Ezekiel · chapter 18 · verse 25
Ezekiel 18:25 in Kannada
ಆದರೆ ನೀವು, ಕರ್ತನ ಮಾರ್ಗವು ಸರಿಯಲ್ಲ ಅನ್ನುತ್ತೀರಿ; ಓ ಇಸ್ರಾ ಯೇಲಿನ ಮನೆಯವರೇ, ಈಗ ಕೇಳಿರಿ, ನನ್ನ ಮಾರ್ಗವು ಸಮವಲ್ಲವೇ? ನಿಮ್ಮ ಮಾರ್ಗಗಳು ಸಮವಲ್ಲದವು ಗಳೇ.
Aadare neevu, kartana maargavu sariyalla annutteeri; o israa yelina maneyavare, eega keliri, nanna maargavu samavallave? Nimma maargagalu samavalladavu gale.
Ezekiel 18:25 in English
- King James Version (KJV)
- Yet ye say, The way of the Lord is not equal. Hear now, O house of Israel; Is not my way equal? are not your ways unequal?
- World English Bible (WEB)
- “Yet you say, ‘The way of the Lord is not equal.’ Hear now, house of Israel: Is my way not equal? Aren’t your ways unequal?
- American Standard Version (ASV)
- Yet ye say, The way of the Lord is not equal. Hear now, O house of Israel: Is not my way equal? are not your ways unequal?
- Bible in Basic English (BBE)
- But you say, The way of the Lord is not equal. Give ear, now, O children of Israel; is my way not equal? are not your ways unequal?
- Darby Translation (DBY)
- And ye say, The way of the Lord is not equal. Hear then, house of Israel. Is not my way equal? are not your ways unequal?
- Webster's Bible (WBS)
- Yet ye say, The way of the LORD is not equal. Hear now, O house of Israel; Is not my way equal? are not your ways unequal?
- Young's Literal Translation (YLT)
- And ye have said, Not pondered is the way of the Lord. Hear, I pray you, O house of Israel, My way — is it not pondered? Are not your ways unpondered?
Read in context
- 23ದುಷ್ಟನು ಸಾಯುವದರಲ್ಲಿ ನನಗೆ ಸ್ವಲ್ಪವಾದರೂ ಸಂತೋಷವಿ ರುವದೋ ಎಂದು ದೇವರಾದ ಕರ್ತನು ಹೇಳುತ್ತಾನೆ; ಅವನು ತನ್ನ ನಡತೆಗಳಿಂದ ಹಿಂತಿರುಗಿಕೊಂಡು ಬದು ಕಿದರೆ ನನಗೆ ಸಂತೋಷವಲ್ಲವೇ?
- 24ಆದರೆ ನೀತಿ ವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡಿ ದುಷ್ಟನು ಮಾಡುವ ಎಲ್ಲಾ ಅಸಹ್ಯವಾದವುಗಳ ಹಾಗೆ ಮಾಡಿದರೆ ಅವನು ಬದುಕುವನೇ? ಅವನು ಮಾಡಿ ರುವ ಎಲ್ಲಾ ನೀತಿಯು ಜ್ಞಾಪಕಮಾಡಲ್ಪಡುವದಿಲ್ಲ; ಅವನು ಮಾಡಿರುವ ಅಪರಾಧದಿಂದಲೂ ಪಾಪ ದಿಂದಲೂ ಅವುಗಳಲ್ಲಿ ಸಾಯುವನು.
- 25ಆದರೆ ನೀವು, ಕರ್ತನ ಮಾರ್ಗವು ಸರಿಯಲ್ಲ ಅನ್ನುತ್ತೀರಿ; ಓ ಇಸ್ರಾ ಯೇಲಿನ ಮನೆಯವರೇ, ಈಗ ಕೇಳಿರಿ, ನನ್ನ ಮಾರ್ಗವು ಸಮವಲ್ಲವೇ? ನಿಮ್ಮ ಮಾರ್ಗಗಳು ಸಮವಲ್ಲದವು ಗಳೇ.
- 26ನೀತಿವಂತನು ತನ್ನ ನೀತಿಯನ್ನು ಬಿಟ್ಟು ತಿರುಗಿಕೊಂಡು ಅನ್ಯಾಯಮಾಡಿ ಇವುಗಳಲ್ಲಿ ಸತ್ತರೆ, ಅವನು ಮಾಡಿದ ಅನ್ಯಾಯದಿಂದಲೇ ಸಾಯುವನು.
- 27ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು ನ್ಯಾಯವನ್ನೂ ನೀತಿಯನ್ನೂ ಅನುಸರಿಸಿದರೆ ತನ್ನ ಪ್ರಾಣವನ್ನು ಉಳಿಸಿಕೊಂಡು ಬದುಕುವನು.
Cross references
- Ezekiel 33:17 ಯೆಹೆಜ್ಕೇಲನು 33:17ಆದರೂ ನಿನ್ನ ಜನರ ಮಕ್ಕಳು--ಕರ್ತನ ಮಾರ್ಗವು ಸಮವಿಲ್ಲ ಅನ್ನುತ್ತಾರೆ. ಅವರಿಗಾದರೋ ಅವರ ಮಾರ್ಗವೇ ಸಮವಾಗಿಲ್ಲ.
- Malachi 3:13–15 ಮಲಾಕಿಯ 3:13–15ನಿಮ್ಮ ಮಾತುಗಳು ನನಗೆ ವಿರೋಧವಾಗಿ ಬಲವಾಗಿದ್ದವೆಂದು ಕರ್ತನು ಹೇಳುತ್ತಾನೆ; ಆದಾಗ್ಯೂ, ನೀವು--ನಿನಗೆ ವಿರೋಧವಾಗಿ ಇಷ್ಟೊಂದು ನಾವು ಏನು ಮಾತಾಡಿದ್ದೇವೆ ಅನ್ನುತ್ತೀರಿ. ನೀವು--ದೇವರನ್ನು ಸೇವಿಸುವದು ವ್ಯರ್ಥವೆಂದೂ ನಾವು ಆತನ ನಿಯಮಗಳನ್ನು ಕೈಕೊಂಡು ಸೈನ್ಯಗಳ ಕರ್ತನ ಮುಂದೆ ದುಃಖವಾಗಿ ನಡೆದದ್ದರಿಂದ ಏನು ಪ್ರಯೋ ಜನವೆಂದೂ ಹೇಳಿದಿರಿ. ಈಗ ನಾವು ಗರ್ವಿಷ್ಠ ರನ್ನು ಭಾಗ್ಯವಂತರೆಂದನ್ನುತ್ತೇವೆ; ಹೌದು, ದುಷ್ಟತ್ವ ಮಾಡುವವರು ಅಭಿವೃದ್ಧಿಯಾಗುತ್ತಾರೆ; ಹೌದು, ದೇವರನ್ನು ಪರೀಕ್ಷಿಸುವವರೇ ರಕ್ಷಿಸಲ್ಪಟ್ಟಿದ್ದಾರೆ ಎಂದು ಹೇಳಿದ್ದೀರಿ.
- Jeremiah 12:1 ಯೆರೆಮೀಯ 12:1ಕರ್ತನೇ, ನಾನು ನಿನ್ನ ಸಂಗಡ ವಾದಿಸುವಾಗ ನೀನು ನೀತಿವಂತನೇ ಆಗಿದ್ದೀ; ಆದಾಗ್ಯೂ ನಾನು ನಿನ್ನ ಸಂಗಡ ನ್ಯಾಯವಾದವುಗಳನು ಕುರಿತು ಮಾತನಾಡಲು ಬಿಡು; ದುಷ್ಟರ ಮಾರ್ಗವು ಸಫಲವಾಗುವದು ಯಾಕೆ? ಮಹಾವಂಚನೆ ಮಾಡು ವವರೆಲ್ಲರು ಯಾಕೆ ಸುಖವಾಗಿರುವರು.
- Zephaniah 3:5 ಚೆಫನ್ಯ 3:5ನೀತಿ ಯುಳ್ಳ ಕರ್ತನು ಅದರ ಮಧ್ಯದಲ್ಲಿ ಇದ್ದಾನೆ, ಆತನು ಅನ್ಯಾಯಮಾಡುವದಿಲ್ಲ; ಪ್ರತಿ ಬೆಳಿಗ್ಗೆ ತನ್ನ ನ್ಯಾಯ ತೀರ್ಪನ್ನು ಬೆಳಕಿಗೆ ತರುತ್ತಾನೆ; ಆತನು ತಪ್ಪುವಾತನಲ್ಲ, ಆದರೆ ಅನ್ಯಾಯವಂತನು ನಾಚಿಕೆ ಯನ್ನು ಅರಿಯನು.
- Malachi 2:17 ಮಲಾಕಿಯ 2:17ನಿಮ್ಮ ಮಾತುಗಳಿಂದ ಕರ್ತನಿಗೆ ಬೇಸರಮಾಡಿ ದ್ದೀರಿ; ಆದಾಗ್ಯೂ--ನಾವು ಯಾವದರಲ್ಲಿ ಆತನಿಗೆ ಬೇಸರಮಾಡಿದ್ದೇವೆ ಎಂದು ಅನ್ನುತ್ತೀರಿ; ಕೆಟ್ಟದ್ದನ್ನು ಮಾಡುವವರೆಲ್ಲರೂ ಕರ್ತನ ದೃಷ್ಟಿಯಲ್ಲಿ ಒಳ್ಳೆಯವರು, ಅವರಲ್ಲಿ ಆತನು ಮೆಚ್ಚುತ್ತಾನೆಂದೂ ನ್ಯಾಯದ ದೇವರು ಎಲ್ಲಿ ಎಂದೂ ನೀವು ಹೇಳುವದರಿಂದಲೇ.
- Genesis 18:25 ಆದಿಕಾಂಡ 18:25ಆ ಪ್ರಕಾರ ಮಾಡಿ ನೀತಿವಂತರನ್ನು ದುಷ್ಟರ ಸಂಗಡ ಕೊಲ್ಲುವದು ನಿನಗೆ ದೂರವಾಗಿರಲಿ; ಹಾಗೆ ನೀತಿವಂತರನ್ನು ದುಷ್ಟರಿಗೆ ಸಮಾನಮಾಡುವದು ನಿನಗೆ ದೂರ ವಾಗಿರಲಿ; ಭೂಲೋಕಕ್ಕೆಲ್ಲಾ ನ್ಯಾಯಾಧಿಪತಿಯಾಗಿ ರುವಾತನು ನ್ಯಾಯವಾದದ್ದನ್ನು ಮಾಡದೆ ಇರುವನೇ ಅಂದನು.
- Ezekiel 33:20 ಯೆಹೆಜ್ಕೇಲನು 33:20ಆದರೂ ನೀವು ಕರ್ತನ ಮಾರ್ಗ ಸರಿಯಲ್ಲ ಅನ್ನುತ್ತೀರಿ; ಓ ಇಸ್ರಾಯೇಲಿನ ಮನೆತನ ದವರೇ, ನಿಮ್ಮಲ್ಲಿ ಪ್ರತಿಯೊಬ್ಬರಿಗೆ ನಿಮ್ಮ ಮಾರ್ಗಗಳ ಪ್ರಕಾರ ನಾನು ನ್ಯಾಯ ತೀರಿಸುವೆನು.
- Deuteronomy 32:4 ಧರ್ಮೋಪದೇಶಕಾಂಡ 32:4ಆತನೇ ಬಂಡೆ. ಆತನ ಕಾರ್ಯವು ಸಂಪೂರ್ಣ ವಾದದ್ದು. ಆತನ ಮಾರ್ಗಗಳೆಲ್ಲಾ ನ್ಯಾಯವಾಗಿವೆ; ಆತನು ಸತ್ಯದ ಮತ್ತು ದೋಷರಹಿತನಾದ ದೇವರು, ಆತನು ನೀತಿವಂತನೂ ಯಥಾರ್ಥನೂ ಆಗಿದ್ದಾನೆ.
- Ezekiel 18:29 ಯೆಹೆಜ್ಕೇಲನು 18:29ಆದರೆ ಇಸ್ರಾಯೇಲಿನ ಮನೆತನದವರು ಕರ್ತನ ಮಾರ್ಗ ಸಮವಲ್ಲ ಎನ್ನುತ್ತಾರೆ. ಇಸ್ರಾಯೇಲಿನ ಮನೆತನದವರೇ, ನನ್ನ ಮಾರ್ಗ ಸರಿಯಲ್ಲವೇ? ನಿಮ್ಮ ಮಾರ್ಗಗಳು ಸಮವಲ್ಲದವುಗಳೇ.
- Job 40:8 ಯೋಬನು 40:8ನೀನು ನನ್ನ ನ್ಯಾಯತೀರ್ವಿಕೆಯನ್ನು ತೆಗೆದುಹಾಕುವಿಯೋ? ನೀನು ನೀತಿವಂತ ನಾಗುವ ಹಾಗೆ ನನ್ನನ್ನು ಖಂಡಿಸುವಿಯೋ?
- Jeremiah 2:17–23 ಯೆರೆಮೀಯ 2:17–23ಆತನು ನಿನ್ನನ್ನು ದಾರಿಯಲ್ಲಿ ನಡೆಸುತ್ತಿರುವಾಗ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟಿದ್ದರಿಂದಲೇ ಇದನ್ನು ನಿನಗೆ ನೀನೇ ಮಾಡಿಕೊಂಡಿ ಅಲ್ಲವೋ? ಈಗ ಸಿಹೋರಿನ ನೀರು ಕುಡಿಯುವದಕ್ಕಾಗಿ ಐಗುಪ್ತದ ದಾರಿಯಲ್ಲಿ ನಿನಗೇನು ಕೆಲಸ? ಇಲ್ಲವೆ ನದಿಯ ನೀರು ಕುಡಿ ಯುವದಕ್ಕಾಗಿ ಅಶ್ಶೂರಿನ ದಾರಿಯಲ್ಲಿ ನಿನಗೇನು ಕೆಲಸ? ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವದು; ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವವು; ಹೀಗಿ ರುವದರಿಂದ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟದ್ದೂ ನನ್ನ ಭಯವೂ ನಿನ್ನಲ್ಲಿ ಇಲ್ಲದಿರುವದೂ ಕೆಟ್ಟದ್ದೂ ಕಹಿಯಾದದ್ದೂ ಎಂದು ತಿಳುಕೊಂಡು ನೋಡು ಎಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ. ಪೂರ್ವದಲ್ಲಿ ನಾನು ನಿನ್ನ ನೊಗವನ್ನು ಮುರಿದು ನಿನ್ನ ಬಂಧನಗಳನ್ನು ಹರಿದುಬಿಟ್ಟೆನು; ನೀನು--ನಾನು ವಿಾರುವದಿಲ್ಲ ಎಂದು ನೀನು ಹೇಳಿದಿ; ಆದರೆ ಒಂದೊಂದು ಎತ್ತರವಾದ ಗುಡ್ಡದ ಮೇಲೆಯೂ ಒಂದೊಂದು ಹಸುರಾದ ಮರದ ಕೆಳಗೂ ನೀನು ಸೂಳೆಯಾಗಿ ಅಲೆದಾಡುತ್ತಿ. ಆದಾಗ್ಯೂ ನಾನು ನಿನ್ನನ್ನು ಉತ್ತಮ ದ್ರಾಕ್ಷೇಬಳ್ಳಿಯಾಗಿಯೂ ಪೂರ್ಣ ವಾಗಿ ನಿಜ ಬೀಜವಾಗಿಯೂ ನೆಟ್ಟಿದ್ದೆನು; ಆದರೆ ನೀನು ಹೀಗೆ ನನಗೆ ಅನ್ಯ ದ್ರಾಕ್ಷೇ ಬಳ್ಳಿಯ ಹಾಗೆ ಕೆಟ್ಟುಹೋಗಿ ಬದಲಾದಿ? ನೀನು ಸೌಳಿನಿಂದ ತೊಳಕೊಂಡರೂ ಬಹಳ ಸಾಬೂನು ಹಾಕಿಕೊಂಡರೂ ನಿನ್ನ ಅಕ್ರಮವು ನನ್ನ ಮುಂದೆ ಕಳಂಕವಾಗಿದೆ ಎಂದು ಕರ್ತನಾದ ದೇವರು ಅನ್ನುತ್ತಾನೆ. ನಾನು ಅಶುದ್ಧನಲ್ಲ, ಬಾಳನನ್ನು ಹಿಂಬಾಲಿಸಲಿಲ್ಲ ಎಂದು ನೀನು ಹೇಳುವದು ಹೇಗೆ? ತಗ್ಗಿನಲ್ಲಿ ನಿನ್ನ ಮಾರ್ಗವನ್ನು ನೋಡು; ನೀನು ಮಾಡಿದ್ದನ್ನು ತಿಳುಕೋ; ನೀನು ತೀವ್ರವಾಗಿ ಸಂಚಾರ ಮಾಡುವ ಹೆಣ್ಣು ಒಂಟೆಯೇ;
- Romans 3:5 ರೋಮಾಪುರದವರಿಗೆ 3:5ಆದರೆ ನಮ್ಮ ಅನೀತಿಯು ದೇವರ ನೀತಿಯನ್ನು ಪ್ರಸಿದ್ಧಿಪಡಿಸುವದಾದರೆ ನಾವು ಏನು ಹೇಳೋಣ? ಪ್ರತೀಕಾರ ಮಾಡುವ ದೇವರು ಅನೀತಿವಂತನೇನು? (ನಾನು ಮನುಷ್ಯನಂತೆ ಮಾತನಾಡುತ್ತೇನೆ).