2 Samuel · chapter 21 · verse 2
2 Samuel 21:2 in Kannada
ಆಗ ಅರಸನು ಗಿಬ್ಯೋನ್ಯರನ್ನು ಕಳುಹಿಸಿದನು. (ಆದರೆ ಗಿಬ್ಯೋನ್ಯರು ಇಸ್ರಾಯೇಲ್ ಮಕ್ಕಳಾಗಿರದೆ ಅಮೋರಿಯರಲ್ಲಿ ಉಳಿದವರಾಗಿದ್ದರು. ಅವರಿಗೆ ಇಸ್ರಾಯೇಲ್ ಮಕ್ಕಳು ಆಣೆ ಇಟ್ಟಿದ್ದರು. ಸೌಲನು ಇಸ್ರಾಯೇಲ್ ಮಕ್ಕಳಿಗೋಸ್ಕರವಾಗಿಯೂ ಯೆಹೂದ ಕ್ಕೋಸ್ಕರವಾಗಿಯೂ ತೋರಿಸಿದ ಆಸಕ್ತಿಯಿಂದ ಅವ ರನ್ನು ಹೊಡೆಯಲು ಹುಡುಕಿದ್ದನು)
Aaga arasanu gibyonyarannu kaluhisidanu. (aadare gibyonyaru israayel makkalaagirade amoriyaralli ulidavaraagiddaru. Avarige israayel makkalu aane ittiddaru. Saulanu israayel makkaligoskaravaagiyoo yehooda kkoskaravaagiyoo torisida aasaktiyinda ava rannu hodeyalu hudukiddanu)
2 Samuel 21:2 in English
- King James Version (KJV)
- And the king called the Gibeonites, and said unto them; (now the Gibeonites [were] not of the children of Israel, but of the remnant of the Amorites; and the children of Israel had sworn unto them: and Saul sought to slay them in his zeal to the children of Israel and Judah.)
- World English Bible (WEB)
- The king called the Gibeonites and said to them (now the Gibeonites were not of the children of Israel, but of the remnant of the Amorites, and the children of Israel had sworn to them; and Saul sought to kill them in his zeal for the children of Israel and Judah);
- American Standard Version (ASV)
- And the king called the Gibeonites, and said unto them (now the Gibeonites were not of the children of Israel, but of the remnant of the Amorites; and the children of Israel had sworn unto them: and Saul sought to slay them in his zeal for the children of Israel and Judah);
- Bible in Basic English (BBE)
- Then the king sent for the Gibeonites; (now the Gibeonites were not of the children of Israel, but were the last of the Amorites, to whom the children of Israel had given an oath; but Saul, in his passion for the children of Israel and Judah, had made an attempt on their lives:)
- Darby Translation (DBY)
- And the king called the Gibeonites, and spoke to them. (Now the Gibeonites were not of the children of Israel, but of the remainder of the Amorites; and the children of Israel had sworn to them; and Saul sought to smite them in his zeal for the children of Israel and Judah.)
- Webster's Bible (WBS)
- And the king called the Gibeonites, and said to them; (now the Gibeonites [were] not of the children of Israel, but of the remnant of the Amorites; and the children of Israel had sworn to them: and Saul sought to slay them, in his zeal to the children of Israel and Judah.)
- Young's Literal Translation (YLT)
- And the king calleth for the Gibeonites, and saith unto them — as to the Gibeonites, they [are] not of the sons of Israel, but of the remnant of the Amorite, and the sons of Israel had sworn to them, and Saul seeketh to smite them in his zeal for the sons of Israel and Judah —
Read in context
- 1ದಾವೀದನ ದಿವಸಗಳಲ್ಲಿ ವರುಷದಿಂದ ವರುಷಕ್ಕೆ ಮೂರು ವರುಷ ಬರ ಉಂಟಾ ಗಿತ್ತು. ಆಗ ದಾವೀದನು ಕರ್ತನನ್ನು ವಿಚಾರಿಸಿದನು. ಕರ್ತನು--ಸೌಲನು ಗಿಬ್ಯೋನ್ಯರನ್ನು ಕೊಂದುಹಾಕಿ ದ್ದರಿಂದ ಅವನಿಗೋಸ್ಕರವೂ ರಕ್ತಾಪರಾಧವುಳ್ಳ ಅವನ ಮನೆಗೋಸ್ಕರವೂ ಇದಾಗಿದೆ ಎಂದು ಹೇಳಿದನು.
- 2ಆಗ ಅರಸನು ಗಿಬ್ಯೋನ್ಯರನ್ನು ಕಳುಹಿಸಿದನು. (ಆದರೆ ಗಿಬ್ಯೋನ್ಯರು ಇಸ್ರಾಯೇಲ್ ಮಕ್ಕಳಾಗಿರದೆ ಅಮೋರಿಯರಲ್ಲಿ ಉಳಿದವರಾಗಿದ್ದರು. ಅವರಿಗೆ ಇಸ್ರಾಯೇಲ್ ಮಕ್ಕಳು ಆಣೆ ಇಟ್ಟಿದ್ದರು. ಸೌಲನು ಇಸ್ರಾಯೇಲ್ ಮಕ್ಕಳಿಗೋಸ್ಕರವಾಗಿಯೂ ಯೆಹೂದ ಕ್ಕೋಸ್ಕರವಾಗಿಯೂ ತೋರಿಸಿದ ಆಸಕ್ತಿಯಿಂದ ಅವ ರನ್ನು ಹೊಡೆಯಲು ಹುಡುಕಿದ್ದನು)
- 3ಆದದರಿಂದ ದಾವೀದನು ಗಿಬ್ಯೋನ್ಯರಿಗೆ--ನಾನು ನಿಮಗೆ ಮಾಡ ಬೇಕಾದದ್ದೇನು? ನೀವು ಕರ್ತನ ಬಾಧ್ಯತೆಯನ್ನು ಆಶೀರ್ವದಿಸುವ ಹಾಗೆ ನಾನು ಯಾವದರಿಂದ ಪ್ರಾಯಶ್ಚಿತ್ತ ಮಾಡಲಿ ಎಂದು ಕೇಳಿದನು.
- 4ಆಗ ಗಿಬ್ಯೋನ್ಯರು ಅವನಿಗೆ--ಸೌಲನ ಕೈಯಿಂದಲಾದರೂ ಅವನ ಮನೆ ಯವರ ಕೈಯಿಂದಲಾದರೂ ನಮಗೆ ಬೆಳ್ಳಿಯಾದರೂ ಬಂಗಾರವಾದರೂ ಬೇಡ; ನೀನು ಈ ಕಾರ್ಯಕ್ಕೋಸ್ಕರ ಇಸ್ರಾಯೇಲಿನಲ್ಲಿ ಒಬ್ಬನನ್ನಾದರೂ ಕೊಂದುಹಾಕ ಬೇಕೆಂಬುವದು ನಮಗೆ ಅಗತ್ಯವಿಲ್ಲ ಅಂದರು. ಆಗ ಅವನು--ನೀವು ನನಗೆ ಏನು ಹೇಳುತ್ತೀರೋ ನಾನು ನಿಮಗೆ ಮಾಡುವೆನು ಅಂದನು.
Cross references
- Joshua 9:3–21 ಯೆಹೋಶುವ 9:3–21ಆದರೆ ಯೆಹೋಶುವನು ಯೆರಿಕೋವಿಗೂ ಆಯಿಗೂ ಮಾಡಿದ್ದನ್ನು ಗಿಬ್ಯೋನಿನ ನಿವಾಸಿಗಳು ಕೇಳಿದಾಗ ಒಂದು ತಂತ್ರವಾದ ಉಪಾಯವನ್ನು ಮಾಡಿ ರಾಯಭಾರಿಗಳ ಹಾಗೆ ತೋರಿಸುವಂತೆ ಹಳೇ ಗೋಣೀಚೀಲಗಳನ್ನೂ ತೇಪೆಹಾಕಿದ ಹಳೇದಾದ ದ್ರಾಕ್ಷಾರಸದ ಬುದ್ದಲಿಗಳನ್ನೂ ಕಟ್ಟಿಕೊಂಡು ತಮ್ಮ ಕತ್ತೆಗಳ ಮೇಲೆ ಹಾಕಿಕೊಂಡು ತೇಪೆಹಾಕಿದ ಹಳೇ ದಾದ ಕೆರಗಳನ್ನು ತಮ್ಮ ಕಾಲುಗಳಲ್ಲಿ ಮೆಟ್ಟಿಕೊಂಡು, ಹಳೇ ಬಟ್ಟೆಗಳನ್ನು ತೊಟ್ಟುಕೊಂಡು ಒಣಗಿದ ರೊಟ್ಟಿ ಯನ್ನೂ ತೆಗೆದುಕೊಂಡು ಅವರು ಗಿಲ್ಗಾಲಿನಲ್ಲಿ ಇರುವ ಪಾಳೆಯಕ್ಕೆ ಯೆಹೋಶುವನ ಬಳಿಗೆ ಹೋಗಿ ಅವ ನಿಗೂ ಇಸ್ರಾಯೇಲ್ಯರಿಗೂ--ನಾವು ದೂರ ದೇಶ ದಿಂದ ಬಂದೆವು; ಈಗ ನಮ್ಮ ಸಂಗಡ ಒಡಂಬಡಿಕೆ ಮಾಡಿರಿ ಅಂದರು. ಆಗ ಇಸ್ರಾಯೇಲ್ ಮನುಷ್ಯರು ಹಿವ್ವಿಯರಿಗೆ--ನೀವು ಒಂದು ವೇಳೆ ನಮ್ಮ ಮಧ್ಯದಲ್ಲಿ ವಾಸಿಸುವವರು ಆಗಿರಬಹುದು; ಆದರೆ ನಿಮ್ಮ ಸಂಗಡ ಒಡಂಬಡಿಕೆಯನ್ನು ಮಾಡುವದು ಹೇಗೆ ಅಂದರು. ಅದಕ್ಕವರು ಯೆಹೋಶುವನಿಗೆ--ನಾವು ನಿನ್ನ ಸೇವ ಕರು ಅಂದರು. ಆಗ ಯೆಹೋಶುವನು ಅವರಿಗೆ-- ನೀವು ಯಾರು, ಎಲ್ಲಿಂದ ಬಂದಿರಿ ಅಂದನು. ಅವರು ಅವನಿಗೆ--ನಿಮ್ಮ ದೇವರಾದ ಕರ್ತನ ಹೆಸರಿಗೋಸ್ಕರ ನಿನ್ನ ಸೇವಕರಾದ ನಾವು ದೂರದೇಶದಿಂದ ಬಂದೆವು. ಯಾಕಂದರೆ ಆತನ ಕೀರ್ತಿಯನ್ನೂ ಆತನು ಐಗುಪ್ತದಲ್ಲಿ ಮಾಡಿದ ಎಲ್ಲವನ್ನೂ ಯೊರ್ದನಿಗೆ ಆಚೆಯಿರುವ ಅಮೋರಿಯರ ಇಬ್ಬರು ಅರಸುಗಳಾದ ಹೆಷ್ಬೋನಿನ ಅರಸನಾದ ಸೀಹೋನನಿಗೂ ಅಷ್ಟರೋತಿನಲ್ಲಿದ್ದ ಬಾಷಾನಿನ ಅರಸನಾದ ಓಗನಿಗೂ ಮಾಡಿದ್ದೆಲ್ಲವನ್ನೂ ನಾವು ಕೇಳಿದೆವು. ನಮ್ಮ ಹಿರಿಯರೂ ನಮ್ಮ ದೇಶ ನಿವಾಸಿಗಳಾದ ಜನರೆಲ್ಲರೂ ನಮಗೆ ಹೇಳಿದ್ದೇ ನಂದರೆ--ನೀವು ಪ್ರಯಾಣಕ್ಕಾಗಿ ರೊಟ್ಟಿಯನ್ನು ತೆಗೆದು ಕೊಂಡು ಅವರೆದುರಿಗೆ ಹೋಗಿ ಅವರಿಗೆ--ನಾವು ನಿಮ್ಮ ಸೇವಕರು; ಆದಕಾರಣ ಈಗ ನಮ್ಮ ಸಂಗಡ ಒಡಂಬಡಿಕೆ ಮಾಡಿರಿ ಎಂದು ಹೇಳಿರಿ ಅಂದರು. ನಾವು ನಿಮ್ಮ ಬಳಿಗೆ ಹೊರಟ ದಿನದಲ್ಲಿ ನಮ್ಮ ಪ್ರಯಾಣಕ್ಕೆ ಮನೆಯಿಂದ ಬಿಸಿ ರೊಟ್ಟಿಗಳನ್ನು ತೆಗೆದು ಕೊಂಡಿದ್ದೆವು; ಆದರೆ ಈಗ ಅವು ಒಣಗಿಹೋಗಿವೆ. ನಾವು ದ್ರಾಕ್ಷಾರಸ ತುಂಬುವಾಗ ಈ ಬುದ್ದಲಿಗಳು ಹೊಸವಾಗಿದ್ದವು. ಇಗೋ, ಅವು ಹರಿದುಹೋದವು. ಇದಲ್ಲದೆ ಪ್ರಯಾಣ ಬಹಳ ದೂರವಾದದರಿಂದ ಈ ನಮ್ಮ ವಸ್ತ್ರಗಳೂ ನಮ್ಮ ಕೆರಗಳೂ ಹಳೇವಾದವು ಅಂದರು. ಆಗ ಇವರು ಕರ್ತನಿಂದ ಆಲೋಚನೆ ಯನ್ನು ಕೇಳದೆ ಅವರ ಆಹಾರದಲ್ಲಿ ತೆಗೆದುಕೊಂಡರು. ಯೆಹೋಶುವನು ಅವರ ಸಂಗಡ ಸಮಾಧಾನ ಮಾಡಿಕೊಂಡು ಅವರನ್ನು ಜೀವದಿಂದ ಇರಿಸುವದಕ್ಕೆ ಅವರ ಸಂಗಡ ಒಡಂಬಡಿಕೆ ಮಾಡಿದನು. ಇದಲ್ಲದೆ ಸಭೆಯ ಪ್ರಧಾನರು ಪ್ರಮಾಣಮಾಡಿದರು. ಆದರೆ ಅವರ ಸಂಗಡ ಒಡಂಬಡಿಕೆ ಮಾಡಿ ಮೂರು ದಿವಸಗಳಾದ ತರುವಾಯ ಅವರು ತಮ್ಮ ನೆರೆಯವರೆಂದೂ ತಮ್ಮಲ್ಲಿ ಇರುವವರೆಂದೂ ಕೇಳಿ ದರು. ಇಸ್ರಾಯೇಲ್ ಮಕ್ಕಳು ಪ್ರಯಾಣ ಮಾಡು ವಾಗ ಮೂರನೇ ದಿನದಲ್ಲಿ ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ಯಾರೀಮ್ ಎಂಬ ಅವರ ಪಟ್ಟಣ ಗಳಿಗೆ ಬಂದರು. ಸಭೆಯ ಪ್ರಧಾನರು ಅವರಿಗೆ ಇಸ್ರಾಯೇಲಿನ ದೇವರಾದ ಕರ್ತನ ಮೇಲೆ ಆಣೆ ಇಟ್ಟದ್ದರಿಂದ ಇಸ್ರಾಯೇಲ್ ಮಕ್ಕಳು ಅವರನ್ನು ಸಂಹರಿಸಲಿಲ್ಲ. ಆದರೆ ಸಭೆಯವರೆಲ್ಲರೂ ಇಸ್ರಾಯೇ ಲ್ಯರ ಪ್ರಧಾನರಿಗೆ ವಿರೋಧವಾಗಿ ಗುಣುಗುಟ್ಟಿದರು. ಆಗ ಸಕಲ ಪ್ರಧಾನರು ಎಲ್ಲಾ ಸಭೆಗೆ--ನಾವು ಇಸ್ರಾಯೇಲಿನ ದೇವರಾದ ಕರ್ತನ ಮೇಲೆ ಅವರಿಗೆ ಆಣೆ ಇಟ್ಟೆವು; ಆದದರಿಂದ ಅವರನ್ನು ನಾವು ಮುಟ್ಟಕೂಡದು. ನಾವು ಅವರಿಗೆ ಇಟ್ಟ ಆಣೆಯ ನಿಮಿತ್ತ ಕೋಪವು ನಮ್ಮ ಮೇಲೆ ಬಾರದ ಹಾಗೆ ನಾವು ಅವರನ್ನು ಜೀವದಿಂದ ಇರಿಸಿ ಅವರಿಗೆ ಇದನ್ನು ಮಾಡುವೆವು. ಏನಂದರೆ, ಪ್ರಧಾನರಾದ ನಾವು ಅವರಿಗೆ ಹೇಳಿದ ಹಾಗೆಯೇ ಅವರನ್ನು ಜೀವದಿಂದ ಉಳಿಸಿ ಎಲ್ಲಾ ಸಭೆಗೆ ಕಟ್ಟಿಗೆ ಕಡಿಯುವವರಾಗಿಯೂ ನೀರು ತರುವವರಾಗಿಯೂ ಇರಲಿ ಎಂದು ಪ್ರಧಾನರು ಸಭೆಯವರ ಸಂಗಡ ಹೇಳಿದರು.
- Genesis 15:16 ಆದಿಕಾಂಡ 15:16ಆದರೆ ನಾಲ್ಕನೆಯ ಸಂತಾನದಲ್ಲಿ ಅವರು ತಿರಿಗಿ ಬರುವರು; ಅಮೋರಿಯರ ದುಷ್ಟತನವು ಇನ್ನೂ ಪೂರ್ತಿಯಾಗಲಿಲ್ಲ ಎಂದು ಹೇಳಿದನು.
- Deuteronomy 7:16 ಧರ್ಮೋಪದೇಶಕಾಂಡ 7:16ನಿನ್ನ ದೇವರಾದ ಕರ್ತನು ನಿನಗೆ ಒಪ್ಪಿಸುವ ಜನಗಳನ್ನೆಲ್ಲಾ ನೀನು ಸಂಹರಿಸಿಬಿಡುವಿ; ಅವರ ಮೇಲೆ ನೀನು ಕಟಾಕ್ಷವಿಡಬಾರದು; ಇಲ್ಲವೆ ಅವರ ದೇವರು ಗಳನ್ನು ಸೇವಿಸಬಾರದು; ಅದು ನಿನಗೆ ಉರುಲಾ ಗುವದು.
- 2 Kings 10:16 2 ಅರಸುಗಳು 10:16ನೀನು ನನ್ನ ಸಂಗಡ ಬಂದು ಕರ್ತನಿಗೋ ಸ್ಕರ ನನಗುಂಟಾದ ಆಸಕ್ತಿಯನ್ನು ನೋಡು ಎಂದು ಹೇಳಿ ಅವನನ್ನು ತನ್ನ ರಥದಲ್ಲಿ ಕೂಡ್ರಿಸಿಕೊಂಡನು.
- 1 Samuel 14:44 1 ಸಮುವೇಲನು 14:44ಅದಕ್ಕೆ ಸೌಲನು--ಯೋನಾತಾನನೇ, ನೀನು ನಿಜವಾಗಿ ಸಾಯಬೇಕು; ಇಲ್ಲದಿದ್ದರೆ ದೇವರು ನನಗೆ ಹೆಚ್ಚಾದದ್ದನ್ನು ಮಾಡಲಿ ಅಂದನು.
- 2 Kings 10:31 2 ಅರಸುಗಳು 10:31ಆದರೆ ಯೇಹುವು ತನ್ನ ಪೂರ್ಣಹೃದಯ ದಿಂದ ಇಸ್ರಾಯೇಲಿನ ದೇವರಾದ ಕರ್ತನ ನ್ಯಾಯ ಪ್ರಮಾಣದಲ್ಲಿ ನಡೆಯುವ ಹಾಗೆ ಎಚ್ಚರಿಕೆಯಾಗಿರ ಲಿಲ್ಲ; ಇಸ್ರಾಯೇಲ್ಯರನ್ನು ಪಾಪಮಾಡಲು ಪ್ರೇರೇಪಿ ಸಿದ ಯಾರೊಬ್ಬಾಮನ ಪಾಪಗಳನ್ನು ತೊರೆದು ಬಿಡಲಿಲ್ಲ.
- Luke 9:54–55 ಲೂಕನು 9:54–55ಆತನ ಶಿಷ್ಯರಾದ ಯಾಕೋಬ ಯೋಹಾನರು ಇದನ್ನು ನೋಡಿ--ಕರ್ತನೇ, ಎಲೀಯನು ಮಾಡಿದ ಪ್ರಕಾರ ಅವರನ್ನು ದಹಿಸಿಬಿಡುವಂತೆ ಆಕಾಶದಿಂದ ಬೆಂಕಿ ಬೀಳುವ ಹಾಗೆ ನಾವು ಅಪ್ಪಣೆಕೊಡಲು ನಿನಗೆ ಮನಸ್ಸುಂಟೋ ಎಂದು ಅವರು ಕೇಳಿದರು. ಆದರೆ ಆತನು ತಿರುಗಿಕೊಂಡು ಅವರನ್ನು ಗದರಿಸಿ--ನೀವು ಯಾವ ತರವಾದ ಆತ್ಮದವರಾಗಿದ್ದೀರೆಂದು ನಿಮಗೆ ತಿಳಿಯದು.
- 1 Samuel 15:8–9 1 ಸಮುವೇಲನು 15:8–9ಆದರೆ ಸಮಸ್ತ ಜನರನ್ನು ಕತ್ತಿಯಿಂದ ಸಂಪೂರ್ಣ ನಾಶಮಾಡಿದನು. ಸೌಲನು ಮತ್ತು ಜನರು ಅಗಾಗನನ್ನೂ ಪಶುಕುರಿಗಳಲ್ಲಿ ಮೇಲ್ತರವಾದ ವುಗಳನ್ನೂ ಉತ್ತಮವಾದ ಸಮಸ್ತವನ್ನೂ ಕನಿಕರಿಸಿದರು. ಅವುಗಳನ್ನು ಸಂಪೂರ್ಣ ನಾಶಮಾಡಲು ಮನಸ್ಸಿಲ್ಲದೆ ಇದ್ದನು. ಆದರೆ ತಿರಸ್ಕರಿಸಲ್ಪಡತಕ್ಕ ಕನಿಷ್ಠವಾದವು ಗಳನ್ನೆಲ್ಲಾ ಸಂಪೂರ್ಣ ನಾಶಮಾಡಿದರು.
- Romans 10:2 ರೋಮಾಪುರದವರಿಗೆ 10:2ದೇವರಲ್ಲಿ ಆಸಕ್ತರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿಕೊಡುತ್ತೇನೆ; ಆದರೂ ಅವರ ಆಸಕ್ತಿಯು ಜ್ಞಾನಾನುಸಾರವಾದದ್ದಲ್ಲ.
- John 16:2 ಯೋಹಾನನು 16:2ಅವರು ನಿಮ್ಮನ್ನು ಸಭಾಮಂದಿರಗಳಿಂದ ಹೊರಗೆ ಹಾಕುವರು; ಹೌದು, ನಿಮ್ಮನ್ನು ಕೊಲ್ಲುವವನು ದೇವರ ಸೇವೆ ಮಾಡುತ್ತಾನೆಂದು ನೆನಸುವ ಗಳಿಗೆ ಬರುತ್ತದೆ.
- Galatians 4:17 ಗಲಾತ್ಯದವರಿಗೆ 4:17ಅವರು ನಿಮ್ಮನ್ನು ಮೆಚ್ಚಿಸುವದಕ್ಕೆ ಆಸಕ್ತರಾಗಿದ್ದಾರೆ; ಆದರೆ ಒಳ್ಳೇ ಅಭಿಪ್ರಾಯದಿಂದ ಅಲ್ಲ; ಹೌದು, ನೀವು ತಮ್ಮನ್ನೇ ಮೆಚ್ಚಿಸುವವರಾಗಬೇಕೆಂದು ನಿಮ್ಮನ್ನು ಅಗ ಲಿಸುವದಕ್ಕೆ ಅಪೇಕ್ಷಿಸುತ್ತಾರೆ.
Original words (Hebrew)
- king · H4428מֶלֶךְ melek
- called · H7121קָרָא qârâʼ
- Gibeonites · H1393גִּבְעֹנִי Gibʻônîy
- said · H559אָמַר ʼâmar
- Gibeonites · H1393גִּבְעֹנִי Gibʻônîy
- children · H1121בֵּן bên
- Israel · H3478יִשְׂרָאֵל Yisrâʼêl
- remnant · H3499יֶתֶר yether
- Amorites · H567אֱמֹרִי ʼĔmôrîy
- children · H1121בֵּן bên
- Israel · H3478יִשְׂרָאֵל Yisrâʼêl
- sworn · H7650שָׁבַע shâbaʻ
- Saul · H7586שָׁאוּל Shâʼûwl
- sought · H1245בָּקַשׁ bâqash
- slay · H5221נָכָה nâkâh
- zeal · H7065קָנָא qânâʼ
- children · H1121בֵּן bên
- Israel · H3478יִשְׂרָאֵל Yisrâʼêl
- Judah · H3063יְהוּדָה Yᵉhûwdâh