Joshua · chapter 6 · verse 22
Joshua 6:22 in Kannada
ಆದರೆ ಯೆಹೋಶುವನು ದೇಶವನ್ನು ಪಾಳತಿ ನೋಡುವದಕ್ಕೆ ಹೋಗಿದ್ದ ಇಬ್ಬರು ಮನುಷ್ಯರಿಗೆ-- ನೀವು ಸೂಳೆಯಾದ ಹೆಂಗಸಿನ ಮನೆಗೆ ಹೋಗಿ ಅವಳನ್ನೂ ಅವಳಿಗೆ ಉಂಟಾದ ಸಮಸ್ತವನ್ನೂ ಅವಳಿಗೆ ಆಣೆ ಇಟ್ಟ ಹಾಗೆ ಅಲ್ಲಿಂದ ಹೊರಗೆ ತಕ್ಕೊಂಡು ಬನ್ನಿರಿ ಎಂದು ಹೇಳಿದನು.
Aadare yehoshuvanu deshavannu paalati noduvadakke hogidda ibbaru manushyarige-- neevu sooleyaada hengasina manege hogi avalannoo avalige untaada samastavannoo avalige aane itta haage allinda horage takkondu banniri endu helidanu.
Joshua 6:22 in English
- King James Version (KJV)
- But Joshua had said unto the two men that had spied out the country, Go into the harlot’s house, and bring out thence the woman, and all that she hath, as ye sware unto her.
- World English Bible (WEB)
- Joshua said to the two men who had spied out the land, “Go into the prostitute’s house, and bring the woman and all that she has out from there, as you swore to her.”
- American Standard Version (ASV)
- And Joshua said unto the two men that had spied out the land, Go into the harlot’s house, and bring out thence the woman, and all that she hath, as ye sware unto her.
- Bible in Basic English (BBE)
- Then Joshua said to the two men who had been sent to make a search through the land, Go into the house of the loose woman, and get her out, and all who are with her, as you gave her your oath.
- Darby Translation (DBY)
- And Joshua said to the two men that had spied out the country, Go into the harlot's house and bring out thence the woman, and all that she has, as ye swore unto her.
- Webster's Bible (WBS)
- But Joshua had said to the two men that spied out the country, Go into the harlot's house, and bring out thence the woman, and all that she hath, as ye swore to her.
- Young's Literal Translation (YLT)
- And to the two men who are spying the land Joshua said, 'Go into the house of the woman, the harlot, and bring out thence the woman, and all whom she hath, as ye have sworn to her.'
Read in context
- 20ಹೀಗೆ ಯಾಜಕರು ತುತೂರಿಗಳನ್ನು ಊದಿದಾಗ ಜನರು ಆರ್ಭಟಿಸಿದರು. ತುತ್ತೂರಿಯ ಶಬ್ದವನ್ನು ಜನರು ಕೇಳಿದಾಗ ಮಹಾ ಆರ್ಭಟವಾಗಿ ಆರ್ಭಟಿಸುತ್ತಲೇ ಗೋಡೆಯು ನೆಲಸಮವಾಗಿ ಕೆಳಗೆ ಬಿತ್ತು; ಹೀಗೆ ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಏರಿಹೋದನು. ಆಗ ಪಟ್ಟಣವು ಅವರಿಗೆ ಸ್ವಾಧೀನ ವಾಯಿತು.
- 21ಪಟ್ಟಣದಲ್ಲಿರುವ ಎಲ್ಲಾ ಸ್ತ್ರೀ ಪುರುಷ ರನ್ನೂ ಹಿರಿಕಿರಿಯರನ್ನೂ ಕುರಿದನಗಳನ್ನೂ ಕತ್ತೆ ಗಳನ್ನೂ ಕತ್ತಿಯ ಬಾಯಿಂದ ಸಂಪೂರ್ಣವಾಗಿ ನಾಶ ಮಾಡಿದರು.
- 22ಆದರೆ ಯೆಹೋಶುವನು ದೇಶವನ್ನು ಪಾಳತಿ ನೋಡುವದಕ್ಕೆ ಹೋಗಿದ್ದ ಇಬ್ಬರು ಮನುಷ್ಯರಿಗೆ-- ನೀವು ಸೂಳೆಯಾದ ಹೆಂಗಸಿನ ಮನೆಗೆ ಹೋಗಿ ಅವಳನ್ನೂ ಅವಳಿಗೆ ಉಂಟಾದ ಸಮಸ್ತವನ್ನೂ ಅವಳಿಗೆ ಆಣೆ ಇಟ್ಟ ಹಾಗೆ ಅಲ್ಲಿಂದ ಹೊರಗೆ ತಕ್ಕೊಂಡು ಬನ್ನಿರಿ ಎಂದು ಹೇಳಿದನು.
- 23ಪಾಳತಿಗಾರರಾದ ಯೌವನಸ್ಥರು ಒಳಗೆ ಹೋಗಿ ರಾಹಾಬಳನ್ನೂ ಅವಳ ತಂದೆ ತಾಯಿಯನ್ನೂ ಸಹೋದರರನ್ನೂ ಅವಳಿಗಿದ್ದ ಸಮಸ್ತವನ್ನೂ ಅವಳ ಸಂಬಂಧಿಕರಾದವರೆಲ್ಲರನ್ನೂ ಹೊರಗೆ ಕರತಂದು ಇಸ್ರಾಯೇಲ್ ಪಾಳೆಯದ ಹೊರಗೆ ಅವರನ್ನು ಇರಿಸಿದರು.
- 24ಆದರೆ ಪಟ್ಟಣ ವನ್ನೂ ಅದರಲ್ಲಿರುವ ಸಮಸ್ತವನ್ನೂ ಬೆಂಕಿಯಿಂದ ಸುಟ್ಟುಬಿಟ್ಟರು. ಬೆಳ್ಳಿ ಬಂಗಾರವನ್ನೂ ಹಿತ್ತಾಳೆ ಕಬ್ಬಿಣದ ಪಾತ್ರೆಗಳನ್ನೂ ಮಾತ್ರ ಕರ್ತನ ಮನೆಯ ಭಂಡಾರದಲ್ಲಿ ಇಟ್ಟರು.
Cross references
- Hebrews 11:31 ಇಬ್ರಿಯರಿಗೆ 11:31ನಂಬಿಕೆಯಿಂದಲೇ ರಹಾಬಳೆಂಬ ಸೂಳೆಯು ಗೂಢಚಾರರನ್ನು ಸಮಾಧಾನವಾಗಿ ಸೇರಿಸಿ ಕೊಂಡು ನಂಬದವರೊಂದಿಗೆ ನಾಶವಾಗಲಿಲ್ಲ.
- Ezekiel 17:18–19 ಯೆಹೆಜ್ಕೇಲನು 17:18–19ಅವನು ಪ್ರಮಾಣವನ್ನು ತಿರಸ್ಕರಿಸಿ ಕೈಕೊಟ್ಟಾಗ್ಯೂ; ಇಗೋ, ಒಡಂಬಡಿಕೆಯನ್ನು ವಿಾರಿ ಇವುಗಳನ್ನೆಲ್ಲಾ ಮಾಡಿದ್ದ ರಿಂದ ತಪ್ಪಿಸಿಕೊಳ್ಳುವದಿಲ್ಲ. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಅವನು ತಿರಸ್ಕರಿಸಿದ ನನ್ನ ಪ್ರಮಾಣವನ್ನೂ ಅವನು ವಿಾರಿದ ಒಡಂಬಡಿಕೆಯನ್ನೂ ನನ್ನ ಜೀವ ದಾಣೆ ನಿಶ್ಚಯವಾಗಿ ಅವನ ತಲೆಯ ಮೇಲೆಯೇ ಮುಯ್ಯಿ ತೀರಿಸುವೆನು.
- Joshua 6:17 ಯೆಹೋಶುವ 6:17ಇದಲ್ಲದೆ ಈ ಪಟ್ಟಣವೂ ಅದರಲ್ಲಿರುವ ಸಮಸ್ತವೂ ಕರ್ತನ ಶಾಪಕ್ಕೊಳಗಾಗುವದು; ರಾಹಾಬಳೆಂಬ ಸೂಳೆಯೂ ಆಕೆಯ ಮನೆಯಲ್ಲಿ ಇರುವವರೆಲ್ಲರೂ ಮಾತ್ರ ಉಳಿಯಲಿ. ಯಾಕಂದರೆ ನಾವು ಕಳುಹಿಸಿದ ದೂತರನ್ನು ಆಕೆಯು ಬಚ್ಚಿಟ್ಟಳು.
- Psalm 15:4 ಕೀರ್ತನೆಗಳು 15:4ಅವನ ಕಣ್ಣುಗಳಿಗೆ ನೀಚನು ತಿರಸ್ಕರಿಸಲ್ಪ ಟ್ಟಿದ್ದಾನೆ. ಆದರೆ ಕರ್ತನಿಗೆ ಭಯಪಡುವವರನ್ನು ಗೌರವಿಸುತ್ತಾನೆ, ಆಣೆಯಿಂದ ನಷ್ಟವಾದರೂ ಬದಲಾ ಯಿಸದವನು.ತನ್ನ ಹಣವನ್ನು ಬಡ್ಡಿಗೆ ಕೊಡುವದಿಲ್ಲ; ನಿರಪರಾಧಿಗೆ ವಿರೋಧವಾಗಿ ಲಂಚ ತಕ್ಕೊಳ್ಳುವದಿಲ್ಲ. ಇವುಗಳನ್ನು ಮಾಡುವವನು ಎಂದೆಂದಿಗೂ ಕದಲದೆ ಇರುವನು.
- Ezekiel 17:13 ಯೆಹೆಜ್ಕೇಲನು 17:13ಅರಸನ ಸಂತಾನ ದವರನ್ನು ಕರೆದುಕೊಂಡು ಅವನ ಸಂಗಡ ಒಡಂಬಡಿಕೆ ಮಾಡಿ ಅವನಿಂದ ಪ್ರಮಾಣಮಾಡಿಸಿ ದೇಶದ ಬಲಿಷ್ಠರನ್ನು ತೆಗೆದುಕೊಂಡು ಹೋಗಿದ್ದಾನೆ.
- Ezekiel 17:16 ಯೆಹೆಜ್ಕೇಲನು 17:16ನಿಶ್ಚ ಯವಾಗಿ ಅವನಿಗೆ ಅರಸುತನವನ್ನು ಕೊಟ್ಟ ಅರಸನೂ ಅಂದರೆ ಯಾವನ ಪ್ರಮಾಣವನ್ನು ತಿರಸ್ಕರಿಸಿದನೋ ಯಾವನ ಒಡಂಬಡಿಕೆಯನ್ನು ವಿಾರಿದನೋ ಅವನು ಇರುವಲ್ಲಿಯೇ ಬಾಬೆಲಿನ ಮಧ್ಯದಲ್ಲಿ ನನ್ನ ಜೀವದಾಣೆ, ಇವನು ಸಾಯುವನು ಎಂದು ದೇವರಾದ ಕರ್ತನು ಹೇಳುತ್ತಾನೆ.
- 2 Samuel 21:7 2 ಸಮುವೇಲನು 21:7ಆದರೆ ತಮಗೂ ದಾವೀದ ನಿಗೂ ಸೌಲನ ಮಗನಾದ ಯೋನಾತಾನನಿಗೂ ಕರ್ತ ನನ್ನು ಕುರಿತು ಮಾಡಿದ ಪ್ರಮಾಣಕ್ಕೋಸ್ಕರ ಅರಸನು ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿ
- 2 Samuel 21:2 2 ಸಮುವೇಲನು 21:2ಆಗ ಅರಸನು ಗಿಬ್ಯೋನ್ಯರನ್ನು ಕಳುಹಿಸಿದನು. (ಆದರೆ ಗಿಬ್ಯೋನ್ಯರು ಇಸ್ರಾಯೇಲ್ ಮಕ್ಕಳಾಗಿರದೆ ಅಮೋರಿಯರಲ್ಲಿ ಉಳಿದವರಾಗಿದ್ದರು. ಅವರಿಗೆ ಇಸ್ರಾಯೇಲ್ ಮಕ್ಕಳು ಆಣೆ ಇಟ್ಟಿದ್ದರು. ಸೌಲನು ಇಸ್ರಾಯೇಲ್ ಮಕ್ಕಳಿಗೋಸ್ಕರವಾಗಿಯೂ ಯೆಹೂದ ಕ್ಕೋಸ್ಕರವಾಗಿಯೂ ತೋರಿಸಿದ ಆಸಕ್ತಿಯಿಂದ ಅವ ರನ್ನು ಹೊಡೆಯಲು ಹುಡುಕಿದ್ದನು)
- Joshua 9:15 ಯೆಹೋಶುವ 9:15ಯೆಹೋಶುವನು ಅವರ ಸಂಗಡ ಸಮಾಧಾನ ಮಾಡಿಕೊಂಡು ಅವರನ್ನು ಜೀವದಿಂದ ಇರಿಸುವದಕ್ಕೆ ಅವರ ಸಂಗಡ ಒಡಂಬಡಿಕೆ ಮಾಡಿದನು. ಇದಲ್ಲದೆ ಸಭೆಯ ಪ್ರಧಾನರು ಪ್ರಮಾಣಮಾಡಿದರು.
- Joshua 9:18–20 ಯೆಹೋಶುವ 9:18–20ಸಭೆಯ ಪ್ರಧಾನರು ಅವರಿಗೆ ಇಸ್ರಾಯೇಲಿನ ದೇವರಾದ ಕರ್ತನ ಮೇಲೆ ಆಣೆ ಇಟ್ಟದ್ದರಿಂದ ಇಸ್ರಾಯೇಲ್ ಮಕ್ಕಳು ಅವರನ್ನು ಸಂಹರಿಸಲಿಲ್ಲ. ಆದರೆ ಸಭೆಯವರೆಲ್ಲರೂ ಇಸ್ರಾಯೇ ಲ್ಯರ ಪ್ರಧಾನರಿಗೆ ವಿರೋಧವಾಗಿ ಗುಣುಗುಟ್ಟಿದರು. ಆಗ ಸಕಲ ಪ್ರಧಾನರು ಎಲ್ಲಾ ಸಭೆಗೆ--ನಾವು ಇಸ್ರಾಯೇಲಿನ ದೇವರಾದ ಕರ್ತನ ಮೇಲೆ ಅವರಿಗೆ ಆಣೆ ಇಟ್ಟೆವು; ಆದದರಿಂದ ಅವರನ್ನು ನಾವು ಮುಟ್ಟಕೂಡದು. ನಾವು ಅವರಿಗೆ ಇಟ್ಟ ಆಣೆಯ ನಿಮಿತ್ತ ಕೋಪವು ನಮ್ಮ ಮೇಲೆ ಬಾರದ ಹಾಗೆ ನಾವು ಅವರನ್ನು ಜೀವದಿಂದ ಇರಿಸಿ ಅವರಿಗೆ ಇದನ್ನು ಮಾಡುವೆವು.
- Joshua 2:1–24 ಯೆಹೋಶುವ 2:1–24ನೂನನ ಮಗನಾದ ಯೆಹೋಶುವನು ಪಾಳತಿ ನೋಡುವವರಾದ ಇಬ್ಬರು ಮನುಷ್ಯರನ್ನು ಶಿಟ್ಟೀಮಿನಿಂದ ಗುಪ್ತ ಮಾರ್ಗವಾಗಿ ಕಳುಹಿಸಿ ಅವರಿಗೆ--ನೀವು ಹೋಗಿ ದೇಶವನ್ನು ಮತ್ತು ಯೆರಿಕೋವನ್ನು ನೋಡಿರಿ ಅಂದನು. ಅವರು ಹೋಗಿ ರಾಹಾಬಳೆಂಬ ಹೆಸರುಳ್ಳ ಒಬ್ಬ ಸೂಳೆಯ ಮನೆಯಲ್ಲಿ ಇಳಿದುಕೊಂಡರು. ಆದರೆ ಯೆರಿಕೋವಿನ ಅರಸ ನಿಗೆ--ಇಗೋ, ಇಸ್ರಾಯೇಲ್ ಮನುಷ್ಯರು ದೇಶವನ್ನು ಪರಿಶೋಧನೆ ಮಾಡಲು ರಾತ್ರಿಯಲ್ಲಿ ಇಲ್ಲಿಗೆ ಬಂದಿದ್ದಾ ರೆಂದು ತಿಳಿಸಲ್ಪಟ್ಟಿತು. ಆಗ ಯೆರಿಕೋವಿನ ಅರಸನು ರಾಹಾಬಳ ಬಳಿಗೆ ಕಳುಹಿಸಿ--ನಿನ್ನ ಬಳಿಗೆ ಬಂದು ನಿನ್ನ ಮನೆಯಲ್ಲಿ ಪ್ರವೇಶಿಸಿದ ಮನುಷ್ಯರನ್ನು ಹೊರಗೆ ಕರಕೊಂಡು ಬಾ. ಅವರು ದೇಶವನ್ನೆಲ್ಲಾ ಶೋಧಿಸಲು ಬಂದಿದ್ದಾರೆ ಅಂದನು. ಸ್ತ್ರೀಯು ಆ ಇಬ್ಬರನ್ನು ಅಡಗಿ ಸಿಟ್ಟು--ನನ್ನ ಬಳಿಗೆ ಮನುಷ್ಯರು ಬಂದಿದ್ದರು; ಆದರೆ ನಾನು ಅವರನ್ನು ಯಾವ ಕಡೆಯವರೆಂದು ತಿಳಿಯದೆ ಇದ್ದೆನು. ಬಾಗಲನ್ನು ಮುಚ್ಚುವ ವೇಳೆಯಲ್ಲಿ ಆ ಮನುಷ್ಯರು ಕತ್ತಲೆಯಲ್ಲಿ ಹೊರಟುಹೋದರು. ಅವರು ಎಲ್ಲಿ ಹೋದರೋ ನಾನು ಅರಿಯೆ; ಅವರನ್ನು ಬೇಗ ಹಿಂದಟ್ಟಿರಿ; ನಿಮಗೆ ಸಿಕ್ಕುವರು ಅಂದಳು. ಆದರೆ ಆಕೆಯು ಅವರನ್ನು ಮೇಲೆ ಏರಿಸಿ ಮಾಳಿಗೆಯ ಮೇಲೆ ಸಾಲಾಗಿ ಇಟ್ಟಿದ್ದ ಸಣಬಿನೊಳಗೆ ಬಚ್ಚಿಟ್ಟಳು. ಆ ಮನುಷ್ಯರು ಯೊರ್ದನಿಗೆ ಹೋಗುವ ಹಾದಿಯಲ್ಲಿ ನದಿಯ ರೇವುಗಳ ವರೆಗೂ ಅವರನ್ನು ಹಿಂದಟ್ಟಿದರು. ಅವರನ್ನು ಹಿಂದಟ್ಟುವವರು ಹೊರಟುಹೋದ ಕೂಡಲೆ ಹೆಬ್ಬಾಗಲನ್ನು ಮುಚ್ಚಿದರು. ಆದರೆ ಈ ಮನುಷ್ಯರು ಮಲಗುವದಕ್ಕಿಂತ ಮುಂಚೆ ಆಕೆಯು ಮಾಳಿಗೆಯ ಮೇಲಕ್ಕೇರಿ ಅವರ ಬಳಿಗೆ ಬಂದು ಅವರಿಗೆ-- ಕರ್ತನು ನಿಮಗೆ ದೇಶವನ್ನು ಕೊಟ್ಟಿದ್ದಾನೆಂದೂ ನಿಮ್ಮ ನಿಮಿತ್ತ ನಮಗೆ ಮಹಾಭೀತಿ ಯಾಗಿದೆ ಎಂದೂ ನಿಮಗೋಸ್ಕರ ದೇಶದ ನಿವಾಸಿ ಗಳೆಲ್ಲರು ಕಂಗೆಟ್ಟು ಹೋಗಿದ್ದಾರೆಂದೂ ನಾನು ಬಲ್ಲೆನು. ನೀವು ಐಗುಪ್ತದಿಂದ ಹೊರಡುವಾಗ ಕರ್ತನು ನಿಮಗೋಸ್ಕರ ಕೆಂಪು ಸಮುದ್ರದ ನೀರನ್ನು ಬತ್ತಿಹೋಗ ಮಾಡಿದ್ದನ್ನೂ ಯೊರ್ದನಿಗೆ ಆಚೆಯಲ್ಲಿದ್ದ ಅಮೋರಿ ಯರ ಇಬ್ಬರು ಅರಸುಗಳಾದ ಸೀಹೋನನನ್ನು ಓಗನನ್ನು ನೀವು ಸಂಪೂರ್ಣ ನಿರ್ಮೂಲ ಮಾಡಿದ್ದನ್ನೂ ನಾವು ಕೇಳಿದ್ದೇವೆ. ಇವುಗಳನ್ನು ನಾವು ಕೇಳಿದಾಗಲೇ ನಮ್ಮ ಹೃದಯವು ಕರಗಿಹೋಯಿತು. ಇನ್ನು ನಿಮ್ಮ ನಿಮಿತ್ತ ಯಾವನಲ್ಲಿಯೂ ಧೈರ್ಯವಿಲ್ಲದೆ ಹೋಯಿತು. ಯಾಕಂದರೆ ನಿಮ್ಮ ದೇವರಾದ ಕರ್ತನೇ ಮೇಲಿರುವ ಆಕಾಶದಲ್ಲಿಯೂ ಕೆಳಗಿರುವ ಭೂಮಿಯ ಮೇಲೆಯೂ ದೇವರಾಗಿದ್ದಾನೆ. ಈಗ ನಾನು ನಿಮಗೆ ದಯ ತೋರಿಸಿದ್ದರಿಂದ ನೀವು ನನಗೆ ಮತ್ತು ನನ್ನ ತಂದೆಯ ಮನೆಗೆ ದಯತೋರಿಸಬೇಕು. ನನಗೆ ಸತ್ಯವಾದ ಗುರುತನ್ನು ಕೊಡಬೇಕು. ನನ್ನ ತಂದೆತಾಯಿಯನ್ನೂ ಸಹೋದರ ಸಹೋದರಿಯರನ್ನೂ ಅವರಿಗೆ ಇರುವದೆ ಲ್ಲವನ್ನೂ ಜೀವದಿಂದಿರಿಸಿ ನಮ್ಮ ಪ್ರಾಣಗಳನ್ನು ಸಾವಿ ನಿಂದ ಉಳಿಸುವದಾಗಿ ಕರ್ತನ ಮೇಲೆ ಪ್ರಮಾಣ ಮಾಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ ಅಂದಳು. ಆ ಮನುಷ್ಯರು ಆಕೆಗೆ--ನೀನು ಈ ನಮ್ಮ ಕಾರ್ಯವನ್ನು ಬಹಿರಂಗಮಾಡದೆ ಇದ್ದರೆ ನಮ್ಮ ಪ್ರಾಣವು ನಿಮಗೋಸ್ಕರ ಇರುವದು. ಕರ್ತನು ನಮಗೆ ಈ ದೇಶವನ್ನು ಕೊಟ್ಟಾಗ ಸತ್ಯದಿಂದಲೂ ದಯ ದಿಂದಲೂ ನಡೆದುಕೊಳ್ಳುವೆವು ಅಂದರು. ಆಗ ಅವರನ್ನು ಹಗ್ಗದಿಂದ ಕಿಟಿಕಿಯ ಮೂಲಕ ಇಳಿಸಿ ಬಿಟ್ಟಳು. ಯಾಕಂದರೆ ಆಕೆಯ ಮನೆಯು ಪಟ್ಟಣದ ಗೋಡೆಯ ಮೇಲೆ ಇತ್ತು. ಗೋಡೆಯ ಮೇಲೆ ಆಕೆಯು ವಾಸವಾಗಿದ್ದಳು. ನಿಮ್ಮನ್ನು ಹಿಂದಟ್ಟುವವರು ನಿಮಗೆ ಅಡ್ಡಬಾರದ ಹಾಗೆ ನೀವು ಬೆಟ್ಟಕ್ಕೆ ಹೋಗಿ ಅವರು ತಿರಿಗಿ ಬರುವ ವರೆಗೂ ಅಲ್ಲಿ ಮೂರು ದಿವಸ ಅಡಗಿ ಕೊಂಡಿದ್ದು ತರುವಾಯ ನಿಮ್ಮ ಮಾರ್ಗವಾಗಿ ಹೋಗಿರಿ ಅಂದಳು. ಆಗ ಆ ಮನುಷ್ಯರು ಆಕೆಗೆನೀನು ನಮಗೆ ಇಟ್ಟ ನಿನ್ನ ಆಣೆಯ ನಿಮಿತ್ತ ನಾವು ನಿರಪರಾಧಿಗಳಾಗಿರಬೇಕು. ಇಗೋ, ನಾವು ದೇಶ ದಲ್ಲಿ ಪ್ರವೇಶಿಸುವಾಗ ನೀನು ನಮ್ಮನ್ನು ಕಿಟಿಕಿಯಿಂದ ಇಳಿಯಬಿಟ್ಟ ಈ ಕೆಂಪು ನೂಲಿನ ದಾರವನ್ನು ಕಟ್ಟಿ ನಿನ್ನ ತಂದೆತಾಯಿಯನ್ನೂ ಸಹೋದರರನ್ನೂ ನಿನ್ನ ತಂದೆಯ ಮನೆಯವರೆಲ್ಲರನ್ನೂ ನಿನ್ನ ಮನೆಯಲ್ಲಿ ಕೂಡಿಸಿಕೊಳ್ಳಬೇಕು. ಯಾವನಾದರೂ ನಿನ್ನ ಮನೆಯ ಬಾಗಲಿಂದ ಹೊರಟು ಬೀದಿಗೆ ಬಂದರೆ ಅವನ ರಕ್ತವು ಅವನ ತಲೆಯಮೇಲೆ ಇರುವದು. ನಾವು ನಿರಪರಾಧಿಗಳಾಗಿರುವೆವು. ಆದರೆ ನಿನ್ನ ಸಂಗಡ ಮನೆಯಲ್ಲಿ ಇರುವ ಯಾವನ ಮೇಲಾದರೂ ಕೈ ಹಾಕಲ್ಪಟ್ಟರೆ ಅವನ ರಕ್ತದ ಅಪರಾಧವು ನಮ್ಮ ತಲೆಯ ಮೇಲೆ ಇರುವದು. ಇದಲ್ಲದೆ ಈ ನಮ್ಮ ಕಾರ್ಯ ವನ್ನು ತಿಳಿಸಿದರೆ ನೀನು ನಮಗೆ ಇಟ್ಟ ಆಣೆಗೆ ನಾವು ಬಿಡುಗಡೆಯಾಗಿರುವೆವು ಅಂದರು. ಅದಕ್ಕೆ ಆಕೆಯು--ನಿಮ್ಮ ಮಾತುಗಳ ಪ್ರಕಾರವೇ ಆಗಲಿ ಎಂದು ಹೇಳಿ ಅವರನ್ನು ಕಳುಹಿಸಿಬಿಟ್ಟಳು; ಅವರು ಹೋದಾಗ ಆ ಕೆಂಪು ನೂಲಿನ ದಾರವನ್ನು ಕಿಟಿಕಿಯಲ್ಲಿ ಕಟ್ಟಿದಳು. ಅವರು ಹೋಗಿ ಬೆಟ್ಟಕ್ಕೆ ಸೇರಿ ಹಿಂದಟ್ಟುವವರು ತಿರಿಗಿ ಬರುವ ಪರಿಯಂತರ ಮೂರು ದಿವಸ ಅಲ್ಲೇ ಇದ್ದರು. ಹಿಂದಟ್ಟುವವರು ಮಾರ್ಗದಲ್ಲೆಲ್ಲಾ ಅವ ರನ್ನು ಹುಡುಕಿ ಕಾಣದೆ ಹೋದರು. ಆ ಇಬ್ಬರು ಮನುಷ್ಯರು ಹಿಂತಿರುಗಿಕೊಂಡು ಬೆಟ್ಟದಿಂದ ಇಳಿದು ನದಿಯನ್ನು ದಾಟಿ ನೂನನ ಮಗನಾದ ಯೆಹೋಶು ವನ ಬಳಿಗೆ ಬಂದು ತಮಗೆ ಸಂಭವಿಸಿದ್ದನ್ನೆಲ್ಲಾ ಅವನಿಗೆ ವಿವರಿಸಿದರು.ಅವರು ಯೆಹೋಶುವನಿಗೆ--ನಿಶ್ಚಯ ವಾಗಿ ಕರ್ತನು ಆ ದೇಶವನ್ನೆಲ್ಲಾ ನಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟನು. ದೇಶದ ನಿವಾಸಿಗಳೆಲ್ಲರು ನಮ್ಮ ನಿಮಿತ್ತ ಕಂಗೆಟ್ಟು ಹೋಗಿದ್ದಾರೆ ಎಂದು ಹೇಳಿದರು. ಅವರು ಯೆಹೋಶುವನಿಗೆ--ನಿಶ್ಚಯ ವಾಗಿ ಕರ್ತನು ಆ ದೇಶವನ್ನೆಲ್ಲಾ ನಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟನು. ದೇಶದ ನಿವಾಸಿಗಳೆಲ್ಲರು ನಮ್ಮ ನಿಮಿತ್ತ ಕಂಗೆಟ್ಟು ಹೋಗಿದ್ದಾರೆ ಎಂದು ಹೇಳಿದರು.
Original words (Hebrew)
- Joshua · H3091יְהוֹשׁוּעַ Yᵉhôwshûwaʻ
- said · H559אָמַר ʼâmar
- two · H8147שְׁנַיִם shᵉnayim
- men · H582אֱנוֹשׁ ʼĕnôwsh
- out · H7270רָגַל râgal
- country · H776אֶרֶץ ʼerets
- Go · H935בּוֹא bôwʼ
- harlot’s · H2181זָנָה zânâh
- house · H1004בַּיִת bayith
- out · H3318יָצָא yâtsâʼ
- woman · H802אִשָּׁה ʼishshâh
- sware · H7650שָׁבַע shâbaʻ