Judges · chapter 10 · verse 7
Judges 10:7 in Kannada
ಆಗ ಕರ್ತನು ಇಸ್ರಾಯೇಲಿಗೆ ವಿರೋಧವಾಗಿ ಕೋಪಗೊಂಡು ಅವ ರನ್ನು ಫಿಲಿಷ್ಟಿಯರ ಕೈಗೂ ಅಮ್ಮೋನನ ಮಕ್ಕಳ ಕೈಗೂ ಮಾರಿಬಿಟ್ಟನು.
Aaga kartanu israayelige virodhavaagi kopagondu ava rannu philishtiyara kaigoo ammonana makkala kaigoo maaribittanu.
Judges 10:7 in English
- King James Version (KJV)
- And the anger of the LORD was hot against Israel, and he sold them into the hands of the Philistines, and into the hands of the children of Ammon.
- World English Bible (WEB)
- The LORD’s anger burned against Israel, and he sold them into the hand of the Philistines and into the hand of the children of Ammon.
- American Standard Version (ASV)
- And the anger of Jehovah was kindled against Israel, and he sold them into the hand of the Philistines, and into the hand of the children of Ammon.
- Bible in Basic English (BBE)
- And the wrath of the Lord was burning against Israel, and he gave them up into the hands of the Philistines and into the hands of the children of Ammon.
- Darby Translation (DBY)
- And the anger of Jehovah was hot against Israel, and he sold him into the hand of the Philistines, and into the hand of the children of Ammon.
- Webster's Bible (WBS)
- And the anger of the LORD was hot against Israel, and he sold them into the hands of the Philistines, and into the hands of the children of Ammon.
- Young's Literal Translation (YLT)
- and the anger of Jehovah burneth against Israel, and He selleth them into the hand of the Philistines, and into the hand of the Bene-Ammon,
Read in context
- 5ಯಾಯಾ ರನು ಸತ್ತು ಕಾಮೋನಿನಲ್ಲಿ ಹೂಣಲ್ಪಟ್ಟನು.
- 6ಆದರೆ ಇಸ್ರಾಯೇಲ್ ಮಕ್ಕಳು ತಿರಿಗಿ ಕರ್ತನ ಮುಂದೆ ಕೆಟ್ಟತನಮಾಡಿ ಬಾಳನನ್ನೂ ಅಷ್ಟೋರೆತನ್ನೂ ಸಿರಿಯಾ ದೇಶದ ದೇವರುಗಳನ್ನೂ ಚೀದೋನಿನ ದೇವರುಗಳನ್ನೂ ಮೋವಾಬಿನ ದೇವರುಗಳನ್ನೂ ಅಮ್ಮೋನನ ಮಕ್ಕಳ ದೇವರುಗಳನ್ನೂ ಫಿಲಿಷ್ಟಿಯರ ದೇವರುಗಳನ್ನೂ ಸೇವಿಸುವವರಾಗಿ ಕರ್ತನನ್ನು ಸೇವಿ ಸದೆ ಆತನನ್ನು ಬಿಟ್ಟು ಹೋದರು.
- 7ಆಗ ಕರ್ತನು ಇಸ್ರಾಯೇಲಿಗೆ ವಿರೋಧವಾಗಿ ಕೋಪಗೊಂಡು ಅವ ರನ್ನು ಫಿಲಿಷ್ಟಿಯರ ಕೈಗೂ ಅಮ್ಮೋನನ ಮಕ್ಕಳ ಕೈಗೂ ಮಾರಿಬಿಟ್ಟನು.
- 8ಆ ವರುಷ ಮೊದಲುಗೊಂಡ ಅವರು ಹದಿನೆಂಟು ವರುಷ ಯೊರ್ದನಿಗೆ ಆಚೆ ಗಿಲ್ಯಾದಿನಲ್ಲಿ ಅಮೋರಿಯರ ದೇಶದಲ್ಲಿರುವ ಇಸ್ರಾಯೇಲ್ ಮಕ್ಕಳ ನ್ನೆಲ್ಲಾ ಬಾಧಿಸಿ ಕುಂದಿಸಿದರು.
- 9ಇದಲ್ಲದೆ ಅಮ್ಮೋನನ ಮಕ್ಕಳು ಯೆಹೂದನಿಗೆ ಬೆನ್ಯಾವಿಾನರಿಗೆ ವಿರೋಧವಾ ಗಿಯೂ ಎಫ್ರಾಯಾಮ್ ಮನೆಗೆ ವಿರೋಧವಾಗಿಯೂ ಯುದ್ಧಮಾಡುವದಕ್ಕೆ ಯೊರ್ದನನ್ನು ದಾಟಿ ಬಂದರು. ಹೀಗೆ ಇಸ್ರಾಯೇಲಿಗೆ ಬಹುಸಂಕಟವಾಯಿತು.
Cross references
- Judges 2:14 ನ್ಯಾಯಸ್ಥಾಪಕರು 2:14ಆದದರಿಂದ ಕರ್ತನು ಇಸ್ರಾಯೇಲಿಗೆ ವಿರೋಧ ವಾಗಿ ಉರಿಗೊಂಡು ಅವರನ್ನು ಕೊಳ್ಳೆಹೊಡೆಯುವ ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟನು. ತರುವಾಯ ಅವರು ತಮ್ಮ ಶತ್ರುಗಳಿಗೆ ಎದುರಾಗಿ ನಿಲ್ಲದ ಹಾಗೆ ಅವರ ಸುತ್ತಲಿರುವ ಅವರ ಶತ್ರುಗಳ ಕೈಗೆ ಅವರನ್ನು ಮಾರಿಬಿಟ್ಟನು.
- Deuteronomy 32:16–22 ಧರ್ಮೋಪದೇಶಕಾಂಡ 32:16–22ಅನ್ಯದೇವತೆಗಳಿಂದ ಆತನಿಗೆ ಅವರು ರೋಷ ಹುಟ್ಟಿಸಿದರು. ಅಸಹ್ಯವಾದವುಗಳಿಂದ ಆತನಿಗೆ ಕೋಪ ವನ್ನು ಎಬ್ಬಿಸಿದರು. ದೇವರಿಗೆ ಅಲ್ಲ, ದೆವ್ವಗಳಿಗೆ, ಅವರು ಅರಿಯದ ದೇವರುಗಳಿಗೆ, ಇತ್ತಲಾಗಿ ಬಂದ ಹೊಸ ದೇವರು ಗಳಿಗೆ ನಿಮ್ಮ ಪಿತೃಗಳು ಭಯಪಡದವುಗಳಿಗೆ ಬಲಿ ಅರ್ಪಿಸಿದರು. ನಿನ್ನನ್ನು ಹುಟ್ಟಿಸಿದ ಬಂಡೆಯನ್ನು ನೆನಸದೆ ನಿನ್ನನ್ನು ರೂಪಿಸಿದ ದೇವರನ್ನು ಮರೆತುಬಿಟ್ಟಿದ್ದಿ. ಕರ್ತನು ಅದನ್ನು ನೋಡಿ ಕೋಪದಿಂದ ತನ್ನ ಕುಮಾರ ಕುಮಾರ್ತೆಯರನ್ನು ಅಸಹ್ಯಿಸಿಕೊಂಡನು. ಆತನು--ನನ್ನ ಮುಖವನ್ನು ಅವರಿಗೆ ಮರೆ ಮಾಡುವೆನು; ಅವರ ಅಂತ್ಯವು ಏನೆಂದು ನೋಡು ವೆನು; ಅವರು ಮೂರ್ಖ ಸಂತತಿಯೇ, ನಂಬಿಕೆಯಿಲ್ಲದ ಮಕ್ಕಳೇ. ದೇವರಲ್ಲದ್ದರಿಂದ ಅವರು ನನಗೆ ರೋಷ ಹುಟ್ಟಿಸಿ ದರು; ತಮ್ಮ ವ್ಯರ್ಥವಾದವುಗಳಿಂದ ನನಗೆ ಕೋಪ ವನ್ನು ಎಬ್ಬಿಸಿದರು. ಜನವಲ್ಲದ್ದರಿಂದ ನಾನು ಅವರಿಗೆ ರೋಷ ಹುಟ್ಟಿಸುವೆನು; ಮೂಢ ಜನಾಂಗದಿಂದ ಅವರಿಗೆ ಕೋಪವನ್ನೆಬ್ಬಿಸುವೆನು. ನನ್ನ ಕೋಪದಲ್ಲಿ ಬೆಂಕಿಹತ್ತಿತು; ಅದು ಕೆಳಗಿನ ಪಾತಾಳದ ಮಟ್ಟಿಗೂ ಉರಿದು ಭೂಮಿಯನ್ನೂ ಅದರ ಫಲವನ್ನೂ ತಿಂದುಬಿಟ್ಟು ಬೆಟ್ಟಗಳ ಅಸ್ತಿವಾರವನ್ನು ದಹಿಸುವದು.
- 1 Samuel 12:9–10 1 ಸಮುವೇಲನು 12:9–10ಆದರೆ ಅವರು ತಮ್ಮ ದೇವರಾದ ಕರ್ತನನ್ನು ಮರೆತುಹೋದಾಗ ಆತನು ಅವರನ್ನು ಹಾಚೋರಿನ ಸೈನ್ಯಾಧಿಪತಿಯಾದ ಸೀಸೆರನ ಕೈಗೂ ಫಿಲಿಷ್ಟಿಯರ ಕೈಗೂ ಮೋವಾಬ್ಯರ ಅರಸನ ಕೈಗೂ ಮಾರಿಬಿಟ್ಟನು. ಇವರು ಅವರ ಸಂಗಡ ಯುದ್ಧಮಾಡಿದರು. ಆದದರಿಂದ ಅವರು ಕರ್ತನಿಗೆ ಮೊರೆಯಿಟ್ಟು--ನಾವು ಕರ್ತನಾದ ನಿನ್ನನ್ನು ಬಿಟ್ಟು ಬಾಳನನ್ನೂ ಅಷ್ಟೋರೆತನ್ನೂ ಸೇವಿಸಿದ್ದರಿಂದ ಪಾಪಮಾಡಿದೆವು. ಈಗ ನೀನು ನಮ್ಮ ಶತ್ರುಗಳ ಕೈಯಿಂದ ನಮ್ಮನ್ನು ಬಿಡಿಸು, ನಾವು ನಿನ್ನನ್ನು ಸೇವಿಸು ವೆವು ಅಂದರು.
- Nahum 1:6 ನಹೂಮ 1:6ಆತನ ರೌದ್ರದ ಎದುರಿಗೆ ಯಾರು ನಿಲ್ಲುವರು? ಆತನ ರೋಷಾಗ್ನಿಗೆ ಯಾರು ನಿಂತುಕೊಳ್ಳುವರು? ಆತನ ಉಗ್ರವು ಬೆಂಕಿಯ ಹಾಗೆ ಸುರಿಸಲ್ಪಟ್ಟಿದೆ; ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.
- Psalm 44:12 ಕೀರ್ತನೆಗಳು 44:12ನಿನ್ನ ಜನರನ್ನು ಕ್ರಯವಿಲ್ಲದೆ ಮಾರಿಬಿಡುತ್ತೀ. ಅವರ ಬೆಲೆಯಿಂದ ನೀನು ನಿನ್ನ ಸಂಪತ್ತನ್ನು ಹೆಚ್ಚು ಮಾಡಲಿಲ್ಲ.
- Isaiah 50:1 ಯೆಶಾಯ 50:1ಕರ್ತನು ಹೀಗನ್ನುತ್ತಾನೆ--ನಾನು ಬಿಟ್ಟು ಬಿಟ್ಟದ್ದಕ್ಕೆ ನಿನ್ನ ತಾಯಿಯ ತ್ಯಾಗಪತ್ರವು ಎಲ್ಲಿ? ಇಲ್ಲವೆ ನಾನು ನನ್ನ ಸಾಲಗಾರರಲ್ಲಿ ಯಾರಿಗೆ ನಿಮ್ಮನ್ನು ಮಾರಿಬಿಟ್ಟೇನು? ಇಗೋ, ನಿಮ್ಮ ಅಕ್ರಮ ಗಳ ನಿಮಿತ್ತ ನಿಮ್ಮನ್ನು ನೀವೇ ಮಾರಿಕೊಂಡಿದ್ದೀರಿ; ನಿಮ್ಮ ದ್ರೋಹಗಳ ನಿಮಿತ್ತವೇ ನಿಮ್ಮ ತಾಯಿಯನ್ನು ಬಿಟ್ಟಿದ್ದೇನೆ.
- Deuteronomy 31:16–18 ಧರ್ಮೋಪದೇಶಕಾಂಡ 31:16–18ಆಗ ಕರ್ತನು ಮೋಶೆಗೆ--ನೀನು ನಿನ್ನ ಪಿತೃಗಳ ಸಂಗಡ ಮಲಗುವಿ; ಈ ಜನರು ಎದ್ದು ತಾವು ಪ್ರವೇಶಿಸುವ ದೇಶದ ಅನ್ಯದೇವರುಗಳನ್ನು ಅನುಸರಿಸಿ ಜಾರತ್ವಮಾಡಿ ನನ್ನನ್ನು ಬಿಟ್ಟು ನಾನು ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ವಿಾರುವರು. ಆ ದಿವಸದಲ್ಲಿ ನನ್ನ ಕೋಪವು ಅವರ ಮೇಲೆ ಉರಿಯು ವದು. ನಾನು ಅವರನ್ನು ಬಿಟ್ಟುಬಿಟ್ಟು ನನ್ನ ಮುಖವನ್ನು ಅವರಿಗೆ ಮರೆಮಾಡುವೆನು; (ವಿರೋಧಿಗಳು) ಅವ ರನ್ನು ನುಂಗಿ ಬಿಡುವರು; ಬಹಳ ಕೇಡುಗಳೂ ಇಕ್ಕಟ್ಟು ಗಳೂ ಅವರಿಗೆ ಸಂಭವಿಸುವವು; ಆ ದಿವಸದಲ್ಲಿ ಅವರು--ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದ ಕಾರಣ ಈ ಕೇಡುಗಳು ನಮ್ಮನ್ನು ಹಿಡಿದವಲ್ಲಾ ಎಂದು ಹೇಳುವರು. ಅವರು ಮಾಡಿದ ಎಲ್ಲಾ ಕೆಟ್ಟತನದ ನಿಮಿತ್ತವೂ ಅನ್ಯದೇವರುಗಳ ಕಡೆಗೆ ತಿರುಗಿದ್ದರಿಂದಲೂ ನಾನು ಆ ದಿವಸದಲ್ಲಿ ನನ್ನ ಮುಖವನ್ನು ಖಂಡಿತವಾಗಿ ಮರೆಮಾಡುವೆನು.
- Psalm 74:1 ಕೀರ್ತನೆಗಳು 74:1ಓ ದೇವರೇ, ಸದಾಕಾಲಕ್ಕೆ ತಳ್ಳಿಬಿಟ್ಟದ್ದೇಕೆ? ನಿನ್ನ ಮೇವಿನ ಕುರಿಮಂದೆಗೆ ವಿರೋಧವಾಗಿ ನಿನ್ನ ಕೋಪವು ಹೊಗೆಯಾಡುವದು ಯಾಕೆ?
- Deuteronomy 29:20–28 ಧರ್ಮೋಪದೇಶಕಾಂಡ 29:20–28ಅಂಥವನನ್ನು ಕರ್ತನು ಉಳಿಸುವದಿಲ್ಲ; ಆಗಲೇ ಕರ್ತನ ಕೋಪವೂ ರೋಷವೂ ಆ ಮನುಷ್ಯನ ಮೇಲೆ ಹೊಗೆ ಹಾಯುವವು. ಈ ಪುಸ್ತಕದಲ್ಲಿ ಬರೆದಿ ರುವ ಶಾಪವೆಲ್ಲಾ ಅವನ ಮೇಲೆ ನೆಲೆಯಾಗುವದು; ಕರ್ತನು ಅವನ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವನು. ಈ ನ್ಯಾಯಪ್ರಮಾಣದ ಪುಸ್ತಕ ದಲ್ಲಿ ಬರೆದಿರುವ ಒಡಂಬಡಿಕೆಯ ಎಲ್ಲಾ ಶಾಪಗಳ ಪ್ರಕಾರ ಕರ್ತನು ಅವನನ್ನು ಇಸ್ರಾಯೇಲಿನ ಎಲ್ಲಾ ಗೋತ್ರಗಳೊಳಗಿಂದ ಕೇಡಿಗೆ ಪ್ರತ್ಯೇಕಿಸುವನು. ಹೀಗೆ ನಿಮ್ಮ ತರುವಾಯ ಹುಟ್ಟುವ ನಿಮ್ಮ ಮಕ್ಕಳ ಮುಂದಿನ ಸಂತತಿಯೂ ದೂರ ದೇಶದಿಂದ ಬರುವ ಅನ್ಯನೂ ಆ ದೇಶದ ಬಾಧೆಗಳನ್ನೂ ಕರ್ತನು ಅದರಲ್ಲಿ ಬರಮಾಡಿದ ರೋಗಗಳನ್ನೂ ನೋಡಿ ಕರ್ತನು ತನ್ನ ಕೋಪದಲ್ಲಿಯೂ ರೌದ್ರದಲ್ಲಿಯೂ ಕೆಡವಿ ಹಾಕಿದ ಸೊದೋಮ್ ಗೊಮೋರ ಅದ್ಮಾಚೆಬೋ ಯಾಮ್ ಇವುಗಳ ಹಾಗೆ ಆ ದೇಶವೆಲ್ಲಾ ಗಂಧಕವೂ ಉಪ್ಪೂ ಉರಿಯುತ್ತಾ ಬಿತ್ತಲ್ಪಡದೆ ಮೊಳೆಯದೆ ಯಾವ ಹುಲ್ಲನ್ನಾದರೂ ಬೆಳೆಸದೆ ಇರುವದನ್ನು ನೋಡಿ-- ಯಾಕೆ ಕರ್ತನು ಈ ದೇಶಕ್ಕೆ ಹೀಗೆ ಮಾಡಿದ್ದಾನೆ. ಈ ದೊಡ್ಡ ಕೊಪಾಗ್ನಿ ಏನು ಎಂದು ಜನಾಂಗಗಳೆಲ್ಲಾ ಕೇಳುವರು. ಆಗ ಜನರು--ಅವರು ತಮ್ಮನ್ನು ಐಗುಪ್ತ ದೇಶದೊಳಗಿಂದ ಹೊರಗೆ ತರುವಾಗ ತಮ್ಮ ಪಿತೃಗಳ ದೇವರಾದ ಕರ್ತನು ತಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಮರೆತುಬಿಟ್ಟು, ಹೋಗಿ ಬೇರೆ ದೇವರುಗಳನ್ನೂ ತಮಗೆ ತಿಳಿಯದಂಥ, ಆತನು ತಮಗೆ ನೇಮಿಸದಂಥ ದೇವರುಗಳನ್ನೂ ಸೇವಿಸಿ ಅಡ್ಡಬಿದ್ದ ದರಿಂದ ಕರ್ತನ ಕೋಪವು ಈ ದೇಶದ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಶಾಪವನ್ನೆಲ್ಲಾ ಅವರ ಮೇಲೆ ತರುವ ಹಾಗೆ ಉರಿಯಿತು. ಕರ್ತನು ಅವ ರನ್ನು ಕೋಪದಲ್ಲಿಯೂ ಸಿಟ್ಟಿನಲ್ಲಿಯೂ ಮಹಾರೌದ್ರ ದಲ್ಲಿಯೂ ದೇಶದಲ್ಲಿಂದ ಕಿತ್ತುಹಾಕಿ ಇಂದು ಇರುವ ಪ್ರಕಾರ ಬೇರೆ ದೇಶಕ್ಕೆ ಕಳುಹಿಸಿದ್ದಾನೆ.ರಹಸ್ಯಗಳು ನಮ್ಮ ದೇವರಾದ ಕರ್ತನಿಗೆ ಸೇರಿದ್ದು; ಆದರೆ ಪ್ರಕಟವಾದ ಈ ನ್ಯಾಯಪ್ರಮಾಣದ ಮಾತು ಗಳನ್ನೆಲ್ಲಾ ನಾವು ಮಾಡುವಹಾಗೆ ನಮಗೂ ನಮ್ಮ ಮಕ್ಕಳಿಗೂ ನಿತ್ಯವಾಗಿ ಇರುತ್ತವೆ.
- Nahum 1:2 ನಹೂಮ 1:2ಕರ್ತನು ರೋಷವುಳ್ಳಂಥ, ಮುಯ್ಯಿಗೆಮುಯ್ಯಿ ಕೊಡುವಂಥ ದೇವರು; ಕರ್ತನು ಮುಯ್ಯಿಗೆ ಮುಯ್ಯಿ ಕೊಡುವಂಥ ಉಗ್ರವುಳ್ಳಾತನು, ಕರ್ತನು ತನ್ನ ವೈರಿ ಗಳಿಗೆ ಮುಯ್ಯಿಗೆಮುಯ್ಯಿ ತೀರಿಸಿ ತನ್ನ ಶತ್ರುಗಳ ಮೇಲೆ ಕೋಪವನ್ನು ಇಟ್ಟುಕೊಳ್ಳುತ್ತಾನೆ.
- Judges 4:2 ನ್ಯಾಯಸ್ಥಾಪಕರು 4:2ಆದದರಿಂದ ಕರ್ತನು ಅವರನ್ನು ಹಾಚೋರಿನಲ್ಲಿ ಆಳುವ ಕಾನಾನಿನ ಅರಸನಾದ ಯಾಬೀನನ ಕೈಗೆ ಮಾರಿಬಿಟ್ಟನು. ಅವನ ಸೈನ್ಯಕ್ಕೆ ಜನಾಂಗಗಳ ಪಟ್ಟಣವಾದ ಹರೋಷೆತಿನಲ್ಲಿ ವಾಸವಾಗಿರುವ ಸೀಸೆರನು ಅಧಿಪತಿಯಾಗಿದ್ದನು.
- Joshua 23:15–16 ಯೆಹೋಶುವ 23:15–16ಈಗ ನಿಮ್ಮ ದೇವರಾದ ಕರ್ತನು ನಿಮಗೆ ವಾಗ್ದಾನಮಾಡಿದ ಒಳ್ಳೇ ಕಾರ್ಯಗಳೆಲ್ಲಾ ನಿಮಗೆ ಹೇಗೆ ಸಂಭವಿಸಿದವೋ ಹಾಗೆಯೇ ನಿಮ್ಮ ದೇವರಾದ ಕರ್ತನು ನಿಮಗೆ ಆಜ್ಞಾಪಿಸಿದ ತನ್ನ ಆಜ್ಞೆ ಗಳನ್ನು ನೀವು ವಿಾರಿ, ಅನ್ಯದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ ನಿಮ್ಮ ದೇವರಾದ ಕರ್ತನು ನಿಮಗೆ ಕೊಟ್ಟ ಈ ಒಳ್ಳೇ ದೇಶದಿಂದ ನಿಮ್ಮನ್ನು ನಾಶಮಾಡುವ ಮಟ್ಟಿಗೂ ಕರ್ತನು ನಿಮ್ಮ ಮೇಲೆ ಸಕಲ ಕೇಡುಗಳನ್ನು ಬರಮಾಡುವನು.ಕರ್ತನ ಕೋಪವು ನಿಮ್ಮ ಮೇಲೆ ಉರಿಯುವದು; ಆತನು ನಿಮಗೆ ಕೊಟ್ಟ ಒಳ್ಳೇ ದೇಶದಿಂದ ನೀವು ಬೇಗನೆ ನಾಶವಾಗಿ ಹೋಗುವಿರಿ ಅಂದನು. ಕರ್ತನ ಕೋಪವು ನಿಮ್ಮ ಮೇಲೆ ಉರಿಯುವದು; ಆತನು ನಿಮಗೆ ಕೊಟ್ಟ ಒಳ್ಳೇ ದೇಶದಿಂದ ನೀವು ಬೇಗನೆ ನಾಶವಾಗಿ ಹೋಗುವಿರಿ ಅಂದನು.