Job · chapter 35 · verse 14
Job 35:14 in Kannada
ನೀನು ಅವನನ್ನು ದೃಷ್ಟಿಸುವ ದಿಲ್ಲವೆಂದು ನೀನು ಹೇಳಿದರೂ ನ್ಯಾಯತೀರ್ಪು ಅವನ ಮುಂದೆ ಇರುವದು; ಆದದರಿಂದ ನೀನು ಆತನಲ್ಲಿ ಭರವಸವಿಡು.
Neenu avanannu drushtisuva dillavendu neenu helidaroo nyaayateerpu avana munde iruvadu; aadadarinda neenu aatanalli bharavasavidu.
Job 35:14 in English
- King James Version (KJV)
- Although thou sayest thou shalt not see him, [yet] judgment [is] before him; therefore trust thou in him.
- World English Bible (WEB)
- How much less when you say you don’t see him. The cause is before him, and you wait for him!
- American Standard Version (ASV)
- How much less when thou sayest thou beholdest him not, The cause is before him, and thou waitest for him!
- Bible in Basic English (BBE)
- How much less when you say that you do not see him; that the cause is before him, and you are waiting for him.
- Darby Translation (DBY)
- Although thou sayest thou dost not see him, judgment is before him, therefore wait for him.
- Webster's Bible (WBS)
- Although thou sayest thou shalt not see him, [yet] judgment [is] before him; therefore trust thou in him.
- Young's Literal Translation (YLT)
- Yea, though thou sayest thou dost not behold Him, Judgment [is] before Him, and stay for Him.
Read in context
- 12ಅಲ್ಲಿ ಅವರು ಕೆಟ್ಟವರ ಗರ್ವದ ನಿಮಿತ್ತ ಮೊರೆಯಿಡಲು ಉತ್ತರ ಕೊಡುವದಿಲ್ಲ.
- 13ನಿಶ್ಚಯವಾಗಿ ವ್ಯರ್ಥವಾದ ದ್ದನ್ನು ದೇವರು ಕೇಳುವದಿಲ್ಲ. ಇಲ್ಲವೇ ಸರ್ವಶಕ್ತನು ಅದನ್ನು ಲಕ್ಷಿಸುವದಿಲ್ಲ.
- 14ನೀನು ಅವನನ್ನು ದೃಷ್ಟಿಸುವ ದಿಲ್ಲವೆಂದು ನೀನು ಹೇಳಿದರೂ ನ್ಯಾಯತೀರ್ಪು ಅವನ ಮುಂದೆ ಇರುವದು; ಆದದರಿಂದ ನೀನು ಆತನಲ್ಲಿ ಭರವಸವಿಡು.
- 15ಆದರೆ ಈಗ ಅದು ಹಾಗಲ್ಲದಿರುವದರಿಂದ ಆತನು ತನ್ನ ಕೋಪದಿಂದ ಏನೂ ವಿಚಾರಿಸದೆ ಇದ್ದಾನೆ; ಆದರೂ ಅವನು ದೊಡ್ಡ ಇಕ್ಕಟ್ಟಿನಲ್ಲಿ ಅದನ್ನು ತಿಳುಕೊಳ್ಳುವದಿಲ್ಲ.ಆದದರಿಂದ ಯೋಬನು ವ್ಯರ್ಥವಾಗಿ ಬಾಯಿ ತೆರೆದು ತಿಳುವಳಿಕೆ ಇಲ್ಲದೆ ನುಡಿಗಳನ್ನು ಹೆಚ್ಚಿಸುತ್ತಾನೆ.
- 16ಆದದರಿಂದ ಯೋಬನು ವ್ಯರ್ಥವಾಗಿ ಬಾಯಿ ತೆರೆದು ತಿಳುವಳಿಕೆ ಇಲ್ಲದೆ ನುಡಿಗಳನ್ನು ಹೆಚ್ಚಿಸುತ್ತಾನೆ.
Cross references
- Job 9:11 ಯೋಬನು 9:11ಇಗೋ, ಆತನು ನನ್ನ ಮುಂದೆ ಹಾದುಹೋಗು ತ್ತಾನೆ. ನನಗೆ ಆತನು ಕಾಣುವದಿಲ್ಲ. ಆತನು ದಾಟಿ ಹೋಗುತ್ತಾನೆ, ಆದರೆ ನಾನು ಆತನನ್ನು ಗ್ರಹಿಸಿ ಕೊಳ್ಳುವದಿಲ್ಲ.
- Psalm 37:5–6 ಕೀರ್ತನೆಗಳು 37:5–6ನಿನ್ನ ಮಾರ್ಗವನ್ನು ಕರ್ತನಿಗೆ ಒಪ್ಪಿಸು; ಆತನಲ್ಲಿ ಭರವಸ ವಿಡು; ಆತನು ಅದನ್ನು ನೆರವೇರಿಸುವನು. ನಿನ್ನ ನೀತಿಯನ್ನು ಬೆಳಕಿನ ಹಾಗೆಯೂ ನಿನ್ನ ನ್ಯಾಯಗಳನ್ನು ಮಧ್ಯಾಹ್ನದ ಹಾಗೆಯೂ ಆತನು ಹೊರಗೆ ಬರ ಮಾಡುವನು.
- Job 23:3 ಯೋಬನು 23:3ನಾನು ತಿಳಿದುಕೊಂಡು ಆತನನ್ನು ಕಂಡುಕೊಂಡರೆ ಎಷ್ಟೋ ಒಳ್ಳೇದು! ಆತನ ಪೀಠದ ತನಕ ಬರುವೆನು.
- Job 23:8–10 ಯೋಬನು 23:8–10ಇಗೋ, ನಾನು ಮುಂದೆ ನಡೆದರೆ ಆತನು ಅಲ್ಲಿ ಇರುವದಿಲ್ಲ; ಹಿಂತಿರುಗಿದರೆ ಆತನನ್ನು ಗ್ರಹಿಸುವದಿಲ್ಲ. ಎಡಗಡೆಯಲ್ಲಿ, ಆತನು ಕೆಲಸ ಮಾಡು ವಲ್ಲಿ ಆತನನ್ನು ನೋಡುವದಿಲ್ಲ; ಬಲಗಡೆಯಲ್ಲಿ ಆತನು ಅಡಗಿಸಿಕೊಳ್ಳುತ್ತಾನೆ, ನಾನು ಕಾಣುವದಿಲ್ಲ. ಆದರೆ ನಾನು ಹಿಡಿಯುವ ಮಾರ್ಗವನ್ನು ಆತನು ತಿಳಿದಿದ್ದಾನೆ, ನನ್ನನ್ನು ಶೋಧಿಸಿದಾಗ ನಾನು ಬಂಗಾರದ ಹಾಗೆ ಹೊರಗೆ ಬರುವೆನು.
- Job 9:19 ಯೋಬನು 9:19ಶಕ್ತಿಯ ವಿಷಯದಲ್ಲಿ ಮಾತನಾಡಲೋ? ಇಗೋ, ಆತನು ಬಲವುಳ್ಳವನಾಗಿದ್ದಾನೆ. ನ್ಯಾಯದ ವಿಷಯವೋ ವಾದಿ ಸುವದಕ್ಕೆ ನನಗೆ ಕಾಲವನ್ನು ನಿಯಮಿಸುವವನು ಯಾರು?
- Romans 8:33–34 ರೋಮಾಪುರದವರಿಗೆ 8:33–34ದೇವರಾದುಕೊಂಡವರ ಮೇಲೆ ಯಾರು ತಪ್ಪು ಹೊರಿಸಾರು? ದೇವರೇ ನಮ್ಮನ್ನು ನೀತಿವಂತರೆಂದು ನಿರ್ಣಯಿಸುವವನಾಗಿದ್ದಾನೆ. ಅಪರಾಧಿಗಳೆಂದು ನಿರ್ಣಯಿಸುವವರು ಯಾರು? ಕ್ರಿಸ್ತನು ಮರಣವನ್ನು ಹೊಂದಿದ್ದಲ್ಲದೆ (ಜೀವಿತನಾಗಿ) ಎದ್ದು ದೇವರ ಬಲಗಡೆಯಲ್ಲಿ ನಮಗೋಸ್ಕರ ವಿಜ್ಞಾಪನೆ ಮಾಡು ವಾತನಾಗಿದ್ದಾನೆ;
- Isaiah 50:10 ಯೆಶಾಯ 50:10ನಿಮ್ಮೊಳಗೆ ಕರ್ತನಿಗೆ ಭಯಪಟ್ಟು ಆತನ ಸೇವ ಕನ ಸ್ವರವನ್ನು ಕೇಳಿ ಬೆಳಕಿಲ್ಲದೆ ಕತ್ತಲೆಯಲ್ಲಿ ನಡೆ ಯುವವನು ಯಾರು? ಅವನು ಕರ್ತನ ಹೆಸರಿನಲ್ಲಿ ನಂಬಿಕೆಯಿಟ್ಟು ತನ್ನ ದೇವರ ಮೇಲೆ ಆತುಕೊಳ್ಳಲಿ.ಇಗೋ, ಕಿಡಿಗಳಿಂದ ಆವರಿಸಿಕೊಳ್ಳುವಂತೆ ಬೆಂಕಿ ಯನ್ನು ಹತ್ತಿಸಿಕೊಳ್ಳುವವರೆಲ್ಲರೇ, ನಿಮ್ಮ ಬೆಂಕಿಯ ಬೆಳಕಿನಲ್ಲಿಯೂ ನೀವು ಹತ್ತಿಸಿದ ಕಿಡಿಗಳಲ್ಲಿಯೂ ನಡೆಯಿರಿ. ನನ್ನ ಹಸ್ತದಿಂದ ನಿಮಗಾಗುವದು ಇದೇ; ನೀವು ದುಃಖದಲ್ಲಿ ಬಿದ್ದುಕೊಂಡಿರುವಿರಿ.
- Isaiah 30:18 ಯೆಶಾಯ 30:18ಹೀಗಿರಲು ಕರ್ತನು ನಿಮಗೆ ಕೃಪೆಯನ್ನು ತೋರಿಸ ಬೇಕೆಂದು ಕಾದಿರುವನು. ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತವಾಗಿ ಕಾಣಿಸಿಕೊಳ್ಳುವನು. ಕರ್ತನು ನ್ಯಾಯಾಧಿಪತಿಯಾದ ದೇವರಾಗಿದ್ದಾನೆ. ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು.
- Psalm 27:12–14 ಕೀರ್ತನೆಗಳು 27:12–14ನನ್ನ ವೈರಿಗಳ ಇಷ್ಟಕ್ಕೆ ನನ್ನನ್ನು ಕೊಟ್ಟುಬಿಡಬೇಡ; ಸುಳ್ಳು ಸಾಕ್ಷಿಗಳೂ ಕ್ರೂರತ್ವದ ಶ್ವಾಸಬಿಡುವವರೂ ನನಗೆ ವಿರೋಧವಾಗಿ ಎದ್ದಿದ್ದಾರೆ. ಜೀವಿತರ ದೇಶದಲ್ಲಿ ಕರ್ತನ ಒಳ್ಳೇತನ ವನ್ನು ನೋಡುವೆನೆಂದು ನಾನು ನಂಬದೆ ಹೋಗಿದ್ದರೆ ಮೂರ್ಛೆ ಹೋಗುತ್ತಿದ್ದೆನು.ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು. ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು.
- Psalm 97:2 ಕೀರ್ತನೆಗಳು 97:2ಮೇಘಗಳೂ ಕಾರ್ಗತ್ತಲೂ ಆತನ ಸುತ್ತಲು ಅವೆ; ನೀತಿಯೂ ನ್ಯಾಯವೂ ಆತನ ಸಿಂಹಾಸನದ ಸ್ಥಳವಾಗಿದೆ.
- Psalm 77:5–10 ಕೀರ್ತನೆಗಳು 77:5–10ಪುರಾ ತನ ದಿವಸಗಳನ್ನೂ ಆದಿಕಾಲದ ವರುಷಗಳನ್ನೂ ಯೋಚಿಸಿದೆನು. ನನ್ನ ಹಾಡನ್ನು ರಾತ್ರಿಯಲ್ಲಿ ಜ್ಞಾಪಕ ಮಾಡಿಕೊಳ್ಳುತ್ತೇನೆ; ನನ್ನ ಹೃದಯದ ಸಂಗಡ ಮಾತಾ ಡುತ್ತೇನೆ; ನನ್ನ ಆತ್ಮವು ಪರಿಶೋಧನೆ ಮಾಡಿತು. ನಿರಂತರವಾಗಿ ಕರ್ತನು ತಳ್ಳಿಬಿಡುವನೋ? ಇನ್ನು ದಯೆತೋರದೆ ಇರುವನೋ? ಆತನ ಕೃಪೆಯು ಸದಾಕಾಲಕ್ಕೆ ನಿಂತು ಹೋಗುತ್ತದೋ? ನಿರಂತರಕ್ಕೂ ವಾಗ್ದಾನ ತಪ್ಪಿಹೋಗುತ್ತದೋ? ದೇವರು ಕರು ಣಿಸುವದನ್ನು ಮರೆತು ಬಿಟ್ಟಿದ್ದಾನೋ? ತನ್ನ ಅಂತಃ ಕರಣಗಳನ್ನು ಕೋಪದಿಂದ ಮುಚ್ಚಿಕೊಂಡಿದ್ದಾನೋ? ಸೆಲಾ. ಇದೇ ನನ್ನ ಬಲಹೀನತೆ ಎಂದು ನಾನು ಅಂದುಕೊಂಡೆನು. ಮಹೋನ್ನತನ ಬಲಗೈಯ ವರ್ಷ ಗಳನ್ನು ಜ್ಞಾಪಕಮಾಡಿಕೊಳ್ಳುವೆನು;
- Micah 7:7–9 ಮೀಕ 7:7–9ಆದರೆ ನಾನು ಕರ್ತನನ್ನು ಎದುರು ನೋಡುವೆನು; ನನ್ನ ರಕ್ಷಣೆಯ ದೇವರಿಗೋಸ್ಕರ ಕಾದುಕೊಳ್ಳುವೆನು; ನನ್ನ ದೇವರು ನನ್ನನ್ನು ಕೇಳುವನು. ನನ್ನ ಶತ್ರುವೇ, ನನ್ನ ಮೇಲೆ ಸಂತೋಷಪಡಬೇಡ; ನಾನು ಬಿದ್ದಿದ್ದರೂ ತಿರುಗಿ ಏಳುವೆನು; ಕತ್ತಲೆಯಲ್ಲಿ ಕೂತುಕೊಂಡರೂ ನನಗೆ ಬೆಳಕು ಕರ್ತನೇ. ನಾನು ಕರ್ತನಿಗೆ ವಿರೋಧ ವಾಗಿ ಪಾಪ ಮಾಡಿದ್ದರಿಂದ ಆತನು ತನ್ನ ವ್ಯಾಜ್ಯವಾಡಿ ನನ್ನ ನ್ಯಾಯವನ್ನು ನಡಿಸುವ ತನಕ ಆತನ ಕೋಪವನ್ನು ತಾಳುವೆನು; ಆತನು ನನ್ನನ್ನು ಬೆಳಕಿಗೆ ತರುವನು, ಆತನ ನೀತಿಯನ್ನು ನೋಡುವೆನು.