Lamentations · chapter 1 · verse 17
Lamentations 1:17 in Kannada
ಚೀಯೋನ್ ತನ್ನ ಕೈಗಳನ್ನು ಚಾಚುತ್ತಾಳೆ; ಅಲ್ಲಿ ಅವಳನ್ನು ಆದರಿಸುವವನು ಒಬ್ಬನೂ ಇಲ್ಲ; ಯಾಕೋಬಿಗೆ ಸಂಬಂಧಿಸಿದ ಅವನ ವೈರಿಗಳು ಅವನ ಸುತ್ತಲೂ ಇರಬೇಕೆಂದು ಕರ್ತನು ಆಜ್ಞಾಪಿಸಿದ್ದಾನೆ. ಯೆರೂಸಲೇಮು ಅವರ ಮದ್ಯದಲ್ಲಿ ಮುಟ್ಟಾದ ಹೆಂಗಸಿನ ಹಾಗೆ ಇದೆ.
Cheeyon tanna kaigalannu chaachuttaale; alli avalannu aadarisuvavanu obbanoo illa; yaakobige sambandhisida avana vairigalu avana suttaloo irabekendu kartanu aajnyaapisiddaane. Yeroosalemu avara madyadalli muttaada hengasina haage ide.
Lamentations 1:17 in English
- King James Version (KJV)
- Zion spreadeth forth her hands, [and there is] none to comfort her: the LORD hath commanded concerning Jacob, [that] his adversaries [should be] round about him: Jerusalem is as a menstruous woman among them.
- World English Bible (WEB)
- Zion spreads out her hands. There is no one to comfort her. The LORD has commanded concerning Jacob, that those who are around him should be his adversaries. Jerusalem is among them as an unclean thing.
- American Standard Version (ASV)
- Zion spreadeth forth her hands; there is none to comfort her; Jehovah hath commanded concerning Jacob, that they that are round about him should be his adversaries: Jerusalem is among them as an unclean thing.
- Bible in Basic English (BBE)
- Zion's hands are outstretched; she has no comforter; the Lord has given orders to the attackers of Jacob round about him: Jerusalem has become like an unclean thing among them.
- Darby Translation (DBY)
- Zion spreadeth forth her hands; there is none to comfort her; Jehovah hath commanded concerning Jacob, [that] his adversaries [should be] round about him; Jerusalem is as an impurity among them.
- Webster's Bible (WBS)
- Zion spreadeth forth her hands, [and there is] none to comfort her: the LORD hath commanded concerning Jacob, [that] his adversaries [should be] around him: Jerusalem is as a menstruous woman among them.
- Young's Literal Translation (YLT)
- Spread forth hath Zion her hands, There is no comforter for her, Jehovah hath charged concerning Jacob, His neighbours [are] his adversaries, Jerusalem hath become impure among them.
Read in context
- 15ಕರ್ತನು ನನ್ನ ಎದುರಿನಲ್ಲಿ ನನ್ನ ಪರಾಕ್ರಮಶಾಲಿಗಳನ್ನೆಲ್ಲಾ ಕಾಲಿನ ಕೆಳಗೆ ತುಳಿದುಬಿಟ್ಟಿದ್ದಾನೆ; ಆತನು ನನ್ನ ಯೌವನಸ್ಥರನ್ನು ಜಜ್ಜಲು ನನಗೆ ವಿರುದ್ಧವಾಗಿ ಸಭೆಯನ್ನು ಕರೆದಿದ್ದಾನೆ; ಕರ್ತನು ಯೆಹೂದದ ಮಗಳಾದ ಕನ್ಯೆಯನ್ನು ದ್ರಾಕ್ಷೆಯ ತೊಟ್ಟಿಯಂತೆ ತುಳಿದಿದ್ದಾನೆ.
- 16ಇವುಗಳ ನಿಮಿತ್ತ ನಾನು ಅಳುತ್ತೇನೆ; ಕಣ್ಣೀರು ಧಾರೆಧಾರೆಯಾಗಿ ಸುರಿಯುವದು, ನನ್ನನ್ನು ಆದರಿಸುವಾತನೂ ನನ್ನ ಪ್ರಾಣವನ್ನು ಬದುಕಿಸುವ ಆದರಿಕನೂ ನನ್ನಿಂದ ದೂರವಾಗಿದ್ದಾನೆ; ನನ್ನ ಮಕ್ಕಳು ಹಾಳಾಗಿದ್ದಾರೆ, ನನ್ನ ಶತ್ರುವು ಗೆದ್ದಿದ್ದಾನೆ.
- 17ಚೀಯೋನ್ ತನ್ನ ಕೈಗಳನ್ನು ಚಾಚುತ್ತಾಳೆ; ಅಲ್ಲಿ ಅವಳನ್ನು ಆದರಿಸುವವನು ಒಬ್ಬನೂ ಇಲ್ಲ; ಯಾಕೋಬಿಗೆ ಸಂಬಂಧಿಸಿದ ಅವನ ವೈರಿಗಳು ಅವನ ಸುತ್ತಲೂ ಇರಬೇಕೆಂದು ಕರ್ತನು ಆಜ್ಞಾಪಿಸಿದ್ದಾನೆ. ಯೆರೂಸಲೇಮು ಅವರ ಮದ್ಯದಲ್ಲಿ ಮುಟ್ಟಾದ ಹೆಂಗಸಿನ ಹಾಗೆ ಇದೆ.
- 18ಕರ್ತನು ನೀತಿವಂತನು, ನಾನು ಆತನ ಆಜ್ಞೆಗೆ ವಿರುದ್ಧವಾಗಿ ತಿರುಗಿಬಿದ್ದಿದ್ದೇನೆ; ಎಲ್ಲಾ ಜನರೇ, ಕೇಳಿರಿ, ನಾನು ನಿಮ್ಮನ್ನು ಕೇಳಿ ಕೊಳ್ಳುತ್ತೇನೆ; ನನ್ನ ದುಃಖವನ್ನು ನೋಡಿರಿ, ನನ್ನ ಕನ್ಯೆಯರೂ ನನ್ನ ಯೌವನಸ್ಥರೂ ಸೆರೆಗೆ ಹೋಗಿದ್ದಾರೆ.
- 19ನಾನು ನನ್ನ ಪ್ರಿಯರನ್ನು ಕರೆದೆನು, ಆದರೆ ಅವರು ನನ್ನನ್ನು ಮೋಸಗೊಳಿಸಿದರು; ನನ್ನ ಯಾಜಕರೂ ಹಿರಿ ಯರೂ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವದಕ್ಕೆ ರೊಟ್ಟಿ ಯನ್ನು ಹುಡುಕುತ್ತಾ ನಗರದಲ್ಲಿ ಸತ್ತುಹೋದರು.
Cross references
- Jeremiah 4:31 ಯೆರೆಮೀಯ 4:31ಪ್ರಸವವೇದನೆ ಪಡುವವಳ ಸ್ವರಕ್ಕೂ ಚೊಚ್ಚಲನ್ನು ಹೆರುವವಳ ಸಂಕಟಕ್ಕೂ ಸಮಾನವಾಗಿ ರುವ ಚೀಯೋನಿನ ಮಗಳ ಸ್ವರವನ್ನು ಕೇಳಿದ್ದೇನೆ; ಆಕೆಯು ಗೋಳಾಡುತ್ತಾಳೆ, ಕೈಗಳನ್ನು ಚಾಚಿ--ನನಗೀಗ ಅಯ್ಯೋ, ಕೊಲೆಗಾರರ ನಿಮಿತ್ತ ನನ್ನ ಪ್ರಾಣವು ಬೇಸರಗೊಳ್ಳುತ್ತದೆ ಎಂದನ್ನುತ್ತಾಳೆ.
- Isaiah 1:15 ಯೆಶಾಯ 1:15ನೀವು ನಿಮ್ಮ ಕೈಗಳನ್ನು ಚಾಚಲು ನಾನು ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿ ದರೂ ನಾನು ಕೇಳೆನು, ನಿಮ್ಮ ಕೈಗಳು ರಕ್ತದಿಂದ ತುಂಬಿಯವೆ.
- Lamentations 1:9 ಪ್ರಲಾಪಗಳು 1:9ಅವಳ ನೆರಿಗೆಯು ಅಶುದ್ಧವಾಗಿದೆ; ಅವಳು ತನ್ನ ಅಂತ್ಯವನ್ನು ಜ್ಞಾಪಕ ಮಾಡಿಕೊಳ್ಳುವದಿಲ್ಲ; ಆದುದರಿಂದ ಅವಳು ಆಶ್ಚರ್ಯ ಕರವಾಗಿ ಇಳಿದು ಬಂದಳು; ಅವಳನ್ನು ಆದರಿಸುವವರು ಯಾರೂ ಇಲ್ಲ. ಓ ಕರ್ತನೇ, ನನ್ನ ಸಂಕಟವನ್ನು ನೋಡು, ಶತ್ರುವು ತನ್ನನ್ನು ತಾನೇ ಹೆಚ್ಚಿಸಿಕೊಂಡಿದ್ದಾನೆ.
- Jeremiah 21:4–5 ಯೆರೆಮೀಯ 21:4–5ಇಸ್ರಾಯೇ ಲಿನ ದೇವರಾದ ಯೆಹೋವನು ಹೇಳುವದೇನಂದರೆ, ಇಗೋ, ಗೋಡೆಯ ಹೊರಗೆ ನಿಮಗೆ ಮುತ್ತಿಗೆ ಹಾಕುವ ಬಾಬೆಲಿನ ಅರಸನಿಗೂ ಕಸ್ದೀಯರಿಗೂ ವಿರೋಧವಾಗಿ ನೀವು ಯುದ್ಧಮಾಡುವದಕ್ಕೆ ನಿಮ್ಮ ಕೈಗಳಲ್ಲಿರುವ ಯುದ್ಧದ ಆಯುಧಗಳನ್ನು ನಾನು ಹಿಂದಕ್ಕೆ ತಳ್ಳಿ ಅವರನ್ನು ಈ ಪಟ್ಟಣದ ಮಧ್ಯದಲ್ಲಿ ಕೂಡಿ ಬರುವಂತೆ ಮಾಡುತ್ತೇನೆ. ನಾನೇ ಚಾಚಿದ ಕೈಯಿಂದಲೂ ಬಲವಾದ ತೋಳಿನಿಂದಲೂ ಕೋಪ ದಿಂದಲೂ ಉಗ್ರದಿಂದಲೂ ಮಹಾರೌದ್ರದಿಂದಲೂ ನಿಮಗೆ ವಿರೋಧವಾಗಿ ಯುದ್ಧಮಾಡುವೆನು.
- Lamentations 1:16 ಪ್ರಲಾಪಗಳು 1:16ಇವುಗಳ ನಿಮಿತ್ತ ನಾನು ಅಳುತ್ತೇನೆ; ಕಣ್ಣೀರು ಧಾರೆಧಾರೆಯಾಗಿ ಸುರಿಯುವದು, ನನ್ನನ್ನು ಆದರಿಸುವಾತನೂ ನನ್ನ ಪ್ರಾಣವನ್ನು ಬದುಕಿಸುವ ಆದರಿಕನೂ ನನ್ನಿಂದ ದೂರವಾಗಿದ್ದಾನೆ; ನನ್ನ ಮಕ್ಕಳು ಹಾಳಾಗಿದ್ದಾರೆ, ನನ್ನ ಶತ್ರುವು ಗೆದ್ದಿದ್ದಾನೆ.
- Lamentations 1:19 ಪ್ರಲಾಪಗಳು 1:19ನಾನು ನನ್ನ ಪ್ರಿಯರನ್ನು ಕರೆದೆನು, ಆದರೆ ಅವರು ನನ್ನನ್ನು ಮೋಸಗೊಳಿಸಿದರು; ನನ್ನ ಯಾಜಕರೂ ಹಿರಿ ಯರೂ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವದಕ್ಕೆ ರೊಟ್ಟಿ ಯನ್ನು ಹುಡುಕುತ್ತಾ ನಗರದಲ್ಲಿ ಸತ್ತುಹೋದರು.
- 2 Kings 25:1 2 ಅರಸುಗಳು 25:1ಅವನ ಆಳಿಕೆಯ ಒಂಭತ್ತನೇ ವರುಷದ ಹತ್ತನೇ ತಿಂಗಳಿನ ಹತ್ತನೇ ದಿವಸದಲ್ಲಿ ಏನಾಯಿತಂದರೆ, ಬಾಬೆಲಿನ ಅರಸನಾದ ನೆಬೂಕ ದ್ನೆಚರನು ತಾನೂ ತನ್ನ ಎಲ್ಲಾ ಸೈನ್ಯವೂ ಯೆರೂಸ ಲೇಮಿನ ಮೇಲೆ ಬಂದು ಅದಕ್ಕೆ ಎದುರಾಗಿ ದಂಡಿಳಿದು ಅದರ ಸುತ್ತಲೂ ದಿಣ್ಣೆಗಳನ್ನು ಹಾಕಿದರು.
- 2 Kings 24:2–4 2 ಅರಸುಗಳು 24:2–4ಆದರೆ ಕರ್ತನು ಕಸ್ದೀಯರ, ಅರಾಮ್ಯರ, ಮೋವಾಬ್ಯರ, ಅಮ್ಮೋನ್ಯರ ಗುಂಪುಗಳನ್ನೂ ಅವನ ಮೇಲೆ ಕಳುಹಿಸಿದನು. ಕರ್ತನು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ ಮಾತಿನ ಪ್ರಕಾರ ಯೆಹೂದವನ್ನು ನಾಶ ಮಾಡುವಂತೆ ಅದರ ಮೇಲೆ ಅವರನ್ನು ಬರಮಾಡಿದನು. ನಿಶ್ಚಯವಾಗಿ ಕರ್ತನ ಅಪ್ಪಣೆಯಿಂದ ಇದು ಯೆಹೂದದ ಮೇಲೆ ಆಯಿತು. ಅದೇನಂದರೆ, ಮನಸ್ಸೆಯು ತನ್ನ ಎಲ್ಲಾ ಕೃತ್ಯಗಳಿಂದ ಮಾಡಿದ ಪಾಪಗಳ ನಿಮಿತ್ತ ಅವರನ್ನು ಆತನು ತನ್ನ ಸಮ್ಮುಖದಿಂದ ತೆಗೆದು ಹಾಕುವದಕ್ಕೋಸ್ಕರವೇ. ಇದಲ್ಲದೆ ಅವನು ಚೆಲ್ಲಿದ ನಿರಪರಾಧದ ರಕ್ತದ ನಿಮಿತ್ತ ಇದು ಉಂಟಾಯಿತು. ಅವನು ನಿರಪರಾಧದ ರಕ್ತದಿಂದ ಯೆರೂಸಲೇಮನ್ನು ತುಂಬಿಸಿದ್ದನು. ಕರ್ತನು ಅದನ್ನು ಮನ್ನಿಸಲೊಲ್ಲದೆ ಇದ್ದನು.
- Jeremiah 34:22 ಯೆರೆಮೀಯ 34:22ಕರ್ತನು ಹೇಳುವದೇನಂದರೆ--ಇಗೋ, ನಾನು ಆಜ್ಞಾಪಿಸಿ ಅವರನ್ನು ಈ ಪಟ್ಟಣದ ಬಳಿಗೆ ತಿರಿಗಿ ಬರಮಾಡುವೆನು; ಅವರು ಅದಕ್ಕೆ ವಿರೋಧವಾಗಿ ಯುದ್ಧಮಾಡಿ ಅದನ್ನು ಹಿಡಿದು ಬೆಂಕಿಯಿಂದ ಸುಡು ವರು; ಯೆಹೂದದ ಪಟ್ಟಣಗಳನ್ನು ನಿವಾಸಿಗಳಿಲ್ಲದೆ ಹಾಳಾಗ ಮಾಡುವೆನು.
- Lamentations 1:2 ಪ್ರಲಾಪಗಳು 1:2ಅವಳು ರಾತ್ರಿಯಲ್ಲಿ ಯಾತನೆಗೊಂಡು ಅಳುತ್ತಾಳೆ. ಆಕೆಯ ಕಣ್ಣೀರು ಕೆನ್ನೆಗಳ ಮೇಲಿದೆ; ಎಲ್ಲಾ ಪ್ರಿಯರಲ್ಲಿ ಆಕೆಯನ್ನು ಆದರಿಸುವವನು ಒಬ್ಬನೂ ಇಲ್ಲ. ಆಕೆಯ ಸ್ನೇಹಿತರೆಲ್ಲರೂ ವಂಚನೆಮಾಡಿ ಶತ್ರುಗಳಾದರು.
- 1 Kings 8:38 1 ಅರಸುಗಳು 8:38ನಿನ್ನ ಜನರಾದ ಸಮಸ್ತ ಇಸ್ರಾಯೇಲಿನ ಯಾವ ಮನುಷ್ಯ ನಾದರೂ ಯಾವ ಪ್ರಾರ್ಥನೆಯನ್ನಾದರೂ ವಿಜ್ಞಾಪನೆ ಯನ್ನಾದರೂ ಮಾಡಿದರೆ ತನ್ನ ಸ್ವಂತ ಹೃದಯದ ಬಾಧೆಯನ್ನು ತಿಳಿದು
- 1 Kings 8:22 1 ಅರಸುಗಳು 8:22ಆಗ ಸೊಲೊಮೋನನು ಇಸ್ರಾಯೇಲಿನ ಸಭೆ ಯವರ ಸಮ್ಮುಖದಲ್ಲಿ ದೇವರ ಬಲಿಪೀಠದ ಮುಂದೆ ನಿಂತು ಆಕಾಶದ ಕಡೆಗೆ ತನ್ನ ಕೈಗಳನ್ನು ಎತ್ತಿ ಹೇಳಿದ್ದೇ ನಂದರೆ--