Leviticus · chapter 14 · verse 46
Leviticus 14:46 in Kannada
ಇದಲ್ಲದೆ ಆ ಮನೆಯು ಮುಚ್ಚಲ್ಪಟ್ಟ ಕಾಲದಲ್ಲೆಲ್ಲಾ ಅದರೊಳಗೆ ಹೋಗುವವನು ಸಾಯಂಕಾಲದ ವರೆಗೆ ಅಶುದ್ಧ ನಾಗಿರುವನು.
Idallade aa maneyu muchchalpatta kaaladallellaa adarolage hoguvavanu saayankaalada varege ashuddha naagiruvanu.
Leviticus 14:46 in English
- King James Version (KJV)
- Moreover he that goeth into the house all the while that it is shut up shall be unclean until the even.
- World English Bible (WEB)
- “Moreover he who goes into the house while it is shut up shall be unclean until the evening.
- American Standard Version (ASV)
- Moreover he that goeth into the house all the while that it is shut up shall be unclean until the even.
- Bible in Basic English (BBE)
- And, in addition, anyone who goes into the house at any time, while it is shut up, will be unclean till evening.
- Darby Translation (DBY)
- And he that goeth into the house as long as it is shut up shall be unclean until the even.
- Webster's Bible (WBS)
- Moreover, he that goeth into the house all the while that it is shut up, shall be unclean until the evening.
- Young's Literal Translation (YLT)
- 'And he who is going in unto the house all the days he hath shut it up, is unclean till the evening;
Read in context
- 44ಯಾಜಕನು ಬಂದು ನೋಡ ಬೇಕು. ಆಗ ಇಗೋ, ವ್ಯಾಧಿಯು ಮನೆಯಲ್ಲಿ ಹರಡಿ ಕೊಂಡಿದ್ದರೆ ಆ ಮನೆಯಲ್ಲಿ ಅದೊಂದು ಪೀಡಿ ಸುವ ಕುಷ್ಠವಾಗಿರುವದು; ಅದು ಅಶುದ್ಧವಾದದ್ದು.
- 45ಅವನು ಆ ಮನೆಯನ್ನು ಕೆಡವಿಹಾಕಿ ಅದರ ಕಲ್ಲು ಗಳನ್ನೂ ಮರಗಳನ್ನೂ ಆ ಮನೆಯ ಎಲ್ಲಾ ಧೂಳನ್ನೂ ತೆಗೆದು ಅವುಗಳನ್ನು ಪಟ್ಟಣದ ಹೊರಗೆ ಅಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
- 46ಇದಲ್ಲದೆ ಆ ಮನೆಯು ಮುಚ್ಚಲ್ಪಟ್ಟ ಕಾಲದಲ್ಲೆಲ್ಲಾ ಅದರೊಳಗೆ ಹೋಗುವವನು ಸಾಯಂಕಾಲದ ವರೆಗೆ ಅಶುದ್ಧ ನಾಗಿರುವನು.
- 47ಆ ಮನೆಯೊಳಗೆ ಮಲಗಿಕೊಳ್ಳುವ ವನೂ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು, ಅಲ್ಲದೆ ಆ ಮನೆಯೊಳಗೆ ತಿನ್ನುವವನೂ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು.
- 48ಆದರೆ ಯಾಜಕನು ಒಳಗೆ ಬಂದು ಅದನ್ನು ನೋಡಿದಾಗ ಇಗೋ, ಗಿಲಾವು ಮಾಡಿದ ನಂತರ ಆ ಮನೆಯಲ್ಲಿ ಆ ವ್ಯಾಧಿಯು ಹರಡಿಕೊಂಡಿರದಿದ್ದರೆ ಆ ಮನೆಯು ಶುದ್ಧವೆಂದು ಯಾಜಕನು ನಿರ್ಣಯಿಸ ಬೇಕು. ಆ ವ್ಯಾಧಿಯು ಸ್ವಸ್ಥವಾಯಿತು.
Cross references
- Numbers 19:21–22 ಅರಣ್ಯಕಾಂಡ 19:21–22ಇದು ಅವರಿಗೆ ನಿತ್ಯ ಕಟ್ಟಳೆಯಾಗಿರಬೇಕು; ಪ್ರತ್ಯೇಕಿಸಲ್ಪಟ್ಟ ನೀರನ್ನು ಚಿಮುಕಿಸುವವನು ತನ್ನ ವಸ್ತ್ರ ಗಳನ್ನು ಒಗೆಯಬೇಕು; ಪ್ರತ್ಯೇಕಿಸಲ್ಪಟ್ಟ ನೀರನ್ನು ಮುಟ್ಟಿದವನು ಸಾಯಂಕಾಲದ ವರೆಗೆ ಅಪವಿತ್ರನಾಗಿರ ಬೇಕು.ಇದಲ್ಲದೆ ಅಪವಿತ್ರನಾದವನು ಮುಟ್ಟು ವಂಥದ್ದೆಲ್ಲಾ ಅಪವಿತ್ರವಾಗುವದು; ಅವನನ್ನು ಮುಟ್ಟಿ ದವನು ಸಾಯಂಕಾಲದ ವರೆಗೆ ಅಪವಿತ್ರನಾಗಿರಬೇಕು ಎಂದು ಹೇಳಿದನು. ಇದಲ್ಲದೆ ಅಪವಿತ್ರನಾದವನು ಮುಟ್ಟು ವಂಥದ್ದೆಲ್ಲಾ ಅಪವಿತ್ರವಾಗುವದು; ಅವನನ್ನು ಮುಟ್ಟಿ ದವನು ಸಾಯಂಕಾಲದ ವರೆಗೆ ಅಪವಿತ್ರನಾಗಿರಬೇಕು ಎಂದು ಹೇಳಿದನು.
- Numbers 19:7–10 ಅರಣ್ಯಕಾಂಡ 19:7–10ಆಗ ಯಾಜಕನು ತನ್ನ ವಸ್ತ್ರಗಳನ್ನು ಒಗೆದುಕೊಂಡು ತನ್ನ ಶರೀರವನ್ನು ನೀರಿನಲ್ಲಿ ತೊಳೆಯ ಬೇಕು; ಆಮೇಲೆ ಪಾಳೆಯದೊಳಗೆ ಬರಬೇಕು. ಯಾಜ ಕನು ಸಾಯಂಕಾಲದ ವರೆಗೆ ಅಶುದ್ಧನಾಗಿರುವನು. ಅದನ್ನು ಸುಟ್ಟವನೂ ತನ್ನ ಶರೀರವನ್ನು ನೀರಿನಲ್ಲಿ ತೊಳೆದುಕೊಂಡು ವಸ್ತ್ರಗಳನ್ನು ಒಗೆದುಕೊಳ್ಳಬೇಕು. ಸಾಯಂಕಾಲದ ವರೆಗೆ ಅಶುದ್ಧನಾಗಿರುವನು. ಶುದ್ಧ ನಾದವನೊಬ್ಬನು ಹಸುವಿನ ಬೂದಿಯನ್ನು ಕೂಡಿಸಿ ಕೊಂಡು ಪಾಳೆಯದ ಹೊರಗೆ ಶುದ್ಧವಾದ ಸ್ಥಳದಲ್ಲಿ ಹಾಕಬೇಕು; ಅದು ಅಲ್ಲಿ ಇಸ್ರಾಯೇಲ್ ಮಕ್ಕಳ ಸಭೆಗೆ ಹೊಲೆಗಳೆವ ನೀರಾಗಿ ಇಡಲ್ಪಡಬೇಕು; ಇದು ಪಾಪದ ಶುದ್ಧೀಕರಣವಾಗಿರುವದು. ಹಸುವಿನ ಬೂದಿಯನ್ನು ಕೂಡಿಸಿದವನು ತನ್ನ ವಸ್ತ್ರಗಳನ್ನು ತೊಳೆದುಕೊಳ್ಳಬೇಕು. ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು; ಇಸ್ರಾಯೇಲ್ ಮಕ್ಕಳಿಗೂ ಅವರ ಮಧ್ಯದಲ್ಲಿ ಪ್ರವಾಸಿಯಾಗಿರುವ ಪರಕೀಯನಿಗೂ ಇದು ಶಾಶ್ವತ ಕಟ್ಟಳೆಯಾಗಿರಬೇಕು.
- Leviticus 15:5–8 ಯಾಜಕಕಾಂಡ 15:5–8ಅವನ ಹಾಸಿಗೆಯನ್ನು ಮುಟ್ಟುವವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು. ಇದಲ್ಲದೆ ಸ್ರಾವವಿರುವವನು ಕೂತುಕೊಂಡ ಯಾವುದೇ ವಸ್ತು ವಿನ ಮೇಲೆ ಕೂತುಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರುವನು. ಸ್ರಾವವಿರುವವನ ಶರೀರವನ್ನು ಮುಟ್ಟುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡ ಬೇಕು ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರ ಬೇಕು. ಶುದ್ಧನಾಗಿರುವನ ಮೇಲೆ ಸ್ರಾವವಿರುವವನು ಉಗುಳಿದರೆ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು.
- Leviticus 22:6 ಯಾಜಕಕಾಂಡ 22:6ಅಂಥದ್ದನ್ನು ಮುಟ್ಟಿದ ಮನುಷ್ಯನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು; ಅವನು ತನ್ನ ಶರೀರವನ್ನು ನೀರಿನಲ್ಲಿ ತೊಳೆದುಕೊಳ್ಳದ ಹೊರತು ಪರಿಶುದ್ಧ ವಾದವುಗಳನ್ನು ತಿನ್ನಬಾರದು.
- Leviticus 11:28 ಯಾಜಕಕಾಂಡ 11:28ಅವುಗಳ ಶವವನ್ನು ಹೊರುವವನು ತನ್ನ ಬಟ್ಟೆಗಳನ್ನು ಒಗೆದು ಕೊಳ್ಳಬೇಕು. ಅವನು ಸಾಯಂಕಾಲದ ವರೆಗೂ ಅಶುದ್ಧ ನಾಗಿರುವನು; ಅವು ನಿಮಗೆ ಅಶುದ್ಧವಾದವುಗಳು.
- Leviticus 17:15 ಯಾಜಕಕಾಂಡ 17:15ನಿಮ್ಮ ದೇಶದವನಾಗಲಿ ಪರಕೀಯನಾಗಲಿ ತನ್ನ ಷ್ಟಕ್ಕೆ ತಾನೇ ಸತ್ತುಹೋದದ್ದನ್ನು ಇಲ್ಲವೆ ಮೃಗಗಳಿಂದ ಹರಿಯಲ್ಪಟ್ಟಿರುವದನ್ನು ತಿನ್ನುವ ಪ್ರತಿಯೊಬ್ಬನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡ ಬೇಕು. ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರ ಬೇಕು, ತರುವಾಯ ಅವನು ಶುದ್ಧನಾಗಿರುವನು.ಆದರೆ ಅವನು ಅವುಗಳನ್ನು ಒಗೆದುಕೊಳ್ಳದೆ ಇದ್ದರೆ ಇಲ್ಲವೆ ತಾನು ಸ್ನಾನಮಾಡದಿದ್ದರೆ ತನ್ನ ಅಪರಾಧವನ್ನು ತಾನೇ ಹೊತ್ತುಕೊಳ್ಳಬೇಕು.
- Leviticus 15:10 ಯಾಜಕಕಾಂಡ 15:10ಇದಲ್ಲದೆ ಅವನ ಕೆಳಗಿರುವ ಯಾವದಾದರೂ ವಸ್ತುವನ್ನು ಮುಟ್ಟಿದವನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು; ಅವುಗಳಲ್ಲಿ ಯಾವದನ್ನಾದರೂ ಹೊತ್ತುಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ನೀರಿನಲ್ಲಿ ಸ್ನಾನಮಾಡಬೇಕು ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರುವನು.
- Leviticus 11:24–25 ಯಾಜಕಕಾಂಡ 11:24–25ಇವುಗಳು ನಿಮಗೆ ಅಶುದ್ಧವಾಗಿರುವವು. ಅವುಗಳ ಶವಗಳನ್ನು ಮುಟ್ಟುವವನು ಸಾಯಂಕಾಲದ ವರೆಗೂ ಅಶುದ್ಧನಾಗಿರುವನು. ಯಾವನಾದರೂ ಅವುಗಳ ಶವವನ್ನು ಹೊತ್ತರೆ ತನ್ನ ಬಟ್ಟೆಗಳನ್ನು ಒಗೆಸಿಕೊಂಡು ಸಾಯಂಕಾಲದ ವರೆಗೂ ಅಶುದ್ಧನಾಗಿರುವನು.