Job · chapter 34 · verse 13
Job 34:13 in Kannada
ಯಾವನು ಆತನಿಗೆ ಭೂಮಿಯ ಮೇಲೆ ಅಧಿಕಾರ ಕೊಟ್ಟಿದ್ದಾನೆ? ಇಲ್ಲವೆ ಆತನಿಗೆ ಸರ್ವಲೋಕವನ್ನು ಉಂಟುಮಾಡಿದ್ದಾನೆ?
Yaavanu aatanige bhoomiya mele adhikaara kottiddaane? Illave aatanige sarvalokavannu untumaadiddaane?
Job 34:13 in English
- King James Version (KJV)
- Who hath given him a charge over the earth? or who hath disposed the whole world?
- World English Bible (WEB)
- Who put him in charge of the earth? Or who has appointed him over the whole world?
- American Standard Version (ASV)
- Who gave him a charge over the earth? Or who hath disposed the whole world?
- Bible in Basic English (BBE)
- Who put the earth into his care, or made him responsible for the world?
- Darby Translation (DBY)
- Who hath entrusted to him the earth? and who hath disposed the whole world?
- Webster's Bible (WBS)
- Who hath given him a charge over the earth? or who hath disposed the whole world?
- Young's Literal Translation (YLT)
- Who hath inspected for Himself the earth? And who hath placed all the habitable world?
Read in context
- 11ಮನುಷ್ಯನ ಕೆಲಸಕ್ಕೆ ಆತನು ಮುಯ್ಯಿಕೊಡುತ್ತಾನೆ, ಮನುಷ್ಯನ ಮಾರ್ಗದ ಪ್ರಕಾರ ಅವನು ಕಂಡುಕೊಳ್ಳುವಂತೆ ಮಾಡುತ್ತಾನೆ.
- 12ಹೌದು, ನಿಶ್ಚಯವಾಗಿ ದೇವರು ದುಷ್ಟತ್ವವನ್ನು ಮಾಡುವದಿಲ್ಲ, ಇಲ್ಲವೆ ಸರ್ವಶಕ್ತನು ನ್ಯಾಯವನ್ನು ಡೊಂಕುಮಾಡುವದಿಲ್ಲ.
- 13ಯಾವನು ಆತನಿಗೆ ಭೂಮಿಯ ಮೇಲೆ ಅಧಿಕಾರ ಕೊಟ್ಟಿದ್ದಾನೆ? ಇಲ್ಲವೆ ಆತನಿಗೆ ಸರ್ವಲೋಕವನ್ನು ಉಂಟುಮಾಡಿದ್ದಾನೆ?
- 14ಆತನು ಮನುಷ್ಯನ ಮೇಲೆ ಮನಸ್ಸಿಟ್ಟು, ತನ್ನ ಆತ್ಮವನ್ನೂ ಶ್ವಾಸವನ್ನೂ ತನ್ನಲ್ಲಿ ಕೂಡಿಸಿದರೆ;
- 15ಶರೀರಗಳೆಲ್ಲಾ ಒಟ್ಟಾಗಿ ನಾಶವಾಗು ವವು. ಮತ್ತು ಮನುಷ್ಯನು ದೂಳಿಗೆ ತಿರುಗುವನು.
Cross references
- 1 Chronicles 29:11 1 ಪೂರ್ವಕಾಲವೃತ್ತಾಂತ 29:11ಕರ್ತನೇ, ದೊಡ್ಡಸ್ತಿಕೆಯೂ ಪರಾಕ್ರಮವೂ ಸೌಂದರ್ಯವೂ ಜಯವೂ ಮಹಿಮೆಯೂ ನಿನ್ನದೇ; ಆಕಾಶಗಳಲ್ಲಿಯೂ ಭೂಮಿಯಲ್ಲಿಯೂ ಇರುವದೆಲ್ಲಾ ನಿನ್ನದೇ. ಕರ್ತನೇ, ರಾಜ್ಯವು ನಿನ್ನದು; ನೀನು ಸಮಸ್ತಕ್ಕೂ ತಲೆಯಾಗಿ ಉನ್ನತವಾಗಿದ್ದೀ. ಐಶ್ವರ್ಯವೂ ಘನವೂ ನಿನ್ನ ಬಳಿ ಯಿಂದ ಬರುತ್ತದೆ.
- Isaiah 40:13–14 ಯೆಶಾಯ 40:13–14ಕರ್ತನ ಆತ್ಮವನ್ನು ನಡಿಸಿದವನೂ ಇಲ್ಲವೇ ಆತನಿಗೆ ಆಲೋಚನಾಕರ್ತನಾಗಿ ಕಲಿಸಿದವನು ಯಾರು? ಆತನು ಯಾವನ ಆಲೋಚನೆಯನ್ನು ಪಡೆದನು. ಆತನಿಗೆ ಉಪದೇಶಿಸಿದವನೂ ನ್ಯಾಯದ ಹಾದಿ ಯನ್ನು ಕಲಿಸಿ, ತಿಳುವಳಿಕೆಯನ್ನು ಆತನಿಗೆ ಬೋಧಿಸಿ, ವಿವೇಕದ ಮಾರ್ಗವನ್ನು ತಿಳಿಸಿದವನು ಯಾರು?
- Romans 11:34–36 ರೋಮಾಪುರದವರಿಗೆ 11:34–36ಕರ್ತನ ಮನಸ್ಸನ್ನು ತಿಳಿದುಕೊಂಡವನು ಯಾರು? ಇಲ್ಲವೆ ಆತನಿಗೆ ಆಲೋಚನೆ ಹೇಳಿದವನು ಯಾರು? ಇಲ್ಲವೆ ಮೊದಲು ಆತನಿಗೆ ಕೊಟ್ಟು ಪ್ರತಿಫಲವನ್ನು ತೆಗೆದುಕೊಳ್ಳುವವನು ಯಾರು?ಸಮಸ್ತವು ಆತನಿಂದಲೂ ಆತನ ಮುಖಾಂತರವೂ ಆತನಿಗಾಗಿಯೂ ಇರುತ್ತದೆ; ಆತನಿಗೆ ಸದಾಕಾಲವೂ ಮಹಿಮೆಯಾಗಲಿ. ಆಮೆನ್. ಸಮಸ್ತವು ಆತನಿಂದಲೂ ಆತನ ಮುಖಾಂತರವೂ ಆತನಿಗಾಗಿಯೂ ಇರುತ್ತದೆ; ಆತನಿಗೆ ಸದಾಕಾಲವೂ ಮಹಿಮೆಯಾಗಲಿ. ಆಮೆನ್.
- Job 38:4–41 ಯೋಬನು 38:4–41ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿ ಇದ್ದಿ? ನಿನಗೆ ಗ್ರಹಿಕೆ ಇದ್ದರೆ ತಿಳಿಯಪಡಿಸು. ನಿನಗೆ ತಿಳಿದಿದ್ದರೆ ಅದರ ಅಳತೆಗಳನ್ನು ಹಾಕಿದ ವನಾರು? ಇಲ್ಲವೆ ಅದರ ಮೇಲೆ ಗೆರೆಯನ್ನೆಳೆದವರು ಯಾರು? ಯಾವದರ ಮೇಲೆ ಅದರ ಅಸ್ತಿವಾರ ಸ್ಥಿರವಾಗಿದೆ? ಇಲ್ಲವೆ ಅದರ ಮೂಲೆಗಲ್ಲನ್ನು ಇಟ್ಟವರು ಯಾರು? ಆಗ ಉದಯದ ನಕ್ಷತ್ರಗಳು ಕೂಡ ಹರ್ಷಧ್ವನಿ ಮಾಡುವಾಗ ದೇವರ ಪುತ್ರರೆಲ್ಲಾ ಉಲ್ಲಾ ಸದಿಂದ ಆರ್ಭಟಿಸಿದರು. ಸಮುದ್ರವು ಗರ್ಭದೊಳಗಿಂದ ಹೊರಬಂದಂತೆ, ಅದು ಬೇಧಿಸಿಕೊಂಡು ಬಂದಾಗ ಸಮುದ್ರವನ್ನು ಬಾಗಲುಗಳಿಂದ ಮುಚ್ಚಿದವನಾರು? ನಾನು ಅದರ ವಸ್ತ್ರವಾಗಿ ಮೇಘವನ್ನೂ ಅದಕ್ಕೆ ಬಟ್ಟೆಯಾಗಿ ಅಂಧ ಕಾರವನ್ನೂ ಮಾಡಿದಾಗ ಅದಕ್ಕೆ ನನ್ನ ನೇಮವನ್ನು ನಿರ್ಣಯಿಸಿದೆನು; ಅದಕ್ಕೆ ಅಗುಳಿಗಳನ್ನೂ ಬಾಗಲು ಗಳನ್ನೂ ಇಟ್ಟೆನು. ಇಲ್ಲಿಯ ವರೆಗೆ ಬಂದು ಮುಂದುವರಿಯ ಕೂಡದು; ಇಲ್ಲಿ ನಿನ್ನ ತೆರೆಗಳ ಅಹಂಕಾರ ನಿಲ್ಲಲಿ ಅಂದೆನು. ನಿನ್ನ ದಿವಸಗಳಾರಭ್ಯ ಬೆಳಿಗ್ಗೆಗೆ ಅಪ್ಪಣೆ ಕೊಟ್ಟಿಯೋ? ಅದು ಭೂಮಿಯ ಅಂಚುಗಳನ್ನು ಹಿಡಿಯುವ ಹಾಗೆಯೂ ದುಷ್ಟರು ಅದರೊಳಗಿಂದ ಝಾಡಿಸಲ್ಪಡುವ ಹಾಗೆಯೂ ಉದಯಕ್ಕೆ ಅದರ ಸ್ಥಳವನ್ನು ತಿಳಿಯಪಡಿಸಿದಿಯೋ? ಮುದ್ರೆಯಿಂದ ಮಣ್ಣು ಆಗುವ ಹಾಗೆ ಅದು ಮಾರ್ಪಡುತ್ತದೆ; ವಸ್ತ್ರದ ಹಾಗೆ ಅದು ನಿಂತಿರುತ್ತದೆ. ದುಷ್ಟರಿಂದ ಅವರ ಬೆಳಕು ಹಿಂತೆಗೆಯಲ್ಪಡುತ್ತದೆ. ಎತ್ತಿದ ತೋಳು ಮುರಿದು ಹೋಗುವದು. ನೀನು ಸಮುದ್ರದ ಬುಗ್ಗೆಗಳಲ್ಲಿ ಪ್ರವೇಶಿಸಿ ಇಲ್ಲವೆ ಅಗಾಧವನ್ನು ಹುಡುಕುವದರಲ್ಲಿ ನೀನು ತಿರುಗಾಡಿ ದಿಯೋ? ನಿನಗೆ ಮರಣದ ಬಾಗಲುಗಳು ತೆರೆಯ ಲ್ಪಟ್ಟವೋ? ಇಲ್ಲವೆ ಮರಣದ ನೆರಳಿನ ಬಾಗಲುಗಳನ್ನು ನೀನು ನೋಡಿದಿಯೋ? ಭೂಮಿಯ ವಿಸ್ತಾರ ಗಳವರೆಗೆ ನೀನು ಗ್ರಹಿಸಿದಿಯೋ?ಇದನ್ನೆಲ್ಲಾ ತಿಳು ಕೊಂಡರೆ ತಿಳಿಯಪಡಿಸು. ಬೆಳಕಿನ ನಿವಾಸಕ್ಕೆ ದಾರಿ ಯಾವದು? ಕತ್ತಲೆ ಯಾದರೋ ಅದರ ಸ್ಥಳವೆಲ್ಲಿದೆ? ಅದರ ಗಡಿಯ ವರೆಗೆ ಅದನ್ನು ತೆಗೆದುಕೊಳ್ಳುವಿಯೋ? ಅದರ ಮನೆಗೆ ಹೋಗುವ ಹಾದಿಗಳನ್ನು ಗ್ರಹಿಸಿದಿಯೋ? ಆಗ ಹುಟ್ಟಿದ್ದರಿಂದ ಅದು ನಿನಗೆ ತಿಳಿಯುವದೋ? ನಿನ್ನ ದಿವಸಗಳ ಲೆಕ್ಕವು ಬಹಳವಾಗಿವೆಯಲ್ಲಾ. ನೀನು ಹಿಮದ ಉಗ್ರಾಣಗಳಲ್ಲಿ ಪ್ರವೇಶಿಸಿ ದಿಯೋ? ಇಲ್ಲವೆ ಆನೇಕಲ್ಲಿನ ಉಗ್ರಾಣಗಳನ್ನು ನೋಡಿದಿಯೋ? ಅವುಗಳನ್ನು ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ ಸಮರ ಮತ್ತು ಯುದ್ಧಗಳ ದಿವಸಕ್ಕಾಗಿಯೂ ಇಟ್ಟುಕೊಂಡಿದ್ದೇನೆ. ಬೆಳಕು ಭಾಗವಾ ಗುವಂಥ, ಮೂಡಣ ಗಾಳಿ ಭೂಮಿಯ ಮೇಲೆ ಚದುರುವಂಥ, ಮಾರ್ಗವು ಯಾವದು? ತುಂಬಿ ಹರಿಯುವ ನೀರುಗಳನ್ನು ವಿಭಾಗ ಮಾಡಿದವರು ಯಾರು? ಜಲಕ್ಕೆ ಧಾರೆಗಳನ್ನೂ ಗುಡುಗುಗಳ ಮಿಂಚಿ ಗೆ ಮಾರ್ಗವನ್ನೂ ನೇಮಿಸಿದವನಾರು? ಅದು ಮನುಷ್ಯನಿಲ್ಲದ ಭೂಮಿಯ ಮೇಲೆಯೂ ಜನರಿಲ್ಲದ ಅರಣ್ಯದಲ್ಲಿಯೂ ಸುರಿಯುವದು; ಹಾಳು ಬೈಲು ಗಳಿಗೆ ತೃಪ್ತಿಯನ್ನು ಉಂಟು ಮಾಡುವದು; ಪಲ್ಯಗಳ ಮೊಳಿಕೆಯನ್ನು ಮೊಳಿಸುವದು. ಮಳೆಗೆ ತಂದೆ ಇದ್ದಾನೋ? ಇಲ್ಲವೆ ಮಂಜಿನ ಹನಿಗಳನ್ನು ಹುಟ್ಟಿಸು ವವನಾರು? ಯಾವನ ಹೊಟ್ಟೆಯೊಳಗಿಂದ ನೀರು ಗಡ್ಡೆ ಹೊರಡುತ್ತದೆ? ಆಕಾಶದ ಹಿಮವನ್ನು ಹುಟ್ಟಿಸಿ ದವನಾರು? ಕಲ್ಲಿನ ಹಾಗೆ ನೀರುಗಳು ಅಡಗುತ್ತವೆ; ಅಗಾಧದ ಮೇಲ್ಭಾಗವು ಹೆಪ್ಪುಗಟ್ಟುವದು. ನೀನು ವೃಷಭ ರಾಶಿಯ ಸಿಹಿ ಪರಿಣಾಮಗ ಳನ್ನು ಬಂಧಿಸುವಿಯೋ? ಇಲ್ಲವೆ ಮೃಗಶಿರದ ಸಂಕೋ ಲೆಗಳನ್ನು ಬಿಚ್ಚಬಲ್ಲಿಯೋ? ನೀನು ರಾಶಿಗಳನ್ನು ಅವುಗಳ ಕಾಲದಲ್ಲಿ ಹೊರಗೆ ತರುತ್ತೀಯೋ? ಇಲ್ಲವೆ ಸಪ್ತತಾರೆಗಳನ್ನು ಅವುಗಳ ಪುತ್ರರ ಸಹಿತ ವಾಗಿ ನೀನು ನಡಿಸುತ್ತೀಯೋ? ಆಕಾಶದ ಕಟ್ಟಳೆ ಗಳನ್ನು ನೀನು ತಿಳುಕೊಳ್ಳುತ್ತೀಯೋ? ಇಲ್ಲವೆ ಅದರ ಅಧಿಕಾರವನ್ನು ಭೂಮಿಯಲ್ಲಿ ನಿರ್ಣಯಿ ಸುತ್ತೀಯೋ? ನೀರಿನ ಸಮೃದ್ಧಿಯು ನಿನ್ನನ್ನು ಮುಚ್ಚುವ ಹಾಗೆ ನಿನ್ನ ಶಬ್ದವನ್ನು ಮೋಡಗಳ ಕಡೆಗೆ ಎತ್ತುತ್ತೀಯೋ? ಮಿಂಚುಗಳು ಹೋಗಿ ಇಗೋ, ಇದ್ದೇವೆಂದು ನಿನಗೆ ಹೇಳುವ ಹಾಗೆ ನೀನು ಅವುಗಳನ್ನು ಕಳುಹಿಸುತ್ತೀ ಯೋ? ಯಾವನು ಅಂತರ್ಯದಲ್ಲಿ ಜ್ಞಾನ ಇಡು ತ್ತಾನೆ; ಇಲ್ಲವೆ ಯಾವನು ಹೃದಯಕ್ಕೆ ಗ್ರಹಿಕೆಯನ್ನು ಕೊಟ್ಟಿದ್ದಾನೆ? ಯಾವನು ಮೋಡಗಳನ್ನು ಜ್ಞಾನ ದಿಂದ ಎಣಿಸುತ್ತಾನೆ; ದೂಳಿಯು ಗಟ್ಟಿಯಾಗುತ್ತಾ ಬರುವಾಗ ಮತ್ತು ಗಡ್ಡೆಗಳು ಒಟ್ಟಾಗಿ ಅಂಟುವಾಗ ಆಕಾಶದ ಬುದ್ಧಲಿಗಳನ್ನು ಹೊಯ್ಯುವವನಾರು? ಸಿಂಹಕ್ಕೋಸ್ಕರ ನೀನು ಬೇಟೆಯಾಡುವಿಯೋ? ಇಲ್ಲವೆ ಅವು ಗುಹೆಗಳಲ್ಲಿ ಕೂತುಕೊಳ್ಳುವಾಗ, ಗವಿಯಲ್ಲಿ ಹೊಂಚಿ ಮಲಗಿರುವಾಗ, ಪ್ರಾಯದ ಸಿಂಹಗಳ ಆಶೆಯನ್ನು ಪೂರೈಸುವಿಯೋ?ಅದರ ಮರಿಗಳು ತಿನ್ನುವದಕ್ಕೆ ಇಲ್ಲದೆ ಅಲೆದು, ದೇವರಿಗೆ ಮೊರೆಯಿಡುವಾಗ ಕಾಗೆಗೆ ಅದರ ಆಹಾರವನ್ನು ಸಿದ್ಧಮಾಡುವವನಾರು? ಅದರ ಮರಿಗಳು ತಿನ್ನುವದಕ್ಕೆ ಇಲ್ಲದೆ ಅಲೆದು, ದೇವರಿಗೆ ಮೊರೆಯಿಡುವಾಗ ಕಾಗೆಗೆ ಅದರ ಆಹಾರವನ್ನು ಸಿದ್ಧಮಾಡುವವನಾರು?
- Proverbs 8:23–30 ಜ್ಞಾನೋಕ್ತಿಗಳು 8:23–30ನಿತ್ಯತ್ವದಿಂದ ಇಲ್ಲವೆ ಆರಂಭದಿಂದ, ಭೂಮಿಯು ಇರುವದಕ್ಕೆ ಮುಂಚೆ ನಾನು ಸ್ಥಾಪಿಸಲ್ಪ ಟ್ಟೆನು. ಅಗಾಧಗಳು ಇಲ್ಲದೆ ಇರುವಾಗ, ನೀರಿನಿಂದ ಸಮೃದ್ಧಿಯಾದ ಬುಗ್ಗೆಗಳು ಇಲ್ಲದೆ ಇರುವಾಗ ನಾನು ಉಂಟುಮಾಡಲ್ಪಟ್ಟೆನು. ಬೆಟ್ಟಗುಡ್ಡಗಳು ಸ್ಥಾಪಿಸಲ್ಪ ಡುವದಕ್ಕಿಂತ ಮುಂಚೆ ಭೂಮಿಯನ್ನೂ ಹೊಲ ಗಳನ್ನೂ ಲೋಕದ ಅತ್ಯಧಿಕ ಭಾಗದ ಧೂಳನ್ನೂ ಆತನು ಇನ್ನು ನಿರ್ಮಿಸದೆ ಇರುವಾಗಲೇ ನಾನು ಉಂಟು ಮಾಡಲ್ಪಟ್ಟೆನು. ಆತನು ಆಕಾಶಗಳನ್ನು ಸಿದ್ಧಪಡಿಸಿದಾಗ ಅಗಾಧದ ಮೇಲೆ ಚಕ್ರವನ್ನು ಹಾಕಿ ದಾಗ ಮೇಲೆ ಮೇಘಗಳನ್ನು ಆತನು ಸ್ಥಾಪಿಸಿದಾಗ ಅಗಾಧದ ಬುಗ್ಗೆಗಳನ್ನು ಆತನು ಬಲಪಡಿಸಿದಾಗ ಪ್ರವಾಹಗಳು ತನ್ನ ಆಜ್ಞೆಯನ್ನು ವಿಾರದಂತೆ ಸಮು ದ್ರಕ್ಕೆ ಆತನು ನಿಯಮವನ್ನು ಕೊಟ್ಟಿದಾಗ ಭೂಮಿಯ ಅಸ್ತಿವಾರಗಳನ್ನು ಆತನು ನೇಮಿಸಿದಾಗ ನಾನು ಆತ ನೊಂದಿಗೆ ಇದ್ದೆನು. ಆಗ ಆತನೊಂದಿಗೆ ಬೆಳೆದ ವನಂತೆ ಆತನ ಹತ್ತಿರ ಇದ್ದೆನು; ದಿನಾಲು ನಾನು ಆತನ ಆನಂದವಾಗಿ ಆತನ ಮುಂದೆ ಯಾವಾಗಲೂ ಸಂತೋಷಿಸುತ್ತಿದ್ದೆನು.
- Job 40:8–11 ಯೋಬನು 40:8–11ನೀನು ನನ್ನ ನ್ಯಾಯತೀರ್ವಿಕೆಯನ್ನು ತೆಗೆದುಹಾಕುವಿಯೋ? ನೀನು ನೀತಿವಂತ ನಾಗುವ ಹಾಗೆ ನನ್ನನ್ನು ಖಂಡಿಸುವಿಯೋ? ಇಲ್ಲವೆ ದೇವರ ಹಾಗೆ ತೋಳುಳ್ಳವನಾಗಿದ್ದೀಯೋ? ಇಲ್ಲವೆ ಆತನ ಹಾಗೆ ಗುಡುಗಿನಿಂದ ಆರ್ಭಟ ಮಾಡು ವಿಯೋ? ಗಾಂಭೀರ್ಯದಿಂದಲೂ ಘನತೆಯಿಂದ ಲೂ ನಿನ್ನನ್ನು ಅಲಂಕರಿಸಿಕೋ; ಮಹಿಮೆಯನ್ನೂ ಪ್ರಭೆಯನ್ನೂ ಧರಿಸಿಕೋ. ನಿನ್ನ ಕೋಪದ ಉರಿ ಯನ್ನು ದೂರಹಾಕು. ಗರ್ವಿಷ್ಟರನ್ನೆಲ್ಲಾ ನೋಡಿತಗ್ಗಿಸು.
- Daniel 4:35 ದಾನಿಯೇಲನು 4:35ಭೂ ನಿವಾಸಿಗಳೆಲ್ಲರೂ ಏನೂ ಇಲ್ಲದ ಹಾಗೆ ಎಣಿಸಲ್ಪಟ್ಟಿ ದ್ದಾರೆ; ಆತನು ಪರಲೋಕದ ಸೈನ್ಯದಲ್ಲಿಯೂ ಭೂ ನಿವಾಸಿಗಳಲ್ಲಿಯೂ ತನ್ನ ಚಿತ್ತದ ಪ್ರಕಾರವೇ ಮಾಡು ತ್ತಾನೆ. ಯಾರೂ ಆತನ ಹಸ್ತವನ್ನು ಹಿಂತೆಗೆಯಲಾರರು; ನೀನು ಏನು ಮಾಡುತ್ತಿರುವಿ ಎಂದು ಆತನಿಗೆ ಯಾರೂ ಕೇಳಲಾರರು.
- Job 36:23 ಯೋಬನು 36:23ಆತನ ಮಾರ್ಗವನ್ನು ಆತನಿಗೆ ನೇಮಿಸಿದವನಾರು? ನೀನು ಕೆಟ್ಟದ್ದು ಮಾಡಿದಿ ಎಂದು ಹೇಳುವವನಾರು?