Joshua · chapter 9 · verse 3
Joshua 9:3 in Kannada
ಆದರೆ ಯೆಹೋಶುವನು ಯೆರಿಕೋವಿಗೂ ಆಯಿಗೂ ಮಾಡಿದ್ದನ್ನು ಗಿಬ್ಯೋನಿನ ನಿವಾಸಿಗಳು ಕೇಳಿದಾಗ
Aadare yehoshuvanu yerikovigoo aayigoo maadiddannu gibyonina nivaasigalu kelidaaga
Joshua 9:3 in English
- King James Version (KJV)
- And when the inhabitants of Gibeon heard what Joshua had done unto Jericho and to Ai,
- World English Bible (WEB)
- But when the inhabitants of Gibeon heard what Joshua had done to Jericho and to Ai,
- American Standard Version (ASV)
- But when the inhabitants of Gibeon heard what Joshua had done unto Jericho and to Ai,
- Bible in Basic English (BBE)
- And the men of Gibeon, hearing what Joshua had done to Jericho and Ai,
- Darby Translation (DBY)
- And when the inhabitants of Gibeon heard what Joshua had done to Jericho and to Ai,
- Webster's Bible (WBS)
- And when the inhabitants of Gibeon heard what Joshua had done to Jericho and to Ai,
- Young's Literal Translation (YLT)
- And the inhabitants of Gibeon have heard that which Joshua hath done to Jericho and to Ai,
Read in context
- 1ಯೊರ್ದನಿಗೆ ಈಚೆಯಲ್ಲಿ ಬೆಟ್ಟಗಳಲ್ಲಿಯೂ ತಗ್ಗುಗಳಲ್ಲಿಯೂ ಲೆಬನೋನಿಗೆ ಎದು ರಾದ ಮಹಾಸಮುದ್ರದ ಸಮಸ್ತ ಪ್ರಾಂತ್ಯಗಳಲ್ಲಿಯೂ ಇರುವ ಹಿತ್ತಿಯರ ಅಮೋರಿಯರ ಕಾನಾನ್ಯರ ಪೆರಿಜ್ಜೀ ಯರ ಹಿವ್ವಿಯರ ಯೆಬೂಸಿಯರ ಅರಸುಗಳು ಇದನ್ನು ಕೇಳಿದಾಗ ಆದದ್ದೇನಂದರೆ,
- 2ಅವರು ಯೆಹೋಶುವನ ಸಂಗಡವೂ ಇಸ್ರಾಯೇಲ್ಯರ ಸಂಗಡವೂ ಯುದ್ಧ ಮಾಡುವದಕ್ಕೆ ಒಟ್ಟಾಗಿ ಕೂಡಿಕೊಂಡರು.
- 3ಆದರೆ ಯೆಹೋಶುವನು ಯೆರಿಕೋವಿಗೂ ಆಯಿಗೂ ಮಾಡಿದ್ದನ್ನು ಗಿಬ್ಯೋನಿನ ನಿವಾಸಿಗಳು ಕೇಳಿದಾಗ
- 4ಒಂದು ತಂತ್ರವಾದ ಉಪಾಯವನ್ನು ಮಾಡಿ ರಾಯಭಾರಿಗಳ ಹಾಗೆ ತೋರಿಸುವಂತೆ ಹಳೇ ಗೋಣೀಚೀಲಗಳನ್ನೂ ತೇಪೆಹಾಕಿದ ಹಳೇದಾದ ದ್ರಾಕ್ಷಾರಸದ ಬುದ್ದಲಿಗಳನ್ನೂ ಕಟ್ಟಿಕೊಂಡು ತಮ್ಮ ಕತ್ತೆಗಳ ಮೇಲೆ ಹಾಕಿಕೊಂಡು
- 5ತೇಪೆಹಾಕಿದ ಹಳೇ ದಾದ ಕೆರಗಳನ್ನು ತಮ್ಮ ಕಾಲುಗಳಲ್ಲಿ ಮೆಟ್ಟಿಕೊಂಡು, ಹಳೇ ಬಟ್ಟೆಗಳನ್ನು ತೊಟ್ಟುಕೊಂಡು ಒಣಗಿದ ರೊಟ್ಟಿ ಯನ್ನೂ ತೆಗೆದುಕೊಂಡು
Cross references
- Joshua 10:2 ಯೆಹೋಶುವ 10:2ಯೆರೂಸಲೇಮಿನ ಅರಸನಾದ ಅದೋನೀ ಚೆದೆಕನು ಕೇಳಿ ಬಹು ಭಯಪಟ್ಟರು. ಯಾಕಂದರೆ ಗಿಬ್ಯೋನ್ ರಾಜಪಟ್ಟಣಗಳ ಹಾಗೆ ದೊಡ್ಡ ಪಟ್ಟಣ ವಾಗಿತ್ತು; ಮತ್ತು ಆಯಿಗಿಂತಲೂ ದೊಡ್ಡದಾಗಿತ್ತು; ಇದಲ್ಲದೆ ಅದರ ಮನುಷ್ಯರು ಪರಾಕ್ರಮಶಾಲಿಗಳಾ ಗಿದ್ದರು.
- Joshua 9:17 ಯೆಹೋಶುವ 9:17ಇಸ್ರಾಯೇಲ್ ಮಕ್ಕಳು ಪ್ರಯಾಣ ಮಾಡು ವಾಗ ಮೂರನೇ ದಿನದಲ್ಲಿ ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ಯಾರೀಮ್ ಎಂಬ ಅವರ ಪಟ್ಟಣ ಗಳಿಗೆ ಬಂದರು.
- 2 Samuel 21:1–2 2 ಸಮುವೇಲನು 21:1–2ದಾವೀದನ ದಿವಸಗಳಲ್ಲಿ ವರುಷದಿಂದ ವರುಷಕ್ಕೆ ಮೂರು ವರುಷ ಬರ ಉಂಟಾ ಗಿತ್ತು. ಆಗ ದಾವೀದನು ಕರ್ತನನ್ನು ವಿಚಾರಿಸಿದನು. ಕರ್ತನು--ಸೌಲನು ಗಿಬ್ಯೋನ್ಯರನ್ನು ಕೊಂದುಹಾಕಿ ದ್ದರಿಂದ ಅವನಿಗೋಸ್ಕರವೂ ರಕ್ತಾಪರಾಧವುಳ್ಳ ಅವನ ಮನೆಗೋಸ್ಕರವೂ ಇದಾಗಿದೆ ಎಂದು ಹೇಳಿದನು. ಆಗ ಅರಸನು ಗಿಬ್ಯೋನ್ಯರನ್ನು ಕಳುಹಿಸಿದನು. (ಆದರೆ ಗಿಬ್ಯೋನ್ಯರು ಇಸ್ರಾಯೇಲ್ ಮಕ್ಕಳಾಗಿರದೆ ಅಮೋರಿಯರಲ್ಲಿ ಉಳಿದವರಾಗಿದ್ದರು. ಅವರಿಗೆ ಇಸ್ರಾಯೇಲ್ ಮಕ್ಕಳು ಆಣೆ ಇಟ್ಟಿದ್ದರು. ಸೌಲನು ಇಸ್ರಾಯೇಲ್ ಮಕ್ಕಳಿಗೋಸ್ಕರವಾಗಿಯೂ ಯೆಹೂದ ಕ್ಕೋಸ್ಕರವಾಗಿಯೂ ತೋರಿಸಿದ ಆಸಕ್ತಿಯಿಂದ ಅವ ರನ್ನು ಹೊಡೆಯಲು ಹುಡುಕಿದ್ದನು)
- Joshua 8:1–35 ಯೆಹೋಶುವ 8:1–35ಆಗ ಕರ್ತನು ಯೆಹೋಶುವನಿಗೆ--ಭಯಪಡಬೇಡ, ನಿರುತ್ಸಾಹಗೊಳ್ಳಬೇಡ. ನೀನು ಸಮಸ್ತ ಯುದ್ಧಸ್ಥರಾದ ಜನರನ್ನು ಕೂಡಿಸಿಕೊಂಡು ಎದ್ದು ಆಯಿಗೆ ಏರಿ ಹೋಗು. ನೋಡು, ನಾನು ಆಯಿಯ ಅರಸನನ್ನೂ ಅವನ ಜನವನ್ನೂ ಪಟ್ಟಣ ವನ್ನೂ ಸೀಮೆಯನ್ನೂ ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ. ನೀನು ಯೆರಿಕೋವಿಗೂ ಅದರ ಅರಸನಿಗೂ ಯಾವ ಪ್ರಕಾರ ಮಾಡಿದಿಯೋ ಹಾಗೆಯೇ ಆಯಿಗೂ ಅದರ ಅರಸನಿಗೂ ಮಾಡಬೇಕು. ಅದರ ಕೊಳ್ಳೆಯನ್ನೂ ಪಶುಗಳನ್ನೂ ಮಾತ್ರವೇ ನಿಮಗೋಸ್ಕರ ಸುಲು ಕೊಳ್ಳಿರಿ. ನೀವು ಆ ಪಟ್ಟಣದ ಹಿಂಭಾಗದಲ್ಲಿ ಒಂದು ಆಸರೆಯನ್ನು ಮಾಡಿಕೊಳ್ಳಿರಿ ಅಂದನು. ಆಗ ಆಯಿಗೆ ಏರಿ ಹೋಗಲು ಯೆಹೋಶುವನೂ ಸಮಸ್ತ ಯುದ್ಧಸ್ಥರೂ ಎದ್ದರು. ಆದರೆ ಯೆಹೋಶುವನು ಪರಾಕ್ರಮಶಾಲಿಗಳಾದ ಮೂವತ್ತು ಸಾವಿರ ಜನರನ್ನು ಆದುಕೊಂಡು ರಾತ್ರಿಯಲ್ಲಿ ಅವರನ್ನು ಕಳುಹಿಸಿದನು. ಅವರಿಗೆ ಆಜ್ಞಾಪಿಸಿ--ಇಗೋ, ಪಟ್ಟಣದ ಹಿಂದೆ ನೀವು ಹೊಂಚಿಕೊಂಡಿರ್ರಿ; ಪಟ್ಟಣಕ್ಕೆ ಬಹುದೂರ ಹೋಗಬೇಡಿರಿ; ನೀವೆಲ್ಲರೂ ಸಿದ್ಧವಾಗಿರ್ರಿ. ಆದರೆ ನಾನೂ ನನ್ನ ಸಂಗಡ ಇರುವ ಜನರೆಲ್ಲರೂ ಪಟ್ಟಣದ ಸವಿಾಪಕ್ಕೆ ಸೇರುವೆವು; ಆಗ ಆಗುವದೇನಂದರೆ, ಅವರು ಮುಂಚಿನ ಹಾಗೆಯೇ ನಮಗೆ ವಿರೋಧವಾಗಿ ಪಟ್ಟಣದಿಂದ ಹೊರಟು ಬರುವಾಗ ಅವರ ಮುಂದೆ ನಾವು ಓಡಿ ಹೋಗುವೆವು. ಆಗ ಅವರು--ಮುಂಚಿನ ಹಾಗೆಯೇ ನಮ್ಮ ಮುಂದೆ ಓಡಿ ಹೋಗುತ್ತಾರೆಂದು ಹೇಳಿ (ನಮ್ಮ ಹಿಂದೆ ಹೊರಡುವರು;) ಆದರೆ ನಾವು ಅವರನ್ನು ಪಟ್ಟಣದ ಬಳಿಯಿಂದ ಎಳಕೊಳ್ಳುವ ವರೆಗೂ ಅವರ ಮುಂದೆ ಓಡಿ ಹೋಗುವೆವು. ಆಗ ನೀವು ಹೊಂಚಿಕೊಳ್ಳುವ ಸ್ಥಳದಿಂದ ಎದ್ದು ಬಂದು ಪಟ್ಟಣವನ್ನು ಸ್ವಾಧೀನ ಮಾಡಿಕೊಳ್ಳಬೇಕು; ಯಾಕಂದರೆ ನಿಮ್ಮ ದೇವರಾದ ಕರ್ತನು ಅದನ್ನು ನಿಮ್ಮ ಕೈಗೆ ಒಪ್ಪಿಸಿ ಕೊಡುವನು. ನೀವು ಪಟ್ಟಣವನ್ನು ಹಿಡಿದ ತರುವಾಯ ಬೆಂಕಿ ಹಚ್ಚಿ ಅದನ್ನು ಸುಟ್ಟುಬಿಟ್ಟು ಕರ್ತನ ಆಜ್ಞೆಯ ಪ್ರಕಾರವೇ ನೀವು ಮಾಡಬೇಕು. ನೋಡು, ನಾನು ಇದನ್ನು ನಿಮಗೆ ಆಜ್ಞಾಪಿಸಿದೆನು ಅಂದನು. ಯೆಹೋ ಶುವನು ಅವರನ್ನು ಕಳುಹಿಸಿದಾಗ ಅವರು ಹೋಗಿ ಹೊಂಚಿಕೊಂಡು ಬೇತೇಲಿಗೂ ಆಯಿಗೂ ನಡುವೆ ಆಯಿಗೆ ಪಶ್ಚಿಮದ ಕಡೆ ಇಳುಕೊಂಡರು. ಆದರೆ ಯೆಹೋಶುವನು ಆ ರಾತ್ರಿ ಜನರ ಮಧ್ಯದಲ್ಲಿ ಇಳುಕೊಂಡನು. ಉದಯ ಕಾಲದಲ್ಲಿ ಯೆಹೋಶುವನು ಎದ್ದು ಜನರನ್ನು ಲೆಕ್ಕ ಮಾಡಿ ತಾನೂ ಇಸ್ರಾಯೇಲಿನ ಹಿರಿಯರೂ ಜನರ ಮುಂದೆ ನಡೆದು ಆಯಿಗೆ ಏರಿ ಹೋದರು. ಅವನ ಸಂಗಡ ಇದ್ದ ಯುದ್ಧಸ್ಥರೆಲ್ಲಾ ನಡೆದು ಪಟ್ಟಣದ ಸವಿಾಪವಾಗಿ ಬಂದು ಸೇರಿ ಆಯಿಗೆ ಉತ್ತರ ದಿಕ್ಕಿನಲ್ಲಿ ಇಳಿದುಕೊಂಡರು. ಆದರೆ ಆಯಿಗೂ ಅವರಿಗೂ ಮಧ್ಯದಲ್ಲಿ ಒಂದು ತಗ್ಗು ಇತ್ತು. ಯೆಹೋಶುವನು ಹೆಚ್ಚು ಕಡಿಮೆ ಐದು ಸಾವಿರ ಜನರನ್ನು ಆದುಕೊಂಡು ಆ ಪಟ್ಟಣದ ಪಶ್ಚಿಮ ಕಡೆಯಲ್ಲಿ ಬೇತೇಲಿಗೂ ಆಯಿಗೂ ನಡುವೆ ಹೊಂಚಿ ಕೊಳ್ಳುವದಕ್ಕೆ ಅವರನ್ನು ಇಟ್ಟನು. ಪಟ್ಟಣಕ್ಕೆ ಉತ್ತರ ದಲ್ಲಿರುವ ಸಕಲ ಸೈನ್ಯದ ಜನರನ್ನೂ ಪಟ್ಟಣಕ್ಕೆ ಪಶ್ಚಿಮ ದಿಕ್ಕಿನಲ್ಲಿ ಹೊಂಚುಹಾಕುವವರನ್ನೂ ಇಟ್ಟ ತರುವಾಯ ಯೆಹೋಶುವನು ಆ ರಾತ್ರಿಯಲ್ಲಿ ತಗ್ಗಿನ ಮಧ್ಯಕ್ಕೆ ಹೋದನು. ಆಯಿಯ ಅರಸನು ಇದನ್ನು ಕಂಡಾಗ ಆ ಪಟ್ಟಣದ ಜನರು ತ್ವರೆಪಟ್ಟು ಉದಯ ಕಾಲದಲ್ಲಿ ಎದ್ದು ನಿಶ್ಚಯಿಸಿದ ವೇಳೆಯಲ್ಲಿ ಅವನೂ ಅವನ ಜನರೆಲ್ಲರೂ ಇಸ್ರಾಯೇಲ್ಯರಿಗೆ ಎದುರಾಗಿ ಯುದ್ಧ ಮಾಡಲು ಬೈಲಿಗೆ ಹೊರಟರು. ಆದರೆ ಅವನು ಪಟ್ಟಣದ ಹಿಂದೆ ತನಗೋಸ್ಕರ ಹೊಂಚಿಕೊಂಡಿರುವ ವರನ್ನು ಅರಿಯದೆ ಇದ್ದನು. ಅವರ ಹಿಂದೆ ಯೆಹೋಶುವನೂ ಇಸ್ರಾಯೇಲ್ಯರೆಲ್ಲರೂ ಬಡಿಯ ಲ್ಪಟ್ಟ ಹಾಗೆ ತೋರಿ ಅರಣ್ಯದ ಮಾರ್ಗವಾಗಿ ಓಡಿ ಹೋದರು. ಆಗ ಪಟ್ಟಣದಲ್ಲಿರುವ ಜನರೆಲ್ಲರೂ ಅವರನ್ನು ಹಿಂದಟ್ಟುವದಕ್ಕೆ ಕರೆಯಲ್ಪಟ್ಟರು; ಯೆಹೋಶುವನನ್ನು ಹಿಂದಟ್ಟುವವರಾಗಿ ಆ ಪಟ್ಟಣದ ಬಳಿಯಿಂದ ದೂರ ಸೆಳೆಯಲ್ಪಟ್ಟು ಹೋದರು. ಆಯಿಯಲ್ಲಿಯೂ ಬೇತೇಲಿನಲ್ಲಿಯೂ ಇಸ್ರಾಯೇ ಲಿನ ಹಿಂದೆ ಹೊರಟು ಹೋಗದ ಮನುಷ್ಯನು ಒಬ್ಬನೂ ಇಲ್ಲ. ಪಟ್ಟಣವನ್ನು ತೆರೆದಿಟ್ಟು ಹೋಗಿ ಇಸ್ರಾಯೇಲ್ಯರನ್ನು ಹಿಂದಟ್ಟಿದರು. ಆಗ ಕರ್ತನು ಯೆಹೋಶುವನಿಗೆ--ನಿನ್ನ ಕೈಯಲ್ಲಿರುವ ಈಟಿಯನ್ನು ಆಯಿಗೆ ಸರಿಯಾಗಿ ಚಾಚು; ಯಾಕಂದರೆ ಅದನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ ಅಂದನು. ಹಾಗೆಯೇ ಅವನು ತನ್ನ ಕೈಯಲ್ಲಿರುವ ಈಟಿಯನ್ನು ಪಟ್ಟಣಕ್ಕೆ ಎದುರಾಗಿ ಚಾಚಿದನು. ಆಗ ಹೊಂಚಿಕೊಂಡಿ ದ್ದವರು ತ್ವರೆಯಾಗಿ ತಮ್ಮ ಸ್ಥಳದಿಂದ ಎದ್ದು ಅವನು ತನ್ನ ಕೈಯನ್ನು ಚಾಚುತ್ತಲೇ ಪಟ್ಟಣಕ್ಕೆ ಬಂದು ಅದನ್ನು ಹಿಡಿದು ತ್ವರೆಯಾಗಿ ಬೆಂಕಿಯನ್ನು ಹಚ್ಚಿದರು. ಆಯಿಯ ಮನುಷ್ಯರು ಹಿಂದಕ್ಕೆ ತಿರಿಗಿ ನೋಡಿದಾಗ ಇಗೋ, ಪಟ್ಟಣದ ಹೊಗೆ ಹೊತ್ತಿ ಆಕಾಶಕ್ಕೆ ಏಳು ವದನ್ನು ಕಂಡರು; ಆಗ ಈ ಮಾರ್ಗವಾದರೂ ಆ ಮಾರ್ಗವಾದರೂ ಓಡಿಹೋಗಲು ಅವರಿಗೆ ತ್ರಾಣ ವಿಲ್ಲದೆ ಹೋಯಿತು. ಆಗ ಅರಣ್ಯಕ್ಕೆ ಓಡಿ ಹೋದ ಜನರು ಹಿಂದಟ್ಟಿದವರ ಕಡೆಗೆ ತಿರುಗಿದರು. ಹೊಂಚಿ ಕೊಂಡ ಜನರು ಪಟ್ಟಣವನ್ನು ಹಿಡಿದದ್ದನ್ನೂ ಪಟ್ಟಣದ ಹೊಗೆ ಏಳುವದನ್ನೂ ಯೆಹೋಶುವನೂ ಇಸ್ರಾಯೇ ಲ್ಯರೆಲ್ಲರೂ ನೋಡುವಾಗ ತಿರುಗಿಕೊಂಡು ಆಯಿಯ ಮನುಷ್ಯರನ್ನು ಹೊಡೆದುಬಿಟ್ಟರು. ಅವರು ಪಟ್ಟಣ ದೊಳಗಿಂದ ಇವರಿಗೆ ಎದುರಾಗಿ ಬಂದ ಕಾರಣ ಅವರು ಈ ಕಡೆ ಆ ಕಡೆ ಇರುವ ಇಸ್ರಾಯೇಲ್ಯರ ಮಧ್ಯದಲ್ಲಿ ಸಿಕ್ಕಿದರು. ಆದದರಿಂದ ಅವರಲ್ಲಿ ಒಬ್ಬರೂ ತಪ್ಪಿಸಿಕೊಂಡು ಹೋಗದ ಹಾಗೆಯೂ ಜೀವದಲ್ಲಿ ಉಳಿಯದ ಹಾಗೆಯೂ ಅವರನ್ನು ಹೊಡೆದರು. ಆಯಿಯ ಅರಸನನ್ನು ಜೀವಿತನಾಗಿ ಹಿಡಿದು ಯೆಹೋಶುವನ ಬಳಿಗೆ ತಂದರು. ಇಸ್ರಾಯೇಲ್ಯರು ಅರಣ್ಯದಲ್ಲಿ ಓಡಿಸಿದ ಆಯಿಯ ನಿವಾಸಿಗಳೆಲ್ಲರನ್ನು ಕತ್ತಿಯ ಬಾಯಿಂದ ಅವರೆಲ್ಲರು ಬಿದ್ದು ಮುಗಿಯುವ ವರೆಗೂ ಬೈಲಿನಲ್ಲಿ ಸಂಹರಿಸಿ ತೀರಿದ ತರುವಾಯ ಇಸ್ರಾಯೇಲ್ಯರೆಲ್ಲರೂ ಆಯಿಗೆ ತಿರುಗಿ ಅದನ್ನು ಕತ್ತಿಯ ಬಾಯಿಂದ ಹೊಡೆದರು. ಆ ದಿನದಲ್ಲಿ ಬಿದ್ದ ಸ್ತ್ರೀ ಪುರುಷರಾದ ಆಯಿಯ ಮನುಷ್ಯರೆಲ್ಲರು ಹನ್ನೆರಡು ಸಾವಿರ ಜನರು. ಯೆಹೋಶುವನು ಆಯಿಯ ನಿವಾಸಿಗಳೆಲ್ಲರನ್ನು ಸಂಪೂರ್ಣ ನಾಶಮಾಡುವ ವರೆಗೂ ಚಾಚಿಕೊಂಡಿರುವ ತನ್ನ ಕೈಯಲ್ಲಿದ್ದ ಈಟಿಯನ್ನು ಹಿಂದೆಗೆಯಲಿಲ್ಲ. ಆದರೆ ಕರ್ತನು ಯೆಹೋಶುವನಿಗೆ ಆಜ್ಞಾಪಿಸಿದ ಮಾತಿನ ಪ್ರಕಾರವೇ ಇಸ್ರಾಯೇ ಲ್ಯರು ಆ ಪಟ್ಟಣದ ಪಶುಗಳನ್ನೂ ಕೊಳ್ಳೆಯನ್ನೂ ತಮಗೋಸ್ಕರ ಸುಲುಕೊಂಡರು. ಯೆಹೋಶುವನು ಆಯಿಯನ್ನು ಸುಟ್ಟುಬಿಟ್ಟು ಅದನ್ನು ಈ ವರೆಗೆ ಇರುವ ಹಾಗೆ ಎಂದಿಗೂ ಹಾಳಾಗಿ ಬಿದ್ದಿರುವ ಮಣ್ಣುದಿನ್ನೆ ಯನ್ನಾಗಿ ಮಾಡಿದನು. ಆಯಿಯ ಅರಸನನ್ನು ಸಾಯಂಕಾಲದ ವರೆಗೂ ಒಂದು ಮರದಲ್ಲಿ ತೂಗ ಹಾಕಿಸಿದನು. ಸೂರ್ಯ ಅಸ್ತಮಿಸುವಾಗ ಯೆಹೋಶು ವನು ಅವನ ಹೆಣವನ್ನು ಮರದಿಂದ ಇಳಿಸಿ ಅದನ್ನು ಆ ಪಟ್ಟಣದ ಬಾಗಲಿನ ದ್ವಾರದಲ್ಲಿ ಹಾಕಲು ಆಜ್ಞಾಪಿಸಿದನು. ಆಗ ಅವರು ಹಾಗೆಯೇ ಮಾಡಿ ಈ ವರೆಗೆ ಇರುವ ದೊಡ್ಡ ಕಲ್ಲು ಕುಪ್ಪೆಯನ್ನು ಅದರ ಮೇಲೆ ಹಾಕಿದರು. ಆಗ ಯೆಹೋಶುವನು ಕರ್ತನ ಸೇವಕನಾದ ಮೋಶೆಯು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಿದ ಹಾಗೆ ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆಯಲ್ಪ ಟ್ಟಿರುವ ಹಾಗೆ ಏಬಾಲ್ ಪರ್ವತದಲ್ಲಿ ಇಸ್ರಾಯೇಲಿನ ದೇವರಾದ ಕರ್ತನಿಗೆ ಉಳಿ ಮುಟ್ಟದ ಪೂರ್ಣವಾದ ಕಲ್ಲುಗಳಿಂದ ಒಂದು ಬಲಿಪೀಠವನ್ನು ಕಟ್ಟಿದನು. ಆಗ ಅವರು ಅದರ ಮೇಲೆ ಕರ್ತನಿಗೆ ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿದರು. ಅಲ್ಲಿ ಅವನು ಮೋಶೆ ಇಸ್ರಾಯೇಲ್ ಮಕ್ಕಳ ಮುಂದೆ ಬರೆದಿದ್ದ ನ್ಯಾಯಪ್ರಮಾಣದ ಪ್ರತಿಯನ್ನು ಕಲ್ಲುಗಳಲ್ಲಿ ಬರೆದನು. ಇಸ್ರಾಯೇಲ್ಯರೆಲ್ಲರೂ ಅವರ ಹಿರಿ ಯರೂ ಅಧಿಕಾರಿಗಳೂ ನ್ಯಾಯಾಧಿಪತಿಗಳೂ ಪರ ದೇಶಸ್ಥರೂ ದೇಶಸ್ಥರೂ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವ ಲೇವಿಯರಾದ ಯಾಜಕರ ಮುಂದೆ ಒಡಂಬಡಿಕೆಯ ಮಂಜೂಷಕ್ಕೆ ಈ ಕಡೆಯೂ ಆ ಕಡೆಯೂ ಅರ್ಧ ಗೆರಿಜ್ಜೀಮ್ ಪರ್ವತದ ಕಡೆಗೂ ಅರ್ಧ ಏಬಾಲ್ ಪರ್ವತದ ಕಡೆಗೂ ಜನರನ್ನು ಆಶೀರ್ವದಿಸುವದಕ್ಕೆ ಕರ್ತನ ಸೇವಕನಾದ ಮೋಶೆ ಮೊದಲು ಆಜ್ಞಾಪಿಸಿದ ಹಾಗೆ ನಿಂತರು. ತರುವಾಯ ಅವನು ನ್ಯಾಯಪ್ರಮಾಣದ ಎಲ್ಲಾ ಮಾತುಗಳನ್ನು ಅಂದರೆ ಆಶೀರ್ವಾದಗಳನ್ನೂ ಶಾಪಗಳನ್ನೂ ನ್ಯಾಯ ಪ್ರಮಾಣದ ಪುಸ್ತಕದಲ್ಲಿ ಬರೆದಿರುವ ಪ್ರಕಾರ ಓದಿದನು.ಮೋಶೆಯು ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಬಿಡದೆ ಇಸ್ರಾಯೇಲಿನ ಸಭೆಗೆಲ್ಲಾ ಅಂದರೆ ಸ್ತ್ರೀಯ ರಿಗೂ ಚಿಕ್ಕವರಿಗೂ ಅವರಲ್ಲಿ ಪರಿಚಯವಿರುವ ಅವರ ಪರಕೀಯರಿಗೂ ಓದಿದನು. ಮೋಶೆಯು ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಬಿಡದೆ ಇಸ್ರಾಯೇಲಿನ ಸಭೆಗೆಲ್ಲಾ ಅಂದರೆ ಸ್ತ್ರೀಯ ರಿಗೂ ಚಿಕ್ಕವರಿಗೂ ಅವರಲ್ಲಿ ಪರಿಚಯವಿರುವ ಅವರ ಪರಕೀಯರಿಗೂ ಓದಿದನು.
- Joshua 6:1–27 ಯೆಹೋಶುವ 6:1–27ಆಗ ಇಸ್ರಾಯೇಲ್ ಮಕ್ಕಳ ನಿಮಿತ್ತವಾಗಿ ಒಬ್ಬರೂ ಹೊರಗೆ ಬಾರದ ಹಾಗೆಯೂ ಒಳಗೆ ಹೋಗದ ಹಾಗೆಯೂ ಯೆರಿಕೋವು ಭದ್ರ ವಾಗಿ ಮುಚ್ಚಲ್ಪಟ್ಟಿತು. ಆಗ ಕರ್ತನು ಯೆಹೋಶುವ ನಿಗೆ--ನೋಡು, ಯೆರಿಕೋವನ್ನೂ ಅದರ ಅರಸನನ್ನೂ ಬಲವುಳ್ಳ ಪರಾಕ್ರಮಿಗಳನ್ನೂ ನಿನ್ನ ಕೈಯಲ್ಲಿ ಒಪ್ಪಿಸಿ ಕೊಟ್ಟಿದ್ದೇನೆ. ಯುದ್ಧ ಸನ್ನದ್ಧರಾದ ನೀವೆಲ್ಲರೂ ಪಟ್ಟಣ ವನ್ನು ಸುತ್ತಬೇಕು, ಅಂದರೆ ಒಂದು ಸಾರಿ ಪಟ್ಟಣದ ಸುತ್ತಲೂ ಹೋಗಬೇಕು. ಈ ಪ್ರಕಾರ ಆರು ದಿವಸಗಳು ಮಾಡಬೇಕು. ಏಳು ಮಂದಿ ಯಾಜಕರು ಟಗರಿನ ಕೊಂಬುಗಳ ಏಳು ತುತೂರಿಗಳನ್ನು ಹಿಡುಕೊಂಡು ಮಂಜೂಷದ ಮುಂದೆ ಹೋಗಬೇಕು. ಆದರೆ ಅವರು ಏಳನೇ ದಿನ ಪಟ್ಟಣವನ್ನು ಏಳುಸಾರಿ ಸುತ್ತಬೇಕು. ಯಾಜಕರು ತುತೂರಿಗಳನ್ನು ಊದಬೇಕು. ಅವರು ಟಗರಿನ ಕೊಂಬುಗಳ ತುತೂರಿಗಳಿಂದ ದೀರ್ಘ ಧ್ವನಿ ಗೈಯುವಾಗ ನೀವು ಆ ತುತೂರಿಯ ಧ್ವನಿಯನ್ನು ಕೇಳಿದವರಾಗಿ ಜನರೆಲ್ಲರು ಮಹಾ ಆರ್ಭಟವಾಗಿ ಆರ್ಭಟಿಸಬೇಕು; ಆಗ ಆ ಪಟ್ಟಣದ ಗೋಡೆಯು ನೆಲಸಮವಾಗಿ ಬಿದ್ದು ಹೋಗುವದು. ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಹೋಗುವನು ಎಂದು ಹೇಳಿದನು. ಆಗ ನೂನನ ಮಗನಾದ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ--ನೀವು ಒಡಂಬಡಿ ಕೆಯ ಮಂಜೂಷವನ್ನು ಎತ್ತಿಕೊಳ್ಳಿರಿ; ಏಳು ಮಂದಿ ಯಾಜಕರು ಟಗರಿನ ಕೊಂಬುಗಳ ಏಳು ತುತೂರಿ ಗಳನ್ನು ಕರ್ತನ ಮಂಜೂಷದ ಮುಂದೆ ಹಿಡುಕೊಂಡು ಹೋಗಲಿ ಅಂದನು. ಜನರಿಗೆ--ನೀವು ಹಾದು ಹೋಗಿ ಪಟ್ಟಣವನ್ನು ಸುತ್ತಿರಿ; ಯುದ್ಧಸನ್ನದ್ಧರು ಕರ್ತನ ಮಂಜೂಷದ ಮುಂದೆ ಹೋಗಲಿ ಅಂದನು. ಯೆಹೋಶುವನು ಜನರ ಸಂಗಡ ಮಾತನಾಡಿದ ತರುವಾಯ ಆದದ್ದೇನಂದರೆ, ಟಗರಿನ ಕೊಂಬುಗಳ ಏಳು ತುತೂರಿಗಳನ್ನು ಹಿಡುಕೊಂಡ ಏಳು ಮಂದಿ ಯಾಜಕರು ತುತೂರಿಗಳನ್ನು ಊದುತ್ತಾ ಕರ್ತನ ಮುಂದೆ ನಡೆದರು. ಕರ್ತನ ಒಡಂಬಡಿಕೆಯ ಮಂಜೂ ಷವು ಅವರನ್ನು ಹಿಂಬಾಲಿಸಿತು. ಹೀಗೆ ಯುದ್ಧಸನ್ನದ್ಧ ರಾದ ಜನರು ತುತೂರಿಗಳನ್ನು ಊದುವ ಯಾಜಕರ ಮುಂದೆ ಹೋದರು. ಯಾಜಕರು ತುತೂರಿಯನ್ನು ಊದುತ್ತಿರುವಾಗ ಹಿಂದಿನ ಸೈನ್ಯವು ಮಂಜೂಷದ ಹಿಂದೆ ನಡೆದು ಬಂತು. ಯೆಹೋಶುವನು ಜನರಿಗೆನೀವು ಆರ್ಭಟಿಸಬಾರದು, ನಿಮ್ಮ ಶಬ್ದವು ಕೇಳಿಸ ಬಾರದು; ನಿಮ್ಮ ಬಾಯಿಂದ ಯಾವ ಮಾತು ಹೊರಡ ಬಾರದು; ನಾನು ಆರ್ಭಟಿಸಿರೆಂದು ಹೇಳುವ ದಿನದಲ್ಲಿ ಆರ್ಭಟಿಸಬೇಕು ಎಂದು ಆಜ್ಞಾಪಿಸಿದನು. ಹೀಗೆ ಯೇ ಕರ್ತನ ಮಂಜೂಷವು ಪಟ್ಟಣವನ್ನು ಒಂದು ಸಾರಿ ಸುತ್ತಿದ ಮೇಲೆ ಅವರು ಪಾಳೆಯಕ್ಕೆ ಬಂದು ಅಲ್ಲಿ ವಾಸಿಸಿದರು. ಯೆಹೋಶುವನು ಬೆಳಿಗ್ಗೆ ಎದ್ದನು; ಯಾಜಕರು ಕರ್ತನ ಮಂಜೂಷವನ್ನು ತೆಗೆದುಕೊಂಡರು. ಟಗ ರಿನ ಕೊಂಬುಗಳ ಏಳು ತುತೂರಿಗಳನ್ನು ಹಿಡಿಯುವ ಏಳುಮಂದಿ ಯಾಜಕರು ತುತೂರಿಗಳನ್ನು ಊದುತ್ತಾ ಕರ್ತನ ಒಡಂಬಡಿಕೆಯ ಮಂಜೂಷದ ಮುಂದೆ ನಡೆಯುತ್ತಾ ಹೋದರು. ಯುದ್ಧಕ್ಕೆ ಸಿದ್ಧರಾದ ಜನರು ಅವರ ಮುಂದೆ ಹೋದರು. ಆದರೆ ಯಾಜಕರು ತುತೂರಿಗಳನ್ನು ಊದುತ್ತಾ ಹೋಗುವಾಗ ಕರ್ತನ ಮಂಜೂಷದ ಹಿಂದೆ ಸೈನ್ಯದವರು ನಡೆದರು. ಹೀಗೆ ಎರಡನೆ ದಿನದಲ್ಲಿ ಅವರು ಪಟ್ಟಣವನ್ನು ಒಂದು ಸಾರಿ ಸುತ್ತಿ ಬಂದು ಪಾಳೆಯಕ್ಕೆ ಹಿಂತಿರುಗಿದರು. ಹೀಗೆಯೇ ಆರು ದಿವಸ ಮಾಡಿದರು. ಆದರೆ ಏಳನೇ ದಿವಸ ಸೂರ್ಯೋದಯವಾಗುವಾಗ ಅವರು ಎದ್ದು ಪಟ್ಟಣವನ್ನು ಅದೇ ರೀತಿಯಾಗಿ ಏಳು ಸಾರಿ ಸುತ್ತಿಬಂದರು; ಆ ದಿನದಲ್ಲಿ ಮಾತ್ರವೇ ಪಟ್ಟಣವನ್ನು ಏಳು ಸಾರಿ ಸುತ್ತಿ ಬಂದರು. ಏಳನೇ ಸಾರಿ ಯಾಜಕರು ತುತೂರಿಗಳನ್ನು ಊದುವಾಗ ಆದದ್ದೇನಂದರೆ, ಯೆಹೋಶುವನು ಜನರಿಗೆ--ಆರ್ಭಟಿಸಿರಿ; ಕರ್ತನು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾನೆ ಅಂದನು. ಇದಲ್ಲದೆ ಈ ಪಟ್ಟಣವೂ ಅದರಲ್ಲಿರುವ ಸಮಸ್ತವೂ ಕರ್ತನ ಶಾಪಕ್ಕೊಳಗಾಗುವದು; ರಾಹಾಬಳೆಂಬ ಸೂಳೆಯೂ ಆಕೆಯ ಮನೆಯಲ್ಲಿ ಇರುವವರೆಲ್ಲರೂ ಮಾತ್ರ ಉಳಿಯಲಿ. ಯಾಕಂದರೆ ನಾವು ಕಳುಹಿಸಿದ ದೂತರನ್ನು ಆಕೆಯು ಬಚ್ಚಿಟ್ಟಳು. ನೀವು ಶಾಪ ಕ್ಕೊಳಗಾದವುಗಳನ್ನು ತೆಗೆದುಕೊಂಡಾಗ ನಿಮ್ಮನ್ನು ಶಾಪಕ್ಕೆ ಈಡಾಗಿ ಮಾಡಿಕೊಂಡು ಇಸ್ರಾಯೇಲಿನ ದಂಡನ್ನು ಶಾಪಕ್ಕೆ ಈಡುಮಾಡಿ ತೊಂದರೆಪಡಿಸದ ಹಾಗೆ ಶಾಪಕ್ಕೆ ಈಡಾದವುಗಳನ್ನು ತೆಗೆದುಕೊಳ್ಳದೆ ಬಹು ಎಚ್ಚರಿಕೆಯಾಗಿರ್ರಿ. ಎಲ್ಲಾ ಬೆಳ್ಳಿ ಬಂಗಾರವೂ ಹಿತ್ತಾಳೆ ಕಬ್ಬಿಣ ಪಾತ್ರೆಗಳೂ ಕರ್ತನಿಗೆ ವಿಾಸಲಾಗಿರ ಬೇಕು. ಅವು ಕರ್ತನ ಭಂಡಾರಕ್ಕೆ ಸೇರಬೇಕು ಅಂದನು. ಹೀಗೆ ಯಾಜಕರು ತುತೂರಿಗಳನ್ನು ಊದಿದಾಗ ಜನರು ಆರ್ಭಟಿಸಿದರು. ತುತ್ತೂರಿಯ ಶಬ್ದವನ್ನು ಜನರು ಕೇಳಿದಾಗ ಮಹಾ ಆರ್ಭಟವಾಗಿ ಆರ್ಭಟಿಸುತ್ತಲೇ ಗೋಡೆಯು ನೆಲಸಮವಾಗಿ ಕೆಳಗೆ ಬಿತ್ತು; ಹೀಗೆ ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಏರಿಹೋದನು. ಆಗ ಪಟ್ಟಣವು ಅವರಿಗೆ ಸ್ವಾಧೀನ ವಾಯಿತು. ಪಟ್ಟಣದಲ್ಲಿರುವ ಎಲ್ಲಾ ಸ್ತ್ರೀ ಪುರುಷ ರನ್ನೂ ಹಿರಿಕಿರಿಯರನ್ನೂ ಕುರಿದನಗಳನ್ನೂ ಕತ್ತೆ ಗಳನ್ನೂ ಕತ್ತಿಯ ಬಾಯಿಂದ ಸಂಪೂರ್ಣವಾಗಿ ನಾಶ ಮಾಡಿದರು. ಆದರೆ ಯೆಹೋಶುವನು ದೇಶವನ್ನು ಪಾಳತಿ ನೋಡುವದಕ್ಕೆ ಹೋಗಿದ್ದ ಇಬ್ಬರು ಮನುಷ್ಯರಿಗೆ-- ನೀವು ಸೂಳೆಯಾದ ಹೆಂಗಸಿನ ಮನೆಗೆ ಹೋಗಿ ಅವಳನ್ನೂ ಅವಳಿಗೆ ಉಂಟಾದ ಸಮಸ್ತವನ್ನೂ ಅವಳಿಗೆ ಆಣೆ ಇಟ್ಟ ಹಾಗೆ ಅಲ್ಲಿಂದ ಹೊರಗೆ ತಕ್ಕೊಂಡು ಬನ್ನಿರಿ ಎಂದು ಹೇಳಿದನು. ಪಾಳತಿಗಾರರಾದ ಯೌವನಸ್ಥರು ಒಳಗೆ ಹೋಗಿ ರಾಹಾಬಳನ್ನೂ ಅವಳ ತಂದೆ ತಾಯಿಯನ್ನೂ ಸಹೋದರರನ್ನೂ ಅವಳಿಗಿದ್ದ ಸಮಸ್ತವನ್ನೂ ಅವಳ ಸಂಬಂಧಿಕರಾದವರೆಲ್ಲರನ್ನೂ ಹೊರಗೆ ಕರತಂದು ಇಸ್ರಾಯೇಲ್ ಪಾಳೆಯದ ಹೊರಗೆ ಅವರನ್ನು ಇರಿಸಿದರು. ಆದರೆ ಪಟ್ಟಣ ವನ್ನೂ ಅದರಲ್ಲಿರುವ ಸಮಸ್ತವನ್ನೂ ಬೆಂಕಿಯಿಂದ ಸುಟ್ಟುಬಿಟ್ಟರು. ಬೆಳ್ಳಿ ಬಂಗಾರವನ್ನೂ ಹಿತ್ತಾಳೆ ಕಬ್ಬಿಣದ ಪಾತ್ರೆಗಳನ್ನೂ ಮಾತ್ರ ಕರ್ತನ ಮನೆಯ ಭಂಡಾರದಲ್ಲಿ ಇಟ್ಟರು. ಆದರೆ ಯೆಹೋಶುವನು ಸೂಳೆಯಾದ ರಾಹಾಬಳನ್ನೂ ಅವಳ ತಂದೆಯ ಮನೆಯವರನ್ನೂ ಅವಳಿಗಿದ್ದ ಸಮಸ್ತವನ್ನೂ ತಪ್ಪಿಸಿ ಉಳಿಸಿದನು. ಅವಳು ಈ ದಿನದ ವರೆಗೂ ಇಸ್ರಾಯೇಲ್ಯರಲ್ಲಿ ವಾಸವಾಗಿ ದ್ದಾಳೆ; ಯಾಕಂದರೆ ಯೆರಿಕೋವನ್ನು ಪಾಳತಿ ನೋಡಲು ಯೆಹೋಶುವನು ಕಳುಹಿಸಿದ ದೂತರನ್ನು ಬಚ್ಚಿಟ್ಟಿದ್ದಳು. ಆ ಕಾಲದಲ್ಲಿ ಯೆಹೋಶುವನು ಅವರಿಗೆ--ಈ ಯೆರಿಕೋ ಪಟ್ಟಣವನ್ನು ತಿರಿಗಿ ಕಟ್ಟಿಸುವ ಮನುಷ್ಯನು ಕರ್ತನ ಮುಂದೆ ಶಪಿಸಲ್ಪಡಲಿ; ತನ್ನ ಚೊಚ್ಚಲ ಮಗನಲ್ಲಿ ಅದರ ಅಸ್ತಿವಾರವನ್ನು ಹಾಕುವನು, ತನ್ನ ಕೊನೆಯ ಮಗನಲ್ಲಿ ಅದರ ಬಾಗಲುಗಳನ್ನು ಇಡುವನು ಎಂದು ಆಣೆ ಇಟ್ಟು ಹೇಳಿದನು.ಹೀಗೆಯೇ ಕರ್ತನು ಯೆಹೋಶುವನ ಸಂಗಡ ಇದ್ದನು; ಅವನ ಕೀರ್ತಿ ದೇಶದಲ್ಲೆಲ್ಲಾ ಇತ್ತು. ಹೀಗೆಯೇ ಕರ್ತನು ಯೆಹೋಶುವನ ಸಂಗಡ ಇದ್ದನು; ಅವನ ಕೀರ್ತಿ ದೇಶದಲ್ಲೆಲ್ಲಾ ಇತ್ತು.