Judges · chapter 4 · verse 1
Judges 4:1 in Kannada
ಆದರೆ ಏಹೂದನು ಸತ್ತತರುವಾಯ ಇಸ್ರಾಯೇಲ್ ಮಕ್ಕಳು ತಿರಿಗಿ ಕರ್ತನ ದೃಷ್ಟಿಯಲ್ಲಿ ಕೆಟ್ಟತನಮಾಡಿದರು.
Aadare ehoodanu sattataruvaaya israayel makkalu tirigi kartana drushtiyalli kettatanamaadidaru.
Judges 4:1 in English
- King James Version (KJV)
- And the children of Israel again did evil in the sight of the LORD, when Ehud was dead.
- World English Bible (WEB)
- The children of Israel again did that which was evil in the LORD’s sight, when Ehud was dead.
- American Standard Version (ASV)
- And the children of Israel again did that which was evil in the sight of Jehovah, when Ehud was dead.
- Bible in Basic English (BBE)
- And the children of Israel again did evil in the eyes of the Lord when Ehud was dead.
- Darby Translation (DBY)
- And the children of Israel again did evil in the sight of Jehovah; now Ehud was dead.
- Webster's Bible (WBS)
- And the children of Israel again did evil in the sight of the LORD, after Ehud was dead.
- Young's Literal Translation (YLT)
- And the sons of Israel add to do the evil thing in the eyes of Jehovah when Ehud is dead,
Read in context
- 1ಆದರೆ ಏಹೂದನು ಸತ್ತತರುವಾಯ ಇಸ್ರಾಯೇಲ್ ಮಕ್ಕಳು ತಿರಿಗಿ ಕರ್ತನ ದೃಷ್ಟಿಯಲ್ಲಿ ಕೆಟ್ಟತನಮಾಡಿದರು.
- 2ಆದದರಿಂದ ಕರ್ತನು ಅವರನ್ನು ಹಾಚೋರಿನಲ್ಲಿ ಆಳುವ ಕಾನಾನಿನ ಅರಸನಾದ ಯಾಬೀನನ ಕೈಗೆ ಮಾರಿಬಿಟ್ಟನು. ಅವನ ಸೈನ್ಯಕ್ಕೆ ಜನಾಂಗಗಳ ಪಟ್ಟಣವಾದ ಹರೋಷೆತಿನಲ್ಲಿ ವಾಸವಾಗಿರುವ ಸೀಸೆರನು ಅಧಿಪತಿಯಾಗಿದ್ದನು.
- 3ಆಗ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಕೂಗಿದರು. ಯಾಕಂದರೆ ಅವನಿಗೆ ಒಂಭೈನೂರು ಕಬ್ಬಿಣದ ರಥಗಳಿ ದ್ದವು; ಅವನು ಇಸ್ರಾಯೇಲ್ ಮಕ್ಕಳನ್ನು ಇಪ್ಪತ್ತು ವರುಷ ಬಲವಾಗಿ ಬಾಧೆಪಡಿಸಿದನು.
Cross references
- Jeremiah 5:3 ಯೆರೆಮೀಯ 5:3ಓ ಕರ್ತನೇ, ನಿನ್ನ ಕಣ್ಣುಗಳು ಸತ್ಯದ ಮೇಲೆ ಇವೆಯ ಲ್ಲವೋ? ಅವರನ್ನು ಹೊಡೆದಿ, ಆದರೆ ಅವರಿಗೆ ದುಃಖವಾಗಲಿಲ್ಲ; ಅವರನ್ನು ಸಂಹರಿಸಿದಿ, ಆದರೆ ಶಿಕ್ಷೆ ಹೊಂದಲೊಲ್ಲದೆ ಇದ್ದರು; ತಮ್ಮ ಮುಖಗಳನ್ನು ಬಂಡೆಗಿಂತ ಕಠಿಣ ಮಾಡಿಕೊಂಡಿದ್ದಾರೆ; ಅವರು ಹಿಂತಿರುಗುವದಕ್ಕೆ ನಿರಾಕರಿಸಿದ್ದಾರೆ.
- Leviticus 26:23–25 ಯಾಜಕಕಾಂಡ 26:23–25ನನ್ನಿಂದಾಗುವ ಇವುಗಳಿಂದ ನೀವು ಶಿಕ್ಷಿತರಾಗದೆ ನನಗೆ ವಿರೋಧವಾಗಿ ನಡೆದರೆ ನಾನು ಸಹ ನಿಮಗೆ ವಿರೋಧವಾಗಿ ನಡೆದು ಇನ್ನೂ ಹೆಚ್ಚಾಗಿ ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ನಿಮ್ಮನ್ನು ಶಿಕ್ಷಿಸುವೆನು. ಒಡಂಬಡಿ ಕೆಯ ನಿಮಿತ್ತ ಮುಯ್ಯಿಗೆ ಮುಯ್ಯಿ ತೀರಿಸುವ ಕತ್ತಿಯನ್ನು ನಾನು ನಿಮ್ಮ ಮೇಲೆ ಬರಮಾಡುವೆನು. ನೀವು ನಿಮ್ಮ ಪಟ್ಟಣಗಳಲ್ಲಿ ಕೂಡಿಬಂದಾಗ ವ್ಯಾಧಿಯನ್ನು ನಿಮ್ಮೊಳಗೆ ಬರಮಾಡುವೆನು. ನೀವು ಶತ್ರುವಿನ ಕೈಗೆ ಒಪ್ಪಿಸಲ್ಪಡು ವಿರಿ.
- Judges 2:11 ನ್ಯಾಯಸ್ಥಾಪಕರು 2:11ಇಸ್ರಾಯೇಲ್ ಮಕ್ಕಳು ಕರ್ತನ ಮುಂದೆ ಕೆಟ್ಟತನ ಮಾಡಿ ಬಾಳನನ್ನು ಸೇವಿಸಿ
- Judges 2:19–20 ನ್ಯಾಯಸ್ಥಾಪಕರು 2:19–20ಆ ನ್ಯಾಯಾಧಿಪತಿ ಸತ್ತಾಗ ಅವರು ತಿರುಗಿ ಮಾರ್ಗ ತಪ್ಪಿ ಅನ್ಯದೇವರುಗಳನ್ನು ಹಿಂಬಾಲಿಸಿ ಅವುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದು ತಮ್ಮ ತಂದೆಗಳಿಗಿಂತ ಅಧಿಕವಾಗಿ ತಮ್ಮನ್ನು ಕೆಡಿಸಿಕೊಂಡು ತಮ್ಮ ಕೃತ್ಯಗಳನ್ನೂ ತಮ್ಮ ಕಾಠಿಣ್ಯದ ಮಾರ್ಗವನ್ನೂ ಬಿಡದೇ ಹೋದರು. ಆದದರಿಂದ ಕರ್ತನು ಇಸ್ರಾಯೇಲಿನ ಮೇಲೆ ಕೋಪದಿಂದ ಉರಿಗೊಂಡು--ನಾನು ಅವರ ತಂದೆ ಗಳಿಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನು ಈ ಜನಾಂಗವು ವಿಾರಿ ನನ್ನ ಮಾತನ್ನು ಕೇಳದೆ ಹೋದ ದರಿಂದ
- Judges 6:1 ನ್ಯಾಯಸ್ಥಾಪಕರು 6:1ಆದರೆ ಇಸ್ರಾಯೇಲ್ ಮಕ್ಕಳು ಕರ್ತನ ದೃಷ್ಟಿಯಲ್ಲಿ ಕೆಟ್ಟತನಮಾಡಿದರು; ಆದದ ರಿಂದ ಕರ್ತನು ಅವರನ್ನು ಏಳು ವರುಷ ಮಿದ್ಯಾನ್ಯರ ಕೈಗೆ ಒಪ್ಪಿಸಿಕೊಟ್ಟನು.
- Judges 3:7 ನ್ಯಾಯಸ್ಥಾಪಕರು 3:7ಇಸ್ರಾಯೇಲ್ ಮಕ್ಕಳು ಕರ್ತನ ಮುಂದೆ ಕೆಟ್ಟತನ ಮಾಡಿ ತಮ್ಮ ದೇವರಾದ ಕರ್ತನನ್ನು ಮರೆತು ಬಾಳ ನನ್ನೂ ತೋಪುಗಳನ್ನೂ ಸೇವಿಸಿದರು.
- Judges 3:12 ನ್ಯಾಯಸ್ಥಾಪಕರು 3:12ಇಸ್ರಾಯೇಲ್ ಮಕ್ಕಳು ಕರ್ತನ ಮುಂದೆ ತಿರಿಗಿ ಕೆಟ್ಟತನ ಮಾಡಿದರು. ಅವರು ಕರ್ತನ ಮುಂದೆ ಕೆಟ್ಟತನ ಮಾಡಿದ್ದರಿಂದ ಕರ್ತನು ಮೋವಾಬ್ಯರ ಅರಸನಾದ ಎಗ್ಲೋನನನ್ನು ಇಸ್ರಾಯೇಲಿಗೆ ವಿರೋಧವಾಗಿ ಬಲ ಪಡಿಸಿದನು.
- Judges 10:6 ನ್ಯಾಯಸ್ಥಾಪಕರು 10:6ಆದರೆ ಇಸ್ರಾಯೇಲ್ ಮಕ್ಕಳು ತಿರಿಗಿ ಕರ್ತನ ಮುಂದೆ ಕೆಟ್ಟತನಮಾಡಿ ಬಾಳನನ್ನೂ ಅಷ್ಟೋರೆತನ್ನೂ ಸಿರಿಯಾ ದೇಶದ ದೇವರುಗಳನ್ನೂ ಚೀದೋನಿನ ದೇವರುಗಳನ್ನೂ ಮೋವಾಬಿನ ದೇವರುಗಳನ್ನೂ ಅಮ್ಮೋನನ ಮಕ್ಕಳ ದೇವರುಗಳನ್ನೂ ಫಿಲಿಷ್ಟಿಯರ ದೇವರುಗಳನ್ನೂ ಸೇವಿಸುವವರಾಗಿ ಕರ್ತನನ್ನು ಸೇವಿ ಸದೆ ಆತನನ್ನು ಬಿಟ್ಟು ಹೋದರು.
- Psalm 106:43–45 ಕೀರ್ತನೆಗಳು 106:43–45ಬಹಳ ಸಾರಿ ಆತನು ಅವರನ್ನು ಬಿಡಿಸಿದನು; ಆದರೆ ಅವರು ತಮ್ಮ ಆಲೋಚನೆಯಿಂದ ಆತನಿಗೆ ಕೋಪವನ್ನೆಬ್ಬಿಸಿದರು. ತಮ್ಮ ಅಕ್ರಮದಿಂದ ಅವರು ಕುಗ್ಗಿಹೋದರು. ಆದಾಗ್ಯೂ ಅವರ ಕೂಗನ್ನು ಆತನು ಕೇಳಿದಾಗ ಅವರ ಇಕ್ಕಟ್ಟಿನ ಮೇಲೆ ಲಕ್ಷ್ಯವಿಟ್ಟು ಅವರಿಗಾಗಿ ತನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು ತನ್ನ ಅತಿಶಯವಾದ ಕರು ಣೆಯ ಪ್ರಕಾರ ಪಶ್ಚಾತ್ತಾಪಪಟ್ಟನು.
- Nehemiah 9:23–30 ನೆಹೆಮೀಯ 9:23–30ಇದಲ್ಲದೆ ಅವರ ಮಕ್ಕಳನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಿಸಿ ಅವರು ಸ್ವಾಧೀನಮಾಡಿಕೊಳ್ಳಲು ಹೋಗುವರೆಂದು ನೀನು ಅವರ ಪಿತೃಗ ಳಿಗೆ ವಾಗ್ದಾನಮಾಡಿದ ದೇಶದಲ್ಲಿ ಅವರನ್ನು ಬರಮಾಡಿದಿ; ಹೀಗೆ ಮಕ್ಕಳು ಪ್ರವೇಶಿಸಿ ದೇಶವನ್ನು ಸ್ವಾಧೀನಮಾಡಿಕೊಂಡರು. ನೀನು ಅವರ ಮುಂದೆ ದೇಶದ ನಿವಾಸಿಗಳಾದ ಕಾನಾನ್ಯರನ್ನು ಕುಗ್ಗಿಸಿ ಅವರಿಗೆ ತಮ್ಮ ಇಚ್ಛೆಯ ಪ್ರಕಾರ ಮಾಡುವದಕ್ಕೆ ಅವರನ್ನೂ ಅವರ ಅರಸುಗಳನ್ನೂ ದೇಶದ ಜನರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟಿ. ಅವರು ಬಲವಾದ ಪಟ್ಟಣ ಗಳನ್ನೂ ರಸವತ್ತಾದ ಭೂಮಿಯನ್ನೂ ತೆಗೆದುಕೊಂಡು ಸಮಸ್ತ ಉತ್ತಮವಾದವುಗಳಿಂದ ತುಂಬಿದ ಮನೆ ಗಳನ್ನೂ ತೋಡಿದ ಬಾವಿಗಳನ್ನೂ ದ್ರಾಕ್ಷೇ ತೋಟ ಗಳನ್ನೂ ಇಪ್ಪೇತೋಪುಗಳನ್ನೂ ಸಮೃದ್ಧಿಯಾದ ಹಣ್ಣಿನ ಮರಗಳನ್ನೂ ಬಹಳವಾಗಿ ಸ್ವಾಧೀನಮಾಡಿಕೊಂಡರು. ಹೀಗೆ ಅವರು ತಿಂದು ತೃಪ್ತಿಪಟ್ಟು ಪುಷ್ಟಿಯಾಗಿ ನಿನ್ನ ದೊಡ್ಡ ಉಪಕಾರದಲ್ಲಿ ಆನಂದಪಟ್ಟರು. ಆದಾಗ್ಯೂ ಅವರು ನಿನಗೆ ಅವಿಧೇಯರಾಗಿ, ವಿರೋಧವಾಗಿ, ನಿಂತು ತಿರುಗಿಬಿದ್ದು, ನಿನ್ನ ನ್ಯಾಯ ಪ್ರಮಾಣವನ್ನು ತಮ್ಮ ಬೆನ್ನಿನ ಹಿಂದಕ್ಕೆ ಬಿಸಾಡಿ, ಅವರು ನಿನ್ನ ಕಡೆಗೆ ತಿರುಗಬೇಕೆಂದು ಸಾಕ್ಷಿ ಹೇಳಿದ ನಿನ್ನ ಪ್ರವಾದಿಗಳನ್ನು ಕೊಂದು ಬಹು ಕೋಪೋದ್ರೇಕ ಗೊಳಿಸಿದರು. ಆದದರಿಂದ ನೀನು ಬಾಧಿಸುವ ವಿರೋಧಿಗಳ ಕೈಯಲ್ಲಿ ಅವರನ್ನು ಒಪ್ಪಿಸಿದಿ. ಆದರೆ ತಮ್ಮ ಇಕ್ಕಟ್ಟಿನ ಕಾಲದಲ್ಲಿ ಅವರು ನಿನ್ನನ್ನು ಕೂಗಿದಾಗ ನೀನು ಪರಲೋಕದಿಂದ ಕೇಳಿ, ನಿನ್ನ ಅಧಿಕವಾದ ಕರುಣೆಯ ಪ್ರಕಾರ ಅವರ ವೈರಿಗಳ ಕೈಯಿಂದ ರಕ್ಷಿಸುವದಕ್ಕೆ, ರಕ್ಷಕರನ್ನು ಅವರಿಗೆ ಕೊಟ್ಟಿ. ಆದರೆ ಅವರು ವಿಶ್ರಾಂತಿಯನ್ನು ಹೊಂದಿದ ತರುವಾಯ ನಿನ್ನ ಮುಂದೆ ಕೆಟ್ಟದ್ದನ್ನು ತಿರುಗಿ ಮಾಡಿದರು. ಆದ ಕಾರಣ ಅವರ ಶತ್ರುಗಳು ಅವರನ್ನು ಆಳುವ ಹಾಗೆ ಅವರ ಕೈಯಲ್ಲಿ ಅವರನ್ನು ಒಪ್ಪಿಸಿದಿ; ಆದರೆ ಅವರು ತಿರಿಗಿ ನಿನ್ನನ್ನು ಕೂಗಿದಾಗ ನೀನು ಆಕಾಶದಿಂದ ಕೇಳಿ ಅವರನ್ನು ನಿನ್ನ ಕರುಣೆಯ ಪ್ರಕಾರ ಅನೇಕ ಸಾರಿ ವಿಮೋಚನೆ ಮಾಡಿದಿ. ನೀನು ಅವರನ್ನು ನಿನ್ನ ನ್ಯಾಯಪ್ರಮಾಣಕ್ಕೆ ತಿರಿಗಿ ಬರುವ ಹಾಗೆ ಅವರಿಗೆ ವಿರೋಧವಾಗಿ ಸಾಕ್ಷಿ ಹೇಳಿದಿ. ಆದರೆ ಅವರು ಗರ್ವಪಟ್ಟು ನಿನ್ನ ಆಜ್ಞೆಗಳನ್ನು ಕೇಳದೆ ಮನುಷ್ಯರು ಯಾವವುಗಳನ್ನು ಕೈಕೊಳ್ಳುವದರಿಂದ ಬದುಕುವರೋ ಆ ನಿನ್ನ ನ್ಯಾಯಗಳಿಗೆ ವಿರೋಧವಾಗಿ ಪಾಪಮಾಡಿಹೆಗಲುಕೊಡದೆ ಕುತ್ತಿಗೆಯನ್ನು ಕಠಿಣಪಡಿಸಿಕೊಂಡು ಕೇಳದೆಹೋದರು. ನೀನು ಅನೇಕ ವರುಷ ಅವರನ್ನು ತಾಳಿಕೊಂಡಿದ್ದು ನಿನ್ನ ಪ್ರವಾದಿಗಳ ಮುಖಾಂತರ ನಿನ್ನ ಆತ್ಮನಿಂದ ಅವರಿಗೆ ವಿರೋಧವಾಗಿ ಸಾಕ್ಷಿಹೇಳಿದಿ. ಆದರೆ ಅವರು ಕಿವಿಗೊಡದೆ ಇದ್ದದ್ದರಿಂದ ನೀನು ಅವರನ್ನು ದೇಶಗಳ ಜನರ ಕೈಯಲ್ಲಿ ಒಪ್ಪಿಸಿದಿ.