Genesis · chapter 31 · verse 19
Genesis 31:19 in Kannada
ಆಗ ಲಾಬಾನನು ತನ್ನ ಕುರಿಗಳ ಉಣ್ಣೆ ಕತ್ತರಿಸುವದಕೆ ಹೋಗಿದ್ದನು. ಆದದರಿಂದ ರಾಹೇಲಳು ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು.
Aaga laabaananu tanna kurigala unne kattarisuvadake hogiddanu. Aadadarinda raahelalu tanna tandeya vigrahagalannu kaddukondalu.
Genesis 31:19 in English
- King James Version (KJV)
- And Laban went to shear his sheep: and Rachel had stolen the images that [were] her father’s.
- World English Bible (WEB)
- Now Laban had gone to shear his sheep; and Rachel stole the teraphim that were her father’s.
- American Standard Version (ASV)
- Now Laban was gone to shear his sheep: and Rachel stole the teraphim that were her father’s.
- Bible in Basic English (BBE)
- Now Laban had gone to see to the cutting of the wool of his sheep; so Rachel secretly took the images of the gods of her father's house.
- Darby Translation (DBY)
- And Laban had gone to shear his sheep. And Rachel stole the teraphim that [belonged] to her father.
- Webster's Bible (WBS)
- And Laban went to shear his sheep; and Rachel had stolen the images that [were] her father's.
- Young's Literal Translation (YLT)
- And Laban hath gone to shear his flock, and Rachel stealeth the teraphim which her father hath;
Read in context
- 17ಆಗ ಯಾಕೋಬನು ಎದ್ದು ತನ್ನ ಕುಮಾರರನ್ನೂ ಹೆಂಡತಿಯರನ್ನೂ ಒಂಟೆಗಳ ಮೇಲೆ ಹತ್ತಿಸಿ
- 18ತನ್ನ ಎಲ್ಲಾ ಪಶುಗಳನ್ನೂ ತಾನು ಸಂಪಾದಿಸಿದ ಎಲ್ಲಾ ಸಂಪತ್ತನ್ನೂ ಪದ್ದನ್ ಅರಾಮಿನಲ್ಲಿ ತಾನು ಸಂಪಾದಿಸಿದ ಪಶುಗಳನ್ನೂ ಕಾನಾನ್ ದೇಶ ದಲ್ಲಿದ್ದ ತನ್ನ ತಂದೆಯಾದ ಇಸಾಕನ ಬಳಿಗೆ ತಕ್ಕೊಂಡು ಹೋದನು.
- 19ಆಗ ಲಾಬಾನನು ತನ್ನ ಕುರಿಗಳ ಉಣ್ಣೆ ಕತ್ತರಿಸುವದಕೆ ಹೋಗಿದ್ದನು. ಆದದರಿಂದ ರಾಹೇಲಳು ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು.
- 20ಆದರೆ ಯಾಕೋಬನು ತಾನು ಓಡಿ ಹೋಗುವದನ್ನು ಅರಾಮ್ಯನಾದ ಲಾಬಾನನಿಗೆ ತಿಳಿಸದೆ ಕಳ್ಳತನದಿಂದ ಹೋದನು.
- 21ಅವನು ತನಗಿದ್ದದ್ದನ್ನೆಲ್ಲಾ ತೆಗೆದು ಕೊಂಡು ಓಡಿಹೋದನು. ಅವನು ಎದ್ದು ಗಿಲ್ಯಾದ್ ಪರ್ವತಕ್ಕೆ ಅಭಿಮುಖನಾಗಿ ನದಿಯನ್ನು ದಾಟಿದನು.
Cross references
- 1 Samuel 19:13 1 ಸಮುವೇಲನು 19:13ತರುವಾಯ ವಿಾಕಲಳು ಒಂದು ಗೊಂಬೆಯನ್ನು ತೆಗೆದುಕೊಂಡು ಮಂಚದ ಮೇಲೆ ಮಲಗಿಸಿ ಅದರ ತಲೇ ಭಾಗದಲ್ಲಿ ಒಂದು ಹೋತದ ಉಣ್ಣೆಯ ತಲೆದಿಂಬನ್ನು ಹಾಕಿ ಅದನ್ನು ವಸ್ತ್ರದಿಂದ ಮುಚ್ಚಿದಳು.
- Genesis 31:30 ಆದಿಕಾಂಡ 31:30ಈಗ ನೀನು ನಿನ್ನ ತಂದೆಯ ಮನೆಯನ್ನು ಬಹಳವಾಗಿ ಆಶಿಸಿದ್ದರಿಂದ ಹೋಗಬೇಕಾಯಿತು. ಆದರೆ ನೀನು ನನ್ನ ದೇವರುಗಳನ್ನು ಕದ್ದದ್ದು ಯಾಕೆ ಅಂದನು.
- Hosea 3:4 ಹೋಶೇಯ 3:4ಇಸ್ರಾಯೇಲಿನ ಮಕ್ಕಳು ಬಹಳ ದಿವಸಗಳ ವರೆಗೆ ಅರಸನಿಲ್ಲದೆ ಪ್ರಧಾ ನನಿಲ್ಲದೆ ಬಲಿ ಇಲ್ಲದೆ ವಿಗ್ರಹವಿಲ್ಲದೆ ಎಫೋದ್ ಇಲ್ಲದೆ ವಿಗ್ರಹಗಳು ಇಲ್ಲದೆ ಇರುವರು.ಆಮೇಲೆ ಇಸ್ರಾಯೇಲಿನ ಮಕ್ಕಳು ತಿರುಗಿಕೊಂಡು ಅವರ ದೇವ ರಾದ ಕರ್ತನನ್ನು ಮತ್ತು ಅವರ ಅರಸನಾದ ದಾವೀದ ನನ್ನು ಹುಡುಕಿಕೊಂಡು ಅಂತ್ಯ ದಿವಸಗಳಲ್ಲಿ ಕರ್ತನನ್ನೂ ಆತನ ದಯೆಯನ್ನೂ ಭಯದಿಂದ ಮರೆಹೋಗುವರು.
- Genesis 35:2 ಆದಿಕಾಂಡ 35:2ಆಗ ಯಾಕೋಬನು ತನ್ನ ಮನೆಯವರಿಗೂ ತನ್ನ ಸಂಗಡ ಇದ್ದವರೆಲ್ಲರಿಗೂ--ನಿಮ್ಮ ಮಧ್ಯದಲ್ಲಿರುವ ಅನ್ಯದೇವ ರುಗಳನ್ನು ತೆಗೆದುಹಾಕಿ ಶುದ್ಧರಾಗಿರಿ; ನೀವು ನಿಮ್ಮ ಬಟ್ಟೆಗಳನ್ನು ಬದಲಾಯಿಸಿರಿ;
- Ezekiel 21:21 ಯೆಹೆಜ್ಕೇಲನು 21:21ಬಾಬೆಲಿನ ಅರಸನು ಮಾರ್ಗವು ಒಡೆಯುವ ಸ್ಥಳದಲ್ಲಿ (ಎರಡು ದಾರಿಯ ಮಗ್ಗುಲಲ್ಲಿ) ಶಕುನವನ್ನು ನೋಡುವದಕ್ಕೆ ನಿಂತಿದ್ದಾನೆ; ಬಾಣಗಳನ್ನು ಅಲ್ಲಾಡಿಸಿ ದನು; ಮೂರ್ತಿಗಳ ಹತ್ತಿರ ವಿಚಾರಿಸಿದನು. ಪಿತ್ತ ಚೀಲವನ್ನು ನೋಡಿದನು.
- Genesis 31:32 ಆದಿಕಾಂಡ 31:32ಆದರೆ ಯಾರ ಬಳಿಯಲ್ಲಿ ನಿನ್ನ ದೇವರುಗಳನ್ನು ಕಂಡುಕೊಳ್ಳುವಿಯೋ ಅವರು ಬದುಕದೆ ಇರಲಿ; ನನ್ನ ಬಳಿಯಲ್ಲಿ ನಿನ್ನದೇನಾದರೂ ಇದ್ದರೆ ನಮ್ಮ ಸಹೋದರರ ಮುಂದೆ ವಿಚಾರಿಸಿ ಅದನ್ನು ತೆಗೆದುಕೋ ಅಂದನು. ಆದರೆ ರಾಹೇಲಳು ಅವುಗಳನ್ನು ಕದ್ದು ಕೊಂಡದ್ದು ಯಾಕೋಬನಿಗೆ ತಿಳಿದಿರಲಿಲ್ಲ.
- Genesis 31:34 ಆದಿಕಾಂಡ 31:34ಆದರೆ ರಾಹೇಲಳು ವಿಗ್ರಹಗಳನ್ನು ತಕ್ಕೊಂಡು ಒಂಟೆಯ ಸಾಮಗ್ರಿಯಲ್ಲಿಟ್ಟು ಅದರ ಮೇಲೆ ಕೂತುಕೊಂಡಳು. ಲಾಬಾನನು ಗುಡಾರವನ್ನೆಲ್ಲಾ ಹುಡುಕಿದಾಗ್ಯೂ ಅವನು ಅವುಗಳನ್ನು ಕಂಡುಕೊಳ್ಳಲಿಲ್ಲ.
- Judges 17:4–5 ನ್ಯಾಯಸ್ಥಾಪಕರು 17:4–5ಆದರೆ ಅವನು ಆ ಹಣವನ್ನು ತನ್ನ ತಾಯಿಗೆ ತಿರಿಗಿ ಕೊಟ್ಟನು. ಆಗ ಅವನ ತಾಯಿ ಇನ್ನೂರು ಬೆಳ್ಳಿಯ ನಾಣ್ಯಗಳನ್ನು ತಕ್ಕೊಂಡು ಅಕ್ಕಸಾಲಿಗನ ಕೈಯಲ್ಲಿ ಕೊಟ್ಟಳು. ಅವನು ಅವುಗಳಿಂದ ಕೆತ್ತಿದ ವಿಗ್ರಹವನ್ನೂ ಎರಕದ ವಿಗ್ರಹ ವನ್ನೂ ಮಾಡಿದನು. ಅವು ವಿಾಕನ ಮನೆಯಲ್ಲಿದ್ದವು. ಈ ವಿಾಕ ಎಂಬ ಮನುಷ್ಯನಿಗೆ ದೇವರುಗಳ ಮನೆ ಇದ್ದದರಿಂದ ಅವನು ಒಂದು ಏಫೋದನ್ನೂ ಪ್ರತಿಮೆಗಳನ್ನೂ ಮಾಡಿ ತನ್ನ ಕುಮಾರರಲ್ಲಿ ಒಬ್ಬನನ್ನು ಪ್ರತಿಷ್ಠೆಮಾಡಿದನು. ಅವನು ಇವನಿಗೆ ಯಾಜಕ ನಾದನು.
- Judges 18:14–24 ನ್ಯಾಯಸ್ಥಾಪಕರು 18:14–24ಆಗ ಲಯಿಷಿನ ದೇಶವನ್ನು ಪಾಳತಿ ನೋಡಿಬಂದ ಆ ಐದು ಮಂದಿ ಮನುಷ್ಯರು ತಮ್ಮ ಸಹೋದರರರಿಗೆ ಉತ್ತರ ಕೊಟ್ಟುಈ ಮನೆಗಳಲ್ಲಿ ಏಫೋದೂ ಪ್ರತಿಮೆಗಳೂ ಕೆತ್ತಿದ ವಿಗ್ರಹವೂ ಎರಕದ ವಿಗ್ರಹವೂ ಉಂಟೆಂದು ನೀವು ಅರಿಯಿರಾ? ನೀವು ಈಗ ಮಾಡಬೇಕಾದದ್ದೇನೆಂದು ತಿಳುಕೊಳ್ಳಿರಿ ಅಂದರು. ಅವರು ಅಲ್ಲಿಗೆ ಹೋಗಿ ವಿಾಕನ ಮನೆಯಲ್ಲಿರುವ ಯೌವನಸ್ಥನಾದ ಲೇವಿ ಯನ ಬಳಿಗೆ ಬಂದು ಅವನನ್ನು ವಂದಿಸಿದರು. ಯುದ್ಧದ ಆಯುಧಗಳನ್ನು ಕಟ್ಟಿಕೊಂಡು ದಾನನ ಗೋತ್ರದವರಾದ ಆರುನೂರು ಮಂದಿಯು ಪ್ರವೇಶ ದ್ವಾರದಲ್ಲಿ ನಿಂತರು. ಆದರೆ ದೇಶವನ್ನು ಪಾಳತಿ ನೋಡಿ ಬಂದ ಆ ಐದು ಮಂದಿ ಹೋಗಿ ಒಳಗೆ ಹೊಕ್ಕು ಕೆತ್ತಿದ ವಿಗ್ರಹವನ್ನೂ ಏಫೋದನ್ನೂ ಪ್ರತಿಮೆ ಗಳನ್ನೂ ಎರಕದ ವಿಗ್ರಹವನ್ನೂ ತಕ್ಕೊಂಡರು. ಆಗ ಯಾಜಕನೂ ಯುದ್ಧದ ಆಯುಧಗಳನ್ನು ಕಟ್ಟಿಕೊಂಡ ಆರುನೂರು ಜನರೂ ಪ್ರವೇಶ ದ್ವಾರದಲ್ಲಿ ನಿಂತಿದ್ದರು. ಅವರು ವಿಾಕನ ಮನಗೆ ಬಂದು ಏಫೋದನ್ನೂ ಪ್ರತಿಮೆಗಳನ್ನೂ ಕೆತ್ತಿದ ವಿಗ್ರಹವನ್ನೂ ಎರಕದ ವಿಗ್ರಹ ವನ್ನೂ ತಕ್ಕೊಂಡಾಗ ಯಾಜಕನು ಅವರಿಗೆ--ನೀವು ಏನು ಮಾಡುತ್ತೀರಿ ಅಂದನು. ಅವರು ಅವನಿಗೆನೀನು ಸುಮ್ಮನೆ ಇರು; ನಿನ್ನ ಬಾಯಿಯ ಮೇಲೆ ನಿನ್ನ ಕೈಹಾಕಿಕೊಂಡು ನಮ್ಮ ಸಂಗಡ ಬಂದು ನಮಗೆ ತಂದೆಯಾಗಿಯೂ ಯಾಜಕನಾಗಿಯೂ ಇರು. ನೀನು ಒಬ್ಬನ ಮನೆಗೆ ಯಾಜಕನಾಗಿರುವದು ಒಳ್ಳೇದೋ ಅಥವಾ ಇಸ್ರಾಯೇಲಿನಲ್ಲಿ ಒಂದು ಗೋತ್ರಕ್ಕೂ ಒಂದು ಕುಟುಂಬಕ್ಕೂ ಯಾಜಕನಾಗಿರುವದು ಒಳ್ಳೇದೋ ಅಂದರು. ಆಗ ಯಾಜಕನ ಹೃದಯವು ಸಂತೋಷಪಟ್ಟದ್ದರಿಂದ ಅವನು ಏಫೋದನ್ನೂ ಪ್ರತಿ ಮೆಗಳನ್ನೂ ಕೆತ್ತಿದ ವಿಗ್ರಹವನ್ನೂ ತಕ್ಕೊಂಡು ಜನರ ಮಧ್ಯದಲ್ಲಿ ಹೋದನು. ಅವರು ತಿರುಗಿಕೊಂಡು ಹೊರಟು ಚಿಕ್ಕವರನ್ನೂ ಸಾಮಾನುಗಳನ್ನೂ ಪಶು ಗಳನ್ನೂ ತಮಗೆ ಮುಂದಾಗಿ ಕಳುಹಿಸಿದರು. ಅವರು ವಿಾಕನ ಮನೆಯಿಂದ ದೂರವಾಗಿ ಹೋದಾಗ ವಿಾಕನ ಮನೆಯ ಸುತ್ತಲೂ ನೆರೆಮನೆ ಗಳಲ್ಲಿರುವ ಮನುಷ್ಯರು ಕೂಡಿಕೊಂಡು ದಾನ್ಯರನ್ನು ಸಂಧಿಸಿ ಅವರನ್ನು ಕೂಗಿದರು; ಅವರು ತಮ್ಮ ಮುಖ ತಿರುಗಿಸಿ ವಿಾಕನಿಗೆ--ನೀನು ಗುಂಪನ್ನು ಕೂಡಿಸಿ ಬರುವುದಕ್ಕೆ ನಿನಗೆ ಏನಾಯಿತು ಅಂದರು. ಅವನು--ನಾನು ಮಾಡಿಕೊಂಡ ನನ್ನ ದೇವರು ಗಳನ್ನೂ ಯಾಜಕನನ್ನೂ ತಕ್ಕೊಂಡು ಹೋದಿರಿ; ಇನ್ನು ನನಗೆ ಏನದೆ? ನೀವು ನನ್ನನ್ನು--ನಿನಗೆ ಏನಾಯಿತೆಂದು ಕೇಳುವದೇನು? ಅಂದನು.
- Judges 18:31 ನ್ಯಾಯಸ್ಥಾಪಕರು 18:31ದೇವರ ಮನೆ ಶಿಲೋವಿ ನಲ್ಲಿ ಇರುವ ಮಟ್ಟಿಗೂ ವಿಾಕನು ಮಾಡಿದ ವಿಗ್ರಹ ವನ್ನು ಅವರು ಇಟ್ಟುಕೊಂಡಿದ್ದರು.
- Joshua 24:2 ಯೆಹೋಶುವ 24:2ಯೆಹೋಶುವನು ಎಲ್ಲಾ ಜನರಿಗೆ--ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ--ಪೂರ್ವ ದಲ್ಲಿ ನಿಮ್ಮ ತಂದೆಗಳು, ಅಬ್ರಹಾಮನೂ ನಾಹೋ ರನೂ ಅವರ ತಂದೆಯಾದ ತೆರಹನೂ ನದಿಯ ಆಚೆ ವಾಸವಾಗಿದ್ದು ಅನ್ಯದೇವರುಗಳನ್ನು ಆರಾಧಿಸುತ್ತಿದ್ದರು.