John · chapter 12 · verse 6
John 12:6 in Kannada
ಅವನು ಬಡವರಿಗೋಸ್ಕರ ಚಿಂತಿಸಿದ್ದಕ್ಕಾಗಿ ಅಲ್ಲ, ಅವನು ಕಳ್ಳನಾಗಿದ್ದು ಹಣದ ಚೀಲವನ್ನು ಇಟ್ಟು ಕೊಂಡು ಅದರಲ್ಲಿ ಹಾಕಿದ್ದನ್ನು ತಕ್ಕೊಳ್ಳುವವನಾಗಿದ್ದ ದರಿಂದಲೇ ಇದನ್ನು ಹೇಳಿದನು.
Avanu badavarigoskara chintisiddakkaagi alla, avanu kallanaagiddu hanada cheelavannu ittu kondu adaralli haakiddannu takkolluvavanaagidda darindale idannu helidanu.
John 12:6 in English
- King James Version (KJV)
- This he said, not that he cared for the poor; but because he was a thief, and had the bag, and bare what was put therein.
- World English Bible (WEB)
- Now he said this, not because he cared for the poor, but because he was a thief, and having the money box, used to steal what was put into it.
- American Standard Version (ASV)
- Now this he said, not because he cared for the poor; but because he was a thief, and having the bag took away what was put therein.
- Bible in Basic English (BBE)
- (He said this, not because he had any love for the poor; but because he was a thief, and, having the money-bag, took for himself what was put into it.)
- Darby Translation (DBY)
- But he said this, not that he cared for the poor, but because he was a thief and had the bag, and carried what was put into [it].
- Webster's Bible (WBS)
- This he said, not that he cared for the poor; but because he was a thief, and had the bag, and bore what was put in it.
- Young's Literal Translation (YLT)
- and he said this, not because he was caring for the poor, but because he was a thief, and had the bag, and what things were put in he was carrying.
Read in context
- 4ಆಗ ಆತನ ಶಿಷ್ಯರಲ್ಲಿ ಒಬ್ಬನು ಅಂದರೆ ಆತನನ್ನು ಹಿಡಿದು ಕೊಡುವದಕ್ಕಿದ್ದ ಸೀಮೋನನ ಮಗನಾದ ಯೂದ ಇಸ್ಕರಿಯೋತನು--
- 5ಈ ತೈಲವನ್ನು ಯಾಕೆ ಮುನ್ನೂರು ನಾಣ್ಯಗಳಿಗೆ ಮಾರಿ ಬಡವರಿಗೆ ಕೊಡಲಿಲ್ಲ ಅಂದನು.
- 6ಅವನು ಬಡವರಿಗೋಸ್ಕರ ಚಿಂತಿಸಿದ್ದಕ್ಕಾಗಿ ಅಲ್ಲ, ಅವನು ಕಳ್ಳನಾಗಿದ್ದು ಹಣದ ಚೀಲವನ್ನು ಇಟ್ಟು ಕೊಂಡು ಅದರಲ್ಲಿ ಹಾಕಿದ್ದನ್ನು ತಕ್ಕೊಳ್ಳುವವನಾಗಿದ್ದ ದರಿಂದಲೇ ಇದನ್ನು ಹೇಳಿದನು.
- 7ಆಗ ಯೇಸು--ಈಕೆಯನ್ನು ಬಿಟ್ಟುಬಿಡಿರಿ; ನನ್ನನ್ನು ಹೂಣಿಡುವ ದಿವಸಕ್ಕಾಗಿ ಈಕೆಯು ಇದನ್ನು ಇಟ್ಟುಕೊಂಡಿದ್ದಾಳೆ.
- 8ಯಾಕಂದರೆ ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ; ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವದಿಲ್ಲ ಅಂದನು.
Cross references
- John 13:29 ಯೋಹಾನನು 13:29ಯೂದನು ಹಣದ ಚೀಲವನ್ನು ಇಟ್ಟುಕೊಂಡ ದ್ದರಿಂದ ಯೇಸು ಅವನಿಗೆ--ಹಬ್ಬಕ್ಕೆ ನಮಗೆ ಬೇಕಾದವು ಗಳನ್ನು ಕೊಂಡುಕೋ ಎಂತಲೋ ಇಲ್ಲವೆ ಬಡವರಿಗೆ ಏನಾದರೂ ಕೊಡು ಎಂತಲೋ ಅವನಿಗೆ ಆತನು ಹೇಳಿದನೆಂದು ಅವರಲ್ಲಿ ಕೆಲವರು ನೆನಸಿದರು.
- Psalm 50:16–20 ಕೀರ್ತನೆಗಳು 50:16–20ಆದರೆ ದುಷ್ಟನಿಗೆ ದೇವರು ಹೇಳುವದೇನಂದರೆ --ನನ್ನ ನಿಯಮಗಳನ್ನು ಪ್ರಕಟಿಸುವದು ನಿನಗೇನು? ಇಲ್ಲವೆ ನನ್ನ ಒಡಂಬಡಿಕೆಯನ್ನು ನಿನ್ನ ಬಾಯಲ್ಲಿ ಉಚ್ಚರಿಸುವದೇಕೆ? ನೀನು ಶಿಕ್ಷಣವನ್ನು ಹಗೆಮಾಡಿ ನನ್ನ ವಾಕ್ಯಗಳನ್ನು ನಿನ್ನ ಹಿಂದೆ ಹಾಕುತ್ತೀಯಲ್ಲಾ. ಕಳ್ಳನನ್ನು ನೋಡಿದರೆ ಅವನೊಂದಿಗೆ ಒಪ್ಪುತ್ತೀ; ಜಾರರ ಸಂಗಡ ನಿನ್ನ ಪಾಲು ಇದೆ. ನೀನು ನಿನ್ನ ಬಾಯನ್ನು ಕೇಡಿಗೆ ಒಪ್ಪಿಸುತ್ತೀ; ನಿನ್ನ ನಾಲಿಗೆಯು ಮೋಸವನ್ನು ಜೋಡಿಸುತ್ತದೆ. ನೀನು ಕೂತು ಕೊಂಡು ನಿನ್ನ ಸಹೋದರನಿಗೆ ವಿರೋಧವಾಗಿ ನುಡಿ ಯುತ್ತೀ; ನಿನ್ನ ಸ್ವಂತ ಒಡಹುಟ್ಟಿದವನ ಮೇಲೆ ಚಾಡಿ ಹೇಳುತ್ತೀ.
- James 2:6 ಯಾಕೋಬನು 2:6ನೀವಾದರೋ ಬಡವರನ್ನು ಅವಮಾನಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ ನ್ಯಾಯಸ್ಥಾನಗಳ ಮುಂದೆ ಎಳೆದು ಕೊಂಡು ಹೋಗುವವರು ಐಶ್ವರ್ಯವಂತರಲ್ಲವೋ?
- James 2:2 ಯಾಕೋಬನು 2:2ಹೇಗಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರವನ್ನೂ ಅಂದವಾದ ವಸ್ತ್ರವನ್ನೂ ಹಾಕಿಕೊಂಡು ನಿಮ್ಮ ಸಭೆ ಯೊಳಗೆ ಬರಲು ಮತ್ತು ಒಬ್ಬ ಬಡ ಮನುಷ್ಯನು ಸಹ ಹೀನವಾದ ಬಟ್ಟೆ ಹಾಕಿಕೊಂಡು ಬರಲು
- 2 Kings 5:20–27 2 ಅರಸುಗಳು 5:20–27ಆದರೆ ದೇವರ ಮನುಷ್ಯನಾದ ಎಲೀಷನ ಸೇವಕ ನಾಗಿರುವ ಗೇಹಜಿಯು--ಇಗೋ, ನನ್ನ ಯಜಮಾ ನನು ಈ ಅರಾಮ್ಯನಾದ ನಾಮಾನನು ತಕ್ಕೊಂಡು ಬಂದದ್ದನ್ನು ಅವನ ಕೈಯಿಂದ ತಕ್ಕೊಳ್ಳದೆ ಸುಮ್ಮನೆ ಕಳುಹಿಸಿದ್ದಾನೆ. ಆದರೆ ಕರ್ತನ ಜೀವದಾಣೆ, ನಾನು ಅವನ ಹಿಂದೆ ಓಡಿಹೋಗಿ ಅವನ ಕೈಯಿಂದ ಏನಾ ದರೂ ತಕ್ಕೊಳ್ಳುವೆನು ಅಂದುಕೊಂಡನು. ಹಾಗೆಯೇ ಗೇಹಜಿಯು ನಾಮಾನನ ಹಿಂದೆ ಹೋದನು. ನಾಮಾನನು ತನ್ನ ಹಿಂದೆ ಓಡಿ ಬರುವವನನ್ನು ನೋಡಿ ದಾಗ ಅವನನ್ನು ಎದುರುಗೊಳ್ಳಲು ರಥದಿಂದ ಇಳಿದು ಅವನಿಗೆ--ಎಲ್ಲಾ ಕ್ಷೇಮವೋ ಅಂದನು. ಅವನುಕ್ಷೇಮ; ಇಗೋ, ಪ್ರವಾದಿಗಳ ಮಕ್ಕಳಲ್ಲಿ ಇಬ್ಬರು ಯೌವನಸ್ಥರು ಎಫ್ರಾಯಾಮ್ ಬೆಟ್ಟದಿಂದ ಈಗಲೇ ನನ್ನ ಬಳಿಗೆ ಬಂದಿದ್ದಾರೆ; ನೀನು ದಯಮಾಡಿ ಅವರಿಗೆ ಒಂದು ತಲಾಂತು ಬೆಳ್ಳಿಯನ್ನೂ ಎರಡು ದುಸ್ತು ಬಟ್ಟೆ ಗಳನ್ನೂ ಕೊಡಬೇಕೆಂದು ನಿನಗೆ ಹೇಳು ಎಂದು ನನ್ನ ಯಜಮಾನನು ಕಳುಹಿಸಿದ್ದಾನೆ ಅಂದನು. ಆಗ ನಾಮಾನನು--ನೀನು ದಯಮಾಡಿ ಎರಡು ತಲಾಂತು ಗಳನ್ನು ತಕ್ಕೋ ಎಂದು ಹೇಳಿ ಅವನನ್ನು ಬಲವಂತ ಮಾಡಿದನು. ಹಾಗೆಯೇ ಎರಡು ತಲಾಂತು ಬೆಳ್ಳಿಯನ್ನು ಎರಡು ಚೀಲಗಳಲ್ಲಿ ಕಟ್ಟಿಸಿ ಅದರ ಸಂಗಡ ಎರಡು ದುಸ್ತು ಬಟ್ಟೆಗಳನ್ನು ಕೊಟ್ಟು ತನ್ನ ಸೇವಕರಲ್ಲಿ ಇಬ್ಬರ ಮೇಲೆ ಹೊರಿಸಿದನು; ಅವರು ಇವನ ಮುಂದೆ ಹೊತ್ತುಕೊಂಡು ಹೋದರು. ಅವನು ದುರ್ಗಕ್ಕೆ ಬಂದು ಅವುಗಳನ್ನು ಅವರ ಕೈಯಿಂದ ತಕ್ಕೊಂಡು ಮನೆಯಲ್ಲಿಟ್ಟು ಆ ಮನುಷ್ಯರನ್ನು ಕಳುಹಿಸಿಬಿಟ್ಟದ್ದರಿಂದ ಅವರು ಹೋದರು. ಆಗ ಇವನು ಒಳಗೆ ಪ್ರವೇಶಿಸಿ ತನ್ನ ಯಜಮಾನನ ಮುಂದೆ ನಿಂತನು. ಎಲೀಷನು ಅವನಿಗೆ--ಗೇಹಜಿಯೇ, ಎಲ್ಲಿಂದ ಬಂದಿ ಅಂದನು. ಅದಕ್ಕವನು--ನಿನ್ನ ಸೇವಕನು ಎಲ್ಲಿಗೂ ಹೋಗಲಿಲ್ಲ ಅಂದನು. ಆಗ ಅವನು ಇವನಿಗೆ--ಆ ಮನುಷ್ಯನು ನಿನ್ನನ್ನು ಎದುರುಗೊಳ್ಳಲು ತನ್ನ ರಥದಿಂದ ಇಳಿದು ನಿನ್ನ ಬಳಿಗೆ ಬಂದಾಗ ನನ್ನ ಹೃದಯವು ನಿನ್ನ ಸಂಗಡ ಹೋಗಲಿಲ್ಲವೋ? ದ್ರವ್ಯವನ್ನೂ ವಸ್ತ್ರಗಳನ್ನೂ ಆಲಿದ್ ತೋಪುಗಳನ್ನೂ ದ್ರಾಕ್ಷೆಯ ತೋಟಗಳನ್ನೂ ಕುರಿ ದನಗಳನ್ನೂ ದಾಸದಾಸಿಯರನ್ನೂ ಪಡಕೊಳ್ಳುವದಕ್ಕೆ ಇದು ಸಮಯವೋ?ಆದದರಿಂದ ನಾಮಾನನ ಕುಷ್ಠರೋಗವು ನಿನಗೂ ನಿನ್ನ ಸಂತಾನಕ್ಕೂ ನಿತ್ಯವಾಗಿ ಹತ್ತುವದು ಅಂದನು. ಆಗ ಅವನು ಮಂಜಿನ ಹಾಗೆಯೇ ಕುಷ್ಠರೋಗಿಯಾಗಿ ಅವನ ಸಮ್ಮುಖದಿಂದ ಹೊರಟುಹೋದನು. ಆದದರಿಂದ ನಾಮಾನನ ಕುಷ್ಠರೋಗವು ನಿನಗೂ ನಿನ್ನ ಸಂತಾನಕ್ಕೂ ನಿತ್ಯವಾಗಿ ಹತ್ತುವದು ಅಂದನು. ಆಗ ಅವನು ಮಂಜಿನ ಹಾಗೆಯೇ ಕುಷ್ಠರೋಗಿಯಾಗಿ ಅವನ ಸಮ್ಮುಖದಿಂದ ಹೊರಟುಹೋದನು.
- 1 Corinthians 6:10 1 ಕೊರಿಂಥದವರಿಗೆ 6:10ಕಳ್ಳರು ಲೋಭಿಗಳು ಕುಡುಕರು ಬೈಯುವವರು ಸುಲು ಕೊಳ್ಳುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.
- Galatians 2:10 ಗಲಾತ್ಯದವರಿಗೆ 2:10ಆದರೆ ನಾವು ಬಡವರನ್ನು ಜ್ಞಾಪಕ ಮಾಡಿ ಕೊಳ್ಳಬೇಕೆಂಬ ಒಂದೇ ವಿಷಯವನ್ನು ಅವರು ಬೇಡಿ ಕೊಂಡರು; ಇದನ್ನು ಮಾಡುವದರಲ್ಲಿ ನಾನೂ ಆಸಕ್ತನಾಗಿದ್ದೆನು.
- Ezekiel 33:31 ಯೆಹೆಜ್ಕೇಲನು 33:31ಬೇರೆ ಜನರು ಬರುವ ಹಾಗೆ ಅವರು ನಿನ್ನ ಬಳಿಗೆ ಬಂದು ಜನರು ಕುಳಿತುಕೊಳ್ಳುವ ಹಾಗೆ ನಿನ್ನ ಮುಂದೆ ಕುಳಿತುಕೊಳ್ಳುವರು; ಅವರು ನಿನ್ನ ವಾಕ್ಯಗಳನ್ನು ಕೇಳುವರು, ಆದರೆ ಅವರು ಅವುಗಳನ್ನು ಮಾಡುವದಿಲ್ಲ. ಅವರು ತಮ್ಮ ಬಾಯಿಂದ ಹೆಚ್ಚಾದ ಪ್ರೀತಿಯನ್ನು ತೋರಿಸುವರು; ಆದರೆ ಅವರ ಹೃದಯವು ಲೋಭತ್ವದ ಕಡೆಗೆ ಹೋಗುವದು.
- Proverbs 29:7 ಜ್ಞಾನೋಕ್ತಿಗಳು 29:7ಬಡವರ ನಿಮಿತ್ತ ನೀತಿವಂತನು ಯೋಚಿಸುತ್ತಾನೆ; ದುಷ್ಟನು ಅದನ್ನು ತಿಳುಕೊಳ್ಳುವಂತೆ ಲಕ್ಷ್ಯಕ್ಕೆ ತರುವ ದಿಲ್ಲ.
- 2 Kings 12:14–15 2 ಅರಸುಗಳು 12:14–15ಹಣದಿಂದ ಮಾಡಿ ಸದೆ ಅವರು ಅದನ್ನು ಕೆಲಸದವರಿಗೆ ಕೊಟ್ಟು ಕರ್ತನ ಮನೆಯನ್ನು ದುರಸ್ತು ಮಾಡಿಸಿದರು. ಇದಲ್ಲದೆ ಅವರು ಕೆಲಸ ಮಾಡುವವರಿಗೆ ಕೊಡುವದಕ್ಕೆ ಯಾರ ಕೈಯಲ್ಲಿ ಒಪ್ಪಿಸಿದ್ದರೋ ಅವರಿಂದ ಲೆಕ್ಕವನ್ನು ತೆಗೆದು ಕೊಳ್ಳಲಿಲ್ಲ.
- Psalm 14:1 ಕೀರ್ತನೆಗಳು 14:1ದೇವರಿಲ್ಲವೆಂದು ಮೂರ್ಖನು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ. ಅವರು ಕೆಟ್ಟುಹೋಗಿ ಅಸಹ್ಯವಾದ ಕೃತ್ಯಗಳನ್ನು ಮಾಡಿದ್ದಾರೆ; ಒಳ್ಳೇದನ್ನು ಮಾಡುವವನು ಯಾವನೂ ಇಲ್ಲ.
- Ezra 8:24–34 ಎಜ್ರನು 8:24–34ನಾನು ಯಾಜಕರ ಪ್ರಮುಖರಲ್ಲಿ ಹನ್ನೆರಡು ಮಂದಿಯಾಗಿರುವ ಶೆರೆಬ್ಯನನ್ನೂ ಹಷಬ್ಯನನ್ನೂ ಅವರ ಸಂಗಡ ಅವರ ಸಹೋದರರಲ್ಲಿ ಹತ್ತು ಮಂದಿಯನ್ನೂ ಪ್ರತ್ಯೇಕಿಸಿ ಅರಸನೂ ಅವನ ಸಲಹೆಗಾರರೂ ಅವನ ಪ್ರಧಾನರೂ ಅಲ್ಲಿದ್ದ ಎಲ್ಲಾ ಇಸ್ರಾಯೇಲ್ಯರೂ ನಮ್ಮ ದೇವರ ಆಲಯಕ್ಕೆ ಅರ್ಪಿಸಿದ ಕಾಣಿಕೆಯಾದ ಬೆಳ್ಳಿಯನ್ನೂ ಬಂಗಾರವನ್ನೂ ಸಾಮಾನುಗಳನ್ನೂ ಅವರಿಗೆ ತೂಗಿ ಕೊಟ್ಟೆನು. ಅವರ ಕೈಯಲ್ಲಿ ನಾನು ಆರುನೂರ ಐವತ್ತು ತಲಾಂತು ಬೆಳ್ಳಿಯನ್ನೂ ನೂರು ತಲಾಂತು ತೂಕವಾದ ಬೆಳ್ಳಿಯ ಪಾತ್ರೆಗ ಳನ್ನೂ ನೂರು ತಲಾಂತು ಬಂಗಾರವನ್ನೂ ಸಾವಿರ ಪವನು ಬೆಲೆಯುಳ್ಳ ಇಪ್ಪತ್ತು ಬಂಗಾರದ ಬಟ್ಟಲು ಗಳನ್ನು ಬಂಗಾರದ ಹಾಗೆ ಅಮೂಲ್ಯವಾದಂಥಾ ಥಳ ಥಳಿಸುವಂಥಾ ಒಳ್ಳೇ ತಾಮ್ರದ ಎರಡು ಪಾತ್ರೆಗ ಳನ್ನೂ ತೂಗಿಕೊಟ್ಟೆನು. ನಾನು ಅವರಿಗೆ--ನೀವು ಕರ್ತನಿಗೆ ಪರಿಶುದ್ಧರಾಗಿದ್ದೀರಿ. ಈ ಸಾಮಾನುಗಳು ಹಾಗೆಯೇ ಪರಿಶುದ್ಧವು. ಈ ಬೆಳ್ಳಿ ಬಂಗಾರವು ನಿಮ್ಮ ತಂದೆಗಳ ದೇವರಾಗಿರುವ ಕರ್ತನಿಗೆ ಉಚಿತಾರ್ಥ ವಾದ ಅರ್ಪಣೆಯಾಗಿದೆ. ನೀವು ಯೆರೂಸಲೇಮಿ ನಲ್ಲಿ ಕರ್ತನ ಆಲಯದ ಕೊಠಡಿಗಳೊಳಗೆ ಯಾಜಕರ ಲೇವಿಯರ ಪ್ರಧಾನರ ಮುಂದೆಯೂ ಇಸ್ರಾಯೇಲ್ ಪಿತೃಗಳ ಪ್ರಧಾನರ ಮುಂದೆಯೂ ತೂಗುವ ವರೆಗೆ ಜಾಗ್ರತೆಯಾಗಿ ಕಾಪಾಡಿರಿ ಅಂದನು. ಹಾಗೆಯೇ ಯಾಜಕರೂ ಲೇವಿಯರೂ ತೂಕದ ಹಾಗೆ ಬೆಳ್ಳಿಯನ್ನೂ ಬಂಗಾರವನ್ನೂ ಪಾತ್ರೆಗಳನ್ನೂ ಯೆರೂಸಲೇಮಿನಲ್ಲಿರುವ ನಮ್ಮ ದೇವರ ಆಲಯಕ್ಕೆ ತೆಗೆದುಕೊಂಡು ಬಂದರು. ನಾವು ಯೆರೂಸಲೇಮಿಗೆ ಹೋದ ಮೊದಲನೇ ತಿಂಗಳ ಹನ್ನೆರಡನೇ ದಿವಸದಲ್ಲಿ ಅಹವಾ ನದಿಯನ್ನು ಬಿಟ್ಟು ಹೊರಟೆವು. ನಮ್ಮ ದೇವರ ಹಸ್ತವು ನಮ್ಮ ಮೇಲೆ ಇದ್ದದ್ದರಿಂದ ಆತನು ಶತ್ರುವಿನ ಕೈಗೂ ಮಾರ್ಗದಲ್ಲಿ ಹೊಂಚಿಕೊಂಡವರ ಕೈಗೂ ನಮ್ಮನ್ನು ತಪ್ಪಿಸಿಬಿಟ್ಟನು. ನಾವು ಯೆರೂಸಲೇಮಿಗೆ ಬಂದು ಅಲ್ಲಿ ಮೂರು ದಿವಸ ವಾಸವಾಗಿದ್ದು ತರುವಾಯ ನಾಲ್ಕನೇ ದಿವಸದಲ್ಲಿ ಆ ಬೆಳ್ಳಿಯೂ ಬಂಗಾರವೂ ಸಾಮಾನುಗಳೂ ನಮ್ಮ ದೇವರ ಮನೆಯಲ್ಲಿ ಯಾಜಕ ನಾಗಿರುವ ಊರೀಯನ ಮಗನಾದ ಮೆರೇಮೋತನ ಕೈಯಿಂದ ತೂಗಿಡಲ್ಪಟ್ಟವು. ಅವನ ಸಂಗಡ ಲೇವಿ ಯರಾದ ಫಿನೇಹಾಸನ ಮಗನಾಗಿರುವ ಎಲ್ಲಾಜಾ ರನೂ ಯೇಷೂವನ ಮಗನಾದ ಯೋಜಾಬಾದನೂ ಬಿನ್ನೂಯ ಮಗನಾದ ನೋವದ್ಯನೂ ಇದ್ದರು. ಆ ತೂಕದಷ್ಟೂ ಅದೇ ಕಾಲದಲ್ಲಿ ಅದರದರ ಲೆಕ್ಕದ ಪ್ರಕಾರವೂ ತೂಕದ ಪ್ರಕಾರವೂ ಬರೆಯಲ್ಪಟ್ಟಿತು.
Original words (Greek)
- This · G5124τοῦτο toûto
- said · G2036ἔπω épō
- not · G3756οὐ ou
- that · G3754ὅτι hóti
- he · G846αὐτός autós
- cared · G3199μέλω mélō
- for · G4012περί perí
- poor · G4434πτωχός ptōchós
- but · G235ἀλλά allá
- because · G3754ὅτι hóti
- was · G2258ἦν ēn
- thief · G2812κλέπτης kléptēs
- and · G2532καί kaí
- had · G2192ἔχω échō
- bag · G1101γλωσσόκομον glōssókomon
- and · G2532καί kaí
- bare · G941βαστάζω bastázō
- therein · G906βάλλω bállō