Lamentations · chapter 1 · verse 19
Lamentations 1:19 in Kannada
ನಾನು ನನ್ನ ಪ್ರಿಯರನ್ನು ಕರೆದೆನು, ಆದರೆ ಅವರು ನನ್ನನ್ನು ಮೋಸಗೊಳಿಸಿದರು; ನನ್ನ ಯಾಜಕರೂ ಹಿರಿ ಯರೂ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವದಕ್ಕೆ ರೊಟ್ಟಿ ಯನ್ನು ಹುಡುಕುತ್ತಾ ನಗರದಲ್ಲಿ ಸತ್ತುಹೋದರು.
Naanu nanna priyarannu karedenu, aadare avaru nannannu mosagolisidaru; nanna yaajakaroo hiri yaroo tamma praanavannu ulisikolluvadakke rotti yannu hudukuttaa nagaradalli sattuhodaru.
Lamentations 1:19 in English
- King James Version (KJV)
- I called for my lovers, [but] they deceived me: my priests and mine elders gave up the ghost in the city, while they sought their meat to relieve their souls.
- World English Bible (WEB)
- “I called for my lovers, but they deceived me. My priests and my elders gave up the spirit in the city, while they sought food for themselves to refresh their souls.
- American Standard Version (ASV)
- I called for my lovers, [but] they deceived me: My priests and mine elders gave up the ghost in the city, While they sought them food to refresh their souls.
- Bible in Basic English (BBE)
- I sent for my lovers, but they were false to me: my priests and my responsible men were breathing their last breath in the town, while they were looking for food to give them new life.
- Darby Translation (DBY)
- I called for my lovers, they have deceived me; my priests and mine elders have expired in the city, while they sought them food to revive their soul.
- Webster's Bible (WBS)
- I called for my lovers, [but] they deceived me: my priests and my elders resigned their breath in the city, while they sought their food to relieve their souls.
- Young's Literal Translation (YLT)
- I called for my lovers, they — they have deceived me, My priests and my elders in the city have expired; When they have sought food for themselves, Then they give back their soul.
Read in context
- 17ಚೀಯೋನ್ ತನ್ನ ಕೈಗಳನ್ನು ಚಾಚುತ್ತಾಳೆ; ಅಲ್ಲಿ ಅವಳನ್ನು ಆದರಿಸುವವನು ಒಬ್ಬನೂ ಇಲ್ಲ; ಯಾಕೋಬಿಗೆ ಸಂಬಂಧಿಸಿದ ಅವನ ವೈರಿಗಳು ಅವನ ಸುತ್ತಲೂ ಇರಬೇಕೆಂದು ಕರ್ತನು ಆಜ್ಞಾಪಿಸಿದ್ದಾನೆ. ಯೆರೂಸಲೇಮು ಅವರ ಮದ್ಯದಲ್ಲಿ ಮುಟ್ಟಾದ ಹೆಂಗಸಿನ ಹಾಗೆ ಇದೆ.
- 18ಕರ್ತನು ನೀತಿವಂತನು, ನಾನು ಆತನ ಆಜ್ಞೆಗೆ ವಿರುದ್ಧವಾಗಿ ತಿರುಗಿಬಿದ್ದಿದ್ದೇನೆ; ಎಲ್ಲಾ ಜನರೇ, ಕೇಳಿರಿ, ನಾನು ನಿಮ್ಮನ್ನು ಕೇಳಿ ಕೊಳ್ಳುತ್ತೇನೆ; ನನ್ನ ದುಃಖವನ್ನು ನೋಡಿರಿ, ನನ್ನ ಕನ್ಯೆಯರೂ ನನ್ನ ಯೌವನಸ್ಥರೂ ಸೆರೆಗೆ ಹೋಗಿದ್ದಾರೆ.
- 19ನಾನು ನನ್ನ ಪ್ರಿಯರನ್ನು ಕರೆದೆನು, ಆದರೆ ಅವರು ನನ್ನನ್ನು ಮೋಸಗೊಳಿಸಿದರು; ನನ್ನ ಯಾಜಕರೂ ಹಿರಿ ಯರೂ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವದಕ್ಕೆ ರೊಟ್ಟಿ ಯನ್ನು ಹುಡುಕುತ್ತಾ ನಗರದಲ್ಲಿ ಸತ್ತುಹೋದರು.
- 20ಓ ಕರ್ತನೇ, ನೋಡು; ನಾನು ಇಕ್ಕಟ್ಟಿನಲ್ಲಿದ್ದೇನೆ. ನನ್ನ ಕರುಳುಗಳು ನನ್ನ ಹೃದಯವು ಮಗಚಿಕೊಂಡಿದೆ. ನಾನು ಘೋರವಾಗಿ ತಿರುಗಿಬಿದ್ದಿದ್ದೇನೆ. ಹೊರಗೆ ಕತ್ತಿ ಯಿಂದ ಸಂಹಾರ, ಮನೆಯೊಳಗೆ ಮರಣ.
- 21ನಾನು ನಿಟ್ಟುಸಿರಿಡುವದನ್ನು ಅವರು ಕೇಳಿದರೂ ನನ್ನನ್ನು ಆದರಿ ಸಲು ಯಾರೂ ಅಲ್ಲಿರಲಿಲ್ಲ; ನನ್ನ ಶತ್ರುಗಳೆಲ್ಲಾ ನನ್ನ ಕಷ್ಟದ ವಿಷಯವನ್ನು ಕೇಳಿದರು; ನೀನು ಹಾಗೆ ಮಾಡಿದೆಯೆಂದು ಅವರು ಸಂತೋಷಪಟ್ಟರು. ನೀನು ತಿಳಿಸಿದ ಆ ದಿನವು ಬರಲು ಅವರು ನನ್ನ ಹಾಗೆಯೇ ಆಗುವರು.ಅವರ ಕೆಡುಕೆಲ್ಲಾ ನಿನ್ನ ಮುಂದೆ ಬರಲಿ; ನನ್ನ ಎಲ್ಲಾ ದ್ರೋಹಗಳ ನಿಮಿತ್ತ ನೀನು ನನಗೆ ಮಾಡಿದ ಪ್ರಕಾರವೇ ಅವರಿಗೆ ಮಾಡು; ನನ್ನ ನಿಟ್ಟು ಸಿರುಗಳು ಅನೇಕವಾಗಿವೆ; ನನ್ನ ಹೃದಯವು ಕುಂದಿದೆ.
Cross references
- Lamentations 1:11 ಪ್ರಲಾಪಗಳು 1:11ಅವಳ ಜನರೆಲ್ಲಾ ನಿಟ್ಟುಸಿರು ಬಿಡುತ್ತಾರೆ. ಅವರು ರೊಟ್ಟಿಯನ್ನು ಹುಡುಕುತ್ತಾರೆ. ಅವರು ಪ್ರಾಣವನ್ನು ಉಳಿಸಿಕೊಳ್ಳಲು ತಮ್ಮ ರಮ್ಯವಾದವುಗಳನ್ನು ಆಹಾರ ಕ್ಕಾಗಿ ಕೊಟ್ಟಿದ್ದಾರೆ. ಓ ಕರ್ತನೇ, ನೋಡು, ಲಕ್ಷಿಸು; ನಾನು ಭ್ರಷ್ಠಳಾದೆನು.
- Lamentations 1:2 ಪ್ರಲಾಪಗಳು 1:2ಅವಳು ರಾತ್ರಿಯಲ್ಲಿ ಯಾತನೆಗೊಂಡು ಅಳುತ್ತಾಳೆ. ಆಕೆಯ ಕಣ್ಣೀರು ಕೆನ್ನೆಗಳ ಮೇಲಿದೆ; ಎಲ್ಲಾ ಪ್ರಿಯರಲ್ಲಿ ಆಕೆಯನ್ನು ಆದರಿಸುವವನು ಒಬ್ಬನೂ ಇಲ್ಲ. ಆಕೆಯ ಸ್ನೇಹಿತರೆಲ್ಲರೂ ವಂಚನೆಮಾಡಿ ಶತ್ರುಗಳಾದರು.
- Lamentations 2:20 ಪ್ರಲಾಪಗಳು 2:20ಓ ಕರ್ತನೇ, ನೋಡು, ನೀನು ಇದನ್ನು ಯಾರಿಗೆ ಮಾಡಿದಿಯೋ ಯೋಚಿಸು. ಸ್ತ್ರೀಯರು ತಮ್ಮ ಫಲವಾದ ಗೇಣುದ್ದದ ಕೂಸುಗಳನ್ನು ತಿನ್ನಬೇಕೇ? ಯಾಜಕನು ಪ್ರವಾದಿಯು ಕರ್ತನ ಪರಿಶುದ್ಧ ಸ್ಥಳದಲ್ಲಿ ಕೊಲ್ಲಲ್ಪಡಬೇಕೋ?
- Job 19:13–19 ಯೋಬನು 19:13–19ನನ್ನ ಸಹೋದರರನ್ನು ನನಗೆ ದೂರ ಮಾಡು ತ್ತಾನೆ; ನನ್ನ ಪರಿಚಯದ ಸ್ನೇಹಿತರು ನನಗೆ ಅನ್ಯರೇ ಆದರು. ನನ್ನ ನೆರೆಯವರು ತಡೆಯುತ್ತಾರೆ; ನನ್ನ ಪರಿಚಯದ ಸ್ನೇಹಿತರು ನನ್ನನ್ನು ಮರೆತ್ತಿದ್ದಾರೆ. ನನ್ನ ಮನೆಯಲ್ಲಿ ತಂಗುವವರೂ ನನ್ನ ದಾಸಿಗಳೂ ನನ್ನನ್ನೂ ಪರನೆಂದು ಎಣಿಸುತ್ತಾರೆ; ಅವರ ದೃಷ್ಟಿಯಲ್ಲಿ ನಾನು ಪರದೇಶದವನ ಹಾಗೆ ಇದ್ದೇನೆ. ನನ್ನ ಸೇವಕನನ್ನು ಕರೆದರೆ, ಅವನು ನನಗೆ ಉತ್ತರ ಕೊಡುವದಿಲ್ಲ; ನನ್ನ ಬಾಯಿಯಿಂದ ಅವನನ್ನು ಬೇಡಿಕೊಳ್ಳಬೇಕಾ ಯಿತು. ನನ್ನ ಶ್ವಾಸವು ನನ್ನ ಹೆಂಡತಿಗೆ ತಿಳಿಯದ್ದಾಗಿದೆ; ನನ್ನ ಹೊಟ್ಟೆಯ ಮಕ್ಕಳನ್ನು ಬೇಡುತ್ತೇನೆ. ಬಾಲಕರು ಸಹ ನನ್ನನ್ನು ತಿರಸ್ಕರಿಸುತ್ತಾರೆ; ನಾನು ಎದ್ದರೆ ನನಗೆ ಎದುರು ಮಾತಾಡುತ್ತಾರೆ. ನನ್ನ ಆಪ್ತ ಸ್ನೇಹಿತರೆಲ್ಲಾ ನನ್ನನ್ನು ಅಸಹ್ಯಿಸುತ್ತಾರೆ; ನಾನು ಪ್ರೀತಿಮಾಡಿದವರೇ ನನಗೆ ವಿರೋಧವಾಗಿ ತಿರುಗಿ ದ್ದಾರೆ.
- Jeremiah 2:28 ಯೆರೆಮೀಯ 2:28ಆದರೆ ನೀನು ನಿನಗೋಸ್ಕರ ಮಾಡಿಕೊಂಡ ನಿನ್ನ ದೇವರುಗಳು ಎಲ್ಲಿ? ನಿನ್ನ ಕಷ್ಟ ಕಾಲದಲ್ಲಿ ನಿನ್ನನ್ನು ರಕ್ಷಿಸಲು ಸಾಧ್ಯವಾದರೆ ಅವರೇ ಏಳಲಿ, ಯಾಕಂದರೆ ಓ ಯೆಹೂದವೇ, ನಿನ್ನ ಪಟ್ಟಣಗಳ ಲೆಕ್ಕದ ಹಾಗೆ ನಿನ್ನ ದೇವರುಗಳು ಇದ್ದಾರೆ.
- Jeremiah 30:14 ಯೆರೆಮೀಯ 30:14ನಿನ್ನನ್ನು ಪ್ರೀತಿ ಮಾಡುವವರೆಲ್ಲರು ನಿನ್ನನ್ನು ಮರೆತುಬಿಟ್ಟಿದ್ದಾರೆ, ನಿನ್ನನ್ನು ಹುಡುಕುವದಿಲ್ಲ; ನಿನ್ನ ಅಕ್ರಮಗಳು ಬಹಳವೂ ನಿನ್ನ ಪಾಪಗಳು ಪ್ರಬಲವೂ ಆಗಿರುವದರಿಂದ ಶತ್ರುವಿನ ಗಾಯದಿಂದಲೂ ಕ್ರೂರನ ಶಿಕ್ಷೆಯಿಂದಲೂ ನಾನು ನಿನ್ನನ್ನು ಗಾಯಪಡಿಸಿದ್ದೇನೆ.
- Lamentations 5:12 ಪ್ರಲಾಪಗಳು 5:12ಪ್ರಭುಗಳು ಅವರ ಕೈಯಿಂದ ಗಲ್ಲಿಗೇರಿಸಲ್ಪಟ್ಟರು; ಹಿರಿಯರ ಮುಖಗಳು ಗೌರವಿ ಸಲ್ಪಡಲಿಲ್ಲ.
- Jeremiah 23:11–15 ಯೆರೆಮೀಯ 23:11–15ಪ್ರವಾದಿಯೂ ಯಾಜಕನೂ ಕೂಡ ಭ್ರಷ್ಟರೇ; ಹೌದು, ನನ್ನ ಆಲಯದಲ್ಲಿ ಅವರ ಕೆಟ್ಟತನವನ್ನು ಕಂಡಿದ್ದೇನೆಂದು ಕರ್ತನು ಅನ್ನುತ್ತಾನೆ. ಆದದರಿಂದ ಅವರ ಮಾರ್ಗವು ಕತ್ತಲೆಯಲ್ಲಿರುವ ಜಾರುವ ಸ್ಥಳಗಳ ಹಾಗೆ ಅವರಿಗಿರುವದು; ಅವರು ತಳ್ಳಲ್ಪಟ್ಟು ಬೀಳುವರು; ಕೇಡನ್ನು, ಅವರ ವಿಚಾರಣೆಯ ವರುಷವನ್ನು ಅವರ ಮೇಲೆ ಬರಮಾಡುವೆನೆಂದು ಕರ್ತನು ಅನ್ನುತ್ತಾನೆ. ಸಮಾರ್ಯದ ಪ್ರವಾದಿಗಳಲ್ಲಿ ಬುದ್ಧಿಹೀನತೆಯನ್ನು ನೋಡಿದ್ದೇನೆ; ಅವರು ಬಾಳನಿಂದ ಪ್ರವಾದನೆಯನ್ನು ಕೇಳಿ ನನ್ನ ಜನರಾದ ಇಸ್ರಾಯೇ ಲನ್ನು ತಪ್ಪುವಂತೆ ಮಾಡಿದ್ದಾರೆ. ಯೆರೂಸಲೇಮಿನ ಪ್ರವಾದಿಗಳಲ್ಲಿ ಭಯಂಕರವಾದದ್ದನ್ನು ನೋಡಿದ್ದೇನೆ; ಅವರು ವ್ಯಭಿಚಾರಮಾಡಿ ಸುಳ್ಳಿನಲ್ಲಿ ನಡಕೊಂಡದ್ದ ಲ್ಲದೆ ದುಷ್ಟರು ತಮ್ಮ ದುಷ್ಟತ್ವವನ್ನು ಬಿಟ್ಟು ತಿರುಗದ ಹಾಗೆ ಅವರ ಕೈಗಳನ್ನು ಬಲಪಡಿಸುತ್ತಾರೆ; ಅವರೆಲ್ಲರೂ ನನಗೆ ಸೊದೋಮಿನ ಹಾಗೆಯೂ ಅದರ ನಿವಾಸಿಗಳು ಗೊಮೋರದ ಹಾಗೆಯೂ ಇದ್ದಾರೆ. ಆದದರಿಂದ ಸೈನ್ಯಗಳ ಕರ್ತನು ಪ್ರವಾದಿಗಳ ವಿಷಯದಲ್ಲಿ ಹೇಳುವದೇನಂದರೆ--ಇಗೋ, ನಾನು ಅವರಿಗೆ ಮಾಚಿಪತ್ರೆಯನ್ನು ತಿನ್ನುವದಕ್ಕೆ ಕೊಡುತ್ತೇನೆ ವಿಷದ ನೀರನ್ನು ಕುಡಿಯಕೊಡುತ್ತೇನೆ; ಯೆರೂಸಲೇ ಮಿನ ಪ್ರವಾದಿಗಳ ಕಡೆಯಿಂದ ಭ್ರಷ್ಟತ್ವವು ದೇಶಕ್ಕೆಲ್ಲಾ ಹರಡಿದೆ.
- Jeremiah 37:7–9 ಯೆರೆಮೀಯ 37:7–9ನನ್ನ ಬಳಿಯಲ್ಲಿ ವಿಚಾರಿಸುವದಕ್ಕೆ ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದೇನಂದರೆ--ಇಗೋ, ನಿಮ್ಮ ಸಹಾಯಕ್ಕೆ ಹೊರಟ ಫರೋಹನ ಸೈನ್ಯವು ಅದರ ಸ್ವದೇಶವಾದ ಐಗುಪ್ತಕ್ಕೆ ಹಿಂತಿರುಗುವದು. ಕಸ್ದೀಯರು ತಿರುಗಿಕೊಂಡು ಈ ಪಟ್ಟಣಕ್ಕೆ ವಿರೋಧ ವಾಗಿ ಯುದ್ಧಮಾಡಿ ಅದನ್ನು ಹಿಡಿದು ಬೆಂಕಿಯಿಂದ ಸುಡುವರು. ಕರ್ತನು ಹೀಗೆ ಹೇಳುತ್ತಾನೆ--ಕಸ್ದೀ ಯರು ನಿಜವಾಗಿ ನಮ್ಮನ್ನು ಬಿಟ್ಟುಹೋಗುವರೆಂದು ನಿಮಗೆ ನೀವೇ ಮೋಸಪಡಿಸಿಕೊಳ್ಳಬೇಡಿರಿ; ಅವರು ತೊಲಗುವದೇ ಇಲ್ಲ.
- Jeremiah 14:15–18 ಯೆರೆಮೀಯ 14:15–18ಆದದರಿಂದ ಕರ್ತನು ತಾನು ಕಳುಹಿಸದೆ ತನ್ನ ಹೆಸರಿನಲ್ಲಿ ಪ್ರವಾದಿಸುವಂಥ ಮತ್ತು ಈ ದೇಶದಲ್ಲಿ ಕತ್ತಿಯೂ ಬರವೂ ಇರುವದಿಲ್ಲವೆಂದು ಹೇಳುವಂಥ ಪ್ರವಾದಿಗಳನ್ನು ಕುರಿತು ಹೇಳುವದೇನಂದರೆ--ಕತ್ತಿ ಯಿಂದಲೂ ಕ್ಷಾಮದಿಂದಲೂ ಆ ಪ್ರವಾದಿಗಳು ತಾವೇ ನಿರ್ಮೂಲವಾಗುತ್ತಾರೆ. ಅವರ ಪ್ರವಾದನೆಯನು ಕೇಳುವ ಜನರು ಕ್ಷಾಮದ ಮತ್ತು ಕತ್ತಿಯ ನಿಮಿತ್ತ ಯೆರೂಸಲೇಮಿನ ಬೀದಿಗಳಲ್ಲಿ ಬಿಸಾಡಲ್ಪಡುವರು; ಅವರನ್ನೂ ಹೆಂಡತಿಯರನ್ನೂ ಕುಮಾರರನ್ನೂ ಕುಮಾರ್ತೆಯರನ್ನೂ ಹೂಣಿಡುವದಕ್ಕೆ ಯಾರೂ ಇರು ವದಿಲ್ಲ; ನಾನು ಅವರ ಕೆಟ್ಟತನವನ್ನು ಅವರ ಮೇಲೆ ಹೊಯಿದು ಬಿಡುವೆನು. ಆದದರಿಂದ ನೀನು ಈ ಮಾತನ್ನು ಅವರಿಗೆ ಹೇಳಬೇಕು--ನನ್ನ ಕಣ್ಣುಗಳು ರಾತ್ರಿ ಹಗಲು ಬಿಡದೆ ಕಣ್ಣೀರು ಸುರಿಸಲಿ; ಯಾಕಂದರೆ ನನ್ನ ಜನರ ಮಗಳಾದ ಕನ್ಯೆಯು ಕ್ರೂರವಾದ ದೊಡ್ಡ ಏಟಿನಿಂದಲೂ ಪೆಟ್ಟಿನಿಂದಲೂ ಮುರಿಯಲ್ಪಟ್ಟಳು. ನಾನು ಹೊಲಕ್ಕೆ ಹೋದರೆ, ಇಗೋ, ಕತ್ತಿಯಿಂದ ಕೊಲ್ಲಲ್ಪಟ್ಟವರು ಪಟ್ಟಣದಲ್ಲಿ ಪ್ರವೇಶಿಸಿದರೆ, ಇಗೋ, ಕ್ಷಾಮದಿಂದ ರೋಗದಲ್ಲಿ ಬಿದ್ದವರು. ಹೌದು, ಪ್ರವಾದಿಯೂ ಯಾಜಕನೂ ತಮಗೆ ತಿಳಿಯದ ದೇಶಕ್ಕೆ ಸಂಚಾರ ಮಾಡುವರು.
- Lamentations 4:7–9 ಪ್ರಲಾಪಗಳು 4:7–9ಅವಳ ನಜರೀಯರು ಹಿಮಕ್ಕಿಂತಲೂ ಸ್ವಚ್ಛವಾಗಿದ್ದರು, ಹಾಲಿಗಿಂತಲೂ ಬೆಳ್ಳಗಿದ್ದರು, ಅವರು ಮೈ ಕಟ್ಟಿನಲ್ಲಿ ಹವಳಕ್ಕಿಂತಲೂ ಕೆಂಪಾಗಿದ್ದರು; ಅವರ ಹೊಳಪು ಇಂದ್ರನೀಲಮಣಿಯ ಹಾಗಿತ್ತು. ಈಗ ಅವರ ರೂಪವು ಕಲ್ಲಿದ್ದಲಿಗಿಂತ ಕಪ್ಪಾಗಿದೆ, ಬೀದಿಗಳಲ್ಲಿ ಅವರು ಯಾರೆಂಬದು ತಿಳಿಯಲಿಲ್ಲ; ಅವರ ಚರ್ಮವು ಅವರ ಎಲುಬುಗಳಿಗೆ ಹತ್ತಿಕೊಂಡಿದೆ, ಅದು ಒಣಗಿ ಕಡ್ಡಿಯ ಹಾಗೆ ಆಗಿದೆ. ಕತ್ತಿಯಿಂದ ಹತರಾದವರು ಹಸಿವೆ ಯಿಂದ ಹತರಾದವರಿಗಿಂತ ಲೇಸು, ಇವರು ಭೂಫಲ ಗಳಿಲ್ಲದೆ ಕ್ಷಾಮದಿಂದ ತಿವಿಯಲ್ಪಟ್ಟು ಕ್ಷೀಣಿಸಿ ಹೋಗುತ್ತಾರೆ.
- Lamentations 4:17 ಪ್ರಲಾಪಗಳು 4:17ನಮಗಾದರೋ ನಮ್ಮ ಕಣ್ಣುಗಳು ನಮ್ಮ ವ್ಯರ್ಥವಾದ ಸಹಾಯಕ್ಕಾಗಿ ನೋಡಿ ಸೋತು ಹೋದವು; ನಮ್ಮ ಕಣ್ಣುಗಳು ನಮ್ಮನ್ನು ರಕ್ಷಿಸಲಾರದಂಥ ಜನಾಂಗಕ್ಕಾಗಿ ಕಾವಲಾಗಿದ್ದವು.