Mark · chapter 13 · verse 24
Mark 13:24 in Kannada
ಇದಲ್ಲದೆ ಆ ದಿವಸಗಳಲ್ಲಿ ಸಂಕಟವು ತೀರಿದ ನಂತರ ಸೂರ್ಯನು ಕತ್ತಲಾಗುವನು; ಚಂದ್ರನು ತನ್ನ ಬೆಳಕನ್ನು ಕೊಡದೆ ಇರುವನು.
Idallade aa divasagalalli sankatavu teerida nantara sooryanu kattalaaguvanu; chandranu tanna belakannu kodade iruvanu.
Mark 13:24 in English
- King James Version (KJV)
- But in those days, after that tribulation, the sun shall be darkened, and the moon shall not give her light,
- World English Bible (WEB)
- But in those days, after that oppression, the sun will be darkened, the moon will not give its light,
- American Standard Version (ASV)
- But in those days, after that tribulation, the sun shall be darkened, and the moon shall not give her light,
- Bible in Basic English (BBE)
- But in those days, after that time of trouble, the sun will be made dark and the moon will not give her light,
- Darby Translation (DBY)
- But in those days, after that distress, the sun shall be darkened and the moon shall not give its light;
- Webster's Bible (WBS)
- But in those days, after that tribulation, the sun shall be darkened, and the moon shall not give her light,
- Young's Literal Translation (YLT)
- 'But in those days, after that tribulation, the sun shall be darkened, and the moon shall not give her light,
Read in context
- 22ಯಾಕಂದರೆ ಸುಳ್ಳು ಕ್ರಿಸ್ತರೂ ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ಆರಿಸಿಕೊಂಡವರನ್ನೂ ಮೋಸ ಗೊಳಿಸುವದಕ್ಕೊಸ್ಕರ ಸೂಚಕಕಾರ್ಯಗಳನ್ನು ಅದ್ಭುತ ಕಾರ್ಯಗಳನ್ನು ಮಾಡಿ ತೋರಿಸುವರು.
- 23ಆದರೆ ನೀವು ಎಚ್ಚರಿಕೆ ತೆಗೆದುಕೊಳ್ಳಿರಿ; ಇಗೋ, ನಾನು ನಿಮಗೆ ಎಲ್ಲವುಗಳನ್ನು ಮುಂದಾಗಿ ಹೇಳಿದ್ದೇನೆ.
- 24ಇದಲ್ಲದೆ ಆ ದಿವಸಗಳಲ್ಲಿ ಸಂಕಟವು ತೀರಿದ ನಂತರ ಸೂರ್ಯನು ಕತ್ತಲಾಗುವನು; ಚಂದ್ರನು ತನ್ನ ಬೆಳಕನ್ನು ಕೊಡದೆ ಇರುವನು.
- 25ಆಕಾಶದ ನಕ್ಷತ್ರಗಳು ಬೀಳುವವು ಮತ್ತು ಆಕಾಶದಲ್ಲಿರುವ ಶಕ್ತಿಗಳು ಕದಲುವವು.
- 26ಆಗ ಮನುಷ್ಯಕುಮಾರನು ಬಹು ಬಲದಿಂದಲೂ ಮಹಿಮೆಯಿಂದಲೂ ಮೇಘ ಗಳಲ್ಲಿ ಬರುವದನ್ನು ಅವರು ನೋಡುವರು.
Cross references
- Isaiah 13:10 ಯೆಶಾಯ 13:10ಆಕಾಶದ ನಕ್ಷತ್ರಗಳು ಅದರ ರಾಶಿಗಳು ತಮ್ಮ ಬೆಳಕನ್ನು ಕೊಡುವುದಿಲ್ಲ; ಸೂರ್ಯನು ಮೂಡಿ ಹೋಗುತ್ತಿರುವಾಗಲೇ ಕತ್ತಲಾಗುವನು. ಚಂದ್ರನು ತನ್ನ ಬೆಳಕನ್ನು ಕೊಡುವದಿಲ್ಲ.
- Acts 2:19–20 ಅಪೊಸ್ತಲರ ಕೃತ್ಯಗಳು 2:19–20ಮೇಲೆ ಆಕಾಶದಲ್ಲಿ ಅದ್ಭುತಕಾರ್ಯಗಳನೂ ಕೆಳಗೆ ಭೂಮಿಯ ಮೇಲೆ ಸೂಚಕ ಕಾರ್ಯಗಳನ್ನೂ ನಾನು ತೋರಿಸುವೆನು. ಇದಲ್ಲದೆ ರಕ್ತ, ಬೆಂಕಿ ಮತ್ತು ಹೊಗೆಯ ಹಬೆಯು ಉಂಟಾಗುವವು. ಕರ್ತನ ಗಂಭೀರವಾದ ಆ ಮಹಾದಿನವು ಬರುವ ಮುಂಚೆ ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗು ವನು.
- Matthew 24:29–31 ಮತ್ತಾಯನು 24:29–31ಆ ಸಂಕಟದ ದಿವಸಗಳು ಮುಗಿದ ತಕ್ಷಣವೇ ಸೂರ್ಯನು ಕತ್ತಲಾಗುವನು; ಚಂದ್ರನು ತನ್ನ ಬೆಳಕು ಕೊಡದೆ ಇರುವನು; ನಕ್ಷತ್ರಗಳು ಆಕಾಶದಿಂದ ಬೀಳುವವು ಆಕಾಶದ ಶಕ್ತಿಗಳು ಕದಲಿಸಲ್ಪಡುವವು. ಆಗ ಮನುಷ್ಯಕುಮಾರನ ಸೂಚನೆಯು ಆಕಾಶದಲ್ಲಿ ಕಾಣುವದು; ಭೂಮಿಯ ಎಲ್ಲಾ ಗೋತ್ರದವರು ಗೋಳಾಡುವರು. ಮತ್ತು ಮನುಷ್ಯಕುಮಾರನು ಆಕಾಶದ ಮೇಘಗಳಲ್ಲಿ ಶಕ್ತಿಯೊಡನೆಯೂ ಮಹಾ ಪ್ರಭಾವದೊಂದಿಗೂ ಬರುವದನ್ನು ಅವರು ನೋಡು ವರು. ತರುವಾಯ ಆತನು ತನ್ನ ದೂತರನ್ನು ತುತೂರಿಯ ಮಹಾಶಬ್ದದೊಂದಿಗೆ ಕಳುಹಿಸುವನು; ಆಗ ಅವರು ಆತನಿಂದ ಆಯಲ್ಪಟ್ಟವರನ್ನು ನಾಲ್ಕು ದಿಕ್ಕುಗಳಿಂದ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಒಟ್ಟುಗೂಡಿಸುವರು.
- Revelation 6:12–14 ಪ್ರಕಟನೆ 6:12–14ಆತನು ಆರನೆಯ ಮುದ್ರೆ ತೆರೆಯುವದನ್ನು ನಾನು ಕಂಡೆನು. ಆಗ ಇಗೋ, ಮಹಾಭೂಕಂಪ ಉಂಟಾಯಿತು; ಸೂರ್ಯನು ಕೂದಲಿನ ಗೋಣಿ ಯಂತೆ ಕಪ್ಪಾದನು. ಚಂದ್ರನು ರಕ್ತದಂತಾದನು. ಅಂಜೂರದ ಮರವು ಬಿರುಗಾಳಿಯಿಂದ ಅಲ್ಲಾಡಿಸ ಲ್ಪಟ್ಟು ಅಕಾಲದಲ್ಲಿ ತನ್ನ ಕಾಯಿಗಳನ್ನು ಉದುರಿಸುವ ಪ್ರಕಾರ ಆಕಾಶದ ನಕ್ಷತ್ರಗಳು ಭೂಮಿಗೆ ಬಿದ್ದವು. ಆಕಾಶವು ಸುರುಳಿಯ ಹಾಗೆ ಸುತ್ತಲ್ಪಟ್ಟು ಹೋಗಿ ಬಿಟ್ಟಿತು; ಎಲ್ಲಾ ಬೆಟ್ಟಗಳೂ ದ್ವೀಪಗಳೂ ತಮ್ಮ ತಮ್ಮ ಸ್ಥಳಗಳಿಂದ ಚದರಿದವು.
- Joel 3:15 ಯೋವೇಲ 3:15ಸೂರ್ಯ, ಚಂದ್ರ ಕಪ್ಪಾಗುವವು; ನಕ್ಷತ್ರಗಳು ತಮ್ಮ ಪ್ರಕಾಶವನ್ನು ಮರೆಮಾಡುವವು.
- Joel 2:30–31 ಯೋವೇಲ 2:30–31ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅದ್ಭುತಗಳನ್ನೂ ರಕ್ತವನ್ನೂ ಬೆಂಕಿಯನ್ನೂ ಹೊಗೆಯ ಸ್ತಂಭಗಳನ್ನೂ ತೋರಿಸುವೆನು. ಕರ್ತನ ದೊಡ್ಡ ಭಯಂಕರವಾದ ದಿನವು ಬರುವದಕ್ಕಿಂತ ಮುಂಚೆ, ಸೂರ್ಯನು ಕತ್ತಲೆಗೂ ಚಂದ್ರನು ರಕ್ತಕ್ಕೂ ಮಾರ್ಪಡುವವು.ಆಗುವದೇನಂದರೆ--ಕರ್ತನ ಹೆಸರನ್ನು ಹೇಳಿ ಕೊಳ್ಳುವವರೆಲ್ಲರೂ ರಕ್ಷಿಸಲ್ಪಡುವರು; ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ ಕರ್ತನು ಕರೆಯುವ ಉಳಿದವರಲ್ಲಿಯೂ ಕರ್ತನು ಹೇಳಿದ ಪ್ರಕಾರ ಬಿಡುಗಡೆಯು ಇರುವದು.
- Amos 5:20 ಆಮೋಸ 5:20ಹೀಗೆ ಕರ್ತನ ದಿನವು ಬೆಳಕಲ್ಲ ಕತ್ತಲಲ್ಲವೇ? ಅದರಲ್ಲಿ ಪ್ರಕಾಶವೇನೂ ಇಲ್ಲದ ಕಾರ್ಗತ್ತಲಲ್ಲವೋ? ಹಬ್ಬಗಳನ್ನು ಹಗೆಮಾಡಿ ತುಚ್ಛೀಕರಿಸುತ್ತೇನೆ.
- 2 Peter 3:10 2 ಪೇತ್ರನು 3:10ಆದರೂ ಕರ್ತನ ದಿನವು ರಾತ್ರಿಯಲ್ಲಿ ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಗಳು ಮಹಾಘೋಷದಿಂದ ಇಲ್ಲದೆ ಹೋಗು ವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಲಯವಾಗಿ ಹೋಗುವವು; ಭೂಮಿಯೂ ಅದರಲ್ಲಿ ರುವ ಕೆಲಸಗಳೂ ಸುಟ್ಟುಹೋಗುವವು.
- Daniel 12:1 ದಾನಿಯೇಲನು 12:1ಆ ಕಾಲದಲ್ಲಿ ನಿನ್ನ ಜನರ ಮಕ್ಕಳಿಗೋಸ್ಕರ ನಿಲ್ಲುವ ಮಹಾಪ್ರಧಾನನಾದ ವಿಾಕಾ ಯೇಲನು ಏಳುವನು; ಮೊಟ್ಟಮೊದಲು ಜನಾಂಗ ಉಂಟಾದಂದಿನಿಂದ ಇಂದಿನ ವರೆಗೂ ಸಂಭವಿಸದಂತ ಸಂಕಟವು ಸಂಭವಿಸುವದು. ಆಗ ನಿನ್ನ ಜನರೊಳಗೆ ಅಂದರೆ ಜೀವಬಾಧ್ಯರ ಪಟ್ಟಿಯಲ್ಲಿ ಯಾರ ಹೆಸರು ಬರೆಯಲ್ಪಟ್ಟಿದೆಯೋ ಅವರೆಲ್ಲರೂ ಬಿಡುಗಡೆಯಾಗು ವರು.
- Daniel 7:10 ದಾನಿಯೇಲನು 7:10ಆತನ ಸನ್ನಿಧಾನದಿಂದ ಅಗ್ನಿಪ್ರವಾಹವು ಹೊರಟು ಬಂದಿತು; ಸಹಸ್ರ ಸಹಸ್ರ ವಾಗಿ ಆತನಿಗೆ ಸೇವೆಮಾಡಿದರು. ಲಕ್ಷೋಪಲಕ್ಷ ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ಕೂತು ಕೊಂಡರು. ಮತ್ತು ಪುಸ್ತಕಗಳು ತೆರೆಯಲ್ಪಟ್ಟವು.
- Jeremiah 4:23–25 ಯೆರೆಮೀಯ 4:23–25ನಾನು ಭೂಮಿಯನ್ನು ನೋಡಿದೆನು, ಇಗೋ, ಅದು ನಿರಾಕಾರವಾಗಿಯೂ ಹಾಳಾಗಿಯೂ ಶೂನ್ಯವಾಗಿಯೂ ಇತ್ತು; ಆಕಾಶಗಳನ್ನು ಸಹ ನೋಡಿದೆನು, ಅವುಗಳಿಗೆ ಬೆಳಕಿರಲಿಲ್ಲ. ಬೆಟ್ಟಗಳನ್ನು ನೋಡಿದೆನು, ಇಗೋ, ಅವು ನಡುಗಿದವು; ಗುಡ್ಡಗಳು ಹೌರವಾಗಿ ಅದುರಿದವು. ನಾನು ನೋಡಿದೆನು, ಇಗೋ, ಮನುಷ್ಯನು ಇರಲಿಲ್ಲ; ಆಕಾಶದ ಪಕ್ಷಿಗಳೆಲ್ಲಾ ಹಾರಿಹೋಗಿದ್ದವು.
- Joel 2:10 ಯೋವೇಲ 2:10ಅವರ ಮುಂದೆ ಭೂಮಿಯು ನಡುಗುತ್ತದೆ; ಆಕಾಶಗಳು ಅದುರುತ್ತವೆ; ಸೂರ್ಯ ಚಂದ್ರರು ಕಪ್ಪಾಗುತ್ತವೆ; ನಕ್ಷತ್ರಗಳು ತಮ್ಮ ಪ್ರಕಾಶವನ್ನು ಮರೆ ಮಾಡುತ್ತವೆ.