Judges · chapter 10 · verse 12
Judges 10:12 in Kannada
ಇದಲ್ಲದೆ ಚೀದೋನ್ಯರೂ ಅಮಾಲೇಕ್ಯರೂ ಮಾವೋನ್ಯರೂ ನಿಮ್ಮನ್ನು ಬಾಧೆಪಡಿಸುವಾಗ ನೀವು ನನಗೆ ಕೂಗಿದ್ದರಿಂದ ನಾನು ನಿಮ್ಮನ್ನು ಅವರ ಕೈಗೆ ತಪ್ಪಿಸಿ ರಕ್ಷಿಸಿದೆನು.
Idallade cheedonyaroo amaalekyaroo maavonyaroo nimmannu baadhepadisuvaaga neevu nanage koogiddarinda naanu nimmannu avara kaige tappisi rakshisidenu.
Judges 10:12 in English
- King James Version (KJV)
- The Zidonians also, and the Amalekites, and the Maonites, did oppress you; and ye cried to me, and I delivered you out of their hand.
- World English Bible (WEB)
- The Sidonians also, and the Amalekites, and the Maonites, oppressed you; and you cried to me, and I saved you out of their hand.
- American Standard Version (ASV)
- The Sidonians also, and the Amalekites, and the Maonites, did oppress you; and ye cried unto me, and I saved you out of their hand.
- Bible in Basic English (BBE)
- And the Zidonians and Amalek and Midian crushing you down, and in answer to your cry did I not give you salvation from their hands?
- Darby Translation (DBY)
- The Zidonians also, and Amalek and Maon oppressed you, and ye cried to me, and I saved you out of their hand.
- Webster's Bible (WBS)
- The Zidonians also, and the Amalekites, and the Maonites oppressed you; and ye cried to me, and I delivered you out of their hand.
- Young's Literal Translation (YLT)
- And the Zidonians, and Amalek, and Maon have oppressed you, and ye cry unto Me, and I save you out of their hand;
Read in context
- 10ಆಗ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಕೂಗಿ--ನಮ್ಮ ದೇವರನ್ನು ಬಿಟ್ಟು ಬಾಳನನ್ನು ಸೇವಿಸಿದ್ದರಿಂದ ನಾವು ನಿನಗೆ ವಿರೋಧವಾಗಿ ಪಾಪ ಮಾಡಿದೆವು ಅಂದರು.
- 11ಕರ್ತನು ಇಸ್ರಾಯೇಲ್ ಮಕ್ಕಳಿಗೆ--ನಾನು ನಿಮ್ಮನ್ನು ಐಗುಪ್ತ್ಯರ ಕೈಯೊಳಗಿಂದಲೂ ಅಮೋರಿಯರ ಕೈಯೊ ಳಗಿಂದಲೂ ಅಮ್ಮೋನನ ಮಕ್ಕಳ ಕೈಯೊಳಗಿಂದಲೂ ಫಿಲಿಷ್ಟಿಯರ ಕೈಯೊಳಗಿಂದಲೂ ತಪ್ಪಿಸಿಬಿಡಲಿಲ್ಲವೋ?
- 12ಇದಲ್ಲದೆ ಚೀದೋನ್ಯರೂ ಅಮಾಲೇಕ್ಯರೂ ಮಾವೋನ್ಯರೂ ನಿಮ್ಮನ್ನು ಬಾಧೆಪಡಿಸುವಾಗ ನೀವು ನನಗೆ ಕೂಗಿದ್ದರಿಂದ ನಾನು ನಿಮ್ಮನ್ನು ಅವರ ಕೈಗೆ ತಪ್ಪಿಸಿ ರಕ್ಷಿಸಿದೆನು.
- 13ಆದರೂ ನೀವು ನನ್ನನ್ನು ಬಿಟ್ಟು ಅನ್ಯದೇವರುಗಳನ್ನು ಸೇವಿಸಿದಿರಿ; ಆದಕಾರಣ ನಾನು ನಿಮ್ಮನ್ನು ಇನ್ನು ಮುಂದೆ ಬಿಡಿಸುವದಿಲ್ಲ.
- 14ನೀವು ಹೋಗಿ ನಿಮಗೆ ನೀವೇ ಆರಿಸಿಕೊಂಡ ದೇವರುಗಳಿಗೆ ಕೂಗಿರಿ; ಅವರು ನಿಮ್ಮ ಸಂಕಟದ ಕಾಲದಲ್ಲಿ ನಿಮ್ಮನ್ನು ರಕ್ಷಿಸಲಿ ಅಂದನು.
Cross references
- Judges 6:3 ನ್ಯಾಯಸ್ಥಾಪಕರು 6:3ಇಸ್ರಾಯೇಲ್ಯರು ಬೀಜ ಬಿತ್ತಿದ ತರುವಾಯ ಮಿದ್ಯಾನ್ಯರೂ ಅಮಾಲೇ ಕ್ಯರೂ ಮೂಡಣದ ಮಕ್ಕಳೂ ಅವರಿಗೆ ವಿರೋಧವಾಗಿ ಬಂದು ದಂಡಿಳಿದು
- Psalm 106:42–43 ಕೀರ್ತನೆಗಳು 106:42–43ಅವರ ಶತ್ರುಗಳು ಅವರನ್ನು ಬಾಧೆಪಡಿಸಿದರು; ಅವರ ಕೈಕೆಳಗೆ ಅಧೀನರಾದರು. ಬಹಳ ಸಾರಿ ಆತನು ಅವರನ್ನು ಬಿಡಿಸಿದನು; ಆದರೆ ಅವರು ತಮ್ಮ ಆಲೋಚನೆಯಿಂದ ಆತನಿಗೆ ಕೋಪವನ್ನೆಬ್ಬಿಸಿದರು. ತಮ್ಮ ಅಕ್ರಮದಿಂದ ಅವರು ಕುಗ್ಗಿಹೋದರು.
- Judges 5:19–31 ನ್ಯಾಯಸ್ಥಾಪಕರು 5:19–31ಅರಸರು ಬಂದು ಯುದ್ಧಮಾಡಿದರು; ಆಗ ಕಾನಾನ್ಯರ ಅರಸರು ಮೆಗಿದ್ದೋನಿನ ಜಲ ಸವಿಾಪ ವಾದ ತಾನಾಕದಲ್ಲಿ ಯುದ್ಧಮಾಡಿದರು; ಅವರು ಹಣದ ಲಾಭ ತಕ್ಕೂಳ್ಳಲಿಲ್ಲ. ಆಕಾಶದಲ್ಲಿ ಇರುವ ವುಗಳು ಯುದ್ಧಮಾಡಿದವು; ನಕ್ಷತ್ರಗಳು ತಮ್ಮ ಓಟಗ ಳಲ್ಲಿ ಸೀಸೆರನಿಗೆ ವಿರೋಧವಾಗಿ ಯುದ್ಧಮಾಡಿದವು. ಕೀಷೋನ್ ನದಿಯು, ಆ ಹಳೇದಾದ ಕೀಷೋನ್ ನದಿಯು ಅವರನ್ನು ಬಡಕೊಂಡು ಹೋಯಿತು. ಓ ನನ್ನ ಪ್ರಾಣವೇ, ನೀನು ಬಲವನ್ನು ತುಳಿದು ಹಾಕಿದಿ. ಆಗ ನೆಲವನ್ನು ಘಟ್ಟಿಸಿ ಓಡುವ ಅವರ ಬಲವಾದ ಕುದುರೆಗಳು ತಮ್ಮ ಘಟನೆಯಿಂದ ಗೊರಿಶೇಗಳನ್ನು ಒಡೆದುಬಿಟ್ಟವು. ನೀವು ಮೇರೋಜನ್ನು ಶಪಿಸಿರಿ; ಅದರ ನಿವಾಸಿಗಳನ್ನು ಕಠಿಣವಾಗಿ ಶಪಿಸಿರಿ ಎಂದು ಕರ್ತನ ದೂತನು ಹೇಳುತ್ತಾನೆ; ಯಾಕಂದರೆ ಅವರು ಕರ್ತನ ಸಹಾಯಕ್ಕೂ ಪರಾಕ್ರಮಶಾಲಿಗಳಿಗೆ ವಿರೋ ಧವಾಗಿ ಕರ್ತನ ಸಹಾಯಕ್ಕೂ ಬಾರದೆ ಹೋದರು. ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇ ಲಳು ಸ್ತ್ರೀಯರಲ್ಲಿ ಅಧಿಕವಾಗಿ ಆಶೀರ್ವದಿಸಲ್ಪಡು ವಳು; ಸ್ತ್ರೀಯರೊಳಗೆ ಅಧಿಕವಾಗಿ ಗುಡಾರದಲ್ಲಿ ಆಶೀರ್ವದಿಸಲ್ಪಡುವಳು. ಅವನು ನೀರನ್ನು ಕೇಳಿ ದನು; ಅವಳು ಹಾಲು ಕೊಟ್ಟಳು; ಅಮೂಲ್ಯವಾದ ಬಟ್ಟಲಿನಲ್ಲಿ ಬೆಣ್ಣೆಯನ್ನು ತಂದಿಟ್ಟಳು. ತನ್ನ ಕೈಯಲ್ಲಿ ಮೊಳೆಯನ್ನು ತನ್ನ ಬಲಗೈಯಲ್ಲಿ ಕೆಲಸಗಾರನ ಸುತ್ತಿಗೆ ಯನ್ನು ತೆಗೆದುಕೊಂಡಳು; ಅವಳು ಸೀಸೆರನನ್ನು ಸುತ್ತಿಗೆ ಯಿಂದ ಹೊಡೆದಳು; ಅವಳು ಅವನ ಕಣತಲೆಯನ್ನು ತಿವಿದು ಹೊಡೆದಳು. ಅವನ ತಲೆಯನ್ನು ಹೊಡೆದು ಬಿಟ್ಟಳು. ಅವಳ ಕಾಲುಗಳ ಹತ್ತಿರ ಅವನು ಬೊಗ್ಗಿ ಬಿದ್ದು ಮಲಗಿದನು; ಅವಳ ಕಾಲುಗಳ ಹತ್ತಿರ ಬಾಗಿ ಬಿದ್ದನು; ಎಲ್ಲಿ ಬಾಗಿಬಿದ್ದನೋ ಅಲ್ಲಿಯೇ ಬಿದ್ದು ಸತ್ತನು. ಸೀಸೆರನ ತಾಯಿ ಕಿಟಿಕಿಯಿಂದ ನೋಡಿದಳು, ಕಿಂಡಿ ಯಿಂದ ಕೂಗಿದಳು--ಅವನ ರಥವು ಬರುವದಕ್ಕೆ ಇಷ್ಟು ಆಲಸ್ಯವಾದದ್ದೇನು? ಅವನ ರಥಗಳ ಗಾಲಿ ಗಳು ಹಿಂದುಳಿದು ಇರುವದೇನು? ಅದಕ್ಕೆ ಅವಳ ಜ್ಞಾನವುಳ್ಳ ಪ್ರಧಾನ ಸ್ತ್ರೀಯರು ಪ್ರತ್ಯುತ್ತರಕೊಟ್ಟರು. ಹೌದು, ಅವಳೇ ತನಗೆ ಬದಲು ಮಾತು ಕೇಳಿ ಕೊಂಡಳು. ಅವರು ಓಡಲಿಲ್ಲವೋ? ಕೊಳ್ಳೆಹಂಚಿ ಕೊಳ್ಳಲಿಲ್ಲವೋ? ಒಬ್ಬೊಬ್ಬ ಮನುಷ್ಯನಿಗೆ ಒಂದೆರಡು ಹೆಣ್ಣು, ಸೀಸೆರನಿಗೆ ನಾನಾ ವರ್ಣವುಳ್ಳ ಕೊಳ್ಳೆ, ನಾನಾ ವರ್ಣವುಳ್ಳಂಥ ವಿಚಿತ್ರವಾಗಿ, ಹೊಲಿದಂಥ, ಎರಡು ಪಕ್ಕೆಗಳಲ್ಲಿ ವಿಚಿತ್ರವಾಗಿ ಹೊಲಿದಂಥ, ಕೊಳ್ಳೆ ಹಿಡಿ ಯುವರ ಕಂಠಗಳಿಗೆ ತಕ್ಕಂಥ ನಾನಾ ವರ್ಣವುಳ್ಳ ಕೊಳ್ಳೆ, ಸಿಕ್ಕಲಿಲ್ಲವೋ?ಓ ಕರ್ತನೇ, ಹೀಗೆಯೇ ನಿನ್ನ ಶತ್ರುಗಳೆಲ್ಲರು ನಾಶವಾಗಲಿ, ಆದರೆ ಆತನನ್ನು ಪ್ರೀತಿಮಾಡುವವರು ತನ್ನ ಪರಾಕ್ರಮದಿಂದ ಹೊರ ಡುವ ಸೂರ್ಯನ ಹಾಗೆಯೇ ಇರಲಿ. ದೇಶವು ನಾಲ್ವತ್ತು ವರುಷ ವಿಶ್ರಾಂತಿಯಲ್ಲಿತ್ತು. ಓ ಕರ್ತನೇ, ಹೀಗೆಯೇ ನಿನ್ನ ಶತ್ರುಗಳೆಲ್ಲರು ನಾಶವಾಗಲಿ, ಆದರೆ ಆತನನ್ನು ಪ್ರೀತಿಮಾಡುವವರು ತನ್ನ ಪರಾಕ್ರಮದಿಂದ ಹೊರ ಡುವ ಸೂರ್ಯನ ಹಾಗೆಯೇ ಇರಲಿ. ದೇಶವು ನಾಲ್ವತ್ತು ವರುಷ ವಿಶ್ರಾಂತಿಯಲ್ಲಿತ್ತು.
- 2 Chronicles 26:6–7 2 ಪೂರ್ವಕಾಲವೃತ್ತಾಂತ 26:6–7ಅವನು ಹೊರಟುಹೋಗಿ ಫಿಲಿಷ್ಟಿಯರ ಮೇಲೆ ಯುದ್ಧಮಾಡಿ ಗತ್ ಗೋಡೆಯನ್ನೂ ಯಬ್ನೆಯ ಗೋಡೆಯನ್ನೂ ಅಷ್ಡೋದಿನ ಗೋಡೆಯನ್ನೂ ಕೆಡವಿ ಬಿಟ್ಟು ಫಿಲಿಷ್ಟಿಯರ ಮಧ್ಯದಲ್ಲಿ ಅಷ್ಡೋ ದಿನ ಬಳಿಯಲ್ಲಿ ಪಟ್ಟಣಗಳನ್ನು ಕಟ್ಟಿಸಿದನು. ಇದ ಲ್ಲದೆ ಫಿಲಿಷ್ಟಿಯರ ಮೇಲೆಯೂ ಗೂರ್ಬಾಳಿನಲ್ಲಿ ವಾಸವಾಗಿದ್ದ ಅರಬ್ಬಿಯರ ಮೇಲೆಯೂ ಮೆಗೂನ್ಯರ ಮೇಲೆಯೂ ಅವನು ಯುದ್ಧಮಾಡಿ ದಾಗ ದೇವರು ಅವನಿಗೆ ಸಹಾಯಕೊಟ್ಟನು.