John · chapter 3 · verse 12
John 3:12 in Kannada
ನಾನು ಭೂಲೋಕ ದವುಗಳನ್ನು ನಿಮಗೆ ಹೇಳಿದರೆ ನೀವು ನಂಬುವದಿಲ್ಲ; ಆದರೆ ಪರಲೋಕದವುಗಳನ್ನು ನಿಮಗೆ ಹೇಳಿದರೆ ಹೇಗೆ ನಂಬೀರಿ?
Naanu bhooloka davugalannu nimage helidare neevu nambuvadilla; aadare paralokadavugalannu nimage helidare hege nambeeri?
John 3:12 in English
- King James Version (KJV)
- If I have told you earthly things, and ye believe not, how shall ye believe, if I tell you [of] heavenly things?
- World English Bible (WEB)
- If I told you earthly things and you don’t believe, how will you believe if I tell you heavenly things?
- American Standard Version (ASV)
- If I told you earthly things and ye believe not, how shall ye believe if I tell you heavenly things?
- Bible in Basic English (BBE)
- If you have no belief when my words are about the things of earth, how will you have belief if my words are about the things of heaven?
- Darby Translation (DBY)
- If I have said the earthly things to you, and ye believe not, how, if I say the heavenly things to you, will ye believe?
- Webster's Bible (WBS)
- If I have told you earthly things, and ye believe not, how will ye believe if I tell you heavenly things?
- Young's Literal Translation (YLT)
- if the earthly things I said to you, and ye do not believe, how, if I shall say to you the heavenly things, will ye believe?
Read in context
- 10ಯೇಸು ಪ್ರತ್ಯುತ್ತರ ವಾಗಿ ಅವನಿಗೆ--ಇಸ್ರಾಯೇಲ್ಯರಿಗೆ ಬೋಧಕನಾಗಿ ರುವ ನಿನಗೆ ಈ ವಿಷಯಗಳು ತಿಳಿಯುವದಿಲ್ಲವೋ?
- 11ನಾನು ನಿನಗೆ ನಿಜನಿಜ ವಾಗಿ ಹೇಳುತ್ತೇನೆ, ನಾವು ಅರಿತಿರುವದನ್ನು ಮಾತನಾಡುತ್ತೇವೆ ಮತ್ತು ನೋಡಿ ದ್ದಕ್ಕೆ ಸಾಕ್ಷೀಕರಿಸುತ್ತೇವೆ; ಆದರೆ ನೀವು ನಮ್ಮ ಸಾಕ್ಷಿ ಯನ್ನು ಅಂಗೀಕರಿಸುವದಿಲ್ಲ.
- 12ನಾನು ಭೂಲೋಕ ದವುಗಳನ್ನು ನಿಮಗೆ ಹೇಳಿದರೆ ನೀವು ನಂಬುವದಿಲ್ಲ; ಆದರೆ ಪರಲೋಕದವುಗಳನ್ನು ನಿಮಗೆ ಹೇಳಿದರೆ ಹೇಗೆ ನಂಬೀರಿ?
- 13ಪರಲೋಕದಿಂದ ಇಳಿದು ಬಂದಾತನೇ ಅಂದರೆ ಪರಲೋಕದಲ್ಲಿರುವ ಮನುಷ್ಯ ಕುಮಾರನೇ ಹೊರತು ಯಾವನೂ ಪರಲೋಕಕ್ಕೆ ಏರಿಹೋದವನಲ್ಲ.
- 14ಇದಲ್ಲದೆ ಮೋಶೆಯು ಅರಣ್ಯದಲ್ಲಿ ಸರ್ಪವನ್ನು ಎತ್ತಿದ ಹಾಗೆಯೇ ಮನುಷ್ಯ ಕುಮಾರನು ಸಹ ಎತ್ತಲ್ಪಡತಕ್ಕದ್ದು.
Cross references
- 1 Corinthians 3:1–2 1 ಕೊರಿಂಥದವರಿಗೆ 3:1–2ಸಹೋದರರೇ, ನಾನಂತೂ ಆತ್ಮನಿಂದ ನಡಿಸಿಕೊಳ್ಳುವವರಿಗೆ ತಕ್ಕಂತೆ ನಿಮ್ಮ ಸಂಗಡ ಮಾತನಾಡಲಾರದೆ ಪ್ರಾಪಂಚಿಕರೂ ಕ್ರಿಸ್ತ ನಲ್ಲಿ ಎಳೆಕೂಸುಗಳೂ ಆಗಿರುವಂಥವರಿಗೆ ತಕ್ಕಂತೆ ನಿಮ್ಮ ಸಂಗಡ ಮಾತನಾಡಬೇಕಾಯಿತು. ನಿಮಗೆ ಹಾಲು ಕುಡಿಸಿದೆನು, ಅನ್ನ ಕೊಡಲಿಲ್ಲ; ಅನ್ನ ತಿನು ್ನವದಕ್ಕೆ ನಿಮಗೆ ಶಕ್ತಿ ಇರಲಿಲ್ಲ, ಇಲ್ಲವೆ ಈಗಲಾದರೂ ಶಕ್ತಿಯಿಲ್ಲ;
- 1 Corinthians 2:7–9 1 ಕೊರಿಂಥದವರಿಗೆ 2:7–9ಆದರೆ ಗುಪ್ತ ವಾಗಿದ್ದ ಜ್ಞಾನವನ್ನು ತಿಳಿಸುವಲ್ಲಿ ದೇವರ ಜ್ಞಾನವನ್ನೇ ಹೇಳುತ್ತೇವೆ; ಅದನ್ನು ದೇವರು ನಮ್ಮ ಮಹಿಮೆಗಾಗಿ ಲೋಕೋತ್ಪತ್ತಿಗಿಂತ ಮೊದಲೇ ನೇಮಿಸಿದನು. ಇದನ್ನು (ಆ ಜ್ಞಾನವನ್ನು) ಇಹಲೋಕಾಧಿ ಪತಿಗಳಲ್ಲಿ ಯಾರೂ ಅರಿಯಲಿಲ್ಲ; ಅರಿತಿದ್ದರೆ ಅವರು ಮಹಿಮೆ ಯುಳ್ಳ ಕರ್ತನನ್ನು ಶಿಲುಬೆಗೆ ಹಾಕುತ್ತಿರಲಿಲ್ಲ. ಆದರೆ ಬರೆದಿರುವ ಪ್ರಕಾರ--ದೇವರು ತನ್ನನ್ನು ಪ್ರೀತಿಸು ವವರಿಗಾಗಿ ಸಿದ್ಧಮಾಡಿರುವಂಥವುಗಳನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಇಲ್ಲವೆ ಅವು ಮನುಷ್ಯನ ಹೃದಯದಲ್ಲಿ ಸೇರಲಿಲ್ಲ.
- Hebrews 5:11 ಇಬ್ರಿಯರಿಗೆ 5:11ಆತನ ವಿಷಯದಲ್ಲಿ ನಾವು ಹೇಳಬೇಕಾದ ಮಾತುಗಳು ಬಹಳ ಉಂಟು. ನಿಮ್ಮ ಕಿವಿಗಳು ಮಂದವಾದದರಿಂದ ಅದನ್ನು ವಿವರಿಸುವದು ಕಷ್ಟ ವಾಗಿದೆ.
- John 3:31–36 ಯೋಹಾನನು 3:31–36ಮೇಲಿನಿಂದ ಬರುವಾತನು ಎಲ್ಲರ ಮೇಲೆ ಇದ್ದಾನೆ; ಯಾವನು ಭೂಸಂಬಂಧವಾದವನಾಗಿದ್ದಾನೋ ಅವನು ಭೂ ಸಂಬಂಧದವನಾಗಿದ್ದು ಭೂಸಂಬಂಧವಾದವುಗಳನ್ನು ಮಾತನಾಡುತ್ತಾನೆ; ಪರಲೋಕದಿಂದ ಬರುವಾತನು ಎಲ್ಲರ ಮೇಲೆ ಇದ್ದಾನೆ. ಆತನು ಯಾವದನ್ನು ಕಂಡು ಕೇಳಿದನೋ ಅದಕ್ಕೆ ಸಾಕ್ಷಿ ಕೊಡುತ್ತಾನೆ; ಆದರೆ ಆತನ ಸಾಕ್ಷಿಯನ್ನು ಯಾವನೂ ಅಂಗೀಕರಿಸುವದಿಲ್ಲ. ಆತನ ಸಾಕ್ಷಿಯನ್ನು ಅಂಗೀಕರಿಸಿದವನು ದೇವರು ಸತ್ಯವಂತನೆಂಬದಕ್ಕೆ ತನ್ನ ಮುದ್ರೆಯನ್ನು ಹಾಕಿದ್ದಾನೆ. ದೇವರು ಕಳುಹಿಸಿದಾತನು ದೇವರ ಮಾತುಗಳನ್ನೇ ಆಡುತ್ತಾನೆ; ದೇವರು ಆತನಿಗೆ ಆತ್ಮನನ್ನು ಅಳತೆ ಮಾಡದೆ ಕೊಡುತ್ತಾನೆ. ತಂದೆಯು ಮಗನನ್ನು ಪ್ರೀತಿಸಿ ಎಲ್ಲವುಗಳನ್ನು ಆತನ ಕೈಯಲ್ಲಿ ಕೊಟ್ಟಿದ್ದಾನೆ.ಮಗನ ಮೇಲೆ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಯಾವನು ಮಗನನ್ನು ನಂಬುವದಿಲ್ಲವೋ ಅವನು ಜೀವವನ್ನು ಕಾಣುವದಿಲ್ಲ; ಆದರೆ ದೇವರ ಕೋಪವು ಅವನ ಮೇಲೆ ನೆಲೆಗೊಂಡಿದೆ ಅಂದನು. ಮಗನ ಮೇಲೆ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಯಾವನು ಮಗನನ್ನು ನಂಬುವದಿಲ್ಲವೋ ಅವನು ಜೀವವನ್ನು ಕಾಣುವದಿಲ್ಲ; ಆದರೆ ದೇವರ ಕೋಪವು ಅವನ ಮೇಲೆ ನೆಲೆಗೊಂಡಿದೆ ಅಂದನು.
- 1 Peter 2:1–3 1 ಪೇತ್ರನು 2:1–3ಆದಕಾರಣ ಎಲ್ಲಾ ಕೆಟ್ಟತನವನ್ನೂ ಎಲ್ಲಾ ವಂಚನೆಯನ್ನೂ ಕಪಟವನ್ನೂ ಹೊಟ್ಟೇ ಕಿಚ್ಚನ್ನೂ ಎಲ್ಲಾ ಕೆಟ್ಟ ಮಾತುಗಳನ್ನೂ ವಿಸರ್ಜಿಸಿರಿ. ಹೊಸದಾಗಿ ಹುಟ್ಟಿದ ಶಿಶುಗಳಂತಿರುವ ನೀವು ಬೆಳೆಯುವ ಹಾಗೆ ವಾಕ್ಯವೆಂಬ ಶುದ್ಧ ಹಾಲನ್ನು ಬಯಸಿರಿ. ಕರ್ತನು ಕೃಪಾಳುವೆಂದು ನೀವು ರುಚಿ ನೋಡಿದ್ದೀರಲ್ಲಾ.
- John 3:13–17 ಯೋಹಾನನು 3:13–17ಪರಲೋಕದಿಂದ ಇಳಿದು ಬಂದಾತನೇ ಅಂದರೆ ಪರಲೋಕದಲ್ಲಿರುವ ಮನುಷ್ಯ ಕುಮಾರನೇ ಹೊರತು ಯಾವನೂ ಪರಲೋಕಕ್ಕೆ ಏರಿಹೋದವನಲ್ಲ. ಇದಲ್ಲದೆ ಮೋಶೆಯು ಅರಣ್ಯದಲ್ಲಿ ಸರ್ಪವನ್ನು ಎತ್ತಿದ ಹಾಗೆಯೇ ಮನುಷ್ಯ ಕುಮಾರನು ಸಹ ಎತ್ತಲ್ಪಡತಕ್ಕದ್ದು. ಹೀಗೆ ಆತನನ್ನು ನಂಬುವ ಯಾವನಾದರೂ ನಾಶವಾಗದೆ ನಿತ್ಯಜೀವ ವನ್ನು ಪಡೆದಿರುವನು. ದೇವರು ಲೋಕವನ್ನು ಎಷ್ಟೋ ಪ್ರೀತಿಮಾಡಿ ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಯಾವನಾದರೂ ನಾಶವಾಗದೆ ನಿತ್ಯಜೀವ ವನ್ನು ಪಡೆದವನಾಗಿರುವನು. ದೇವರು ಲೋಕಕ್ಕೆ ತೀರ್ಪು ಮಾಡುವದಕ್ಕಾಗಿ ಅಲ್ಲ; ಆದರೆ ತನ್ನ ಮಗನ ಮುಖಾಂತರ ಲೋಕವನ್ನು ರಕ್ಷಿಸುವದಕ್ಕಾಗಿ ಆತನನ್ನು ಕಳುಹಿಸಿದನು.
- John 3:5 ಯೋಹಾನನು 3:5ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಿನಗೆ ನಿಜನಿಜ ವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಆತ್ಮ ನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದೊಳಗೆ ಪ್ರವೇಶಿಸಲಾರನು.
- John 3:8 ಯೋಹಾನನು 3:8ಗಾಳಿಯು ತನ್ನ ಮನಸ್ಸು ಬಂದ ಕಡೆಗೆ ಬೀಸುತ್ತದೆ; ನೀನು ಅದರ ಶಬ್ದವನ್ನು ಕೇಳುತ್ತೀ; ಆದರೆ ಅದು ಎಲ್ಲಿಂದ ಬರುತ್ತದೋ ಎಲ್ಲಿಗೆ ಹೋಗು ತ್ತದೋ ಹೇಳಲಾರಿ; ಅದರಂತೆಯೇ ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬನು ಇದ್ದಾನೆ ಅಂದನು.
- John 1:1–14 ಯೋಹಾನನು 1:1–14ಆದಿಯಲ್ಲಿ ವಾಕ್ಯವಿದ್ದನು; ಆ ವಾಕ್ಯವು ದೇವರೊಂದಿಗೆ ಇದ್ದನು; ಆ ವಾಕ್ಯವು ದೇವರಾಗಿದ್ದನು. ಆತನೇ ಆದಿಯಲ್ಲಿ ದೇವರೊಂದಿಗೆ ಇದ್ದನು. ಎಲ್ಲವು ಆತನಿಂದ ಉಂಟಾಯಿತು; ಉಂಟಾದದ್ದರಲ್ಲಿ ಆತನಿಲ್ಲದೆ ಯಾವದೂ ಉಂಟಾಗ ಲಿಲ್ಲ. ಆತನಲ್ಲಿ ಜೀವವಿತ್ತು; ಆ ಜೀವವು ಮನುಷ್ಯ ರಿಗೆ ಬೆಳಕಾಗಿತ್ತು. ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ; ಆ ಕತ್ತಲು ಅದನ್ನು ಗ್ರಹಿಸಲಿಲ್ಲ. ದೇವರಿಂದ ಕಳುಹಿ ಸಲ್ಪಟ್ಟ ಒಬ್ಬ ಮನುಷ್ಯನಿದ್ದನು; ಅವನ ಹೆಸರು ಯೋಹಾನನು. ಎಲ್ಲರೂ ತನ್ನ ಮೂಲಕವಾಗಿ ನಂಬುವಂತೆ ಅವನೇ ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡುವದಕ್ಕೆ ಸಾಕ್ಷಿಗಾಗಿ ಬಂದನು. ಅವನು ಆ ಬೆಳಕಲ್ಲ. ಆದರೆ ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡು ವದಕ್ಕೆ ಕಳುಹಿಸಲ್ಪಟ್ಟನು. ಲೋಕದಲ್ಲಿ ಬರುವ ಪ್ರತಿಯೊಬ್ಬ ಮನುಷ್ಯನಿಗೆ ಆತನು ಬೆಳಕನ್ನು ಕೊಡುವ ನಿಜವಾದ ಬೆಳಕಾಗಿದ್ದನು. ಆತನು ಲೋಕದಲ್ಲಿ ಇದ್ದನು; ಲೋಕವು ಆತನಿಂದ ಉಂಟಾಯಿತು; ಲೋಕವು ಆತನನ್ನು ಅರಿಯಲಿಲ್ಲ. ಆತನು ತನ್ನ ಸ್ವಂತದವರ ಬಳಿಗೆ ಬಂದನು. ಆತನ ಸ್ವಂತದವರು ಆತನನ್ನು ಅಂಗೀಕರಿಸಲಿಲ್ಲ. ಆದರೆ ಯಾರಾರು ಆತನನ್ನು ಅಂಗೀಕರಿಸಿದರೋ ಅವರಿಗೆ ಅಂದರೆ ಆತನ ಹೆಸರಿನ ಮೇಲೆ ನಂಬಿಕೆಯಿಡುವವರಿಗೆ ದೇವರ ಪುತ್ರರಾಗುವ ಅಧಿಕಾರವನ್ನು ಆತನು ಕೊಟ್ಟನು. ಇವರು ರಕ್ತದಿಂದಾಗಲಿ ಇಲ್ಲವೆ ಶರೀರದ ಇಚ್ಛೆಯಿಂದಾಗಲಿ ಇಲ್ಲವೆ ಮನುಷ್ಯನ ಇಚ್ಛೆಯಿಂದಾ ಗಲಿ ಹುಟ್ಟಿದವರಲ್ಲ, ದೇವರಿಂದಲೇ ಹುಟ್ಟಿದವರು. ಇದಲ್ಲದೆ ಆ ವಾಕ್ಯವಾಗಿರುವಾತನು ಶರೀರಧಾರಿ ಯಾಗಿ ಕೃಪೆಯಿಂದಲೂ ಸತ್ಯದಿಂದಲೂ ತುಂಬಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. (ತಂದೆಯಿಂದ ಹುಟ್ಟಿದ ಒಬ್ಬನೇ ಮಗನ ಮಹಿಮೆಯಂತೆ ನಾವು ಆತನ ಮಹಿಮೆಯನ್ನು ನೋಡಿದೆವು).
- John 3:3 ಯೋಹಾನನು 3:3ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ತಿರಿಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ನೋಡಲಾರನು ಅಂದನು.
- 1 Timothy 3:16 1 ತಿಮೊಥೆಯನಿಗೆ 3:16ದೇವಭಕ್ತಿಯ ಮರ್ಮವು ಮಹತ್ವವುಳ್ಳದ್ದೆಂಬದು ತರ್ಕವಿಲ್ಲದ್ದು, ಅದು ಯಾವದಂದರೆ--ದೇವರು ಶರೀರಧಾರಿಯಾಗಿ ಪ್ರತ್ಯಕ್ಷನಾದನು; ಆತ್ಮಸಂಬಂಧವಾಗಿ ನೀತಿವಂತನೆಂದು ನಿರ್ಣಯಿಸಲ್ಪಟ್ಟನು; ದೂತ ರಿಗೆ ಕಾಣಿಸಿಕೊಂಡನು; ಅನ್ಯಜನರಿಗೆ ಸಾರಲ್ಪಟ್ಟನು; ಲೋಕದಲ್ಲಿ ನಂಬಲ್ಪಟ್ಟನು; ಮಹಿಮೆಗೆ ಸೇರಿಸಲ
- 1 John 4:10 1 ಯೋಹಾನನು 4:10ನಾವು ದೇವರನ್ನು ಪ್ರೀತಿಸಿ ದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ತನ್ನ ಮಗನನ್ನು ಕಳುಹಿಸಿ ಕೊಟ್ಟದ್ದರಲ್ಲಿಯೇ ಆತನ ಪ್ರೀತಿಯು ಇರುತ್ತದೆ.