Job · chapter 31 · verse 13
Job 31:13 in Kannada
ಅವರು ನನ್ನ ಸಂಗಡ ವಾದಿಸುವಾಗ ನಾನು ನನ್ನ ದಾಸನ, ದಾಸಿಯ ನ್ಯಾಯವನ್ನು ತಿರಸ್ಕರಿಸಿದ್ದರೆ,
Avaru nanna sangada vaadisuvaaga naanu nanna daasana, daasiya nyaayavannu tiraskarisiddare,
Job 31:13 in English
- King James Version (KJV)
- If I did despise the cause of my manservant or of my maidservant, when they contended with me;
- World English Bible (WEB)
- “If I have despised the cause of my male servant or of my female servant, when they contended with me,
- American Standard Version (ASV)
- If I have despised the cause of my man-servant or of my maid-servant, When they contended with me;
- Bible in Basic English (BBE)
- If I did wrong in the cause of my man-servant, or my woman-servant, when they went to law with me;
- Darby Translation (DBY)
- If I have despised the cause of my bondman or of my bondmaid, when they contended with me,
- Webster's Bible (WBS)
- If I despised the cause of my man-servant or of my maid-servant, when they contended with me;
- Young's Literal Translation (YLT)
- If I despise the cause of my man-servant, And of my handmaid, In their contending with me,
Read in context
- 11ಯಾಕಂದರೆ ಅದು ಮಹಾ ಪಾಪವೂ ಹೌದು, ನ್ಯಾಯಾಧಿಪತಿಗಳಿಗೆ ಬರುವ ಅಕ್ರಮವೂ ಆಗಿರುವದು.
- 12ಅದು ನಾಶವಾಗುವ ವರೆಗೆ ದಹಿ ಸುವಂಥ, ಆದಾಯವನ್ನೆಲ್ಲಾ ನಿರ್ಮೂಲ ಮಾಡು ವಂಥ ಆಗ್ನಿಯಾಗಿರುವದು.
- 13ಅವರು ನನ್ನ ಸಂಗಡ ವಾದಿಸುವಾಗ ನಾನು ನನ್ನ ದಾಸನ, ದಾಸಿಯ ನ್ಯಾಯವನ್ನು ತಿರಸ್ಕರಿಸಿದ್ದರೆ,
- 14ದೇವರು ಏಳುವಾಗ ನಾನು ಏನು ಮಾಡುವೆನು? ಆತನು ವಿಚಾರಿಸುವಾಗ, ಆತನಿಗೆ ಏನು ಉತ್ತರ ಕೊಡುವೆನು?
- 15ಗರ್ಭದಲ್ಲಿ ನನ್ನನ್ನು ಉಂಟುಮಾಡಿ ದಾತನು ಅವನನ್ನೂ ಉಂಟು ಮಾಡಿದ್ದಾನಲ್ಲಾ? ನಮ್ಮನ್ನು ಗರ್ಭದಲ್ಲಿ ರೂಪಿಸಿದಾತನು ಒಬ್ಬನೇ ಅಲ್ಲವೋ?
Cross references
- Deuteronomy 15:12–15 ಧರ್ಮೋಪದೇಶಕಾಂಡ 15:12–15ನಿನ್ನ ಸಹೋದರನಾದ ಇಬ್ರಿಯನಾಗಲಿ ಒಬ್ಬ ಇಬ್ರಿಯ ಸ್ತ್ರೀಯಾಗಲಿ ನಿನಗೆ ಮಾರಲ್ಪಟ್ಟು ಆರು ವರುಷ ನಿನಗೆ ಸೇವೆಮಾಡಿದ್ದರೆ ಏಳನೇ ವರುಷದಲ್ಲಿ ಅವನನ್ನು ಬಿಡುಗಡೆಮಾಡಿ ಕಳುಹಿಸಬೇಕು. ಅವ ನನ್ನು ಬಿಡುಗಡೆಮಾಡಿ ನಿನ್ನಿಂದ ಕಳುಹಿಸುವಾಗ ಬರೀ ಕೈಯಾಗಿ ಕಳುಹಿಸಿಬಿಡಬೇಡ. ನಿನ್ನ ಕುರಿಮಂದೆ ಯಿಂದಲೂ ಕಣದಿಂದಲೂ ಆಲೆಯಿಂದಲೂ ಅವನಿಗೆ ಧಾರಾಳವಾಗಿ ಕೊಡಬೇಕು; ನಿನ್ನ ದೇವರಾದ ಕರ್ತನು ನಿನಗೆ ಆಶೀರ್ವಾದವಾಗಿ ಕೊಟ್ಟದ್ದರಲ್ಲಿ ಅವನಿಗೆ ಕೊಡಬೇಕು. ನೀನು ಐಗುಪ್ತದೇಶದಲ್ಲಿ ದಾಸನಾಗಿದ್ದಿ ಎಂದೂ ನಿನ್ನ ದೇವರಾದ ಕರ್ತನು ನಿನ್ನನ್ನು ವಿಮೋಚಿಸಿ ದನೆಂದೂ ಜ್ಞಾಪಕಮಾಡಿಕೊಳ್ಳಬೇಕು; ಆದದರಿಂದ ನಾನು ಈಹೊತ್ತು ಇದನ್ನು ನಿನಗೆ ಆಜ್ಞಾಪಿಸುತ್ತೇನೆ.
- Ephesians 6:9 ಎಫೆಸದವರಿಗೆ 6:9ಯಜಮಾನರೇ, ನೀವು ಅದೇ ರೀತಿಯಾಗಿ ಮಾಡಿರಿ. ಪರಲೋಕದಲ್ಲಿ ನಿಮ್ಮ ಯಜಮಾನನಾಗಿರು ವಾತನಿದ್ದಾನೆಂತಲೂ ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ಅವರನ್ನು ಬೆದರಿಸುವದನ್ನು ಬಿಟ್ಟುಬಿಡಿರಿ.
- Deuteronomy 24:14–15 ಧರ್ಮೋಪದೇಶಕಾಂಡ 24:14–15ನಿನ್ನ ಸಹೋದರರಲ್ಲಿಯಾಗಲಿ ನಿನ್ನ ದೇಶದಲ್ಲಿ ನಿನ್ನ ಬಾಗಲುಗಳಲ್ಲಿ ಇರುವ ಪರರಲ್ಲಿಯಾಗಲಿ ಕೊರತೆಯುಳ್ಳ ಬಡಕೂಲಿಯವನನ್ನು ಬಾಧಿಸಬಾರದು. ದಿನದಿನಕ್ಕೆ ಅವನ ಕೂಲಿ ಕೊಡಬೇಕು; ಸೂರ್ಯನು ಮುಣುಗುವದಕ್ಕಿಂತ ಮುಂಚೆ ಅದನ್ನು ಕೊಡಬೇಕು. ಅವನು ಬಡವನಾಗಿದ್ದು ಅದರ ಮೇಲೆಯೇ ತನ್ನ ಮನಸ್ಸು ಇಟ್ಟಿದ್ದಾನೆ; ಕೊಡದಿದ್ದರೆ ಅವನು ನಿನಗೆ ವಿರೋಧವಾಗಿ ಕರ್ತನ ಕಡೆಗೆ ಕೂಗುವನು; ಆಗ ನಿನ್ನ ಮೇಲೆ ಪಾಪವಿರುವದು.
- Jeremiah 34:14–17 ಯೆರೆಮೀಯ 34:14–17ಏಳು ವರುಷಗಳ ಕಡೆಯಲ್ಲಿ ಒಬ್ಬೊಬ್ಬನು ತನಗೆ ಮಾರಲ್ಪಟ್ಟಿದ್ದ ತನ್ನ ಸಹೋದರನಾದ ಇಬ್ರಿಯನನ್ನು ಕಳುಹಿಸಬೇಕೆಂದೂ ಅವನು ನಿನಗೆ ಆರು ವರುಷ ಸೇವೆಮಾಡಿದ ಮೇಲೆ ನಿನ್ನ ಕಡೆಯಿಂದ ಅವನನ್ನು ಬಿಡುಗಡೆಯಾಗಿ ಕಳುಹಿಸಬೇಕೆಂದೂ ಹೇಳಿದೆನು; ನಿಮ್ಮ ಪಿತೃಗಳು ನನ್ನ ಮಾತಿಗೆ ಕಿವಿಗೊಡಲಿಲ್ಲ. ಈಗ ನೀವು ತಿರುಗಿ ಕೊಂಡು ನನ್ನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ ಒಬ್ಬೊಬ್ಬನು ತನ್ನ ತನ್ನ ನೆರೆಯವನಿಗೆ ಬಿಡುಗಡೆಯನ್ನು ಸಾರಿದಿರಿ; ನನ್ನ ಹೆಸರಿನಿಂದ ಕರೆಯಲ್ಪಟ್ಟಿರುವ ಮನೆ ಯಲ್ಲಿ ನನ್ನ ಮುಂದೆ ಒಡಂಬಡಿಕೆಯನ್ನು ಮಾಡಿದಿರಿ. ಆದರೆ ತಿರುಗಿಕೊಂಡು ನನ್ನ ಹೆಸರನ್ನು ಅಪವಿತ್ರ ಮಾಡಿ ನೀವು ಅವರ ಮನಸ್ಸು ಬಂದ ಹಾಗೆ ಬಿಡುಗಡೆಯಾಗಿ ಕಳುಹಿಸಿದ್ದ ನಿಮ್ಮ ನಿಮ್ಮ ದಾಸದಾಸಿ ಯರನ್ನು ಒಬ್ಬೊಬ್ಬನು ತಿರಿಗಿ ಬರಮಾಡಿ ನಿಮಗೆ ದಾಸದಾಸಿಯರಾಗುವ ಹಾಗೆ ವಶಮಾಡಿಕೊಂಡಿ ದ್ದೀರಿ. ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಪ್ರತಿಯೊಬ್ಬನು ತನ್ನ ಸಹೋದರನಿಗೂ ಪ್ರತಿ ಮನುಷ್ಯನು ತನ್ನ ನೆರೆಯವನಿಗೂ ಬಿಡುಗಡೆಯನ್ನು ಸಾರುವದರಲ್ಲಿ ನೀವು ನನಗೆ ಕಿವಿಗೊಡಲಿಲ್ಲ. ಇಗೋ, ನಾನು ಕತ್ತಿ, ಬರ, ಜಾಡ್ಯ ಇವುಗಳಿಗಾಗಿ ನಿಮಗೆ ಬಿಡುಗಡೆಯನ್ನು ಸಾರುತ್ತೇನೆ ಎಂದು ಕರ್ತನು ಹೇಳುತ್ತಾನೆ. ಭೂಮಿಯ ಎಲ್ಲಾ ರಾಜ್ಯಗಳಿಗೆ ನಿಮ್ಮನ್ನು ತೆಗೆದು ಹಾಕುವಂತೆ ಮಾಡುವೆನು.
- Exodus 21:26–27 ವಿಮೋಚನಕಾಂಡ 21:26–27ಇದಲ್ಲದೆ ಒಬ್ಬನು ದಾಸನ ಕಣ್ಣನ್ನು ಇಲ್ಲವೆ ದಾಸಿಯ ಕಣ್ಣನ್ನು ಹೊಡೆದು ನಷ್ಟಪಡಿಸಿದರೆ ಆ ಕಣ್ಣಿಗೋಸ್ಕರ ಅವನನ್ನು ಬಿಡುಗಡೆಮಾಡಿ ಅವನು ಕಳುಹಿಸಲಿ. ಒಬ್ಬನು ದಾಸನ ಹಲ್ಲನ್ನು ಇಲ್ಲವೆ ದಾಸಿಯ ಹಲ್ಲನ್ನು ಉದುರಿಸಿದರೆ ಹಲ್ಲಿಗೋಸ್ಕರ ಅವನನ್ನು ಬಿಡುಗಡೆಮಾಡಿ ಕಳುಹಿಸಲಿ.
- Exodus 21:20–21 ವಿಮೋಚನಕಾಂಡ 21:20–21ಒಬ್ಬನು ದಾಸನನ್ನಾಗಲಿ ದಾಸಿಯನ್ನಾಗಲಿ ಸಾಯು ವಂತೆ ತನ್ನ ಕೋಲಿನಿಂದ ಹೊಡೆದರೆ ಅವನಿಗೆ ಖಂಡಿತವಾಗಿ ಶಿಕ್ಷೆಯಾಗಬೇಕು. ಆದರೂ ಅವನು ಒಂದೆರೆಡು ದಿನಗಳು ಉಳಿದರೆ ಶಿಕ್ಷೆಯಾಗಬಾರದು. ಅವನು ಅವನ ಸೊತ್ತು.
- Leviticus 25:46 ಯಾಜಕಕಾಂಡ 25:46ನಿಮ್ಮ ತರುವಾಯ ಅವರನ್ನು ನಿಮ್ಮ ಮಕ್ಕಳಿಗೆ ಸ್ವಾಸ್ತ್ಯವಾಗಿರುವ ಬಾಧ್ಯತೆಯಾಗಿ ತೆಗೆದು ಕೊಳ್ಳಬೇಕು; ಅವರು ನಿರಂತರಕ್ಕೂ ನಿಮ್ಮ ದಾಸ ರಾಗಿರುವರು. ಆದರೆ ಇಸ್ರಾಯೇಲ್ ಮಕ್ಕಳಾದ ನಿಮ್ಮ ಸಹೋದರರಲ್ಲಿ ಒಬ್ಬರ ಮೇಲೊಬ್ಬರು ಕಠಿಣವಾದ ದೊರೆತನವನ್ನು ಮಾಡಬೇಡಿರಿ.
- Leviticus 25:43 ಯಾಜಕಕಾಂಡ 25:43ನೀನು ಕಠಿಣವಾಗಿ ಅವನ ಮೇಲೆ ದೊರೆತನ ಮಾಡಬಾರದು; ಆದರೆ ನಿನ್ನ ದೇವರಿಗೆ ಭಯಪಡಬೇಕು.
- Colossians 4:1 ಕೊಲೊಸ್ಸೆಯವರಿಗೆ 4:1ಯಜಮಾನರೇ, ಪರಲೋಕದಲ್ಲಿ ನಿಮಗೂ ಯಜಮಾನನೊಬ್ಬನಿದ್ದಾನೆಂದು ತಿಳಿದು ನಿಮ್ಮ ಸೇವಕರಿಗೆ ನ್ಯಾಯವಾದದ್ದನ್ನೂ ಸಮ ವಾದದ್ದನ್ನೂ ಕೊಡಿರಿ.