Lamentations · chapter 4 · verse 5
Lamentations 4:5 in Kannada
ರುಚಿ ಯಾದವುಗಳನ್ನು ತಿಂದವರು ಬೀದಿಗಳಲ್ಲಿ ಹಾಳಾಗಿ ದ್ದಾರೆ; ಸಕಲಾತಿಗಳಲ್ಲಿ ಬೆಳೆಸಲ್ಪಟ್ಟವರು ತಿಪ್ಪೆಗಳನ್ನು ಅಪ್ಪಿಕೊಳ್ಳುತ್ತಾರೆ.
Ruchi yaadavugalannu tindavaru beedigalalli haalaagi ddaare; sakalaatigalalli belesalpattavaru tippegalannu appikolluttaare.
Lamentations 4:5 in English
- King James Version (KJV)
- They that did feed delicately are desolate in the streets: they that were brought up in scarlet embrace dunghills.
- World English Bible (WEB)
- Those who ate delicacies are desolate in the streets. Those who were brought up in purple embrace dunghills.
- American Standard Version (ASV)
- They that did feed delicately are desolate in the streets: They that were brought up in scarlet embrace dunghills.
- Bible in Basic English (BBE)
- Those who were used to feasting on delicate food are wasted in the streets: those who as children were dressed in purple are stretched out on the dust.
- Darby Translation (DBY)
- They that fed delicately are desolate in the streets; they that were brought up in scarlet embrace dung-hills.
- Webster's Bible (WBS)
- They that fed delicately are desolate in the streets: they that were brought up in scarlet embrace dunghills.
- Young's Literal Translation (YLT)
- Those eating of dainties have been desolate in out-places, Those supported on scarlet have embraced dunghills.
Read in context
- 3ಸಮುದ್ರದ ವಿಕಾರವಾದ ಪ್ರಾಣಿಗಳಾ ದರೂ ತಮ್ಮ ಕೆಚ್ಚಲನ್ನು ಹೊರ ಎಳೆದು ತಮ್ಮ ಮರಿಗಳಿಗೆ ಮೊಲೆ ಕೊಡುತ್ತವೆ; ಆದರೆ ನನ್ನ ಜನರ ಮಗಳು ಅರಣ್ಯದಲ್ಲಿರುವ ಉಷ್ಟ್ರಪಕ್ಷಿಗಳ ಹಾಗೆ ಕ್ರೂರವಾಗಿ ದ್ದಾಳೆ.
- 4ಮೊಲೆಕೂಸಿನ ನಾಲಿಗೆಯು ದಾಹದಿಂದ ಅಂಗಳಕ್ಕೆ ಹತ್ತುತ್ತದೆ, ಎಳೆಕೂಸುಗಳು ರೊಟ್ಟಿ ಕೇಳುತ್ತವೆ; ಆದರೆ ಅವರಿಗೆ ಯಾರೂ ಕೊಡುವದಿಲ್ಲ.
- 5ರುಚಿ ಯಾದವುಗಳನ್ನು ತಿಂದವರು ಬೀದಿಗಳಲ್ಲಿ ಹಾಳಾಗಿ ದ್ದಾರೆ; ಸಕಲಾತಿಗಳಲ್ಲಿ ಬೆಳೆಸಲ್ಪಟ್ಟವರು ತಿಪ್ಪೆಗಳನ್ನು ಅಪ್ಪಿಕೊಳ್ಳುತ್ತಾರೆ.
- 6ನನ್ನ ಜನರ ಮಗಳ ಅಕ್ರಮದ ದಂಡನೆಯು ಸೊದೋಮಿನ ಪಾಪದ ದಂಡನೆಗಿಂತ ದೊಡ್ಡದು; ಅದು ಕ್ಷಣಮಾತ್ರದಲ್ಲಿ ಕೆಡವಿ ಹಾಕಲ್ಪಟ್ಟಿತು! ಅವಳನ್ನು ಯಾವ ಕೈಗಳೂ ತಡೆಯಲಿಲ್ಲ.
- 7ಅವಳ ನಜರೀಯರು ಹಿಮಕ್ಕಿಂತಲೂ ಸ್ವಚ್ಛವಾಗಿದ್ದರು, ಹಾಲಿಗಿಂತಲೂ ಬೆಳ್ಳಗಿದ್ದರು, ಅವರು ಮೈ ಕಟ್ಟಿನಲ್ಲಿ ಹವಳಕ್ಕಿಂತಲೂ ಕೆಂಪಾಗಿದ್ದರು; ಅವರ ಹೊಳಪು ಇಂದ್ರನೀಲಮಣಿಯ ಹಾಗಿತ್ತು.
Cross references
- Luke 16:19 ಲೂಕನು 16:19ಊದಾಬಣ್ಣದ ವಸ್ತ್ರಗಳನ್ನೂ ನಯವಾದ ನಾರು ಮಡಿಯನ್ನೂ ಧರಿಸಿಕೊಂಡು ಪ್ರತಿದಿನವೂ ಸಮೃದ್ಧಿ ಯಾಗಿ ಭೋಜನಮಾಡುತ್ತಿದ್ದ ಒಬ್ಬಾನೊಬ್ಬ ಐಶ್ವರ್ಯ ವಂತನಿದ್ದನು.
- Luke 15:16 ಲೂಕನು 15:16ಅವನು ಹಂದಿಗಳು ತಿನ್ನುತ್ತಿದ್ದ ಹೊಟ್ಟಿನಿಂದ ಲಾದರೂ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವದಕ್ಕೆ ಇಷ್ಟಪಟ್ಟನು. ಆದರೆ ಯಾವನೂ ಅವನಿಗೆ ಕೊಡಲಿಲ್ಲ.
- Proverbs 31:21 ಜ್ಞಾನೋಕ್ತಿಗಳು 31:21ತನ್ನ ಮನೆಯವರಿಗಾಗಿ ಆಕೆಯು ಹಿಮಕ್ಕೆ ಭಯಪಡುವದಿಲ್ಲ; ಆಕೆಯ ಮನೆಯವ ರೆಲ್ಲರೂ ರಕ್ತಾಂಭರಗಳಿಂದ ಹೊದಿಸಲ್ಪಟ್ಟಿದ್ದಾರೆ.
- Amos 6:3–7 ಆಮೋಸ 6:3–7ನೀವು ಕೆಟ್ಟ ದಿನವನ್ನು ದೂರಮಾಡಿ ಕೊಂಡು ಬಲಾತ್ಕಾರದ ಪೀಠವನ್ನು ಹತ್ತಿರ ಮಾಡಿಕೊ ಳ್ಳುತ್ತೀರಿ. ದಂತದ ಮಂಚಗಳ ಮೇಲೆ ಮಲಗಿಕೊಳ್ಳು ತ್ತಾರೆ; ತಮ್ಮ ಹಾಸಿಗೆಗಳ ಮೇಲೆ ಹಾಯಾಗಿ ಒರಗಿ ಕೊಳ್ಳುತ್ತಾರೆ; ಮಂದೆಯೊಳಗಿಂದ ಕುರಿಮರಿಗಳನ್ನು, ಹಟ್ಟಿಯ ಮಂದೆಯೊಳಗಿಂದ ಕರುಗಳನ್ನು ತಿನ್ನುತ್ತಾರೆ. ವೀಣೆಯ ಸ್ವರಕ್ಕೆ ಹಾಡುತ್ತಾರೆ; ದಾವೀದನ ಹಾಗೆ ತಮಗೆ ತಾವೇ ಗಾನ ವಾದ್ಯಗಳನ್ನು ಕಲ್ಪಿಸಿಕೊಳ್ಳು ತ್ತಾರೆ. ದ್ರಾಕ್ಷಾರಸದ ಪಾತ್ರೆಗಳಲ್ಲಿ ಕುಡಿಯುತ್ತಾರೆ. ಶ್ರೇಷ್ಠವಾದ ಎಣ್ಣೆಗಳಿಂದ ತಮ್ಮನ್ನು ಅಭಿಷೇಕಿಸಿ ಕೊಳ್ಳುತ್ತಾರೆ. ಆದರೆ ಯೋಸೇಫನ ನಷ್ಟಕ್ಕೆ ವ್ಯಸನಪಡು ವದಿಲ್ಲ. ಅದರಿಂದ ಸೆರೆಗೆ ಒಯ್ಯಲ್ಪಡುವವರಿಗೆ ಮೊದಲು ತಾವೇ ಸೆರೆಗೆ ಹೋಗುವರು; ಭೋಗ ಮಾಡುವವರ ಹರ್ಷಧ್ವನಿಯು ಬಿಟ್ಟು ಹೋಗುವದು.
- Isaiah 24:6–12 ಯೆಶಾಯ 24:6–12ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ, ಅದರಲ್ಲಿ ವಾಸವಾಗಿರು ವವರು ಧ್ವಂಸವಾಗುವರು; ಆದ್ದರಿಂದ ಭೂನಿವಾಸಿ ಗಳು ಸುಟ್ಟುಹೋಗಿ ಕೆಲವರು ಮಾತ್ರ ಉಳಿದಿದ್ದಾರೆ. ದ್ರಾಕ್ಷಾರಸವು ದುಃಖಿಸುತ್ತದೆ, ದ್ರಾಕ್ಷೆಯು ಕ್ಷೀಣಿಸು ವದು; ಹರ್ಷ ಹೃದಯರೆಲ್ಲಾ ನಿಟ್ಟುಸಿರುಬಿಡುತ್ತಾರೆ. ದಮ್ಮಡಿಗಳ ಉತ್ಸಾಹವು ಮುಗಿದಿದೆ, ಉಲ್ಲಾಸದ ಅವರ ಶಬ್ದವು ಕೊನೆಗೊಂಡಿತು. ಕಿನ್ನರಿಯ ಆನಂದ ಸ್ವರವು ತೀರಿತು. ಇನ್ನು ಗಾನದೊಡನೆ ದ್ರಾಕ್ಷಾರಸ ವನ್ನು ಕುಡಿಯರು; ಕುಡಿಯುವವರಿಗೆ ಮದ್ಯಪಾನವು ಕಹಿಯಾಗುವದು. ಗಲಿಬಿಲಿಗುಂಟಾದ ಪಟ್ಟಣವು ಹಾಳಾಗಿದೆ. ಯಾರು ಒಳಗೆ ಬಾರದಂತೆ ಪ್ರತಿಯೊಂದು ಮನೆಯು ಮುಚ್ಚಿದೆ. ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ; ಉಲ್ಲಾಸವೆಲ್ಲ ಅಸ್ತಮಿಸಿದೆ; ದೇಶದ ಸಡಗರವು ತೊಲಗಿಹೋಗಿದೆ. ಪಟ್ಟಣ ದಲ್ಲಿ ಹಾಳೇ ಉಳಿದಿವೆ; ನಾಶನವು ಹೆಬ್ಬಾಗಿಲಿಗೆ ತಟ್ಟಿದೆ.
- 2 Samuel 1:24 2 ಸಮುವೇಲನು 1:24ಇಸ್ರಾಯೇಲಿನ ಕುಮಾರ್ತೆ ಯರೇ, ಸೌಲನಿಗೋಸ್ಕರ ಅಳಿರಿ, ನಿಮಗೆ ರಕ್ತಾಂಬರ ವನ್ನು ಸಂಭ್ರಮವಾಗಿ ತೊಡಿಸಿದನಲ್ಲಾ; ನಿಮ್ಮ ಉಡುಗೆ ಗಳ ಮೇಲೆ ಚಿನ್ನದ ಆಭರಣಗಳನ್ನು ಧರಿಸುವಂತೆ ಮಾಡಿದನಲ್ಲಾ.
- 1 Timothy 5:6 1 ತಿಮೊಥೆಯನಿಗೆ 5:6ಆದರೆ ಭೋಗಿಯಾಗಿರುವ ವಿಧವೆಯು ಬದುಕಿರು ವಾಗಲೂ ಸತ್ತವಳೇ.
- Deuteronomy 28:54–56 ಧರ್ಮೋಪದೇಶಕಾಂಡ 28:54–56ನಿನ್ನಲ್ಲಿ ಮೃದುವಾದವನೂ ಬಹಳ ಸೂಕ್ಷ್ಮ ಗುಣವುಳ್ಳವನೂ ಯಾವನೋ ಅವನ ಕಣ್ಣು ತನ್ನ ಸಹೋದರನ ಕಡೆಗೂ ತನ್ನ ಮಗ್ಗುಲಲ್ಲಿರುವ ತನ್ನ ಹೆಂಡತಿಯ ಕಡೆಗೂ ಅವನು ಉಳಿಸಿಕೊಳ್ಳುವ ಮಕ್ಕಳ ಕಡೆಗೂ ಕಠಿಣವಾಗುವದು. ಮುತ್ತಿಗೆಯಲ್ಲಿಯೂ ನಿನ್ನ ಶತ್ರುಗಳು ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮಾಡುವ ಇಕ್ಕಟ್ಟಿನಲ್ಲಿಯೂ ತನಗೆ ಸಾಕಾಗುವದಿಲ್ಲ ಅಂದುಕೊಂಡು ಅವನು ತಿನ್ನುವ ತನ್ನ ಮಕ್ಕಳ ಮಾಂಸದಲ್ಲಿ ಅವರೊಳಗೆ ಒಬ್ಬನಿಗಾದರೂ ಏನೂ ಕೊಡುವದಿಲ್ಲ. ನಿನ್ನಲ್ಲಿ ಮೃದುವಾದವಳೂ ಬಹಳ ಸೂಕ್ಷ್ಮಗುಣವುಳ್ಳವಳೂ ಯಾವಳೋ ಮೃದುತನ ದಿಂದಲೂ ಸೂಕ್ಷ್ಮಗುಣದಿಂದಲೂ ನೆಲಕ್ಕೆ ಅಂಗಾಲನ್ನು ನಿಲ್ಲಿಸಲಾರದವಳು ಯಾವಳೋ ಅವಳು ತನ್ನ ಮಗ್ಗುಲ ಲ್ಲಿರುವ ಗಂಡನ ಕಡೆಗೂ ತನ್ನ ಮಗನ, ಮಗಳ ಕಡೆಗೂ
- Luke 7:25 ಲೂಕನು 7:25ಆದರೆ ನೀವು ಏನು ನೋಡುವದಕ್ಕಾಗಿ ಹೋದಿರಿ? ಇಗೋ, ನಯವಾದ ಉಡುಪನ್ನು ಧರಿಸಿದ್ದ ಮನುಷ್ಯನನ್ನೋ? ಶೋಭಾಯ ಮಾನವಾದ ಉಡುಪುಗಳನ್ನು ಧರಿಸಿಕೊಂಡು ಸುಖ ವಾಗಿ ಜೀವಿಸುವವರು ರಾಜರ ಓಲಗಗಳಲ್ಲಿ ಇರುತ್ತಾರೆ.
- Revelation 18:7–9 ಪ್ರಕಟನೆ 18:7–9ಅವಳು ಎಷ್ಟರಮಟ್ಟಿಗೆ ತನ್ನನ್ನು ಘನಪಡಿಸಿ ಕೊಂಡು ವೈಭವದಲ್ಲಿ ಜೀವಿಸಿದ್ದಳೋ ಅಷ್ಟರಮಟ್ಟಿಗೆ ಅವಳಿಗೆ ಯಾತನೆಯನ್ನೂ ದುಃಖವನ್ನೂ ಕೊಡಿರಿ; ಯಾಕಂದರೆ ಅವಳು ತನ್ನ ಹೃದಯದಲ್ಲಿ--ನಾನು ರಾಣಿ ಯಾಗಿ ಕೂತುಕೊಂಡಿದ್ದೇನೆ, ನಾನು ವಿಧವೆಯಲ್ಲ, ದುಃಖವನ್ನು ಕಾಣುವದೇ ಇಲ್ಲ ಎಂದು ಹೇಳಿಕೊಳ್ಳು ಆದದರಿಂದ ಅವಳಿಗೆ ಮರಣ ದುಃಖ ಕ್ಷಾಮ ಎಂಬೀ ಉಪದ್ರವಗಳು ಒಂದೇ ದಿನದಲ್ಲಿ ಸಂಭವಿ ಸುವವು; ಅವಳು ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟುಹೋಗುವಳು. ಅವಳಿಗೆ ದಂಡನೆಯನ್ನು ವಿಧಿಸಿದ ದೇವರಾಗಿರುವ ಕರ್ತನು ಬಲಿಷ್ಠನಾಗಿದ್ದಾನೆ. ಅವಳೊಂದಿಗೆ ಜಾರತ್ವ ಮಾಡಿ ವೈಭವದಲ್ಲಿ ಬದುಕಿದ ಭೂರಾಜರು ಅವಳ ದಹನದ ಹೊಗೆಯನ್ನು ನೋಡು ವಾಗ ಅವಳಿಗಾಗಿ ಗೋಳಾಡುತ್ತಾ ಪ್ರಲಾಪಿಸುವರು.
- Isaiah 3:16–26 ಯೆಶಾಯ 3:16–26ಇದಲ್ಲದೆ ಕರ್ತನು ಇಂತೆನ್ನುತ್ತಾನೆ --ಚೀಯೋನ್ ಕುಮಾರ್ತೆಯರು ಅಹಂಕಾರಿಗಳಾಗಿದ್ದು ಕತ್ತು ತೂಗುತ್ತಾ ಕಣ್ಣುಗಳನ್ನು ತಿರುಗಿಸುತ್ತಾ ನಾಜೂಕಿ ನಿಂದ ಹೆಜ್ಜೆಇಡುತ್ತಾ ಕಾಲುಗೆಜ್ಜೆ ಜಣಜಣಿಸುತ್ತಾ ನಡೆ ಯುವವರಾಗಿರುವದರಿಂದ, ಚೀಯೋನ್ ಕುಮಾ ರ್ತೆಯರ ತಲೆಯ ಮೇಲ್ಭಾಗವನ್ನು ಕಜ್ಜಿಯಿಂದ ಕರ್ತನು ಹೊಡೆಯುವನು, ಅವರ ಗುಪ್ತಾಂಗಗಳನ್ನು ಬೈಲುಪಡಿಸುವನು. ಆ ದಿನದಲ್ಲಿ ಕರ್ತನು ಅವರ ಅಂದುಗೆ, ತುರುಬುಬಲೆ, ಅರ್ಧಚಂದ್ರ, ಸರ, ಬಳೆ, ಮುಂಡಾಸ, ಟೊಪ್ಪಿಗೆ, ಕಾಲಸರಪಣಿ, ಶಿರೋ ವೇಷ್ಟನ, ಗಂಧದ ಡಬ್ಬಿ, ಓಲೆ, ಉಂಗುರ, ಮೂಗುತಿ, ಬದಲಾಯಿಸತಕ್ಕ ಬಟ್ಟೆ, ಶಾಲು, ತಲೆಕೌದಿ, ಅಲಂ ಕಾರದ ಪಿನ್ನುಗಳು, ಕೈಗನ್ನಡಿ, ನಾರು ಮಡಿ, ಮೇಲ್ಹೊ ದಿಕೆ ಮುಸುಕು ಈ ಎಲ್ಲಾ ಭೂಷಣಗಳನ್ನು ತೆಗೆದು ಹಾಕುವನು. ಆಗ ಸುವಾಸನೆಯ ಬದಲಾಗಿ ದುರ್ವಾಸನೆ, ಡಾಬಿಗೆ ಬದಲಾಗಿ ಹಗ್ಗ; ಜಡೆಯ ಬದಲಾಗಿ ಬೋಳುತಲೆ; ನಡುವಿನ ಶಲ್ಯಕ್ಕೆ ಪ್ರತಿಯಾಗಿ ಗೋಣೀತಟ್ಟು; ಸೌಂದರ್ಯಕ್ಕೆ ಬದಲಾಗಿ ಬರೆ, ಇವು ಆಗುವವು; ನಿನ್ನ ಗಂಡಸರು ಕತ್ತಿಯಿಂದಲೂ ನಿನ್ನ ಶೂರರು ಯುದ್ಧದಲ್ಲಿಯೂ ಬೀಳುವರು.ಅವರ ಬಾಗಲುಗಳಲ್ಲಿ ಪ್ರಲಾಪವು ದುಃಖವು ತುಂಬಿರು ವದು; ಅವಳು ಹಾಳಾಗಿ ನೆಲದ ಮೇಲೆ ಕುಳಿತು ಕೊಳ್ಳುವಳು. ಅವರ ಬಾಗಲುಗಳಲ್ಲಿ ಪ್ರಲಾಪವು ದುಃಖವು ತುಂಬಿರು ವದು; ಅವಳು ಹಾಳಾಗಿ ನೆಲದ ಮೇಲೆ ಕುಳಿತು ಕೊಳ್ಳುವಳು.
- Jeremiah 6:2–3 ಯೆರೆಮೀಯ 6:2–3ಚೀಯೋನಿನ ಮಗಳನ್ನು ಸೌಂದರ್ಯವಾದ ಮತ್ತು ಕೋಮಲವಾದವಳಿಗೆ ನಾನು ಹೋಲಿಸುತ್ತೇನೆ. ಅವಳ ಬಳಿಗೆ ಕುರುಬರು ತಮ್ಮ ಮಂದೆಗಳ ಸಂಗಡ ಬರುವರು; ಅವಳ ಸುತ್ತಲು ತಮ್ಮ ಗುಡಾರಗಳನ್ನು ಹಾಕುವರು; ತಮ್ಮ ತಮ್ಮ ಸ್ಥಳಗಳಲ್ಲಿ ಮೇಯಿಸುವರು.