John · chapter 5 · verse 44
John 5:44 in Kannada
ದೇವರಿಂದ ಮಾತ್ರ ಬರುವ ಮಾನವನ್ನು ಹುಡುಕದೆ ಒಬ್ಬರಿಂದೊ ಬ್ಬರಿಗೆ ಬರುವ ಮಾನವನ್ನು ಹೊಂದುವ ನೀವು ಹೇಗೆ ನಂಬೀರಿ?
Devarinda maatra baruva maanavannu hudukade obbarindo bbarige baruva maanavannu honduva neevu hege nambeeri?
John 5:44 in English
- King James Version (KJV)
- How can ye believe, which receive honour one of another, and seek not the honour that [cometh] from God only?
- World English Bible (WEB)
- How can you believe, who receive glory from one another, and you don’t seek the glory that comes from the only God?
- American Standard Version (ASV)
- How can ye believe, who receive glory one of another, and the glory that [cometh] from the only God ye seek not?
- Bible in Basic English (BBE)
- How is it possible for you to have faith while you take honour one from another and have no desire for the honour which comes from the only God?
- Darby Translation (DBY)
- How can ye believe, who receive glory one of another, and seek not the glory which [comes] from God alone?
- Webster's Bible (WBS)
- How can ye believe, who receive honor one from another, and seek not the honor that [cometh] from God only?
- Young's Literal Translation (YLT)
- how are ye able — ye — to believe, glory from one another receiving, and the glory that [is] from God alone ye seek not?
Read in context
- 42ಆದರೆ ನಾನು ನಿಮ್ಮನ್ನು ಬಲ್ಲೆನು, ನಿಮ್ಮಲ್ಲಿ ದೇವರ ಪ್ರೀತಿ ಇಲ್ಲ.
- 43ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ, ನೀವು ನನ್ನನ್ನು ಅಂಗೀಕರಿ ಸುವದಿಲ್ಲ; ಮತ್ತೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದರೆ ನೀವು ಅವನನ್ನು ಅಂಗೀಕರಿಸುವಿರಿ.
- 44ದೇವರಿಂದ ಮಾತ್ರ ಬರುವ ಮಾನವನ್ನು ಹುಡುಕದೆ ಒಬ್ಬರಿಂದೊ ಬ್ಬರಿಗೆ ಬರುವ ಮಾನವನ್ನು ಹೊಂದುವ ನೀವು ಹೇಗೆ ನಂಬೀರಿ?
- 45ತಂದೆಯ ಮುಂದೆ ನಿಮ್ಮ ಮೇಲೆ ನಾನು ತಪ್ಪು ಹೊರಿಸುವೆನೆಂದು ನೀವು ನೆನಸಬೇಡಿರಿ; ಆದರೆ ನೀವು ನಂಬಿರುವ ಮೋಶೆಯೇ ನಿಮ್ಮ ಮೇಲೆ ತಪ್ಪು ಹೊರಿಸುತ್ತಾನೆ.
- 46ನೀವು ಮೋಶೆಯನ್ನು ನಂಬಿದ್ದರೆ ನನ್ನನ್ನೂ ನಂಬುತ್ತಿದ್ದಿರಿ; ಯಾಕಂದರೆ ಅವನು ನನ್ನ ವಿಷಯವಾಗಿ ಬರೆದನು.ಅವನು ಬರೆದದ್ದನ್ನು ನೀವು ನಂಬದಿದ್ದರೆ ನನ್ನ ಮಾತುಗಳನ್ನು ಹೇಗೆ ನಂಬಿರಿ ಅಂದನು.
Cross references
- John 12:43 ಯೋಹಾನನು 12:43ಯಾಕಂದರೆ ಅವರು ದೇವರ ಹೊಗಳಿ ಕೆಗಿಂತ ಮನುಷ್ಯರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಿದರು.
- Romans 2:29 ರೋಮಾಪುರದವರಿಗೆ 2:29ಆದರೆ ಒಳಗೆ ಯೆಹೂದ್ಯ ನಾಗಿರುವವನೇ ಯೆಹೂದ್ಯನು; ಸುನ್ನತಿಯು ಹೃದಯಕ್ಕೆ ಸಂಬಂಧಪಟ್ಟದ್ದಾಗಿ ಅಕ್ಷರೀಕವಾಗಿರದೆ ಆತ್ಮೀಕವಾದದ್ದೇ ಆಗಿದೆ. ಹೀಗೆ ಅವನ ಹೊಗಳಿಕೆಯು ಮನುಷ್ಯರಿಂದಾ ಗಿರದೆ ದೇವರಿಂದಲೇ ಆಗಿರುವದು.
- Philippians 2:3 ಫಿಲಿಪ್ಪಿಯವರಿಗೆ 2:3ಕಲಹದಿಂದಾಗಲಿ ಒಣ ಹೆಮ್ಮೆಯಿಂದಾಗಲಿ ಯಾವ ದನ್ನೂ ಮಾಡದೆ ಪ್ರತಿಯೊಬ್ಬನು ದೀನ ಮನಸ್ಸಿನಿಂದ ಬೇರೆಯವರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.
- Matthew 23:5 ಮತ್ತಾಯನು 23:5ಆದರೆ ತಾವು ಮಾಡುವ ತಮ್ಮ ಕ್ರಿಯೆಗಳನ್ನೆಲ್ಲಾ ಜನರು ನೋಡುವಂತೆ ಮಾಡು ತ್ತಾರೆ. ಅವರು ತಮ್ಮ ಜ್ಞಾಪಕಪಟ್ಟಿಗಳನ್ನು ಅಗಲಮಾಡಿ ಉಡುಪುಗಳ ಅಂಚುಗಳನ್ನು ಉದ್ದ ಮಾಡುತ್ತಾ
- Romans 8:7–8 ರೋಮಾಪುರದವರಿಗೆ 8:7–8ಶರೀರ ಸಂಬಂಧವಾದ ಮನಸ್ಸು ದೇವರಿಗೆ ಶತ್ರುತ್ವವು; ಕಾರಣವೇನಂದರೆ ಅಂಥ ಮನಸ್ಸು ದೇವರ ನಿಯಮಕ್ಕೆ ಒಳಪಡುವದಿಲ್ಲ, ಒಳಪಡುವದಕ್ಕಾಗುವದೂ ಇಲ್ಲ. ಹೀಗಿರಲಾಗಿ ಶರೀರಾಧೀನರು ದೇವರನ್ನು ಮೆಚ್ಚಿಸಲಾರರು.
- 1 Peter 1:7 1 ಪೇತ್ರನು 1:7ಭಂಗಾರವು ನಾಶವಾಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಿಂದ ಶೋಧಿಸುವದುಂಟಷ್ಟೆ. ಭಂಗಾರಕ್ಕಿಂತ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವಮಾನ ಗಳನ್ನು ಉಂಟುಮಾಡುವದು.
- 1 Samuel 2:30 1 ಸಮುವೇಲನು 2:30ಆದದರಿಂದ ಇಸ್ರಾಯೇಲಿನ ದೇವರಾದ ಕರ್ತನು ಹೇಳುವ ದೇನಂದರೆ--ನಿನ್ನ ಮನೆಯವರೂ ನಿನ್ನ ತಂದೆಯ ಮನೆಯವರೂ ಎಂದೆಂದಿಗೂ ನನ್ನ ಸನ್ನಿಧಿಯಲ್ಲಿ ನಡೆದುಕೊಳ್ಳುವರೆಂದು ನಾನು ನಿಜವಾಗಿ ಹೇಳಿದ್ದೆನು. ಆದರೆ ಈಗ ಕರ್ತನು ಹೇಳುವದೇನಂದರೆ--ನನಗೆ ಅದು ದೂರವಾಗಿರಲಿ; ಯಾಕಂದರೆ ನನ್ನನ್ನು ಸನ್ಮಾನಿಸು ವವರನ್ನು ನಾನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸು ವವರನ್ನು ನಾನು ತಿರಸ್ಕರಿಸುವೆನು.
- Romans 2:7 ರೋಮಾಪುರದವರಿಗೆ 2:7ಯಾರು ಒಳ್ಳೆಯದನ್ನು ಮಾಡುವದರಲ್ಲಿ ತಾಳ್ಮೆಯಿಂದಿದ್ದು ಮಹಿಮೆ ಮಾನ ಮತ್ತು ನಿರ್ಲಯತ್ವವನ್ನು ಹುಡುಕು ತ್ತಾರೋ ಅವರಿಗೆ ನಿತ್ಯಜೀವವನ್ನೂ
- Romans 2:10 ರೋಮಾಪುರದವರಿಗೆ 2:10ಆದರೆ ಒಳ್ಳೆಯದನ್ನು ಮಾಡುವ ಪ್ರತಿ ಮನುಷ್ಯನಿಗೆ ಅಂದರೆ ಮೊದಲು ಯೆಹೂದ್ಯರಿಗೆ ಆಮೇಲೆ ಅನ್ಯರಿಗೆ ಸಹ ಮಹಿಮೆ ಮಾನ ಮತ್ತು ಸಮಾಧಾನವನ್ನೂ ಕೊಡುವನು.
- Matthew 25:21–23 ಮತ್ತಾಯನು 25:21–23ಆಗ ಅವನ ಯಜಮಾನನು ಅವನಿಗೆ--ನಂಬಿಗಸ್ತನಾದ ಒಳ್ಳೇ ಸೇವಕನೇ, ಒಳ್ಳೇದನ್ನು ಮಾಡಿದ್ದೀ. ಸ್ವಲ್ಪವಾದವುಗಳಲ್ಲಿ ನೀನು ನಂಬಿಗಸ್ತ ನಾದದ್ದರಿಂದ ನಾನು ನಿನ್ನನ್ನು ಬಹಳವಾದವುಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು; ನೀನು ನಿನ್ನ ಯಜಮಾನನ ಸಂತೋಷದಲ್ಲಿ ಪ್ರವೇಶಿಸು ಅಂದನು. ಎರಡು ತಲಾಂತುಗಳನ್ನು ಹೊಂದಿದ್ದವನು ಸಹ ಬಂದು--ಒಡೆಯನೇ, ನೀನು ನನಗೆ ಎರಡು ತಲಾಂತುಗಳನ್ನು ಒಪ್ಪಿಸಿದಿ; ಇಗೋ, ಅವುಗಳಲ್ಲದೆ ಇನ್ನೂ ಎರಡು ತಲಾಂತುಗಳನ್ನು ನಾನು ಸಂಪಾದಿಸಿ ದ್ದೇನೆ ಅಂದನು. ಆಗ ಅವನ ಯಜಮಾನನು ಅವನಿಗೆ--ನಂಬಿಗಸ್ತನಾದ ಒಳ್ಳೇ ಸೇವಕನೇ, ಒಳ್ಳೇ ದನ್ನು ಮಾಡಿದ್ದೀ; ಸ್ವಲ್ಪವಾದವುಗಳಲ್ಲಿ ನೀನು ನಂಬಿಗ ಸ್ತನಾದದ್ದರಿಂದ ನಾನು ನಿನ್ನನ್ನು ಬಹಳವಾದವುಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು; ನೀನು ನಿನ್ನ ಯಜಮಾನನ ಸಂತೋಷದಲ್ಲಿ ಪ್ರವೇಶಿಸು ಅಂದನು.
- 1 Corinthians 4:5 1 ಕೊರಿಂಥದವರಿಗೆ 4:5ಆದದರಿಂದ ಕಾಲಕ್ಕೆ ಮೊದಲು ಕರ್ತನು ಬರುವತನಕ ಯಾವದನ್ನೂ ಕುರಿತು ತೀರ್ಪು ಮಾಡಬೇಡಿರಿ; ಆತನು ಕತ್ತಲೆಯ ಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು; ಹೃದಯದ ಯೋಚನೆಗಳನ್ನು ಪ್ರತ್ಯಕ್ಷಪಡಿಸುವನು; ಆಗ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವ ರಿಂದ ಬರುವದು.
- Luke 19:17 ಲೂಕನು 19:17ಅದಕ್ಕೆ ಅವನು ಅವ ನಿಗೆ--ಒಳ್ಳೇದು. ನೀನು ಉತ್ತಮ ಆಳು; ಯಾಕಂದರೆ ನೀನು ಅತಿ ಸ್ವಲ್ಪದರಲ್ಲಿ ನಂಬಿಗಸ್ತನಾಗಿದ್ದೀ ಹತ್ತು ಪಟ್ಟಣಗಳ ಮೇಲೆ ನೀನು ಅಧಿಕಾರಿಯಾಗಿರು ಅಂದನು.