John · chapter 18 · verse 6
John 18:6 in Kannada
ಆತನು ಅವರಿಗೆ--ನಾನೇ ಆತನು ಎಂದು ಹೇಳಿದ ಕೂಡಲೇ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು.
Aatanu avarige--naane aatanu endu helida koodale avaru hindakke saridu nelakke biddaru.
John 18:6 in English
- King James Version (KJV)
- As soon then as he had said unto them, I am [he], they went backward, and fell to the ground.
- World English Bible (WEB)
- When therefore he said to them, “I am he,” they went backward and fell to the ground.
- American Standard Version (ASV)
- When therefore he said unto them, I am [he], they went backward, and fell to the ground.
- Bible in Basic English (BBE)
- And when he said to them, I am he, they went back, falling to the earth.
- Darby Translation (DBY)
- When therefore he said to them, I am [he], they went away backward and fell to the ground.
- Webster's Bible (WBS)
- As soon then as he had said to them, I am [he] , they went backward, and fell to the ground.
- Young's Literal Translation (YLT)
- when, therefore, he said to them — 'I am [he],' they went away backward, and fell to the ground.
Read in context
- 4ಯೇಸು ತನ್ನ ಮೇಲೆ ಬರುವವುಗಳನ್ನೆಲ್ಲಾ ತಿಳಿದುಕೊಂಡು ಮುಂದಕ್ಕೆ ಹೋಗಿ ಅವರಿಗೆ--ನೀವು ಯಾರನ್ನು ಹುಡುಕುತ್ತೀರಿ ಎಂದು ಕೇಳಲು
- 5ಅವರು ಪ್ರತ್ಯುತ್ತರ ವಾಗಿ ಆತನಿಗೆ--ನಜರೇತಿನ ಯೇಸು ಅಂದರು. ಅದಕ್ಕೆ ಯೇಸು ಅವರಿಗೆ--ನಾನೇ ಆತನು ಅಂದನು. ಮತ್ತು ಆತನನ್ನು ಹಿಡುಕೊಡುವ ಯೂದನು ಸಹ ಅವರೊಂದಿಗೆ ನಿಂತಿದ್ದನು.
- 6ಆತನು ಅವರಿಗೆ--ನಾನೇ ಆತನು ಎಂದು ಹೇಳಿದ ಕೂಡಲೇ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು.
- 7ಆಗ ಆತನು ತಿರಿಗಿ ಅವರಿಗೆ--ನೀವು ಯಾರನ್ನು ಹುಡುಕುತ್ತೀರಿ ಎಂದು ಕೇಳಲು ಅವರು--ನಜರೇತಿನ ಯೇಸುವನ್ನು ಅಂದರು.
- 8ಯೇಸು ಪ್ರತ್ಯುತ್ತರವಾಗಿ--ನಾನೇ ಆತನು ಎಂದು ನಿಮಗೆ ಹೇಳಿದೆನಲ್ಲಾ; ನೀವು ನನ್ನನ್ನೆ ಹುಡುಕು ವುದಾದರೆ ಇವರನ್ನು ಹೋಗಬಿಡಿರಿ ಅಂದನು.
Cross references
- Psalm 27:2 ಕೀರ್ತನೆಗಳು 27:2ನನ್ನ ಮಾಂಸವನ್ನು ತಿನ್ನಬೇಕೆಂದು ದುಷ್ಟರು ಅಂದರೆ ನನ್ನ ವೈರಿಗಳೂ ಶತ್ರುಗಳೂ ಬಂದಾಗ ಅವರು ಎಡವಿಬಿದ್ದರು.
- Psalm 70:2–3 ಕೀರ್ತನೆಗಳು 70:2–3ನನ್ನ ಪ್ರಾಣವನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಿಸುವವರು ಹಿಂದಿರುಗಿ ಗಲಿಬಿಲಿಯಾಗಲಿ. ಆಹಾ, ಆಹಾ ಎಂದು ಹೇಳುವವರು ತಮ್ಮ ನಾಚಿಕೆಯ ಫಲಕ್ಕಾಗಿ ತಿರುಗಲಿ.
- 2 Kings 1:9–15 2 ಅರಸುಗಳು 1:9–15ಆಗ ಅರಸನು ಐವತ್ತು ಮಂದಿಗೆ ಪ್ರಧಾನನನ್ನು ಅವನ ಐವತ್ತು ಮಂದಿಯ ಸಂಗಡ ಇವನ ಬಳಿಗೆ ಕಳುಹಿಸಿದನು. ಅವನು ಇವನ ಬಳಿಗೆ ಹೋದಾಗ ಇಗೋ, ಇವನು ಬೆಟ್ಟದ ತುದಿಯ ಮೇಲೆ ಕುಳಿತಿದ್ದನು. ಆಗ ಅವನು ಎಲೀಯನಿಗೆ--ದೇವರ ಮನುಷ್ಯನೇ, ಇಳಿದು ಬಾ ಎಂದು ಅರಸನು ಹೇಳುತ್ತಾನೆ ಅಂದನು. ಅದಕ್ಕೆ ಎಲೀಯನು ಐವತ್ತು ಮಂದಿಯ ಪ್ರಧಾನನಿಗೆ ಪ್ರತ್ಯುತ್ತರವಾಗಿ--ನಾನು ದೇವರ ಮನುಷ್ಯನಾಗಿದ್ದರೆ ಬೆಂಕಿಯು ಆಕಾಶದಿಂದ ಇಳಿದು ನಿನ್ನನ್ನೂ ನಿನ್ನ ಐವತ್ತು ಮಂದಿಯನ್ನೂ ದಹಿಸಿಬಿಡಲಿ ಅಂದನು. ತಕ್ಷಣವೇ ಬೆಂಕಿಯು ಆಕಾಶದಿಂದ ಇಳಿದು ಅವನನ್ನೂ ಅವನ ಐವತ್ತು ಮಂದಿಯನ್ನೂ ದಹಿಸಿಬಿಟ್ಟಿತು. ತಿರುಗಿ ಅರಸನು ಇವನ ಬಳಿಗೆ ಐವತ್ತು ಮಂದಿಯ ಪ್ರಧಾನ ನನ್ನೂ ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಅವನು ಬಂದು ಇವನಿಗೆ--ದೇವರ ಮನುಷ್ಯನೇ, ಬೇಗ ಇಳಿದು ಬಾ ಎಂದು ಅರಸನು ಹೇಳುತ್ತಾನೆ ಅಂದನು. ಎಲೀಯನು ಅವರಿಗೆ ಪ್ರತ್ಯುತ್ತರವಾಗಿನಾನು ದೇವರ ಮನುಷ್ಯನಾಗಿದ್ದರೆ ಬೆಂಕಿಯು ಆಕಾಶ ದಿಂದ ಇಳಿದು ನಿನ್ನನ್ನೂ ನಿನ್ನ ಐವತ್ತು ಮಂದಿಯನ್ನೂ ದಹಿಸಿಬಿಡಲಿ ಅಂದನು. ತಕ್ಷಣವೇ ದೇವರ ಬೆಂಕಿಯು ಆಕಾಶದಿಂದ ಇಳಿದು ಅವನನ್ನೂ ಅವನ ಐವತ್ತು ಮಂದಿಯನ್ನೂ ಸುಟ್ಟುಬಿಟ್ಟಿತು. ತಿರುಗಿ ಅವನು ಐವತ್ತು ಮಂದಿಯ ಪ್ರಧಾನನಾದ ಮೂರನೆಯವ ನನ್ನೂ ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಈ ಐವತ್ತು ಮಂದಿಗೆ ಪ್ರಧಾನನಾದ ಮೂರನೆಯ ವನು ಬಂದು ಎಲೀಯನ ಮುಂದೆ ತನ್ನ ಮೊಣ ಕಾಲೂರಿಕೊಂಡು ಇವನಿಗೆ--ದೇವರ ಮನುಷ್ಯನೇ, ನೀನು ದಯೆತೋರು, ನನ್ನ ಪ್ರಾಣವೂ ನಿನ್ನ ಸೇವಕ ರಾದ ಈ ಐವತ್ತು ಮಂದಿಯ ಪ್ರಾಣಗಳೂ ನಿನ್ನ ಸಮ್ಮುಖದಲ್ಲಿ ಅಮೂಲ್ಯವಾಗಿರಲಿ. ಇಗೋ, ಬೆಂಕಿಯು ಆಕಾಶದಿಂದ ಇಳಿದು ಮೊದಲಿನ ಇಬ್ಬರು ಪ್ರಧಾನರನ್ನೂ ಅವರ ಐವತ್ತು ಮಂದಿಯನ್ನೂ ದಹಿ ಸಿಬಿಟ್ಟಿತು. ಆದರೆ ಈಗ ನನ್ನ ಪ್ರಾಣವು ನಿನ್ನ ಸಮ್ಮುಖದಲ್ಲಿ ಅಮೂಲ್ಯವಾಗಿರಲಿ ಎಂದು ಹೇಳಿ ಅವ ನನ್ನು ಬೇಡಿಕೊಂಡನು. ಆಗ ಕರ್ತನ ದೂತನು ಎಲೀಯನಿಗೆ--ಅವನ ಸಂಗಡ ಇಳಿದು ಹೋಗು; ಅವನಿಗೆ ಭಯಪಡಬೇಡ ಅಂದನು.
- Acts 4:29–30 ಅಪೊಸ್ತಲರ ಕೃತ್ಯಗಳು 4:29–30ಈಗ ಕರ್ತನೇ, ಅವರ ಬೆದರಿಕೆಗಳನ್ನು ನೋಡು; ನಿನ್ನ ಸೇವಕರು ನಿನ್ನ ವಾಕ್ಯವನ್ನು ಪೂರ್ಣ ಧೈರ್ಯದಿಂದ ಹೇಳುವ ಹಾಗೆ ನಿನ್ನ ಕೈಗಳನ್ನು ಚಾಚುವದರಿಂದ ಸ್ವಸ್ಥತೆಯನ್ನುಂಟು ಮಾಡುವಂತೆಯೂ ಸೂಚಕ ಕಾರ್ಯ ಗಳು ಅದ್ಭುತಕಾರ್ಯಗಳು ನಿನ್ನ ಪವಿತ್ರ ಸೇವಕನಾದ ಯೇಸುವಿನ ಹೆಸರಿನಲ್ಲಿ ನಡೆಯುವಂತೆಯೂ ಅನು ಗ್ರಹಿಸು ಎಂದು ಗಟ್ಟಿಯಾದ ಸ್ವರದಿಂದ ಪ್ರಾರ್ಥಿಸಿ ದರು.
- Luke 9:54–56 ಲೂಕನು 9:54–56ಆತನ ಶಿಷ್ಯರಾದ ಯಾಕೋಬ ಯೋಹಾನರು ಇದನ್ನು ನೋಡಿ--ಕರ್ತನೇ, ಎಲೀಯನು ಮಾಡಿದ ಪ್ರಕಾರ ಅವರನ್ನು ದಹಿಸಿಬಿಡುವಂತೆ ಆಕಾಶದಿಂದ ಬೆಂಕಿ ಬೀಳುವ ಹಾಗೆ ನಾವು ಅಪ್ಪಣೆಕೊಡಲು ನಿನಗೆ ಮನಸ್ಸುಂಟೋ ಎಂದು ಅವರು ಕೇಳಿದರು. ಆದರೆ ಆತನು ತಿರುಗಿಕೊಂಡು ಅವರನ್ನು ಗದರಿಸಿ--ನೀವು ಯಾವ ತರವಾದ ಆತ್ಮದವರಾಗಿದ್ದೀರೆಂದು ನಿಮಗೆ ತಿಳಿಯದು. ಯಾಕಂದರೆ ಮನುಷ್ಯಕುಮಾರನು ಮನುಷ್ಯರ ಪ್ರಾಣಗಳನ್ನು ನಾಶಮಾಡುವದಕ್ಕಾಗಿ ಅಲ್ಲ, ಅವರನ್ನು ರಕ್ಷಿಸುವದಕ್ಕಾಗಿ ಬಂದನು ಎಂದು ಹೇಳಿದನು. ಅವರು ಮತ್ತೊಂದು ಹಳ್ಳಿಗೆ ಹೋದರು.
- Psalm 40:14 ಕೀರ್ತನೆಗಳು 40:14ನನ್ನ ಪ್ರಾಣವನ್ನು ತೆಗೆಯಲು ಅದನ್ನು ಹುಡುಕುವದಕ್ಕೆ ಕೂಡಿಕೊಳ್ಳುವವರೆಲ್ಲರೂ ಆಶಾಭಂಗಪಟ್ಟು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಪಡುವವರು ಹಿಂದಕ್ಕೆ ಅಟ್ಟಲ್ಪಟ್ಟು ಅವ ಮಾನ ಹೊಂದಲಿ.
- Psalm 129:5 ಕೀರ್ತನೆಗಳು 129:5ಚೀಯೋನನ್ನು ಹಗೆಮಾಡುವವರೆಲ್ಲರು ನಾಚಿಕೆಪಟ್ಟು ಹಿಂದಿರುಗಲಿ.