John · chapter 15 · verse 4
John 15:4 in Kannada
ನನ್ನಲ್ಲಿ ನೆಲೆಗೊಂಡಿರ್ರಿ, ನಾನು ನಿಮ್ಮಲ್ಲಿ ನೆಲೆ ಗೊಂಡಿರುವೆನು. ಕೊಂಬೆಯು ದ್ರಾಕ್ಷೇಯಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲ ಕೊಡಲಾರದೋ ಹಾಗೆಯೇ ನೀವೂ ನನ್ನಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ.
Nannalli nelegondirri, naanu nimmalli nele gondiruvenu. Kombeyu draaksheyaballiyalli nelegondiradiddare hege tannashtakke taane phala kodalaarado haageye neevoo nannali nelegondiradiddare phalakodalaariri.
John 15:4 in English
- King James Version (KJV)
- Abide in me, and I in you. As the branch cannot bear fruit of itself, except it abide in the vine; no more can ye, except ye abide in me.
- World English Bible (WEB)
- Remain in me, and I in you. As the branch can’t bear fruit by itself unless it remains in the vine, so neither can you, unless you remain in me.
- American Standard Version (ASV)
- Abide in me, and I in you. As the branch cannot bear fruit of itself, except it abide in the vine; so neither can ye, except ye abide in me.
- Bible in Basic English (BBE)
- Be in me at all times as I am in you. As the branch is not able to give fruit of itself, if it is not still on the vine, so you are not able to do so if you are not in me.
- Darby Translation (DBY)
- Abide in me and I in you. As the branch cannot bear fruit of itself unless it abide in the vine, thus neither [can] ye unless ye abide in me.
- Webster's Bible (WBS)
- Abide in me, and I in you. As the branch cannot bear fruit of itself, except it abide in the vine: no more can ye, except ye abide in me.
- Young's Literal Translation (YLT)
- remain in me, and I in you, as the branch is not able to bear fruit of itself, if it may not remain in the vine, so neither ye, if ye may not remain in me.
Read in context
- 2ನನ್ನಲ್ಲಿ ಫಲಫಲಿಸದ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚಾಗಿ ಫಲಕೊಡುವ ಹಾಗೆ ಅದನ್ನು ಶುದ್ಧಿ ಮಾಡುತ್ತಾನೆ.
- 3ನಾನು ನಿಮಗೆ ಹೇಳಿದ ಮಾತಿನ ದೆಸೆಯಿಂದ ನೀವು ಈಗ ಶುದ್ಧರಾಗಿದ್ದೀರಿ.
- 4ನನ್ನಲ್ಲಿ ನೆಲೆಗೊಂಡಿರ್ರಿ, ನಾನು ನಿಮ್ಮಲ್ಲಿ ನೆಲೆ ಗೊಂಡಿರುವೆನು. ಕೊಂಬೆಯು ದ್ರಾಕ್ಷೇಯಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲ ಕೊಡಲಾರದೋ ಹಾಗೆಯೇ ನೀವೂ ನನ್ನಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ.
- 5ನಾನೇ ದ್ರಾಕ್ಷೇಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿ ಮತ್ತು ನಾನು ಅವನಲ್ಲಿ ನೆಲೆಗೊಂಡಿದ್ದರೆ ಅವನೇ ಬಹಳ ಫಲವನ್ನು ಕೊಡುವನು; ಯಾಕಂದರೆ ನಾನಿಲ್ಲದೆ ನೀವು ಏನೂ ಮಾಡಲಾರಿರಿ.
- 6ಒಬ್ಬನು ನನ್ನಲ್ಲಿ ನೆಲೆಗೊಂಡಿರದಿದ್ದರೆ ಅವನು ಕೊಂಬೆಯಂತೆ ಬಿಸಾಡಲ್ಪಟ್ಟು ಒಣಗಿ ಹೋಗುವದರಿಂದ ಜನರು ಅವುಗಳನ್ನು ಕೂಡಿಸಿ ಬೆಂಕಿಯೊಳಗೆ ಹಾಕುವರು; ಅವು ಸುಡಲ್ಪಡುವವು.
Cross references
- 1 John 2:6 1 ಯೋಹಾನನು 2:6ಆತನಲ್ಲಿ ನೆಲೆ ಗೊಂಡವನಾಗಿದ್ದೇನೆಂದು ಹೇಳುವವನು ಆತನು ನಡೆ ದಂತೆಯೇ ತಾನೂ ನಡೆಯುವದಕ್ಕೆ ಬದ್ಧನಾಗಿದ್ದಾನೆ.
- Galatians 2:20 ಗಲಾತ್ಯದವರಿಗೆ 2:20ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ; ಆದಾಗ್ಯೂ ನಾನು ಜೀವಿ ಸುತ್ತೇನೆ; ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ; ಈಗ ಶರೀರದಲ್ಲಿರುವ ನಾನು ಜೀವಿಸುವದು ದೇವಕುಮಾರನ ಮೇಲಣ ನಂಬಿಕೆ ಯಲ್ಲಿಯೇ, ಆತನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನೇನಾನು ದೇವರ ಕೃಪೆಯನ್ನು ನಿರರ್ಥಕ ಮಾಡುವದಿಲ್ಲ. ನ್ಯಾಯಪ್ರಮಾಣದಿಂದ ನೀತಿಯುಂಟಾಗುವದಾದರೆ ಕ್ರಿಸ್ತನು ಮರಣವನ್ನು ಹೊಂದಿದ್ದು ವ್ಯರ್ಥವಾಯಿತು.
- John 8:31 ಯೋಹಾನನು 8:31ಆತನ ಮೇಲೆ ನಂಬಿಕೆಯಿಟ್ಟ ಆ ಯೆಹೂದ್ಯರಿಗೆ ಯೇಸು ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿದ್ದರೆ ನಿಜವಾ ಗಿಯೂ ನೀವು ನನ್ನ ಶಿಷ್ಯರಾಗುವಿರಿ.
- 2 John 1:9 2 ಯೋಹಾನನು 1:9ಕ್ರಿಸ್ತನ ಬೋಧನೆಯಲ್ಲಿ ನೆಲೆಗೊಳ್ಳದೆ ಅದನ್ನು ಅತಿಕ್ರಮಿ ಸುವವನಿಗೆ ದೇವರಿಲ್ಲ; ಕ್ರಿಸ್ತನ ಬೋಧನೆಯಲ್ಲಿ ನೆಲೆ ಗೊಂಡಿರುವವನಿಗೆ ತಂದೆಯೂ ಮಗನೂ ಇದ್ದಾರೆ.
- John 6:56 ಯೋಹಾನನು 6:56ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನನ್ನಲ್ಲಿ ವಾಸಿಸುತ್ತಾನೆ; ನಾನು ಅವನಲ್ಲಿ ವಾಸಿ ಸುತ್ತೇನೆ.
- John 15:5–7 ಯೋಹಾನನು 15:5–7ನಾನೇ ದ್ರಾಕ್ಷೇಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿ ಮತ್ತು ನಾನು ಅವನಲ್ಲಿ ನೆಲೆಗೊಂಡಿದ್ದರೆ ಅವನೇ ಬಹಳ ಫಲವನ್ನು ಕೊಡುವನು; ಯಾಕಂದರೆ ನಾನಿಲ್ಲದೆ ನೀವು ಏನೂ ಮಾಡಲಾರಿರಿ. ಒಬ್ಬನು ನನ್ನಲ್ಲಿ ನೆಲೆಗೊಂಡಿರದಿದ್ದರೆ ಅವನು ಕೊಂಬೆಯಂತೆ ಬಿಸಾಡಲ್ಪಟ್ಟು ಒಣಗಿ ಹೋಗುವದರಿಂದ ಜನರು ಅವುಗಳನ್ನು ಕೂಡಿಸಿ ಬೆಂಕಿಯೊಳಗೆ ಹಾಕುವರು; ಅವು ಸುಡಲ್ಪಡುವವು. ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನಿಮಗೆ ಬೇಕಾದದ್ದನ್ನು ಬೇಡಿಕೊಳ್ಳಿರಿ, ನಿಮಗೆ ಅದು ದೊರೆ ಯುವದು.
- Philippians 1:11 ಫಿಲಿಪ್ಪಿಯವರಿಗೆ 1:11ಯೇಸು ಕ್ರಿಸ್ತನ ಮೂಲಕ ನೀತಿಯೆಂಬ ಫಲಗಳಿಂದ ತುಂಬಿದವರಾಗಿ ದೇವರಿಗೆ ಮಹಿಮೆಯನ್ನೂ ಸ್ತೋತ್ರ ವನ್ನೂ ತರುವವರಾಗಿರಬೇಕೆಂತಲೂ ಪ್ರಾರ್ಥಿಸುತ್ತೇನೆ.
- 1 John 2:24–28 1 ಯೋಹಾನನು 2:24–28ನೀವಂತೂ ಯಾವದನ್ನು ಮೊದಲಿನಿಂದ ಕೇಳಿದ್ದೀರೋ ಅದು ನಿಮ್ಮಲ್ಲಿ ನೆಲೆಗೊಂಡಿರಲಿ. ಮೊದಲಿನಿಂದ ನೀವು ಕೇಳಿದ್ದು ನಿಮ್ಮಲ್ಲಿ ನೆಲೆಗೊಂಡಿದ್ದರೆ ನೀವು ಸಹ ಮಗನಲ್ಲಿಯೂ ತಂದೆಯಲ್ಲಿಯೂ ನೆಲೆಗೊಂಡಿ ರುತ್ತೀರಿ. ನಿತ್ಯಜೀವದ ವಾಗ್ದಾನವೇ ಆತನು ನಮಗೆ ಮಾಡಿದ ವಾಗ್ದಾನವಾಗಿದೆ. ನಿಮ್ಮನ್ನು ವಂಚಿಸುವವರ ವಿಷಯವಾಗಿ ಇವು ಗಳನ್ನು ನಾನು ನಿಮಗೆ ಬರೆದಿದ್ದೇನೆ. ಆದರೆ ಆತನಿಂದ ನೀವು ಹೊಂದಿದ ಅಭಿಷೇಕವು ನಿಮ್ಮಲ್ಲಿ ನೆಲೆಗೊಂಡಿರುವದರಿಂದ ಯಾವನಾದರೂ ನಿಮಗೆ ಉಪದೇಶಮಾಡುವದು ಅವಶ್ಯವಿಲ್ಲ. ಆ ಅಭಿಷೇಕವೇ ಎಲ್ಲಾ ವಿಷಯಗಳಲ್ಲಿ ನಿಮಗೆ ಉಪದೇಶ ಮಾಡುವಂಥ ದಾಗಿದ್ದು ಸತ್ಯವಾಗಿದೆ. ಸುಳ್ಳಲ್ಲ, ಅದು ನಿಮಗೆ ಉಪದೇಶ ಮಾಡಿದ ಪ್ರಕಾರವೇ ಆತನಲಿ ಚಿಕ್ಕ ಮಕ್ಕಳೇ, ಆತನು ಪ್ರತ್ಯಕ್ಷನಾಗು ವಾಗ ನಾವು ಆತನ ಆಗಮನದಲ್ಲಿ ಆತನ ಮುಂದೆ ನಿಲ್ಲಲು ನಾಚಿಕೆಪಡದೆ ಧೈರ್ಯದಿಂದಿರುವಂತೆ ಆತನಲ್ಲಿ ನೆಲೆಗೊಂಡಿರ್ರಿ.ಆತನು ನೀತಿವಂತನಾಗಿ ದ್ದಾನೆಂಬದು ನಿಮಗೆ ಗೊತ್ತಾಗಿದ್ದರೆ ನೀತಿಯನ್ನು ಅನುಸರಿಸುವ ಪ್ರತಿಯೊಬ್ಬನು ಆತನಿಂದ ಹುಟ್ಟಿದವನಾಗಿದ್ದಾನೆಂದು ನೀವು ತಿಳಿದಿದ್ದೀರಿ.
- John 14:20 ಯೋಹಾನನು 14:20ನಾನು ನನ್ನ ತಂದೆಯಲ್ಲಿಯೂ ನೀವು ನನ್ನಲ್ಲಿಯೂ ನಾನು ನಿಮ್ಮ ಲ್ಲಿಯೂ ಇರುವೆನೆಂದು ನೀವು ಆ ದಿನದಲ್ಲಿ ತಿಳಿದು ಕೊಳ್ಳುವಿರಿ.
- Luke 8:15 ಲೂಕನು 8:15ಆದರೆ ಒಳ್ಳೇ ಭೂಮಿಯವರು ಯಾರಂದರೆ ಯಥಾರ್ಥವಾದ ಒಳ್ಳೇ ಹೃದಯದಿಂದ ವಾಕ್ಯವನ್ನು ಕೇಳಿ ಅದನು ಕೈಕೊಂಡು ತಾಳ್ಮೆಯಿಂದ ಫಲಿಸುವವರೇ.
- 2 Corinthians 13:5 2 ಕೊರಿಂಥದವರಿಗೆ 13:5ನಂಬಿಕೆಯಲ್ಲಿ ನೀವು ಇದ್ದೀರೋ ಏನೋ ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ; ನಿಮ್ಮನ್ನು ನೀವೇ ಪರಿಶೋಧಿ ಸಿಕೊಳ್ಳಿರಿ; ನೀವು ಭ್ರಷ್ಠರಲ್ಲದಿದ್ದರೆ ಯೇಸು ಕ್ರಿಸ್ತನು ನಿಮ್ಮಲ್ಲಿದ್ದಾನೆಂದು ನಿಮ್ಮಷ್ಟಕ್ಕೆ ನೀವೇ ತಿಳಿದುಕೊಳ್ಳು ವದಿಲ್ಲವೋ?
- Colossians 2:6 ಕೊಲೊಸ್ಸೆಯವರಿಗೆ 2:6ಆದದರಿಂದ ನೀವು ಕರ್ತನಾದ ಕ್ರಿಸ್ತ ಯೇಸುವನ್ನು ಅಂಗೀಕರಿಸಿದಂತೆಯೇ ಆತನಲ್ಲಿದ್ದವರಾಗಿ ನಡೆದು ಕೊಳ್ಳಿರಿ.