Psalms · chapter 71 · verse 15
Psalm 71:15 in Kannada
ನನ್ನ ಬಾಯಿ ದಿನವೆಲ್ಲಾ ನಿನ್ನ ನೀತಿಯನ್ನೂ ರಕ್ಷಣೆ ಯನ್ನೂ ಪ್ರಕಟಿಸುವದು. ಅವುಗಳ ಸಂಖ್ಯೆಗಳು ನನಗೆ ತಿಳಿಯದು.
Nanna baayi dinavellaa ninna neetiyannoo rakshane yannoo prakatisuvadu. Avugala sankhyegalu nanage tiliyadu.
Psalm 71:15 in English
- King James Version (KJV)
- My mouth shall shew forth thy righteousness [and] thy salvation all the day; for I know not the numbers [thereof].
- World English Bible (WEB)
- My mouth will tell about your righteousness, and of your salvation all day, though I don’t know its full measure.
- American Standard Version (ASV)
- My mouth shall tell of thy righteousness, [And] of thy salvation all the day; For I know not the numbers [thereof].
- Bible in Basic English (BBE)
- My mouth will make clear your righteousness and your salvation all the day; for they are more than may be measured.
- Darby Translation (DBY)
- My mouth shall declare thy righteousness, [and] thy salvation all the day: for I know not the numbers [thereof].
- Webster's Bible (WBS)
- My mouth shall show forth thy righteousness [and] thy salvation all the day; for I know not the numbers [thereof] .
- Young's Literal Translation (YLT)
- My mouth recounteth Thy righteousness, All the day Thy salvation, For I have not known the numbers.
Read in context
- 13ನನ್ನ ಪ್ರಾಣವನ್ನು ಎದುರಿಸುವವರು ನಾಚಿಕೆಪಟ್ಟು ನಾಶವಾಗಲಿ; ನಿಂದೆಯೂ ಅವಮಾನವೂ ನನ್ನ ಕೇಡಿಗಾಗಿ ಹುಡುಕು ವವರನ್ನು ಸುತ್ತಿಕೊಳ್ಳಲಿ.
- 14ಆದರೆ ನಾನು ಬಿಟ್ಟುಬಿಡದೆ ನಿನ್ನನ್ನು ನಿರೀಕ್ಷಿ ಸುತ್ತಾ ನಿನ್ನನ್ನು ಇನ್ನೂ ಹೆಚ್ಚೆಚ್ಚಾಗಿ ಸುತ್ತಿಸುವೆನು.
- 15ನನ್ನ ಬಾಯಿ ದಿನವೆಲ್ಲಾ ನಿನ್ನ ನೀತಿಯನ್ನೂ ರಕ್ಷಣೆ ಯನ್ನೂ ಪ್ರಕಟಿಸುವದು. ಅವುಗಳ ಸಂಖ್ಯೆಗಳು ನನಗೆ ತಿಳಿಯದು.
- 16ಕರ್ತನಾದ ದೇವರ ಶಕ್ತಿಯಲ್ಲಿ ನಾನು ಹೋಗುವೆನು, ನಿನ್ನ ನೀತಿಯನ್ನು ಹೌದು, ನಿನ್ನದನ್ನೇ ತಿಳಿಸುವೆನು.
- 17ಓ ದೇವರೇ, ನನ್ನ ಯೌವನದಿಂದ ನನಗೆ ನೀನು ಕಲಿಸಿದ್ದೀ; ಈ ವರೆಗೂ ನಿನ್ನ ಅದ್ಭುತ ಕಾರ್ಯಗಳನ್ನು ತಿಳಿಸುವೆನು.
Cross references
- Psalm 40:5 ಕೀರ್ತನೆಗಳು 40:5ಓ ನನ್ನ ದೇವರಾದ ಕರ್ತನೇ, ನೀನು ಮಾಡಿದ ನಿನ್ನ ಅದ್ಭುತ ಕಾರ್ಯಗಳೂ ನಮ್ಮ ಕಡೆಗಿರುವ ನಿನ್ನ ಯೋಚನೆಗಳೂ ಬಹಳ; ಅವುಗಳನ್ನು ಕ್ರಮವಾಗಿ ನಿನ್ನ ಮುಂದೆ ಎಣಿಸಲಾರೆನು; ಅವುಗಳನ್ನು ನಾನು ತಿಳಿಸಿ ಹೇಳಬೇಕಾದರೆ ಎಣಿಸುವದಕ್ಕಿಂತ ಹೆಚ್ಚಾಗಿವೆ.
- Psalm 35:28 ಕೀರ್ತನೆಗಳು 35:28ಆಗ ನನ್ನ ನಾಲಿ ಗೆಯು ನಿನ್ನ ನೀತಿಯನ್ನೂ ಸ್ತೋತ್ರವನ್ನೂ ದಿನವೆಲ್ಲಾ ಉಚ್ಚರಿಸುವದು.
- Psalm 71:8 ಕೀರ್ತನೆಗಳು 71:8ನನ್ನ ಬಾಯಿ ನಿನ್ನ ಸ್ತೋತ್ರದಿಂದಲೂ ದಿನವೆಲ್ಲಾ ನಿನ್ನ ಗೌರವದಿಂದಲೂ ತುಂಬಿರಲಿ.
- Psalm 139:17–18 ಕೀರ್ತನೆಗಳು 139:17–18ಓ ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಪ್ರಿಯವಾಗಿವೆ! ಅವುಗಳ ಸಂಖ್ಯೆ ಎಷ್ಟೋ ದೊಡ್ಡ ದಾಗಿದೆ. ಅವುಗಳನ್ನು ಲೆಕ್ಕಿಸಿದರೆ ಮರಳು ಗಿಂತ ಹೆಚ್ಚಾಗಿವೆ; ನಾನು ಎಚ್ಚರವಾದಾಗ ಇನ್ನೂ ನಿನ್ನ ಬಳಿಯಲ್ಲಿಯೇ ಇದ್ದೇನೆ.
- Psalm 145:2 ಕೀರ್ತನೆಗಳು 145:2ಪ್ರತಿದಿನ ನಿನ್ನನ್ನು ಸ್ತುತಿಸುವೆನು; ಎಂದೆಂದಿಗೂ ನಿನ್ನ ಹೆಸರನ್ನು ಸ್ತುತಿಸುವೆನು.
- Psalm 145:5–14 ಕೀರ್ತನೆಗಳು 145:5–14ನಿನ್ನ ಮಹಿಮೆಯ ಘನದ ಪ್ರಭೆಯ ವಿಷಯ ವಾಗಿಯೂ ನಿನ್ನ ಅದ್ಭುತಕಾರ್ಯಗಳ ವಿಷಯ ವಾಗಿಯೂ ನಿನ್ನ ಭಯಂಕರವಾದ ತ್ರಾಣದ ವಿಷಯ ವಾಗಿಯೂ ಅವರು ಹೇಳುವರು; ನಿನ್ನ ಮಹತ್ವವನ್ನು ನಾನು ಸಾರುವೆನು. ನಿನ್ನ ಬಹು ಒಳ್ಳೇತನದ ಜ್ಞಾಪಕವನ್ನು ಅವರು ನುಡಿಯುವರು; ನಿನ್ನ ನೀತಿಯ ನಿಮಿತ್ತ ಉತ್ಸಾಹಧ್ವನಿ ಮಾಡುವರು. ಕರ್ತನು ಕೃಪಾಳುವೂ ಅಂತಃಕರಣವೂ ದೀರ್ಘಶಾಂತಿಯೂ ಮಹಾಕರುಣೆಯುಳ್ಳವನೂ ಆಗಿದ್ದಾನೆ. ಕರ್ತನು ಸರ್ವರಿಗೂ ಒಳ್ಳೆಯವನು; ಆತನ ಅಂತಃಕರಣವು ಆತನ ಎಲ್ಲಾ ಕೆಲಸಗಳ ಮೇಲೆ ಅದೆ. ಓ ಕರ್ತನೇ, ನಿನ್ನ ಕೆಲಸಗಳೆಲ್ಲಾ ನಿನ್ನನ್ನು ಕೊಂಡಾಡುವವು; ನಿನ್ನ ಪರಿಶುದ್ಧರು ನಿನ್ನನ್ನು ಸ್ತುತಿಸುವರು. ನಿನ್ನ ರಾಜ್ಯದ ಘನವನ್ನು ಹೇಳುವರು; ನಿನ್ನ ಪರಾಕ್ರಮವನ್ನು ನುಡಿಯುವರು. ಮನುಷ್ಯನ ಮಕ್ಕಳಿಗೆ ಆತನ ಪರಾಕ್ರಮ ಕ್ರಿಯೆಗಳನ್ನೂ ಆತನ ರಾಜ್ಯದ ಪ್ರಭೆಯ ಘನವನ್ನೂ ತಿಳಿಯಪಡಿಸುವರು. ನಿನ್ನ ರಾಜ್ಯವು ಶಾಶ್ವತವಾದ ರಾಜ್ಯವಾಗಿದೆ; ನಿನ್ನ ದೊರೆತನವು ಎಲ್ಲಾ ತಲತಲಾಂತರಗಳಲ್ಲಿ ಇರುವದು. ಕರ್ತನು ಬೀಳುವವರೆಲ್ಲರನ್ನು ಉದ್ಧಾರಮಾಡುತ್ತಾನೆ; ತಗ್ಗಿಸಿ ಕೊಳ್ಳುವವರೆಲ್ಲರನ್ನು ಎತ್ತುತ್ತಾನೆ.
- Psalm 71:24 ಕೀರ್ತನೆಗಳು 71:24ನನ್ನ ನಾಲಿಗೆಯು ಸಹ ದಿನವೆಲ್ಲಾ ನಿನ್ನ ನೀತಿಯನ್ನು ಮಾತನಾಡುವದು; ನನಗೆ ಕೇಡನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡುತ್ತಾರೆ.
- Psalm 40:9–10 ಕೀರ್ತನೆಗಳು 40:9–10ನಾನು ನೀತಿಯನ್ನು ದೊಡ್ಡ ಸಭೆಯಲ್ಲಿ ಸಾರಿಬಿಟ್ಟಿದ್ದೇನೆ; ಇಗೋ, ಓ ಕರ್ತನೇ, ನಾನು ನನ್ನ ತುಟಿಗಳಿಗೆ ಅಡ್ಡಿ ಮಾಡಲಿಲ್ಲವೆಂಬ ಸಂಗತಿ ನೀನು ತಿಳಿದವ ನಾಗಿದ್ದೀ. ನಿನ್ನ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಲಿಲ್ಲ; ನಿನ್ನ ನಂಬಿಕೆಯನ್ನೂ ರಕ್ಷಣೆಯನ್ನೂ ನಾನು ಪ್ರಕಟಿಸಿದ್ದೇನೆ; ನಿನ್ನ ಪ್ರೀತಿ ಕರುಣೆಗಳನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ ನಾನು ಮರೆಮಾಡಲಿಲ್ಲ.
- Psalm 89:16 ಕೀರ್ತನೆಗಳು 89:16ನಿನ್ನ ಹೆಸರಿನಿಂದ ದಿನವೆಲ್ಲಾ ಉಲ್ಲಾಸಪಟ್ಟು ನಿನ್ನ ನೀತಿಯಲ್ಲಿ ಅವರು ಉನ್ನತಕ್ಕೇರು ವರು.
- Psalm 30:12 ಕೀರ್ತನೆಗಳು 30:12ಹೀಗೆ ನನ್ನ ಹೆಚ್ಚಳವು ಮೌನವಾಗಿರದೆ ನಿನ್ನನ್ನು ಕೀರ್ತಿಸುವದು. ನನ್ನ ದೇವರಾದ ಓ ಕರ್ತನೇ, ಯುಗಯುಗಕ್ಕೂ ನಿನ್ನನ್ನು ಕೊಂಡಾಡುವೆನು.
- Psalm 22:22–25 ಕೀರ್ತನೆಗಳು 22:22–25ನಾನು ನಿನ್ನ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು; ಕೂಟದ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು. ಕರ್ತನಿಗೆ ಭಯಪಡುವವರೇ, ಆತನನ್ನು ಸ್ತುತಿಸಿರಿ; ಯಾಕೋಬಿನ ಎಲ್ಲಾ ಸಂತಾನದವರೇ, ಆತನನ್ನು ಘನಪಡಿಸಿರಿ; ಇಸ್ರಾಯೇಲಿನ ಎಲ್ಲಾ ಸಂತಾನದವರೇ, ಆತನಿಗೆ ಭಯಪಡಿರಿ. ಸಂಕಟ ಪಡುವವನ ಸಂಕಟ ವನ್ನು ಆತನು ತಿರಸ್ಕರಿಸಲಿಲ್ಲ, ಅಸಹ್ಯಿಸಲಿಲ್ಲ; ತನ್ನ ಮುಖವನ್ನು ಅವನಿಂದ ಮರೆಮಾಡಲಿಲ್ಲ; ಆದರೆ ಅವನು ಮೊರೆಯಿಡಲು ಆತನು ಕೇಳಿದನು. ಮಹಾ ಸಭೆಯಲ್ಲಿ ನಿನ್ನನ್ನು ಕುರಿತು ನನ್ನ ಸ್ತೋತ್ರವು ನಿನಗಿ ರುವದು; ನನ್ನ ಪ್ರಮಾಣಗಳನ್ನು ಆತನಿಗೆ ಭಯಪಡು ವವರ ಮುಂದೆ ಸಲ್ಲಿಸುವೆನು.
- Psalm 40:12 ಕೀರ್ತನೆಗಳು 40:12ಲೆಕ್ಕ ವಿಲ್ಲದಷ್ಟು ಕೇಡುಗಳು ನನ್ನ ಸುತ್ತಲು ಆವರಿಸಿಕೊಂಡಿವೆ; ನಾನು ಮೇಲಕ್ಕೆ ನೋಡಲಾರದಷ್ಟು ನನ್ನ ಅಕ್ರಮ ಗಳು ನನ್ನನ್ನು ಹಿಡಿದವೆ; ಅವು ನನ್ನ ತಲೆಯ ಕೂದಲು ಗಳಿಗಿಂತ ಹೆಚ್ಚಾಗಿವೆ; ಆದದರಿಂದ ನನ್ನ ಹೃದಯವು ನನ್ನನ್ನು ಕುಂದಿಸಿತು.