Job · chapter 33 · verse 23
Job 33:23 in Kannada
ಸಹಸ್ರ ಜನರಲ್ಲಿ ಒಬ್ಬನಾದ ಮಧ್ಯಸ್ಥ ನಾಗಿರುವ ದೂತನು ಮನುಷ್ಯನಿಗೆ ಅವನ ಯಥಾರ್ಥ ತೆಯನ್ನು ತಿಳಿಸುವದಕ್ಕೆ ಅವನ ಬಳಿಯಲ್ಲಿದ್ದರೆ,
Sahasra janaralli obbanaada madhyastha naagiruva dootanu manushyanige avana yathaartha teyannu tilisuvadakke avana baliyalliddare,
Job 33:23 in English
- King James Version (KJV)
- If there be a messenger with him, an interpreter, one among a thousand, to shew unto man his uprightness:
- World English Bible (WEB)
- “If there is beside him an angel, an interpreter, one among a thousand, to show to man what is right for him,
- American Standard Version (ASV)
- If there be with him an angel, An interpreter, one among a thousand, To show unto man what is right for him;
- Bible in Basic English (BBE)
- If now there may be an angel sent to him, one of the thousands which there are to be between him and God, and to make clear to man what is right for him;
- Darby Translation (DBY)
- If there be a messenger with him, an interpreter, one among a thousand, to shew unto man his duty;
- Webster's Bible (WBS)
- If there is a messenger with him, an interpreter, one among a thousand, to show to man his uprightness:
- Young's Literal Translation (YLT)
- If there is by him a messenger, An interpreter — one of a thousand, To declare for man his uprightness:
Read in context
- 21ಅವನ ಶರೀರವು ಕಾಣದ ಹಾಗೆ ಸವೆಯುತ್ತದೆ; ಕಾಣದಿದ್ದ ಅವನ ಎಲುಬುಗಳು ಬೈಲಾಗುತ್ತವೆ.
- 22ಹೌದು, ಅವನ ಆತ್ಮವು ಸಮಾಧಿಗೂ ಅವನ ಪ್ರಾಣವು ನಾಶಮಾಡುವವರ ಸವಿಾಪಕ್ಕೂ ಎಳೆಯಲ್ಪ ಡುತ್ತದೆ.
- 23ಸಹಸ್ರ ಜನರಲ್ಲಿ ಒಬ್ಬನಾದ ಮಧ್ಯಸ್ಥ ನಾಗಿರುವ ದೂತನು ಮನುಷ್ಯನಿಗೆ ಅವನ ಯಥಾರ್ಥ ತೆಯನ್ನು ತಿಳಿಸುವದಕ್ಕೆ ಅವನ ಬಳಿಯಲ್ಲಿದ್ದರೆ,
- 24ಆಗ ಆತನು ಅವನಿಗೆ ಕೃಪಾಳುವಾಗಿದ್ದು ಕುಣಿಗೆ ಇಳಿಯು ವದರಿಂದ ಅವನನ್ನು ಬಿಡಿಸುತ್ತಾನೆ; ನಾನು ವಿಮೋ ಚನೆಯ ಕ್ರಯವನ್ನು ಕಂಡುಕೊಂಡೆನು.
- 25ಆಗ ಅವನ ಶರೀರವು ಮಗುವಿನ ಶರೀರಕ್ಕಿಂತ ಮೃದುವಾಗಿರು ವದು; ಅವನು ತನ್ನ ಯೌವನ ದಿವಸಗಳಿಗೆ ತಿರುಗಿ ಕೊಳ್ಳುವನು.
Cross references
- Malachi 3:1 ಮಲಾಕಿಯ 3:1ಇಗೋ, ನನ್ನ ದೂತನನ್ನು ನಾನು ಕಳುಹಿಸುತ್ತೇನೆ; ಅವನು ನನ್ನ ಮುಂದೆ ಮಾರ್ಗವನ್ನು ಸಿದ್ಧಮಾಡುವನು; ನೀವು ಹುಡುಕುವ ಕರ್ತನು ಫಕ್ಕನೆ ತನ್ನ ಆಲಯಕ್ಕೆ ಬರುವನು; ನೀವು ಸಂತೋಷಪಡುವ ಒಡಂಬಡಿಕೆಯ ದೂತನೇ, ಇಗೋ, ಬರುತ್ತಾನೆಂದು ಸೈನ್ಯಗಳ ಕರ್ತನು ಹೇಳು ತ್ತಾನೆ.
- Ecclesiastes 7:28 ಪ್ರಸಂಗಿ 7:28ಅದನ್ನು ಇನ್ನೂ ನನ್ನ ಪ್ರಾಣವು ಹುಡುಕುತ್ತದೆ; ನನಗೆ ಸಿಕ್ಕಲಿಲ್ಲ; ಸಾವಿರದಲ್ಲಿ ಒಬ್ಬ ಪುರುಷನನ್ನು ನಾನು ಕಂಡುಕೊಂಡಿ ದ್ದೇನೆ; ಅವರೆಲ್ಲರಲ್ಲಿ ನಾನು ಒಬ್ಬ ಹೆಂಗಸನ್ನು ಕಂಡು ಕೊಳ್ಳಲಿಲ್ಲ.ಇಗೋ, ದೇವರು ಮನುಷ್ಯನನ್ನು ಸತ್ಯವಂತನನ್ನಾಗಿ ಮಾಡಿದನು. ಇದನ್ನು ಮಾತ್ರ ನಾನು ಕಂಡುಕೊಂಡಿದ್ದೇನೆ, ಅವರಾದರೋ ಅನೇಕ ಕಲ್ಪನೆ ಗಳನ್ನು ಹುಡುಕಿದ್ದಾರೆ.
- 2 Corinthians 5:20 2 ಕೊರಿಂಥದವರಿಗೆ 5:20ದೇವರೇ ನಮ್ಮ ಮೂಲಕ ನಿಮ್ಮನ್ನು ಬೇಡಿ ಕೊಳ್ಳುತ್ತಾನೋ ಎಂಬಂತೆ ನಾವು ಈಗ ಕ್ರಿಸ್ತನ ರಾಯಭಾರಿಗಳಾಗಿದ್ದೇವೆ. ದೇವರೊಂದಿಗೆ ಸಮಾ ಧಾನವಾಗಿರೆಂದು ಕ್ರಿಸ್ತನಿಗೆ ಬದಲಾಗಿ ನಾವು ನಿಮ್ಮನ್ನು ಬೇಡಿಕೊಳ್ಳುತ್ತೇವೆ.ನಾವು ಆತನಲ್ಲಿ ದೇವರ ನೀತಿಯಾಗುವಂತೆ ದೇವರು ಪಾಪವನ್ನರಿಯ ಆತನನ್ನು ನಮಗೋಸ್ಕರ ಪಾಪವಾಗ ಮಾಡಿದನು.
- Malachi 2:7 ಮಲಾಕಿಯ 2:7ಯಾಜಕನ ತುಟಿಗಳು ತಿಳುವಳಿಕೆಯನ್ನು ಕಾಪಾಡತಕ್ಕದ್ದು, ನ್ಯಾಯಪ್ರಮಾಣ ವನ್ನು ಅವನ ಬಾಯಲ್ಲಿ ಹುಡುಕತಕ್ಕದ್ದು; ಯಾಕಂದರೆ ಅವನು ಸೈನ್ಯಗಳ ಕರ್ತನ ಸೇವಕನೇ.
- Haggai 1:13 ಹಗ್ಗಾಯ 1:13ಆಗ ಕರ್ತನ ಸೇವಕನಾದ ಹಗ್ಗಾಯನು ಕರ್ತನ ಮಾತನ್ನು ಜನರಿಗೆ ತಂದು--ನಾನು ನಿಮ್ಮ ಸಂಗಡ ಇದ್ದೇನೆಂದು ಕರ್ತನು ಹೇಳು ತ್ತಾನೆ.
- Job 36:3 ಯೋಬನು 36:3ನನ್ನ ತಿಳುವಳಿಕೆಯನ್ನು ದೂರದಿಂದ ತಕ್ಕೊಂಡು ಬರುವೆನು; ನನ್ನ ನಿರ್ಮಾಣಿಕನಿಗೆ ನೀತಿಯನ್ನು ಸಲ್ಲಿಸುವೆನು.
- Daniel 9:14 ದಾನಿಯೇಲನು 9:14ಆದದರಿಂದ ಕರ್ತನು ಕೇಡಿ ಗಾಗಿ ಕಾದುಕೊಂಡು ಅದನ್ನು ನಮ್ಮ ಮೇಲೆ ತಂದಿ ದ್ದಾನೆ. ನಮ್ಮ ದೇವರಾದ ಕರ್ತನು ತಾನು ಮಾಡುವ ಎಲ್ಲಾ ಕೆಲಸಗಳಲ್ಲೂ ನೀತಿವಂತನೇ; ನಾವಾದರೋ ಆತನ ಸ್ವರಕ್ಕೆ ವಿಧೇಯರಾಗಲಿಲ್ಲ.
- Job 36:8–13 ಯೋಬನು 36:8–13ಆದರೆ ಸಂಕೋಲೆ ಗಳಿಂದ ಕಟ್ಟಲ್ಪಟ್ಟಿದ್ದಾರೆ. ಬಾಧೆಯ ಬಂಧಗಳಿಂದ ಹಿಡಿಯಲ್ಪಟ್ಟಿದ್ದಾರೆ. ಅವರ ಕೃತ್ಯವನ್ನೂ ದ್ರೋಹ ಗಳನ್ನೂ ಅವುಗಳಲ್ಲಿ ಬಲಗೊಂಡರೆಂದು ಅವರಿಗೆ ತೋರಿಸುತ್ತಾನೆ. ಆತನು ಅವರ ಕಿವಿಯನ್ನು ಶಿಕ್ಷೆಗಾಗಿ ತೆರೆದು ದುಷ್ಟತನ ಬಿಟ್ಟು ತಿರುಗಿರೆಂದು ಅವರಿಗೆ ಆಜ್ಞಾಪಿಸುತ್ತಾನೆ. ಅವರು ವಿಧೇಯರಾಗಿ ಸೇವಿಸಿದರೆ ತಮ್ಮ ದಿವಸಗಳನ್ನು ಅಭಿವೃದ್ಧಿಯಲ್ಲಿಯೂ ವರುಷ ಗಳನ್ನು ಸುಖದಲ್ಲಿಯೂ ಪೂರೈಸುವರು. ಅವರು ವಿಧೇಯರಾಗದಿದ್ದರೆ ಕತ್ತಿಯಿಂದ ನಾಶವಾಗುವರು; ತಿಳಿಯದೆ ಸಾಯುವರು. ಹೃದಯದಲ್ಲಿ ಕಪಟ ಇರು ವವರು ಕೋಪವನ್ನು ಕೂಡಿಸುತ್ತಾರೆ. ಆತನು ಅವರನ್ನು ಬಂಧಿಸಿದರೆ ಅವರು ಮೊರೆಯಿಡುವದಿಲ್ಲ.
- Isaiah 61:1–3 ಯೆಶಾಯ 61:1–3ದೇವರಾದ ಕರ್ತನ ಆತ್ಮವು ನನ್ನ ಮೇಲೆ ಅದೆ; ದೀನರಿಗೆ ಶುಭಸಮಾಚಾರವನ್ನು ಸಾರುವದಕ್ಕೆ ಕರ್ತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯವುಳ್ಳವರನ್ನು ಕಟ್ಟುವದಕ್ಕೂ ಸೆರೆಯವರಿಗೆ ಬಿಡುಗಡೆಯನ್ನು ಬಂಧಿಸಲ್ಪಟ್ಟವರಿಗೆ ಸೆರೆಮನೆಯ ಕದ ತೆರೆಯುವದನ್ನು ಪ್ರಸಿದ್ಧಿ ಮಾಡುವದಕ್ಕೂ ಕರ್ತನ ಅಂಗೀಕಾರದ ವರುಷವನ್ನು ಸಾರಿ ಹೇಳುವದಕ್ಕೂ ನಮ್ಮ ದೇವರು ಮುಯ್ಯಿಗೆ ಮುಯ್ಯಿ ಕೊಡುವ ದಿವಸವನ್ನು ಪ್ರಸಿದ್ಧಿ ಮಾಡುವದಕ್ಕೂ ದುಃಖವುಳ್ಳವರೆಲ್ಲರನ್ನು ಆದರಿಸುವದಕ್ಕೂ ಚೀಯೋ ನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯವನ್ನೂ ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರದ ವಸ್ತ್ರವನ್ನೂ ಕೊಡುವದಕ್ಕೆ ನನ್ನನ್ನು ನೇಮಿಸಿದ್ದಾನೆ. ಆಗ ಅವರಿಗೆ ನೀತಿವೃಕ್ಷಗಳೆಂದೂ ಕರ್ತನು ತಾನು ಮಹಿಮೆ ಹೊಂದುವದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವದು.
- Psalm 94:12 ಕೀರ್ತನೆಗಳು 94:12ಓ ಕರ್ತನೇ, ನೀನು ಶಿಕ್ಷಿಸುವವನೂ ನಿನ್ನ ನ್ಯಾಯ ಪ್ರಮಾಣದಿಂದ ಯಾರಿಗೆ ಕಲಿಸುವಿಯೋ ಅವನು ಧನ್ಯನು.
- Lamentations 3:32 ಪ್ರಲಾಪಗಳು 3:32ಆತನು ದುಃಖಪಡಿಸಿದರೂ ತನ್ನ ಕೃಪಾತಿಶಯದಿಂದ ಕನಿಕರಿಸುವನು.
- Ezekiel 18:25–28 ಯೆಹೆಜ್ಕೇಲನು 18:25–28ಆದರೆ ನೀವು, ಕರ್ತನ ಮಾರ್ಗವು ಸರಿಯಲ್ಲ ಅನ್ನುತ್ತೀರಿ; ಓ ಇಸ್ರಾ ಯೇಲಿನ ಮನೆಯವರೇ, ಈಗ ಕೇಳಿರಿ, ನನ್ನ ಮಾರ್ಗವು ಸಮವಲ್ಲವೇ? ನಿಮ್ಮ ಮಾರ್ಗಗಳು ಸಮವಲ್ಲದವು ಗಳೇ. ನೀತಿವಂತನು ತನ್ನ ನೀತಿಯನ್ನು ಬಿಟ್ಟು ತಿರುಗಿಕೊಂಡು ಅನ್ಯಾಯಮಾಡಿ ಇವುಗಳಲ್ಲಿ ಸತ್ತರೆ, ಅವನು ಮಾಡಿದ ಅನ್ಯಾಯದಿಂದಲೇ ಸಾಯುವನು. ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು ನ್ಯಾಯವನ್ನೂ ನೀತಿಯನ್ನೂ ಅನುಸರಿಸಿದರೆ ತನ್ನ ಪ್ರಾಣವನ್ನು ಉಳಿಸಿಕೊಂಡು ಬದುಕುವನು. ತಾನು ಆಲೋಚಿಸಿ ತಾನು ಮಾಡುವ ಎಲ್ಲಾ ದುಷ್ಕೃತ್ಯಗಳನ್ನು ಬಿಟ್ಟು ತಿರುಗಿ ಕೊಳ್ಳುವದರಿಂದ ಸಾಯದೆ ನಿಶ್ಚಯವಾಗಿ ಬದುಕು ವನು.