Job · chapter 31 · verse 28
Job 31:28 in Kannada
ಇದು ಸಹ ನ್ಯಾಯಾಧಿಪತಿಯಿಂದ ಶಿಕ್ಷಿಸಲ್ಪಡುವ ಅಪರಾಧವಾಗಿದೆ; ಯಾಕಂದರೆ ಉನ್ನತ ದಲ್ಲಿರುವ ದೇವರನ್ನು ಬೊಂಕಿದವನಾಗಿರುವೆನು.
Idu saha nyaayaadhipatiyinda shikshisalpaduva aparaadhavaagide; yaakandare unnata dalliruva devarannu bonkidavanaagiruvenu.
Job 31:28 in English
- King James Version (KJV)
- This also [were] an iniquity [to be punished by] the judge: for I should have denied the God [that is] above.
- World English Bible (WEB)
- this also would be an iniquity to be punished by the judges, for I would have denied the God who is above.
- American Standard Version (ASV)
- This also were an iniquity to be punished by the judges; For I should have denied the God that is above.
- Bible in Basic English (BBE)
- That would have been another sin to be rewarded with punishment by the judges; for I would have been false to God on high.
- Darby Translation (DBY)
- This also would be an iniquity for the judge, for I should have denied the God who is above.
- Webster's Bible (WBS)
- This also [were] an iniquity [to be punished by] the judge: for I should have denied the God [that is] above.
- Young's Literal Translation (YLT)
- It also [is] a judicial iniquity, For I had lied to God above.
Read in context
- 26ಸೂರ್ಯನು ಹೊಳೆಯುವದನ್ನು ಚಂದ್ರನು ಪ್ರಭೆಯಲ್ಲಿ ನಡೆಯುವದನ್ನು ನಾನು ನೋಡಲಾಗಿ,
- 27ನನ್ನ ಹೃದಯವು ಅಂತರಂಗದಲ್ಲಿ ಮರುಳುಗೊಂಡು, ನನ್ನ ಬಾಯಿಂದ ನನ್ನ ಕೈಯನ್ನು ಮುದ್ದಿಟ್ಟಿದ್ದರೆ;
- 28ಇದು ಸಹ ನ್ಯಾಯಾಧಿಪತಿಯಿಂದ ಶಿಕ್ಷಿಸಲ್ಪಡುವ ಅಪರಾಧವಾಗಿದೆ; ಯಾಕಂದರೆ ಉನ್ನತ ದಲ್ಲಿರುವ ದೇವರನ್ನು ಬೊಂಕಿದವನಾಗಿರುವೆನು.
- 29ನನ್ನನ್ನು ಹಗೆಮಾಡುವವನ ನಾಶಕ್ಕೆ ನಾನು ಸಂತೋಷಪಟ್ಟು, ಅವನನ್ನು ಕೇಡು ಕಂಡು ಹಿಡಿಯಿ ತೆಂದು ಗರ್ವಪಟ್ಟರೆ,
- 30ಶಾಪದಿಂದ ಅವನ ಪ್ರಾಣ ವನ್ನು ಕೇಳುವುದರಿಂದ ನನ್ನ ಬಾಯಿಯು ಪಾಪ ಮಾಡಗೊಡಿಸಲಿಲ್ಲ.
Cross references
- Deuteronomy 17:2–7 ಧರ್ಮೋಪದೇಶಕಾಂಡ 17:2–7ನಿನ್ನ ದೇವರಾದ ಕರ್ತನ ಮುಂದೆ ಕೆಟ್ಟದ್ದನ್ನು ಮಾಡಿ ಆತನ ಒಡಂಬಡಿಕೆಯನ್ನು ವಿಾರಿ ಬಿಟ್ಟು ಸೂರ್ಯನನ್ನಾಗಲಿ, ಚಂದ್ರನನ್ನಾಗಲಿ, ಆಕಾಶದ ಎಲ್ಲಾ ಸೈನ್ಯವನ್ನಾಗಲಿ, ಬೇರೆ ದೇವರುಗಳನ್ನಾಗಲಿ ನನ್ನ ಆಜ್ಞೆಗೆ ವಿರೋಧವಾಗಿ ಸೇವಿಸಿ ಅವುಗಳಿಗೆ ಅಡ್ಡಬಿದ್ದ ಗಂಡಸಾದರೂ ಹೆಂಗಸಾದರೂ ನಿನ್ನ ದೇವ ರಾದ ಕರ್ತನು ನಿನಗೆ ಕೊಡುವ ನಿನ್ನ ಬಾಗಲುಗಳ ಒಂದರಲ್ಲಿ ನಿನ್ನ ಬಳಿಯಲ್ಲಿ ಸಿಕ್ಕಿದರೆ ಅದು ನಿನಗೆ ತಿಳಿಯಬಂದದರಿಂದ ನೀನು ಕೇಳಿ ಚೆನ್ನಾಗಿ ವಿಚಾರಿಸಿದ ಮೇಲೆ ಇಗೋ, ಈ ಕಾರ್ಯವು ನಿಶ್ಚಯವಾಗಿ ಸತ್ಯ ವಾದರೆ ಈ ಅಸಹ್ಯ ಕಾರ್ಯವು ಇಸ್ರಾಯೇಲಿನಲ್ಲಿ ನಡೆದದ್ದಾದರೆ ನೀನು ಆ ಗಂಡಸನ್ನಾದರೂ ಹೆಂಗಸ ನ್ನಾದರೂ ಆ ಕೆಟ್ಟ ಕಾರ್ಯವನ್ನು ಮಾಡಿದ ಗಂಡಸನ್ನೂ ಮತ್ತು ಹೆಂಗಸನ್ನೂ ನಿನ್ನ ಬಾಗಲುಗಳ ಬಳಿಗೆ ಹೊರಗೆ ತಂದು ಅವರು ಸಾಯುವ ಹಾಗೆ ಕಲ್ಲೆಸೆಯಬೇಕು. ಇಬ್ಬರು ಸಾಕ್ಷಿಗಳ ಇಲ್ಲವೆ ಮೂವರು ಸಾಕ್ಷಿಗಳ ಮಾತಿನಿಂದ ಆ ಸಾಯತಕ್ಕವನು ಸಾಯಬೇಕು; ಒಬ್ಬನ ಸಾಕ್ಷಿಯ ಮಾತಿನಿಂದ ಅವನು ಸಾಯಬಾರದು. ಅಪರಾಧಿಯನ್ನು ಕೊಲ್ಲುವದಕ್ಕೆ ಸಾಕ್ಷಿಗಳೇ ಮೊದಲು ಕಲ್ಲನ್ನು ಹಾಕಬೇಕು; ತರುವಾಯ ಜನರೆಲ್ಲರೂ ಹಾಕಲಿ. ಹೀಗೆ ಮಾಡಿ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.
- Job 31:11 ಯೋಬನು 31:11ಯಾಕಂದರೆ ಅದು ಮಹಾ ಪಾಪವೂ ಹೌದು, ನ್ಯಾಯಾಧಿಪತಿಗಳಿಗೆ ಬರುವ ಅಕ್ರಮವೂ ಆಗಿರುವದು.
- Psalm 50:6 ಕೀರ್ತನೆಗಳು 50:6ಆಕಾಶಗಳು ಆತನ ನೀತಿ ಯನ್ನು ಪ್ರಕಟಿಸುತ್ತವೆ; ದೇವರು ತಾನೇ ನ್ಯಾಯಾಧಿ ಪತಿಯಾಗಿದ್ದಾನೆ. ಸೆಲಾ.
- Job 9:15 ಯೋಬನು 9:15ನಾನು ನೀತಿವಂತನಾಗಿದ್ದರೂ ಉತ್ತರಕೊಡೆನು; ಆದರೆ ನನ್ನ ನ್ಯಾಯಾಧಿಪತಿಗೆ ಮೊರೆಯಿಡುವೆನು.
- Judges 11:27 ನ್ಯಾಯಸ್ಥಾಪಕರು 11:27ಆದದರಿಂದ ನಾನು ನಿನಗೆ ವಿರೋಧವಾಗಿ ಪಾಪಮಾಡಲಿಲ್ಲ. ನೀನೇ ನನ್ನ ಮೇಲೆ ಯುದ್ಧಮಾಡುವದರಿಂದ ನನಗೆ ಕೆಟ್ಟದ್ದನ್ನು ಮಾಡುತ್ತೀ. ನ್ಯಾಯಾಧಿಪತಿಯಾದ ಕರ್ತನು ಈಹೊತ್ತು ಇಸ್ರಾ ಯೇಲ್ ಮಕ್ಕಳಿಗೂ ಅಮ್ಮೋನನ ಮಕ್ಕಳಿಗೂ ಮಧ್ಯ ದಲ್ಲಿ ನ್ಯಾಯತೀರಿಸಲಿ.
- Joshua 24:27 ಯೆಹೋಶುವ 24:27ಯೆಹೋಶುವನು ಜನ ರಿಗೆಲ್ಲಾ--ಇಗೋ, ಈ ಕಲ್ಲು ನಿಮ್ಮ ಮಧ್ಯದಲ್ಲಿ ಸಾಕ್ಷಿಯಾಗಿರಲಿ. ಯಾಕಂದರೆ ಅದು ಕರ್ತನು ನಮ್ಮ ಸಂಗಡ ಹೇಳಿದ ಎಲ್ಲಾ ವಚನಗಳನ್ನು ಕೇಳಿತು. ಆದದರಿಂದ ನೀವು ನಿಮ್ಮ ದೇವರನ್ನು ಅಲ್ಲಗಳೆಯದ ಹಾಗೆ ಇದೇ ನಿಮಗೆ ಸಾಕ್ಷಿಯಾಗಿರಲಿ ಎಂದು ಹೇಳಿದನು.
- Job 23:7 ಯೋಬನು 23:7ಅಲ್ಲಿ ನೀತಿವಂತನು ಅವನ ಸಂಗಡ ತರ್ಕ ಮಾಡುವನು; ನಾನು ನಿತ್ಯವಾಗಿ ನನ್ನ ನ್ಯಾಯಾಧಿಪತಿಗೆ ತಪ್ಪಿಸಿಕೊಳ್ಳುವೆನು.
- Deuteronomy 17:9 ಧರ್ಮೋಪದೇಶಕಾಂಡ 17:9ಯಾಜಕರಾದ ಲೇವಿಯರ ಬಳಿಗೂ ಆ ದಿವಸದಲ್ಲಿ ನ್ಯಾಯಾಧಿಪತಿಯಾದವನ ಬಳಿಗೂ ಹೋಗಿ ವಿಚಾರಿಸಬೇಕು; ಅವರು ನಿನಗೆ ಆ ನ್ಯಾಯದ ತೀರ್ಪನ್ನು ತಿಳಿಸುವರು.
- Genesis 18:25 ಆದಿಕಾಂಡ 18:25ಆ ಪ್ರಕಾರ ಮಾಡಿ ನೀತಿವಂತರನ್ನು ದುಷ್ಟರ ಸಂಗಡ ಕೊಲ್ಲುವದು ನಿನಗೆ ದೂರವಾಗಿರಲಿ; ಹಾಗೆ ನೀತಿವಂತರನ್ನು ದುಷ್ಟರಿಗೆ ಸಮಾನಮಾಡುವದು ನಿನಗೆ ದೂರ ವಾಗಿರಲಿ; ಭೂಲೋಕಕ್ಕೆಲ್ಲಾ ನ್ಯಾಯಾಧಿಪತಿಯಾಗಿ ರುವಾತನು ನ್ಯಾಯವಾದದ್ದನ್ನು ಮಾಡದೆ ಇರುವನೇ ಅಂದನು.
- Joshua 24:23 ಯೆಹೋಶುವ 24:23ಅದಕ್ಕವರು--ನಾವೇ ಸಾಕ್ಷಿಗಳಾಗಿದ್ದೇವೆ ಅಂದರು. ಅದಕ್ಕವನು--ಈಗ ನಿಮ್ಮ ಮಧ್ಯದಲ್ಲಿರುವ ಅನ್ಯ ದೇವರುಗಳನ್ನು ತೊರೆದು ನಿಮ್ಮ ಹೃದಯವನ್ನು ಇಸ್ರಾಯೇಲಿನ ದೇವರಾದ ಕರ್ತನಿಗೆ ತಿರುಗಿಸಿರಿ ಅಂದನು.
- Jude 1:4 ಯೂದನು 1:4ಯಾಕಂದರೆ ಭಕ್ತಿಹೀನರೂ ನಮ್ಮ ದೇವರ ಕೃಪೆಯನ್ನು ನೆವ ಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸುವವರೂ ನಮ್ಮ ಒಬ್ಬನೇ ಕರ್ತನಾದ ದೇವರನ್ನು ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ಅಲ್ಲಗಳೆಯುವ ಈ ಕೆಲವು ಜನರು ರಹಸ್ಯವಾಗಿ ಒಳಗೆ ಹೊಕ್ಕಿದ್ದಾರೆ; ಇವರು ಈ ದಂ
- Hebrews 12:23 ಇಬ್ರಿಯರಿಗೆ 12:23ಪರ ಲೋಕದಲ್ಲಿ ಹೆಸರು ಬರೆಸಿಕೊಂಡಿರುವ ಸಾರ್ವತ್ರಿಕ ಸಂಘಕ್ಕೂ ಚೊಚ್ಚಲ ಮಕ್ಕಳ ಸಭೆಗೂ ಎಲ್ಲರಿಗೆ ನ್ಯಾಯಾ ಧಿಪತಿಯಾಗಿರುವ ದೇವರ ಬಳಿಗೂ ಸಿದ್ದಿಗೆ ಬಂದಿರುವ ನೀತಿವಂತರ ಆತ್ಮಗಳ ಬಳಿಗೂ