John · chapter 11 · verse 22
John 11:22 in Kannada
ಆದರೆ ಈಗಲೂ ಸಹ ನೀನು ದೇವರಿಂದ ಏನು ಕೇಳಿಕೊಳ್ಳುತ್ತೀಯೋ ದೇವರು ಅದನ್ನು ನಿನಗೆ ಕೊಡುವನೆಂದು ನಾನು ಬಲ್ಲೆನು ಅಂದಳು.
Aadare eegaloo saha neenu devarinda enu kelikollutteeyo devaru adannu ninage koduvanendu naanu ballenu andalu.
John 11:22 in English
- King James Version (KJV)
- But I know, that even now, whatsoever thou wilt ask of God, God will give [it] thee.
- World English Bible (WEB)
- Even now I know that whatever you ask of God, God will give you.”
- American Standard Version (ASV)
- And even now I know that, whatsoever thou shalt ask of God, God will give thee.
- Bible in Basic English (BBE)
- But I am certain that, even now, whatever request you make to God, God will give it to you.
- Darby Translation (DBY)
- but even now I know, that whatsoever thou shalt ask of God, God will give thee.
- Webster's Bible (WBS)
- But I know that even now, whatever thou wilt ask of God, God will give [it] thee.
- Young's Literal Translation (YLT)
- but even now, I have known that whatever thou mayest ask of God, God will give to thee;'
Read in context
- 20ಆಗ ಯೇಸು ಬರುತ್ತಿದ್ದಾನೆಂದು ಮಾರ್ಥಳು ಕೇಳು ತ್ತಲೇ ಹೋಗಿ ಆತನನ್ನು ಎದುರುಗೊಂಡಳು. ಮರಿಯಳಾದರೋ ಮನೆಯಲ್ಲಿಯೇ ಕೂತುಕೊಂಡಿ ದ್ದಳು.
- 21ಆಗ ಮಾರ್ಥಳು ಯೇಸುವಿಗೆ-- ಕರ್ತನೇ, ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯು ತ್ತಿರಲಿಲ್ಲ.
- 22ಆದರೆ ಈಗಲೂ ಸಹ ನೀನು ದೇವರಿಂದ ಏನು ಕೇಳಿಕೊಳ್ಳುತ್ತೀಯೋ ದೇವರು ಅದನ್ನು ನಿನಗೆ ಕೊಡುವನೆಂದು ನಾನು ಬಲ್ಲೆನು ಅಂದಳು.
- 23ಯೇಸು ಆಕೆಗೆ--ನಿನ್ನ ಸಹೋದರನು ತಿರಿಗಿ ಎದ್ದೇಳುವನು ಎಂದು ಹೇಳಿದನು.
- 24ಮಾರ್ಥಳು ಆತನಿಗೆ--ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ತಿರಿಗಿ ಎದ್ದೇಳುವನೆಂದು ನಾನು ಬಲ್ಲೆನು ಎಂದು ಹೇಳಿದಳು.
Cross references
- John 9:31 ಯೋಹಾನನು 9:31ದೇವರು ಪಾಪಿಗಳ ಪ್ರಾರ್ಥನೆ ಯನ್ನು ಕೇಳುವದಿಲ್ಲ; ಆದರೆ ಯಾವನಾದರೂ ದೇವ ರನ್ನು ಆರಾಧಿಸುವವನಾಗಿದ್ದು ಆತನ ಚಿತ್ತದಂತೆ ನಡೆದರೆ ಅವನ ಪ್ರಾರ್ಥನೆಯನ್ನು ಆತನು ಕೇಳು ತ್ತಾನೆಂದು ನಾವು ಬಲ್ಲೆವು.
- John 11:41–42 ಯೋಹಾನನು 11:41–42ಆಗ ಅವರು ಸತ್ತವನನ್ನು ಇಟ್ಟಿದ್ದ ಸ್ಥಳದಿಂದ ಕಲ್ಲನ್ನು ತೆಗೆದುಹಾಕಿದರು. ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ--ತಂದೆಯೇ, ನೀನು ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕೆ ನಾನು ನಿನ್ನನ್ನು ಕೊಂಡಾಡುತ್ತೇನೆ. ನೀನು ನನ್ನ ಪ್ರಾರ್ಥನೆಯನ್ನು ಯಾವಾಗಲೂ ಕೇಳುತ್ತೀ ಎಂದು ನಾನು ಬಲ್ಲೆನು. ಆದರೆ ನನ್ನ ಹತ್ತಿರದಲ್ಲಿ ನಿಂತಿರುವ ಜನರ ನಿಮಿತ್ತವಾಗಿ ನೀನು ನನ್ನನ್ನು ಕಳುಹಿಸಿದ್ದೀ ಎಂದು ಅವರು ನಂಬುವಂತೆ ನಾನು ಅದನ್ನು ಹೇಳಿದೆನು ಅಂದನು.
- Mark 9:23 ಮಾರ್ಕನು 9:23ಆಗ ಯೇಸು ಅವನಿಗೆ--ನೀನು ನಂಬುವದಾದರೆ ಆಗುವದು; ನಂಬುವವನಿಗೆ ಎಲ್ಲವು ಸಾಧ್ಯವೇ ಎಂದು ಹೇಳಿದನು.
- Matthew 28:18 ಮತ್ತಾಯನು 28:18ಯೇಸು ಬಂದು ಅವರೊಂದಿಗೆ ಮಾತ ನಾಡಿ-- ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ ನನಗೆ ಕೊಡಲ್ಪಟ್ಟಿದೆ;
- Hebrews 11:17–19 ಇಬ್ರಿಯರಿಗೆ 11:17–19ಅಬ್ರಹಾಮನು ಶೋಧಿತನಾಗಿ ನಂಬಿಕೆ ಯಿಂದಲೇ ಇಸಾಕನನ್ನು ಸಮರ್ಪಿಸಿದನು; ಆ ವಾಗ್ದಾನ ಗಳನ್ನು ಹೊಂದಿದ ಅವನು ತನ್ನ ಒಬ್ಬನೇ ಮಗನನ್ನು ಸಮರ್ಪಿಸಿದನು. ಅವನ ವಿಷಯದಲ್ಲಿ ಇಸಾಕ ನಲ್ಲಿಯೇ ನಿನ್ನ ಸಂತತಿ ಕರೆಯಲ್ಪಡುವದೆಂದು ಹೇಳ ಲ್ಪಟ್ಟಿತು. ತನ್ನ ಮಗನನ್ನು ಸತ್ತವರೊಳಗಿಂದಲೂ ದೇವರು ಎಬ್ಬಿಸ ಸಮರ್ಥನಾಗಿದ್ದಾನೆಂದು ಎಣಿಸಿದನು. ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಉಪಮಾನವಾಗಿ ಹೊಂದಿದನು.
- John 5:22–27 ಯೋಹಾನನು 5:22–27ಇದಲ್ಲದೆ ತಂದೆಯು ಯಾರಿಗೂ ತೀರ್ಪು ಮಾಡುವದಿಲ್ಲ; ಆದರೆ ಎಲ್ಲರೂ ತಂದೆಗೆ ಮಾನಕೊಡುವ ಪ್ರಕಾರವೇ ಮಗನಿಗೂ ಮಾನ ಕೊಡಬೇಕೆಂದು ತೀರ್ಪು ಮಾಡು ವದನ್ನೆಲ್ಲಾ ಮಗನಿಗೆ ಒಪ್ಪಿಸಿದ್ದಾನೆ. ಮಗನಿಗೆ ಮಾನ ಕೊಡದವನು ಆತನನ್ನು ಕಳುಹಿಸಿದ ತಂದೆಗೂ ಮಾನ ಕೊಡದವನಾಗಿದ್ದಾನೆ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿ ದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿ ದ್ದಾನೆ. ಅವನು ತೀರ್ಪಿಗೆ ಗುರಿಯಾಗುವದಿಲ್ಲ; ಆದರೆ ಮರಣದಿಂದ ಜೀವಕ್ಕೆ ದಾಟಿದ್ದಾನೆ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಸತ್ತವರು ದೇವಕುಮಾರನ ಧ್ವನಿಯನ್ನು ಕೇಳುವ ಗಳಿಗೆ ಬರುತ್ತದೆ; ಅದು ಈಗಲೇ ಬಂದಿದೆ; ಕೇಳುವವರು ಬದುಕುವರು. ತಂದೆಯು ಹೇಗೆ ಸ್ವತಃ ಜೀವವುಳ್ಳವನಾಗಿದ್ದಾನೋ ಹಾಗೆಯೇ ಮಗನೂ ಸ್ವತಃ ಜೀವವುಳ್ಳವನಾಗಿರುವಂತೆ ಆತನು ಅನುಗ್ರಹಿಸಿದ್ದಾನೆ. ಆತನು ಮನುಷ್ಯಕುಮಾರ ನಾಗಿರುವದರಿಂದ ನ್ಯಾಯತೀರಿಸುವ ಅಧಿಕಾರವನ್ನು ಸಹ ಆತನಿಗೆ ಕೊಟ್ಟಿದ್ದಾನೆ.
- John 3:35 ಯೋಹಾನನು 3:35ತಂದೆಯು ಮಗನನ್ನು ಪ್ರೀತಿಸಿ ಎಲ್ಲವುಗಳನ್ನು ಆತನ ಕೈಯಲ್ಲಿ ಕೊಟ್ಟಿದ್ದಾನೆ.ಮಗನ ಮೇಲೆ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಯಾವನು ಮಗನನ್ನು ನಂಬುವದಿಲ್ಲವೋ ಅವನು ಜೀವವನ್ನು ಕಾಣುವದಿಲ್ಲ; ಆದರೆ ದೇವರ ಕೋಪವು ಅವನ ಮೇಲೆ ನೆಲೆಗೊಂಡಿದೆ ಅಂದನು.
- John 17:2 ಯೋಹಾನನು 17:2ನೀನು ಆತನಿಗೆ ಯಾರಾರನ್ನು ಕೊಟ್ಟಿದ್ದೀಯೋ ಅವರಿಗೆ ಆತನು ನಿತ್ಯಜೀವವನ್ನು ಕೊಡಬೇಕೆಂದು ಆತನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿದ್ದೀ.
- Psalm 2:8 ಕೀರ್ತನೆಗಳು 2:8ನನ್ನನ್ನು ಕೇಳು; ಆಗ ಅನ್ಯಜನರನ್ನು ನಿನ್ನ ಬಾಧ್ಯತೆಯಾಗಿಯೂ ಭೂಮಿಯ ಕಟ್ಟಕಡೆಯ ವರೆಗೆ ನಿನ್ನ ಸ್ವಾಸ್ಥ್ಯವಾಗಿಯೂ ಕೊಡುವೆನು.