John · chapter 11 · verse 24
John 11:24 in Kannada
ಮಾರ್ಥಳು ಆತನಿಗೆ--ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ತಿರಿಗಿ ಎದ್ದೇಳುವನೆಂದು ನಾನು ಬಲ್ಲೆನು ಎಂದು ಹೇಳಿದಳು.
Maarthalu aatanige--kade dinadalli punarutthaanavaaguvaaga avanoo tirigi eddeluvanendu naanu ballenu endu helidalu.
John 11:24 in English
- King James Version (KJV)
- Martha saith unto him, I know that he shall rise again in the resurrection at the last day.
- World English Bible (WEB)
- Martha said to him, “I know that he will rise again in the resurrection at the last day.”
- American Standard Version (ASV)
- Martha saith unto him, I know that he shall rise again in the resurrection at the last day.
- Bible in Basic English (BBE)
- Martha said to him, I am certain that he will come to life again when all come back from the dead at the last day.
- Darby Translation (DBY)
- Martha says to him, I know that he will rise again in the resurrection in the last day.
- Webster's Bible (WBS)
- Martha saith to him, I know that he will rise again in the resurrection at the last day.
- Young's Literal Translation (YLT)
- Martha saith to him, 'I have known that he will rise again, in the rising again in the last day;'
Read in context
- 22ಆದರೆ ಈಗಲೂ ಸಹ ನೀನು ದೇವರಿಂದ ಏನು ಕೇಳಿಕೊಳ್ಳುತ್ತೀಯೋ ದೇವರು ಅದನ್ನು ನಿನಗೆ ಕೊಡುವನೆಂದು ನಾನು ಬಲ್ಲೆನು ಅಂದಳು.
- 23ಯೇಸು ಆಕೆಗೆ--ನಿನ್ನ ಸಹೋದರನು ತಿರಿಗಿ ಎದ್ದೇಳುವನು ಎಂದು ಹೇಳಿದನು.
- 24ಮಾರ್ಥಳು ಆತನಿಗೆ--ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ತಿರಿಗಿ ಎದ್ದೇಳುವನೆಂದು ನಾನು ಬಲ್ಲೆನು ಎಂದು ಹೇಳಿದಳು.
- 25ಯೇಸು ಆಕೆಗೆ--ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು;
- 26ಯಾವನಾದರೂ ಬದುಕುತ್ತಾ ನನ್ನಲ್ಲಿ ನಂಬಿಕೆಯಿಡುವದಾದರೆ ಅವನು ಎಂದಿಗೂ ಸಾಯುವ ದಿಲ್ಲ. ಇದನ್ನು ನೀನು ನಂಬುತ್ತೀಯೋ ಎಂದು ಕೇಳಿದ್ದಕ್ಕೆ
Cross references
- Daniel 12:2–3 ದಾನಿಯೇಲನು 12:2–3ಭೂಮಿಯ ಧೂಳಿನೊಳಗೆ ನಿದ್ರೆಮಾಡುವವ ರಲ್ಲಿ ಅನೇಕರು ಎಚ್ಚತ್ತು ಕೆಲವರು ನಿತ್ಯಜೀವವನ್ನೂ ಕೆಲವರು ನಿತ್ಯ ನಾಚಿಕೆಗಳನ್ನೂ ಅನುಭವಿಸುವರು. ಬುದ್ಧಿವಂತರಾದವರು ಆಕಾಶದ ಕಾಂತಿಯ ಹಾಗೆ ಯೂ ಅನೇಕರನ್ನು ನೀತಿಯ ಕಡೆಗೆ ತಿರುಗಿಸಿದ ವರು ನಕ್ಷತ್ರಗಳ ಹಾಗೆಯೂ ಎಂದೆಂದಿಗೂ ಪ್ರಕಾಶಿಸು ವರು;
- Acts 24:15 ಅಪೊಸ್ತಲರ ಕೃತ್ಯಗಳು 24:15ಸತ್ತುಹೋದ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವು ಇರುವದೆಂದು ನಾನು ದೇವರ ಕಡೆಗೆ ನಿರೀಕ್ಷೆ ಇಟ್ಟಿದ್ದೇನೆ. ಅದಕ್ಕೆ ಇವರು ಸಹ ಒಪ್ಪಿ ಕೊಳ್ಳುತ್ತಾರೆ.
- John 5:28–29 ಯೋಹಾನನು 5:28–29ಇದಕ್ಕೆ ಆಶ್ಚರ್ಯಪಡ ಬೇಡಿರಿ; ಒಂದು ಕಾಲ ಬರುತ್ತದೆ; ಆಗ ಸಮಾಧಿಗಳಲ್ಲಿ ರುವವರೆಲ್ಲರೂ ಆತನ ಧ್ವನಿಯನ್ನು ಕೇಳಿ ಹೊರಗೆ ಬರುವರು, ಒಳ್ಳೇದನ್ನು ಮಾಡಿದವರು ಜೀವದ ಪುನರುತ್ಥಾನವನ್ನೂ ಕೆಟ್ಟದ್ದನ್ನು ಮಾಡಿದವರು ತೀರ್ಪಿನ ಪುನರುತ್ಥಾನವನ್ನೂ ಹೊಂದುವರು.
- Isaiah 26:19 ಯೆಶಾಯ 26:19ಮೃತರಾದ ನಿನ್ನ ಜನರು ಬದುಕುವರು, ನನ್ನವರ ಹೆಣಗಳು ಏಳುವವು; ದೂಳಿನ ನಿವಾಸಿಗಳೇ; ಎಚ್ಚತ್ತು ಹರ್ಷ ಸ್ವರಗೈಯಿರಿ! ನೀನು ಸುರಿಯುವ ಇಬ್ಬನಿಯು ಇಬ್ಬನಿಯ ಸಸ್ಯಗಳಂತಿವೆ. ಭೂಮಿಯು ಸತ್ತವರನ್ನು ಹೊರಪಡಿಸುವದು.
- Acts 17:31–32 ಅಪೊಸ್ತಲರ ಕೃತ್ಯಗಳು 17:31–32ಯಾಕಂದರೆ ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸ ವನ್ನು ನೇಮಕ ಮಾಡಿದ್ದಾನೆ. ಆತನನ್ನು ಸತ್ತವರೊಳ ಗಿಂದ ಎಬ್ಬಿಸಿದ್ದರಿಂದ ಇದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ ಅಂದನು. ಸತ್ತವರ ಪುನರುತ್ಥಾನದ ವಿಷಯವನ್ನು ಕೇಳಿದಾಗ ಕೆಲವರು ಅಪಹಾಸ್ಯ ಮಾಡಿದರು; ಬೇರೆ ಕೆಲವರು--ನೀನು ಈ ವಿಷಯದಲ್ಲಿ ಹೇಳುವದನ್ನು ನಾವು ಇನ್ನೊಂದು ಸಾರಿ ಕೇಳುತ್ತೇವೆ ಅಂದರು.
- Hosea 13:14 ಹೋಶೇಯ 13:14ನಾನು ಸಮಾಧಿಯ ಶಕ್ತಿಯಿಂದ ಅವರನ್ನು ಈಡು ಕೊಟ್ಟು ವಿಮೋಚಿಸುವೆನು; ಮರಣದಿಂದ ಅವರನ್ನು ಬಿಡಿಸುವೆನು. ಓ ಮರಣವೇ, ನಾನು ನಿನ್ನ ಬಾಧೆಗ ಳಾಗಿರುವೆನು; ಓ ಸಮಾಧಿಯೇ, ನಾನು ನಿನ್ನ ನಾಶನ ವಾಗಿದ್ದೇನೆ; ಪಶ್ಚಾತ್ತಾಪವು ನನ್ನ ಕಣ್ಣುಗಳಿಂದ ಮರೆ ಯಾಗಿದೆ.
- Luke 14:14 ಲೂಕನು 14:14ಆಗ ಅವರು ನಿನಗೆ ಪ್ರತ್ಯುಪಕಾರ ಮಾಡುವದಕ್ಕೆ ಆಗದಿರುವ ದರಿಂದ ನೀನು ಧನ್ಯನಾಗುವಿ. ಯಾಕಂದರೆ ನೀತಿವಂತರ ಪುನರುತ್ಥಾನದಲ್ಲಿ ನಿನಗೆ ಪ್ರತ್ಯುಪಕಾರವಾಗುವದು.
- Psalm 17:15 ಕೀರ್ತನೆಗಳು 17:15ನಾನಾದರೋ ನೀತಿಯಲ್ಲಿ ನಿನ್ನ ಮುಖವನ್ನು ದೃಷ್ಟಿಸುವೆನು; ನಾನು ಎಚ್ಚರವಾದಾಗ ನಿನ್ನ ಹೋಲಿಕೆಯೊಂದಿಗೆ ತೃಪ್ತಿಹೊಂದುವೆನು.
- Hosea 6:2 ಹೋಶೇಯ 6:2ಆತನು ಎರಡು ದಿನಗಳಾದ ಮೇಲೆ ನಮ್ಮನ್ನು ಪುನರ್ಜೀವಿಸ ಮಾಡುವನು; ಮೂರನೆಯ ದಿನದಲ್ಲಿ ಆತನೇ ನಮ್ಮನ್ನು ಎಬ್ಬಿಸುವನು; ನಾವು ಆತನ ದೃಷ್ಟಿಯಲ್ಲಿ ಜೀವಿಸುವೆವು.
- Isaiah 25:8 ಯೆಶಾಯ 25:8ಆತನು ಮರಣವನ್ನು ಜಯದಲ್ಲಿ ನುಂಗಿಬಿಡುವನು. ಕರ್ತನಾದ ದೇವರು ಎಲ್ಲಾ ಮುಖ ಗಳಲ್ಲಿರುವ ಕಣ್ಣೀರನ್ನೂ ಒರಸಿಬಿಡುವನು. ತನ್ನ ಜನರ ನಿಂದೆಯನ್ನೂ ಭೂಮಂಡಲದಿಂದಲೇ ತೆಗೆದುಹಾಕು ವನು, ಕರ್ತನೇ ಇದನ್ನು ನುಡಿದಿದ್ದಾನೆ.
- Psalm 49:14–15 ಕೀರ್ತನೆಗಳು 49:14–15ಅವರು ಕುರಿ ಗಳಂತೆ ಸಮಾಧಿಯಲ್ಲಿ ಹಾಕಲ್ಪಡುತ್ತಾರೆ; ಮರಣವು ಅವರನ್ನು ತಿನ್ನುತ್ತದೆ; ಯಥಾರ್ಥರು ಬೆಳಿಗ್ಗೆ ಅವರ ಮೇಲೆ ಆಳುವರು; ಅವರಿಗೆ ನಿವಾಸವಿರದ ಹಾಗೆ ಸಮಾಧಿಯಲ್ಲಿ ಅವರ ರೂಪವು ಕ್ಷಯಿಸುವದು. ಆದರೆ ದೇವರು ನನ್ನ ಪ್ರಾಣವನ್ನು ಸಮಾಧಿಯ ಬಲದಿಂದ ವಿಮೋಚನೆ ಮಾಡುವನು, ಆತನು ನನ್ನನ್ನು ಅಂಗೀಕರಿಸುವನು. ಸೆಲಾ.
- Ezekiel 37:1–10 ಯೆಹೆಜ್ಕೇಲನು 37:1–10ಕರ್ತನ ಕೈ ನನ್ನ ಮೇಲೆ ಇತ್ತು; ಅದು ಕರ್ತನ ಆತ್ಮದ ಮೂಲಕ ನನ್ನನ್ನು ಹೊರಗೆ ತಂದು ಪೂರ್ತಿಯಾಗಿ ಎಲುಬುಗಳು ತುಂಬಿರುವ ಕಣಿವೆಗಳ ಮಧ್ಯ ತಳದಲ್ಲಿ ನನ್ನನ್ನು ಬಿಟ್ಟಿತು. ಅವುಗಳ ಸುತ್ತಲೂ ನನ್ನನ್ನು ಹಾದುಹೋಗುವಂತೆ ಮಾಡಿತು; ಇಗೋ, ತೆರೆದಿರುವ ಆ ಕಣಿವೆಯಲ್ಲಿ ಒಣಗಿಹೋದ ಎಲುಬುಗಳು ಲೆಕ್ಕವಿಲ್ಲದಷ್ಟು ಬಿದ್ದಿದ್ದವು. ಆತನು ನನಗೆ ಹೇಳಿದ್ದು--ಮನಷ್ಯಪುತ್ರನೇ, ಈ ಎಲುಬುಗಳು ಜೀವಿಸುವವೇ ಎಂದಾಗ ನಾನು ಉತ್ತರವಾಗಿ, ಓ ದೇವರಾದ ಕರ್ತನೇ, ನೀನೇ ತಿಳಿದಿರುವೆ ಎಂದೆನು. ಆತನು ನನಗೆ ಹೇಳಿದ್ದೇನಂದರೆ--ಈ ಎಲುಬುಗಳ ಮೇಲೆ ಪ್ರವಾದಿಸು ಮತ್ತು ಅವುಗಳಿಗೆ ಹೇಳು--ಓ ಒಣಗಿದ ಎಲುಬುಗಳೇ, ನೀವು ಕರ್ತನ ವಾಕ್ಯವನ್ನು ಕೇಳಿರಿ. ದೇವರಾದ ಕರ್ತನು ಈ ಎಲುಬುಗಳಿಗೆ ಹೀಗೆ ಹೇಳುತ್ತಾನೆ--ಇಗೋ, ನಾನು ನಿಮ್ಮಲ್ಲಿ ಉಸಿರನ್ನು ಬರಮಾಡುತ್ತೇನೆ; ನೀವು ಬದುಕುವಿರಿ; ನಾನು ನಿಮ್ಮ ಮೇಲೆ ನರಗಳನ್ನು ಹಬ್ಬಿಸಿ ಮಾಂಸವನ್ನು ಹರಡಿ ಚರ್ಮದಿಂದ ಮುಚ್ಚಿ ನಿಮ್ಮೊಳಗೆ ಉಸಿರನ್ನು ಕೊಟ್ಟು ಬದುಕಿಸುತ್ತೇನೆ; ನಾನೇ ಕರ್ತನೆಂದು ನೀವು ತಿಳಿ ಯುವಿರಿ. ಹಾಗೆಯೇ ನಾನು ಆಜ್ಞೆಯನ್ನು ಪಡೆದ ಪ್ರಕಾರ ಪ್ರವಾದಿಸಿದೆನು; ನಾನು ಪ್ರವಾದಿಸುವಾಗ ಅಲ್ಲಿ ಒಂದು ಶಬ್ದವಾಯಿತು; ಇಗೋ, ಅದು ಕದ ಲುತ್ತಿತ್ತು, ಎಲುಬುಗಳೆಲ್ಲಾ ಒಂದು ಗೂಡಿ ಎಲುಬಿಗೆ ಎಲುಬು ಸೇರಿಕೊಂಡಿತು. ನಾನು ನೋಡಿದಾಗ ಇಗೋ, ನರಗಳು ಹಬ್ಬಿಕೊಂಡವು ಮಾಂಸವು ಹರಡಿಕೊಂಡಿತು, ಅವುಗಳ ಮೇಲೆ ಚರ್ಮವು ಮುಚ್ಚಿ ಕೊಂಡಿತು. ಆದರೆ ಅವುಗಳಿಗೆ ಉಸಿರೇ ಇರಲಿಲ್ಲ. ಆಮೇಲೆ ಆತನು ನನಗೆ ಹೇಳಿದ್ದೇನಂದರೆ--ಪ್ರವಾ ದಿಸು, ಉಸಿರಿನ ಕಡೆಗೆ ಪ್ರವಾದಿಸು, ಮನುಷ್ಯ ಪುತ್ರನೇ, ಆ ಉಸಿರಿಗೆ ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಓ ಉಸಿರೇ, ನಾಲ್ಕು ದಿಕ್ಕುಗಳಿಂದ ಬಂದು ಈ ಹತ ಶರೀರಗಳು ಬದುಕುವಂತೆ ಅದರ ಮೇಲೆ ಸುಳಿ, ನಾನು ಆತನ ಆಜ್ಞೆಯ ಹಾಗೆಯೇ ಪ್ರವಾದಿಸಿದೆನು; ಅವುಗಳಲ್ಲಿ ಉಸಿರು ಬಂತು; ಅವುಗಳೆಲ್ಲಾ ಕಾಲೂರಿ ನಿಂತು ಅತ್ಯಂತ ಮಹಾ ಸೈನ್ಯ ವಾದವು.