John · chapter 5 · verse 42
John 5:42 in Kannada
ಆದರೆ ನಾನು ನಿಮ್ಮನ್ನು ಬಲ್ಲೆನು, ನಿಮ್ಮಲ್ಲಿ ದೇವರ ಪ್ರೀತಿ ಇಲ್ಲ.
Aadare naanu nimmannu ballenu, nimmalli devara preeti illa.
John 5:42 in English
- King James Version (KJV)
- But I know you, that ye have not the love of God in you.
- World English Bible (WEB)
- But I know you, that you don’t have God’s love in yourselves.
- American Standard Version (ASV)
- But I know you, that ye have not the love of God in yourselves.
- Bible in Basic English (BBE)
- But I have knowledge of you that you have no love for God in your hearts.
- Darby Translation (DBY)
- but I know you, that ye have not the love of God in you.
- Webster's Bible (WBS)
- But I know you, that ye have not the love of God in you.
- Young's Literal Translation (YLT)
- but I have known you, that the love of God ye have not in yourselves.
Read in context
- 40ಆದರೆ ನೀವು ಜೀವವನ್ನು ಹೊಂದುವಂತೆ ನನ್ನ ಬಳಿಗೆ ಬರುವದಿಲ್ಲ.
- 41ನಾನು ಮನುಷ್ಯರಿಂದ ಮಾನವನ್ನು ಅಂಗೀಕರಿ ಸುವದಿಲ್ಲ.
- 42ಆದರೆ ನಾನು ನಿಮ್ಮನ್ನು ಬಲ್ಲೆನು, ನಿಮ್ಮಲ್ಲಿ ದೇವರ ಪ್ರೀತಿ ಇಲ್ಲ.
- 43ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ, ನೀವು ನನ್ನನ್ನು ಅಂಗೀಕರಿ ಸುವದಿಲ್ಲ; ಮತ್ತೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದರೆ ನೀವು ಅವನನ್ನು ಅಂಗೀಕರಿಸುವಿರಿ.
- 44ದೇವರಿಂದ ಮಾತ್ರ ಬರುವ ಮಾನವನ್ನು ಹುಡುಕದೆ ಒಬ್ಬರಿಂದೊ ಬ್ಬರಿಗೆ ಬರುವ ಮಾನವನ್ನು ಹೊಂದುವ ನೀವು ಹೇಗೆ ನಂಬೀರಿ?
Cross references
- 1 John 4:20 1 ಯೋಹಾನನು 4:20ಒಬ್ಬನು--ನಾನು ದೇವರನ್ನು ಪ್ರೀತಿಸುತ್ತೇನೆ ಎಂದು ಹೇಳಿ ತನ್ನ ಸಹೋದರನನ್ನು ಹಗೆ ಮಾಡಿದರೆ ಅವನು ಸುಳ್ಳುಗಾರನಾಗಿದ್ದಾನೆ. ಯಾಕಂದರೆ ತಾನು ಕಾಣುವ ಸಹೋದರನನ್ನು ಪ್ರೀತಿಸದವನು ಕಾಣದಿರುವ ದೇವರನ್ನು ಅವನು ಹೇಗೆ ಪ್ರೀತಿಸಾನು?ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಈ ಆಜ್ಞೆ ಯನ್ನು ನಾವು ಆತನಿಂದ ಹೊಂದಿದ್ದೇವೆ.
- 1 John 2:15 1 ಯೋಹಾನನು 2:15ಲೋಕವನ್ನಾಗಲಿ ಲೋಕದಲ್ಲಿರುವವುಗಳ ನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕ ವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ.
- John 2:25 ಯೋಹಾನನು 2:25ಆತನು ಮನುಷ್ಯರ ಅಂತರಂಗವನ್ನು ತಿಳಿದವನಾದ ಕಾರಣ ಯಾರೂ ಯಾವ ಮನುಷ್ಯನ ವಿಷಯದಲ್ಲಿಯೂ ಆತನಿಗೆ ಸಾಕ್ಷಿಕೊಡಬೇಕಾದ ಅವಶ್ಯವಿರಲಿಲ್ಲ.
- 1 John 3:17 1 ಯೋಹಾನನು 3:17ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದು ಹೇಗೆ?
- Romans 8:7 ರೋಮಾಪುರದವರಿಗೆ 8:7ಶರೀರ ಸಂಬಂಧವಾದ ಮನಸ್ಸು ದೇವರಿಗೆ ಶತ್ರುತ್ವವು; ಕಾರಣವೇನಂದರೆ ಅಂಥ ಮನಸ್ಸು ದೇವರ ನಿಯಮಕ್ಕೆ ಒಳಪಡುವದಿಲ್ಲ, ಒಳಪಡುವದಕ್ಕಾಗುವದೂ ಇಲ್ಲ.
- John 8:47 ಯೋಹಾನನು 8:47ದೇವರಿಗೆ ಸಂಬಂಧಪಟ್ಟವನು ದೇವರ ವಾಕ್ಯಗಳನ್ನು ಕೇಳುತ್ತಾನೆ. ಆದರೆ ನೀವು ದೇವರಿಗೆ ಸಂಬಂಧಪಟ್ಟವರಲ್ಲದ ಕಾರಣ ಅವುಗಳನ್ನು ಕೇಳುವದಿಲ್ಲ ಎಂದು ಹೇಳಿದನು.
- John 8:55 ಯೋಹಾನನು 8:55ಆದಾಗ್ಯೂ ನೀವು ಆತನನ್ನು ಅರಿತುಕೊಂಡಿಲ್ಲ; ಆದರೆ ನಾನು ಆತನನ್ನು ಅರಿತಿದ್ದೇನೆ. ನಾನು ಆತನನ್ನು ಅರಿಯಲಿಲ್ಲವೆಂದು ಹೇಳಿದರೆ ನಿಮ್ಮ ಹಾಗೆ ನಾನೂ ಸುಳ್ಳುಗಾರನಾಗಿ ರುವೆನು; ಆದರೆ ನಾನು ಆತನನ್ನು ಅರಿತಿದ್ದೇನೆ; ಆತನ ಮಾತನ್ನು ಕೈಕೊಂಡಿದ್ದೇನೆ.
- Revelation 2:23 ಪ್ರಕಟನೆ 2:23ಅವಳ ಮಕ್ಕಳನ್ನು ಕೊಂದೇಕೊಲ್ಲುವೆನು; ಆಗ ನಾನು ಅಂತರಿಂದ್ರಿಯಗ ಳನ್ನೂ ಹೃದಯಗಳನ್ನೂ ಪರೀಕ್ಷಿಸುವವನಾಗಿದ್ದೇನೆ ಂಬದು ಎಲ್ಲಾ ಸಭೆಗಳಿಗೆ ಗೊತ್ತಾಗುವದು; ನಿಮ್ಮಲ್ಲಿ ಪ್ರತಿಯೊಬ್ಬನಿಗೆ ನಿಮ್ಮ ಕೃತ್ಯಗಳ ಪ್ರಕಾರ ಕೊಡುವೆನು.
- Luke 16:15 ಲೂಕನು 16:15ಆಗ ಆತನು ಅವರಿಗೆ--ಮನುಷ್ಯರ ಮುಂದೆ ನೀತಿವಂತರಾಗಿ ಮಾಡಿ ಕೊಳ್ಳುವವರು ನೀವೇ; ಆದರೆ ದೇವರು ನಿಮ್ಮ ಹೃದಯಗಳನ್ನು ತಿಳಿದಿದ್ದಾನೆ; ಯಾಕಂದರೆ ಮನುಷ್ಯರಲ್ಲಿ ಯಾವದು ಶ್ರೇಷ್ಠವೆಂದು ಎಣಿಸಲ್ಪ ಡುತ್ತದೋ ಅದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ.
- John 15:23–24 ಯೋಹಾನನು 15:23–24ನನ್ನನ್ನು ದ್ವೇಷಮಾಡುವವನು ನನ್ನ ತಂದೆಯನ್ನು ಸಹ ದ್ವೇಷಮಾಡುತ್ತಾನೆ. ಬೇರೆ ಯಾರೂ ಮಾಡದಿರುವ ಕ್ರಿಯೆಗಳನ್ನು ನಾನು ಅವರೊಳಗೆ ಮಾಡದಿದ್ದರೆ ಅವರಿಗೆ ಪಾಪವು ಇರು ತ್ತಿರಲಿಲ್ಲ; ಆದರೆ ಈಗ ಅವರು ನನ್ನನ್ನು ಮತ್ತು ನನ್ನ ತಂದೆಯನ್ನು ನೋಡಿ ದ್ವೇಷಮಾಡಿದ್ದಾರೆ.
- John 1:47–49 ಯೋಹಾನನು 1:47–49ಯೇಸು ತನ್ನ ಬಳಿಗೆ ಬರುವ ನತಾನಯೇಲನನ್ನು ಕಂಡು ಅವನ ವಿಷಯವಾಗಿ--ಇಗೋ, ಇವನು ನಿಜ ವಾಗಿಯೂ ಇಸ್ರಾಯೇಲನು; ಇವನಲ್ಲಿ ಕಪಟವಿಲ್ಲ ಅಂದನು. ನತಾನಯೇಲನು ಆತನಿಗೆ--ನೀನು ನನ್ನನ್ನು ಹೇಗೆ ಬಲ್ಲೆ? ಅಂದನು; ಯೇಸು ಪ್ರತ್ಯುತ್ತರ ವಾಗಿ ಅವನಿಗೆ--ಫಿಲಿಪ್ಪನು ನಿನ್ನನ್ನು ಕರೆಯುವದಕ್ಕಿಂತ ಮುಂಚೆ ನೀನು ಆ ಅಂಜೂರ ಮರದ ಕೆಳಗೆ ಇದ್ದಾಗ ನಾನು ನಿನ್ನನ್ನು ನೋಡಿದೆನು ಅಂದನು. ನತಾನ ಯೇಲನು ಪ್ರತ್ಯುತ್ತರವಾಗಿ ಆತನಿಗೆ--ರಬ್ಬಿಯೇ, ನೀನು ದೇವರಕುಮಾರನು; ನೀನು ಇಸ್ರಾಯೇಲಿನ ಅರಸನು ಅಂದನು.
- Hebrews 4:12–13 ಇಬ್ರಿಯರಿಗೆ 4:12–13ಯಾಕಂದರೆ ದೇವರ ವಾಕ್ಯವು ಸಜೀವ ವಾದದ್ದು, ಶಕ್ತಿಯುಳ್ಳದ್ದು, ಯಾವ ಇಬ್ಬಾಯಿ ಕತ್ತಿ ಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲು ಮಜ್ಜೆಗಳನ್ನೂ ವಿಭಾಗಿಸುವಷ್ಟರ ಮಟ್ಟಿಗೆ ತೂರಿ ಹೋಗುವಂಥದ್ದೂ ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ. ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲ ದ್ದಾಗಿಯೂ ಬೈಲಾದದ್ದಾಗಿಯೂ ಆದರೆ ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.