Colossians · chapter 4 · verse 1
Colossians 4:1 in Kannada
ಯಜಮಾನರೇ, ಪರಲೋಕದಲ್ಲಿ ನಿಮಗೂ ಯಜಮಾನನೊಬ್ಬನಿದ್ದಾನೆಂದು ತಿಳಿದು ನಿಮ್ಮ ಸೇವಕರಿಗೆ ನ್ಯಾಯವಾದದ್ದನ್ನೂ ಸಮ ವಾದದ್ದನ್ನೂ ಕೊಡಿರಿ.
Yajamaanare, paralokadalli nimagoo yajamaananobbaniddaanendu tilidu nimma sevakarige nyaayavaadaddannoo sama vaadaddannoo kodiri.
Colossians 4:1 in English
- King James Version (KJV)
- Masters, give unto [your] servants that which is just and equal; knowing that ye also have a Master in heaven.
- World English Bible (WEB)
- Masters, give to your servants that which is just and equal, knowing that you also have a Master in heaven.
- American Standard Version (ASV)
- Masters, render unto your servants that which is just and equal; knowing that ye also have a Master in heaven.
- Bible in Basic English (BBE)
- Masters, give your servants what is right and equal, conscious that you have a Master in heaven.
- Darby Translation (DBY)
- Masters, give to bondmen what is just and fair, knowing that ye also have a Master in [the] heavens.
- Webster's Bible (WBS)
- Masters, give to [your] servants that which is just and equal; knowing that ye also have a Master in heaven.
- Young's Literal Translation (YLT)
- The masters! that which is righteous and equal to the servants give ye, having known that ye also have a Master in the heavens.
Read in context
- 1ಯಜಮಾನರೇ, ಪರಲೋಕದಲ್ಲಿ ನಿಮಗೂ ಯಜಮಾನನೊಬ್ಬನಿದ್ದಾನೆಂದು ತಿಳಿದು ನಿಮ್ಮ ಸೇವಕರಿಗೆ ನ್ಯಾಯವಾದದ್ದನ್ನೂ ಸಮ ವಾದದ್ದನ್ನೂ ಕೊಡಿರಿ.
- 2ಪ್ರಾರ್ಥನೆಯನ್ನು ತಪ್ಪದೆ ಮಾಡುವವರಾಗಿ ಅದರಲ್ಲಿ ಕೃತಜ್ಞತಾಸ್ತುತಿಯೊಂದಿಗೆ ಎಚ್ಚರವಾಗಿರ್ರಿ.
- 3ನಾವು ಕ್ರಿಸ್ತನ ಮರ್ಮವನ್ನು ಮಾತನಾಡುವಂತೆ ದೇವರು ಅನುಕೂಲವಾದ ಬಾಗಲನ್ನು ನಮಗೆ ತೆರೆಯುವ ಹಾಗೆ ನಮಗೋಸ್ಕರವೂ ಪ್ರಾರ್ಥಿಸಿರಿ; ಇದಕ್ಕೋಸ್ಕರವೇ ನಾನು ಸೆರೆಯಲ್ಲಿದ್ದೇನಲ್ಲಾ;
Cross references
- Ephesians 6:8–20 ಎಫೆಸದವರಿಗೆ 6:8–20ಒಬ್ಬನು ದಾಸನಾಗಲಿ ಸ್ವತಂತ್ರನಾಗಲಿ ತಾನು ಯಾವ ಸತ್ಕಾರ್ಯವನ್ನು ಮಾಡುತ್ತಾನೋ ಅದರ ಪ್ರತಿಫಲವನ್ನು ಕರ್ತನಿಂದ ಹೊಂದುವನೆಂಬದನ್ನು ನೀವು ತಿಳಿದವರಾಗಿಯೇ ಇದ್ದೀರಿ. ಯಜಮಾನರೇ, ನೀವು ಅದೇ ರೀತಿಯಾಗಿ ಮಾಡಿರಿ. ಪರಲೋಕದಲ್ಲಿ ನಿಮ್ಮ ಯಜಮಾನನಾಗಿರು ವಾತನಿದ್ದಾನೆಂತಲೂ ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ಅವರನ್ನು ಬೆದರಿಸುವದನ್ನು ಬಿಟ್ಟುಬಿಡಿರಿ. ಕಡೇದಾಗಿ ನನ್ನ ಸಹೋದರರೇ, ಕರ್ತನಲ್ಲಿಯೂ ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ. ನೀವು ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರ ಸರ್ವಾಯುಧ ಗಳನ್ನು ಧರಿಸಿಕೊಳ್ಳಿರಿ. ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಲೋಕದ ಅಂಧಕಾರದ ಅಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ದುಷ್ಟತನದ ಮೇಲೆಯೂ ಹೋರಾಡುವವರಾಗಿದ್ದೇವೆ. ಆದದ ರಿಂದ ಕೆಟ್ಟ ದಿನದಲ್ಲಿ ನೀವು ಅವುಗಳನ್ನು ಎದುರಿಸಿ ಮಾಡಬೇಕಾದದ್ದೆಲ್ಲವನ್ನು ಮಾಡಿ ನಿಲ್ಲಲು ಶಕ್ತರಾಗು ವಂತೆ ದೇವರ ಸರ್ವಾಯುಧವನ್ನು ನಿಮಗಾಗಿ ತೆಗೆದು ಕೊಳ್ಳಿರಿ. ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ಎದೆಕವಚವನ್ನು ಧರಿಸಿಕೊಳ್ಳಿರಿ.ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ. ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ. ಎಲ್ಲಾದಕ್ಕಿಂತ ಹೆಚ್ಚಾಗಿ ನಂಬಿಕೆ ಯೆಂಬ ಗುರಾಣಿಯನ್ನು ಹಿಡುಕೊಳ್ಳಿರಿ. ಆದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತರಾಗುವಿರಿ. ಇದಲ್ಲದೆ ರಕ್ಷಣೆಯೆಂಬ ಶಿರಸ್ತ್ರಾಣ ವನ್ನು ಇಟ್ಟುಕೊಂಡು ಆತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿಯಿರಿ. ನೀವು ಆತ್ಮ ಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧ ವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ಪರಿಶುದ್ಧರೆಲ್ಲರ ವಿಷಯದಲ್ಲಿ ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರ್ರಿ. ನಾನು ಬಾಯಿ ತೆರೆಯುವಾಗ ಗುಪ್ತವಾಗಿದ್ದ ಸುವಾರ್ತೆಯ ಮರ್ಮವನ್ನು ಧೈರ್ಯವಾಗಿ ತಿಳಿಸುವದಕ್ಕೆ ಬೇಕಾದ ಮಾತನ್ನು ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ. ಆ ಸುವಾರ್ತೆಯ ಮರ್ಮದ ನಿಮಿತ್ತವೇ ರಾಯಭಾರಿಯಾದ ನಾನು ಬೇಡಿಯಲ್ಲಿ ಬಿದ್ದಿದ್ದೇನಲ್ಲಾ; ಮಾತನಾಡಬೇಕಾದ ರೀತಿಯಲ್ಲಿ ನಾನು ಧೈರ್ಯವಾಗಿ ಮಾತನಾಡುವ ಹಂಗಿನಲ್ಲಿದ್ದೇನೆ.
- Deuteronomy 24:14–15 ಧರ್ಮೋಪದೇಶಕಾಂಡ 24:14–15ನಿನ್ನ ಸಹೋದರರಲ್ಲಿಯಾಗಲಿ ನಿನ್ನ ದೇಶದಲ್ಲಿ ನಿನ್ನ ಬಾಗಲುಗಳಲ್ಲಿ ಇರುವ ಪರರಲ್ಲಿಯಾಗಲಿ ಕೊರತೆಯುಳ್ಳ ಬಡಕೂಲಿಯವನನ್ನು ಬಾಧಿಸಬಾರದು. ದಿನದಿನಕ್ಕೆ ಅವನ ಕೂಲಿ ಕೊಡಬೇಕು; ಸೂರ್ಯನು ಮುಣುಗುವದಕ್ಕಿಂತ ಮುಂಚೆ ಅದನ್ನು ಕೊಡಬೇಕು. ಅವನು ಬಡವನಾಗಿದ್ದು ಅದರ ಮೇಲೆಯೇ ತನ್ನ ಮನಸ್ಸು ಇಟ್ಟಿದ್ದಾನೆ; ಕೊಡದಿದ್ದರೆ ಅವನು ನಿನಗೆ ವಿರೋಧವಾಗಿ ಕರ್ತನ ಕಡೆಗೆ ಕೂಗುವನು; ಆಗ ನಿನ್ನ ಮೇಲೆ ಪಾಪವಿರುವದು.
- Revelation 17:14 ಪ್ರಕಟನೆ 17:14ಇವರು ಕುರಿಮರಿಯಾದಾತನ ಮೇಲೆ ಯುದ್ಧ ಮಾಡುವರು, ಆದರೆ ಕುರಿಮರಿ ಯಾದಾತನು ಅವರನ್ನು ಜಯಿಸುವನು; ಯಾಕಂದರೆ ಆತನು ಕರ್ತರ ಕರ್ತನೂ ರಾಜಾಧಿರಾಜನು ಆಗಿದ್ದಾನೆ. ಇದಲ್ಲದೆ ಆತನೊಂದಿಗೆ ಇರುವವರು ಕರೆಯಲ್ಪಟ್ಟ ವರೂ ಆಯಲ್ಪಟ್ಟವರೂ ನಂಬಿಗಸ್ತರು ಆಗಿದ್ದಾರೆ.
- James 2:13 ಯಾಕೋಬನು 2:13ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವದಿಲ್ಲ. ಕರುಣೆಯು ನ್ಯಾಯತೀರ್ಪಿಗಿಂತ ಮೇಲಾಗಿ ಹಿಗ್ಗುತ್ತದೆ.
- Luke 16:1–13 ಲೂಕನು 16:1–13ತರುವಾಯ ಆತನು ತನ್ನ ಶಿಷ್ಯರಿಗೂ ಆಗ ಅವನು ಆ ಮನೆವಾರ್ತೆ ಯವನನ್ನು ಕರೆದು ಅವನಿಗೆ--ಇದೇನು ನಾನು ನಿನ್ನ ವಿಷಯದಲ್ಲಿ ಕೇಳುವದು? ಮನೆವಾರ್ತೆಯ ನಿನ್ನ ಲೆಕ್ಕವನ್ನು ಒಪ್ಪಿಸು; ಯಾಕಂದರೆ ನೀನು ಇನ್ನು ಮೇಲೆ ಮನೆವಾರ್ತೆಯವನಾಗಿರುವದಕ್ಕಾಗುವದಿಲ್ಲ ಅಂದನು. ಆಗ ಆ ಮನೆವಾರ್ತೆಯವನು ತನ್ನೊಳಗೆ--ನಾನೇನು ಮಾಡಲಿ? ಯಾಕಂದರೆ ನನ್ನ ಯಜಮಾನನು ನನ್ನನ್ನು ಮನೆವಾರ್ತೆಯ ಕೆಲಸದಿಂದ ತೆಗೆದುಬಿಡು ತ್ತಾನೆ; ನಾನು ಅಗೆಯಲಾರೆನು, ಭಿಕ್ಷೆ ಬೇಡುವದಕ್ಕೆ ನಾನು ನಾಚಿಕೊಳ್ಳುತ್ತೇನೆ. ಮನೆವಾರ್ತೆಯ ಕೆಲಸ ದಿಂದ ನನ್ನನ್ನು ತೆಗೆದ ಮೇಲೆ ಅವರು ನನ್ನನ್ನು ತಮ್ಮ ಮನೆಗಳಲ್ಲಿ ಸೇರಿಸಿಕೊಳ್ಳುವಂತೆ ನಾನು ಮಾಡಬೇಕಾ ದದ್ದನ್ನು ನಿರ್ಧರಿಸಿದ್ದೇನೆ ಎಂದು ಅಂದುಕೊಂಡನು. ಹೀಗೆ ಅವನು ತನ್ನ ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನು ಕರೆದು ಮೊದಲನೆಯವನಿಗೆ--ನೀನು ನನ್ನ ಯಜಮಾನನಿಗೆ ಸಲ್ಲಿಸಬೇಕಾದದ್ದು ಎಷ್ಟು ಎಂದು ಕೇಳಲು ಅವನು--ಒಂದು ನೂರು ಅಳತೆ ಎಣ್ಣೆ ಅಂದನು. ಆಗ ಅವನು--ನಿನ್ನ ಬೆಲೆ ಪಟ್ಟಿಯನ್ನು ತೆಗೆದುಕೋ, ಮತ್ತು ಬೇಗ ಕೂತುಕೊಂಡು ಐವತ್ತು ಎಂದು ಬರೆ ಎಂದು ಅವನಿಗೆ ಹೇಳಿದನು. ಇದಲ್ಲದೆ ಅವನು ಮತ್ತೊಬ್ಬನಿಗೆ--ನೀನು ಸಲ್ಲಿಸಬೇಕಾದದ್ದು ಎಷ್ಟು? ಅನ್ನಲು ಅವನು--ಒಂದು ನೂರು ಅಳತೆ ಗೋಧಿ ಅಂದನು. ಆಗ ಅವನು--ನಿನ್ನ ಬೆಲೆ ಪಟ್ಟಿ ಯನ್ನು ತೆಗೆದುಕೊಂಡು ಎಂಭತ್ತು ಎಂದು ಬರೆ ಅಂದನು. ಆಗ ಯಜಮಾನನು ಅನ್ಯಾಯಗಾರನಾದ ಆ ಮನೆವಾರ್ತೆಯವನು ಜಾಣತನ ಮಾಡಿದನೆಂದು ಅವನನ್ನು ಹೊಗಳಿದನು; ಯಾಕಂದರೆ ಈ ಲೋಕದ ಮಕ್ಕಳು ತಮ್ಮ ಸಂತತಿಯವರಲ್ಲಿ ಬೆಳಕಿನ ಮಕ್ಕಳಿಗಿಂತ ಜಾಣರಾಗಿದ್ದಾರೆ. ನಾನು ನಿಮಗೆ ಹೇಳುವದೇ ನಂದರೆ--ಅನ್ಯಾಯದ ಧನದಿಂದ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ; ಅದು ನಿಮ್ಮನ್ನು ಬಿಟ್ಟು ಹೋದಾಗ ಅವರು ನಿಮ್ಮನ್ನು ನಿತ್ಯವಾದ ನಿವಾಸಗಳಲ್ಲಿ ಸೇರಿಸಿ ಕೊಳ್ಳುವರು. ಯಾವನು ಸ್ವಲ್ಪವಾದದ್ದರಲ್ಲಿ ನಂಬಿಗಸ್ತ ನಾಗಿರುವನೋ ಅವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗಿದ್ದಾನೆ; ಯಾವನು ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾಗಿರುವನೋ ಅವನು ಬಹಳವಾದದ್ದ ರಲ್ಲಿಯೂ ಅನ್ಯಾಯಗಾರನಾಗಿದ್ದಾನೆ. ಆದದರಿಂದ ಅನ್ಯಾಯವಾದ ಧನದಲ್ಲಿ ನೀವು ನಂಬಿಗಸ್ತರಾಗಿರದಿದ್ದರೆ ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಒಪ್ಪಿಸುವರು? ಇದಲ್ಲದೆ ಮತ್ತೊಬ್ಬನದರಲ್ಲಿ ನೀವು ನಂಬಿಗಸ್ತರಾಗಿರದಿದ್ದರೆ ನಿಮ್ಮ ಸ್ವಂತದ್ದನ್ನು ನಿಮಗೆ ಯಾರು ಕೊಡುವರು? ಯಾವ ಸೇವಕನೂ ಇಬ್ಬರು ಯಜಮಾನರನ್ನು ಸೇವಿಸಲಾರನು; ಯಾಕಂದರೆ ಅವನು ಒಬ್ಬನನ್ನು ಹಗೆಮಾಡಿ ಮತ್ತೊಬ್ಬನನ್ನು ಪ್ರೀತಿ ಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಿರಸ್ಕರಿಸುವನು; ನೀವು ದೇವರನ್ನೂ ಧನವನ್ನೂ ಸೇವಿಸಲಾರಿರಿ ಅಂದನು.
- Matthew 24:48–51 ಮತ್ತಾಯನು 24:48–51ಆದರೆ ಆ ಕೆಟ್ಟ ಸೇವಕನು ತನ್ನ ಹೃದಯದಲ್ಲಿ--ನನ್ನ ಯಜಮಾನನು ಬರುವದಕ್ಕೆ ತಡಮಾಡುತ್ತಾನೆ ಎಂದು ಅಂದುಕೊಂಡು ತನ್ನ ಜೊತೇ ಸೇವಕರನ್ನು ಹೊಡೆಯುತ್ತಾ ಕುಡುಕರ ಸಂಗಡ ತಿನ್ನುವದಕ್ಕೂ ಕುಡಿಯುವದಕ್ಕೂ ಪ್ರಾರಂಭಿಸು ವದಾದರೆ ಅವನು ನಿರೀಕ್ಷಿಸದೆ ಇರುವ ದಿನದಲ್ಲಿ ಇಲ್ಲವೆ ನೆನಸದ ಗಳಿಗೆಯಲ್ಲಿ ಆ ಸೇವಕನ ಯಜಮಾ ನನು ಬಂದುಅವನನ್ನು ಛೇದಿಸಿ ಕಪಟಿಗಳೊಂದಿಗೆ ಅವನ ಪಾಲನ್ನು ನೇಮಿಸುವನು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು. ಅವನನ್ನು ಛೇದಿಸಿ ಕಪಟಿಗಳೊಂದಿಗೆ ಅವನ ಪಾಲನ್ನು ನೇಮಿಸುವನು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
- James 5:4 ಯಾಕೋಬನು 5:4ಇಗೋ, ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿ ದ್ದೀರಿ. ಆ ಕೂಲಿ ಕೂಗಿಕೊಳ್ಳುತ್ತದೆ; ಕೊಯಿದವರ ಕೂಗು ಸೈನ್ಯಗಳ ಕರ್ತನ ಕಿವಿಗಳಲ್ಲಿ ಬಿದ್ದಿದೆ.
- Ecclesiastes 5:8 ಪ್ರಸಂಗಿ 5:8ಬಡವರ ಹಿಂಸೆಯನ್ನೂ ಒಬ್ಬ ಅಧಿಪತಿಯಲ್ಲಿ ನೀತಿ ನ್ಯಾಯಗಳ ಬಲಾತ್ಕಾರದ ವಕ್ರತೆಯನ್ನೂ ನೀನು ನೋಡಿದರೆ ಆ ಸಂಗತಿಯಲ್ಲಿ ಆಶ್ಚರ್ಯಪಡಬೇಡ; ಉನ್ನತೋನ್ನತನು ಲಕ್ಷಿಸುತ್ತಾನೆ; ಅವರಿಗಿಂತ ಉನ್ನತವಾ ದವರು ಇದ್ದಾರೆ.
- Leviticus 25:39–43 ಯಾಜಕಕಾಂಡ 25:39–43ಇದಲ್ಲದೆ ನಿನ್ನೊಂದಿಗೆ ವಾಸಿಸುವ ನಿನ್ನ ಸಹೋದರನು ಬಡವನಾಗಿದ್ದು ನಿನಗೆ ಮಾರಲ್ಪಟ್ಟಿದ್ದರೆ ಅವನು ದಾಸನಂತೆ ನಿನಗೆ ಸೇವೆಮಾಡಲು ನೀನು ಅವನನ್ನು ಒತ್ತಾಯ ಮಾಡಬಾರದು. ಆದರೆ ಕೂಲಿ ಯಾಳಂತೆಯೂ ಪ್ರವಾಸಿಯಂತೆಯೂ ಅವನು ನಿನ್ನ ಬಳಿಯಲ್ಲಿ ಇರಲಿ. ಜೂಬಿಲಿ ಸಂವತ್ಸರದ ವರೆಗೆ ನಿನಗೆ ಸೇವೆಮಾಡಲಿ. ತರುವಾಯ ಅವನು ನಿನ್ನ ಬಳಿಯಿಂದ ತಾನು ತನ್ನ ಮಕ್ಕಳೊಂದಿಗೆ ಹೊರಟು ತನ್ನ ಕುಟುಂಬಕ್ಕೂ ತನ್ನ ಪಿತೃಗಳ ಸ್ವಾಸ್ತ್ಯಕ್ಕೂ ಅವನು ಹಿಂದಿರುಗಬೇಕು. ಐಗುಪ್ತದೇಶದೊಳಗಿಂದ ನಾನು ಹೊರಗೆ ಕರತಂದ ಅವರು ನನ್ನ ಸೇವಕರಾಗಿದ್ದಾರೆ; ಅವರು ದಾಸರಾಗಿ ಮಾರಲ್ಪಡಬಾರದು. ನೀನು ಕಠಿಣವಾಗಿ ಅವನ ಮೇಲೆ ದೊರೆತನ ಮಾಡಬಾರದು; ಆದರೆ ನಿನ್ನ ದೇವರಿಗೆ ಭಯಪಡಬೇಕು.
- Revelation 19:16 ಪ್ರಕಟನೆ 19:16ಆತನ ತೊಡೆಯ ಮೇಲೆಯೂ ವಸ್ತ್ರದ ಮೇಲೆಯೂ--ರಾಜಾ ಧಿರಾಜನೂ ಕರ್ತರ ಕರ್ತನೂ ಎಂಬ ಹೆಸರು ಬರೆದದೆ.
- Luke 19:15 ಲೂಕನು 19:15ಇದಾದ ಮೇಲೆ ಅವನು ರಾಜ್ಯವನ್ನು ಪಡೆದು ಹಿಂದಿರುಗಿದಾಗ ವ್ಯಾಪಾ ರದಿಂದ ಪ್ರತಿಯೊಬ್ಬ ಮನುಷ್ಯನು ಎಷ್ಟು ಲಾಭವನ್ನು ಪಡೆದನೆಂದು ತಿಳುಕೊಳ್ಳುವಂತೆ ತಾನು ಹಣಕೊಟ್ಟ ಆ ಆಳುಗಳನ್ನು ತನ್ನ ಬಳಿಗೆ ಕರೆಯಬೇಕೆಂದು ಆಜ್ಞಾಪಿ ಸಿದನು.
- Malachi 3:5 ಮಲಾಕಿಯ 3:5ನ್ಯಾಯಕ್ಕೋಸ್ಕರ ನಿಮ್ಮನ್ನು ನಾನು ಸವಿಾಪಿ ಸುತ್ತೇನೆ; ಆಗ ಕಣಿಹೇಳುವವರಿಗೂ ವ್ಯಭಿಚಾರಿ ಗಳಿಗೂ ಸುಳ್ಳು ಪ್ರಮಾಣಮಾಡುವವರಿಗೂ ಸಂಬಳ ದಲ್ಲಿ ಕೂಲಿಯವನಿಗೂ ವಿಧವೆಗೂ ದಿಕ್ಕಿಲ್ಲದವನಿಗೂ ಬಲಾತ್ಕಾರ ಮಾಡುವವರಿಗೂ ಅನ್ಯನ ನ್ಯಾಯವನ್ನು ತಿರಿಗಿಸಿ ಬಿಡುವವರಿಗೂ ನನಗೆ ಭಯಪಡದವರಿಗೂ ವಿರೋಧವಾಗಿ ಶೀಘ್ರವಾದ ಸಾಕ್ಷಿಗಾರನಾಗಿರು ವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
Original words (Greek)
- Masters · G2962κύριος kýrios
- give · G3930παρέχω paréchō
- unto · G1401δοῦλος doûlos
- servants · G1401δοῦλος doûlos
- just · G1342δίκαιος díkaios
- and · G2532καί kaí
- equal · G2471ἰσότης isótēs
- knowing · G1492εἴδω eídō
- that · G3754ὅτι hóti
- ye · G5210ὑμεῖς hymeîs
- also · G2532καί kaí
- have · G2192ἔχω échō
- Master · G2962κύριος kýrios
- in · G1722ἐν en
- heaven · G3772οὐρανός ouranós