Joshua · chapter 15 · verse 47
Joshua 15:47 in Kannada
ಅಷ್ಡೋದ್ ಅದರ ಪಟ್ಟಣಗಳೂ ಗ್ರಾಮಗಳೂ ಗಾಜಾ, ಅದರ ಪಟ್ಟಣಗಳೂ ಗ್ರಾಮಗಳೂ ಐಗುಪ್ತದ ನದಿ, ದೊಡ್ಡ ಸಮುದ್ರ, ಅದರ ಮೇರೆ, ಇವುಗಳ ವರೆಗೂ
Ashdod adara pattanagaloo graamagaloo gaajaa, adara pattanagaloo graamagaloo aiguptada nadi, dodda samudra, adara mere, ivugala varegoo
Joshua 15:47 in English
- King James Version (KJV)
- Ashdod with her towns and her villages, Gaza with her towns and her villages, unto the river of Egypt, and the great sea, and the border [thereof:]
- World English Bible (WEB)
- Ashdod, its towns and its villages; Gaza, its towns and its villages; to the brook of Egypt, and the great sea with its coastline.
- American Standard Version (ASV)
- Ashdod, its towns and its villages; Gaza, its towns and its villages; unto the brook of Egypt, and the great sea, and the border [thereof].
- Bible in Basic English (BBE)
- Ashdod, with her daughter-towns and her unwalled places; Gaza, with her daughter-towns and her unwalled places, to the stream of Egypt, with the Great Sea as a limit.
- Darby Translation (DBY)
- Ashdod, its dependent villages and its hamlets; Gazah, its dependent villages and its hamlets, as far as the torrent of Egypt, and the great sea and [its] coast.
- Webster's Bible (WBS)
- Ashdod, with her towns and her villages; Gaza, with her towns and her villages, to the river of Egypt, and the great sea, and its border:
- Young's Literal Translation (YLT)
- Ashdod, its towns and its villages, Gaza, its towns and its villages, unto the brook of Egypt, and the great sea, and [its] border.
Read in context
- 45ಎಕ್ರೋನ್ ಅದರ ಪಟ್ಟಣಗಳು, ಗ್ರಾಮಗಳು ಸಹ.
- 46ಎಕ್ರೋನಿನಿಂದ ಸಮುದ್ರದ ವರೆಗೆ ಅಷ್ಡೋದಿನ ಬಳಿಯಲ್ಲಿರುವ ಸಮಸ್ತ ಗ್ರಾಮಗಳೂ
- 47ಅಷ್ಡೋದ್ ಅದರ ಪಟ್ಟಣಗಳೂ ಗ್ರಾಮಗಳೂ ಗಾಜಾ, ಅದರ ಪಟ್ಟಣಗಳೂ ಗ್ರಾಮಗಳೂ ಐಗುಪ್ತದ ನದಿ, ದೊಡ್ಡ ಸಮುದ್ರ, ಅದರ ಮೇರೆ, ಇವುಗಳ ವರೆಗೂ
- 48ಬೆಟ್ಟಗಳಲ್ಲಿರುವ ಶಾವಿಾರ್, ಯತ್ತೀರ್, ಸೋಕೋ,
- 49ದನ್ನಾ, ದೆಬೀರ್ ಎಂಬ ಕಿರ್ಯತ್ಸನ್ನಾ,
Cross references
- Joshua 15:4 ಯೆಹೋಶುವ 15:4ಅಲ್ಲಿಂದ ಐಗುಪ್ತದ ನದಿ ಹಿಡಿದು ಸಮುದ್ರದ ಪರಿಯಂತರ ಹೋಗಿ ಸೇರುವದು; ಇದೇ ನಿಮ್ಮ ದಕ್ಷಿಣ ಮೇರೆ.
- Numbers 34:5–6 ಅರಣ್ಯಕಾಂಡ 34:5–6ಮೇರೆ ಅಚ್ಮೋನಿನಿಂದ ಐಗುಪ್ತದ ಹಳ್ಳಕ್ಕೆ ತಿರುಗಿ ಸಮುದ್ರ ತೀರದಲ್ಲಿ ಮುಗಿಯಬೇಕು. ಪಶ್ಚಿಮದ ಮೇರೆಯಾದರೆ ದೊಡ್ಡ ಸಮುದ್ರವೇ ನಿಮಗೆ ಮೇರೆಯಾಗಿರಬೇಕು; ಇದೇ ನಿಮ್ಮ ಪಶ್ಚಿಮ ಮೇರೆಯಾಗಿರುವದು.
- Joshua 13:3 ಯೆಹೋಶುವ 13:3ಗಾಜದವರೂ ಅಷ್ಡೋದ್ಯರೂ ಅಷ್ಕೆಲೋನ್ಯರೂ ಗಿತ್ತಿಯರೂ ಎಕ್ರೋನಿಯರೂ ಎಂಬುವ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳ ಪ್ರಾಂತ್ಯ ಅವ್ವೀಯರ ಸೀಮೆ;
- Jeremiah 47:1 ಯೆರೆಮೀಯ 47:1ಫರೋಹನು ಗಾಜಾವನ್ನು ಹೊಡೆಯುವದಕ್ಕಿಂತ ಮುಂಚೆ ಫಿಲಿಷ್ಟಿಯರಿಗೆ ವಿರೋಧವಾಗಿ ಪ್ರವಾದಿಯಾದ ಯೆರೆವಿಾಯನಿಗೆ ಬಂದ ಕರ್ತನ ವಾಕ್ಯವು.
- Jeremiah 47:5 ಯೆರೆಮೀಯ 47:5ಗಾಜಾದ ಮೇಲೆ ಬೋಳುತನ ಬಂತು; ಅಷ್ಕೆ ಲೋನು ಅವರ ತಗ್ಗಿನ ಉಳಿದವುಗಳಿಂದ ತೆಗೆದು ಹಾಕಲ್ಪಟ್ಟಿತು; ಎಷ್ಟು ಕಾಲ ನಿನಗೆ ನೀನೇ ಗಾಯಮಾಡಿ ಕೊಳ್ಳುವಿ?
- Judges 16:1–21 ನ್ಯಾಯಸ್ಥಾಪಕರು 16:1–21ಆಗ ಸಂಸೋನನು ಗಾಜಕ್ಕೆ ಹೋಗಿ ಅಲ್ಲಿ ಒಬ್ಬ ಜಾರಸ್ತ್ರೀಯನ್ನು ಕಂಡು ಅವಳ ಬಳಿಗೆ ಹೋದನು. ಆಗ ಸಂಸೋನನು ಅಲ್ಲಿಗೆ ಬಂದಿದ್ದಾನೆಂದು ಗಾಜದವರಿಗೆ ಗೊತ್ತಾಗಲು ಅವರು ಅವನನ್ನು ಸುತ್ತಿಕೊಂಡು ರಾತ್ರಿಯೆಲ್ಲಾ ಪಟ್ಟಣದ ಬಾಗಲಲ್ಲಿ ಅವನಿಗಾಗಿ ಹೊಂಚಿಕೊಂಡಿದ್ದು ರಾತ್ರಿ ಯೆಲ್ಲಾ ಸುಮ್ಮನಿದ್ದು--ಹೊತ್ತಾರೆ ಬೆಳಕಾದಾಗ ಅವ ನನ್ನು ಕೊಂದುಹಾಕುವೆವು ಅಂದರು. ಆದರೆ ಸಂಸೋ ನನು ಅರ್ಧ ರಾತ್ರಿಯ ವರೆಗೆ ಮಲಗಿದ್ದು ಅರ್ಧ ರಾತ್ರಿಯಲ್ಲಿ ಎದ್ದು ಪಟ್ಟಣದ ಬಾಗಲ ಕದಗಳನ್ನೂ ಅದರ ಎರಡು ತೋಳುಗಳನ್ನೂ ಹಿಡಿದು ಅಗುಳಿ ಸಹ ಕಿತ್ತು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಹೆಬ್ರೋನಿಗೆ ಎದುರಾಗಿರುವ ಪರ್ವತ ಶಿಖರದ ಮೇಲಕ್ಕೆ ಹೋದನು. ಇದರ ತರುವಾಯ ಆದದ್ದೇನಂದರೆ, ಸೋರೇಕ್ ತಗ್ಗಿನಲ್ಲಿದ್ದ ದೆಲೀಲಾ ಎಂಬ ಹೆಸರುಳ್ಳ ಒಬ್ಬ ಸ್ತ್ರೀಯನ್ನು ಪ್ರೀತಿಮಾಡಿದನು. ಅವಳ ಬಳಿಗೆ ಫಿಲಿಷ್ಟಿಯರ ಅಧಿಪತಿಗಳು ಬಂದು ಅವಳಿಗೆ--ನೀನು ಅವನನ್ನು ಮರುಳುಗೊಳಿಸಿ, ನಾವು ಅವನನ್ನು ಯಾವ ಪ್ರಕಾರ ಗೆದ್ದು ಕಟ್ಟಿ ಬಾಧಿಸಬಹುದೆಂದು ಅವನ ದೊಡ್ಡ ಶಕ್ತಿ ಯಾವದರಲ್ಲಿ ಅದೆ ಎಂದೂ ನೋಡು; ನಾವು ಒಬ್ಬೊಬ್ಬರು ನಿನಗೆ ಸಾವಿರದ ನೂರು ಬೆಳ್ಳಿಯ ನಾಣ್ಯ ಗಳನ್ನು ಕೊಡುವೆವು ಅಂದರು. ಆಗ ದೆಲೀಲಳು ಸಂಸೋನನಿಗೆ--ನಿನ್ನ ದೊಡ್ಡ ಶಕ್ತಿ ಯಾವದರಲ್ಲಿ ಉಂಟೆಂದೂ ನಿನ್ನನ್ನು ಬಾಧಿಸುವದಕ್ಕೆ ನೀನು ಹೇಗೆ ಕಟ್ಟಲ್ಪಡಬಹುದೆಂದೂ ನನಗೆ ದಯಮಾಡಿ ತಿಳಿಸು ಅಂದಳು. ಸಂಸೋನನು ಅವಳಿಗೆ--ಅವರು ನನ್ನನ್ನು ಒಣಗದೆ ಇರುವ ಹಸಿರಾದ ಏಳು ನಾರಿನ ಬರಲು ಗಳಿಂದ ಕಟ್ಟಿದರೆ ನಾನು ಬಲಿಹೀನನಾಗಿ ಮತ್ತೊಬ್ಬ ಮನುಷ್ಯನ ಹಾಗೆ ಇರುವೆನು ಅಂದನು. ಆಗ ಪಿಲಿಷ್ಟಿಯರ ಅಧಿಪತಿಗಳು ಒಣಗದೆ ಇರುವ ಹಸಿರಾದ ಏಳು ನಾರಿನ ಬರಲುಗಳನ್ನು ಅವಳಿಗೆ ಕೊಟ್ಟರು. ಅವಳು ಅವನನ್ನು ಅವುಗಳಿಂದ ಬಂಧಿಸಿದಳು. ಹೊಂಚುಗಾರರು ಅವಳೊಂದಿಗೆ ಕೊಠಡಿಯಲ್ಲಿ ದ್ದರು. ಅವಳು ಅವನಿಗೆ--ಸಂಸೋನನೇ, ಪಿಲಿಷ್ಟಿ ಯರು ನಿನ್ನ ಮೇಲೆ ಬರುತ್ತಾರೆ ಅಂದಳು. ಆಗ ಅವನು ಬೆಂಕಿಗೆ ತೋರಿಸಲ್ಪಟ್ಟ ಸಣಬಿನ ಹುರಿಹರಿದು ಹೋಗುವ ಹಾಗೆಯೇ ನಾರಿನ ಬರಲುಗಳನ್ನು ಹರಿದುಬಿಟ್ಟನು. ಹೀಗೆ ಅವನ ಶಕ್ತಿ ತಿಳಿಯಲ್ಪಡದೆ ಹೋಯಿತು. ದೆಲೀಲಳು ಸಂಸೋನನಿಗೆ--ಇಗೋ, ನೀನು ನನ್ನನ್ನು ವಂಚನೆಮಾಡಿ ನನಗೆ ಸುಳ್ಳುಗಳನ್ನು ಹೇಳಿದಿ. ಈಗ ನೀನು ಯಾವದರಿಂದ ಕಟ್ಟಲ್ಪಡಬಹುದೋ ನನಗೆ ದಯಮಾಡಿ ತಿಳಿಸು ಅಂದಳು. ಅವನು ಅವಳಿಗೆ ಯಾವ ಕೆಲಸಮಾಡದೆ ಇರುವ ಹೊಸ ಹಗ್ಗಗಳಿಂದ ನನ್ನನ್ನು ಕಟ್ಟಿದರೆ ನಾನು ಬಲಹೀನನಾಗಿ ಮತ್ತೊಬ್ಬ ಮನುಷ್ಯನ ಹಾಗೆ ಇರುವೆನು ಅಂದನು. ಆಗ ದೆಲೀಲಳು ಹೊಸ ಹಗ್ಗಗಳನ್ನು ತಕ್ಕೊಂಡು ಅವುಗಳಿಂದ ಅವನನ್ನು ಕಟ್ಟಿ ಅವನಿಗೆ--ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬರುತ್ತಾರೆ ಅಂದಳು. ಹೊಂಚುಗಾರರು ಕೊಠಡಿಯಲ್ಲಿದ್ದರು. ಆದರೆ ಅವನು ತನ್ನ ತೋಳುಗಳಲ್ಲಿ ಇರುವವುಗಳನ್ನು ದಾರದ ಹಾಗೆ ಹರಿದುಬಿಟ್ಟನು. ದೆಲೀಲಳು ಸಂಸೋನನಿಗೆ--ಈ ವರೆಗೂ ನನ್ನನ್ನು ವಂಚನೆಮಾಡಿ ನನಗೆ ಸುಳ್ಳುಗಳನ್ನು ಹೇಳಿದಿ. ನೀನು ಯಾವದರಿಂದ ಕಟ್ಟಲ್ಪಡಬಹುದೋ ತಿಳಿಸು ಅಂದಳು. ಅವನು ಅವಳಿಗೆ--ನೀನು ನನ್ನ ತಲೆಯ ಏಳು ಜಡೆ ಗಳನ್ನು ಮಗ್ಗದಲ್ಲಿ ನೆಯ್ದರೆ ಆಗುವದು ಅಂದನು. ಆಗ ಅವುಗಳನ್ನು ಗೂಟದಿಂದ ಭದ್ರಮಾಡಿ ಅವನಿಗೆ--ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬರುತ್ತಾರೆ ಅಂದಳು. ಅವನು ತನ್ನ ನಿದ್ರೆಯಿಂದ ಎಚ್ಚತ್ತು ಎದ್ದು ಮಗ್ಗವನ್ನೂ ಮಗ್ಗದ ಗೂಟವನ್ನೂ ಕಿತ್ತುಕೊಂಡು ಹೋದನು. ಅವಳು ಅವನಿಗೆ--ನಿನ್ನ ಹೃದಯವು ನನ್ನ ಸಂಗಡ ಇಲ್ಲದೆ ಇರುವಾಗ ನಿನ್ನನ್ನು ಪ್ರೀತಿ ಮಾಡುತ್ತೇನೆ ಎಂದು ನೀನು ಹೇಗೆ ಹೇಳುತ್ತೀ? ನೀನು ಈ ಮೂರು ಸಾರಿ ನನಗೆ ವಂಚನೆಮಾಡಿದಿ; ನಿನ್ನ ದೊಡ್ಡ ಶಕ್ತಿ ಯಾವದರಲ್ಲಿ ಉಂಟೋ ನನಗೆ ತಿಳಿಸಲಿಲ್ಲ ಅಂದಳು. ಅವಳು ಅವನನ್ನು ದಿನದಿನವೂ ತನ್ನ ಮಾತುಗಳಿಂದ ಪೀಡಿಸಿ ತೊಂದರೆಪಡಿಸಿದ್ದರಿಂದ ಅವನ ಪ್ರಾಣವು ಸಾಯು ವಷ್ಟು ವ್ಯಸನಪಟ್ಟಿತು. ಅವನು ತನ್ನ ಹೃದಯವನ್ನೆಲ್ಲಾ ಅವಳಿಗೆ ತಿಳಿಸಿ ಅವಳಿಗೆ--ಕ್ಷೌರದ ಕತ್ತಿ ನನ್ನ ತಲೆಯ ಮೇಲೆ ಬಂದದ್ದಿಲ್ಲ; ನಾನು ನನ್ನ ತಾಯಿಯ ಗರ್ಭ ದಲ್ಲಿಂದ ದೇವರಿಗೆ ನಾಜೀರನಾಗಿದ್ದೇನೆ. ನನ್ನ ತಲೆ ಯನ್ನು ಬೋಳಿಸಿದರೆ ನನ್ನ ಶಕ್ತಿಯು ನನ್ನನ್ನು ಬಿಟ್ಟು ಹೋಗುವದು; ನಾನು ಬಲಹೀನನಾಗಿ ಎಲ್ಲಾ ಮನುಷ್ಯರ ಹಾಗೆ ಇರುವೆನು ಅಂದನು. ಅವನು ತನಗೆ ತನ್ನ ಹೃದಯವನ್ನೆಲ್ಲಾ ತಿಳಿಸಿದ್ದಾನೆಂದು ದೆಲೀಲಳು ತಿಳಿದು ಅವಳು ಫಿಲಿಷ್ಟಿಯರ ಅಧಿಪತಿಗಳಿಗೆ--ನೀವು ಈ ಸಾರಿ ಬನ್ನಿರಿ; ಅವನು ತನ್ನ ಹೃದಯವನ್ನೆಲ್ಲಾ ನನಗೆ ತಿಳಿಸಿದನು ಎಂದು ಕರೇಕಳುಹಿಸಿದಳು. ಆಗ ಫಿಲಿಷ್ಟಿಯರ ಅಧಿಪತಿಗಳು ಹಣವನ್ನು ತಮ್ಮ ಕೈಯಲ್ಲಿ ತಕ್ಕೊಂಡು ಅವಳ ಬಳಿಗೆ ಬಂದರು. ಅವಳು ಅವನನ್ನು ತನ್ನ ತೊಡೆಗಳ ಮೇಲೆ ನಿದ್ರೆಹೋಗುವಂತೆ ಮಾಡಿ ಒಬ್ಬನನ್ನು ಕರೆದು ಅವನ ತಲೆಯ ಏಳು ಜಡೆಗಳನ್ನು ಬೋಳಿಸುವಂತೆ ಮಾಡಿ ಅವನನ್ನು ಬಾಧಿ ಸುವದಕ್ಕೆ ಪ್ರಾರಂಭಿಸಿದಳು. ಆಗ ಅವನ ಶಕ್ತಿ ಅವ ನನ್ನು ಬಿಟ್ಟುಹೋಯಿತು. ಅವಳು--ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬರುತ್ತಾರೆ ಅಂದಳು. ಅವನು ತನ್ನ ನಿದ್ರೆಯಿಂದ ಎಚ್ಚತ್ತು ಕರ್ತನು ತನ್ನನ್ನು ಬಿಟ್ಟು ತೊಲಗಿದ್ದನ್ನು ಅರಿಯದೆ ಬೇರೆ ಸಮಯಗಳಂತೆಯೇನಾನು ಹೊರಟು ಕೊಸರಿಕೊಂಡು ಹೋಗುವೆನು ಅಂದುಕೊಂಡನು. ಆದರೆ ಫಿಲಿಷ್ಟಿ ಯರು ಅವನನ್ನು ಹಿಡಿದು ಅವನ ಕಣ್ಣುಗಳನ್ನು ಕಿತ್ತು ಗಾಜಕ್ಕೆ ಒಯ್ದು ಎರಡು ಹಿತ್ತಾಳೆಯ ಸಂಕೋಲೆಗಳನ್ನು ಹಾಕಿದರು, ಅವನು ಸೆರೆಮನೆಯಲ್ಲಿ ಬೀಸುತ್ತಿದ್ದನು.
- Acts 8:26 ಅಪೊಸ್ತಲರ ಕೃತ್ಯಗಳು 8:26ಅಷ್ಟರಲ್ಲಿ ಕರ್ತನ ದೂತನು ಫಿಲಿಪ್ಪನಿಗೆ--ನೀನು ಎದ್ದು ದಕ್ಷಿಣ ಕಡೆಗೆ ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ದಾರಿಯಲ್ಲಿ ಹೋಗು, ಅದು ಅಡವಿ ಎಂದು ಹೇಳಿದನು.
- Zephaniah 2:4 ಚೆಫನ್ಯ 2:4ಗಾಜವು ಕೈಬಿಡಲ್ಪಡುವದು, ಅಷ್ಕೆಲೋನ್ ಹಾಳಾ ಗುವದು, ಅಷ್ಡೋದನ್ನು ಮಧ್ಯಾಹ್ನದಲ್ಲಿ ಹೊರಡಿಸು ವರು, ಎಕ್ರೋನ್ ಕೀಳಲ್ಪಡುವದು.
- Amos 1:6–7 ಆಮೋಸ 1:6–7ಕರ್ತನು ಹೀಗೆ ಹೇಳುತ್ತಾನೆ--ಗಾಜದ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತ ನಾನು ಅದರ ದಂಡನೆಯ ಕಡೆಯಿಂದ ತಿರುಗಿಸಿಬಿಡುವದಿಲ್ಲ; ಅವ ರನ್ನು ಸೆರೆಗೆ ಒಪ್ಪಿಸುವದಕ್ಕಾಗಿ ಎದೋಮಿಗೆ ಎಲ್ಲಾ ಸೆರೆಯವರನ್ನು ಕರೆತಂದರು. ಆದರೆ ನಾನು ಗಾಜದ ಗೋಡೆಯಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ; ಅದು ಅವರ ಅರಮನೆಗಳನ್ನು ನುಂಗಿಬಿಡುವದು.
- Exodus 23:31 ವಿಮೋಚನಕಾಂಡ 23:31ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದ ವರೆಗೂ ಅರಣ್ಯದಿಂದ ನದಿಯ ವರೆಗೂ ನಿಮ್ಮ ಮೇರೆ ಗಳನ್ನು ನೇಮಿಸುವೆನು; ದೇಶದ ನಿವಾಸಿಗಳನ್ನು ನಿಮ್ಮ ಕೈಗಳಿಗೆ ಒಪ್ಪಿಸುವೆನು. ನೀವು ಅವರನ್ನು ನಿಮ್ಮ ಎದುರಿ ನಿಂದ ಓಡಿಸಿಬಿಡುವಿರಿ.