Lamentations · chapter 1 · verse 2
Lamentations 1:2 in Kannada
ಅವಳು ರಾತ್ರಿಯಲ್ಲಿ ಯಾತನೆಗೊಂಡು ಅಳುತ್ತಾಳೆ. ಆಕೆಯ ಕಣ್ಣೀರು ಕೆನ್ನೆಗಳ ಮೇಲಿದೆ; ಎಲ್ಲಾ ಪ್ರಿಯರಲ್ಲಿ ಆಕೆಯನ್ನು ಆದರಿಸುವವನು ಒಬ್ಬನೂ ಇಲ್ಲ. ಆಕೆಯ ಸ್ನೇಹಿತರೆಲ್ಲರೂ ವಂಚನೆಮಾಡಿ ಶತ್ರುಗಳಾದರು.
Avalu raatriyalli yaatanegondu aluttaale. Aakeya kanneeru kennegala melide; ellaa priyaralli aakeyannu aadarisuvavanu obbanoo illa. Aakeya snehitarellaroo vanchanemaadi shatrugalaadaru.
Lamentations 1:2 in English
- King James Version (KJV)
- She weepeth sore in the night, and her tears [are] on her cheeks: among all her lovers she hath none to comfort [her:] all her friends have dealt treacherously with her, they are become her enemies.
- World English Bible (WEB)
- She weeps bitterly in the night. Her tears are on her cheeks. Among all her lovers she has no one to comfort her. All her friends have dealt treacherously with her. They have become her enemies.
- American Standard Version (ASV)
- She weepeth sore in the night, and her tears are on her cheeks; Among all her lovers she hath none to comfort her: All her friends have dealt treacherously with her; they are become her enemies.
- Bible in Basic English (BBE)
- She is sorrowing bitterly in the night, and her face is wet with weeping; among all her lovers she has no comforter: all her friends have been false to her, they have become her haters.
- Darby Translation (DBY)
- She weepeth sore in the night, and her tears are on her cheeks; among all her lovers she hath no comforter; all her friends have dealt treacherously with her, they are become her enemies.
- Webster's Bible (WBS)
- She weepeth bitterly in the night, and her tears [are] on her cheeks: among all her lovers she hath none to comfort [her] : all her friends have dealt treacherously with her, they are become her enemies.
- Young's Literal Translation (YLT)
- She weepeth sore in the night, And her tear [is] on her cheeks, There is no comforter for her out of all her lovers, All her friends dealt treacherously by her, They have been to her for enemies.
Read in context
- 1ಜನಭರಿತವಾಗಿದ್ದ ನಗರಿಯು ಹೇಗೆ ಒಂಟಿಯಾಗಿ ಕೂತುಕೊಂಡಿದ್ದಾಳೆ! ಅವಳು ಹೇಗೆ ವಿಧವೆಯಾದಳು! ಜನಾಂಗಗಳಲ್ಲಿ ಶ್ರೇಷ್ಠಳಾದವಳೂ ಸಂಸ್ಥಾನಗಳಲ್ಲಿ ರಾಜಕುಮಾರಿಯಾಗಿದ್ದವಳೂ ಹೇಗೆ ಕಪ್ಪವನ್ನು ಕೊಡುವಂಥವಳಾದಳು!
- 2ಅವಳು ರಾತ್ರಿಯಲ್ಲಿ ಯಾತನೆಗೊಂಡು ಅಳುತ್ತಾಳೆ. ಆಕೆಯ ಕಣ್ಣೀರು ಕೆನ್ನೆಗಳ ಮೇಲಿದೆ; ಎಲ್ಲಾ ಪ್ರಿಯರಲ್ಲಿ ಆಕೆಯನ್ನು ಆದರಿಸುವವನು ಒಬ್ಬನೂ ಇಲ್ಲ. ಆಕೆಯ ಸ್ನೇಹಿತರೆಲ್ಲರೂ ವಂಚನೆಮಾಡಿ ಶತ್ರುಗಳಾದರು.
- 3ಯೆಹೂದವು ಸಂಕಟದ ನಿಮಿತ್ತವೂ ಘೋರವಾದ ದಾಸ್ಯದ ನಿಮಿತ್ತವೂ ಸೆರೆಯಾಗಿ ಹೋಯಿತು; ಆಕೆಯು ಅನ್ಯಜನಾಂಗಗಳೊಳಗೆ ವಾಸಮಾಡುವವಳಾಗಿ ವಿಶ್ರಾಂತಿಯನ್ನು ಕಾಣಳು; ಅವಳನ್ನು ಹಿಂಸಿಸುವವ ರೆಲ್ಲರೂ ಅವಳನ್ನು ಇಕ್ಕಟ್ಟಿನ ಮಧ್ಯದಲ್ಲಿ ಸಿಕ್ಕಿಸಿರುತ್ತಾರೆ.
- 4ಚೀಯೋನಿನ ಮಾರ್ಗಗಳು ದುಃಖಿಸುತ್ತವೆ, ಯಾಕಂದರೆ ಪವಿತ್ರ ಹಬ್ಬಗಳಿಗೆ ಯಾರೂ ಬರಲಿಲ್ಲ; ಆಕೆಯ ಎಲ್ಲಾ ಬಾಗಿಲುಗಳು ಹಾಳುಬಿದ್ದಿವೆ. ಯಾಜಕರು ನಿಟ್ಟುಸಿರಿಡುತ್ತಾರೆ, ಕನ್ಯೆಯರು ಸಂಕಟಪಡುತ್ತಾರೆ. ಆಕೆಯು ವ್ಯಥೆಯಲ್ಲಿದ್ದಾಳೆ.
Cross references
- Psalm 6:6 ಕೀರ್ತನೆಗಳು 6:6ನಾನು ನರನರಳಿ ದಣಿದಿದ್ದೇನೆ; ಪ್ರತಿ ರಾತ್ರಿಯೂ ನನ್ನ ಕಣ್ಣೀರಿನಿಂದ ಮಂಚವು ತೇಲಾ ಡುತ್ತದೆ. ಹಾಸಿಗೆಯು ಕಣ್ಣೀರಿನಿಂದ ನೆನೆದು ಹೋಗುತ್ತದೆ.
- Micah 7:5 ಮೀಕ 7:5ಸ್ನೇಹಿತನಲ್ಲಿ ನಂಬಿಕೆ ಇಡಬೇಡಿರಿ; ಆಪ್ತಸ್ನೇಹಿತನಲ್ಲಿ ಭರವಸವಿಡಬೇಡಿರಿ; ನಿನ್ನ ಎದೆಯ ಮೇಲೆ ಮಲಗುವವಳಿಗೆ ನಿನ್ನ ಬಾಯಿಯ ಬಾಗಲುಗಳನ್ನು ಕಾಯಿ.
- Psalm 77:2–6 ಕೀರ್ತನೆಗಳು 77:2–6ನನ್ನ ಇಕ್ಕ ಟ್ಟಿನ ದಿವಸದಲ್ಲಿ ಕರ್ತನನ್ನು ಹುಡುಕಿದೆನು; ನಾನು ರಾತ್ರಿಯೆಲ್ಲಾ ವ್ಯಥೆಪಟ್ಟದ್ದರಿಂದ ನನ್ನ ಪ್ರಾಣವು ಆದರಣೆ ಹೊಂದಲೊಲ್ಲದು. ನಾನು ವ್ಯಥೆಪಡುತ್ತಾ ದೇವರನ್ನು ಜ್ಞಾಪಕಮಾಡಿಕೊಂಡೆನು. ನಾನು ಚಿಂತಿ ಸುವದರಿಂದ ನನ್ನ ಆತ್ಮವು ಬಳಲಿ ಹೋಗಿದೆ ಸೆಲಾ. ನನ್ನ ಕಣ್ಣುಗಳನ್ನು ಮುಚ್ಚದಂತೆ ನೀನು ಹಿಡಿಯುತ್ತೀ; ನಾನು ಮಾತಾಡದಂತೆ ಕಳವಳಪಟ್ಟಿದ್ದೇನೆ. ಪುರಾ ತನ ದಿವಸಗಳನ್ನೂ ಆದಿಕಾಲದ ವರುಷಗಳನ್ನೂ ಯೋಚಿಸಿದೆನು. ನನ್ನ ಹಾಡನ್ನು ರಾತ್ರಿಯಲ್ಲಿ ಜ್ಞಾಪಕ ಮಾಡಿಕೊಳ್ಳುತ್ತೇನೆ; ನನ್ನ ಹೃದಯದ ಸಂಗಡ ಮಾತಾ ಡುತ್ತೇನೆ; ನನ್ನ ಆತ್ಮವು ಪರಿಶೋಧನೆ ಮಾಡಿತು.
- Job 19:13–14 ಯೋಬನು 19:13–14ನನ್ನ ಸಹೋದರರನ್ನು ನನಗೆ ದೂರ ಮಾಡು ತ್ತಾನೆ; ನನ್ನ ಪರಿಚಯದ ಸ್ನೇಹಿತರು ನನಗೆ ಅನ್ಯರೇ ಆದರು. ನನ್ನ ನೆರೆಯವರು ತಡೆಯುತ್ತಾರೆ; ನನ್ನ ಪರಿಚಯದ ಸ್ನೇಹಿತರು ನನ್ನನ್ನು ಮರೆತ್ತಿದ್ದಾರೆ.
- Lamentations 1:16–17 ಪ್ರಲಾಪಗಳು 1:16–17ಇವುಗಳ ನಿಮಿತ್ತ ನಾನು ಅಳುತ್ತೇನೆ; ಕಣ್ಣೀರು ಧಾರೆಧಾರೆಯಾಗಿ ಸುರಿಯುವದು, ನನ್ನನ್ನು ಆದರಿಸುವಾತನೂ ನನ್ನ ಪ್ರಾಣವನ್ನು ಬದುಕಿಸುವ ಆದರಿಕನೂ ನನ್ನಿಂದ ದೂರವಾಗಿದ್ದಾನೆ; ನನ್ನ ಮಕ್ಕಳು ಹಾಳಾಗಿದ್ದಾರೆ, ನನ್ನ ಶತ್ರುವು ಗೆದ್ದಿದ್ದಾನೆ. ಚೀಯೋನ್ ತನ್ನ ಕೈಗಳನ್ನು ಚಾಚುತ್ತಾಳೆ; ಅಲ್ಲಿ ಅವಳನ್ನು ಆದರಿಸುವವನು ಒಬ್ಬನೂ ಇಲ್ಲ; ಯಾಕೋಬಿಗೆ ಸಂಬಂಧಿಸಿದ ಅವನ ವೈರಿಗಳು ಅವನ ಸುತ್ತಲೂ ಇರಬೇಕೆಂದು ಕರ್ತನು ಆಜ್ಞಾಪಿಸಿದ್ದಾನೆ. ಯೆರೂಸಲೇಮು ಅವರ ಮದ್ಯದಲ್ಲಿ ಮುಟ್ಟಾದ ಹೆಂಗಸಿನ ಹಾಗೆ ಇದೆ.
- Lamentations 1:9 ಪ್ರಲಾಪಗಳು 1:9ಅವಳ ನೆರಿಗೆಯು ಅಶುದ್ಧವಾಗಿದೆ; ಅವಳು ತನ್ನ ಅಂತ್ಯವನ್ನು ಜ್ಞಾಪಕ ಮಾಡಿಕೊಳ್ಳುವದಿಲ್ಲ; ಆದುದರಿಂದ ಅವಳು ಆಶ್ಚರ್ಯ ಕರವಾಗಿ ಇಳಿದು ಬಂದಳು; ಅವಳನ್ನು ಆದರಿಸುವವರು ಯಾರೂ ಇಲ್ಲ. ಓ ಕರ್ತನೇ, ನನ್ನ ಸಂಕಟವನ್ನು ನೋಡು, ಶತ್ರುವು ತನ್ನನ್ನು ತಾನೇ ಹೆಚ್ಚಿಸಿಕೊಂಡಿದ್ದಾನೆ.
- Lamentations 1:19 ಪ್ರಲಾಪಗಳು 1:19ನಾನು ನನ್ನ ಪ್ರಿಯರನ್ನು ಕರೆದೆನು, ಆದರೆ ಅವರು ನನ್ನನ್ನು ಮೋಸಗೊಳಿಸಿದರು; ನನ್ನ ಯಾಜಕರೂ ಹಿರಿ ಯರೂ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವದಕ್ಕೆ ರೊಟ್ಟಿ ಯನ್ನು ಹುಡುಕುತ್ತಾ ನಗರದಲ್ಲಿ ಸತ್ತುಹೋದರು.
- Jeremiah 22:20–22 ಯೆರೆಮೀಯ 22:20–22ಲೆಬನೋನಿಗೆ ಹೋಗಿ ಕೂಗು, ಬಾಶಾನಿನಲ್ಲಿ ನಿನ್ನ ಸ್ವರವನ್ನೆತ್ತು, ದಾರಿಗಳಲ್ಲಿ ಕೂಗು, ನಿನ್ನ ಪ್ರಿಯರು ನಾಶವಾಗಿದ್ದಾರೆ. ನಿನ್ನ ಏಳಿಗೆಯಲ್ಲಿ ನಿನ್ನ ಸಂಗಡ ಮಾತನಾಡಿದೆನು; ಆದರೆ--ನಾನು ಕೇಳುವದಿಲ್ಲ ಎಂದು ನೀನು ಹೇಳಿದಿ; ನನ್ನ ಸ್ವರಕ್ಕೆ ಕಿವಿಗೊಡದಿರು ವದೇ ನಿನ್ನ ಯೌವನದ ರೀತಿಯಾಗಿದೆ. ನಿನ್ನ ಕುರುಬರನ್ನೆಲ್ಲಾ ಗಾಳಿ ತಿಂದುಬಿಡುವದು; ನಿನ್ನ ಪ್ರಿಯರು ಸೆರೆಗೆ ಹೋಗುವರು; ನಿಶ್ಚಯವಾಗಿ ಆಗ ನಿನ್ನ ಎಲ್ಲಾ ಕೆಟ್ಟತನದ ನಿಮಿತ್ತ ನಿನಗೆ ನಾಚಿಕೆಯೂ ಅವಮಾನವೂ ಆಗುವದು.
- Jeremiah 30:14 ಯೆರೆಮೀಯ 30:14ನಿನ್ನನ್ನು ಪ್ರೀತಿ ಮಾಡುವವರೆಲ್ಲರು ನಿನ್ನನ್ನು ಮರೆತುಬಿಟ್ಟಿದ್ದಾರೆ, ನಿನ್ನನ್ನು ಹುಡುಕುವದಿಲ್ಲ; ನಿನ್ನ ಅಕ್ರಮಗಳು ಬಹಳವೂ ನಿನ್ನ ಪಾಪಗಳು ಪ್ರಬಲವೂ ಆಗಿರುವದರಿಂದ ಶತ್ರುವಿನ ಗಾಯದಿಂದಲೂ ಕ್ರೂರನ ಶಿಕ್ಷೆಯಿಂದಲೂ ನಾನು ನಿನ್ನನ್ನು ಗಾಯಪಡಿಸಿದ್ದೇನೆ.
- Jeremiah 9:1 ಯೆರೆಮೀಯ 9:1ಅಯ್ಯೋ, ನನ್ನ ತಲೆ ನೀರಾಗಿಯೂ ನನ್ನ ಕಣ್ಣುಗಳು ಕಣ್ಣೀರಿನ ಬುಗ್ಗೆಯಾಗಿಯೂ ಇದ್ದರೆ ಒಳ್ಳೇದು! ಆಗ ನನ್ನ ಜನರ ಮಗಳ ಹತವಾದ ವರ ನಿಮಿತ್ತ ಹಗಲು ರಾತ್ರಿ ಅಳುವೆನು.
- Jeremiah 4:30 ಯೆರೆಮೀಯ 4:30ನೀನು ಸೂರೆ ಯಾದಾಗ ಏನು ಮಾಡುವಿ? ನೀನು ಕಡು ಕೆಂಪುಬಣ್ಣದ ವಸ್ತ್ರವನ್ನು ತೊಟ್ಟುಕೊಂಡರೇನು? ಚಿನ್ನದ ಆಭರಣ ಗಳಿಂದ ನಿನ್ನನ್ನು ಅಲಂಕರಿಸಿದರೇನು? ಮುಖಕ್ಕೆ ಬಣ್ಣ ಹಚ್ಚಿಕೊಂಡರೇನು? ವ್ಯರ್ಥವಾಗಿ ನೀನು ನಿನ್ನನ್ನು ಸೌಂದರ್ಯಳಾಗಿ ಮಾಡಿಕೊಳ್ಳುವಿ; ನಿನ್ನ ಪ್ರಿಯರು ನಿನ್ನನ್ನು ಅಸಹ್ಯಿಸುವರು; ನಿನ್ನ ಪ್ರಾಣವನ್ನು ಹುಡುಕುವರು.
- Lamentations 1:21 ಪ್ರಲಾಪಗಳು 1:21ನಾನು ನಿಟ್ಟುಸಿರಿಡುವದನ್ನು ಅವರು ಕೇಳಿದರೂ ನನ್ನನ್ನು ಆದರಿ ಸಲು ಯಾರೂ ಅಲ್ಲಿರಲಿಲ್ಲ; ನನ್ನ ಶತ್ರುಗಳೆಲ್ಲಾ ನನ್ನ ಕಷ್ಟದ ವಿಷಯವನ್ನು ಕೇಳಿದರು; ನೀನು ಹಾಗೆ ಮಾಡಿದೆಯೆಂದು ಅವರು ಸಂತೋಷಪಟ್ಟರು. ನೀನು ತಿಳಿಸಿದ ಆ ದಿನವು ಬರಲು ಅವರು ನನ್ನ ಹಾಗೆಯೇ ಆಗುವರು.ಅವರ ಕೆಡುಕೆಲ್ಲಾ ನಿನ್ನ ಮುಂದೆ ಬರಲಿ; ನನ್ನ ಎಲ್ಲಾ ದ್ರೋಹಗಳ ನಿಮಿತ್ತ ನೀನು ನನಗೆ ಮಾಡಿದ ಪ್ರಕಾರವೇ ಅವರಿಗೆ ಮಾಡು; ನನ್ನ ನಿಟ್ಟು ಸಿರುಗಳು ಅನೇಕವಾಗಿವೆ; ನನ್ನ ಹೃದಯವು ಕುಂದಿದೆ.