Zephaniah · chapter 2 · verse 4
Zephaniah 2:4 in Kannada
ಗಾಜವು ಕೈಬಿಡಲ್ಪಡುವದು, ಅಷ್ಕೆಲೋನ್ ಹಾಳಾ ಗುವದು, ಅಷ್ಡೋದನ್ನು ಮಧ್ಯಾಹ್ನದಲ್ಲಿ ಹೊರಡಿಸು ವರು, ಎಕ್ರೋನ್ ಕೀಳಲ್ಪಡುವದು.
Gaajavu kaibidalpaduvadu, ashkelon haalaa guvadu, ashdodannu madhyaahnadalli horadisu varu, ekron keelalpaduvadu.
Zephaniah 2:4 in English
- King James Version (KJV)
- For Gaza shall be forsaken, and Ashkelon a desolation: they shall drive out Ashdod at the noon day, and Ekron shall be rooted up.
- World English Bible (WEB)
- For Gaza will be forsaken, and Ashkelon a desolation. They will drive out Ashdod at noonday, and Ekron will be rooted up.
- American Standard Version (ASV)
- For Gaza shall be forsaken, and Ashkelon a desolation; they shall drive out Ashdod at noonday, and Ekron shall be rooted up.
- Bible in Basic English (BBE)
- For Gaza will be given up and Ashkelon will become waste: they will send Ashdod out in the middle of the day, and Ekron will be uprooted.
- Darby Translation (DBY)
- For Gazah shall be forsaken, and Ashkelon shall be a desolation; they shall drive out Ashdod at noonday, and Ekron shall be rooted up.
- Webster's Bible (WBS)
- For Gaza shall be forsaken, and Ashkelon a desolation: they shall drive out Ashdod at the noon day, and Ekron shall be rooted up.
- Young's Literal Translation (YLT)
- For Gaza is forsaken, And Ashkelon [is] for a desolation, Ashdod! at noon they do cast her forth, And Ekron is rooted up.
Read in context
- 2ನಿರ್ಣಯವು ಬರುವದಕ್ಕಿಂತ ಮುಂಚೆ ಯೂ ದಿನವು ಹೊಟ್ಟಿನಂತೆ ಹಾದುಹೋಗುವದಕ್ಕಿಂತ ಮುಂಚೆಯೂ ಕರ್ತನ ಕೋಪದ ದಿನವು ಉರಿದು ನಿಮ್ಮ ಮೇಲೆ ಬರುವದಕ್ಕಿಂತ ಮುಂಚೆಯೂ ಕೂಡಿ ಕೊಳ್ಳಿರಿ.
- 3ಆತನ ನ್ಯಾಯತೀರ್ಪುಗಳನ್ನು ಮಾಡುವ ಲೋಕದ ದೀನರೆಲ್ಲರೇ, ಕರ್ತನನ್ನು ಹುಡುಕಿರಿ, ನೀತಿ ಯನ್ನು ಹುಡುಕಿರಿ, ವಿನಯವನ್ನು ಹುಡುಕಿರಿ; ಒಂದು ವೇಳೆ ಕರ್ತನ ಕೋಪದ ದಿನದಲ್ಲಿ ಮರೆಯಾಗುವಿರಿ.
- 4ಗಾಜವು ಕೈಬಿಡಲ್ಪಡುವದು, ಅಷ್ಕೆಲೋನ್ ಹಾಳಾ ಗುವದು, ಅಷ್ಡೋದನ್ನು ಮಧ್ಯಾಹ್ನದಲ್ಲಿ ಹೊರಡಿಸು ವರು, ಎಕ್ರೋನ್ ಕೀಳಲ್ಪಡುವದು.
- 5ಸಮುದ್ರತೀರದ ನಿವಾಸಿಗಳಾದ ಕೆರೇತ್ಯರ ಜನಾಂಗಕ್ಕೆ ಅಯ್ಯೋ! ಕರ್ತನ ವಾಕ್ಯವು ನಿಮಗೆ ವಿರೋಧವಾಗಿದೆ; ಓ ಕಾನಾನೇ, ಫಿಲಿಷ್ಟಿಯರ ದೇಶವೇ, ನಿವಾಸಿಯೇ ಇಲ್ಲದ ಹಾಗೆ ನಿನ್ನನ್ನು ನಾಶಮಾಡುವೆನು.
- 6ಸಮುದ್ರದ ತೀರವು ಕುರುಬರು ಮೇಯಿಸುವ ಸ್ಥಳಗಳಾಗಿಯೂ ಕುಂಟೆ ಗಳಾಗಿಯೂ ಕುರೀಹಟ್ಟಿಗಳಾಗಿಯೂ ಇರುವದು.
Cross references
- Zechariah 9:5–7 ಜೆಕರ್ಯ 9:5–7ಅಷ್ಕಲೋನು ನೋಡಿ ಭಯಪಡುವದು; ಗಾಜ ಸಹ ಅದನ್ನು ನೋಡಿ ಬಹಳವಾಗಿ ವೇದನೆಪಡುವದು, ಎಕ್ರೋನು ಸಹ; ಅದರ ನಿರೀಕ್ಷೆಯು ಅದನ್ನು ನಾಚಿಕೆ ಪಡಿಸಿತು; ಗಾಜ ದೊಳಗಿಂದ ಅರಸನು ನಾಶವಾಗುವನು; ಅಷ್ಕೆಲೋನು ನಿವಾಸವಿಲ್ಲದೆ ಇರುವದು. ಅಷ್ಡೋದಿನಲ್ಲಿ ಜಾರತ್ವ ದಿಂದ ಹುಟ್ಟಿದವನು ವಾಸವಾಗುತ್ತಾನೆ; ಫಿಲಿಷ್ಟಿಯರ ಗರ್ವವನ್ನು ನಾನು ತೆಗೆದುಬಿಡುವೆನು. ಅವನ ರಕ್ತ ವನ್ನು ಅವನ ಬಾಯೊಳಗಿಂದಲೂ ಅವನ ಅಸಹ್ಯ ಗಳನ್ನು ಅವನ ಹಲ್ಲುಗಳ ನಡುವೆಯಿಂದಲೂ ನಾನು ತೆಗೆದುಹಾಕುವೆನು; ಅವನು ಸಹ ನಮ್ಮ ದೇವರಿಗಾಗಿ ಉಳಿಯುವನು; ಯೆಹೂದದಲ್ಲಿ ಪ್ರಭುವಿನ ಹಾಗೆ ಇರುವನು; ಎಕ್ರೋನು ಯೆಬೂಸಿಯನ ಹಾಗೆ ಇರು ವನು.
- Amos 1:6–8 ಆಮೋಸ 1:6–8ಕರ್ತನು ಹೀಗೆ ಹೇಳುತ್ತಾನೆ--ಗಾಜದ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತ ನಾನು ಅದರ ದಂಡನೆಯ ಕಡೆಯಿಂದ ತಿರುಗಿಸಿಬಿಡುವದಿಲ್ಲ; ಅವ ರನ್ನು ಸೆರೆಗೆ ಒಪ್ಪಿಸುವದಕ್ಕಾಗಿ ಎದೋಮಿಗೆ ಎಲ್ಲಾ ಸೆರೆಯವರನ್ನು ಕರೆತಂದರು. ಆದರೆ ನಾನು ಗಾಜದ ಗೋಡೆಯಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ; ಅದು ಅವರ ಅರಮನೆಗಳನ್ನು ನುಂಗಿಬಿಡುವದು. ಅಷ್ಡೋ ದಿನಿಂದ ನಿವಾಸಿಯನ್ನು ಅಷ್ಕೆಲೋನಿನಿಂದ ರಾಜದಂಡ ಹಿಡಿಯುವವನನ್ನು ಕಡಿದುಬಿಟ್ಟು ನಾನು ಎಕ್ರೋನಿಗೆ ವಿರೋಧವಾಗಿ ನನ್ನ ಕೈಯನ್ನು ತಿರುಗಿಸುತ್ತೇನೆ. ಉಳಿದ ಫಿಲಿಪ್ಪಿಯರು ನಾಶವಾಗುವರೆಂದು ಕರ್ತನಾದ ದೇವರು ಹೇಳುತ್ತಾನೆ.
- Jeremiah 47:1–7 ಯೆರೆಮೀಯ 47:1–7ಫರೋಹನು ಗಾಜಾವನ್ನು ಹೊಡೆಯುವದಕ್ಕಿಂತ ಮುಂಚೆ ಫಿಲಿಷ್ಟಿಯರಿಗೆ ವಿರೋಧವಾಗಿ ಪ್ರವಾದಿಯಾದ ಯೆರೆವಿಾಯನಿಗೆ ಬಂದ ಕರ್ತನ ವಾಕ್ಯವು. ಕರ್ತನು ಹೀಗೆ ಹೇಳು ತ್ತಾನೆ--ಇಗೋ, ಪ್ರವಾಹಗಳು ಉತ್ತರದಿಂದ ಬರು ತ್ತವೆ, ಅವು ತುಂಬಿ ತುಳುಕುವ ಪ್ರಳಯವಾಗುವದು; ದೇಶವನ್ನೂ ಅದರಲ್ಲಿರುವ ಸಮಸ್ತವನ್ನೂ ಪಟ್ಟಣವನ್ನೂ ಅದರ ನಿವಾಸಿಗಳನ್ನೂ ಆಕ್ರಮಿಸುವವು, ಆಗ ಮನು ಷ್ಯರು ಕೂಗುವರು, ದೇಶದ ನಿವಾಸಿಗಳೆಲ್ಲರೂ ಗೋಳಾ ಡುವರು. ಅವನ ಬಲವಾದ ಕುದುರೆಗಳ ಗೊರಸು ಗಳ ತುಳಿಯುವಿಕೆಯ ಶಬ್ದದಿಂದಲೂ ಅವನ ರಥಗಳ ಘೋಷದಿಂದಲೂ ಚಕ್ರಗಳ ಧ್ವನಿಯಿಂದಲೂ ತಂದೆ ಗಳ ಕೈ ಬಲಹೀನತೆಯಿಂದಾಗಿ ತಮ್ಮ ಮಕ್ಕಳ ಕಡೆಗೆ ಹಿಂತಿರುಗಿ ನೋಡರು. ಫಿಲಿಷ್ಟಿಯರೆಲ್ಲರನ್ನು ಸೂರೆ ಮಾಡುವದಕ್ಕೂ ತೂರಿನಿಂದ ಚೀದೋನಿನಿಂದ ಉಳಿದ ಪ್ರತಿ ಸಹಾಯಕನನ್ನು ಕಡಿದು ಬಿಡುವದಕ್ಕೂ ಆ ದಿವಸ ಬಂತು. ಕರ್ತನು ಫಿಲಿಷ್ಟಿಯರನ್ನು ಕಫ್ತೋರಿನ ದೇಶದ ಉಳಿದವರನ್ನೂ ಸೂರೆ ಮಾಡುವನು. ಗಾಜಾದ ಮೇಲೆ ಬೋಳುತನ ಬಂತು; ಅಷ್ಕೆ ಲೋನು ಅವರ ತಗ್ಗಿನ ಉಳಿದವುಗಳಿಂದ ತೆಗೆದು ಹಾಕಲ್ಪಟ್ಟಿತು; ಎಷ್ಟು ಕಾಲ ನಿನಗೆ ನೀನೇ ಗಾಯಮಾಡಿ ಕೊಳ್ಳುವಿ? ಕರ್ತನ ಕತ್ತಿಯೇ, ಎಷ್ಟರ ವರೆಗೆ ವಿಶ್ರಮಿಸಿಕೊಳ್ಳದೆ ಇರುವಿ? ನಿನ್ನ ಒರೆಯಲ್ಲಿ ಅಡಗಿಕೋ! ವಿಶ್ರಮಿಸಿಕೋ, ಸುಮ್ಮನಿರು.ಅದು ಹೇಗೆ ಸುಮ್ಮನಿರುವದು? ಅಷ್ಕೆಲೋನಿಗೆ ವಿರೋಧವಾಗಿಯೂ ಸಮುದ್ರತೀರಕ್ಕೆ ವಿರೋಧ ವಾಗಿಯೂ ಕರ್ತನು ಅದಕ್ಕೆ ಆಜ್ಞೆ ಕೊಟ್ಟಿದ್ದಾನಲ್ಲಾ; ಅಲ್ಲಿ ಅದನ್ನು ನೇಮಿಸಿದ್ದಾನೆ. ಅದು ಹೇಗೆ ಸುಮ್ಮನಿರುವದು? ಅಷ್ಕೆಲೋನಿಗೆ ವಿರೋಧವಾಗಿಯೂ ಸಮುದ್ರತೀರಕ್ಕೆ ವಿರೋಧ ವಾಗಿಯೂ ಕರ್ತನು ಅದಕ್ಕೆ ಆಜ್ಞೆ ಕೊಟ್ಟಿದ್ದಾನಲ್ಲಾ; ಅಲ್ಲಿ ಅದನ್ನು ನೇಮಿಸಿದ್ದಾನೆ.
- Jeremiah 25:20 ಯೆರೆಮೀಯ 25:20ಅವನ ಎಲ್ಲಾ ಜನರಿಗೂ ಮಿಶ್ರವಾದ ಜನರೆಲ್ಲರಿಗೂ ಊಚ್ ದೇಶದ ಅರಸರೆಲ್ಲರಿಗೂ ಫಿಲಿಷ್ಟಿಯ ದೇಶದ ಅರಸರೆಲ್ಲರಿಗೂ ಅಷ್ಕೆಲೋನಿಗೂ ಗಾಜಾಕ್ಕೂ ಎಕ್ರೋನಿಗೂ ಅಷ್ಡೋ ದಿನ ಉಳಿದವರಿಗೂ
- Jeremiah 15:8 ಯೆರೆಮೀಯ 15:8ಅವರ ವಿಧವೆಗಳು ಸಮುದ್ರದ ಮರಳಿಗಿಂತ ನನಗೆ ಹೆಚ್ಚಾದರು. ನಾನು ಅವರ ಬಳಿಗೆ ಪ್ರಾಯದವರ ತಾಯಿಯ ಮೇಲೆ ಮಧ್ಯಾಹ್ನದಲ್ಲಿ ನಾಶನ ಮಾಡು ವವನನ್ನು ತರಿಸಿದ್ದೇನೆ; ಪಕ್ಕನೆ ಅವನು ಅವಳ ಮೇಲೆ ಬೀಳುವಂತೆ ಮಾಡುವೆನು, ಹೆದರಿಕೆಯನ್ನು ಪಟ್ಟಣದ ಮೇಲೆ ಬೀಳಮಾಡಿದ್ದೇನೆ.
- Jeremiah 6:4 ಯೆರೆಮೀಯ 6:4ಅವಳಿಗೆ ವಿರೋಧವಾಗಿ ಯುದ್ಧವನ್ನು ಸಿದ್ಧಮಾಡಿರಿ; ಏಳಿರಿ, ಮಧ್ಯಾಹ್ನದಲ್ಲಿ ಏರಿ ಹೋಗೋಣ, ನಮಗೆ ಅಯ್ಯೋ! ಹೊತ್ತು ಮುಣುಗುತ್ತದಲ್ಲಾ; ಸಂಜೆಯ ನೆರಳುಗಳು ಉದ್ದವಾ ಗುತ್ತವೆ.
- Ezekiel 25:15–17 ಯೆಹೆಜ್ಕೇಲನು 25:15–17ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಫಿಲಿಷ್ಟಿಯರು ಮುಯ್ಯಿಗೆ ಮುಯ್ಯಿ ನಡಿಸಿ, ಹಗೆಯುಳ್ಳ ಹೃದಯದಿಂದ ಸೇಡು ತೀರಿಸಿಕೊಂಡು ಪೂರ್ವದ ಕ್ರೋಧದಿಂದ ಕೆಡಿಸಿದರು. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನನ್ನ ಕೈಯನ್ನು ಫಿಲಿಷ್ಟಿಯರ ಮೇಲೆ ಚಾಚುತ್ತೇನೆ; ಕೆರೇತಿಯರನ್ನು ಕಡಿದುಬಿಡುತ್ತೇನೆ; ಉಳಿದವರನ್ನು ಸಮುದ್ರತೀರದಲ್ಲಿ ನಾಶಮಾಡುತ್ತೇನೆ;ನಾನು ದೊಡ್ಡ ಪ್ರತಿದಂಡನೆ ಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ತೀರಿಸುತ್ತೇನೆ; ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಕರ್ತನೆಂದು ಅವರಿಗೆ ತಿಳಿಯುವದು. ನಾನು ದೊಡ್ಡ ಪ್ರತಿದಂಡನೆ ಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ತೀರಿಸುತ್ತೇನೆ; ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
- Psalm 91:6 ಕೀರ್ತನೆಗಳು 91:6ಅಂಧಕಾರದಲ್ಲಿ ನಡೆಯುವ ಜಾಡ್ಯಕ್ಕೂ ಇಲ್ಲವೆ ಮಧ್ಯಾಹ್ನದಲ್ಲಿ ಹಾಳು ಮಾಡುವ ನಾಶನಕ್ಕೂ ನೀನು ಭಯಪಡದೆ ಇರುವಿ.