Joel · chapter 2 · verse 30
Joel 2:30 in Kannada
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅದ್ಭುತಗಳನ್ನೂ ರಕ್ತವನ್ನೂ ಬೆಂಕಿಯನ್ನೂ ಹೊಗೆಯ ಸ್ತಂಭಗಳನ್ನೂ ತೋರಿಸುವೆನು.
Aakaashagalalli mattu bhoomiyalli adbhutagalannoo raktavannoo benkiyannoo hogeya stambhagalannoo torisuvenu.
Joel 2:30 in English
- King James Version (KJV)
- And I will shew wonders in the heavens and in the earth, blood, and fire, and pillars of smoke.
- World English Bible (WEB)
- I will show wonders in the heavens and on the earth: blood, fire, and pillars of smoke.
- American Standard Version (ASV)
- And I will show wonders in the heavens and in the earth: blood, and fire, and pillars of smoke.
- Bible in Basic English (BBE)
- And I will let wonders be seen in the heavens and on the earth, blood and fire and pillars of smoke.
- Darby Translation (DBY)
- And I will shew wonders in the heavens and on the earth, blood, and fire, and pillars of smoke.
- Webster's Bible (WBS)
- And I will show wonders in the heavens and on the earth, blood, and fire, and pillars of smoke.
- Young's Literal Translation (YLT)
- And I have given wonders in the heavens, and in the earth, Blood and fire, and columns of smoke.
Read in context
- 28ಆಮೇಲೆ ಆಗುವದೇನಂದರೆ--ಎಲ್ಲಾ ಶರೀರಗಳ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ಆಗ ನಿಮ್ಮ ಕುಮಾರರೂ ಕುಮಾರ್ತೆಯರೂ ಪ್ರವಾದಿ ಸುವರು; ನಿಮ್ಮ ವೃದ್ಧರು ಕನಸುಗಳನ್ನು ಕಾಣುವರು; ನಿಮ್ಮ ಯೌವನಸ್ಥರು ದರ್ಶನಗಳನ್ನು ನೋಡುವರು.
- 29ದಾಸರ ಮೇಲೆಯೂ ದಾಸಿಯರ ಮೇಲೆಯೂ ಆ ದಿವಸಗಳಲ್ಲಿ ನನ್ನ ಆತ್ಮವನ್ನು ಸುರಿಸುವೆನು.
- 30ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅದ್ಭುತಗಳನ್ನೂ ರಕ್ತವನ್ನೂ ಬೆಂಕಿಯನ್ನೂ ಹೊಗೆಯ ಸ್ತಂಭಗಳನ್ನೂ ತೋರಿಸುವೆನು.
- 31ಕರ್ತನ ದೊಡ್ಡ ಭಯಂಕರವಾದ ದಿನವು ಬರುವದಕ್ಕಿಂತ ಮುಂಚೆ, ಸೂರ್ಯನು ಕತ್ತಲೆಗೂ ಚಂದ್ರನು ರಕ್ತಕ್ಕೂ ಮಾರ್ಪಡುವವು.ಆಗುವದೇನಂದರೆ--ಕರ್ತನ ಹೆಸರನ್ನು ಹೇಳಿ ಕೊಳ್ಳುವವರೆಲ್ಲರೂ ರಕ್ಷಿಸಲ್ಪಡುವರು; ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ ಕರ್ತನು ಕರೆಯುವ ಉಳಿದವರಲ್ಲಿಯೂ ಕರ್ತನು ಹೇಳಿದ ಪ್ರಕಾರ ಬಿಡುಗಡೆಯು ಇರುವದು.
- 32ಆಗುವದೇನಂದರೆ--ಕರ್ತನ ಹೆಸರನ್ನು ಹೇಳಿ ಕೊಳ್ಳುವವರೆಲ್ಲರೂ ರಕ್ಷಿಸಲ್ಪಡುವರು; ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ ಕರ್ತನು ಕರೆಯುವ ಉಳಿದವರಲ್ಲಿಯೂ ಕರ್ತನು ಹೇಳಿದ ಪ್ರಕಾರ ಬಿಡುಗಡೆಯು ಇರುವದು.
Cross references
- Acts 2:19–20 ಅಪೊಸ್ತಲರ ಕೃತ್ಯಗಳು 2:19–20ಮೇಲೆ ಆಕಾಶದಲ್ಲಿ ಅದ್ಭುತಕಾರ್ಯಗಳನೂ ಕೆಳಗೆ ಭೂಮಿಯ ಮೇಲೆ ಸೂಚಕ ಕಾರ್ಯಗಳನ್ನೂ ನಾನು ತೋರಿಸುವೆನು. ಇದಲ್ಲದೆ ರಕ್ತ, ಬೆಂಕಿ ಮತ್ತು ಹೊಗೆಯ ಹಬೆಯು ಉಂಟಾಗುವವು. ಕರ್ತನ ಗಂಭೀರವಾದ ಆ ಮಹಾದಿನವು ಬರುವ ಮುಂಚೆ ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗು ವನು.
- Luke 21:11 ಲೂಕನು 21:11ಬೇರೆ ಬೇರೆ ಸ್ಥಳಗಳಲ್ಲಿ ಮಹಾಭೂಕಂಪಗಳೂ ಬರಗಳೂ ವ್ಯಾಧಿಗಳೂ ಇರುವವು; ಭಯಹುಟ್ಟಿ ಸುವ ದೃಶ್ಯಗಳೂ ಮಹಾಸೂಚನೆಗಳೂ ಆಕಾಶದಿಂದ ಆಗುವವು.
- Matthew 24:29 ಮತ್ತಾಯನು 24:29ಆ ಸಂಕಟದ ದಿವಸಗಳು ಮುಗಿದ ತಕ್ಷಣವೇ ಸೂರ್ಯನು ಕತ್ತಲಾಗುವನು; ಚಂದ್ರನು ತನ್ನ ಬೆಳಕು ಕೊಡದೆ ಇರುವನು; ನಕ್ಷತ್ರಗಳು ಆಕಾಶದಿಂದ ಬೀಳುವವು ಆಕಾಶದ ಶಕ್ತಿಗಳು ಕದಲಿಸಲ್ಪಡುವವು.
- Luke 21:25–26 ಲೂಕನು 21:25–26ಸೂರ್ಯ ಚಂದ್ರ ಮತ್ತು ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು; ಇದಲ್ಲದೆ ಭೂಮಿಯ ಮೇಲಿರುವ ಜನಾಂಗಗಳಿಗೆ ಕಳವಳದಿಂದ ಸಂಕಟ ಉಂಟಾಗುವದು; ಸಮುದ್ರದ ಮತ್ತು ತೆರೆಗಳ ಘೋಷಣೆಯ ನಿಮಿತ್ತವಾಗಿ ಕಳವಳವಾಗುವದು. ಆಕಾಶದ ಶಕ್ತಿಗಳು ಕದಲಿಸಲ್ಪಡುವದರಿಂದ ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಸಂಭವಿಸುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು.
- Mark 13:24–25 ಮಾರ್ಕನು 13:24–25ಇದಲ್ಲದೆ ಆ ದಿವಸಗಳಲ್ಲಿ ಸಂಕಟವು ತೀರಿದ ನಂತರ ಸೂರ್ಯನು ಕತ್ತಲಾಗುವನು; ಚಂದ್ರನು ತನ್ನ ಬೆಳಕನ್ನು ಕೊಡದೆ ಇರುವನು. ಆಕಾಶದ ನಕ್ಷತ್ರಗಳು ಬೀಳುವವು ಮತ್ತು ಆಕಾಶದಲ್ಲಿರುವ ಶಕ್ತಿಗಳು ಕದಲುವವು.
- Judges 20:40 ನ್ಯಾಯಸ್ಥಾಪಕರು 20:40ಆದರೆ ಪಟ್ಟಣದೊಳಗಿಂದ ಅಗ್ನಿ ಜ್ವಾಲೆಯು ಹೊಗೆಯ ಸ್ತಂಭ ಸಹಿತವಾಗಿ ಏಳುವದಕ್ಕೆ ಪ್ರಾರಂಭಿಸಿತು. ಬೆನ್ಯಾವಿಾನ್ಯರು ಹಿಂದಕ್ಕೆ ಅದನ್ನು ತಿರುಗಿ ನೋಡಿದಾಗ ಇಗೋ, ಪಟ್ಟಣದ ಜ್ವಾಲೆಯು ಆಕಾಶಕ್ಕೆ ಏರಿತು.
- Revelation 6:12–17 ಪ್ರಕಟನೆ 6:12–17ಆತನು ಆರನೆಯ ಮುದ್ರೆ ತೆರೆಯುವದನ್ನು ನಾನು ಕಂಡೆನು. ಆಗ ಇಗೋ, ಮಹಾಭೂಕಂಪ ಉಂಟಾಯಿತು; ಸೂರ್ಯನು ಕೂದಲಿನ ಗೋಣಿ ಯಂತೆ ಕಪ್ಪಾದನು. ಚಂದ್ರನು ರಕ್ತದಂತಾದನು. ಅಂಜೂರದ ಮರವು ಬಿರುಗಾಳಿಯಿಂದ ಅಲ್ಲಾಡಿಸ ಲ್ಪಟ್ಟು ಅಕಾಲದಲ್ಲಿ ತನ್ನ ಕಾಯಿಗಳನ್ನು ಉದುರಿಸುವ ಪ್ರಕಾರ ಆಕಾಶದ ನಕ್ಷತ್ರಗಳು ಭೂಮಿಗೆ ಬಿದ್ದವು. ಆಕಾಶವು ಸುರುಳಿಯ ಹಾಗೆ ಸುತ್ತಲ್ಪಟ್ಟು ಹೋಗಿ ಬಿಟ್ಟಿತು; ಎಲ್ಲಾ ಬೆಟ್ಟಗಳೂ ದ್ವೀಪಗಳೂ ತಮ್ಮ ತಮ್ಮ ಸ್ಥಳಗಳಿಂದ ಚದರಿದವು. ಭೂರಾಜರೂ ದೊಡ್ಡ ವರೂ ಐಶ್ವರ್ಯವಂತರೂ ಮುಖ್ಯಾಧಿಪತಿಗಳೂ ಪರಾ ಕ್ರಮಶಾಲಿಗಳೂ ಎಲ್ಲಾ ದಾಸರೂ ಸ್ವತಂತ್ರರೂ ಗವಿ ಗಳಲ್ಲಿಯೂ ಬೆಟ್ಟಗಳ ಬಂಡೆಗಳಲ್ಲಿಯೂ ಅಡಗಿ ಕೊಂಡು ಪರ್ವತಗಳಿಗೂ ಬಂಡೆಗಳಿಗೂ--ನಮ್ಮ ಮೇಲೆ ಬೀಳಿರಿ, ಸಿಂಹಾಸನದ ಮೇಲೆ ಕೂತಿದ್ದಾತನ ಮುಖಕ್ಕೂ ಕುರಿಮರಿಯಾದಾತನ ಕೋಪಕ್ಕೂ ನಮ್ಮನ್ನು ಮರೆಮಾಡಿರಿ;ಆತನ ಕೋಪದ ಮಹಾದಿನ ಬಂದದೆ; ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು. ಆತನ ಕೋಪದ ಮಹಾದಿನ ಬಂದದೆ; ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು.
- Revelation 18:9 ಪ್ರಕಟನೆ 18:9ಅವಳೊಂದಿಗೆ ಜಾರತ್ವ ಮಾಡಿ ವೈಭವದಲ್ಲಿ ಬದುಕಿದ ಭೂರಾಜರು ಅವಳ ದಹನದ ಹೊಗೆಯನ್ನು ನೋಡು ವಾಗ ಅವಳಿಗಾಗಿ ಗೋಳಾಡುತ್ತಾ ಪ್ರಲಾಪಿಸುವರು.
- Genesis 19:28 ಆದಿಕಾಂಡ 19:28ಸೊದೋಮ್ ಗೊಮೋರಗಳ ಕಡೆಗೂ ಮೈದಾನದ ಎಲ್ಲಾ ಪ್ರದೇಶ ಗಳ ಕಡೆಗೂ ನೋಡಿದನು. ಆಗ ಇಗೋ, ಆ ದೇಶದ ಹೊಗೆಯು ಆವಿಗೆಯ ಹೊಗೆಯ ಹಾಗೆ ಏರಿತು.
- Song of Solomon 3:6 ಪರಮಗೀತೆ 3:6ರಕ್ತಬೋಳ ಸಾಂಬ್ರಾಣಿಗಳಿಂದಲೂ ವರ್ತಕರ ಸಕಲ ಸುಗಂಧ ದ್ರವ್ಯಗಳಿಂದಲೂ ಧೂಮ ಸ್ತಂಭ ಗಳ ಹಾಗೆಯೂ ಅಡವಿಯಿಂದ ಬರುವ ಇವಳಾರು?
- Revelation 18:18 ಪ್ರಕಟನೆ 18:18ಅವಳ ದಹನದ ಹೊಗೆಯನ್ನು ನೋಡುತ್ತಾ--ಈ ಮಹಾ ಪಟ್ಟಣಕ್ಕೆ ಸಮಾನವಾದ ಪಟ್ಟಣವು ಯಾವದು ಎಂದು ಕೂಗಿ ಹೇಳಿದರು.
- Judges 20:38 ನ್ಯಾಯಸ್ಥಾಪಕರು 20:38ಇಸ್ರಾಯೇಲ್ ಮನುಷ್ಯರು ಹೊಂಚು ಹಾಕಿಕೊಂಡಿದ್ದವರ ಸಂಗಡ ನೇಮಿಸಿಕೊಂಡ ಗುರುತೇ ನಂದರೆ, ಪಟ್ಟಣದಲ್ಲಿಂದ ಮಹಾದೊಡ್ಡ ಹೊಗೆಯನ್ನು ಏಳಮಾಡುವದೇ.