Lamentations · chapter 5 · verse 9
Lamentations 5:9 in Kannada
ಅಡವಿ ಕತ್ತಿಯ ನಿಮಿತ್ತ ಪ್ರಾಣ ಸಂಕಟದಿಂದ ನಮಗೆ ರೊಟ್ಟಿ ಸಿಕ್ಕಿದೆ.
Adavi kattiya nimitta praana sankatadinda namage rotti sikkide.
Lamentations 5:9 in English
- King James Version (KJV)
- We gat our bread with [the peril of] our lives because of the sword of the wilderness.
- World English Bible (WEB)
- We get our bread at the peril of our lives, because of the sword in the wilderness.
- American Standard Version (ASV)
- We get our bread at the peril of our lives, Because of the sword of the wilderness.
- Bible in Basic English (BBE)
- We put our lives in danger to get our bread, because of the sword of the waste land.
- Darby Translation (DBY)
- We have to get our bread at the risk of our lives, because of the sword of the wilderness.
- Webster's Bible (WBS)
- We procured our bread with [the peril of] our lives, because of the sword of the wilderness.
- Young's Literal Translation (YLT)
- With our lives we bring in our bread, Because of the sword of the wilderness.
Read in context
- 7ನಮ್ಮ ತಂದೆಗಳು ಪಾಪ ಮಾಡಿ ಇಲ್ಲದೆ ಹೋದರು; ನಾವು ಅವರ ಅಕ್ರಮಗಳನ್ನು ಹೊರುತ್ತೇವೆ.
- 8ಆಳುಗಳು ನಮ್ಮ ಮೇಲೆ ಆಳಿದ್ದಾರೆ; ಯಾರೂ ಅವರ ಕೈಯಿಂದ ನಮ್ಮನ್ನು ತಪ್ಪಿಸುವದಿಲ್ಲ.
- 9ಅಡವಿ ಕತ್ತಿಯ ನಿಮಿತ್ತ ಪ್ರಾಣ ಸಂಕಟದಿಂದ ನಮಗೆ ರೊಟ್ಟಿ ಸಿಕ್ಕಿದೆ.
- 10ಭಯಂಕರವಾದ ಕ್ಷಾಮದಿಂದ ನಮ್ಮ ಚರ್ಮ ಒಲೆಯ ಹಾಗೆ ಕಪ್ಪಾಗಿದೆ.
- 11ಅವರು ಚೀಯೋನಿನಲ್ಲಿ ಹೆಂಗಸರನ್ನೂ ಯೆಹೂದದ ನಗರಗಳಲ್ಲಿ ಕನ್ಯೆಯರನ್ನೂ ಕೆಡಿಸಿದರು.
Cross references
- Ezekiel 4:16–17 ಯೆಹೆಜ್ಕೇಲನು 4:16–17ಇದಾದ ಮೇಲೆ ಆತನು ನನಗೆ ಮನುಷ್ಯ ಪುತ್ರನೇ, ಇಗೋ, ನಾನು ಯೆರೂಸಲೇಮಿನಲ್ಲಿ ಅನ್ನದಾನವನ್ನು ಮುರಿಯುವೆನು. ಅವರು ತೂಕದ ಪ್ರಕಾರ ಜಾಗರೂಕತೆಯಿಂದ ರೊಟ್ಟಿಯನ್ನು ತಿನ್ನುವರು. ನೀರನ್ನು ಅಳತೆಯ ಪ್ರಕಾರ ಆಶ್ಚರ್ಯದಿಂದ ಕುಡಿಯುವರು.ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಆಶ್ಚರ್ಯಪಟ್ಟು ಒಬ್ಬರ ಸಂಗಡ ಒಬ್ಬರು ತಮ್ಮ ಅಕ್ರಮಗಳಿಗಾಗಿ ಕ್ಷಯಿಸಿ ಹೋಗುವರು. ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಆಶ್ಚರ್ಯಪಟ್ಟು ಒಬ್ಬರ ಸಂಗಡ ಒಬ್ಬರು ತಮ್ಮ ಅಕ್ರಮಗಳಿಗಾಗಿ ಕ್ಷಯಿಸಿ ಹೋಗುವರು.
- Ezekiel 12:18–19 ಯೆಹೆಜ್ಕೇಲನು 12:18–19ಮನುಷ್ಯಪುತ್ರನೇ, ನಿನ್ನ ರೊಟ್ಟಿ ಯನ್ನು ನಡುಕದಿಂದ ತಿನ್ನು ಮತ್ತು ನೀರನ್ನು ದಿಗಿಲಿ ನಿಂದಲೂ ಎಚ್ಚರಿಕೆಯಿಂದಲೂ ಕುಡಿ. ನಿನ್ನ ದೇಶದ ಜನರಿಗೆ ಹೀಗೆ ಹೇಳು--ಯೆರೂಸಲೇಮಿನ ನಿವಾಸಿ ಗಳಿಗೆ ಮತ್ತು ಇಸ್ರಾಯೇಲ್ಯರ ದೇಶಕ್ಕೆ ದೇವರಾದ ಕರ್ತನು ಹೇಳಿದ್ದೇನಂದರೆ--ಅವರು ತಮ್ಮ ರೊಟ್ಟಿ ಯನ್ನು ಎಚ್ಚರಿಕೆಯಿಂದಲೇ ತಿನ್ನುವರು; ನೀರನ್ನು ವಿಸ್ಮಯ ದಿಂದಲೇ ಕುಡಿಯುವರು. ಯಾಕಂದರೆ ಅದರಲ್ಲಿ ವಾಸ ವಾಗಿರುವವರೆಲ್ಲರ ಬಲಾತ್ಕಾರದಿಂದ ಅವರ ದೇಶವು ಅವರ ಪರಿಪೂರ್ಣತೆಯನ್ನೆಲಾ ಬಿಟ್ಟು ಹಾಳಾಗು ವದು.
- Jeremiah 40:9–12 ಯೆರೆಮೀಯ 40:9–12ಆಗ ಶಾಫಾನನ ಮಗನಾದ ಅಹೀಕಾಮನ ಮಗನಾದ ಗೆದಲ್ಯನು ಅವರಿಗೂ ಅವರ ಮನುಷ್ಯರಿಗೂ ಪ್ರಮಾಣಮಾಡಿ ಹೇಳಿದ್ದೇನಂದರೆ--ಕಸ್ದೀಯರಿಗೆ ಸೇವೆ ಮಾಡುವದಕ್ಕೆ ಭಯಪಡಬೇಡಿರಿ; ದೇಶದಲ್ಲಿ ವಾಸವಾಗಿದ್ದು ಬಾಬೆ ಲಿನ ಅರಸನಿಗೆ ಸೇವೆಮಾಡಿರಿ; ಆಗ ನಿಮಗೆ ಒಳ್ಳೇದಾ ಗುವದು. ನಾನಾದರೋ ಇಗೋ, ನಾನು ನಮ್ಮ ಬಳಿಗೆ ಬರುವ ಕಸ್ದೀಯರ ಹತ್ತಿರ ಕಾದುಕೊಳ್ಳುವದಕ್ಕೆ ಮಿಚ್ಪದಲ್ಲಿ ವಾಸಮಾಡುವೆನು; ಆದರೆ ನೀವು ದ್ರಾಕ್ಷಾ ರಸವನ್ನೂ ಹಣ್ಣುಗಳನ್ನೂ ಎಣ್ಣೆಯನ್ನೂ ಕೂಡಿಸಿ, ನಿಮ್ಮ ಪಾತ್ರೆಗಳಲ್ಲಿ ಇಟ್ಟು, ನೀವು ಹಿಡಿದಿರುವ ನಿಮ್ಮ ಪಟ್ಟಣ ಗಳಲ್ಲಿ ವಾಸವಾಗಿರಿ. ಹಾಗೆಯೇ ಮೋವಾಬಿನ ಲ್ಲಿಯೂ ಅಮ್ಮೋನ್ಯನ ಮಕ್ಕಳಲ್ಲಿಯೂ ಎದೋಮ್ನ ಲ್ಲಿಯೂ ಸಕಲ ದೇಶಗಳಲ್ಲಿಯೂ ಇದ್ದ ಯೆಹೂದ್ಯರೆ ಲ್ಲರೂ ಬಾಬೆಲಿನ ಅರಸನು ಯೆಹೂದದ ಶೇಷವನ್ನು ಬಿಟ್ಟಿದ್ದಾನೆಂದೂ ಶಾಫಾನನ ಮಗನಾದ ಅಹೀಕಾಮನ ಮಗನಾದ ಗೆದಲ್ಯನನ್ನು ಅವರ ಮೇಲೆ ಇಟ್ಟಿದ್ದಾ ನೆಂದು ಕೇಳಿದಾಗ ಯೆಹೂದ್ಯರೆಲ್ಲರೂ ಅವರು ಓಡಿಸ ಲ್ಪಟ್ಟ ಎಲ್ಲಾ ಸ್ಥಳಗಳಿಂದ ತಿರುಗಿಕೊಂಡು ಯೆಹೂದ ದೇಶಕ್ಕೆ ಗೆದಲ್ಯನ ಬಳಿಗೆ ಮಿಚ್ಪಕ್ಕೆ ಬಂದು ಬಹು ಅಧಿಕವಾಗಿ ದ್ರಾಕ್ಷಾರಸವನ್ನೂ ಹಣ್ಣುಗಳನ್ನೂ ಕೂಡಿಸಿದರು.
- Judges 6:11 ನ್ಯಾಯಸ್ಥಾಪಕರು 6:11ಕರ್ತನ ದೂತನು ಬಂದು ಅಬೀಯೆಜೆರನಾದ ಯೋವಾಷನು ಹೊಂದಿದ ಒಫ್ರದಲ್ಲಿರುವ ಏಲಾ ಮರದ ಕೆಳಗೆ ಕುಳಿತನು. ಆಗ ಯೋವಾಷನ ಮಗ ನಾದ ಗಿದ್ಯೋನನು ಮಿದ್ಯಾನ್ಯರಿಗೆ ಮರೆಯಾಗುವ ಹಾಗೆ ದ್ರಾಕ್ಷೇ ಆಲೆಯ ಬಳಿಯಲ್ಲಿ ಗೋಧಿಯನ್ನು ಬಡಿಯುತ್ತಿದ್ದನು.
- Jeremiah 41:1–10 ಯೆರೆಮೀಯ 41:1–10ಏಳನೇ ತಿಂಗಳಲ್ಲಿ ಆದದ್ದೇನಂದರೆ--ಅರಸನ ಸಂತಾನದವನೂ ಅರಸನ ಪ್ರಧಾನರಲ್ಲಿ ಒಬ್ಬನೂ ಆದಂಥ ಎಲೀಷಾಮನ ಮಗನಾದ ನೆತನ್ಯನ ಮಗನಾದ ಇಷ್ಮಾಯೇಲನೂ ಅವನ ಸಂಗಡ ಹತ್ತು ಮಂದಿ ಮನುಷ್ಯರೂ ಅಹೀಕಾ ಮನ ಮಗನಾದ ಗೆದಲ್ಯನ ಬಳಿಗೆ ಮಿಚ್ಪಕ್ಕೆ ಬಂದರು; ಅವರು ಅಲ್ಲಿ ಮಿಚ್ಪದಲ್ಲಿಯೇ ಊಟಮಾಡಿದರು. ಆಗ ನೆತನ್ಯನ ಮಗನಾದ ಇಷ್ಮಾಯೇಲನು ತನ್ನ ಸಂಗಡ ಇದ್ದ ಹತ್ತು ಮಂದಿ ಮನುಷ್ಯರ ಸಹಿತವಾಗಿ ಎದ್ದು ಬಾಬೆಲಿನ ಅರಸನು ದೇಶದ ಮೇಲೆ ನೇಮಿಸಿದ್ದ ಶಾಫಾನನ ಮಗನಾದ ಅಹೀಕಾಮನ ಮಗನಾದ ಗೆದಲ್ಯನನ್ನು ಕತ್ತಿಯಿಂದ ಹೊಡೆದು ಕೊಂದುಹಾಕಿ ದರು. ಇದಲ್ಲದೆ ಗೆದಲ್ಯನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರೆಲ್ಲರನ್ನೂ ಅಲ್ಲಿ ಸಿಕ್ಕಿದ ಕಸ್ದೀಯರೆಲ್ಲರನ್ನೂ ಯುದ್ಧಸ್ಥರನ್ನೂ ಇಷ್ಮಾಯೇಲನು ಕೊಂದುಹಾಕಿದನು. ಅವನು ಗೆದಲ್ಯನನ್ನು ಕೊಂದುಹಾಕಿದ ಎರಡನೇ ದಿನದಲ್ಲಿ ಅದು ಯಾರಿಗೂ ತಿಳಿಯದಿರುವಾಗ ಶೆಕೆಮ್ನಿಂದಲೂ ಶಿಲೋವಿನಿಂದಲೂ ಸಮಾರ್ಯ ದಿಂದಲೂ ಎಂಭತ್ತು ಮಂದಿ ಮನುಷ್ಯರು ಗಡ್ಡವನ್ನು ಕ್ಷೌರಮಾಡಿದವರಾಗಿಯೂ ವಸ್ತ್ರಗಳನ್ನು ಹರಕೊಂಡವ ರಾಗಿಯೂ ತಮ್ಮನ್ನು ಕೊಯ್ದುಕೊಂಡವರಾಗಿಯೂ ಕರ್ತನ ಆಲಯಕ್ಕೆ ತರುವದಕ್ಕೋಸ್ಕರ ಕಾಣಿಕೆಯನ್ನೂ ಧೂಪವನ್ನೂ ಕೈಯಲ್ಲಿ ತಕ್ಕೊಂಡು ಬಂದರು. ಆಗ ನೆತನ್ಯನ ಮಗನಾದ ಇಷ್ಮಾಯೇಲನು ಮಿಚ್ಪದಿಂದ ಹೊರಟು, ಅಳುತ್ತಲೇ ಅವರ ಎದುರಿಗೆ ಹೋದನು; ಅವರನ್ನು ಎದುರುಗೊಂಡ ಮೇಲೆ ಅವರಿಗೆ--ಅಹೀಕಾ ಮನ ಮಗನಾದ ಗೆದಲ್ಯನ ಬಳಿಗೆ ಬನ್ನಿ ಅಂದನು. ಆಗ ಆದದ್ದೇನಂದರೆ--ಅವರು ಪಟ್ಟಣದ ಮಧ್ಯಕ್ಕೆ ಬಂದಾಗ ನೆತನ್ಯನ ಮಗನಾದ ಇಷ್ಮಾಯೇಲನೂ ತನ್ನ ಸಂಗಡ ಇದ್ದ ಮನುಷ್ಯರೂ ಅವರನ್ನು ಕೊಂದು ಕುಣಿಯೊಳಗೆ ಹಾಕಿಬಿಟ್ಟರು. ಆದರೆ--ನಮ್ಮನ್ನು ಕೊಂದುಹಾಕಬೇಡ; ಯಾಕಂದರೆ ನಮಗೆ ಹೊಲದಲ್ಲಿ, ಗೋಧಿ, ಜವೆಗೋಧಿ, ಎಣ್ಣೆ, ಜೇನು, ಇರುವ ನಿಕ್ಷೇಪಗ ಳುಂಟೆಂದು ಹೇಳಿದ ಹತ್ತು ಮಂದಿ ಮನುಷ್ಯರು ಅವರಲ್ಲಿ ಸಿಕ್ಕಿದರು; ಆದದರಿಂದ ಅವನು ಹಿಂತೆಗೆದು ಅವರನ್ನು ಅವರ ಸಹೋದರರ ಮಧ್ಯದಲ್ಲಿ ಕೊಂದು ಹಾಕಲಿಲ್ಲ. ಇಷ್ಮಾಯೇಲನು ಗೆದಲ್ಯನ ನಿಮಿತ್ತ ಕೊಂದು ಹಾಕಿದ ಮನುಷ್ಯರೆಲ್ಲರ ಹೆಣಗಳನ್ನು ಹಾಕಿದ ಕುಣಿಯು ಯಾವದಂದರೆ--ಅರಸನಾದ ಆಸನು ಇಸ್ರಾಯೇಲಿನ ಅರಸನಾದ ಬಾಷನ ಭಯದಿಂದ ಮಾಡಿದ್ದೇ; ಇದನ್ನು ನೆತನ್ಯನ ಮಗನಾದ ಇಷ್ಮಾಯೇಲನು ಕೊಂದುಹಾಕಿದ ವರಿಂದ ತುಂಬಿಸಿದನು. ಇಷ್ಮಾಯೇಲನು ಮಿಚ್ಪದ ಲ್ಲಿದ್ದ ಉಳಿದವರನ್ನೆಲ್ಲಾ ಅರಸನ ಕುಮಾರ್ತೆಯರನ್ನೂ ಕಾವಲಿನವರ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿಕೊಟ್ಟ ಉಳಿದ ಜನರೆಲ್ಲರನ್ನೂ ಸೆರೆಯಾಗಿ ಒಯ್ದನು; ನೆತನ್ಯನ ಮಗನಾದ ಇಷ್ಮಾಯೇಲನು ಅವರನ್ನು ಸೆರೆಯಾಗಿ ಒಯ್ದು ಅಮ್ಮೋನ್ಯನ ಮಕ್ಕಳ ಬಳಿಗೆ ದಾಟಿ ಹೋಗು ವದಕ್ಕೆ ಹೊರಟನು.
- Jeremiah 42:14 ಯೆರೆಮೀಯ 42:14ನೀವು--ಇಲ್ಲ, ನಾವು ಐಗುಪ್ತದೇಶಕ್ಕೆ ಹೋಗುತ್ತೇವೆ; ಅಲ್ಲಿ ನಾವು ಯುದ್ಧ ವನ್ನು ನೋಡುವದಿಲ್ಲ, ತುತೂರಿಯ ಶಬ್ದವನ್ನು ಕೇಳುವ ದಿಲ್ಲ, ರೊಟ್ಟಿಯ ವಿಷಯ ಕ್ಷಾಮವಾಗುವದಿಲ್ಲ, ಅಲ್ಲಿ ವಾಸಮಾಡುವೆವೆಂದು ಹೇಳುವದಾದರೆ
- Jeremiah 42:16 ಯೆರೆಮೀಯ 42:16ಆಗ ಆಗುವದೇನಂದರೆ --ನೀವು ಭಯಪಡುವ ಕತ್ತಿಯು ಆ ಐಗುಪ್ತದೇಶದಲ್ಲಿ, ನಿಮ್ಮನ್ನು ಹಿಡಿಯುವದು; ನೀವು ಹೆದರಿಕೊಳ್ಳುವ ಕ್ಷಾಮವು ಆ ಐಗುಪ್ತದೇಶಕ್ಕೆ ನಿಮ್ಮನ್ನು ಹಿಂದಟ್ಟುವದು, ಅಲ್ಲೇ ಸಾಯುವಿರಿ.
- 2 Samuel 23:17 2 ಸಮುವೇಲನು 23:17ಅವನು--ಕರ್ತನೇ, ಇದನ್ನು ಕುಡಿಯುವದು ನನಗೆ ದೂರವಾಗಿರಲಿ. ಇದು ತಮ್ಮ ಪ್ರಾಣದಾಶೆ ಬಿಟ್ಟು ಹೋದ ಮನುಷ್ಯರ ರಕ್ತವಲ್ಲವೇ ಎಂದು ಹೇಳಿ ಕುಡಿಯಲೊಲ್ಲದೆ ಇದ್ದನು. ಇವುಗಳನ್ನು ಆ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು.
- Jeremiah 41:18 ಯೆರೆಮೀಯ 41:18ಬಾಬೆಲಿನ ಅರಸನು ದೇಶದ ಮೇಲೆ ನೇಮಿಸಿದ್ದ ಅಹೀಕಾಮನ ಮಗನಾದ ಗೆದಲ್ಯನನ್ನು ನೆತನ್ಯನ ಮಗನಾದ ಇಷ್ಮಾಯೇಲನು ಕೊಂದುಹಾಕಿದ್ದ ರಿಂದಲೇ ಅವರಿಗೆ ಭಯಪಟ್ಟರು.