Job · chapter 5 · verse 10
Job 5:10 in Kannada
ಭೂಮಿಯ ಮೇಲೆ ಮಳೆಯನ್ನು ಸುರಿಸುತ್ತಾನೆ; ಹೊಲಗಳ ಮೇಲೆ ನೀರನ್ನು ಕಳುಹಿಸುತ್ತಾನೆ;
Bhoomiya mele maleyannu surisuttaane; holagala mele neerannu kaluhisuttaane;
Job 5:10 in English
- King James Version (KJV)
- Who giveth rain upon the earth, and sendeth waters upon the fields:
- World English Bible (WEB)
- who gives rain on the earth, and sends waters on the fields;
- American Standard Version (ASV)
- Who giveth rain upon the earth, And sendeth waters upon the fields;
- Bible in Basic English (BBE)
- Who gives rain on the earth, and sends water on the fields:
- Darby Translation (DBY)
- Who giveth rain on the face of the earth, and sendeth waters on the face of the fields;
- Webster's Bible (WBS)
- Who giveth rain upon the earth, and sendeth waters upon the fields:
- Young's Literal Translation (YLT)
- Who is giving rain on the face of the land, And is sending waters on the out-places.
Read in context
- 8ನಾನು ದೇವರನ್ನು ಹುಡುಕುವೆನು; ನನ್ನ ಕಾರ್ಯವನ್ನು ದೇವರ ಮೇಲೆ ಹಾಕುವೆನು.
- 9ಆತನು ದೊಡ್ಡ ವುಗಳನ್ನು ಶೋಧಿಸಲಸಾಧ್ಯವಾಗಿ ಮಾಡುತ್ತಾನೆ; ಎಣಿಕೆ ಇಲ್ಲದ ಅದ್ಭುತಗಳನ್ನು ಮಾಡುತ್ತಾನೆ.
- 10ಭೂಮಿಯ ಮೇಲೆ ಮಳೆಯನ್ನು ಸುರಿಸುತ್ತಾನೆ; ಹೊಲಗಳ ಮೇಲೆ ನೀರನ್ನು ಕಳುಹಿಸುತ್ತಾನೆ;
- 11ಹೀಗೆ ತಗ್ಗಿದವರನ್ನು ಉನ್ನತದಲ್ಲಿಡುತ್ತಾನೆ. ದುಃಖವುಳ್ಳವರು ರಕ್ಷಣೆಗೆ ಎತ್ತ ಲ್ಪಡುತ್ತಾರೆ.
- 12ಆತನು ಯುಕ್ತಿವಂತರ ಯೋಚನೆಗಳನ್ನು ಭಂಗಪಡಿಸುತ್ತಾನೆ; ಅವರ ಕೈಗಳು ಪ್ರಯತ್ನವನ್ನು ನಡಿಸುವದಿಲ್ಲ.
Cross references
- Acts 14:17 ಅಪೊಸ್ತಲರ ಕೃತ್ಯಗಳು 14:17ಆದರೂ ಆತನು ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲ ಗಳನ್ನೂ ದಯಪಾಲಿಸಿ ನಮಗೆ ಆಹಾರ ಕೊಟ್ಟು ನಮ್ಮ ಹೃದಯಗಳನ್ನು ಆನಂದದಿಂದ ತುಂಬಿಸಿ ಒಳ್ಳೇದನ್ನು ಮಾಡುತ್ತಾ ಬಂದನು ಎಂದು ಹೇಳಿದರು.
- Jeremiah 5:24 ಯೆರೆಮೀಯ 5:24ಇಲ್ಲವೆ ತಮ್ಮ ಹೃದಯದಲ್ಲಿ--ಮುಂಗಾರು ಹಿಂಗಾರು ಮಳೆಯನ್ನು ಅದರದರ ಕಾಲದಲ್ಲಿ ನಮಗೆ ಕೊಡು ವಂಥ ಸುಗ್ಗಿಗೆ ನೇಮಕವಾದ ವಾರಗಳಲ್ಲಿ ನಮ್ಮನ್ನು ಕಾಪಾಡುವಂಥ ನಮ್ಮ ದೇವರಾದ ಕರ್ತನಿಗೆ ಭಯ ಪಡೋಣ ಎಂದು ಅಂದುಕೊಳ್ಳುವದಿಲ್ಲ.
- Psalm 65:9–11 ಕೀರ್ತನೆಗಳು 65:9–11ನೀನು ಭೂಮಿಯನ್ನು ಕಟಾಕ್ಷಿಸಿ ಅದನ್ನು ತೋಯಿಸಿ ನೀರಿನಿಂದ ತುಂಬಿರುವಂತೆ ದೇವರ ನದಿ ಯಿಂದ ಅದನ್ನು ಚೆನ್ನಾಗಿ ಹದಗೊಳಿಸುತ್ತೀ; ಹೀಗೆ ಭೂಮಿಯನ್ನು ಸಿದ್ಧಮಾಡಿ ಮನುಷ್ಯರಿಗೆ ಧಾನ್ಯವನ್ನು ಒದಗಿಸುತ್ತೀ. ಉಳುವೆಯ ಸಾಲುಗಳನ್ನು ಸಮೃದ್ಧಿ ಯಾಗಿ ತ್ಯಾವಿಸುತ್ತೀ; ನೇಗಿಲ ಸಾಲುಗಳನ್ನು ಸಮಮಾಡುತ್ತೀ; ಸುರಿಯುವ ಮಳೆಯಿಂದ ಅದನ್ನು ಮೃದು ಮಾಡುತ್ತೀ; ಅದರ ಮೊಳಿಕೆಯನ್ನು ಆಶೀರ್ವದಿಸುತ್ತೀ. ವರುಷಕ್ಕೆ ನಿನ್ನ ಸುಭಿಕ್ಷಕಿರೀಟ ಇಡುತ್ತೀ; ನಿನ್ನ ಮಾರ್ಗಗಳಲ್ಲಿ ಸಮೃದ್ಧಿಯನ್ನು ಸುರಿಸುತ್ತೀ.
- Jeremiah 14:22 ಯೆರೆಮೀಯ 14:22ಅನ್ಯರ ವ್ಯರ್ಥ ವಿಗ್ರಹಗಳಲ್ಲಿ ಮಳೆ ಕೊಡಬಲ್ಲವು ಗಳು ಉಂಟೋ? ಅಥವಾ ಆಕಾಶವು ಜಡಿ ಮಳೆ ಯನ್ನು ಕೊಡುವದಕ್ಕಾಗುವದೋ? ನಮ್ಮ ದೇವ ರಾಗಿರುವ ಕರ್ತನು ನೀನೇ ಅಲ್ಲವೋ? ಆದದರಿಂದ ನಿನ್ನನ್ನು ನಿರೀಕ್ಷಿಸುವೆವು; ನೀನೇ ಇವುಗಳನ್ನೆಲ್ಲಾ ಮಾಡುತ್ತೀ.
- Psalm 147:8 ಕೀರ್ತನೆಗಳು 147:8ಆತನು ಆಕಾಶವನ್ನು ಮೋಡಗಳಿಂದ ಮುಚ್ಚುತ್ತಾನೆ; ಭೂಮಿಗೆ ಮಳೆ ಯನ್ನು ಸಿದ್ಧಮಾಡುತ್ತಾನೆ, ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾನೆ.
- Job 28:26 ಯೋಬನು 28:26ಆತನು ಮಳೆಗೆ ಕಟ್ಟಳೆಯನ್ನೂ ಗುಡುಗಿನ ಮಿಂಚಿಗೆ ಮಾರ್ಗವನ್ನೂ ಮಾಡಿದಾಗ
- Job 38:26–28 ಯೋಬನು 38:26–28ಅದು ಮನುಷ್ಯನಿಲ್ಲದ ಭೂಮಿಯ ಮೇಲೆಯೂ ಜನರಿಲ್ಲದ ಅರಣ್ಯದಲ್ಲಿಯೂ ಸುರಿಯುವದು; ಹಾಳು ಬೈಲು ಗಳಿಗೆ ತೃಪ್ತಿಯನ್ನು ಉಂಟು ಮಾಡುವದು; ಪಲ್ಯಗಳ ಮೊಳಿಕೆಯನ್ನು ಮೊಳಿಸುವದು. ಮಳೆಗೆ ತಂದೆ ಇದ್ದಾನೋ? ಇಲ್ಲವೆ ಮಂಜಿನ ಹನಿಗಳನ್ನು ಹುಟ್ಟಿಸು ವವನಾರು?
- Jeremiah 10:13 ಯೆರೆಮೀಯ 10:13ಆತನು ತನ್ನ ಶಬ್ದ ಮಾಡುವಾಗಲೇ ಆಕಾಶ ಗಳಲ್ಲಿ ನೀರುಗಳ ಸಮೂಹವಿರುವದು. ಆತನು ಭೂಮಿಯ ಅಂತ್ಯದಿಂದ ಹಬೆಯನ್ನು ಏಳಮಾಡುತ್ತಾನೆ; ಮಳೆಯ ಸಂಗಡ ಮಿಂಚನ್ನು ಉಂಟು ಮಾಡುತ್ತಾನೆ; ತನ್ನ ಭಂಡಾರಗಳೊಳಗಿಂದ ಗಾಳಿಯನ್ನು ಹೊರಗೆ ತರುತ್ತಾನೆ.
- Amos 4:7 ಆಮೋಸ 4:7ಸುಗ್ಗಿಯು ಇನ್ನು ಮೂರು ತಿಂಗಳು ಇರುವಾಗ ಮಳೆಯನ್ನು ನಿಮ್ಮಿಂದ ನಾನು ಹಿಂತೆಗೆದಿದ್ದೇನೆ; ಒಂದು ಪಟ್ಟಣದ ಮೇಲೆ ಮಳೆ ಸುರಿಸಿ ಮತ್ತೊಂದು ಪಟ್ಟಣದ ಮೇಲೆ ಮಳೆ ಸುರಿಸದ ಹಾಗೆ ಮಾಡಿದೆನು; ಮಳೆ ಸುರಿಯದ ಭಾಗವು ಒಣಗಿ ಹೋಯಿತು.
- Job 36:28 ಯೋಬನು 36:28ಮೋಡಗಳು ಅದನ್ನು ಸುರಿಸಿ ಮನು ಷ್ಯನ ಮೇಲೆ ಸಮೃದ್ಧಿಯಾಗಿ ಸುರಿಯಮಾಡುತ್ತವೆ.