Ezekiel · chapter 26 · verse 20
Ezekiel 26:20 in Kannada
ನಿನ್ನನ್ನು ಅಧೋಲೋಕಕ್ಕೆ ತಳ್ಳಿ ಪಾತಾಳಕ್ಕೆ ಇಳಿದ ನಿಮ್ಮ ಪೂರ್ವ ಕಾಲದವರೊಂದಿಗೆ ವಾಸಿಸುವಂತೆ ಮಾಡುವೆನು. ನಾನು ನಿನ್ನ ಮಹಿಮೆಯನ್ನು ಜೀವ ಲೋಕದಲ್ಲಿ ನೆಲೆಗೊಳಿಸದ ನಿರ್ನಿವಾಸಿಯಾಗುವಂತೆ ನಿನ್ನನ್ನು ಪಾತಾಳಕ್ಕಿಳಿದವರ ಸಹವಾಸಕ್ಕೆ ಸೇರಿಸುವೆನು.ನಾನೂ ನಿನ್ನನ್ನು ದಿಗಿಲುಪಡಿಸುವೆನು, ಇನ್ನು ಮೇಲೆ ನೀನು ಇರುವದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡು ಕಿದರೂ ನೀನು ಸಿಗುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.
Ninnannu adholokakke talli paataalakke ilida nimma poorva kaaladavarondige vaasisuvante maaduvenu. Naanu ninna mahimeyannu jeeva lokadalli nelegolisada nirnivaasiyaaguvante ninnannu paataalakkilidavara sahavaasakke serisuvenu.naanoo ninnannu digilupadisuvenu, innu mele neenu iruvadilla; aamele ninnannu eshtu hudu kidaroo neenu siguvadilla endu devaraada kartanu heluttaane.
Ezekiel 26:20 in English
- King James Version (KJV)
- When I shall bring thee down with them that descend into the pit, with the people of old time, and shall set thee in the low parts of the earth, in places desolate of old, with them that go down to the pit, that thou be not inhabited; and I shall set glory in the land of the living;
- World English Bible (WEB)
- then I will bring you down with those who descend into the pit, to the people of old time, and will make you dwell in the lower parts of the earth, in the places that are desolate of old, with those who go down to the pit, that you be not inhabited; and I will set glory in the land of the living.
- American Standard Version (ASV)
- then will I bring thee down with them that descend into the pit, to the people of old time, and will make thee to dwell in the nether parts of the earth, in the places that are desolate of old, with them that go down to the pit, that thou be not inhabited; and I will set glory in the land of the living.
- Bible in Basic English (BBE)
- Then I will make you go down with those who go down into the underworld, to the people of the past, causing your living-place to be in the deepest parts of the earth, in places long unpeopled, with those who go down into the deep, so that there will be no one living in you; and you will have no glory in the land of the living.
- Darby Translation (DBY)
- then will I bring thee down, with them that go down to the pit, to the people of old time, and will cause thee to dwell in the lower parts of the earth, in places desolate of old, with them that go down to the pit, that thou be not inhabited; and I will set glory in the land of the living.
- Webster's Bible (WBS)
- When I shall bring thee down with them that descend into the pit, with the people of old time, and shall set thee in the low parts of the earth, in places desolate of old, with them that go down to the pit, that thou be not inhabited; and I shall set glory in the land of the living;
- Young's Literal Translation (YLT)
- And I have caused thee to go down, With those going down to the pit, Unto the people of old, And I have caused thee to dwell in the land, The lower parts — in wastes of old, With those going down to the pit, So that thou art not inhabited, And I have given beauty in the land of the living.
Read in context
- 18ಈಗ ನೀನು ಬೀಳುವ ದಿವಸದಲ್ಲಿ ದ್ವೀಪಗಳು ನಡುಗುವವು ಹೌದು, ನೀನು ಹೋಗಿಬಿಡುವದರಿಂದ ಸಮುದ್ರದಲ್ಲಿರುವ ದ್ವೀಪಗಳು ಗಾಬರಿಯಾಗುವವು.
- 19ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ನಿನ್ನನ್ನು ನಿವಾಸಿಗಳಿಲ್ಲದ ಪಟ್ಟಣದ ಹಾಗೆ ಹಾಳಾದ ಪಟ್ಟಣವಾಗಿ ಮಾಡುವಾಗ ಹೆಚ್ಚು ನೀರು ಮುಚ್ಚುವ ಹಾಗೆ ಅಗಾಧವನ್ನು ನಿನ್ನ ಮೇಲೆ ಬರ ಮಾಡುವೆನು.
- 20ನಿನ್ನನ್ನು ಅಧೋಲೋಕಕ್ಕೆ ತಳ್ಳಿ ಪಾತಾಳಕ್ಕೆ ಇಳಿದ ನಿಮ್ಮ ಪೂರ್ವ ಕಾಲದವರೊಂದಿಗೆ ವಾಸಿಸುವಂತೆ ಮಾಡುವೆನು. ನಾನು ನಿನ್ನ ಮಹಿಮೆಯನ್ನು ಜೀವ ಲೋಕದಲ್ಲಿ ನೆಲೆಗೊಳಿಸದ ನಿರ್ನಿವಾಸಿಯಾಗುವಂತೆ ನಿನ್ನನ್ನು ಪಾತಾಳಕ್ಕಿಳಿದವರ ಸಹವಾಸಕ್ಕೆ ಸೇರಿಸುವೆನು.ನಾನೂ ನಿನ್ನನ್ನು ದಿಗಿಲುಪಡಿಸುವೆನು, ಇನ್ನು ಮೇಲೆ ನೀನು ಇರುವದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡು ಕಿದರೂ ನೀನು ಸಿಗುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.
- 21ನಾನೂ ನಿನ್ನನ್ನು ದಿಗಿಲುಪಡಿಸುವೆನು, ಇನ್ನು ಮೇಲೆ ನೀನು ಇರುವದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡು ಕಿದರೂ ನೀನು ಸಿಗುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.
Cross references
- Psalm 27:13 ಕೀರ್ತನೆಗಳು 27:13ಜೀವಿತರ ದೇಶದಲ್ಲಿ ಕರ್ತನ ಒಳ್ಳೇತನ ವನ್ನು ನೋಡುವೆನೆಂದು ನಾನು ನಂಬದೆ ಹೋಗಿದ್ದರೆ ಮೂರ್ಛೆ ಹೋಗುತ್ತಿದ್ದೆನು.ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು.
- Luke 10:15 ಲೂಕನು 10:15ಆಕಾಶದವರೆಗೂ ಎತ್ತಲ್ಪಟ್ಟಿರುವ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬ ಲ್ಪಡುವಿ.
- Ezekiel 32:18–32 ಯೆಹೆಜ್ಕೇಲನು 32:18–32ಮನುಷ್ಯಪುತ್ರನೇ, ಐಗುಪ್ತದ ಜನಸಮೂಹದ ವಿಷಯವಾಗಿ ಗೋಳಾಡು. ಅದನ್ನು, ಅದರ ಸಂಗಡ ಘನವುಳ್ಳ ಜನಾಂಗಗಳ ಕುಮಾರ್ತೆ ಯರನ್ನು ಭೂಮಿಯ ಕೆಳಗಿನ ಭಾಗಗಳಿಗೆ ಕುಣಿಯೊ ಳಗೆ ಇಳಿಯುವವರ ಜೊತೆ ತಳ್ಳಿಬಿಡು. ನೀನು ಸೌಂದರ್ಯದಲ್ಲಿ ಯಾರಿಗೆ ಹೋಲುವಿ? ಕೆಳಗೆ ಹೋಗು ಮತ್ತು ಸುನ್ನತಿಯಿಲ್ಲದವರ ಸಂಗಡ ಮಲಗು. ಅವರು ಕತ್ತಿಯಿಂದ ಹತರಾದವರ ಮಧ್ಯದಲ್ಲಿ ಬೀಳುವರು. ಅವಳು ಕತ್ತಿಗೆ ಒಪ್ಪಿಸಲ್ಪಟ್ಟಿದ್ದಾಳೆ; ಅವಳನ್ನೂ ಅವಳ ಎಲ್ಲಾ ಸಮೂಹವನ್ನೂ ಎಳೆಯಿರಿ. ಶೂರರಲ್ಲಿ ಬಲಿಷ್ಠರೂ ಅವನಿಗೆ ಸಹಾಯ ಮಾಡಿದವರ ಸಂಗಡ ಪಾತಾಳದೊಳಗಿಂದ ಅವನ ಸಂಗಡ ಮಾತನಾಡುವರು; ಅವರು ಇಳಿದುಹೋಗಿ ಸುನ್ನತಿ ಯಿಲ್ಲದವರಾಗಿಯೂ ಕತ್ತಿಯಿಂದ ಹತರಾದವರಾ ಗಿಯೂ ಮಲಗಿದ್ದಾರೆ. ಅಲ್ಲಿ ಅಶ್ಶೂರ್ಯ ಮತ್ತು ಅದರ ಎಲ್ಲಾ ಗುಂಪು ಇರುವದು; ಸುತ್ತಲೂ ಅದರ ಸಮಾಧಿಗಳಿರುವವು; ಅವರೆಲ್ಲರೂ ಕತ್ತಿಯಿಂದ ಬಿದ್ದು ಹತರಾದವರೇ. ಅವರ ಸಮಾಧಿಗಳು ಕುಣಿಯ ಕಡೆಗಳಲ್ಲಿ ಇಡಲ್ಪಟ್ಟಿವೆ, ಅದರ ಸಮಾಧಿಯ ಸುತ್ತಲೂ ಅವರ ಗುಂಪುಗಳಿವೆ. ಜೀವಿತರ ದೇಶದಲ್ಲಿ ಭಯಂಕ ರರಾಗಿದ್ದ ಇವರೆಲ್ಲರೂ ಕತ್ತಿಯಿಂದ ಬಿದ್ದು ಹತರಾ ದರು. ಅಲ್ಲಿ ಏಲಾಮು ಮತ್ತು ಅದರ ಎಲ್ಲಾ ಸಮೂಹವು ಆಕೆಯ ಸಮಾಧಿಯ ಸುತ್ತಲೂ ಇದೆ; ಅವರೆಲ್ಲರೂ ಕತ್ತಿಯಿಂದ ಬಿದ್ದು ಹತರಾದವರೇ; ಸುನ್ನತಿಯಿಲ್ಲದವರಾಗಿ ಭೂಮಿಯ ಕೆಳಗಿನ ಭಾಗಗಳಿಗೆ ಇಳಿದುಹೋದವರೇ, ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದಾಗ್ಯೂ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತುಕೊಂಡಿದ್ದಾರೆ. ಅವರು ಅದರ ಎಲ್ಲಾ ಸಮೂಹಕ್ಕೂ ಹತವಾದವರ ಮಧ್ಯದಲ್ಲಿ ಹಾಸಿಗೆ ಹಾಕಿದ್ದಾರೆ; ಅದರ ಸುತ್ತಲೂ ಅವರ ಸಮಾಧಿಗಳಿವೆ; ಅವರೆಲ್ಲರೂ ಕತ್ತಿಯಿಂದ ಹತರಾಗಿ ಸುನ್ನತಿಯಿಲ್ಲದವರಾಗಿದ್ದಾರೆ; ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದಾಗ್ಯೂ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತು ಕೊಂಡು ಹತರಾದವರ ಮಧ್ಯದಲ್ಲಿ ಇಡಲ್ಪಟ್ಟಿದ್ದಾರೆ. ಅಲ್ಲಿ ಮೇಷೆಕೂ ತೂಬಲೂ ಮತ್ತು ಅದರ ಎಲ್ಲಾ ಸಮೂಹವೂ ಅದರ ಸಮಾಧಿಗಳೂ ಅದರ ಸುತ್ತಲಾಗಿ ಇವೆ ಇವರೆಲ್ಲರೂ ಜೀವಿತರ ದೇಶದಲ್ಲಿ ಭಯಂಕರರಾಗಿ ದ್ದಾಗ್ಯೂ ಸುನ್ನತಿಯಿಲ್ಲದೆ ಕತ್ತಿಯಿಂದ ಹತರಾದವರು. ಸುನ್ನತಿಯಿಲ್ಲದವರಲ್ಲಿ ಬಿದ್ದಂತ ತಮ್ಮ ಯುದ್ಧದ ಆಯುಧಗಳ ಸಂಗಡ ಪಾತಾಳಕ್ಕೆ ಇಳಿದಂತ ಶೂರರ ಸಂಗಡ ಇವರು ಮಲಗಬೇಡವೇ? ಅವರು ತಮ್ಮ ಕತ್ತಿಗಳನ್ನು ತಮ್ಮ ತಲೆಗಳ ಕೆಳಗೆ ಇಟ್ಟುಕೊಂಡಿದ್ದಾರೆ; ಅವರು ಜೀವಿತರ ದೇಶದಲ್ಲಿ ಶೂರರಿಗೆ ಭಯಂಕರ ರಾಗಿದ್ದಾಗ್ಯೂ ಅವರ ಅಕ್ರಮಗಳು ಅವರ ಎಲುಬು ಗಳ ಮೇಲೆ ಇರುವವು. ಹೌದು, ನೀನು ಸುನ್ನತಿಯಿಲ್ಲದವರ ಮಧ್ಯದಲ್ಲಿ ಮುರಿಯಲ್ಪಡುವಿ; ಕತ್ತಿಯಿಂದ ಹತರಾದವರ ಸಂಗಡ ಮಲಗುವಿ. ಅಲ್ಲಿ ಎದೋಮೂ ಅದರ ಅರಸರೂ ಮತ್ತು ಎಲ್ಲಾ ಪ್ರಧಾನರೂ ಶೂರರಾಗಿದ್ದಾಗ್ಯೂ ಕತ್ತಿಯಿಂದ ಹತವಾ ದವರ ಸಂಗಡ ಹೂಣಲ್ಪಟ್ಟಿದ್ದಾರೆ; ಅವರು ಸುನ್ನತಿಯಿಲ್ಲದವರ ಸಂಗಡವೂ ಕುಣಿಗೆ ಇಳಿಯುವವರ ಸಂಗಡವೂ ಹತರಾದವರು. ಅಲ್ಲಿ ಉತ್ತರದ ಪ್ರಧಾ ನರೂ ಚೀದೋನಿನವರೆಲ್ಲರೂ ಹತರಾದವರ ಸಂಗಡ ಇಳಿದಿದ್ದಾರೆ; ಅವರು ಭಯಂಕರತ್ವದಿಂದ ತಮ್ಮ ಪರಾ ಕ್ರಮಕ್ಕೆ ನಾಚಿಕೆಪಟ್ಟಿದ್ದಾರೆ; ಹತರಾದವರ ಸಂಗಡ ಇಳಿದಿದ್ದಾರೆ; ಸುನ್ನತಿಯಿಲ್ಲದವರಾಗಿದ್ದು ಕತ್ತಿಯಿಂದ ಹತರಾಗಿ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತವರಾಗಿದ್ದಾರೆ. ಫರೋಹನು ತನ್ನ ಯಾವ ಸಮೂಹವನ್ನು ನೋಡಿ ಆದರಣೆ ಹೊಂದುವನೋ ಹೌದು, ಅವನೂ ಅವನ ಎಲ್ಲಾ ಸೈನ್ಯವು ಹತರಾದವರು ಎಂದು ದೇವರಾದ ಕರ್ತನು ಹೇಳುತ್ತಾನೆ.ನಾನು ನನ್ನ ಭಯವನ್ನು ಜೀವಿತರ ದೇಶದಲ್ಲಿ ಉಂಟು ಮಾಡಿದ್ದೇನೆ. ಆ ಫರೋಹನೂ ಅವನ ಎಲ್ಲಾ ಸಮೂಹದ ಸಹಿತವಾಗಿ ಕತ್ತಿಯಿಂದ ಹತರಾದವರ ಸಂಗಡ, ಸುನ್ನತಿಯಿಲ್ಲದವರ ಮಧ್ಯದಲ್ಲಿ ಮಲಗಿಸಲ್ಪಡುವನೆಂದು ದೇವರಾದ ಕರ್ತನು ಹೇಳುತ್ತಾನೆ. ನಾನು ನನ್ನ ಭಯವನ್ನು ಜೀವಿತರ ದೇಶದಲ್ಲಿ ಉಂಟು ಮಾಡಿದ್ದೇನೆ. ಆ ಫರೋಹನೂ ಅವನ ಎಲ್ಲಾ ಸಮೂಹದ ಸಹಿತವಾಗಿ ಕತ್ತಿಯಿಂದ ಹತರಾದವರ ಸಂಗಡ, ಸುನ್ನತಿಯಿಲ್ಲದವರ ಮಧ್ಯದಲ್ಲಿ ಮಲಗಿಸಲ್ಪಡುವನೆಂದು ದೇವರಾದ ಕರ್ತನು ಹೇಳುತ್ತಾನೆ.
- Zechariah 2:8 ಜೆಕರ್ಯ 2:8ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮನ್ನು ಸುಲುಕೊಂಡ ಜನಾಂಗ ಗಳ ಬಳಿಗೆ ಮಹಿಮೆಯ ತರುವಾಯ ನನ್ನನ್ನು ಆತನು ಕಳುಹಿಸಿದ್ದಾನೆ; ನಿಮ್ಮನ್ನು ಮುಟ್ಟುವವನು ಆತನ ಕಣ್ಣುಗುಡ್ಡೆಯನ್ನು ತಾಕುವವನಾಗಿದ್ದಾನೆ.
- Ezekiel 28:25–26 ಯೆಹೆಜ್ಕೇಲನು 28:25–26ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಇಸ್ರಾಯೇಲ್ಯರ ಮನೆತನದವರನ್ನು ಚದರಿಹೋದ ಜನಾಂಗದಿಂದ ಒಂದುಗೂಡಿಸಿ ಅನ್ಯಜನಾಂಗಗಳ ಮುಂದೆ ಅವರಲ್ಲಿ ಪರಿಶುದ್ಧವಾದ ಮೇಲೆ ಇಸ್ರಾ ಯೇಲ್ಯರು ನನ್ನ ಸೇವಕನಾದ ಯಾಕೋಬನಿಗೆ ನಾನು ಅನುಗ್ರಹಿಸಿದ ತಮ್ಮ ದೇಶದಲ್ಲಿಯೇ ವಾಸಿಸುವರು;ಅವರು ನಿರ್ಭಯರಾಗಿ ಅಲ್ಲಿ ವಾಸಿಸುವರು; ಮನೆ ಗಳನ್ನು ಕಟ್ಟುವರು; ದ್ರಾಕ್ಷೇತೋಟಗಳನ್ನು ನೆಡುವರು; ಹೌದು, ಸುತ್ತಲಾಗಿ ಅವರನ್ನು ಅಸಡ್ಡೆ ಮಾಡಿದವರೆಲ್ಲರ ಮೇಲೆ ನಾನು ನ್ಯಾಯ ತೀರಿಸಿದ ಮೇಲೆ ಅವರು ನಿರ್ಭಯರಾಗಿ ವಾಸಿಸುವರು. ಕರ್ತನಾದ ನಾನೇ ಅವರ ದೇವರೆಂದು ತಿಳಿಯುವರು. ಅವರು ನಿರ್ಭಯರಾಗಿ ಅಲ್ಲಿ ವಾಸಿಸುವರು; ಮನೆ ಗಳನ್ನು ಕಟ್ಟುವರು; ದ್ರಾಕ್ಷೇತೋಟಗಳನ್ನು ನೆಡುವರು; ಹೌದು, ಸುತ್ತಲಾಗಿ ಅವರನ್ನು ಅಸಡ್ಡೆ ಮಾಡಿದವರೆಲ್ಲರ ಮೇಲೆ ನಾನು ನ್ಯಾಯ ತೀರಿಸಿದ ಮೇಲೆ ಅವರು ನಿರ್ಭಯರಾಗಿ ವಾಸಿಸುವರು. ಕರ್ತನಾದ ನಾನೇ ಅವರ ದೇವರೆಂದು ತಿಳಿಯುವರು.
- Numbers 16:33 ಅರಣ್ಯಕಾಂಡ 16:33ಅವರು ತಮಗೆ ಸಂಬಂಧಪಟ್ಟವುಗಳೆ ಲ್ಲವುಗಳ ಸಂಗಡ ಸಜೀವಿಗಳಾಗಿ ಪಾತಾಳಕ್ಕೆ ಇಳಿದರು; ಭೂಮಿಯು ಅವರ ಮೇಲೆ ಮುಚ್ಚಿಕೊಂಡಿತು. ಹೀಗೆ ಅವರು ಸಭೆಯ ಮಧ್ಯದೊಳಗಿಂದ ನಾಶವಾದರು.
- Isaiah 59:10 ಯೆಶಾಯ 59:10ಕುರುಡರ ಹಾಗೆ ಗೋಡೆಯನ್ನು ತಡವರಿ ಸುತ್ತೇವೆ; ಕಣ್ಣಿಲ್ಲದವರ ಹಾಗೆ ತಡವಾಡುತ್ತೇವೆ; ಮಧ್ಯಾಹ್ನದಲ್ಲಿ, ರಾತ್ರಿಯ ಹಾಗೆ ಎಡವುತ್ತೇವೆ, ಸತ್ತವರ ಹಾಗೆ ಹಾಳಾದ ಸ್ಥಳಗಳಲ್ಲಿ ಇದ್ದೇವೆ.
- Job 30:3–6 ಯೋಬನು 30:3–6ಕೊರತೆ ಯಿಂದಲೂ ಬರದಿಂದಲೂ ಒಂಟಿಗರಾಗಿ ಪೂರ್ವ ದಲ್ಲಿ ಹಾಳೂ ಬೈಲೂ ಆದ ಅರಣ್ಯಕ್ಕೆ ಓಡುತ್ತಾರೆ; ಪೊದೆಯ ಹತ್ತಿರ ಉಪ್ಪಿನಸೊಪ್ಪು ಕೀಳುವವರಿಗೆ ಜಾಲಿಯ ಬೇರುಗಳೇ ಅವರ ರೊಟ್ಟಿ. ಜನರಿಂದ ಅವರನ್ನು ಹೊರಗೆ ಹಾಕುತ್ತಾರೆ; (ಕಳ್ಳರ ಹಿಂಡಿನಂತೆ ಅವರ ಹಿಂದೆ ಕೂಗುತ್ತಾರೆ). ಭಯಂಕರವಾದ ತಗ್ಗು ಗಳ ಸಂದುಗಳಲ್ಲಿಯೂ ಭೂಮಿಯ ಗುಹೆಗಳಲ್ಲಿಯೂ ಬಂಡೆಗಳಲ್ಲಿಯೂ ವಾಸವಾಗಿರಬೇಕು.
- Isaiah 14:11–19 ಯೆಶಾಯ 14:11–19ನಿನ್ನ ವೈಭವವೂ ವೀಣೆಗಳ ಸ್ವರವೂ ಸಮಾಧಿಗೆ ಇಳಿಸಲ್ಪಟ್ಟಿವೆ. ನಿನಗೆ ಹುಳುಗಳೇ ಹಾಸಿಗೆ, ನಿನ್ನ ಹೊದಿಕೆಯು ಕ್ರಿಮಿಗಳೇ; ಓ ಲೂಸಿಫರ್ ಉದಯದ ಮಗನೇ. ಆಕಾಶದಿಂದ ನೀನು ಹೇಗೆ ಬಿದ್ದೀ? ಜನಾಂಗಗಳನ್ನು ಬಲಹೀನ ಮಾಡಿದ ನೀನು ಭೂಮಿಗೆ ಹೇಗೆ ಕಡಿಯಲ್ಪಟ್ಟಿದ್ದೀ? ನೀನು ನಿನ್ನ ಹೃದಯದಲ್ಲಿ ನಾನು ಆಕಾಶಕ್ಕೆ ಏರಿ ದೇವರ ನಕ್ಷತ್ರಗಳ ಮೇಲೆ ನನ್ನ ಸಿಂಹಾಸನವನ್ನು ಘನತೆಗೇರಿಸುವೆನು; ಉತ್ತರ ದಿಕ್ಕಿನ ಕಡೆಗಿರುವ ಸಮೂಹ ಪರ್ವತದ ಮೇಲೆಯೂ ನಾನು ಆಸೀನನಾ ಗುವೆನು. ಉನ್ನತವಾದ ಮೇಘ ಮಂಡಲದ ಮೇಲೆ ಏರಿ ಮಹೋನ್ನತನಿಗೆ ಸಮಾನನಾಗುತ್ತೇನೆ ಅಂದು ಕೊಂಡಿದ್ದೆಯಲ್ಲಾ; ಆದಾಗ್ಯೂ ಪಾತಾಳದ ಕುಣಿಯ ಪಾರ್ಶ್ವಗಳಿಗೆ ಇಳಿಸಲ್ಪಡುವಿ. ನಿನ್ನನ್ನು ನೋಡುವ ವರು ನಿನ್ನನ್ನು ಸೂಕ್ಷ್ಮವಾಗಿ ದೃಷ್ಟಿಸಿ ಯೋಚಿಸುತ್ತಾ --ಭೂಮಿಯನ್ನು ನಡುಗಿಸಿ ರಾಜ್ಯಗಳನ್ನು ಕದಲಿಸಿ ಪಟ್ಟಣವನ್ನು ನಾಶಮಾಡಿ ಲೋಕವನ್ನು ಕಾಡ ನ್ನಾಗಿ ಮಾಡಿ ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದ ವನು ಈ ಮನುಷ್ಯನೋ ಎಂದು ಅಂದುಕೊಳ್ಳುವರು. ಜನಾಂಗಗಳ ಅರಸುಗಳೆಲ್ಲಾ ಅವರೆಲ್ಲರೂ ವೈಭವ ದಿಂದ ತಮ್ಮತಮ್ಮ ಮನೆಗಳಲ್ಲಿ ಮಲಗುತ್ತಾರೆ. ಆದರೆ ನೀನು ಅಸಹ್ಯವಾದ ಕೊಂಬೆಯಂತೆಯೂ ಕತ್ತಿಯಿಂದ ತಿವಿದು ಗುಂಡಿಯ ಕಲ್ಲುಗಳ ಪಾಲಾಗಿ ಹತರಾದವರ ಉಡುಪಿನಂತೆಯೂ ಕಾಲಕೆಳಗೆ ತುಳಿಯಲ್ಪಟ್ಟ ಹೆಣ ದಂತೆಯೂ ನಿನ್ನ ಸಮಾಧಿಯೊಳಗಿಂದ ಹೊರಗೆ ಹಾಕ ಲ್ಪಟ್ಟಿದ್ದೀ.
- Amos 9:2 ಆಮೋಸ 9:2ಅವರು ನರಕದ ವರೆಗೂ ತೋಡಿ ಕೊಂಡು ಹೋದರೂ ನನ್ನ ಕೈ ಅವರನ್ನು ಅಲ್ಲಿಂದ ಹಿಡಿದೆಳೆಯುವದು. ಅವರು ಆಕಾಶಕ್ಕೆ ಏರಿ ಹೋದರೂ ನಾನು ಅವರನ್ನು ಅಲ್ಲಿಂದ ಕೆಳಗೆ ಇಳಿಸುವೆನು.
- Psalm 88:3–6 ಕೀರ್ತನೆಗಳು 88:3–6ನನ್ನ ಜೀವವು ಕಷ್ಟ ಗಳಿಂದ ತುಂಬಿಯದೆ, ನನ್ನ ಪ್ರಾಣವು ಸಮಾಧಿಗೆ ಸವಿಾಪವಾಗಿದೆ. ಕುಣಿಗೆ ಇಳಿಯುವವರ ಸಂಗಡ ಎಣಿಸಲ್ಪಟ್ಟಿದ್ದೇನೆ; ಬಲವಿಲ್ಲದ ಮನುಷ್ಯನ ಹಾಗಿದ್ದೇನೆ. ಕೊಲ್ಲಲ್ಪಟ್ಟು ಸಮಾಧಿಯಲ್ಲಿ ಮಲಗಿರುವವರನ್ನು ನೀನು ಇನ್ನು ಜ್ಞಾಪಕಮಾಡಿಕೊಳ್ಳದ ಹಾಗೆ ಸತ್ತವ ರಲ್ಲಿ ಬಿಡಲ್ಪಟ್ಟಿದ್ದೇನೆ; ಅವರು ನಿನ್ನ ಕೈಯಿಂದ ಕಡಿ ಯಲ್ಪಟ್ಟಿದ್ದಾರೆ. ಕೆಳಗಿನ ಆಳವಾದ ಕುಣಿಯಲ್ಲಿಯೂ ಕತ್ತಲೆಯಲ್ಲಿಯೂ ಅಗಾಧಗಳಲ್ಲಿಯೂ ನನ್ನನ್ನು ಇಟ್ಟಿದ್ದಿ.
- Lamentations 3:6 ಪ್ರಲಾಪಗಳು 3:6ಆತನು ನನ್ನನ್ನು ಬಹು ಕಾಲದ ಹಿಂದೆ ಸತ್ತವರ ಹಾಗೆ ಕತ್ತಲೆಯ ಸ್ಥಳಗಳಲ್ಲಿ ಇರಿಸಿದ್ದಾನೆ.
Original words (Hebrew)
- down · H3381יָרַד yârad
- descend · H3381יָרַד yârad
- pit · H953בּוֹר bôwr
- people · H5971עַם ʻam
- time · H5769עוֹלָם ʻôwlâm
- set · H3427יָשַׁב yâshab
- parts · H8482תַּחְתִּי tachtîy
- earth · H776אֶרֶץ ʼerets
- desolate · H2723חׇרְבָּה chorbâh
- old · H5769עוֹלָם ʻôwlâm
- down · H3381יָרַד yârad
- pit · H953בּוֹר bôwr
- inhabited · H3427יָשַׁב yâshab
- set · H5414נָתַן nâthan
- glory · H6643צְבִי tsᵉbîy
- land · H776אֶרֶץ ʼerets
- living · H2416חַי chay