Luke · chapter 15 · verse 16
Luke 15:16 in Kannada
ಅವನು ಹಂದಿಗಳು ತಿನ್ನುತ್ತಿದ್ದ ಹೊಟ್ಟಿನಿಂದ ಲಾದರೂ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವದಕ್ಕೆ ಇಷ್ಟಪಟ್ಟನು. ಆದರೆ ಯಾವನೂ ಅವನಿಗೆ ಕೊಡಲಿಲ್ಲ.
Avanu handigalu tinnuttidda hottininda laadaroo tanna hotteyannu tumbisikolluvadakke ishtapattanu. Aadare yaavanoo avanige kodalilla.
Luke 15:16 in English
- King James Version (KJV)
- And he would fain have filled his belly with the husks that the swine did eat: and no man gave unto him.
- World English Bible (WEB)
- He wanted to fill his belly with the pods that the pigs ate, but no one gave him any.
- American Standard Version (ASV)
- And he would fain have filled his belly with the husks that the swine did eat: and no man gave unto him.
- Bible in Basic English (BBE)
- And so great was his need that he would have been glad to take the pigs' food, and no one gave him anything.
- Darby Translation (DBY)
- And he longed to fill his belly with the husks which the swine were eating; and no one gave to him.
- Webster's Bible (WBS)
- And he would fain have filled his belly with the husks that the swine did eat; and no man gave to him.
- Young's Literal Translation (YLT)
- and he was desirous to fill his belly from the husks that the swine were eating, and no one was giving to him.
Read in context
- 14ಅವನು ಎಲ್ಲವನ್ನು ವೆಚ್ಚ ಮಾಡಿದ ಮೇಲೆ ಆ ದೇಶದಲ್ಲಿ ಘೋರವಾದ ಬರ ಉಂಟಾಯಿತು. ಹೀಗೆ ಅವನು ಕೊರತೆ ಪಡಲಾರಂಭಿಸಿದನು.
- 15ಆಗ ಅವನು ಹೋಗಿ ಆ ದೇಶದ ನಿವಾಸಿಯಾಗಿದ್ದವನೊಂದಿಗೆ ಸೇರಿ ಕೊಂಡನು; ಆ ಮನುಷ್ಯನು ಹಂದಿಗಳನ್ನು ಮೇಯಿಸು ವದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು.ಅವನು ಹಂದಿಗಳು ತಿನ್ನುತ್ತಿದ್ದ ಹೊಟ್ಟಿನಿಂದ ಲಾದರೂ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವದಕ್ಕೆ ಇಷ್ಟಪಟ್ಟನು. ಆದರೆ
- 16ಅವನು ಹಂದಿಗಳು ತಿನ್ನುತ್ತಿದ್ದ ಹೊಟ್ಟಿನಿಂದ ಲಾದರೂ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವದಕ್ಕೆ ಇಷ್ಟಪಟ್ಟನು. ಆದರೆ ಯಾವನೂ ಅವನಿಗೆ ಕೊಡಲಿಲ್ಲ.
- 17ಅವನಿಗೆ ಬುದ್ದಿ ಬಂದಾಗ ಅವನು--ನನ್ನ ತಂದೆಯ ಎಷ್ಟೋ ಕೂಲಿಯಾಳುಗಳಿಗೆ ಸಾಕಾಗಿ ಉಳಿಯುವಷ್ಟು ಆಹಾರವಿದೆಯಲ್ಲಾ! ನಾನಾದರೋ ಹಸಿವೆಯಿಂದ ಸಾಯುತ್ತಿದ್ದೇನೆ.
- 18ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ--ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ನಾನು ಪಾಪಮಾಡಿದ್ದೇನೆ;
Cross references
- Romans 6:19–21 ರೋಮಾಪುರದವರಿಗೆ 6:19–21ನಿಮ್ಮ ಶರೀರದ ಬಲಹೀನತೆಯ ದೆಸೆಯಿಂದ ಮನುಷ್ಯ ರೀತಿಯಾಗಿ ನಾನು ಮಾತನಾಡುತ್ತೇನೆ. ಅಶುದ್ಧತ್ವಕ್ಕೆ ದಾಸರನ್ನಾಗಿ ನಿಮ್ಮ ಅಂಗಗಳನ್ನು ದುಷ್ಟತ್ವ ದಿಂದ ದುಷ್ಟತ್ವಕ್ಕೆ ಒಳಪಡಿಸಿದಂತೆಯೇ ಈಗ ಪರಿಶುದ್ಧತೆ ಗಾಗಿ ನಿಮ್ಮ ಅಂಗಗಳನ್ನು ನೀತಿಗೆ ದಾಸರನ್ನಾಗಿ ಒಳಪಡಿಸಿರಿ. ನೀವು ಪಾಪಕ್ಕೆ ದಾಸರಾಗಿದ್ದಾಗ ನೀತಿಯ ಹಂಗಿನವರಾಗಿರಲಿಲ್ಲ. ನೀವು ಆಗ ಮಾಡಿ ದವುಗಳಿಂದ ನಿಮಗುಂಟಾದ ಫಲವೇನು? ಈಗ ಅವುಗಳ ವಿಷಯದಲ್ಲಿ ನಿಮಗೆ ನಾಚಿಕೆಯುಂಟಷ್ಟೆ; ಅವುಗಳ ಅಂತ್ಯವು ಮರಣವೇ.
- Hosea 12:1 ಹೋಶೇಯ 12:1ಎಫ್ರಾಯಾಮು ಗಾಳಿಯನ್ನೇ ಸೇವಿಸುತ್ತದೆ; ಪಶ್ಚಿಮದ ಗಾಳಿಯ ಹಿಂದೆ ಹಿಂಬಾಲಿಸಿ ಕೊಂಡು ಹೋಗುತ್ತದೆ. ಅವರು ಪ್ರತಿದಿನವು ಸುಳ್ಳನ್ನೂ ನಾಶನವನ್ನೂ ಹೆಚ್ಚಿಸಿ ಅಶ್ಯೂರ್ಯರೊಂದಿಗೆ ಒಡಂಬಡಿಕೆ ಮಾಡಿಕೊಂಡು ಐಗುಪ್ತಕ್ಕೆ ಎಣ್ಣೆಯನ್ನು ಹೊತ್ತುಕೊಂಡು ಹೋಗುತ್ತಾರೆ.
- Psalm 73:22 ಕೀರ್ತನೆಗಳು 73:22ಆಗ ನಾನು ಮೂರ್ಖನಾಗಿ ಏನೂ ತಿಳಿಯದೆ ನಿನ್ನ ಮುಂದೆ ಪಶು ವಿನಂತೆ ಇದ್ದೆನು.
- Isaiah 57:3 ಯೆಶಾಯ 57:3ಆದರೆ ನೀವು ಮಾಟಗಾರತಿಯ ಮಕ್ಕಳೇ, ಸೂಳೆಯ ಮತ್ತು ಜಾರನ ಸಂತಾನದವರೇ, ಇಲ್ಲಿಗೆ ಬನ್ನಿರಿ.
- Isaiah 44:20 ಯೆಶಾಯ 44:20ಅವನು ತಿನ್ನುವದು ಬೂದಿಯೇ; ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿ ತಪ್ಪಿಸಿದ ಕಾರಣ ನನ್ನ ಬಲಗೈಯಲ್ಲಿ ಸುಳ್ಳು ಇದೆಯಲ್ಲಾ ಎಂದು ಅಂದುಕೊಳ್ಳಲೂ ತನ್ನ ಪ್ರಾಣ ವನ್ನು ಕಾಪಾಡಿಕೊಳ್ಳಲೂ ಅವನಿಂದಾಗದು.
- Lamentations 4:5 ಪ್ರಲಾಪಗಳು 4:5ರುಚಿ ಯಾದವುಗಳನ್ನು ತಿಂದವರು ಬೀದಿಗಳಲ್ಲಿ ಹಾಳಾಗಿ ದ್ದಾರೆ; ಸಕಲಾತಿಗಳಲ್ಲಿ ಬೆಳೆಸಲ್ಪಟ್ಟವರು ತಿಪ್ಪೆಗಳನ್ನು ಅಪ್ಪಿಕೊಳ್ಳುತ್ತಾರೆ.
- Jonah 2:2–8 ಯೋನ 2:2–8ನಾನು ನನ್ನ ವ್ಯಥೆಯ ದೆಸೆಯಿಂದ ಕರ್ತನಿಗೆ ಮೊರೆಯಿಟ್ಟೆನು; ಆತನು ನನ್ನ ಕೂಗನ್ನು ಕೇಳಿದನು; ನರಕದ ಹೊಟ್ಟೆ ಯೊಳಗಿಂದ ನಾನು ಕೂಗಿದೆನು, ಆಗ ನನ್ನ ಶಬ್ದವನ್ನು ನೀನು ಕೇಳಿದಿ. ನನ್ನನ್ನು ನೀನು ಅಗಾಧದಲ್ಲಿಯೂ ಸಮುದ್ರಗಳ ಮಧ್ಯದಲ್ಲಿಯೂ ಹಾಕಿದಿ; ಪ್ರವಾಹಗಳು ನನ್ನನ್ನು ಸುತ್ತಿಕೊಂಡವು; ನಿನ್ನ ಎಲ್ಲಾ ಅಲೆಗಳೂ ನಿನ್ನ ತೆರೆಗಳೂ ನನ್ನ ಮೇಲೆ ದಾಟಿಹೋದವು. ಆಗ ನಾನು ಹೇಳಿದ್ದು--ನಿನ್ನ ಕಣ್ಣುಗಳ ಎದುರಿನಿಂದ ಹೊರಗೆ ಹಾಕಲ್ಪಟ್ಟಿದ್ದೇನೆ; ಆದಾಗ್ಯೂ ನಾನು ನಿನ್ನ ಪರಿಶುದ್ಧ ಮಂದಿರದ ಕಡೆಗೆ ತಿರುಗಿ ನೋಡುವೆನು. ನೀರು ಗಳು ಪ್ರಾಣದ ಮಟ್ಟಿಗೂ ನನ್ನನ್ನು ಸುತ್ತಿಕೊಂಡವು; ಅಗಾಧವು ನನ್ನನ್ನು ಸುತ್ತಲೂ ಮುಚ್ಚಿಕೊಂಡಿತು; ಆಪುಗಳು ನನ್ನ ತಲೆಯನ್ನು ಸುತ್ತಿಕೊಂಡಿದ್ದವು. ಬೆಟ್ಟಗಳ ಬುಡದ ತನಕ ಇಳಿದು ಹೋದೆನು; ಭೂಮಿಯ ಅಡ್ಡದಂಡೆಗಳು ನಿತ್ಯವಾಗಿ ನನ್ನ ಸುತ್ತಲಿ ದ್ದವು; ಆದಾಗ್ಯೂ ಓ ದೇವರಾದ ನನ್ನ ಕರ್ತನೇ, ನೀನು ನನ್ನ ಪ್ರಾಣವನ್ನು ನಾಶನದೊಳಗಿಂದ ಎಬ್ಬಿಸಿದ್ದೀ. ನನ್ನ ಪ್ರಾಣವು ನನ್ನಲ್ಲಿ ಕುಂದಿಹೋದಾಗ ಕರ್ತನನ್ನು ಜ್ಞಾಪಕ ಮಾಡಿಕೊಂಡೆನು; ನನ್ನ ಪ್ರಾರ್ಥನೆಯು ನಿನ್ನ ಬಳಿಗೆ ನಿನ್ನ ಪರಿಶುದ್ಧ ಮಂದಿರದೊಳಗೆ ಬಂತು. ಸುಳ್ಳಾದ ವ್ಯರ್ಥತ್ವಗಳನ್ನು ಅನುಸರಿಸುವವರು ತಮ್ಮ ಸ್ವಂತ ಕರುಣೆಯನ್ನು ಮರೆತು ಬಿಡುತ್ತಾರೆ.
- Isaiah 55:2 ಯೆಶಾಯ 55:2ಆಹಾರವಲ್ಲದ್ದಕ್ಕೆ ಹಣವನ್ನೂ ತೃಪ್ತಿಪಡಿಸ ದಕ್ಕೆ ನಿಮ್ಮ ದುಡಿತವನ್ನೂ ವ್ಯಯಮಾಡುವದು ಯಾಕೆ? ಶ್ರದ್ಧೆಯಿಂದ ನನ್ನ ಕಡೆಗೆ ಕಿವಿಗೊಡಿರಿ ಮತ್ತು ಒಳ್ಳೆಯ ದನ್ನು ನೀವು ಉಣ್ಣಿರಿ, ನಿಮ್ಮ ಪ್ರಾಣವು ಕೊಬ್ಬಿನಲ್ಲಿ ಆನಂದಿಸಲಿ!
- Psalm 142:4 ಕೀರ್ತನೆಗಳು 142:4ನನ್ನ ಬಲಗಡೆಯಲ್ಲಿ ನೋಡಿದೆನು; ನೋಡಿದಾಗ ನನ್ನನ್ನು ತಿಳಿಯುವವನು ಯಾವನೂ ಇಲ್ಲ. ಆಶ್ರಯವು ನನ್ನ ಬಳಿಯಿಂದ ತಪ್ಪಿಹೋಯಿತು; ನನ್ನ ಪ್ರಾಣಕ್ಕಾಗಿ ಚಿಂತಿಸುವವನು ಒಬ್ಬನೂ ಇಲ್ಲ.