Job · chapter 9 · verse 10
Job 9:10 in Kannada
ಆತನು ಕಂಡುಹಿಡಿಯಲಾರದಂಥ ಮಹತ್ಕಾರ್ಯ ಗಳನ್ನೂ ಲೆಕ್ಕವಿಲ್ಲದಷ್ಟು ಅದ್ಭುತಗಳನ್ನೂ ಮಾಡುತ್ತಾನೆ.
Aatanu kanduhidiyalaaradantha mahatkaarya galannoo lekkavilladashtu adbhutagalannoo maaduttaane.
Job 9:10 in English
- King James Version (KJV)
- Which doeth great things past finding out; yea, and wonders without number.
- World English Bible (WEB)
- He does great things past finding out; yes, marvelous things without number.
- American Standard Version (ASV)
- That doeth great things past finding out, Yea, marvellous things without number.
- Bible in Basic English (BBE)
- Who does great things not to be searched out; yes, wonders without number.
- Darby Translation (DBY)
- Who doeth great things past finding out, and wonders without number.
- Webster's Bible (WBS)
- Who doeth great things past finding out; yes, and wonders without number.
- Young's Literal Translation (YLT)
- Doing great things till there is no searching, And wonderful, till there is no numbering.
Read in context
- 8ಆತನೊಬ್ಬನೇ ಆಕಾಶಗಳನ್ನು ಹರಡಿಸುತ್ತಾನೆ; ಸಮುದ್ರದ ತೆರೆಗಳ ಮೇಲೆ ನಡೆಯುತ್ತಾನೆ.
- 9ಸಪ್ತ ತಾರೆಗಳನ್ನೂ ಮೃಗಶಿರವನ್ನೂ ವೃಷಭ ರಾಶಿಯನ್ನೂ ದಕ್ಷಿಣದ ಕೋಣೆಗಳನ್ನೂ ಮಾಡಿದಾತನು ಆತನೇ.
- 10ಆತನು ಕಂಡುಹಿಡಿಯಲಾರದಂಥ ಮಹತ್ಕಾರ್ಯ ಗಳನ್ನೂ ಲೆಕ್ಕವಿಲ್ಲದಷ್ಟು ಅದ್ಭುತಗಳನ್ನೂ ಮಾಡುತ್ತಾನೆ.
- 11ಇಗೋ, ಆತನು ನನ್ನ ಮುಂದೆ ಹಾದುಹೋಗು ತ್ತಾನೆ. ನನಗೆ ಆತನು ಕಾಣುವದಿಲ್ಲ. ಆತನು ದಾಟಿ ಹೋಗುತ್ತಾನೆ, ಆದರೆ ನಾನು ಆತನನ್ನು ಗ್ರಹಿಸಿ ಕೊಳ್ಳುವದಿಲ್ಲ.
- 12ಇಗೋ, ಆತನು ತೆಗೆದುಕೊಂಡು ಹೋಗುತ್ತಾನೆ. ಆತನಿಗೆ ಅಡ್ಡಿಮಾಡುವವರು ಯಾರು? ಆತನನ್ನು--ನೀನು ಏನು ಮಾಡುತ್ತೀ ಎಂದು ಕೇಳುವ ವರಾರು?
Cross references
- Job 5:9 ಯೋಬನು 5:9ಆತನು ದೊಡ್ಡ ವುಗಳನ್ನು ಶೋಧಿಸಲಸಾಧ್ಯವಾಗಿ ಮಾಡುತ್ತಾನೆ; ಎಣಿಕೆ ಇಲ್ಲದ ಅದ್ಭುತಗಳನ್ನು ಮಾಡುತ್ತಾನೆ.
- Psalm 72:18 ಕೀರ್ತನೆಗಳು 72:18ಒಬ್ಬನೇ ಅದ್ಭುತಗಳನ್ನು ಮಾಡುವ ಇಸ್ರಾಯೇಲಿನ ದೇವರಾಗಿರುವ ಕರ್ತನಾದ ದೇವರಿಗೆ ಸ್ತೋತ್ರವಾಗಲಿ.
- Ephesians 3:20 ಎಫೆಸದವರಿಗೆ 3:20ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದಾತನಿಗೆಸಭೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ತಲತಲಾಂತ ರಕ್ಕೂ ಯುಗಯುಗಾಂತರಕ್ಕೂ ಮಹಿಮೆಯುಂಟಾಗಲಿ. ಆಮೆನ್.
- Romans 11:33 ರೋಮಾಪುರದವರಿಗೆ 11:33ಹಾ, ದೇವರ ಜ್ಞಾನದ ಮತ್ತು ತಿಳುವಳಿಕೆಯ ಐಶ್ವರ್ಯವು ಎಷ್ಟೋ ಅಗಾಧ ವಾಗಿದೆ! ಆತನ ತೀರ್ಪುಗಳು ಪರಿಶೋಧನೆಗೂ ಆತನ ಮಾರ್ಗಗಳು ಕಂಡು ಹಿಡಿಯುವದಕ್ಕೂ ಅಸಾಧ್ಯ ವಾಗಿವೆ!
- Daniel 4:2–3 ದಾನಿಯೇಲನು 4:2–3ದೇವರು ನನ್ನ ವಿಷಯದಲ್ಲಿ ನಡೆಸಿರುವ ಸೂಚಕ ಕಾರ್ಯಗಳನ್ನೂ ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂಬದು ನನಗೆ ವಿಹಿತವಾಗಿ ತೋರಿ ಬಂದಿದೆ. ಆತನ ಸೂಚಕ ಕಾರ್ಯಗಳು ಎಷ್ಟೋ ದೊಡ್ಡವುಗಳು! ಆತನ ಅದ್ಭುತ ಗಳು ಪರಾಕ್ರಮವಾದವುಗಳು, ಆತನ ರಾಜ್ಯವು ನಿತ್ಯವಾದ ರಾಜ್ಯವು, ಆತನ ಆಡಳಿತವು ತಲತಲಾಂತರ ವಾಗಿರುವಂತದ್ದು.
- Psalm 136:4 ಕೀರ್ತನೆಗಳು 136:4ಒಬ್ಬನಾಗಿ ದೊಡ್ಡ ಅದ್ಭುತಗಳನ್ನು ಮಾಡುವಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
- Ecclesiastes 3:11 ಪ್ರಸಂಗಿ 3:11ತನ್ನ ಸಮಯದಲ್ಲಿ ಪ್ರತಿಯೊಂದನ್ನು ಆತನು ಸುಂದರವಾಗಿ ಮಾಡಿದ್ದಾನೆ. ಆದಿಯಿಂದ ಅಂತ್ಯದ ವರೆಗೂ ದೇವರು ನಡಿಸುವ ಕೆಲಸವನ್ನು ಯಾವ ಮನುಷ್ಯನೂ ಗ್ರಹಿಸಲಾರದಂತೆ ಅವರ ಹೃದಯದಲ್ಲಿ ಆತನು ಲೋಕವನ್ನು ಇಟ್ಟಿದ್ದಾನೆ.
- Isaiah 40:26–28 ಯೆಶಾಯ 40:26–28ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ನೋಡಿರಿ; ಇಗೋ, ಇವುಗಳನ್ನು ಸೃಷ್ಟಿಸಿದಾತನು ಯಾರು? ಆತನೇ ತನ್ನ ಮಹಾಶಕ್ತಿಯಿಂದಲೂ ಅವುಗಳ ಸೈನ್ಯವನ್ನೆಲ್ಲಾ ಲೆಕ್ಕಮಾಡಿ ಹೊರಗೆ ತರು ವನು. ಆತನು ಅತಿ ಬಲಾಢ್ಯನಾಗಿರುವದರಿಂದ ಅವುಗಳೊಳಗೆ ಒಂದೂ ತಪ್ಪದು. ನನ್ನ ಮಾರ್ಗವು ಕರ್ತನಿಗೆ ಮರೆಯಾಗಿದೆ ಮತ್ತು ನನ್ನ ನ್ಯಾಯವು ನನ್ನ ದೇವರಿಂದ ದಾಟಿ ಹೋಯಿ ತಲ್ಲಾ! ಎಂದು ಯಾಕೋಬೇ ಯಾಕೆ ಹೇಳುತ್ತಿ? ಇಸ್ರಾಯೇಲೇ ಯಾಕೆ ಮಾತಾಡುತ್ತಿ? ನಿನಗೆ ಗೊತ್ತಿಲ್ಲವೋ? ನೀನು ಕೇಳಲಿಲ್ಲವೋ? ಕರ್ತನು ನಿರಂತರವಾದ ದೇವರೂ ಭೂಮಿಯ ಅಂತ್ಯಗಳನ್ನು ಸೃಷ್ಟಿಸಿದವನೂ ದಣಿಯುವದಿಲ್ಲ ಇಲ್ಲವೆ ಬಳಲುವ ದಿಲ್ಲ; ಆತನ ತಿಳುವಳಿಕೆಯು ಪರಿಶೋಧನೆಗೆ ಅಗಮ್ಯ.
- Exodus 15:11 ವಿಮೋಚನಕಾಂಡ 15:11ದೇವರುಗಳಲ್ಲಿ ಓ ಕರ್ತನೇ, ನಿನ್ನ ಹಾಗೆ ಯಾರಿದ್ದಾರೆ? ಪರಿಶುದ್ಧತ್ವದಲ್ಲಿ ಮಹಿಮೆ ಹೊಂದಿದವನೂ ಸ್ತೋತ್ರಗಳಲ್ಲಿ ಭಯಂಕರನೂ ಅದ್ಭುತಗಳನ್ನು ಮಾಡುವಾತನೂ ಆದ ನಿನ್ನ ಹಾಗೆ ಯಾರಿದ್ದಾರೆ?
- Psalm 71:15 ಕೀರ್ತನೆಗಳು 71:15ನನ್ನ ಬಾಯಿ ದಿನವೆಲ್ಲಾ ನಿನ್ನ ನೀತಿಯನ್ನೂ ರಕ್ಷಣೆ ಯನ್ನೂ ಪ್ರಕಟಿಸುವದು. ಅವುಗಳ ಸಂಖ್ಯೆಗಳು ನನಗೆ ತಿಳಿಯದು.
- Job 37:23 ಯೋಬನು 37:23ಸರ್ವ ಶಕ್ತನನ್ನು ನಾವು ಕಂಡುಕೊಳ್ಳುವದಿಲ್ಲ; ಆತನು ಶಕ್ತಿಯಲ್ಲಿಯೂ ನ್ಯಾಯತೀರ್ಪಿನಲ್ಲಿಯೂ ಬಹುನೀತಿಯಲ್ಲಿಯೂ ಉನ್ನ ತನಾಗಿದ್ದಾನೆ; ಆತನು ಶ್ರಮೆಪಡಿಸುವದಿಲ್ಲ.ಆದ ದರಿಂದ ಮನುಷ್ಯರು ಆತನಿಗೆ ಭಯಪಡುತ್ತಾರೆ; ಹೃದಯದಲ್ಲಿ ಜ್ಞಾನಿಗಳಾದವರೆಲ್ಲರನ್ನು ಆತನು ಲಕ್ಷಿಸುವದಿಲ್ಲ.
- Job 26:12–14 ಯೋಬನು 26:12–14ತನ್ನ ಶಕ್ತಿಯಿಂದ ಸಮುದ್ರವನ್ನು ಭೇದಿಸುತ್ತಾನೆ. ತನ್ನ ವಿವೇ ಕದಿಂದ ಗರ್ವಿಷ್ಟನನ್ನು ಹೊಡೆಯುತ್ತಾನೆ. ಆತನ ಆತ್ಮನಿಂದ ಆಕಾಶವು ಶೃಂಗಾರವಾಗಿದೆ; ಆತನ ಕೈ ಓಡುವ ಸರ್ಪವನ್ನು ರೂಪಿಸಿತು.ಇಗೋ, ಇವು ಆತನ ಮಾರ್ಗಗಳ ಭಾಗಗಳು; ಆತನನ್ನು ಕುರಿತು ಸ್ವಲ್ಪ ಭಾಗ ಮಾತ್ರ ಕೇಳಿದ್ದೇವೆ; ಆದರೆ ಆತನ ಪರಾಕ್ರಮದ ಗುಡುಗನ್ನು ಯಾವನು ಗ್ರಹಿಸಿಕೊಳ್ಳು ವನು ಎಂಬದು. ಇಗೋ, ಇವು ಆತನ ಮಾರ್ಗಗಳ ಭಾಗಗಳು; ಆತನನ್ನು ಕುರಿತು ಸ್ವಲ್ಪ ಭಾಗ ಮಾತ್ರ ಕೇಳಿದ್ದೇವೆ; ಆದರೆ ಆತನ ಪರಾಕ್ರಮದ ಗುಡುಗನ್ನು ಯಾವನು ಗ್ರಹಿಸಿಕೊಳ್ಳು ವನು ಎಂಬದು.