Judges · chapter 17 · verse 5
Judges 17:5 in Kannada
ಈ ವಿಾಕ ಎಂಬ ಮನುಷ್ಯನಿಗೆ ದೇವರುಗಳ ಮನೆ ಇದ್ದದರಿಂದ ಅವನು ಒಂದು ಏಫೋದನ್ನೂ ಪ್ರತಿಮೆಗಳನ್ನೂ ಮಾಡಿ ತನ್ನ ಕುಮಾರರಲ್ಲಿ ಒಬ್ಬನನ್ನು ಪ್ರತಿಷ್ಠೆಮಾಡಿದನು. ಅವನು ಇವನಿಗೆ ಯಾಜಕ ನಾದನು.
Ee viాka emba manushyanige devarugala mane iddadarinda avanu ondu ephodannoo pratimegalannoo maadi tanna kumaararalli obbanannu pratishthemaadidanu. Avanu ivanige yaajaka naadanu.
Judges 17:5 in English
- King James Version (KJV)
- And the man Micah had an house of gods, and made an ephod, and teraphim, and consecrated one of his sons, who became his priest.
- World English Bible (WEB)
- The man Micah had a house of gods, and he made an ephod, and teraphim, and consecrated one of his sons, who became his priest.
- American Standard Version (ASV)
- And the man Micah had a house of gods, and he made an ephod, and teraphim, and consecrated one of his sons, who became his priest.
- Bible in Basic English (BBE)
- And the man Micah had a house of gods; and he made an ephod and family gods and put one of his sons in the position of priest.
- Darby Translation (DBY)
- And the man Micah had a house of gods, and made an ephod and teraphim, and consecrated one of his sons, who became his priest.
- Webster's Bible (WBS)
- And the man Micah had a house of gods, and made an ephod, and teraphim, and consecrated one of his sons, who became his priest.
- Young's Literal Translation (YLT)
- As to the man Micah, he hath a house of gods, and he maketh an ephod, and teraphim, and consecrateth the hand of one of his sons, and he is to him for a priest;
Read in context
- 3ಅವನು ಆ ಸಾವಿರದ ನೂರು ರೂಪಾಯಿಗಳಷ್ಟು ಬೆಳ್ಳಿಯನ್ನು ತನ್ನ ತಾಯಿಗೆ ತಿರಿಗಿ ಕೊಟ್ಟಾಗ ಅವನ ತಾಯಿ--ನನ್ನ ಮಗನ ನಿಮಿತ್ತ ಕೆತ್ತಿದ ವಿಗ್ರಹವನ್ನೂ ಎರಕದ ವಿಗ್ರಹವನ್ನೂ ಮಾಡುವದಕ್ಕೆ ನಾನು ನನ್ನ ಕೈಯಲ್ಲಿದ್ದ ಈ ಬೆಳ್ಳಿಯನ್ನು ಕರ್ತನಿಗೆ ಸಂಪೂರ್ಣವಾಗಿ ಪ್ರತಿಷ್ಠಿಸಿದೆನು; ಆದದರಿಂದ ನಾನು ಅದನ್ನು ನಿನಗೆ ತಿರಿಗಿ ಕೊಡುವೆನು ಅಂದಳು.
- 4ಆದರೆ ಅವನು ಆ ಹಣವನ್ನು ತನ್ನ ತಾಯಿಗೆ ತಿರಿಗಿ ಕೊಟ್ಟನು. ಆಗ ಅವನ ತಾಯಿ ಇನ್ನೂರು ಬೆಳ್ಳಿಯ ನಾಣ್ಯಗಳನ್ನು ತಕ್ಕೊಂಡು ಅಕ್ಕಸಾಲಿಗನ ಕೈಯಲ್ಲಿ ಕೊಟ್ಟಳು. ಅವನು ಅವುಗಳಿಂದ ಕೆತ್ತಿದ ವಿಗ್ರಹವನ್ನೂ ಎರಕದ ವಿಗ್ರಹ ವನ್ನೂ ಮಾಡಿದನು. ಅವು ವಿಾಕನ ಮನೆಯಲ್ಲಿದ್ದವು.
- 5ಈ ವಿಾಕ ಎಂಬ ಮನುಷ್ಯನಿಗೆ ದೇವರುಗಳ ಮನೆ ಇದ್ದದರಿಂದ ಅವನು ಒಂದು ಏಫೋದನ್ನೂ ಪ್ರತಿಮೆಗಳನ್ನೂ ಮಾಡಿ ತನ್ನ ಕುಮಾರರಲ್ಲಿ ಒಬ್ಬನನ್ನು ಪ್ರತಿಷ್ಠೆಮಾಡಿದನು. ಅವನು ಇವನಿಗೆ ಯಾಜಕ ನಾದನು.
- 6ಆ ದಿವಸಗಳೊಳಗೆ ಇಸ್ರಾಯೇಲಿನಲ್ಲಿ ಅರಸನಿರಲಿಲ್ಲ; ಅವನವನು ತನ್ನ ದೃಷ್ಟಿಗೆ ಸರಿಯಾಗಿ ತೋರಿದ್ದನ್ನು ಮಾಡಿದನು.
- 7ಯೆಹೂದದ ಗೋತ್ರಕ್ಕೆ ಸೇರಿದ ಬೇತ್ಲೆಹೇಮಿನ ಲೇವಿಯನಾದಂಥ ಒಬ್ಬ ಯೌವನಸ್ಥನಿದ್ದನು. ಅವನು ಅಲ್ಲಿ ಪ್ರವಾಸಿಯಾಗಿದ್ದನು.
Cross references
- Judges 18:14 ನ್ಯಾಯಸ್ಥಾಪಕರು 18:14ಆಗ ಲಯಿಷಿನ ದೇಶವನ್ನು ಪಾಳತಿ ನೋಡಿಬಂದ ಆ ಐದು ಮಂದಿ ಮನುಷ್ಯರು ತಮ್ಮ ಸಹೋದರರರಿಗೆ ಉತ್ತರ ಕೊಟ್ಟುಈ ಮನೆಗಳಲ್ಲಿ ಏಫೋದೂ ಪ್ರತಿಮೆಗಳೂ ಕೆತ್ತಿದ ವಿಗ್ರಹವೂ ಎರಕದ ವಿಗ್ರಹವೂ ಉಂಟೆಂದು ನೀವು ಅರಿಯಿರಾ? ನೀವು ಈಗ ಮಾಡಬೇಕಾದದ್ದೇನೆಂದು ತಿಳುಕೊಳ್ಳಿರಿ ಅಂದರು.
- Judges 8:27 ನ್ಯಾಯಸ್ಥಾಪಕರು 8:27ಆ ಬಂಗಾರ ದಿಂದ ಗಿದ್ಯೋನನು ಒಂದು ಏಫೋದನ್ನು ಮಾಡಿಸಿ ಅದನ್ನು ತನ್ನ ಊರಾದ ಒಫ್ರದಲ್ಲಿ ಇಟ್ಟನು. ಆದರೆ ಇಸ್ರಾಯೇಲ್ಯರೆಲ್ಲಾ ಅದರ ಹಿಂದೆ ಜಾರರಾಗಿ ಹೋದರು. ಅದು ಗಿದ್ಯೋನನಿಗೂ ಅವನ ಮನೆಗೂ ಉರುಲಾಯಿತು.
- Genesis 31:30 ಆದಿಕಾಂಡ 31:30ಈಗ ನೀನು ನಿನ್ನ ತಂದೆಯ ಮನೆಯನ್ನು ಬಹಳವಾಗಿ ಆಶಿಸಿದ್ದರಿಂದ ಹೋಗಬೇಕಾಯಿತು. ಆದರೆ ನೀನು ನನ್ನ ದೇವರುಗಳನ್ನು ಕದ್ದದ್ದು ಯಾಕೆ ಅಂದನು.
- Genesis 31:19 ಆದಿಕಾಂಡ 31:19ಆಗ ಲಾಬಾನನು ತನ್ನ ಕುರಿಗಳ ಉಣ್ಣೆ ಕತ್ತರಿಸುವದಕೆ ಹೋಗಿದ್ದನು. ಆದದರಿಂದ ರಾಹೇಲಳು ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು.
- Judges 18:24 ನ್ಯಾಯಸ್ಥಾಪಕರು 18:24ಅವನು--ನಾನು ಮಾಡಿಕೊಂಡ ನನ್ನ ದೇವರು ಗಳನ್ನೂ ಯಾಜಕನನ್ನೂ ತಕ್ಕೊಂಡು ಹೋದಿರಿ; ಇನ್ನು ನನಗೆ ಏನದೆ? ನೀವು ನನ್ನನ್ನು--ನಿನಗೆ ಏನಾಯಿತೆಂದು ಕೇಳುವದೇನು? ಅಂದನು.
- Hosea 3:4 ಹೋಶೇಯ 3:4ಇಸ್ರಾಯೇಲಿನ ಮಕ್ಕಳು ಬಹಳ ದಿವಸಗಳ ವರೆಗೆ ಅರಸನಿಲ್ಲದೆ ಪ್ರಧಾ ನನಿಲ್ಲದೆ ಬಲಿ ಇಲ್ಲದೆ ವಿಗ್ರಹವಿಲ್ಲದೆ ಎಫೋದ್ ಇಲ್ಲದೆ ವಿಗ್ರಹಗಳು ಇಲ್ಲದೆ ಇರುವರು.ಆಮೇಲೆ ಇಸ್ರಾಯೇಲಿನ ಮಕ್ಕಳು ತಿರುಗಿಕೊಂಡು ಅವರ ದೇವ ರಾದ ಕರ್ತನನ್ನು ಮತ್ತು ಅವರ ಅರಸನಾದ ದಾವೀದ ನನ್ನು ಹುಡುಕಿಕೊಂಡು ಅಂತ್ಯ ದಿವಸಗಳಲ್ಲಿ ಕರ್ತನನ್ನೂ ಆತನ ದಯೆಯನ್ನೂ ಭಯದಿಂದ ಮರೆಹೋಗುವರು.
- Exodus 29:9 ವಿಮೋಚನಕಾಂಡ 29:9ಆರೋನನಿಗೂ ಅವನ ಕುಮಾರರಿಗೂ ನಡುಕಟ್ಟುಗಳನ್ನು ಕಟ್ಟಿ ಅವರಿಗೆ ಕುಲಾಯಿಗಳನ್ನು ಇಡಬೇಕು. ಹೀಗೆ ಅವರಿಗೆ ಯಾಜಕ ಸೇವೆಯು ಶಾಶ್ವತ ಕಟ್ಟಳೆಯಾಗಿರುವದು. ಆರೋನ ನನ್ನೂ ಅವನ ಕುಮಾರರನ್ನೂ ನೀನು ಪ್ರತಿಷ್ಠೆ ಮಾಡಬೇಕು.
- Hebrews 5:4 ಇಬ್ರಿಯರಿಗೆ 5:4ಇದಲ್ಲದೆ ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವವನ್ನು ವಹಿಸಿಕೊಳ್ಳದೆ ಆರೋನನಂತೆ ದೇವರಿಂದ ಕರೆಯಲ್ಪಟ್ಟು ವಹಿಸಿಕೊಳ್ಳುತ್ತಾನೆ.
- Exodus 28:15 ವಿಮೋಚನಕಾಂಡ 28:15ನ್ಯಾಯದ ಎದೆ ಪದಕವನ್ನು ಕುಶಲ ಕಲೆಯ ಕೆಲಸದಿಂದ ಅಂದರೆ ಎಫೋದಿನ ಕೆಲಸದ ಹಾಗೆಯೇ ಚಿನ್ನದಿಂದಲೂ ನೀಲಿ ಧೂಮ್ರ ರಕ್ತವರ್ಣದ ನೂಲಿ ನಿಂದಲೂ ನಯವಾದ ಹೊಸೆದ ನಾರಿನಿಂದಲೂ ನೀನು ಮಾಡಿಸಬೇಕು.
- 1 Kings 12:31 1 ಅರಸುಗಳು 12:31ಇದಲ್ಲದೆ ಅವನು ಉನ್ನತ ಸ್ಥಳಗಳ ಒಂದು ಮನೆಯನ್ನು ಕಟ್ಟಿಸಿ ಲೇವಿಯ ಮಕ್ಕಳಲ್ಲದ ಜನರಲ್ಲಿ ಕನಿಷ್ಠ ಜನರೊಳಗಿಂದ ಯಾಜಕರನ್ನು ನೇಮಿಸಿ ದನು.
- Hosea 8:14 ಹೋಶೇಯ 8:14ಇಸ್ರಾಯೇಲು ತನ್ನ ನಿರ್ಮಾಣಿಕ ನನ್ನು ಮರೆತುಬಿಟ್ಟು ಆಲಯಗಳನ್ನು ಕಟ್ಟಿಕೊಂಡಿದೆ; ಯೆಹೂದವು ಸಹ ಕೋಟೆಯುಳ್ಳ ಪಟ್ಟಣಗಳನ್ನು ಹೆಚ್ಚು ಮಾಡಿಕೊಂಡಿದೆ; ಆದರೆ ನಾನು ಅದರ ಪಟ್ಟಣಗಳ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಅವುಗಳ ಅರಮನೆಗಳನ್ನು ನುಂಗಿಬಿಡುವದು.
- 1 Samuel 23:6 1 ಸಮುವೇಲನು 23:6ಆದರೆ ಅಹೀಮೆಲೆಕನ ಮಗನಾದ ಎಬ್ಯಾತಾರನು ಕೆಯಾಲಾದಲ್ಲಿ ಇರುವ ದಾವೀದನ ಬಳಿಗೆ ಓಡಿಬಂದಾಗ ಅವನ ಕೈಯಲ್ಲಿ ಎಫೋದು ಇತ್ತು.