John · chapter 12 · verse 20
John 12:20 in Kannada
ಹಬ್ಬದಲ್ಲಿ ಆರಾಧಿಸುವದಕ್ಕೆ ಬಂದವರಲ್ಲಿ ಕೆಲ ವರು ಗ್ರೀಕರಿದ್ದರು.
Habbadalli aaraadhisuvadakke bandavaralli kela varu greekariddaru.
John 12:20 in English
- King James Version (KJV)
- And there were certain Greeks among them that came up to worship at the feast:
- World English Bible (WEB)
- Now there were certain Greeks among those who went up to worship at the feast.
- American Standard Version (ASV)
- Now there were certain Greeks among those that went up to worship at the feast:
- Bible in Basic English (BBE)
- Now there were some Greeks among the people who had come up to give worship at the feast:
- Darby Translation (DBY)
- And there were certain Greeks among those who came up that they might worship in the feast;
- Webster's Bible (WBS)
- And there were certain Greeks among them, that came to worship at the feast.
- Young's Literal Translation (YLT)
- And there were certain Greeks out of those coming up that they may worship in the feast,
Read in context
- 18ಆತನು ಈ ಅದ್ಭುತಕಾರ್ಯವನ್ನು ಮಾಡಿದನೆಂದು ಕೇಳಿದ ಜನರು ಸಹ ಆತನನ್ನು ಎದುರುಗೊಂಡರು.
- 19ಆದದರಿಂದ ಫರಿಸಾಯರು ತಮ್ಮತಮ್ಮೊಳಗೆ--ನಿಮ್ಮ ಯತ್ನವೇನೂ ಸಾಗಲಿಲ್ಲವೆಂದು ನೀವು ತಿಳಿಯುವದಿಲ್ಲವೋ? ಇಗೋ, ಲೋಕವು ಆತನ ಹಿಂದೆ ಹೋಯಿತು ಎಂದು ಅಂದುಕೊಂಡರು.
- 20ಹಬ್ಬದಲ್ಲಿ ಆರಾಧಿಸುವದಕ್ಕೆ ಬಂದವರಲ್ಲಿ ಕೆಲ ವರು ಗ್ರೀಕರಿದ್ದರು.
- 21ಇವರು ಗಲಿಲಾಯ ಬೇತ್ಸಾಯಿದವನಾದ ಫಿಲಿಪ್ಪನ ಬಳಿಗೆ ಬಂದು--ಅಯ್ಯಾ, ನಾವು ಯೇಸುವನ್ನು ನೋಡಬೇಕೆಂದಿದ್ದೇವೆ ಅಂದರು.
- 22ಫಿಲಿಪ್ಪನು ಬಂದು ಅಂದ್ರೆಯನಿಗೆ ಹೇಳಿ ದನು; ಅಂದ್ರೆಯನೂ ಫಿಲಿಪ್ಪನೂ ತಿರಿಗಿ ಯೇಸುವಿಗೆ ಹೇಳಿದರು.
Cross references
- John 7:35 ಯೋಹಾನನು 7:35ಆಗ ಯೆಹೂದ್ಯರು--ನಾವು ಅವನನ್ನು ಕಾಣದ ಹಾಗೆ ಅವನು ಎಲ್ಲಿಗೆ ಹೋಗುವನು? ಅನ್ಯಜನರ ಮಧ್ಯದಲ್ಲಿ ಚದರಿಹೋದವರ ಬಳಿಗೆ ಹೋಗಿ ಅನ್ಯಜನರಿಗೆ ಬೋಧಿಸುವನೋ?
- Acts 17:4 ಅಪೊಸ್ತಲರ ಕೃತ್ಯಗಳು 17:4ಆಗ ಅವರಲ್ಲಿ ಕೆಲವರೂ ಭಕ್ತ ರಾಗಿದ್ದ ಗ್ರೀಕರ ದೊಡ್ಡದೊಂದು ಸಮೂಹವೂ ಪ್ರಮುಖ ಸ್ತ್ರೀಯರಲ್ಲಿ ಅನೇಕರೂ ನಂಬಿ ಪೌಲ ಸೀಲರನ್ನು ಸೇರಿಸಿಕೊಂಡರು.
- Isaiah 11:10 ಯೆಶಾಯ 11:10ಆ ದಿನದಲ್ಲಿ ಹುಡುಕುವ ಅನ್ಯಜನರಿಗೆ ಇಷ ಯನ ಬೇರು ಒಂದು ಗುರುತಾಗಿ ನಿಲ್ಲುವದು; ಅವನ ವಿಶ್ರಾಂತಿ ವೈಭವವುಳ್ಳದ್ದಾಗಿರುವದು.
- Acts 8:27 ಅಪೊಸ್ತಲರ ಕೃತ್ಯಗಳು 8:27ಅವನು ಎದ್ದು ಹೊರಟು ಹೋಗುತ್ತಿರುವಾಗ ಇಗೋ, ಐಥಿಯೋಪ್ಯದವರ ರಾಣಿಯಾಗಿದ್ದ ಕಂದಾಕೆಯ ಕೈಕೆಳಗೆ ದೊಡ್ಡ ಅಧಿಕಾ ರಿಯೂ ಆಕೆಯ ಎಲ್ಲಾ ಖಜಾನೆಯ ಮೇಲ್ವಿಚಾರಕನೂ ಆಗಿದ್ದ ಐಥಿಯೋಪ್ಯದವನಾದ ಒಬ್ಬ ಕಂಚುಕಿಯು ಆರಾಧನೆಗೋಸ್ಕರ ಯೆರೂಸಲೇಮಿಗೆ ಬಂದು
- 1 Kings 8:41–43 1 ಅರಸುಗಳು 8:41–43ಇದಲ್ಲದೆ ನಿನ್ನ ಜನರಾದ ಇಸ್ರಾಯೇಲಿನವ ನಲ್ಲದೆ ನಿನ್ನ ಹೆಸರಿನ ನಿಮಿತ್ತ ದೂರ ದೇಶದಿಂದ ಬಂದ ಪರದೇಶಸ್ಥನನ್ನು ಕುರಿತು ಏನಂದರೆ ಅವರು ನಿನ್ನ ಮಹಾ ಹೆಸರನ್ನೂ ಬಲವಾದ ಕೈಯನ್ನೂ ಚಾಚಿದ ತೋಳನ್ನೂ ಕುರಿತು ಕೇಳುವರು. ಅವನು ಬಂದು ಈ ಮಂದಿರದ ಕಡೆಗೆ ಪ್ರಾರ್ಥನೆ ಮಾಡಿದರೆ ನಿನ್ನ ಜನರಾದ ಇಸ್ರಾಯೇಲ್ಯರ ಹಾಗೆ ಭೂಲೋಕದಲ್ಲಿರುವ ಸಮಸ್ತರು ನಿನಗೆ ಭಯಪಡುವದಕ್ಕಾಗಿ ನಿನ್ನ ಹೆಸರನ್ನು ತಿಳಿಯುವ ಹಾಗೆಯೂ ನಾನು ಕಟ್ಟಿಸಿದ ಈ ಮನೆಯು ನಿನ್ನ ಹೆಸರಿನಿಂದ ಕರೆಯಲ್ಪಟ್ಟಿದೆ ಎಂದು ಅವರು ತಿಳಿಯುವ ಹಾಗೆಯೂ ನಿನ್ನ ನಿವಾಸವಾಗಿರುವ ಪರಲೋಕದಿಂದ ಕೇಳಿ ಪರದೇಶಸ್ಥನು ನಿನಗೆ ಕೂಗಿದ ಪ್ರಕಾರ ಮಾಡು.
- Mark 7:26 ಮಾರ್ಕನು 7:26ಆ ಸ್ತ್ರೀಯು ಸುರೋಪೊಯಿನಿಕ ಜನಾಂ ಗದವಳಾದ ಒಬ್ಬ ಗ್ರೀಕಳು. ಆಕೆಯು ತನ್ನ ಮಗಳನ್ನು ಹಿಡಿದ ದೆವ್ವವನ್ನು ಬಿಡಿಸಬೇಕೆಂದು ಆತನನ್ನು ಬೇಡಿ ಕೊಂಡಳು.
- Galatians 2:3 ಗಲಾತ್ಯದವರಿಗೆ 2:3ನನ್ನ ಜೊತೆಯಲ್ಲಿದ್ದ ತೀತನು ಗ್ರೀಕನಾಗಿದ್ದರೂ ಅವನಿಗೆ ಸುನ್ನತಿಯಾಗಬೇಕೆಂದು ಯಾರೂ ಬಲಾತ್ಕಾರ ಮಾಡ ಲಿಲ್ಲ.
- Isaiah 60:2–14 ಯೆಶಾಯ 60:2–14ಇಗೋ, ಕತ್ತಲೆ ಭೂಮಿಯನ್ನೂ ಗಾಢಾಂಧಕಾರವು ಜನಗಳನ್ನೂ ಮುಚ್ಚುವದು; ಆದರೆ ನಿನ್ನ ಮೇಲೆ ಕರ್ತನು ಉದಯಿ ಸುವನು; ಆತನ ಮಹಿಮೆಯು ನಿನ್ನ ಮೇಲೆ ಕಾಣ ಬರುವದು. ಅನ್ಯಜನಾಂಗಗಳು ನಿನ್ನ ಪ್ರಕಾಶಕ್ಕೂ ಅರಸರು ನಿನ್ನ ಉದಯದ ಕಾಂತಿಗೂ ಬರುವರು. ಸುತ್ತಲೂ ನಿನ್ನ ಕಣ್ಣುಗಳನ್ನೆತ್ತಿ ನೋಡು, ಅವರೆಲ್ಲರೂ ಕೂಡಿಕೊಂಡು ನಿನ್ನ ಬಳಿಗೆ ಬರುತ್ತಾರೆ; ನಿನ್ನ ಕುಮಾ ರರು ದೂರದಿಂದ ಬರುವರು ನಿನ್ನ ಕುಮಾರ್ತೆಯರು ನಿನ್ನ ಪಕ್ಕೆಯಲ್ಲಿ ಪೋಷಣೆ ಹೊಂದುವರು. ಆಗ ನೀನು ಅದನ್ನು ನೋಡುವಿ, ನೀವು ಗುಂಪು ಗುಂಪಾಗಿ ಹೋಗುವಿರಿ. ನಿನ್ನ ಹೃದಯವು ಹೆದರಿ ವಿಶಾಲವಾಗು ವದು; ಸಮುದ್ರದ (ವ್ಯಾಪಾರದ) ಸಮೃದ್ಧಿಯು ನಿನ್ನ ಕಡೆಗೆ ತಿರುಗಿಕೊಳ್ಳುವದು; ಅನ್ಯಜನಾಂಗದ ಸೇನಾ ಬಲವು ನಿನ್ನ ಬಳಿಗೆ ಬರುವದು. ಒಂಟೆಗಳ ಸಮೂಹವು ನಿನ್ನನ್ನು ಮುಚ್ಚುವದು; ಮಿದ್ಯಾನಿನ, ಏಫದ ವೇಗವುಳ್ಳ ಒಂಟೆಗಳು ಅವೆಲ್ಲಾ ಶೇಬದಿಂದಲೂ ಬರುವವು; ಅವು ಬಂಗಾರವನ್ನೂ ಧೂಪವನ್ನೂ ತರುವವು; ಅವು ಕರ್ತನ ಸ್ತೋತ್ರ ಗಳನ್ನು ಸಾರುವವು. ಕೇದಾರಿನ ಮಂದೆಗಳೆಲ್ಲಾ ನಿನ್ನ ಬಳಿಗೆ ಕೂಡಿಸಲ್ಪಡುವವು; ನೆಬಾಯೋತಿನ ಟಗರು ಗಳು ನಿನ್ನನ್ನು ಸೇವಿಸುವವು; ಅವು ನನ್ನ ಬಲಿಪೀಠದ ಮೇಲೆ ಅಂಗೀಕಾರವಾಗುವವು, ನಾನು ನನ್ನ ಮಹಿ ಮೆಯ ಆಲಯವನ್ನು ಘನಪಡಿಸುವೆನು. ಮೇಘದಂತೆಯೂ ತಮ್ಮ ಗೂಡುಗಳಿಗೆ ಹೋಗುವ ಪಾರಿವಾಳಗಳಂತೆಯೂ ಹಾರುವ ಇವರು ಯಾರು? ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ, ನನಗೋಸ್ಕರ ದೂರದಿಂದ ನಿನ್ನ ಕುಮಾರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಕರ್ತನ ಹೆಸರಿನ ಬಳಿಗೂ ನಿನ್ನನ್ನು ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವದರಲ್ಲಿ ಮುಂದಾಗುತ್ತಿವೆ. ಇದಲ್ಲದೆ ಅನ್ಯರ ಮಕ್ಕಳು ನಿನ್ನ ಗೋಡೆಗಳನ್ನು ಕಟ್ಟುವರು; ಅವರ ಅರಸರು ಸಹ ನಿನಗೆ ಸೇವೆ ಮಾಡುವರು; ನನ್ನ ರೌದ್ರದಲ್ಲಿ ನಿನ್ನನ್ನು ಹೊಡೆದೆನು; ಆದರೆ ನನ್ನ ಕಟಾಕ್ಷದಲ್ಲಿ ನಿನ್ನನ್ನು ಕರುಣಿಸುವೆನು. ಆದದರಿಂದ ನಿನ್ನ ಬಾಗಿಲುಗಳು ಯಾವಾಗಲೂ ತೆರೆದಿರುವವು; ಅನ್ಯಜನಾಂಗಗಳ ಆಸ್ತಿ ನಿನ್ನ ಬಳಿಗೆ ತರಲ್ಪಟ್ಟು, ಅವರ ಅರಸರು ಸಹ ನಡಿಸಲ್ಪಡುವದ ಕ್ಕೋಸ್ಕರವೇ ಹಗಲು ಇಲ್ಲವೆ ರಾತ್ರಿ ಅವು ಮುಚ್ಚಲ್ಪ ಡುವದಿಲ್ಲ. ನಿನ್ನನ್ನು ಸೇವಿಸದ ಜನಾಂಗವೂ ರಾಜ್ಯವೂ ನಾಶವಾಗುವದು; ಹೌದು, ಆ ಜನಾಂಗ ಗಳು ಸಂಪೂರ್ಣವಾಗಿ ಹಾಳಾಗುವವು. ಲೆಬನೋ ನಿನ ವೈಭವವು ಸುರಗಿ, ದಿಂಡುಗ, ಹೊನ್ನೆ ಮರಗಳು ಕೂಡ ನನ್ನ ಪರಿಶುದ್ಧ ಸ್ಥಳವನ್ನು ಶೃಂಗರಿಸುವದಕ್ಕೆ ನಿನ್ನ ಬಳಿಗೆ ಬರುವವು; ನನ್ನ ಪಾದಗಳ ಸ್ಥಳವನ್ನು ನಾನು ಗೌರವವುಳ್ಳದ್ದಾಗಿ ಮಾಡುವೆನು. ಆಗ ನಿನ್ನನ್ನು ಕುಗ್ಗಿಸಿದವರ ಮಕ್ಕಳು ಬೊಗ್ಗಿಕೊಂಡು ನಿನ್ನ ಬಳಿಗೆ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರು ನಿನ್ನ ಅಂಗಾಲುಗಳಿಗೆ ಸರಿಯಾಗಿ ಅಡ್ಡಬಿದ್ದು ನಿನ್ನನ್ನು ಕರ್ತನ ಪಟ್ಟಣವೆಂದು ಇಸ್ರಾಯೇಲಿನ ಪರಿಶುದ್ಧನ ಚೀಯೋ ನೆಂದೂ ಕರೆಯುವರು.
- Acts 16:1 ಅಪೊಸ್ತಲರ ಕೃತ್ಯಗಳು 16:1ತರುವಾಯ ಅವನು ದೆರ್ಬೆ ಮತ್ತು ಲುಸ್ತ್ರಕ್ಕೆ ಬಂದನು; ಅಲ್ಲಿ ಇಗೋ, ನಂಬಿಕೊಂಡಿದ್ದ ಯೆಹೂದ್ಯ ಸ್ತ್ರೀಯ ಮಗನಾದ ತಿಮೊಥೆಯನೆಂಬ ಹೆಸರುಳ್ಳ ಒಬ್ಬ ಶಿಷ್ಯನಿದ್ದನು. ಅವನ ತಂದೆಯು ಗ್ರೀಕನು.
- Acts 21:28 ಅಪೊಸ್ತಲರ ಕೃತ್ಯಗಳು 21:28ಇಸ್ರಾಯೇಲ್ ಜನರೇ, ಸಹಾಯ ಮಾಡಿರಿ; ಎಲ್ಲಾ ಕಡೆಯಲ್ಲಿ ಜನರಿಗೂ ಈ ನ್ಯಾಯ ಪ್ರಮಾಣಕ್ಕೂ ಈ ಸ್ಥಳಕ್ಕೂ ವಿರೋಧವಾಗಿ ಎಲ್ಲರಿಗೂ ಬೋಧಿಸುತ್ತಿದ್ದವನು ಈ ಮನುಷ್ಯನೇ; ಇದಲ್ಲದೆ ಗ್ರೀಕರನ್ನು ಸಹ ಈ ದೇವಾಲಯದೊಳಗೆ ಕರೆದು ಕೊಂಡು ಬಂದು ಈ ಪರಿಶುದ್ಧಸ್ಥಳವನ್ನು ಹೊಲೆ ಮಾಡಿದ್ದಾನೆ ಎಂದು ಕೂಗಿ
- Acts 14:1 ಅಪೊಸ್ತಲರ ಕೃತ್ಯಗಳು 14:1ಇದಾದ ಮೇಲೆ ಇಕೋನ್ಯದಲ್ಲಿ ಅವರಿ ಬ್ಬರೂ ಯೆಹೂದ್ಯರ ಸಭಾಮಂದಿರ ದೊಳಕ್ಕೆ ಹೋಗಿ ಯೆಹೂದ್ಯರಲ್ಲಿಯೂ ಗ್ರೀಕರಲ್ಲಿಯೂ ದೊಡ್ಡ ಜನಸಮೂಹವು ನಂಬುವಂತೆ ಮಾತನಾಡಿ ದರು.
- Acts 20:21 ಅಪೊಸ್ತಲರ ಕೃತ್ಯಗಳು 20:21ಯೆಹೂ ದ್ಯರೂ ಗ್ರೀಕರೂ ದೇವರ ಕಡೆಗೆ ಮಾನಸಾಂತರಪಟ್ಟು ನಮ್ಮ ಕರ್ತನಾದ ಯೇಸುಕ್ರಿಸ್ತನ ಮೇಲೆ ನಂಬಿಕೆಯಿಡಬೇಕೆಂದು ಸಾಕ್ಷೀಕರಿಸುವವನಾಗಿದ್ದೆನು.