜ್ಜನ್ನು ಕಟ್ಟಿಕೊಂಡಿದ್ದಾನೆ. ಹಾಳಾದ ಪಟ್ಟಣ ಗಳಲ್ಲಿಯೂ ನಿವಾಸಿಗಳು ಇಲ್ಲದಂಥ ದಿಬ್ಬೆಗಳಾ ಗುವದಕ್ಕೆ ಸಿದ್ಧವಾದಂಥ ಮನೆಗಳಲ್ಲಿಯೂ ವಾಸ ಮಾಡುತ್ತಾನೆ. ಅವನು ಐಶ್ವರ್ಯವಂತನಾಗುವದಿಲ್ಲ; ಅವನ ಆಸ್ತಿ ನಿಲ್ಲುವದಿಲ್ಲ; ಅವನ ಸ್ವಾಸ್ಥ್ಯವು ಭೂಮಿಯ ಮೇಲೆ ವಿಸ್ತಾರವಾಗುವದಿಲ್ಲ. ಕತ್ತಲೆಯೊಳಗಿಂದ ಅವನು ತೊಲಗುವದಿಲ್ಲ; ಅವನ ಕೊಂಬೆಗಳನ್ನು ಜ್ವಾಲೆಯು ಬಾಡಿಸುವದು; ಅವನ ಬಾಯಿಯ ಶ್ವಾಸ ದಿಂದ ತೊಲಗಿ ಹೋಗುತ್ತಾನೆ. ಮೋಸ ಹೋದ ವನು ವ್ಯರ್ಥತ್ವವನ್ನು ನಂಬದೇ ಇರಲಿ; ವ್ಯರ್ಥತ್ವವೇ ಅವನ ಪ್ರತಿಫಲವಾಗಿರುವದು. ಅವನ ಸಮಯಕ್ಕೆ ಮುಂಚೆಯೇ ಅದು ತೀರುವದು; ಅವನ ಕೊಂಬೆಯು ಹಸಿರಾಗುವದಿಲ್ಲ. ಹಣ್ಣಾಗದ ದ್ರಾಕ್ಷೆಯ ಗಿಡದಂತೆ ತನ್ನ ಕಾಯಿ ಉದುರಿಸಿ ಎಣ್ಣೆಯ ಮರದಂತೆ ತನ್ನ ಹೂವನ್ನು ಚದರಿಸುವನು. ಕಪಟಿಗಳ ಸಭೆಯು ಹಾಳಾಗುವದು; ಲಂಚದ ಗುಡಾರಗಳನ್ನು ಬೆಂಕಿಯು ಸುಡುವದು.ಅವರು ಕೇಡಿನಿಂದ ಬಸುರಾಗಿ ವ್ಯರ್ಥತ್ವ ವನ್ನು ಹೆರುವರು; ಅವರ ಗರ್ಭವು ಮೋಸವನ್ನು ಸಿದ್ಧಮಾಡುವದು. ಅವರು ಕೇಡಿನಿಂದ ಬಸುರಾಗಿ ವ್ಯರ್ಥತ್ವ ವನ್ನು ಹೆರುವರು; ಅವರ ಗರ್ಭವು ಮೋಸವನ್ನು ಸಿದ್ಧಮಾಡುವದು.
- 2 Peter 2:9 2 ಪೇತ್ರನು 2:9ಕರ್ತನು ನೀತಿವಂತರನ್ನು ಸಂಕಟದೊಳಗಿಂದ ತಪ್ಪಿಸುವ ದಕ್ಕೂ ಅನೀತಿವಂತರನ್ನು ಶಿಕ್ಷಿಸುವದಕ್ಕಾಗಿ ನ್ಯಾಯ ತೀರ್ಪಿನ ದಿನದ ತನಕ ಇಡುವದಕ್ಕೂ ಬಲ್ಲವನಾಗಿ ದ್ದಾನೆ.
- Isaiah 3:11 ಯೆಶಾಯ 3:11ಕೆಡುಕರಿಗೆ ಅಯ್ಯೋ! ಅವರಿಗೆ ಕೇಡೇ ಇರಲಿ; ಅವನ ಕೈಗಳ ಪ್ರತಿಫಲವು ಅವನಿಗೆ ಕೊಡಲ್ಪಡುವದು.
- Psalm 12:5 ಕೀರ್ತನೆಗಳು 12:5ಬಡವರ ವ್ಯಥೆಗೋಸ್ಕರವೂ ಗತಿಯಿಲ್ಲದವರ ನರ ಳುವಿಕೆಗೋಸ್ಕರವೂ ಈಗ ನಾನು ಏಳುವೆನು ಎಂದು ಕರ್ತನು ಹೇಳುತ್ತಾನೆ; ಉಬ್ಬಿಕೊಂಡವನಿಂದ ನಾನು ಬಡವನನ್ನು ಕಾಪಾಡುವೆನು.
- Malachi 3:5 ಮಲಾಕಿಯ 3:5ನ್ಯಾಯಕ್ಕೋಸ್ಕರ ನಿಮ್ಮನ್ನು ನಾನು ಸವಿಾಪಿ ಸುತ್ತೇನೆ; ಆಗ ಕಣಿಹೇಳುವವರಿಗೂ ವ್ಯಭಿಚಾರಿ ಗಳಿಗೂ ಸುಳ್ಳು ಪ್ರಮಾಣಮಾಡುವವರಿಗೂ ಸಂಬಳ ದಲ್ಲಿ ಕೂಲಿಯವನಿಗೂ ವಿಧವೆಗೂ ದಿಕ್ಕಿಲ್ಲದವನಿಗೂ ಬಲಾತ್ಕಾರ ಮಾಡುವವರಿಗೂ ಅನ್ಯನ ನ್ಯಾಯವನ್ನು ತಿರಿಗಿಸಿ ಬಿಡುವವರಿಗೂ ನನಗೆ ಭಯಪಡದವರಿಗೂ ವಿರೋಧವಾಗಿ ಶೀಘ್ರವಾದ ಸಾಕ್ಷಿಗಾರನಾಗಿರು ವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Job 31:3 ಯೋಬನು 31:3ದುಷ್ಟನಿಗೆ ನಾಶವಿಲ್ಲವೋ? ಅಪಕಾರ ಮಾಡುವವರಿಗೆ ಕಠಿಣ ಶಿಕ್ಷೆಯಿಲ್ಲವೋ?
- James 5:4–6 ಯಾಕೋಬನು 5:4–6ಇಗೋ, ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿ ದ್ದೀರಿ. ಆ ಕೂಲಿ ಕೂಗಿಕೊಳ್ಳುತ್ತದೆ; ಕೊಯಿದವರ ಕೂಗು ಸೈನ್ಯಗಳ ಕರ್ತನ ಕಿವಿಗಳಲ್ಲಿ ಬಿದ್ದಿದೆ. ಭೂಲೋಕದಲ್ಲಿ ನೀವು ಭೋಗಿಗಳಾಗಿ ಮನಸ್ಸು ಬಂದಂತೆ ಜೀವಿಸಿದ್ದೀರಿ; ವಧೆಯ ದಿವಸಕ್ಕಾಗಿಯೇ ಎಂಬಂತೆ ನಿಮ್ಮ ಹೃದಯಗಳನ್ನು ಪೋಷಿಸಿಕೊಂಡಿದ್ದೀರಿ. ನೀತಿವಂತನಿಗೆ ದಂಡನೆಯನ್ನು ವಿಧಿಸಿ ಕೊಂದು ಹಾಕಿ ದ್ದೀರಿ; ಅವನು ನಿಮ್ಮನ್ನು ಎದುರಾಯಿಸುವವನಲ್ಲ.
- Psalm 11:6 ಕೀರ್ತನೆಗಳು 11:6ದುಷ್ಟರ ಮೇಲೆ ಉರ್ಲುಗಳನ್ನೂ ಬೆಂಕಿಯನ್ನೂ ಗಂಧಕವನ್ನೂ ಉರಿಗಾಳಿಯನ್ನೂ ಆತನು ಸುರಿಸುವನು. ಇದು ಅವರ ಪಾನದ ಬಟ್ಟ ಲಾಗಿರುವದು;ನೀತಿಯ ಕರ್ತನು ನೀತಿಯನ್ನು ಪ್ರೀತಿ ಮಾಡುತ್ತಾನೆ; ಆತನ ಮುಖವು ಯಥಾರ್ಥನನ್ನು ದೃಷ್ಟಿಸುತ್ತದೆ.
- Ecclesiastes 8:13 ಪ್ರಸಂಗಿ 8:13ಆದರೆ ದುಷ್ಟನಿಗೆ ಒಳ್ಳೆಯದಾಗುವದಿಲ್ಲ. ತನ್ನ ನೆರಳಿನ ಹಾಗಿ ರುವ ಅವನ ದಿವಸಗಳನ್ನು ಹೆಚ್ಚಿಸುವದಿಲ್ಲ; ಅವನು ದೇವರ ಮುಂದೆ ಭಯಪಡುವದಿಲ್ಲ.
- Proverbs 22:22–23 ಜ್ಞಾನೋಕ್ತಿಗಳು 22:22–23ಅವನು ಬಡವನೆಂದು ಬಡವನನ್ನು ಸೂರೆಮಾಡ ಬೇಡ; ಮಾತ್ರವಲ್ಲದೆ ದ್ವಾರದಲ್ಲಿ ದರಿದ್ರರನ್ನು ಹಿಂಸಿಸ ಬೇಡ. ಕರ್ತನು ಅವರ ವ್ಯಾಜ್ಯವನ್ನು ನಡಿಸಿ ಸೂರೆ ಮಾಡಿದವರ ಪ್ರಾಣವನ್ನು ಸೂರೆಮಾಡುವನು.