Job · chapter 38 · verse 6
Job 38:6 in Kannada
ಯಾವದರ ಮೇಲೆ ಅದರ ಅಸ್ತಿವಾರ ಸ್ಥಿರವಾಗಿದೆ? ಇಲ್ಲವೆ ಅದರ ಮೂಲೆಗಲ್ಲನ್ನು ಇಟ್ಟವರು ಯಾರು?
Yaavadara mele adara astivaara sthiravaagide? Illave adara moolegallannu ittavaru yaaru?
Job 38:6 in English
- King James Version (KJV)
- Whereupon are the foundations thereof fastened? or who laid the corner stone thereof;
- World English Bible (WEB)
- What were its foundations fastened on? Or who laid its cornerstone,
- American Standard Version (ASV)
- Whereupon were the foundations thereof fastened? Or who laid the corner-stone thereof,
- Bible in Basic English (BBE)
- On what were its pillars based, or who put down its angle-stone,
- Darby Translation (DBY)
- Whereupon were the foundations thereof sunken? or who laid its corner-stone,
- Webster's Bible (WBS)
- Upon what are the foundations of it fastened? or who laid its corner stone;
- Young's Literal Translation (YLT)
- On what have its sockets been sunk? Or who hath cast its corner-stone?
Read in context
- 4ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿ ಇದ್ದಿ? ನಿನಗೆ ಗ್ರಹಿಕೆ ಇದ್ದರೆ ತಿಳಿಯಪಡಿಸು.
- 5ನಿನಗೆ ತಿಳಿದಿದ್ದರೆ ಅದರ ಅಳತೆಗಳನ್ನು ಹಾಕಿದ ವನಾರು? ಇಲ್ಲವೆ ಅದರ ಮೇಲೆ ಗೆರೆಯನ್ನೆಳೆದವರು ಯಾರು?
- 6ಯಾವದರ ಮೇಲೆ ಅದರ ಅಸ್ತಿವಾರ ಸ್ಥಿರವಾಗಿದೆ? ಇಲ್ಲವೆ ಅದರ ಮೂಲೆಗಲ್ಲನ್ನು ಇಟ್ಟವರು ಯಾರು?
- 7ಆಗ ಉದಯದ ನಕ್ಷತ್ರಗಳು ಕೂಡ ಹರ್ಷಧ್ವನಿ ಮಾಡುವಾಗ ದೇವರ ಪುತ್ರರೆಲ್ಲಾ ಉಲ್ಲಾ ಸದಿಂದ ಆರ್ಭಟಿಸಿದರು.
- 8ಸಮುದ್ರವು ಗರ್ಭದೊಳಗಿಂದ ಹೊರಬಂದಂತೆ, ಅದು ಬೇಧಿಸಿಕೊಂಡು ಬಂದಾಗ ಸಮುದ್ರವನ್ನು ಬಾಗಲುಗಳಿಂದ ಮುಚ್ಚಿದವನಾರು?
Cross references
- Job 26:7 ಯೋಬನು 26:7ಉತ್ತರವನ್ನು ಶೂನ್ಯದ ಮೇಲೆ ವಿಸ್ತರಿಸುತ್ತಾನೆ; ಭೂಮಿ ಯನ್ನು ಏನೂ ಇಲ್ಲದ್ದರ ಮೇಲೆ ತೂಗ ಹಾಕಿದ್ದಾನೆ.
- Psalm 104:5 ಕೀರ್ತನೆಗಳು 104:5ಯುಗಯುಗಾಂತರಗಳಿಗೂ ಅದು ಕದಲದ ಹಾಗೆ ಭೂಮಿಯನ್ನು ಅದರ ಅಸ್ತಿವಾರಗಳ ಮೇಲೆ ಆತನು ಸ್ಥಾಪಿಸಿದನು.
- Psalm 93:1 ಕೀರ್ತನೆಗಳು 93:1ಕರ್ತನು ಆಳುತ್ತಾನೆ, ಆತನು ಘನತೆಯನ್ನು ಹೊದ್ದುಕೊಂಡಿದ್ದಾನೆ; ಕರ್ತನು ಬಲ ದಿಂದ ಹೊದ್ದುಕೊಂಡಿದ್ದಾನೆ, ಅದರಿಂದ ತನ್ನ ನಡು ವನ್ನು ಕಟ್ಟಿಕೊಂಡಿದ್ದಾನೆ; ಲೋಕವು ಸಹ ಸ್ಥಿರವಾಗಿದೆ; ಕದಲುವದಿಲ್ಲ.
- Isaiah 28:16 ಯೆಶಾಯ 28:16ಆದದರಿಂದ ಕರ್ತನಾದ ದೇವರು ಹೀಗೆ ಹೇಳುತ್ತಾನೆ--ಇಗೋ, ಪರೀಕ್ಷಿತವಾಗಿಯೂ ಅಮೂಲ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ ಸ್ಥಿರವಾದ ಆಸ್ತಿವಾರವನ್ನಾಗಿ ಇಡು ತ್ತೇನೆ; ವಿಶ್ವಾಸವಿಡುವವನು ಆತುರಪಡನು (ಆಶಾ ಭಂಗ ಪಡುವದಿಲ್ಲ).
- 2 Peter 3:5 2 ಪೇತ್ರನು 3:5ಅವರು ಇದನ್ನು ಬೇಕೆಂದು ತಿಳಿಯಲಾರರು; ಅದೇನಂದರೆ ಪೂರ್ವದಲ್ಲಿದ್ದ ಆಕಾಶಗಳೂ ನೀರಿನ ಹೊರಗೆ ಮತ್ತು ನೀರಿನ ಒಳಗೆ ನಿಂತಿರುವ ಭೂಮಿಯೂ ದೇವರ ವಾಕ್ಯದಿಂದ ಉಂಟಾಗಿ
- Zechariah 12:1 ಜೆಕರ್ಯ 12:1ಇಸ್ರಾಯೇಲಿನ ವಿಷಯವಾದ ಕರ್ತನ ವಾಕ್ಯದ ಭಾರವು ಆಕಾಶವನ್ನು ಹರಡಿಸು ವಾತನೂ ಭೂಮಿಯ ಅಸ್ತಿವಾರವನ್ನು ಹಾಕುವಾತನೂ ಮನುಷ್ಯನ ಆತ್ಮವನ್ನು ಅವನೊಳಗೆ ರೂಪಿಸುವಾತನೂ ಆದ ಕರ್ತನು ಹೇಳುವದೇನಂದರೆ--
- Psalm 118:22 ಕೀರ್ತನೆಗಳು 118:22ಮನೆ ಕಟ್ಟುವವರು ತಳ್ಳಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.
- Psalm 144:12 ಕೀರ್ತನೆಗಳು 144:12ನಮ್ಮ ಗಂಡು ಮಕ್ಕಳು ಸಸಿಗಳ ಹಾಗೆ ತಮ್ಮ ಯೌವನದಲ್ಲಿ ಬೆಳೆದವರಾಗಿರಲಿ; ನಮ್ಮ ಹೆಣ್ಣು ಮಕ್ಕಳು ಅರಮನೆಯ ಕಟ್ಟುವಿಕೆಯ ಪ್ರಕಾರ ಕೆತ್ತಲ್ಪಟ್ಟ ಮೂಲೆಯ ಕಲ್ಲುಗಳ ಹಾಗಿರಲಿ.
- Psalm 24:2 ಕೀರ್ತನೆಗಳು 24:2ಆತನು ಅದನ್ನು ಸಮುದ್ರಗಳ ಮೇಲೆ ಸ್ಥಾಪಿಸಿ ಪ್ರವಾಹಗಳ ಮೇಲೆ ಅದನ್ನು ಸ್ಥಿರ ಪಡಿಸಿದ್ದಾನೆ.
- Ephesians 2:20–21 ಎಫೆಸದವರಿಗೆ 2:20–21ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಕಟ್ಟಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನೇ ಮುಖ್ಯ ವಾದ ಮೂಲೆಗಲ್ಲು; ಆತನಲ್ಲಿ ಕಟ್ಟಡವು ಹೊಂದಿಕೆ ಯಾಗಿ ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ದ ದೇವಾ ಲಯವಾಗುತ್ತದೆ.ಆತನಲ್ಲಿ ನೀವು ಸಹ ಆತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವಂತೆ ಒಟ್ಟಾಗಿ ಕಟ್ಟಲ್ಪಡುತ್ತಾ ಇದ್ದೀರಿ.
- Exodus 26:18–25 ವಿಮೋಚನಕಾಂಡ 26:18–25ಗುಡಾರದ ದಕ್ಷಿಣ ದಿಕ್ಕಿನಲ್ಲಿ ಇಪ್ಪತ್ತು ಹಲಗೆಗಳನ್ನು ನೀನು ಮಾಡಬೇಕು. ಇಪ್ಪತ್ತು ಹಲಗೆಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಕುಳಿಗಳನ್ನು ಮಾಡಬೇಕು; ಒಂದೊಂದು ಹಲಗೆಯ ಕೆಳಗೆ ಅದರ ಎರಡು ಕೂರುಗಳಿಗಾಗಿ ಎರಡೆರಡು ಕುಳಿಗಳನ್ನು ಮಾಡಬೇಕು. ಉತ್ತರ ದಿಕ್ಕಿನಲ್ಲಿರುವ ಅದರ ಮತ್ತೊಂದು ಪಾರ್ಶ್ವಕ್ಕೋಸ್ಕರ ಇಪ್ಪತ್ತು ಹಲಗೆ ಗಳನ್ನೂ ಒಂದೊಂದು ಹಲಗೆಯ ಕೆಳಗೆ ಎರಡೆರಡು ಕೂರುಗಳಂತೆ ನಾಲ್ವತ್ತು ಬೆಳ್ಳಿಯ ಕೂರುಗಳನ್ನೂ ಗುಡಾರದ ಪಶ್ಚಿಮದ ಕಡೆಗೆ ಆರು ಹಲಗೆಗಳನ್ನೂ ಮಾಡಬೇಕು. ಗುಡಾರದ ಉಭಯ ಪಾರ್ಶ್ವಗಳ ಲ್ಲಿರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡ ಬೇಕು. ಇವುಗಳನ್ನು ಅಡಿಯಲ್ಲಿ ಜೋಡಿಸಿರಬೇಕು; ಮೇಲ್ಭಾಗದಲ್ಲಿಯೂ ಒಂದೇ ಬಳೆಗೆ ಜೋಡಿಸಿರ ಬೇಕು. ಹೀಗೆ ಅವು ಎರಡಾಗಿದ್ದು ಆ ಎರಡು ಮೂಲೆಗಳಲ್ಲಿ ಇರಬೇಕು. ಹೀಗೆ ಅವು ಎಂಟು ಹಲಗೆಗಳು; ಒಂದೊಂದು ಹಲಗೆಯ ಕೆಳಗೆ ಎರಡೆ ರಡು ಕುಳಿಗಳು ಇರುವದರಿಂದ ಅವುಗಳಿಗೆ ಹದಿನಾರು ಬೆಳ್ಳಿಯ ಕುಳಿಗಳು ಇರಬೇಕು.
- 1 Samuel 2:8 1 ಸಮುವೇಲನು 2:8ದರಿದ್ರನನ್ನು ಭೂಮಿಯ ಧೂಳಿನಿಂದ ಎತ್ತುವಾ ತನೂ ಭಿಕ್ಷುಕನನ್ನು ತಿಪ್ಪೆಗುಂಡಿಯಿಂದ ತೆಗೆದು ಉನ್ನತ ಮಾಡುವಾತನೂ ಆಗಿದ್ದಾನೆ. ಅವರನ್ನು ಪ್ರಧಾ ನರ ಮಧ್ಯದಲ್ಲಿ ಕೂಡ್ರಿಸುತ್ತಾನೆ; ಘನತೆಯ ಸಿಂಹಾ ಸನವನ್ನು ಬಾಧ್ಯವಾಗಿ ಕೊಡುತ್ತಾನೆ. ಯಾಕಂದರೆ ಭೂಮಿಯ ಆಧಾರಸ್ತಂಭಗಳು ಕರ್ತನದಾಗಿವೆ, ಭೂಲೋಕವನ್ನು ಅವುಗಳ ಮೇಲೆ ಇಟ್ಟಿದ್ದಾನೆ.