John · chapter 20 · verse 9
John 20:9 in Kannada
ಯಾಕಂದರೆ ಆತನು ಸತ್ತವರೊಳಗಿಂದ ತಿರಿಗಿ ಎದ್ದೇಳುವದು ಅಗತ್ಯವೆಂಬ ಬರಹವು ಅವರಿಗೆ ಇನ್ನೂ ತಿಳಿದಿರಲಿಲ್ಲ.
Yaakandare aatanu sattavarolaginda tirigi eddeluvadu agatyavemba barahavu avarige innoo tilidiralilla.
John 20:9 in English
- King James Version (KJV)
- For as yet they knew not the scripture, that he must rise again from the dead.
- World English Bible (WEB)
- For as yet they didn’t know the Scripture, that he must rise from the dead.
- American Standard Version (ASV)
- For as yet they knew not the scripture, that he must rise again from the dead.
- Bible in Basic English (BBE)
- For at that time they had no knowledge that the Writings said that he would have to come again from the dead.
- Darby Translation (DBY)
- for they had not yet known the scripture, that he must rise from among [the] dead.
- Webster's Bible (WBS)
- For as yet they knew not the scripture, that he must rise again from the dead.
- Young's Literal Translation (YLT)
- for not yet did they know the Writing, that it behoveth him out of the dead to rise again.
Read in context
- 7ಆತನ ತಲೆಯ ಮೇಲಿದ್ದ ಕೈವಸ್ತ್ರವು ನಾರುಬಟ್ಟೆಗಳೊಂದಿಗೆ ಇರದೆ ಸುತ್ತಿ ಒಂದು ಕಡೆಯಲ್ಲಿ ಬೇರೆ ಇರುವದನ್ನೂ ಕಂಡನು.
- 8ಆಗ ಮೊದಲು ಸಮಾಧಿಗೆ ಬಂದ ಆ ಬೇರೆ ಶಿಷ್ಯನು ಸಹ ಒಳಗೆ ಹೋಗಿ ನೋಡಿ ನಂಬಿದನು.
- 9ಯಾಕಂದರೆ ಆತನು ಸತ್ತವರೊಳಗಿಂದ ತಿರಿಗಿ ಎದ್ದೇಳುವದು ಅಗತ್ಯವೆಂಬ ಬರಹವು ಅವರಿಗೆ ಇನ್ನೂ ತಿಳಿದಿರಲಿಲ್ಲ.
- 10ತರು ವಾಯ ಆ ಶಿಷ್ಯರು ತಮ್ಮ ಸ್ವಂತ ಮನೆಗೆ ಹೊರಟು ಹೋದರು.
- 11ಆದರೆ ಮರಿಯಳು ಹೊರಗೆ ಸಮಾಧಿಯ ಬಳಿಯಲ್ಲಿ ಅಳುತ್ತಾ ನಿಂತಿದ್ದಳು; ಆಕೆಯು ಅಳುತ್ತಾ ಸಮಾಧಿಯೊಳಗೆ ಬೊಗ್ಗಿ ನೋಡಿದಾಗ
Cross references
- Psalm 16:10 ಕೀರ್ತನೆಗಳು 16:10ಯಾಕಂದರೆ ನೀನು ನನ್ನ ಆತ್ಮವನ್ನು ನರಕದಲ್ಲಿ ಬಿಟ್ಟುಬಿಡುವದಿಲ್ಲ; ನಿನ್ನ ಪರಿಶುದ್ಧನ ಕೊಳೆಯುವಿಕೆಯನ್ನು ನೋಡ ಗೊಡಿಸುವದಿಲ್ಲ.ಜೀವದ ಮಾರ್ಗವನ್ನು ನನಗೆ ತಿಳಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷ ವೂ ನಿನ್ನ ಬಲಗಡೆಯಲ್ಲಿ ಶಾಶ್ವತ ಭಾಗ್ಯವೂ ಇರುತ್ತವೆ.
- Isaiah 25:8 ಯೆಶಾಯ 25:8ಆತನು ಮರಣವನ್ನು ಜಯದಲ್ಲಿ ನುಂಗಿಬಿಡುವನು. ಕರ್ತನಾದ ದೇವರು ಎಲ್ಲಾ ಮುಖ ಗಳಲ್ಲಿರುವ ಕಣ್ಣೀರನ್ನೂ ಒರಸಿಬಿಡುವನು. ತನ್ನ ಜನರ ನಿಂದೆಯನ್ನೂ ಭೂಮಂಡಲದಿಂದಲೇ ತೆಗೆದುಹಾಕು ವನು, ಕರ್ತನೇ ಇದನ್ನು ನುಡಿದಿದ್ದಾನೆ.
- Isaiah 53:10–12 ಯೆಶಾಯ 53:10–12ಆದಾಗ್ಯೂ ಆತನನ್ನು ಜಜ್ಜುವದು ಕರ್ತನಿಗೆ ಮೆಚ್ಚಿಕೆ ಯಾಗಿತ್ತು. ಆತನು (ದೇವರು) ಆತನನ್ನು ಸಂಕಟಕ್ಕೆ ಒಳಪಡಿಸಿದನು; ನೀನು ಆತನ ಪ್ರಾಣವನ್ನು ಪಾಪ ಕ್ಕೋಸ್ಕರ ಬಲಿಯನ್ನಾಗಿ ಮಾಡುವಾಗ ಆತನು ತನ್ನ ಸಂತಾನವನ್ನು ನೋಡುವನು. ಆತನು ತನ್ನ ದಿವಸ ಗಳನ್ನು ಹೆಚ್ಚಿಸುವನು, ಕರ್ತನ ಸಂತೋಷವು ಆತನ ಕೈಯಲ್ಲಿ ಸಫಲವಾಗುವದು. ಆತನು ತನ್ನ ಆತ್ಮದ ವೇದನೆಯನ್ನು ಕಂಡು ತೃಪ್ತನಾಗುವನು; ತನ್ನ ತಿಳುವ ಳಿಕೆಯಿಂದ ನೀತಿವಂತನಾದ ನನ್ನ ಸೇವಕನು ಅನೇಕ ರಿಗೆ ನೀತಿಯನು ಉಂಟುಮಾಡುವನು; ಯಾಕಂದರೆ ಆತನು ಅವರ ದುಷ್ಕೃತ್ಯಗಳನ್ನು ಹೊತ್ತುಕೊಳ್ಳುವನು.ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು. ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು.
- Isaiah 26:19 ಯೆಶಾಯ 26:19ಮೃತರಾದ ನಿನ್ನ ಜನರು ಬದುಕುವರು, ನನ್ನವರ ಹೆಣಗಳು ಏಳುವವು; ದೂಳಿನ ನಿವಾಸಿಗಳೇ; ಎಚ್ಚತ್ತು ಹರ್ಷ ಸ್ವರಗೈಯಿರಿ! ನೀನು ಸುರಿಯುವ ಇಬ್ಬನಿಯು ಇಬ್ಬನಿಯ ಸಸ್ಯಗಳಂತಿವೆ. ಭೂಮಿಯು ಸತ್ತವರನ್ನು ಹೊರಪಡಿಸುವದು.
- Luke 24:44–46 ಲೂಕನು 24:44–46ಆಗ ಆತನು ಅವರಿಗೆ--ಮೋಶೆಯ ನ್ಯಾಯ ಪ್ರಮಾಣದಲ್ಲಿಯೂ ಪ್ರವಾದನೆಗಳಲ್ಲಿಯೂ ಕೀರ್ತನೆ ಗಳಲ್ಲಿಯೂ ನನ್ನನ್ನು ಕುರಿತಾಗಿ ಬರೆಯಲ್ಪಟ್ಟವು ಗಳೆಲ್ಲವು ನೆರವೇರುವದು ಅಗತ್ಯವಾಗಿದೆ ಎಂಬ ಈ ಮಾತುಗಳನ್ನು ನಾನು ನಿಮ್ಮೊಂದಿಗೆ ಇದ್ದಾಗಲೇ ಹೇಳಿದ್ದೆನು ಅಂದನು. ತರುವಾಯ ಅವರು ಬರಹ ಗಳನ್ನು ಅರ್ಥ ಮಾಡಿಕೊಳ್ಳುವಂತೆ ಆತನು ಅವರ ಬುದ್ಧಿಯನ್ನು ತೆರೆದನು. ಅವರಿಗೆ--ಕ್ರಿಸ್ತನು ಹೀಗೆ ಶ್ರಮೆಪಟ್ಟು ಸತ್ತವರೊಳಗಿಂದ ಮೂರನೆಯ ದಿನದಲ್ಲಿ ಎದ್ದು ಬರುವದು ಅಗತ್ಯವಾಗಿತ್ತೆಂತಲೂ
- 1 Corinthians 15:4 1 ಕೊರಿಂಥದವರಿಗೆ 15:4ಹೂಣಲ್ಪಟ್ಟನು; ಬರಹದ ಪ್ರಕಾರವೇ ಆತನು ಮೂರನೆಯ ದಿನದಲ್ಲಿ ತಿರಿಗಿ ಎದ್ದುಬಂದನು.
- Luke 24:26 ಲೂಕನು 24:26ಕ್ರಿಸ್ತನು ಇವೆಲ್ಲಾ ಶ್ರಮೆಗಳನ್ನು ಅನುಭವಿಸಿ ತನ ಮಹಿಮೆಯಲ್ಲಿ ಪ್ರವೇಶಿಸುವದು ಅಗತ್ಯವಾಗಿತ್ತಲ್ಲವೇ ಎಂದು ಹೇಳಿ
- Matthew 22:29 ಮತ್ತಾಯನು 22:29ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನೀವು ಬರಹಗಳನ್ನಾಗಲೀ ದೇವರ ಶಕ್ತಿಯನ್ನಾಗಲೀ ತಿಳಿಯದೆ ತಪ್ಪುವವರಾಗಿದ್ದೀರಿ.
- Hosea 13:14 ಹೋಶೇಯ 13:14ನಾನು ಸಮಾಧಿಯ ಶಕ್ತಿಯಿಂದ ಅವರನ್ನು ಈಡು ಕೊಟ್ಟು ವಿಮೋಚಿಸುವೆನು; ಮರಣದಿಂದ ಅವರನ್ನು ಬಿಡಿಸುವೆನು. ಓ ಮರಣವೇ, ನಾನು ನಿನ್ನ ಬಾಧೆಗ ಳಾಗಿರುವೆನು; ಓ ಸಮಾಧಿಯೇ, ನಾನು ನಿನ್ನ ನಾಶನ ವಾಗಿದ್ದೇನೆ; ಪಶ್ಚಾತ್ತಾಪವು ನನ್ನ ಕಣ್ಣುಗಳಿಂದ ಮರೆ ಯಾಗಿದೆ.
- Mark 9:31–32 ಮಾರ್ಕನು 9:31–32ಯಾಕಂದರೆ ಆತನು ತನ್ನ ಶಿಷ್ಯರಿಗೆ ಬೋಧಿಸುತ್ತಾ-- ಮನುಷ್ಯ ಕುಮಾರನು ಮನುಷ್ಯರ ಕೈಗಳಿಗೆ ಒಪ್ಪಿಸಲ್ಪಡುತ್ತಾನೆ; ಅವರು ಆತನನ್ನು ಕೊಲ್ಲುವರು; ಆತನು ಕೊಲ್ಲಲ್ಪಟ್ಟ ತರುವಾಯ ಮೂರನೆಯ ದಿನದಲ್ಲಿ ಏಳುವನು ಅಂದನು. ಆದರೆ ಅವರು ಆ ಮಾತನ್ನು ಗ್ರಹಿಸ ಲಿಲ್ಲ, ಮತ್ತು ಆತನನ್ನು ಕೇಳುವದಕ್ಕೂ ಭಯಪಟ್ಟರು.
- Luke 18:33–34 ಲೂಕನು 18:33–34ಇದಲ್ಲದೆ ಅವರು ಆತನನ್ನು ಕೊರಡೆಗಳಿಂದ ಹೊಡೆದು ಕೊಲ್ಲುವರು. ಮೂರನೆಯ ದಿನದಲ್ಲಿ ಆತನು ತಿರಿಗಿ ಏಳುವನು ಅಂದನು. ಆದರೆ ಶಿಷ್ಯರು ಇವುಗಳಲ್ಲಿ ಒಂದನ್ನೂ ಗ್ರಹಿಸಲಿಲ್ಲ; ಈ ಮಾತು ಅವರಿಗೆ ಮರೆಯಾಗಿದ್ದದರಿಂದ ಆತನು ಹೇಳಿದವು ಗಳನ್ನು ಅವರು ತಿಳಿಯಲಿಲ್ಲ.
- Psalm 22:22–31 ಕೀರ್ತನೆಗಳು 22:22–31ನಾನು ನಿನ್ನ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು; ಕೂಟದ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು. ಕರ್ತನಿಗೆ ಭಯಪಡುವವರೇ, ಆತನನ್ನು ಸ್ತುತಿಸಿರಿ; ಯಾಕೋಬಿನ ಎಲ್ಲಾ ಸಂತಾನದವರೇ, ಆತನನ್ನು ಘನಪಡಿಸಿರಿ; ಇಸ್ರಾಯೇಲಿನ ಎಲ್ಲಾ ಸಂತಾನದವರೇ, ಆತನಿಗೆ ಭಯಪಡಿರಿ. ಸಂಕಟ ಪಡುವವನ ಸಂಕಟ ವನ್ನು ಆತನು ತಿರಸ್ಕರಿಸಲಿಲ್ಲ, ಅಸಹ್ಯಿಸಲಿಲ್ಲ; ತನ್ನ ಮುಖವನ್ನು ಅವನಿಂದ ಮರೆಮಾಡಲಿಲ್ಲ; ಆದರೆ ಅವನು ಮೊರೆಯಿಡಲು ಆತನು ಕೇಳಿದನು. ಮಹಾ ಸಭೆಯಲ್ಲಿ ನಿನ್ನನ್ನು ಕುರಿತು ನನ್ನ ಸ್ತೋತ್ರವು ನಿನಗಿ ರುವದು; ನನ್ನ ಪ್ರಮಾಣಗಳನ್ನು ಆತನಿಗೆ ಭಯಪಡು ವವರ ಮುಂದೆ ಸಲ್ಲಿಸುವೆನು. ದೀನರು ಉಂಡು ತೃಪ್ತಿಯಾಗುವರು; ಕರ್ತನನ್ನು ಹುಡುಕುವವರು ಆತನನ್ನು ಸ್ತುತಿಸುವರು; ನಿಮ್ಮ ಹೃದಯವು ಎಂದೆಂದಿಗೂ ಬದುಕುವದು. ಲೋಕದಂತ್ಯದಲ್ಲಿರುವ ಎಲ್ಲಾ ಜನರು ಜ್ಞಾಪಕ ಮಾಡಿ ಕರ್ತನ ಕಡೆಗೆ ತಿರಿಗಿಕೊಳ್ಳುವರು; ಜನಾಂಗ ಗಳ ಗೋತ್ರಗಳೆಲ್ಲರೂ ನಿನ್ನ ಮುಂದೆ ಆರಾಧಿಸುವರು. ರಾಜ್ಯವು ಕರ್ತನದೇ; ಜನಾಂಗಗಳಲ್ಲಿ ಆಳುವಾತನು ಆತನೇ. ಭೂಮಿಯ ಪುಷ್ಟರೆಲ್ಲರೂ ಉಂಡು ಆರಾಧಿಸುವರು; ತಮ್ಮ ಪ್ರಾಣವನ್ನು ಬದುಕಿಸಲಾರದೆ ಧೂಳಿನಲ್ಲಿ ಇಳಿಯುವವರೆಲ್ಲರೂ ಆತನ ಮುಂದೆ ಅಡ್ಡಬೀಳುವರು. ಒಂದು ಸಂತಾನವು ಆತನನ್ನು ಸೇವಿಸುವದು. ಅದು ಕರ್ತನ ಸಂತತಿ ಎಂದು ಎಣಿಸ ಲ್ಪಡುವದು.ಅವರು ಬಂದು ಆತನೇ ಇದನ್ನು ಮಾಡಿದ್ದಾನೆಂದೂ ಆತನ ನೀತಿಯನ್ನೂ ಹುಟ್ಟಲಿರುವ ಜನರಿಗೆ ತಿಳಿಸುವರು. ಅವರು ಬಂದು ಆತನೇ ಇದನ್ನು ಮಾಡಿದ್ದಾನೆಂದೂ ಆತನ ನೀತಿಯನ್ನೂ ಹುಟ್ಟಲಿರುವ ಜನರಿಗೆ ತಿಳಿಸುವರು.