John · chapter 8 · verse 31
John 8:31 in Kannada
ಆತನ ಮೇಲೆ ನಂಬಿಕೆಯಿಟ್ಟ ಆ ಯೆಹೂದ್ಯರಿಗೆ ಯೇಸು ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿದ್ದರೆ ನಿಜವಾ ಗಿಯೂ ನೀವು ನನ್ನ ಶಿಷ್ಯರಾಗುವಿರಿ.
Aatana mele nambikeyitta aa yehoodyarige yesu neevu nanna vaakyadalli nelegondiddare nijavaa giyoo neevu nanna shishyaraaguviri.
John 8:31 in English
- King James Version (KJV)
- Then said Jesus to those Jews which believed on him, If ye continue in my word, [then] are ye my disciples indeed;
- World English Bible (WEB)
- Jesus therefore said to those Jews who had believed him, “If you remain in my word, then you are truly my disciples.
- American Standard Version (ASV)
- Jesus therefore said to those Jews that had believed him, If ye abide in my word, [then] are ye truly my disciples;
- Bible in Basic English (BBE)
- Then Jesus said to the Jews who had faith in him, If you keep my word, then you are truly my disciples;
- Darby Translation (DBY)
- Jesus therefore said to the Jews who believed him, If ye abide in my word, ye are truly my disciples;
- Webster's Bible (WBS)
- Then said Jesus to those Jews who believed on him, If ye continue in my word, ye are my disciples indeed;
- Young's Literal Translation (YLT)
- Jesus, therefore, said unto the Jews who believed in him, 'If ye may remain in my word, truly my disciples ye are, and ye shall know the truth,
Read in context
- 29ಇದಲ್ಲದೆ ನನ್ನನ್ನು ಕಳುಹಿಸಿದಾತನು ನನ್ನ ಸಂಗಡ ಇದ್ದಾನೆ; ತಂದೆಯು ನನ್ನನ್ನು ಒಂಟಿಯಾಗಿ ಬಿಡಲಿಲ್ಲ;ಯಾಕಂದರೆ ಆತನು ಮೆಚ್ಚುವವುಗಳನ್ನೇ ನಾನು ಯಾವಾಗಲೂ ಮಾಡುತ್ತೇನೆ ಅಂದನು.
- 30ಆತನು ಈ ಮಾತುಗಳನ್ನು ಹೇಳುತ್ತಿದ್ದಾಗಲೇ ಅನೇಕರು ಆತನಲ್ಲಿ ನಂಬಿಕೆಯಿಟ್ಟರು.
- 31ಆತನ ಮೇಲೆ ನಂಬಿಕೆಯಿಟ್ಟ ಆ ಯೆಹೂದ್ಯರಿಗೆ ಯೇಸು ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿದ್ದರೆ ನಿಜವಾ ಗಿಯೂ ನೀವು ನನ್ನ ಶಿಷ್ಯರಾಗುವಿರಿ.
- 32ಇದಲ್ಲದೆ ನೀವು ಸತ್ಯವನ್ನು ತಿಳಿದುಕೊಳ್ಳುವಿರಿ; ಆ ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವದು ಎಂದು ಹೇಳಿದನು.
- 33ಅದಕ್ಕೆ ಅವರು ಪ್ರತ್ಯುತ್ತರವಾಗಿ ಆತನಿಗೆ--ನಾವು ಅಬ್ರಹಾಮನ ಸಂತತಿಯವರಾಗಿರಲಾಗಿ ಯಾವ ಮನುಷ್ಯನಿಗೂ ಎಂದಿಗೂ ಗುಲಾಮರಾಗಿರಲಿಲ್ಲ; ಹಾಗಾದರೆ--ನಿಮಗೆ ಬಿಡುಗಡೆಯಾಗುವದೆಂದು ನೀನು ಹೇಗೆ ಹೇಳುತ್ತೀ ಅಂದರು.
Cross references
- 2 John 1:9 2 ಯೋಹಾನನು 1:9ಕ್ರಿಸ್ತನ ಬೋಧನೆಯಲ್ಲಿ ನೆಲೆಗೊಳ್ಳದೆ ಅದನ್ನು ಅತಿಕ್ರಮಿ ಸುವವನಿಗೆ ದೇವರಿಲ್ಲ; ಕ್ರಿಸ್ತನ ಬೋಧನೆಯಲ್ಲಿ ನೆಲೆ ಗೊಂಡಿರುವವನಿಗೆ ತಂದೆಯೂ ಮಗನೂ ಇದ್ದಾರೆ.
- John 15:4–9 ಯೋಹಾನನು 15:4–9ನನ್ನಲ್ಲಿ ನೆಲೆಗೊಂಡಿರ್ರಿ, ನಾನು ನಿಮ್ಮಲ್ಲಿ ನೆಲೆ ಗೊಂಡಿರುವೆನು. ಕೊಂಬೆಯು ದ್ರಾಕ್ಷೇಯಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲ ಕೊಡಲಾರದೋ ಹಾಗೆಯೇ ನೀವೂ ನನ್ನಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ. ನಾನೇ ದ್ರಾಕ್ಷೇಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿ ಮತ್ತು ನಾನು ಅವನಲ್ಲಿ ನೆಲೆಗೊಂಡಿದ್ದರೆ ಅವನೇ ಬಹಳ ಫಲವನ್ನು ಕೊಡುವನು; ಯಾಕಂದರೆ ನಾನಿಲ್ಲದೆ ನೀವು ಏನೂ ಮಾಡಲಾರಿರಿ. ಒಬ್ಬನು ನನ್ನಲ್ಲಿ ನೆಲೆಗೊಂಡಿರದಿದ್ದರೆ ಅವನು ಕೊಂಬೆಯಂತೆ ಬಿಸಾಡಲ್ಪಟ್ಟು ಒಣಗಿ ಹೋಗುವದರಿಂದ ಜನರು ಅವುಗಳನ್ನು ಕೂಡಿಸಿ ಬೆಂಕಿಯೊಳಗೆ ಹಾಕುವರು; ಅವು ಸುಡಲ್ಪಡುವವು. ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನಿಮಗೆ ಬೇಕಾದದ್ದನ್ನು ಬೇಡಿಕೊಳ್ಳಿರಿ, ನಿಮಗೆ ಅದು ದೊರೆ ಯುವದು. ನೀವು ಬಹಳ ಫಲವನ್ನು ಕೊಡುವ ದರಿಂದ ನನ್ನ ತಂದೆಗೆ ಮಹಿಮೆ ಉಂಟಾಗುವದು; ಹೀಗೆ ನೀವು ನನ್ನ ಶಿಷ್ಯರಾಗುವಿರಿ. ತಂದೆಯು ನನ್ನನ್ನು ಪ್ರೀತಿಸಿದ ಹಾಗೆಯೇ ನಾನು ನಿಮ್ಮನ್ನು ಪ್ರೀತಿಸಿದ್ದೇನೆ; ನೀವು ನನ್ನ ಪ್ರೀತಿಯಲ್ಲಿ ನೆಲೆಯಾಗಿರ್ರಿ.
- 2 Timothy 3:14 2 ತಿಮೊಥೆಯನಿಗೆ 3:14ನೀನಾದರೋ ಕಲಿತು ದೃಢವಾಗಿ ನಂಬಿದವುಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬದನ್ನು ಆಲೋಚಿಸು.
- 1 Timothy 4:16 1 ತಿಮೊಥೆಯನಿಗೆ 4:16ನಿನ್ನ ವಿಷಯದಲ್ಲಿಯೂ ಉಪ ದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಇವುಗಳಲ್ಲಿ ನಿರತನಾಗಿರು; ಹೀಗೆ ಮಾಡುವದರಿಂದ ನೀನು ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.
- James 1:25 ಯಾಕೋಬನು 1:25ಆದರೆ ಬಿಡುಗಡೆ ಯನ್ನುಂಟುಮಾಡುವ ಪರಿಪೂರ್ಣವಾದ ನಿಯಮ ವನ್ನು ಲಕ್ಷ್ಯಕೊಟ್ಟು ನೋಡಿ ಇನ್ನೂ ನೋಡುತ್ತಲೇ ಇರುವವನು (ವಾಕ್ಯವನ್ನು) ಕೇಳಿ ಮರೆತುಹೋಗುವವ ನಾಗಿರದೆ ಅದರ ಪ್ರಕಾರ ನಡೆಯುವವನಾಗಿದ್ದು ತನ್ನ ಕ್ರಿಯೆಯಿಂದ ಧನ್ಯನಾಗುವನು.
- Colossians 1:23 ಕೊಲೊಸ್ಸೆಯವರಿಗೆ 1:23ಪೌಲನೆಂಬ ನಾನು ಈ ಸುವಾರ್ತೆಗೆ ಸೇವಕನಾದೆನು; ನೀವು ಕೇಳಿದಂಥ ಮತ್ತು ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟಂಥ ಸುವಾರ್ತೆಯಿಂದ ಉಂಟಾದ ನಿರೀಕ್ಷೆ ಯನ್ನು ಬಿಟ್ಟು ತೊಲಗಿಹೋಗದೆ ಅಸ್ತಿವಾರದ ಮೇಲೆ ನಿಂತು ಸ್ಥಿರವಾಗಿದ್ದು ನಂಬಿಕೆಯಲ್ಲಿ ನೆಲೆಗೊಂಡಿರು ವದಾದರೆ
- 1 Samuel 12:14 1 ಸಮುವೇಲನು 12:14ನೀವು ಕರ್ತನ ಮಾತಿಗೆ ವಿರೋಧವಾಗಿ ತಿರುಗಿ ಬೀಳದೆ ಕರ್ತನಿಗೆ ಭಯಪಟ್ಟು ಆತನನ್ನು ಸೇವಿಸಿ ಆತನ ಮಾತಿಗೆ ವಿಧೇಯರಾದರೆ ನೀವೂ ನಿಮ್ಮ ಮೇಲೆ ಆಳುವ ಅರಸನೂ ನಿಮ್ಮ ದೇವರಾದ ಕರ್ತನನ್ನು ತಪ್ಪದೆ ಹಿಂಬಾಲಿಸುವಿರಿ.
- John 6:66–71 ಯೋಹಾನನು 6:66–71ಅಂದಿನಿಂದ ಆತನ ಶಿಷ್ಯರಲ್ಲಿ ಅನೇಕರು ಹಿಂದಕ್ಕೆ ಹೊರಟುಹೋಗಿ ಮತ್ತೆ ಅವರು ಆತನ ಸಂಗಡ ಎಂದಿಗೂ ಸಂಚರಿಸಲೇ ಇಲ್ಲ. ಆಗ ಯೇಸು ಹನ್ನೆ ರಡು ಮಂದಿಗೆ--ನೀವು ಸಹ ಹೊರಟು ಹೋಗಬೇಕೆಂ ದಿದ್ದೀರೋ ಎಂದು ಕೇಳಲು ಸೀಮೋನ್ ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ನಾವು ಯಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವದ ವಾಕ್ಯಗಳು ಉಂಟಲ್ಲಾ. ನೀನು ಜೀವವುಳ್ಳ ದೇವರಮಗನಾದ ಆ ಕ್ರಿಸ್ತನೆಂದು ನಾವು ಖಂಡಿತವಾಗಿ ನಂಬಿದ್ದೇವೆ ಅಂದನು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವ ರಿಗೆ--ಹನ್ನೆರಡು ಮಂದಿಯಾದ ನಿಮ್ಮನ್ನು ನಾನು ಆರಿಸಿ ಕೊಂಡೆನಲ್ಲವೇ? ಆದರೆ ನಿಮ್ಮಲ್ಲಿ ಒಬ್ಬನು ಸೈತಾನನಾ ಗಿದ್ದಾನೆ ಅಂದನು.ಸೀಮೋನನ ಮಗನಾದ ಇಸ್ಕರಿಯೋತ್ ಯೂದನ ವಿಷಯವಾಗಿ ಆತನು ಹೇಳಿ ದನು. ಯಾಕಂದರೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಇವನು ಆತನನ್ನು ಹಿಡುಕೊಡುವದಕ್ಕಿದ್ದನು. ಸೀಮೋನನ ಮಗನಾದ ಇಸ್ಕರಿಯೋತ್ ಯೂದನ ವಿಷಯವಾಗಿ ಆತನು ಹೇಳಿ ದನು. ಯಾಕಂದರೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಇವನು ಆತನನ್ನು ಹಿಡುಕೊಡುವದಕ್ಕಿದ್ದನು.
- Hebrews 3:14 ಇಬ್ರಿಯರಿಗೆ 3:14ಮೊದಲಿ ನಿಂದಿರುವ ನಮ್ಮ ಭರವಸವನ್ನು ಅಂತ್ಯದವರೆಗೂ ನಾವು ದೃಢವಾಗಿ ಹಿಡುಕೊಳ್ಳು ವದಾದರೆ ಕ್ರಿಸ್ತನಲ್ಲಿ ಪಾಲುಗಾರಾಗಿದ್ದೇವಲ್ಲಾ!
- Romans 2:7 ರೋಮಾಪುರದವರಿಗೆ 2:7ಯಾರು ಒಳ್ಳೆಯದನ್ನು ಮಾಡುವದರಲ್ಲಿ ತಾಳ್ಮೆಯಿಂದಿದ್ದು ಮಹಿಮೆ ಮಾನ ಮತ್ತು ನಿರ್ಲಯತ್ವವನ್ನು ಹುಡುಕು ತ್ತಾರೋ ಅವರಿಗೆ ನಿತ್ಯಜೀವವನ್ನೂ
- Matthew 24:13 ಮತ್ತಾಯನು 24:13ಆದರೆ ಕಡೇವರೆಗೆ ತಾಳುವವನೇ ರಕ್ಷಿಸಲ್ಪಡುವನು.
- 1 John 2:24 1 ಯೋಹಾನನು 2:24ನೀವಂತೂ ಯಾವದನ್ನು ಮೊದಲಿನಿಂದ ಕೇಳಿದ್ದೀರೋ ಅದು ನಿಮ್ಮಲ್ಲಿ ನೆಲೆಗೊಂಡಿರಲಿ. ಮೊದಲಿನಿಂದ ನೀವು ಕೇಳಿದ್ದು ನಿಮ್ಮಲ್ಲಿ ನೆಲೆಗೊಂಡಿದ್ದರೆ ನೀವು ಸಹ ಮಗನಲ್ಲಿಯೂ ತಂದೆಯಲ್ಲಿಯೂ ನೆಲೆಗೊಂಡಿ ರುತ್ತೀರಿ.