Judges · chapter 5 · verse 19
Judges 5:19 in Kannada
ಅರಸರು ಬಂದು ಯುದ್ಧಮಾಡಿದರು; ಆಗ ಕಾನಾನ್ಯರ ಅರಸರು ಮೆಗಿದ್ದೋನಿನ ಜಲ ಸವಿಾಪ ವಾದ ತಾನಾಕದಲ್ಲಿ ಯುದ್ಧಮಾಡಿದರು; ಅವರು ಹಣದ ಲಾಭ ತಕ್ಕೂಳ್ಳಲಿಲ್ಲ.
Arasaru bandu yuddhamaadidaru; aaga kaanaanyara arasaru megiddonina jala saviాpa vaada taanaakadalli yuddhamaadidaru; avaru hanada laabha takkoollalilla.
Judges 5:19 in English
- King James Version (KJV)
- The kings came [and] fought, then fought the kings of Canaan in Taanach by the waters of Megiddo; they took no gain of money.
- World English Bible (WEB)
- “The kings came and fought, then the kings of Canaan fought at Taanach by the waters of Megiddo. They took no plunder of silver.
- American Standard Version (ASV)
- The kings came and fought; Then fought the kings of Canaan, In Taanach by the waters of Megiddo: They took no gain of money.
- Bible in Basic English (BBE)
- The kings came on to the fight, the kings of Canaan were warring; in Taanach by the waters of Megiddo: they took no profit in money.
- Darby Translation (DBY)
- Kings came, — they fought; Then fought the kings of Canaan; At Taanach, by the waters of Megiddo; They took no spoil of silver.
- Webster's Bible (WBS)
- The kings came [and] fought, then fought the kings of Canaan in Tanach by the waters of Megiddo; they took no gain of money.
- Young's Literal Translation (YLT)
- Kings came — they fought; Then fought kings of Canaan, In Taanach, by the waters of Megiddo; Gain of money they took not!
Read in context
- 17ಗಿಲ್ಯಾದನು ಯೊರ್ದನಿಗೆ ಆಚೆ ವಾಸಿಸಿದನು. ದಾನನು ಹಡಗುಗಳಲ್ಲಿ ನಿಂತದ್ದೇನು? ಆಶೇರನು ಸಮುದ್ರದ ದಡದಲ್ಲಿದ್ದು ತನ್ನ ರೇವುಗಳ ಬಳಿಯಲ್ಲಿ ವಾಸಿಸಿದನು.
- 18ಜೆಬುಲೂನನೂ ನಫ್ತಾ ಲಿಯೂ ಹೊಲದ ಎತ್ತರವಾದ ಸ್ಥಳಗಳಲ್ಲಿ ಮರಣಕ್ಕೂ ತಮ್ಮ ಪ್ರಾಣಗಳನ್ನು ಧೈರ್ಯವಾಗಿ ಇಟ್ಟ ಜನರಾ ಗಿದ್ದರು.
- 19ಅರಸರು ಬಂದು ಯುದ್ಧಮಾಡಿದರು; ಆಗ ಕಾನಾನ್ಯರ ಅರಸರು ಮೆಗಿದ್ದೋನಿನ ಜಲ ಸವಿಾಪ ವಾದ ತಾನಾಕದಲ್ಲಿ ಯುದ್ಧಮಾಡಿದರು; ಅವರು ಹಣದ ಲಾಭ ತಕ್ಕೂಳ್ಳಲಿಲ್ಲ.
- 20ಆಕಾಶದಲ್ಲಿ ಇರುವ ವುಗಳು ಯುದ್ಧಮಾಡಿದವು; ನಕ್ಷತ್ರಗಳು ತಮ್ಮ ಓಟಗ ಳಲ್ಲಿ ಸೀಸೆರನಿಗೆ ವಿರೋಧವಾಗಿ ಯುದ್ಧಮಾಡಿದವು.
- 21ಕೀಷೋನ್ ನದಿಯು, ಆ ಹಳೇದಾದ ಕೀಷೋನ್ ನದಿಯು ಅವರನ್ನು ಬಡಕೊಂಡು ಹೋಯಿತು. ಓ ನನ್ನ ಪ್ರಾಣವೇ, ನೀನು ಬಲವನ್ನು ತುಳಿದು ಹಾಕಿದಿ.
Cross references
- Judges 5:30 ನ್ಯಾಯಸ್ಥಾಪಕರು 5:30ಅವರು ಓಡಲಿಲ್ಲವೋ? ಕೊಳ್ಳೆಹಂಚಿ ಕೊಳ್ಳಲಿಲ್ಲವೋ? ಒಬ್ಬೊಬ್ಬ ಮನುಷ್ಯನಿಗೆ ಒಂದೆರಡು ಹೆಣ್ಣು, ಸೀಸೆರನಿಗೆ ನಾನಾ ವರ್ಣವುಳ್ಳ ಕೊಳ್ಳೆ, ನಾನಾ ವರ್ಣವುಳ್ಳಂಥ ವಿಚಿತ್ರವಾಗಿ, ಹೊಲಿದಂಥ, ಎರಡು ಪಕ್ಕೆಗಳಲ್ಲಿ ವಿಚಿತ್ರವಾಗಿ ಹೊಲಿದಂಥ, ಕೊಳ್ಳೆ ಹಿಡಿ ಯುವರ ಕಂಠಗಳಿಗೆ ತಕ್ಕಂಥ ನಾನಾ ವರ್ಣವುಳ್ಳ ಕೊಳ್ಳೆ, ಸಿಕ್ಕಲಿಲ್ಲವೋ?ಓ ಕರ್ತನೇ, ಹೀಗೆಯೇ ನಿನ್ನ ಶತ್ರುಗಳೆಲ್ಲರು ನಾಶವಾಗಲಿ, ಆದರೆ ಆತನನ್ನು ಪ್ರೀತಿಮಾಡುವವರು ತನ್ನ ಪರಾಕ್ರಮದಿಂದ ಹೊರ ಡುವ ಸೂರ್ಯನ ಹಾಗೆಯೇ ಇರಲಿ. ದೇಶವು ನಾಲ್ವತ್ತು ವರುಷ ವಿಶ್ರಾಂತಿಯಲ್ಲಿತ್ತು.
- Judges 1:27 ನ್ಯಾಯಸ್ಥಾಪಕರು 1:27ಮನಸ್ಸೆಯವರು ಬೇತ್ಷೆಯಾನ್ ತಾನಾಕ್ ದೋರ್ ಇಬ್ಲೆಯಾಮ್ ಮೆಗಿದ್ದೋ ಎಂಬ ಪಟ್ಟಣ ಗಳನ್ನು ಅವುಗಳ ಗ್ರಾಮಗಳನ್ನು ಸ್ವಾಧೀನಮಾಡಿ ಕೊಳ್ಳಲಿಲ್ಲ. ಆದದರಿಂದ ಕಾನಾನ್ಯರು ಆ ಪ್ರಾಂತ ಗಳಲ್ಲೇ ವಾಸಿಸುವದಕ್ಕೆ ದೃಢಮಾಡಿದರು.
- 1 Kings 4:12 1 ಅರಸುಗಳು 4:12ತಾಣಕವು ಮೆಗಿದ್ದೋನು ಎಂಬವುಗಳಲ್ಲಿ ಅಹೀ ಲೂದನ ಮಗನಾದ ಬಾಣನು, ಅವನಿಗೆ ಚಾರೆತಾನ ಬಳಿಯಲ್ಲಿ ಇಜ್ರೇಲಿನ ಕೆಳಗಿರುವ ಸಮಸ್ತ ಬೇತ್ಷೆ ಯಾನ್; ಬೇತ್ಷೆಯಾನ್ ಮೊದಲುಗೊಂಡು ಅಬೇಲ್ ಮೆಹೋಲವನ್ನು ಹಾದು ಯೊಕ್ಮೆಯಾನಿನ ಆಚೆ ವರೆಗೂ ಇತ್ತು.
- Psalm 44:12 ಕೀರ್ತನೆಗಳು 44:12ನಿನ್ನ ಜನರನ್ನು ಕ್ರಯವಿಲ್ಲದೆ ಮಾರಿಬಿಡುತ್ತೀ. ಅವರ ಬೆಲೆಯಿಂದ ನೀನು ನಿನ್ನ ಸಂಪತ್ತನ್ನು ಹೆಚ್ಚು ಮಾಡಲಿಲ್ಲ.
- Genesis 4:16 ಆದಿಕಾಂಡ 4:16ಕಾಯಿನನು ಕರ್ತನ ಸನ್ನಿಧಿಯಿಂದ ಹೊರಟು ಏದೆನಿನ ಪೂರ್ವದಿಕ್ಕಿನಲ್ಲಿದ್ದ ನೋದು ಎಂಬ ದೇಶ ದಲ್ಲಿ ವಾಸಿಸಿದನು.
- Judges 4:13 ನ್ಯಾಯಸ್ಥಾಪಕರು 4:13ಆದದರಿಂದ ಸೀಸೆರನು ಒಂಭೈನೂರು ಕಬ್ಬಿಣದ ರಥಗಳಾದ ತನ್ನ ಎಲ್ಲಾ ರಥಗಳನ್ನೂ ತನ್ನ ಸಂಗಡ ಇರುವ ಎಲ್ಲಾ ಜನವನ್ನೂ ಅನ್ಯಜನಾಂಗಗಳ ಹರೋಷೆತಿನಿಂದ ಕೀಷೋನ್ ನದಿಗೆ ಬರಮಾಡಿ ದನು.
- Psalm 68:12–14 ಕೀರ್ತನೆಗಳು 68:12–14ಸೈನ್ಯಗಳ ಅರಸರು ತ್ವರೆಯಾಗಿ ಓಡಿಹೋದರು; ಮನೆಯಲ್ಲಿ ವಾಸಿಸುವವಳು ಕೊಳ್ಳೆ ಯನ್ನು ಪಾಲು ಮಾಡಿಕೊಂಡಳು. ನೀವು ಮಡಿಕೆ ಗಳ ಮಧ್ಯದಲ್ಲಿ ಮಲಗಿದಾಗ್ಯೂ ಬೆಳ್ಳಿಯಿಂದಲೂ ಅದರ ರೆಕ್ಕೆಗಳು ಹಳದಿ ಚಿನ್ನದಿಂದಲೂ ಮುಚ್ಚಿದ ಪಾರಿವಾಳದ ರೆಕ್ಕೆಗಳ ಹಾಗಿದ್ದೀರಿ. ಸರ್ವಶಕ್ತನು ಅರಸುಗಳನ್ನು ಸಲ್ಮೋನಿನಲ್ಲಿ ಚದರಿಸಿದಾಗ ಅದರಲ್ಲಿ ಬಿಳೀ ಹಿಮದ ಹಾಗಿತ್ತು.
- Psalm 48:4–6 ಕೀರ್ತನೆಗಳು 48:4–6ಇಗೋ, ಅರಸರುಗಳು ಕೂಡಿಕೊಂಡು ಒಟ್ಟಾಗಿ ಹಾದುಹೋದರು; ಅವರು ಅದನ್ನು ನೋಡಿ ಆಶ್ಚ ರ್ಯಪಟ್ಟರು; ಅವರು ಕಳವಳಪಟ್ಟು ಓಡಿ ಹೋದರು. ಭೀತಿಯೂ ಹೆರುವವಳ ಹಾಗೆ ನೋವೂ ಅಲ್ಲಿ ಅವರನ್ನು ಹಿಡಿಯಿತು.
- Joshua 11:1–15 ಯೆಹೋಶುವ 11:1–15ಹಾಚೋರಿನ ಅರಸನಾದ ಯಾಬೀನನು ಇವುಗಳನ್ನು ಕೇಳಿದಾಗ ಆದದ್ದೇನಂದರೆ, ಅವನು ಮಾದೋನಿನ ಅರಸನಾದ ಯೋಬಾಬನ ಬಳಿಗೂ ಶಿಮ್ರೋನಿನ ಅರಸನ ಬಳಿಗೂ ಅಕ್ಷಾಫಿನ ಅರಸನ ಬಳಿಗೂ ಪರ್ವತಗಳ ಉತ್ತರ ದಿಕ್ಕಿನಲ್ಲಿಯೂ ಕಿನ್ನೆರೋತಿಗೆ ದಕ್ಷಿಣಕ್ಕಿರುವ ಬೈಲಲ್ಲಿಯೂ ತಗ್ಗುಗಳಲ್ಲಿಯೂ ಪಶ್ಚಿಮದಲ್ಲಿ ದೋರಿನ ಪ್ರಾಂತ್ಯಗಳಲ್ಲಿ ಇರುವ ಅರಸುಗಳ ಬಳಿಗೂ ಪೂರ್ವ ಪಶ್ಚಿಮಕ್ಕಿರುವ ಕಾನಾನ್ಯರ ಬಳಿಗೂ ಪರ್ವತಗಳಲ್ಲಿರುವ ಅಮೋರಿ ಯರ, ಹಿತ್ತಿಯರ, ಪೆರಿಜ್ಜೀಯರ, ಯೆಬೂಸಿಯರ ಬಳಿಗೂ ಮಿಚ್ಪೆಯ ದೇಶದಲ್ಲಿ ಹೆರ್ಮೋನ್ ಪರ್ವತದ ಕೆಳ ಭಾಗದಲ್ಲಿರುವ ಹಿವ್ವಿಯರ ಬಳಿಗೂ ಹೇಳಿಕಳುಹಿ ಸಿದನು. ಆಗ ಅವರು ಸಮುದ್ರ ದಡದ ಮರಳಿನ ಹಾಗೆ ಬಹು ಜನರು ಬಹುರಥಗಳ ಕುದುರೆಗಳು ಸಮೂಹವಾಗಿ ತಮ್ಮ ಎಲ್ಲಾ ಸೈನ್ಯಗಳ ಸಂಗಡ ಹೊರಟರು. ಈ ಅರಸುಗಳೆಲ್ಲಾ ಕೂಡಿಕೊಂಡು ಇಸ್ರಾಯೇಲಿನ ಸಂಗಡ ಯುದ್ಧಮಾಡಲು ಬಂದು ಒಟ್ಟಾಗಿ ಮೇರೋಮು ಎಂಬ ನೀರುಗಳ ಬಳಿಯಲ್ಲಿ ಇಳುಕೊಂಡರು. ಆಗ ಕರ್ತನು ಯೆಹೋಶುವನಿಗೆಅವರಿಗೆ ಭಯಪಡಬೇಡ; ನಾಳೆ ಇಷ್ಟು ಹೊತ್ತಿಗೆ ಅವರೆಲ್ಲರನ್ನು ಇಸ್ರಾಯೇಲಿನ ಮುಂದೆ ಕೊಲ್ಲಲ್ಪ ಡುವಂತೆ ಒಪ್ಪಿಸಿಕೊಡುವೆನು. ನೀನು ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯಿದು ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು ಅಂದನು. ಆಗ ಯೆಹೋಶುವನೂ ಅವನ ಸಂಗಡ ಇದ್ದ ಯುದ್ಧಸ್ಥ ರೆಲ್ಲರೂ ಬಂದು ಫಕ್ಕನೆ ಮೇರೋಮು ನೀರುಗಳ ಬಳಿಯಲ್ಲಿ ಅವರ ಮೇಲೆ ಬಿದ್ದರು. ಕರ್ತನು ಅವರನ್ನು ಇಸ್ರಾಯೇಲಿನ ಕೈಯಲ್ಲಿ ಒಪ್ಪಿಸಿಕೊಟ್ಟನು. ಅವರು ಅವರನ್ನು ಹೊಡೆದು ದೊಡ್ಡ ಚೀದೋನಿನವರೆಗೂ ಮಿಸ್ರೆಫೋತ್ಮಯೀಮಿನ ವರೆಗೂ ಮೂಡಲಲ್ಲಿರುವ ಮಿಚ್ಪೆಯ ತಗ್ಗಿನ ವರೆಗೂ ಹಿಂದಟ್ಟಿ ಅವರಲ್ಲಿ ಒಬ್ಬನ ನ್ನಾದರೂ ಉಳಿಸದೆ ಅವರನ್ನು ಹೊಡೆದುಬಿಟ್ಟರು. ಕರ್ತನು ತನಗೆ ಹೇಳಿದ ಪ್ರಕಾರವೇ ಯೆಹೋಶು ವನು ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯಿದುಬಿಟ್ಟು ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟನು. ಆ ಕಾಲದಲ್ಲಿ ಯೆಹೋಶುವನು ತಿರಿಗಿಕೊಂಡು ಹಾಚೋರನ್ನು ಹಿಡಿದು ಅದರ ಅರಸನನ್ನು ಕತ್ತಿ ಯಿಂದ ಹೊಡೆದುಬಿಟ್ಟನು. ಯಾಕಂದರೆ ಹಾಚೋರು ಮೊದಲು ಆ ರಾಜ್ಯಗಳಿಗೆಲ್ಲಾ ತಲೆಯಾಗಿತ್ತು. ಅವರು ಶ್ವಾಸವುಳ್ಳ ಒಂದನ್ನಾದರೂ ಉಳಿಸದೆ ಅದರಲ್ಲಿರುವ ಪ್ರಾಣಗಳನ್ನೆಲ್ಲಾ ಕತ್ತಿಯಿಂದ ಹೊಡೆದು ಸಂಪೂರ್ಣವಾಗಿ ನಾಶಮಾಡಿ ಹಾಚೋರನ್ನು ಬೆಂಕಿ ಯಿಂದ ಸುಟ್ಟುಬಿಟ್ಟರು. ಇದಲ್ಲದೆ ಯೆಹೋಶುವನು ಆ ಅರಸುಗಳ ಸಮಸ್ತ ಪಟ್ಟಣಗಳನ್ನೂ ಅವುಗಳ ಸಮಸ್ತ ಅರಸುಗಳನ್ನೂ ಹಿಡಿದು ಕತ್ತಿಯಿಂದ ಹೊಡೆದು ಕರ್ತನ ಸೇವಕನಾದ ಮೋಶೆಯು ಆಜ್ಞಾಪಿಸಿದ ಹಾಗೆಯೇ ಅವರನ್ನು ಸಂಪೂರ್ಣ ನಾಶಮಾಡಿಬಿಟ್ಟನು. ಆದರೆ ತಮ್ಮ ದಿನ್ನೆಯ ಮೇಲೆ ನಿಂತಿರುವ ಪಟ್ಟಣ ಗಳನ್ನೆಲ್ಲಾ ಇಸ್ರಾಯೇಲ್ ಸುಟ್ಟು ಬಿಡಲಿಲ್ಲ. ಹಾಚೋರನ್ನು ಮಾತ್ರ ಯೆಹೋಶುವನು ಸುಟ್ಟು ಬಿಟ್ಟನು. ಆ ಪಟ್ಟಣಗಳ ಕೊಳ್ಳೆಯನ್ನೆಲ್ಲಾ ಪಶು ಗಳನ್ನೆಲ್ಲಾ ಇಸ್ರಾಯೇಲ್ ಮಕ್ಕಳು ತಮಗೋಸ್ಕರ ಸುಲುಕೊಂಡರು; ಆದರೆ ಮನುಷ್ಯರೆಲ್ಲರನ್ನು ಕತ್ತಿಯಿಂದ ನಾಶಮಾಡುವ ವರೆಗೂ ಹೊಡೆದುಬಿಟ್ಟರು. ಶ್ವಾಸವುಳ್ಳ ಒಂದನ್ನೂ ಅವರು ಉಳಿಯಗೊಡಿಸಲಿಲ್ಲ. ಕರ್ತನು ತನ್ನ ಸೇವಕನಾದ ಮೋಶೆಗೆ ಹೇಗೆ ಆಜ್ಞಾಪಿಸಿದನೋ ಹಾಗೆಯೇ ಮೋಶೆಯು ಯೆಹೋಶುವನಿಗೆ ಆಜ್ಞಾಪಿಸಿ ದನು. ಯೆಹೋಶುವನು ಹಾಗೆಯೇ ಮಾಡಿದನು. ಕರ್ತನು ಮೋಶೆಗೆ ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಅವನು ಮಾಡದೆ ಉಳಿಸಲಿಲ್ಲ.
- Genesis 14:22 ಆದಿಕಾಂಡ 14:22ಅದಕ್ಕೆ ಅಬ್ರಾಮನು ಸೊದೋ ಮಿನ ಅರಸನಿಗೆ--ನನ್ನ ಕೈಯನ್ನು ಆಕಾಶವನ್ನು ಭೂಮಿಯನ್ನು ಹೊಂದಿರುವ ಮಹೋನ್ನತ ದೇವರಾ ಗಿರುವ ಕರ್ತನ ಕಡೆಗೆ ಎತ್ತಿದ್ದೇನೆ;
- Joshua 10:22–27 ಯೆಹೋಶುವ 10:22–27ಆಗ ಯೆಹೋಶುವನು--ನೀವು ಗವಿಯ ಬಾಯಿಯನ್ನು ತೆರೆದು ಆ ಐದು ಮಂದಿ ಅರಸುಗಳನ್ನು ಗವಿಯೊಳಗಿಂದ ನನ್ನ ಬಳಿಗೆ ಹೊರಗೆ ತನ್ನಿರಿ ಅಂದನು. ಅವರು ಹಾಗೆಯೇ ಮಾಡಿದರು. ಆ ಐದು ಮಂದಿ ಅರಸರನ್ನು ಅಂದರೆ ಯೆರೂಸಲೇಮಿನ ಅರಸನನ್ನೂ ಹೆಬ್ರೋನಿನ ಅರಸನನ್ನೂ ಯರ್ಮೂತಿನ ಅರಸನನ್ನೂ ಲಾಕೀಷಿನ ಅರಸನನ್ನೂ ಎಗ್ಲೋನಿನ ಅರಸನನ್ನೂ ಆ ಗವಿಯೊಳಗಿಂದ ಅವನ ಬಳಿಗೆ ಹೊರಗೆ ತಂದರು. ಅವರನ್ನು ಯೆಹೋಶುವನ ಬಳಿಗೆ ತೆಗೆದುಕೊಂಡು ಬಂದಾಗ ಯೆಹೋಶುವನು ಇಸ್ರಾಯೇಲ್ಯರೆಲ್ಲರನ್ನು ಕರಿಸಿ ತನ್ನ ಸಂಗಡ ಬಂದ ಯುದ್ಧಸ್ಥರಾದ ಅಧಿಕಾರಿಗಳಿಗೆ--ನೀವು ಸವಿಾಪಕ್ಕೆ ಬಂದು ನಿಮ್ಮ ಪಾದಗಳನ್ನು ಈ ಅರಸುಗಳ ಕುತ್ತಿಗೆಗಳ ಮೇಲೆ ಇಡಿರಿ ಅಂದನು. ಆಗ ಅವರು ಸವಿಾಪಕ್ಕೆ ಬಂದು ತಮ್ಮ ಪಾದಗಳನ್ನು ಅವರ ಕುತ್ತಿಗೆಗಳ ಮೇಲೆ ಇಟ್ಟರು. ಆಗ ಯೆಹೋಶುವನು ಅವರಿಗೆ--ಭಯ ಪಡಬೇಡಿರಿ, ನಿರುತ್ಸಾಹಗೊಳ್ಳಬೇಡಿರಿ, ಬಲಗೊಂಡು ಧೈರ್ಯವಾಗಿರ್ರಿ; ನೀವು ಯುದ್ಧಮಾಡುವ ನಿಮ್ಮ ಶತ್ರುಗಳೆಲ್ಲರಿಗೂ ಕರ್ತನು ಹೀಗೆಯೇ ಮಾಡುವನು ಅಂದನು. ತರುವಾಯ ಯೆಹೋಶುವನು ಅವರನ್ನು ಹೊಡೆದು ಐದು ಮರಗಳಲ್ಲಿ ತೂಗಹಾಕಿ ಸಾಯಿಸಿ ದನು. ಅವರು ಸಾಯಂಕಾಲದ ವರೆಗೂ ಮರಗಳಲ್ಲಿ ತೂಗಾಡುತ್ತಿದ್ದರು. ಆದರೆ ಸೂರ್ಯನು ಅಸ್ತಮಿಸು ವಾಗ ಯೆಹೋಶುವನು ಆಜ್ಞಾಪಿಸಲು ಅವರನ್ನು ಮರಗಳಿಂದ ಇಳಿಸಿ ಅವರು ಬಚ್ಚಿಟ್ಟುಕೊಂಡಿದ್ದ ಗವಿ ಯಲ್ಲಿ ಅವರನ್ನು ಹಾಕಿ ಈವರೆಗೂ ಇರುವ ಹಾಗೆ ದೊಡ್ಡ ಕಲ್ಲುಗಳನ್ನು ಅದರ ಬಾಯಿಗೆ ಮುಚ್ಚಿದರು.
- Revelation 17:12–14 ಪ್ರಕಟನೆ 17:12–14ನೀನು ಕಂಡ ಆ ಹತ್ತು ಕೊಂಬುಗಳು ರಾಜ್ಯವನ್ನು ಇನ್ನೂ ಹೊಂದದಿರುವ ಹತ್ತು ಮಂದಿ ರಾಜರು. ಅವರು ಮೃಗದೊಂದಿಗೆ ರಾಜರಂತೆ ಒಂದು ತಾಸಿನವರೆಗೆ ಅಧಿಕಾರವನ್ನು ಹೊಂದುತ್ತಾರೆ. ಅವರು ಒಂದೇ ಮನಸ್ಸುಳ್ಳವರಾಗಿದ್ದು ತಮ್ಮ ಅಧಿಕಾರವನ್ನೂ ಶಕ್ತಿಯನ್ನೂ ಮೃಗಕ್ಕೆ ಕೊಡುತ್ತಾರೆ. ಇವರು ಕುರಿಮರಿಯಾದಾತನ ಮೇಲೆ ಯುದ್ಧ ಮಾಡುವರು, ಆದರೆ ಕುರಿಮರಿ ಯಾದಾತನು ಅವರನ್ನು ಜಯಿಸುವನು; ಯಾಕಂದರೆ ಆತನು ಕರ್ತರ ಕರ್ತನೂ ರಾಜಾಧಿರಾಜನು ಆಗಿದ್ದಾನೆ. ಇದಲ್ಲದೆ ಆತನೊಂದಿಗೆ ಇರುವವರು ಕರೆಯಲ್ಪಟ್ಟ ವರೂ ಆಯಲ್ಪಟ್ಟವರೂ ನಂಬಿಗಸ್ತರು ಆಗಿದ್ದಾರೆ.
Original words (Hebrew)
- kings · H4428מֶלֶךְ melek
- came · H935בּוֹא bôwʼ
- fought · H3898לָחַם lâcham
- fought · H3898לָחַם lâcham
- kings · H4428מֶלֶךְ melek
- Canaan · H3667כְּנַעַן Kᵉnaʻan
- Taanach · H8590תַּעֲנָךְ Taʻănâk
- waters · H4325מַיִם mayim
- Megiddo · H4023מְגִדּוֹן Mᵉgiddôwn
- took · H3947לָקַח lâqach
- gain · H1215בֶּצַע betsaʻ
- money · H3701כֶּסֶף keçeph