Job · chapter 29 · verse 3
Job 29:3 in Kannada
ಆಗ ಆತನ ದೀಪವು ನನ್ನ ತಲೆಯ ಮೇಲೆ ಹೊಳೆ ಯಿತು; ಆತನ ಬೆಳಕಿನಿಂದ ಕತ್ತಲಲ್ಲಿ ನಡೆದೆನು.
Aaga aatana deepavu nanna taleya mele hole yitu; aatana belakininda kattalalli nadedenu.
Job 29:3 in English
- King James Version (KJV)
- When his candle shined upon my head, [and when] by his light I walked [through] darkness;
- World English Bible (WEB)
- when his lamp shone on my head, and by his light I walked through darkness,
- American Standard Version (ASV)
- When his lamp shined upon my head, And by his light I walked through darkness;
- Bible in Basic English (BBE)
- When his light was shining over my head, and when I went through the dark by his light.
- Darby Translation (DBY)
- When his lamp shone over my head, [and] by his light I walked through darkness;
- Webster's Bible (WBS)
- When his candle shined upon my head, [and when] by his light I walked [through] darkness;
- Young's Literal Translation (YLT)
- In His causing His lamp to shine on my head, By His light I walk [through] darkness.
Read in context
- 1ಯೋಬನು ಮತ್ತೆ ತನ್ನ ಪ್ರಸ್ತಾಪವನ್ನೆತ್ತಿ ಹೇಳಿದ್ದೇನಂದರೆ--
- 2ಓ, ಮುಂಚಿನ ತಿಂಗ ಳುಗಳ ಹಾಗೆಯೂ ದೇವರು ನನ್ನನ್ನು ಕಾಪಾಡಿದ ದಿವಸಗಳ ಹಾಗೆಯೂ ನನಗೆ ಆದರೆ ಒಳ್ಳೇದು.
- 3ಆಗ ಆತನ ದೀಪವು ನನ್ನ ತಲೆಯ ಮೇಲೆ ಹೊಳೆ ಯಿತು; ಆತನ ಬೆಳಕಿನಿಂದ ಕತ್ತಲಲ್ಲಿ ನಡೆದೆನು.
- 4ನಾನು ನನ್ನ ಯೌವನದ ದಿವಸಗಳಲ್ಲಿದ್ದಾಗ ದೇವರ ಮರ್ಮವು ನನ್ನ ಗುಡಾರದ ಮೇಲೆ ಇತ್ತು.
- 5ಸರ್ವ ಶಕ್ತನು ಇನ್ನೂ ನನ್ನ ಸಂಗಡ ಇದ್ದನು; ನನ್ನ ಸುತ್ತಲೂ ನನ್ನ ಮಕ್ಕಳು ಇದ್ದರು.
Cross references
- Psalm 18:28 ಕೀರ್ತನೆಗಳು 18:28ನೀನು ನನ್ನ ದೀಪವನ್ನು ಬೆಳಗಿಸುವಿ; ನನ್ನ ದೇವ ರಾದ ಕರ್ತನು ನನ್ನ ಕತ್ತಲೆಯನ್ನು ಪ್ರಕಾಶಿಸುವಂತೆ ಮಾಡುವನು.
- John 8:12 ಯೋಹಾನನು 8:12ತರುವಾಯ ಯೇಸು ತಿರಿಗಿ ಮಾತನಾಡಿ ಅವರಿಗೆ--ನಾನೇ ಲೋಕಕ್ಕೆ ಬೆಳಕಾಗಿದ್ದೇನೆ; ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ನಡೆಯುವದಿಲ್ಲ; ಆದರೆ ಜೀವದ ಬೆಳಕನ್ನು ಹೊಂದುವನು ಎಂದು ಹೇಳಿದನು.
- Ephesians 5:8 ಎಫೆಸದವರಿಗೆ 5:8ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕರ್ತನಲ್ಲಿ ಬೆಳಕಾಗಿರುವದರಿಂದ ಬೆಳಕಿನ ಮಕ್ಕಳಂತೆ ನಡೆದುಕೊಳ್ಳಿರಿ.
- John 12:46 ಯೋಹಾನನು 12:46ನನ್ನಲ್ಲಿ ನಂಬಿಕೆಯಿಟ್ಟ ಯಾವನೂ ಕತ್ತಲೆಯಲ್ಲಿ ಇರಬಾರದೆಂದು ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ.
- Job 18:6 ಯೋಬನು 18:6ಬೆಳಕು ಅವನ ಗುಡಾರದಲ್ಲಿ ಕತ್ತಲಾಗುವದು; ಅವನ ದೀಪವು ಅವನ ಕೂಡ ಆರಿ ಹೋಗುವದು
- Job 11:17 ಯೋಬನು 11:17ಮಧ್ಯಾಹ್ನಕ್ಕಿಂತ ನಿನ್ನ ಪ್ರಾಯವು ಸ್ಪಷ್ಟವಾಗಿರುವದು; ನೀನು ಪ್ರಕಾಶಿ ಸುವವನಾಗಿ ಪ್ರಾತಃಕಾಲದ ಹಾಗೆಯೇ ಇರುವಿ.
- Job 22:28 ಯೋಬನು 22:28ನೀನು ಏನಾದರೂ ನಿರ್ಣಯಿಸಿದರೆ ಅದು ನಿನಗೆ ಸ್ಥಿರವಾಗುವದು ಮತ್ತು ನಿನ್ನ ಮಾರ್ಗಗಳಲ್ಲಿ ಬೆಳಕು ಮೂಡುವದು.
- Proverbs 24:20 ಜ್ಞಾನೋಕ್ತಿಗಳು 24:20ಕೆಡುಕನಿಗೆ ಪ್ರತಿ ಫಲವು ಇರುವದಿಲ್ಲ; ದುಷ್ಟರ ದೀಪವು ಆರಿಹೋಗು ವದು.
- Psalm 84:11 ಕೀರ್ತನೆಗಳು 84:11ದೇವರಾದ ಕರ್ತನು ಸೂರ್ಯ ನೂ ಗುರಾಣಿಯೂ ಆಗಿದ್ದಾನೆ; ಕರ್ತನು ಕೃಪೆಯನ್ನೂ ಮಹಿಮೆಯನ್ನೂ ಕೊಡುತ್ತಾನೆ; ಸಂಪೂರ್ಣವಾಗಿ ನಡೆದುಕೊಳ್ಳುವವರಿಗೆ ಆತನು ಯಾವ ಒಳ್ಳೇದನ್ನು ಹಿಂದೆಗೆಯುವದಿಲ್ಲ.ಸೈನ್ಯಗಳ ಓ ಕರ್ತನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.
- Proverbs 13:9 ಜ್ಞಾನೋಕ್ತಿಗಳು 13:9ನೀತಿವಂತರ ಬೆಳಕು ಸಂತೋಷಿಸುತ್ತದೆ; ದುಷ್ಟರ ದೀಪವು ಆರಿ ಹೋಗುವದು.
- Isaiah 2:4 ಯೆಶಾಯ 2:4ಆತನು ಅನೇಕ ಜನಾಂಗ ಗಳ ಮಧ್ಯದಲ್ಲಿ ನ್ಯಾಯ ತೀರಿಸಿ, ಅನೇಕ ಪ್ರಜೆಗಳನ್ನು ಗದರಿಸುವನು; ಅವರು ತಮ್ಮ ಕತ್ತಿಗಳನ್ನು ನೇಗಿಲಿನ ಗುಳಗಳನ್ನಾಗಿಯೂ ತಮ್ಮ ಈಟಿಗಳನ್ನು ಕುಡುಗೋ ಲುಗಳನ್ನಾಗಿಯೂ ಬಡಿಯುವರು; ಜನಾಂಗಕ್ಕೆ ವಿರೋ ಧವಾಗಿ ಜನಾಂಗವು ಕತ್ತಿಯನ್ನು ಎತ್ತದು; ಇಲ್ಲವೆ ಇನ್ನು ಮೇಲೆ ಯುದ್ಧಾಭ್ಯಾಸವು ಇರುವದೇ ಇಲ್ಲ.
- Psalm 27:1 ಕೀರ್ತನೆಗಳು 27:1ಕರ್ತನು ನನ್ನ ಬೆಳಕೂ ರಕ್ಷಣೆಯೂ ಆಗಿದ್ದಾನೆ; ನಾನು ಯಾರಿಗೆ ಭಯಪಡು ವೆನು? ಕರ್ತನು ನನ್ನ ಜೀವದ ಬಲವಾಗಿದ್ದಾನೆ; ನಾನು ಯಾರಿಗೆ ಹೆದರುವೆನು?