Job · chapter 5 · verse 7
Job 5:7 in Kannada
ಕಿಡಿಗಳು ಹಾರುವ ಪ್ರಕಾರವೇ ಮನುಷ್ಯನು ಕಷ್ಟಕ್ಕಾಗಿ ಹುಟ್ಟುತ್ತಾನೆ.
Kidigalu haaruva prakaarave manushyanu kashtakkaagi huttuttaane.
Job 5:7 in English
- King James Version (KJV)
- Yet man is born unto trouble, as the sparks fly upward.
- World English Bible (WEB)
- but man is born to trouble, as the sparks fly upward.
- American Standard Version (ASV)
- But man is born unto trouble, As the sparks fly upward.
- Bible in Basic English (BBE)
- But trouble is man's fate from birth, as the flames go up from the fire.
- Darby Translation (DBY)
- For man is born to trouble, as the sparks fly upwards.
- Webster's Bible (WBS)
- Yet man is born to trouble, as the sparks fly upward.
- Young's Literal Translation (YLT)
- For man to misery is born, And the sparks go high to fly.
Read in context
- 5ಹಸಿದವನು ಅವನ ಪೈರನ್ನು ತಿನ್ನುವನು, ಮುಳ್ಳುಗಳೊಳಗಿಂದಲೂ ಅದನ್ನು ತೆಗೆದುಕೊಳ್ಳು ವನು; ಕೊಳ್ಳೆಗಾರನು ಅವರ ಆಸ್ತಿಯನ್ನು ನುಂಗಿಬಿಡು ವನು.
- 6ಧೂಳಿನಿಂದ ಕೇಡು ಹುಟ್ಟುವದಿಲ್ಲ. ಭೂಮಿ ಯಿಂದ ಕಷ್ಟ ಮೊಳೆಯುವದಿಲ್ಲ.
- 7ಕಿಡಿಗಳು ಹಾರುವ ಪ್ರಕಾರವೇ ಮನುಷ್ಯನು ಕಷ್ಟಕ್ಕಾಗಿ ಹುಟ್ಟುತ್ತಾನೆ.
- 8ನಾನು ದೇವರನ್ನು ಹುಡುಕುವೆನು; ನನ್ನ ಕಾರ್ಯವನ್ನು ದೇವರ ಮೇಲೆ ಹಾಕುವೆನು.
- 9ಆತನು ದೊಡ್ಡ ವುಗಳನ್ನು ಶೋಧಿಸಲಸಾಧ್ಯವಾಗಿ ಮಾಡುತ್ತಾನೆ; ಎಣಿಕೆ ಇಲ್ಲದ ಅದ್ಭುತಗಳನ್ನು ಮಾಡುತ್ತಾನೆ.
Cross references
- Job 14:1 ಯೋಬನು 14:1ಸ್ತ್ರೀಯಿಂದ ಹುಟ್ಟಿದ ಮನುಷ್ಯನು ಕಡಿಮೆದಿವಸದವನೂ ಕಳವಳದಿಂದ ತುಂಬಿದ ವನೂ ಆಗಿದ್ದಾನೆ.
- Genesis 3:17–19 ಆದಿಕಾಂಡ 3:17–19ಆದಾಮನಿಗೆ ಆತನು--ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ ತಿನ್ನಬಾರದೆಂದು ನಾನು ನಿನ ಆಜ್ಞಾಪಿಸಿದ ಮರದ ಫಲವನ್ನು ತಿಂದಕಾರಣ ನಿನ್ನ ನಿಮಿತ್ತ ಭೂಮಿಯು ಶಪಿಸಲ್ಪಟ್ಟಿದೆ; ನಿನ್ನ ಜೀವನದ ದಿನಗಳಲ್ಲೆಲ್ಲಾ ದುಃಖದಲ್ಲೇ ನೀನು ಅದರ ಫಲವನ್ನು ತಿನ್ನುವಿ. ಇದಲ್ಲದೆ ಭೂಮಿಯು ಮುಳ್ಳುಗಳನ್ನೂ ದತ್ತೂರಿಗಳನ್ನೂ ನಿನಗಾಗಿ ಬೆಳೆಯುವದು. ನೀನು ಹೊಲದ ಪಲ್ಯವನ್ನು ತಿನ್ನುವಿ. ನೀನು ಮಣ್ಣಿಗೆ ತಿರುಗುವ ವರೆಗೆ ನಿನ್ನ ಹಣೆಯ ಬೆವರನ್ನು ಸುರಿಸಿ ರೊಟ್ಟಿಯನ್ನು ತಿನ್ನುವಿ. ಯಾಕಂದರೆ ನೀನು ಅದ ರೊಳಗಿಂದ ಅಂದರೆ (ಮಣ್ಣಿನೊಳಗಿಂದ) ತೆಗೆಯ ಲ್ಪಟ್ಟೆ; ನೀನು ಮಣ್ಣಾಗಿದ್ದಿ, ಮಣ್ಣಿಗೆ ತಿರುಗಿಕೊಳ್ಳುವಿ ಅಂದನು.
- Ecclesiastes 5:15–17 ಪ್ರಸಂಗಿ 5:15–17ತನ್ನ ತಾಯಿಯ ಗರ್ಭದಿಂದ ಅವನು ಹೇಗೆ ಬಂದನೋ ಅವನು ಬಂದ ಹಾಗೆ ಬೆತ್ತಲೆಯಾಗಿ ತಿರುಗಿ ಹೋಗುವನು; ತನ್ನ ಕೈಯಲ್ಲಿ ತಕ್ಕೊಂಡು ಹೋಗುವದಕ್ಕೆ ತನ್ನ ಪ್ರಯಾಸದಲ್ಲಿ ಯಾವದನ್ನು ತೆಗೆದುಕೊಂಡು ಹೋಗುವದಿಲ್ಲ. ಇದೂ ಕೂಡ ವ್ಯಥೆಯಿಂದ ಕೂಡಿದ ಕೆಟ್ಟತನವೇ. ಅದು ಯಾವ ದಂದರೆ ಎಲ್ಲಾ ವಿಷಯಗಳಲ್ಲಿ ತಾನು ಹೇಗೆ ಬಂದನೋ ಹಾಗೆಯೇ ಹೋಗುವನು; ಗಾಳಿಗಾಗಿ ಪ್ರಯಾಸಪಟ್ಟ ವನಿಗೆ ಲಾಭವೇನಿದೆ? ತನ್ನ ಜೀವಮಾನದಲ್ಲೆಲ್ಲಾ ಅವನು ಕತ್ತಲೆಯಲ್ಲಿ ತಿನ್ನುತ್ತಾನೆ; ತನ್ನ ವ್ಯಾಧಿಯೊಂದಿಗೆ ಅವನಿಗೆ ಬಹಳ ವ್ಯಥೆಯೂ ಕ್ರೋಧವೂ ಇರುತ್ತದೆ.
- 1 Corinthians 10:13 1 ಕೊರಿಂಥದವರಿಗೆ 10:13ಮನುಷ್ಯನಿಗೆ ಸಾಮಾನ್ಯ ವಾಗಿ ಬರುವ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ; ಆದರೆ ದೇವರು ನಂಬಿಗಸ್ತನು; ನೀವು ಸಹಿಸುವದಕ್ಕಿಂತ ಹೆಚ್ಚಿನ ಶೋಧನೆಯನ್ನು ಆತನು ನಿಮಗೆ ಬರಮಾಡುವದಿಲ್ಲ; ಆದರೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧ
- Psalm 90:8–9 ಕೀರ್ತನೆಗಳು 90:8–9ನಮ್ಮ ಅಕ್ರಮಗಳನ್ನು ನಿನ್ನ ಮುಂದೆಯೂ ನಮ್ಮ ಮರೆಯಾದ ಪಾಪಗಳನ್ನು ನಿನ್ನ ಮುಖದ ಬೆಳಕಿನಲ್ಲಿಯೂ ಇಟ್ಟಿದ್ದೀ. ನಮ್ಮ ದಿವಸಗಳೆಲ್ಲಾ ನಿನ್ನ ಕೋಪದಿಂದ ದಾಟಿಹೋದವು. ನಮ್ಮ ವರುಷಗಳನ್ನು ಕೇಳಿದ ಕಥೆಯ ಹಾಗೆ ಕಳೆ ಯುತ್ತೇವೆ.
- Ecclesiastes 2:22 ಪ್ರಸಂಗಿ 2:22ಸೂರ್ಯನ ಕೆಳಗೆ ತಾನು ಪ್ರಯಾಸ ಪಟ್ಟ ತನ್ನ ಹೃದಯದ ಆಯಾಸಕ್ಕಾಗಿಯೂ ತನ್ನ ಎಲ್ಲಾ ಪ್ರಯಾಸಕ್ಕಾಗಿಯೂ ಮನುಷ್ಯನಿಗೆ ಏನು ಸಿಕ್ಕುತ್ತದೆ?
- Ecclesiastes 1:8 ಪ್ರಸಂಗಿ 1:8ಎಲ್ಲಾ ಕಾರ್ಯಗಳು ಪ್ರಯಾಸದಿಂದ ತುಂಬಿ ಯವೆ; ಅದನ್ನು ಮನುಷ್ಯನು ವಿವರಿಸಲಾರನು; ನೋಡುವದರಿಂದ ಕಣ್ಣು ತೃಪ್ತಿಗೊಳ್ಳದು. ಇಲ್ಲವೆ ಕೇಳು ವದರಿಂದ ಕಿವಿಯು ದಣಿಯದು.