Job · chapter 31 · verse 26
Job 31:26 in Kannada
ಸೂರ್ಯನು ಹೊಳೆಯುವದನ್ನು ಚಂದ್ರನು ಪ್ರಭೆಯಲ್ಲಿ ನಡೆಯುವದನ್ನು ನಾನು ನೋಡಲಾಗಿ,
Sooryanu holeyuvadannu chandranu prabheyalli nadeyuvadannu naanu nodalaagi,
Job 31:26 in English
- King James Version (KJV)
- If I beheld the sun when it shined, or the moon walking [in] brightness;
- World English Bible (WEB)
- if I have seen the sun when it shined, or the moon moving in splendor,
- American Standard Version (ASV)
- If I have beheld the sun when it shined, Or the moon walking in brightness,
- Bible in Basic English (BBE)
- If, when I saw the sun shining, and the moon moving on its bright way,
- Darby Translation (DBY)
- If I beheld the sun when it shone, or the moon walking in brightness,
- Webster's Bible (WBS)
- If I have beheld the sun when it shined, or the moon walking [in] brightness;
- Young's Literal Translation (YLT)
- If I see the light when it shineth, And the precious moon walking,
Read in context
- 24ನಾನು ಬಂಗಾರವನ್ನು ನನ್ನ ನಿರೀಕ್ಷೆಯನ್ನಾಗಿ ಇಟ್ಟಿದ್ದರೆ, ಅಪ ರಂಜಿಗೆ--ನೀನು ನನ್ನ ಭರವಸವು ಎಂದು ಹೇಳಿದ್ದರೆ,
- 25ನನ್ನ ಐಶ್ವರ್ಯವು ಬಹಳವಾಗಿದೆ ಎಂದು ನನ್ನ ಕೈ ಬಹಳವಾಗಿ ಸಂಪಾದಿಸಿ ಕೊಂಡಿತೆಂದು ನಾನು ಸಂತೋಷಿಸಿದ್ದರೆ,
- 26ಸೂರ್ಯನು ಹೊಳೆಯುವದನ್ನು ಚಂದ್ರನು ಪ್ರಭೆಯಲ್ಲಿ ನಡೆಯುವದನ್ನು ನಾನು ನೋಡಲಾಗಿ,
- 27ನನ್ನ ಹೃದಯವು ಅಂತರಂಗದಲ್ಲಿ ಮರುಳುಗೊಂಡು, ನನ್ನ ಬಾಯಿಂದ ನನ್ನ ಕೈಯನ್ನು ಮುದ್ದಿಟ್ಟಿದ್ದರೆ;
- 28ಇದು ಸಹ ನ್ಯಾಯಾಧಿಪತಿಯಿಂದ ಶಿಕ್ಷಿಸಲ್ಪಡುವ ಅಪರಾಧವಾಗಿದೆ; ಯಾಕಂದರೆ ಉನ್ನತ ದಲ್ಲಿರುವ ದೇವರನ್ನು ಬೊಂಕಿದವನಾಗಿರುವೆನು.
Cross references
- Ezekiel 8:16 ಯೆಹೆಜ್ಕೇಲನು 8:16ಆಗ ಅವನು ನನ್ನನ್ನು ಕರ್ತನ ಆಲ ಯದ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋದನು. ಇಗೋ, ಕರ್ತನ ಮಂದಿರದ ಬಾಗಿಲಲ್ಲಿ ದ್ವಾರಾಂಗ ಳಕ್ಕೂ ಯಜ್ಞವೇದಿಗೂ ಮಧ್ಯದಲ್ಲಿ ಸುಮಾರು ಇಪ್ಪ ತ್ತೈದು ಮಂದಿಯು ಕರ್ತನ ಮಂದಿರಕ್ಕೆ ಬೆನ್ನು ಕೊಟ್ಟು, ಪೂರ್ವದಿಕ್ಕಿನ ಕಡೆಗೆ ತಮ್ಮ ಮುಖಗಳನ್ನು ತಿರು ಗಿಸಿ ಸೂರ್ಯ ನಮಸ್ಕಾರ ಮಾಡುತ್ತಿದ್ದರು.
- Deuteronomy 4:19 ಧರ್ಮೋಪದೇಶಕಾಂಡ 4:19ನೀನು ನಿನ್ನ ಕಣ್ಣು ಗಳನ್ನು ಆಕಾಶದ ಕಡೆಗೆ ಎತ್ತಿ ಸೂರ್ಯ, ಚಂದ್ರ, ನಕ್ಷತ್ರಗಳ ಆಕಾಶ ಸೈನ್ಯವನ್ನೆಲ್ಲಾ ನೋಡಲಾಗಿ ನಿನ್ನ ದೇವರಾದ ಕರ್ತನು ಆಕಾಶದ ಕೆಳಗಿರುವ ಎಲ್ಲಾ ಜನಾಂಗಗಳಿಗೆ ಹಂಚಿಕೊಟ್ಟ ಇವುಗಳಿಗೆ ಅಡ್ಡಬಿದ್ದು ಇವುಗಳನ್ನು ಸೇವಿಸುವದಕ್ಕೆ ನಡಿಸಲ್ಪಡದಂತೆಯೂ ನೋಡಿಕೊಳ್ಳಿರಿ.
- Deuteronomy 17:3 ಧರ್ಮೋಪದೇಶಕಾಂಡ 17:3ಸೂರ್ಯನನ್ನಾಗಲಿ, ಚಂದ್ರನನ್ನಾಗಲಿ, ಆಕಾಶದ ಎಲ್ಲಾ ಸೈನ್ಯವನ್ನಾಗಲಿ, ಬೇರೆ ದೇವರುಗಳನ್ನಾಗಲಿ ನನ್ನ ಆಜ್ಞೆಗೆ ವಿರೋಧವಾಗಿ ಸೇವಿಸಿ ಅವುಗಳಿಗೆ ಅಡ್ಡಬಿದ್ದ ಗಂಡಸಾದರೂ ಹೆಂಗಸಾದರೂ ನಿನ್ನ ದೇವ ರಾದ ಕರ್ತನು ನಿನಗೆ ಕೊಡುವ ನಿನ್ನ ಬಾಗಲುಗಳ ಒಂದರಲ್ಲಿ ನಿನ್ನ ಬಳಿಯಲ್ಲಿ ಸಿಕ್ಕಿದರೆ
- Jeremiah 44:17 ಯೆರೆಮೀಯ 44:17ಆದರೆ ಸ್ವಂತ ಬಾಯಿಂದ ಹೊರಡು ವವೆಲ್ಲವನ್ನೂ ಖಂಡಿತವಾಗಿ ಮಾಡುತ್ತೇವೆ; ಗಗನದ ಒಡತಿಗೆ ಧೂಪ ಸುಡುತ್ತೇವೆ. ಪಾನದರ್ಪಣೆಗಳನ್ನು ಅವಳಿಗೆ ಹೊಯ್ಯುತ್ತೇವೆ, ನಮ್ಮ ತಂದೆಗಳೂ ನಮ್ಮ ಅರಸರೂ ನಮ್ಮ ಪ್ರಧಾನರೂ ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಮಾಡಿದ ಪ್ರಕಾರವೇ ನಾವೂ ಮಾಡುವೆವು; ಆಗ ಆಹಾರದಿಂದ ಚೆನ್ನಾಗಿದ್ದೆವು, ಕೇಡು ನೋಡಲಿಲ್ಲ.
- 2 Kings 23:5 2 ಅರಸುಗಳು 23:5ಇದಲ್ಲದೆ ಯೆಹೂದದ ಪಟ್ಟಣಗಳಲ್ಲಿರುವ ಉನ್ನತ ಸ್ಥಳಗಳ ಲ್ಲಿಯೂ ಯೆರೂಸಲೇಮಿನ ಸುತ್ತಲಿರುವ ಉನ್ನತ ಸ್ಥಳಗಳಲ್ಲಿಯೂ ಧೂಪವನ್ನು ಸುಡಲು ಯೆಹೂದದ ಅರಸುಗಳು ನೇಮಿಸಿದ್ದ ಪೂಜಾರಿಗಳನ್ನೂ ಬಾಳನಿಗೂ ಸೂರ್ಯನಿಗೂ ಚಂದ್ರನಿಗೂ ಹನ್ನೆರಡು ರಾಶಿಗಳಿಗೂ ಆಕಾಶದ ಎಲ್ಲಾ ಸೈನ್ಯಕ್ಕೂ ಧೂಪಸುಡುವವರಾರೂ ಇರದ ಹಾಗೆ ಮಾಡಿದನು.
- Jeremiah 8:2 ಯೆರೆಮೀಯ 8:2ಅವರು ಪ್ರೀತಿಸಿ ಸೇವಿಸಿ ಹಿಂಬಾಲಿಸಿ ಹುಡುಕಿ ಆರಾಧಿಸಿದ ಸೂರ್ಯ ಚಂದ್ರ ಸಮಸ್ತ ಆಕಾಶ ಸೈನ್ಯದ ಮುಂದೆ ಅವುಗಳನ್ನು ಚೆಲ್ಲುವರು; ಅವು ಕೂಡಿಸಲ್ಪಡವು, ಹೂಣಿಡಲ್ಪಡವು, ಅವು ಭೂಮಿಯ ಮೇಲೆ ಗೊಬ್ಬರವಾಗುವವು.
- 2 Kings 23:11 2 ಅರಸುಗಳು 23:11ಬೈಲ ಲ್ಲಿರುವ ಪ್ರಧಾನನಾದ ನಾತಾನ್ ಮೆಲೆಕನ ಕೊಠಡಿಯ ಹತ್ತಿರ ಇದ್ದ ಕರ್ತನ ಮನೆಯ ದ್ವಾರದ ಬಳಿಯಲ್ಲಿ ಯೆಹೂದದ ಅರಸುಗಳು ಸೂರ್ಯನಿಗೆ ಕೊಟ್ಟ ಕುದುರೆ ಗಳನ್ನು ತೆಗೆದುಹಾಕಿ ಸೂರ್ಯನ ರಥಗಳನ್ನು ಬೆಂಕಿ ಯಿಂದ ಸುಟ್ಟುಬಿಟ್ಟನು.
- Psalm 8:3–4 ಕೀರ್ತನೆಗಳು 8:3–4ನಿನ್ನ ಕೈಕೆಲಸವಾದ ಆಕಾಶಗಳನ್ನೂ ನೀನು ಸಿದ್ಧ ಮಾಡಿದ ಚಂದ್ರ ನಕ್ಷತ್ರಗಳನ್ನೂ ನಾನು ಆಲೋ ಚಿಸುವಾಗ ಮನುಷ್ಯನನ್ನು ನೆನಸುವ ಹಾಗೆ ಅವನು ಎಷ್ಟರವನು? ಅವನನ್ನು ದರ್ಶಿಸುವ ಹಾಗೆ ಮನುಷ್ಯನ ಮಗನು ಎಷ್ಟರವನು?
- Deuteronomy 11:16 ಧರ್ಮೋಪದೇಶಕಾಂಡ 11:16ನಿಮ್ಮ ಹೃದಯವು ಮರುಳುಗೊಳ್ಳದ ಹಾಗೆಯೂ ನೀವು ಓರೆಯಾಗಿ ಹೋಗಿ ಬೇರೆ ದೇವರುಗಳನ್ನು ಸೇವಿಸಿ ಅಡ್ಡಬೀಳದ ಹಾಗೆಯೂ
- Genesis 1:16–18 ಆದಿಕಾಂಡ 1:16–18ದೇವರು ಎರಡು ದೊಡ್ಡ ಬೆಳಕುಗಳನ್ನು ಮಾಡಿದನು; ದೊಡ್ಡ ಬೆಳಕು ಹಗಲನ್ನಾಳುವದಕ್ಕೂ ಚಿಕ್ಕ ಬೆಳಕು ರಾತ್ರಿಯನ್ನಾಳು ವದಕ್ಕೂ ಮಾಡಿದ್ದಲ್ಲದೆ ನಕ್ಷತ್ರಗಳನ್ನು ಸಹ ಮಾಡಿ ದನು. ಭೂಮಿಯ ಮೇಲೆ ಬೆಳಕುಕೊಡುವದಕ್ಕಾಗಿ ದೇವರು ಆಕಾಶದ ವಿಶಾಲದಲ್ಲಿ ಅವುಗಳನ್ನು ಇರಿಸಿದನು. ಇದಲ್ಲದೆ ಅವು ಹಗಲನ್ನು ಮತ್ತು ರಾತ್ರಿಯನ್ನು ಆಳುವದಕ್ಕೂ ಬೆಳಕನ್ನು ಕತ್ತಲೆಯಿಂದ ಬೇರೆ ಮಾಡುವದಕ್ಕೂ ಇರಿಸಿದನು. ದೇವರು ಅದನ್ನು ಒಳ್ಳೆಯದೆಂದು ನೋಡಿದನು.