Job · chapter 5 · verse 12
Job 5:12 in Kannada
ಆತನು ಯುಕ್ತಿವಂತರ ಯೋಚನೆಗಳನ್ನು ಭಂಗಪಡಿಸುತ್ತಾನೆ; ಅವರ ಕೈಗಳು ಪ್ರಯತ್ನವನ್ನು ನಡಿಸುವದಿಲ್ಲ.
Aatanu yuktivantara yochanegalannu bhangapadisuttaane; avara kaigalu prayatnavannu nadisuvadilla.
Job 5:12 in English
- King James Version (KJV)
- He disappointeth the devices of the crafty, so that their hands cannot perform [their] enterprise.
- World English Bible (WEB)
- He frustrates the plans of the crafty, so that their hands can’t perform their enterprise.
- American Standard Version (ASV)
- He frustrateth the devices of the crafty, So that their hands cannot perform their enterprise.
- Bible in Basic English (BBE)
- Who makes the designs of the wise go wrong, so that they are unable to give effect to their purposes.
- Darby Translation (DBY)
- He disappointeth the devices of the crafty, and their hands carry not out the enterprise.
- Webster's Bible (WBS)
- He disappointeth the devices of the crafty, so that their hands cannot perform [their] enterprise.
- Young's Literal Translation (YLT)
- Making void thoughts of the subtile, And their hands do not execute wisdom.
Read in context
- 10ಭೂಮಿಯ ಮೇಲೆ ಮಳೆಯನ್ನು ಸುರಿಸುತ್ತಾನೆ; ಹೊಲಗಳ ಮೇಲೆ ನೀರನ್ನು ಕಳುಹಿಸುತ್ತಾನೆ;
- 11ಹೀಗೆ ತಗ್ಗಿದವರನ್ನು ಉನ್ನತದಲ್ಲಿಡುತ್ತಾನೆ. ದುಃಖವುಳ್ಳವರು ರಕ್ಷಣೆಗೆ ಎತ್ತ ಲ್ಪಡುತ್ತಾರೆ.
- 12ಆತನು ಯುಕ್ತಿವಂತರ ಯೋಚನೆಗಳನ್ನು ಭಂಗಪಡಿಸುತ್ತಾನೆ; ಅವರ ಕೈಗಳು ಪ್ರಯತ್ನವನ್ನು ನಡಿಸುವದಿಲ್ಲ.
- 13ಜ್ಞಾನಿಗಳನ್ನು ಅವರ ಯುಕ್ತಿಯಲ್ಲಿ ಹಿಡಿಯುತ್ತಾನೆ--ಮೂರ್ಖರ ಆಲೋಚನೆ ಉರುಳಿ ಬೀಳುವದು.
- 14ಹಗಲಿನಲ್ಲಿ ಕತ್ತಲೆಯನ್ನು ಸಂಧಿಸು ತ್ತಾರೆ; ರಾತ್ರಿಯಲ್ಲಿ ಇದ್ದ ಹಾಗೆ ಮಧ್ಯಾಹ್ನದಲ್ಲಿ ತಡವಾಡುತ್ತಾರೆ
Cross references
- Psalm 21:11 ಕೀರ್ತನೆಗಳು 21:11ಅವರು ನಿನಗೆ ವಿರೋಧವಾಗಿ ಕೇಡನ್ನು ಯತ್ನಿಸಿದರು; ಪೂರೈಸಲಾ ರದ ಯುಕ್ತಿಯನ್ನು ಕಲ್ಪಿಸಿದರು.
- Psalm 33:10–11 ಕೀರ್ತನೆಗಳು 33:10–11ಕರ್ತನು ಜನಾಂಗಗಳ ಆಲೋಚನೆಯನ್ನು ವ್ಯರ್ಥ ಮಾಡುವನು; ಜನರ ಕಲ್ಪನೆಗಳನ್ನು ನಿಷ್ಫಲಮಾಡು ತ್ತಾನೆ. ಕರ್ತನ ಆಲೋಚನೆಯು ಎಂದೆಂದಿಗೂ ಆತನ ಹೃದಯದ ಆಲೋಚನೆಗಳು ತಲತಲಾಂತ ರಕ್ಕೂ ನಿಲ್ಲುವವು.
- Isaiah 8:10 ಯೆಶಾಯ 8:10ಆಲೋಚನೆ ಮಾಡಿಕೊಳ್ಳಿರಿ, ಅದು ಮುರಿದು ಹೋಗುವದು; ಮಾತು ಹೇಳಿರಿ, ಅದು ನಿಲ್ಲದು; ದೇವರು ನಮ್ಮ ಸಂಗಡ ಇದ್ದಾನೆ.
- Proverbs 21:30 ಜ್ಞಾನೋಕ್ತಿಗಳು 21:30ಕರ್ತನಿಗೆ ವಿರೋಧವಾಗಿ ಯಾವ ಜ್ಞಾನವೂ ವಿವೇಕವೂ ಆಲೋಚನೆಯೂ ಇಲ್ಲ.ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ; ಭದ್ರತೆಯು ಕರ್ತನಿಂದಲೇ.
- Psalm 37:17 ಕೀರ್ತನೆಗಳು 37:17ದುಷ್ಟರ ತೋಳುಗಳು ಮುರಿದು ಹೋಗು ವವು; ಆದರೆ ನೀತಿವಂತರನ್ನು ಕರ್ತನು ಉದ್ಧಾರ ಮಾಡುತ್ತಾನೆ.
- Isaiah 37:36 ಯೆಶಾಯ 37:36ಆಗ ಕರ್ತನ ದೂತನು ಹೊರಟು ಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿಯನ್ನು ಹೊಡೆದನು. ಇನ್ನೂ ಮೊಬ್ಬಿರು ವಾಗಲೇ ಎದ್ದಾಗ ಇಗೋ, ಅವರು ಸತ್ತ ಹೆಣಗಳಾ ಗಿದ್ದರು.
- Acts 12:11 ಅಪೊಸ್ತಲರ ಕೃತ್ಯಗಳು 12:11ಆಗ ಪೇತ್ರನು ಎಚ್ಚರವಾಗಿ-- ಕರ್ತನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯ ಜನರು ನನಗೆ ಮಾಡಬೇಕೆಂದಿದ್ದ ಎಲ್ಲವುಗಳಿಂದಲೂ ನನ್ನನ್ನು ಬಿಡಿಸಿದನೆಂದು ನನಗೀಗ ನಿಶ್ಚಯವಾಗಿ ತಿಳಿದುಬಂದಿದೆ ಅಂದುಕೊಂಡನು.
- Nehemiah 4:15 ನೆಹೆಮೀಯ 4:15ಆ ವರ್ತಮಾನ ನಮಗೆ ತಿಳಿಯಿತೆಂದೂ ದೇವರು ತಮ್ಮ ಆಲೋಚನೆಯನ್ನು ವ್ಯರ್ಥಮಾಡಿದನೆಂದೂ ನಮ್ಮ ಶತ್ರುಗಳು ಕೇಳಿದಾಗ ನಾವೆಲ್ಲರೂ ಗೋಡೆಗೆ ತಿರುಗಿ ಬಂದೆವು; ಪ್ರತಿ ಮನುಷ್ಯನು ತನ್ನ ಕೆಲಸಕ್ಕೆ ಸೇರಿದನು.
- Job 12:16–17 ಯೋಬನು 12:16–17ಬಲವೂ ಸುಜ್ಞಾ ನವೂ ಆತನಲ್ಲಿವೆ; ಮೋಸಹೋಗುವವನೂ ಮೋಸ ಗೊಳಿಸುವವನೂ ಆತನವರೇ. ಆತನು ಸಲಹೆಗಾರ ರನ್ನು ಕೇಡಿಗೆ ನಡಿಸುತ್ತಾನೆ; ನ್ಯಾಯಾಧಿಪತಿಗಳನ್ನು ಮೂರ್ಖರನ್ನಾಗಿ ಮಾಡುತ್ತಾನೆ.
- Acts 23:12–22 ಅಪೊಸ್ತಲರ ಕೃತ್ಯಗಳು 23:12–22ಬೆಳಗಾದ ಮೇಲೆ ಯೆಹೂದ್ಯರಲ್ಲಿ ಕೆಲವರು ಒಗ್ಗಟ್ಟಾಗಿ ಕೂಡಿ ತಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲವೆಂದು ಹೇಳಿ ಶಪಥಮಾಡಿಕೊಂಡರು. ಈ ಒಳಸಂಚನ್ನು ಮಾಡಿ ದವರು ನಾಲ್ವತ್ತು ಮಂದಿಗಿಂತ ಹೆಚ್ಚಾಗಿದ್ದರು. ಅವರು ಪ್ರಧಾನಯಾಜಕರ ಮತ್ತು ಹಿರಿಯರ ಬಳಿಗೆ ಬಂದು--ನಾವು ಪೌಲನನ್ನು ಕೊಲ್ಲುವ ತನಕ ಯಾವದನ್ನೂ ತಿನ್ನುವದಿಲ್ಲವೆಂದು ನಮಗೆ ನಾವೇ ದೊಡ್ಡ ಶಪಥವನ್ನು ಮಾಡಿಕೊಂಡಿದ್ದೇವೆ. ಆದ ಕಾರಣ ಈಗ ನೀವು ಪೌಲನ ವಿಷಯದಲ್ಲಿ ಇನ್ನೂ ಸಂಪೂರ್ಣವಾಗಿ ವಿಚಾರಿಸುವವರೋ ಎಂಬಂತೆ ಮುಖ್ಯನಾಯಕನು ಅವನನ್ನು ಮಾರನೆಯ ದಿನದಲ್ಲಿ ನಿಮ್ಮ ಬಳಿಗೆ ತರುವ ಹಾಗೆ ನೀವು ಆಲೋಚನಾ ಸಭೆಯೊಂದಿಗೆ ಅವನಿಗೆ ಸೂಚಿಸಿರಿ; ಅವನು ಹತ್ತಿರಕ್ಕೆ ಬರುವ ಮುಂಚೆಯೇ ನಾವು ಅವನನ್ನು ಕೊಲ್ಲುವದಕ್ಕೆ ಸಿದ ಹೀಗೆ ಅವರು ಹೊಂಚು ಹಾಕಿಕೊಂಡಿರುವದನ್ನು ಪೌಲನ ಸಹೋದರಿಯ ಮಗನು ಕೇಳಿ ಕೋಟೆಯೊಳಗೆ ಪ್ರವೇಶಿಸಿ ಪೌಲನಿಗೆ ತಿಳಿಸಿದನು. ಆಗ ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ಕರೆದು--ಈ ಯೌವನಸ್ಥನನ್ನು ಮುಖ್ಯ ನಾಯಕನ ಬಳಿಗೆ ಕರಕೊಂಡು ಹೋಗು; ಅವನಿಗೆ ತಿಳಿಸಬೇಕಾದ ಒಂದು ವಿಷಯ ಇದೆ ಎಂದು ಹೇಳಿದನು. ಇದರಿಂದ ಆ ಶತಾಧಿಪತಿಯು ಅವನನ್ನು ಮುಖ್ಯ ನಾಯಕನ ಬಳಿಗೆ ಕರೆದುಕೊಂಡು ಬಂದು--ನಿನಗೆ ಹೇಳಬೇಕಾದ ಒಂದು ವಿಷಯವು ಈ ಯೌವನಸ್ಥನಿಗೆ ಇರುವದರಿಂದ ಸೆರೆಯವನಾದ ಪೌಲನು ನನ್ನನ್ನು ಕರೆದು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬರುವಂತೆ ಬೇಡಿಕೊಂಡನು ಎಂದು ಹೇಳಿದನು. ಆಗ ಮುಖ್ಯ ನಾಯಕನು ಅವನ ಕೈಹಿಡಿದು ಒಂದು ಕಡೆಗೆ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ--ನೀನು ನನಗೆ ಹೇಳಬೇಕಾದದ್ದು ಏನು ಎಂದು ಅವನನ್ನು ಕೇಳಿದನು. ಅದಕ್ಕೆ ಅವನು--ಪೌಲನ ವಿಷಯದಲ್ಲಿ ಯೆಹೂದ್ಯರು ಇನ್ನೂ ಸಂಪೂ ರ್ಣವಾಗಿ ವಿಚಾರಣೆ ಮಾಡುವವರೋ ಎಂಬಂತೆ ಅವನನ್ನು ನಾಳೆ ಆಲೋಚನಾಸಭೆಗೆ ತರುವದಕ್ಕಾಗಿ ಅವರು ನಿನ್ನನ್ನು ಬೇಡಿಕೊಳ್ಳುವದಕ್ಕೆ ಅಪೇಕ್ಷೆಪಟ್ಟು ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ನೀನು ಅವರಿಗೆ ಒಪ್ಪಬೇಡ; ಅವನನ್ನು ಕೊಲ್ಲುವ ತನಕ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲವೆಂದು ಶಪಥ ವನ್ನು ಮಾಡಿಕೊಂಡವರಲ್ಲಿ ನಾಲ್ವತ್ತು ಮಂದಿಗಿಂತ ಹೆಚ್ಚಾದವರು ಅವನಿಗಾಗಿ ಕಾಯುತ್ತಿದ್ದಾರೆ; ಈಗ ಅವರು ನಿನ್ನ ಮಾತಿಗಾಗಿ ಎದುರು ನೋಡುತ್ತಾ ಸಿದ್ಧವಾಗಿದ್ದಾರೆ ಎಂದು ಹೇಳಿದ ಹೀಗೆ ಮುಖ್ಯ ನಾಯಕನು ಆ ಯೌವನಸ್ಥನನ್ನು ಕಳುಹಿಸಿಕೊಡು ವಾಗ--ನೀನು ಈ ವಿಷಯಗಳನ್ನು ನನಗೆ ವ್ಯಕ್ತಪಡಿ ಸಿದ್ದೀ ಎಂದು ಯಾರಿಗೂ ಹೇಳಬೇಡ ಎಂದು ಅವನಿಗೆ ಆಜ್ಞಾಪಿಸಿದನು.
- Isaiah 19:3 ಯೆಶಾಯ 19:3ಐಗುಪ್ತದ ಆತ್ಮವು ಅದರ ಮಧ್ಯದಲ್ಲಿ ಕುಂದುವದು; ಅದರ ಆಲೋಚನೆಯನ್ನು ಕೆಡಿಸಿಬಿಡುವೆನು; ಅಲ್ಲಿಯ ವರು ವಿಗ್ರಹಗಳನ್ನೂ ಮಾಟಗಾರರನ್ನೂ ಯಕ್ಷಣಿಗಾರ ರನ್ನೂ ಮಂತ್ರವಾದಿಗಳನ್ನೂ ಹುಡುಕುವರು.