Job · chapter 35 · verse 8
Job 35:8 in Kannada
ನಿನ್ನ ಹಾಗಿ ರುವ ಮನುಷ್ಯನಿಗೆ ನಿನ್ನ ದುಷ್ಟತ್ವವು ಕೇಡು ಮಾಡ ಬಹುದು. ಮನುಷ್ಯನ ಮಗನಿಗೆ ನಿನ್ನ ನೀತಿಯು ಲಾಭ ಮಾಡಬಹುದು.
Ninna haagi ruva manushyanige ninna dushtatvavu kedu maada bahudu. Manushyana maganige ninna neetiyu laabha maadabahudu.
Job 35:8 in English
- King James Version (KJV)
- Thy wickedness [may hurt] a man as thou [art;] and thy righteousness [may profit] the son of man.
- World English Bible (WEB)
- Your wickedness may hurt a man as you are, and your righteousness may profit a son of man.
- American Standard Version (ASV)
- Thy wickedness [may hurt] a man as thou art; And thy righteousness [may profit] a son of man.
- Bible in Basic English (BBE)
- Your evil-doing may have an effect on a man like yourself, or your righteousness on a son of man.
- Darby Translation (DBY)
- Thy wickedness [may affect] a man as thou [art], and thy righteousness a son of man.
- Webster's Bible (WBS)
- Thy wickedness [may hurt] a man as thou [art] : and thy righteousness [may profit] the son of man.
- Young's Literal Translation (YLT)
- For a man like thyself [is] thy wickedness, And for a son of man thy righteousness.
Read in context
- 6ನೀನು ಪಾಪಮಾಡಿದರೆ ಆತನಿಗೆ ವಿರೋಧವಾಗಿ ಏನು ಮಾಡುವಿ? ನಿನ್ನ ದ್ರೋಹಗಳು ಹೆಚ್ಚಿದರೆ ಆತನಿಗೆ ಏನು ಮಾಡುವಿ?
- 7ನೀನು ನೀತಿವಂತನಾಗಿ ದ್ದರೆ ಆತನಿಗೇನು ಕೊಡುವಿ? ಇಲ್ಲವೆ ಆತನು ನಿನ್ನ ಕೈಯಿಂದ ಏನು ತೆಗೆದುಕೊಳ್ಳುವನು?
- 8ನಿನ್ನ ಹಾಗಿ ರುವ ಮನುಷ್ಯನಿಗೆ ನಿನ್ನ ದುಷ್ಟತ್ವವು ಕೇಡು ಮಾಡ ಬಹುದು. ಮನುಷ್ಯನ ಮಗನಿಗೆ ನಿನ್ನ ನೀತಿಯು ಲಾಭ ಮಾಡಬಹುದು.
- 9ಬಹು ಬಲಾತ್ಕಾರದ ದೆಸೆಯಿಂದ ಬಲಾತ್ಕಾರ ಮಾಡಲ್ಪಟ್ಟವರು ಕೂಗುವಂತೆ ಅವರು ಮಾಡುತ್ತಾರೆ; ಪರಾಕ್ರಮಿಗಳ ತೋಳಿಗೋಸ್ಕರ ಮೊರೆಯಿಡುತ್ತಾರೆ.
- 10ಆದರೆ ರಾತ್ರಿಯಲ್ಲಿ ಗೀತೆಗಳನ್ನು ಕೊಡುವ ನನ್ನ ನಿರ್ಮಾಣಿಕನಾದ ದೇವರು ಎಲ್ಲಿ ಎಂದು ಯಾರೂ ಹೇಳುವದಿಲ್ಲ.
Cross references
- Joshua 7:1–5 ಯೆಹೋಶುವ 7:1–5ಯೆಹೂದ ಗೋತ್ರದ ಜೆರಹನ ಮಗನಾದ ಜಬ್ದೀಯ ಮಗನಾದ ಕರ್ವಿಾಯ ಮಗನಾದ ಆಕಾನನು ಶಾಪಕ್ಕೀಡಾದದ್ದರಲ್ಲಿ ಕೆಲವನ್ನು ತೆಗೆದುಕೊಂಡನು. ಈ ಕಾರಣದಿಂದ ಇಸ್ರಾಯೇಲ್ ಮಕ್ಕಳು ಶಾಪಕ್ಕೀಡಾದವರಲ್ಲಿ ಅಪರಾಧಿಗಳಾದರು. ಆದದರಿಂದ ಕರ್ತನ ಕೋಪವು ಇಸ್ರಾಯೇಲ್ ಮಕ್ಕಳ ಮೇಲೆ ಉರಿಯಹತ್ತಿತ್ತು. ಆಗ ಯೆಹೋಶುವನು ಅವರಿಗೆ--ನೀವು ದೇಶ ವನ್ನು ಪಾಳತಿ ನೋಡಿ ಬನ್ನಿರಿ ಎಂದು ಹೇಳಿ ಯೆರಿಕೋ ವಿನಿಂದ ಮನುಷ್ಯರನ್ನು ಬೇತೇಲಿಗೆ ಪೂರ್ವಕಡೆಯಾದ ಬೇತಾವೆನಿನ ಬಳಿಯಲ್ಲಿರುವ ಆಯಿಗೆ ಕಳುಹಿಸಿದನು. ಆಗ ಅವರು ಹೋಗಿ ಆಯಿಯನ್ನು ಪಾಳತಿನೋಡಿ ಯೆಹೋಶುವನ ಬಳಿಗೆ ತಿರಿಗಿ ಬಂದು ಅವನಿಗೆ--ಜನರೆಲ್ಲರೂ ಏರಿಹೋಗದೆ ಇರಲಿ; ಆಯಿಯನ್ನು ಹೊಡೆಯುವದಕ್ಕೆ ಎರಡು ಅಥವಾ ಮೂರು ಸಾವಿರ ಜನರು ಮಾತ್ರವೇ ಹೋಗಲಿ; ಅಲ್ಲಿಗೆ ಹೋಗುವ ಜನರೆಲ್ಲರನ್ನೂ ದಣಿಸಬೇಡ; ಯಾಕಂದರೆ ಸ್ವಲ್ಪ ಜನರು ಮಾತ್ರ ಇದ್ದಾರೆ ಅಂದರು. ಹಾಗೆಯೇ ಜನರಲ್ಲಿ ಹೆಚ್ಚು ಕಡಿಮೆ ಮೂರುಸಾವಿರ ಮಂದಿ ಅಲ್ಲಿಗೆ ಹೋದರು; ಆದರೆ ಅವರು ಆಯಿಯ ಮನುಷ್ಯರ ಮುಂದೆ ಓಡಿಹೋದರು. ಆಯಿ ಮನುಷ್ಯರು ಇವರಲ್ಲಿ ಹೆಚ್ಚು ಕಡಿಮೆ ಮೂವತ್ತಾರು ಮಂದಿಯನ್ನು ಹೊಡೆದು ಹಾಕಿದರು. ಬಾಗಲಿನಿಂದ ಪ್ರಾರಂಭಿಸಿ ಷೆಬಾರಿಮಿನ ವರೆಗೂ ಅವರನ್ನು ಹಿಂದಟ್ಟಿ ಇಳಿದು ಹೋಗುವ ವರೆಗೂ ಅವರನ್ನು ಹೊಡೆದರು. ಆದದ ರಿಂದ ಜನರ ಹೃದಯವು ಕರಗಿ ನೀರಿನಂತಾಯಿತು.
- Genesis 12:2 ಆದಿಕಾಂಡ 12:2ನಾನು ನಿನ್ನನ್ನು ದೊಡ್ಡ ಜನಾಂಗವಾಗ ಮಾಡಿ ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರನ್ನು ದೊಡ್ಡ ದಾಗಿ ಮಾಡುವೆನು, ನೀನು ಆಶೀರ್ವಾದವಾಗಿರುವಿ.
- Genesis 19:29 ಆದಿಕಾಂಡ 19:29ದೇವರು ಮೈದಾನದ ಪಟ್ಟಣಗಳನ್ನು ನಾಶಮಾಡುವಾಗ ಆದದ್ದೇನಂದರೆ, ದೇವರು ಅಬ್ರ ಹಾಮನನ್ನು ಜ್ಞಾಪಕಮಾಡಿಕೊಂಡು ಲೋಟನು ವಾಸಮಾಡಿದ ಪಟ್ಟಣಗಳನ್ನು ಹಾಳುಮಾಡಿದಾಗ ಹಾಳಾದ ಆ ಸ್ಥಳದೊಳಗಿಂದ ಲೋಟನನ್ನು ಹೊರಗೆ ಕಳುಹಿಸಿದನು.
- Joshua 22:20 ಯೆಹೋಶುವ 22:20ಜೆರಹನ ಮಗನಾದ ಆಕಾನನು ಶಪಿಸಲ್ಪಟ್ಟದ್ದರಲ್ಲಿ ಅಪರಾಧಮಾಡಿದಾಗ ಈ ರೌದ್ರವು ಎಲ್ಲಾ ಸಭೆಯ ಮೇಲೆ ಬಿತ್ತಲ್ಲವೋ? ಅವನು ಮಾತ್ರ ತನ್ನ ಅಪರಾಧದಲ್ಲಿ ನಾಶವಾಗಲಿಲ್ಲ ಎಂದು ಹೇಳಿದರು.
- Psalm 106:30 ಕೀರ್ತನೆಗಳು 106:30ಆಗ ಫೀನೆಹಾಸನು ನಿಂತು ಕೊಂಡು ನ್ಯಾಯತೀರಿಸಿದ್ದರಿಂದ ವ್ಯಾಧಿಯು ನಿಂತು ಹೋಯಿತು.
- Job 42:8 ಯೋಬನು 42:8ಹಾಗಾದರೆ ಈಗ ಏಳು ಎತ್ತುಗಳೂ ಏಳು ಹೋತಗಳೂ ನಿಮ ಗೋಸ್ಕರ ತಕ್ಕೊಂಡು ನನ್ನ ಸೇವಕನಾದ ಯೋಬನ ಬಳಿಗೆ ಬನ್ನಿರಿ; ಅವುಗಳನ್ನು ನಿಮಗೋಸ್ಕರ ದಹನ ಬಲಿಯಾಗಿ ಅರ್ಪಿಸಿರಿ; ನನ್ನ ಸೇವಕನಾದ ಯೋಬನು ನಿಮಗೋಸ್ಕರ ಪ್ರಾರ್ಥನೆ ಮಾಡುವನು. ನಾನು ನಿಮ್ಮ ಬುದ್ಧಿಹೀನತೆಯ ಪ್ರಕಾರ ಮಾಡದ ಹಾಗೆ ಅವನ ಪ್ರಾರ್ಥನೆಯನ್ನು ಅಂಗೀಕರಿಸುವೆನು. ಯಾಕಂ ದರೆ ನೀವು ನನ್ನ ಸೇವಕನಾದ ಯೋಬನ ಪ್ರಕಾರ ನನ್ನ ವಿಷಯವಾಗಿ ಸರಿಯಾದವುಗಳನ್ನು ಮಾತಾ ಡಲಿಲ್ಲ.
- Genesis 18:24–33 ಆದಿಕಾಂಡ 18:24–33ಒಂದು ವೇಳೆ ಆ ಪಟ್ಟಣದಲ್ಲಿ ಐವತ್ತು ಮಂದಿ ನೀತಿವಂತರಿದ್ದರೆ ಅದರೊಳಗಿರುವ ಆ ಐವತ್ತು ನೀತಿವಂತರಿಗೋಸ್ಕರ ಆ ಸ್ಥಳವನ್ನು ಉಳಿಸದೆ ನಾಶಮಾಡುವಿಯೋ? ಆ ಪ್ರಕಾರ ಮಾಡಿ ನೀತಿವಂತರನ್ನು ದುಷ್ಟರ ಸಂಗಡ ಕೊಲ್ಲುವದು ನಿನಗೆ ದೂರವಾಗಿರಲಿ; ಹಾಗೆ ನೀತಿವಂತರನ್ನು ದುಷ್ಟರಿಗೆ ಸಮಾನಮಾಡುವದು ನಿನಗೆ ದೂರ ವಾಗಿರಲಿ; ಭೂಲೋಕಕ್ಕೆಲ್ಲಾ ನ್ಯಾಯಾಧಿಪತಿಯಾಗಿ ರುವಾತನು ನ್ಯಾಯವಾದದ್ದನ್ನು ಮಾಡದೆ ಇರುವನೇ ಅಂದನು. ಅದಕ್ಕೆ ಕರ್ತನು--ನನಗೆ ಸೊದೋಮ್ ಪಟ್ಟಣದೊಳಗೆ ಐವತ್ತು ಮಂದಿ ನೀತಿವಂತರು ಸಿಕ್ಕಿದರೆ ಅವರಿಗೊಸ್ಕರ ಆ ಸ್ಥಳವನ್ನೆಲ್ಲಾ ಉಳಿಸುವೆನು ಅಂದನು. ಆಗ ಅಬ್ರಹಾಮನು--ಇಗೋ, ಮಣ್ಣೂ ಬೂದಿಯೂ ಆಗಿರುವ ನಾನು ಕರ್ತನ ಸಂಗಡ ಮಾತನಾಡುವದಕ್ಕೆ ಮುಂಗೊಂಡಿದ್ದೇನೆ. ಒಂದು ವೇಳೆ ಐವತ್ತು ನೀತಿವಂತರಲ್ಲಿ ಐದು ಕಡಿಮೆ ಇದ್ದರೆ ಆ ಐದು ಮಂದಿ ಇಲ್ಲದ್ದರಿಂದ ಆ ಪಟ್ಟಣವನ್ನು ನಾಶಮಾಡುವಿಯೋ ಎಂದು ಪ್ರತ್ಯುತ್ತರವಾಗಿ ಅಂದನು. ಆದಕ್ಕೆ ಆತನು--ನಾಲ್ವತ್ತೈದು ಮಂದಿ ಅಲ್ಲಿ ಸಿಕ್ಕಿದರೆ ನಾನು ನಾಶಮಾಡುವದಿಲ್ಲ ಅಂದನು. ಅಬ್ರಹಾಮನು ಆತನ ಸಂಗಡ ಇನ್ನೂ ಮಾತನಾಡಿ--ಒಂದು ವೇಳೆ ಅಲ್ಲಿ ನಾಲ್ವತ್ತು ಮಂದಿ ಸಿಕ್ಕಾರು ಅಂದನು. ಅದಕ್ಕೆ ಆತನು--ನಾಲ್ವತ್ತು ಮಂದಿಗೋಸ್ಕರ ಅದನ್ನು ನಾನು ನಾಶಮಾಡುವದಿಲ್ಲ ಅಂದನು. ಅವನು-- ಕರ್ತನಿಗೆ ಕೋಪಬಾರದೆ ಇರಲಿ; ನಾನು ಮಾತನಾ ಡುತ್ತೇನೆ--ಒಂದು ವೇಳೆ ಅಲ್ಲಿ ಮೂವತ್ತು ಮಂದಿ ಸಿಕ್ಕಾರು ಅಂದಾಗ ಆತನು--ನನಗೆ ಅಲ್ಲಿ ಮೂವತ್ತು ಮಂದಿ ಸಿಕ್ಕಿದರೆ ನಾಶಮಾಡುವದಿಲ್ಲ ಅಂದನು. ಅವನು--ಇಗೋ, ಕರ್ತನ ಸಂಗಡ ಮಾತನಾಡು ವದಕ್ಕೆ ಮುಂಗೊಂಡಿದ್ದೇನೆ; ಒಂದು ವೇಳೆ ಇಪ್ಪತ್ತು ಮಂದಿ ಅಲ್ಲಿ ಸಿಕ್ಕಾರು ಅಂದಾಗ ಆತನು-- ಆ ಇಪ್ಪತ್ತು ಮಂದಿಗೋಸ್ಕರ ನಾನು ಅದನ್ನು ನಾಶಮಾಡುವದಿಲ್ಲ ಅಂದನು. ಅವನು--ಹಾ, ಕರ್ತನೇ, ನಿನಗೆ ಕೋಪಬಾರದೆ ಇರಲಿ; ಇನ್ನು ಒಂದೇ ಸಾರಿ ಮಾತನಾಡುತ್ತೇನೆ--ಒಂದು ವೇಳೆ ಅಲ್ಲಿ ಹತ್ತು ಮಂದಿ ಸಿಕ್ಕಾರು ಅಂದಾಗ ಆತನು--ಹತ್ತು ಮಂದಿಗೋಸ್ಕರ ನಾಶಮಾಡೆನು ಅಂದನು.ಕರ್ತನು ಅಬ್ರಹಾಮನ ಸಂಗಡ ಮಾತನಾಡು ವದನ್ನು ಮುಗಿಸಿದ ಕೂಡಲೆ ಹೊರಟುಹೋದನು. ಅಬ್ರಹಾಮನು ತನ್ನ ಸ್ಥಳಕ್ಕೆ ತಿರುಗಿಕೊಂಡನು. ಕರ್ತನು ಅಬ್ರಹಾಮನ ಸಂಗಡ ಮಾತನಾಡು ವದನ್ನು ಮುಗಿಸಿದ ಕೂಡಲೆ ಹೊರಟುಹೋದನು. ಅಬ್ರಹಾಮನು ತನ್ನ ಸ್ಥಳಕ್ಕೆ ತಿರುಗಿಕೊಂಡನು.
- Jonah 1:12 ಯೋನ 1:12ಅವನು ಅವ ರಿಗೆ--ನನ್ನನ್ನು ಎತ್ತಿ ಸಮುದ್ರದಲ್ಲಿ ಹಾಕಿರಿ, ಆಗ ಸಮುದ್ರವು ನಿಮಗೆ ಶಾಂತವಾಗುವದು; ನನ್ನ ನಿಮಿತ್ತ ಈ ದೊಡ್ಡ ಬಿರುಗಾಳಿ ನಿಮ್ಮ ಮೇಲೆ ಬಂತೆಂದು ಬಲ್ಲೆನು ಅಂದನು.
- Ecclesiastes 9:18 ಪ್ರಸಂಗಿ 9:18ಯುದ್ಧದ ಆಯುಧಗಳಿಗಿಂತಲೂ ಜ್ಞಾನವು ಲೇಸು. ಆದರೆ ಒಬ್ಬ ಪಾಪಿಯು ಹೆಚ್ಚು ಒಳ್ಳೆಯದನ್ನು ನಾಶಪಡಿಸುತ್ತಾನೆ.
- Psalm 106:23 ಕೀರ್ತನೆಗಳು 106:23ಆದದರಿಂದ ಆತನು ಅವರನ್ನು ನಾಶಮಾಡುತ್ತೇನೆಂದು ಹೇಳಿದನು. ಆದರೆ ಆತನು ಆದುಕೊಂಡ ಮೋಶೆಯು ಆತನ ಕೋಪ ವನ್ನು ತಿರುಗಿಸುವ ಹಾಗೆ ಆಪತ್ತಿನಲ್ಲಿ ಆತನ ಮುಂದೆ ನಿಂತುಕೊಂಡನು.
- Ezekiel 22:30 ಯೆಹೆಜ್ಕೇಲನು 22:30ಬೇಲಿ ಕಟ್ಟುವ ಮನುಷ್ಯನನ್ನು ದೇಶಕ್ಕೋಸ್ಕರ ನಾನು ಅದನು ನಾಶಮಾಡದ ಹಾಗೆ ಪೌಳಿಯ ಒಡಕಿನಲ್ಲಿ ನಿಲ್ಲತಕ್ಕ ವನನ್ನು ಹುಡುಕಿದೆನು, ಆದರೆ ಸಿಕ್ಕಲಿಲ್ಲ.ಆದದ ರಿಂದ ನನ್ನ ರೋಷವನ್ನು ಅವರ ಮೇಲೆ ಸುರಿಸಿದ್ದೇನೆ; ನನ್ನ ಸಿಟ್ಟಿನ ಬೆಂಕಿಯಿಂದ ಅವರನ್ನು ಸಂಹರಿಸಿದ್ದೇನೆ; ಅವರ ಮಾರ್ಗವನ್ನು ಅವರ ತಲೆಗಳ ಮೇಲೆ ಮುಯ್ಯಿ ತೀರಿಸಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ.
- Acts 27:24 ಅಪೊಸ್ತಲರ ಕೃತ್ಯಗಳು 27:24ಪೌಲನೇ, ಭಯಪಡಬೇಡ, ನೀನು ಕೈಸರನ ಮುಂದೆ ನಿಲ್ಲತಕ್ಕದ್ದು; ಇಗೋ, ನಿನ್ನೊಂದಿಗೆ ಪ್ರಯಾಣಮಾಡುವವರೆಲ್ಲರನ್ನು ನಿನಗೆ ದೇವರು ಕೊಟ್ಟಿದ್ದಾನೆ ಎಂದು ಹೇಳಿದನು.