Leviticus · chapter 14 · verse 45
Leviticus 14:45 in Kannada
ಅವನು ಆ ಮನೆಯನ್ನು ಕೆಡವಿಹಾಕಿ ಅದರ ಕಲ್ಲು ಗಳನ್ನೂ ಮರಗಳನ್ನೂ ಆ ಮನೆಯ ಎಲ್ಲಾ ಧೂಳನ್ನೂ ತೆಗೆದು ಅವುಗಳನ್ನು ಪಟ್ಟಣದ ಹೊರಗೆ ಅಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
Avanu aa maneyannu kedavihaaki adara kallu galannoo maragalannoo aa maneya ellaa dhoolannoo tegedu avugalannu pattanada horage ashuddhavaada sthalakke tegedukondu hogabeku.
Leviticus 14:45 in English
- King James Version (KJV)
- And he shall break down the house, the stones of it, and the timber thereof, and all the morter of the house; and he shall carry [them] forth out of the city into an unclean place.
- World English Bible (WEB)
- He shall break down the house, its stones, and its timber, and all the house’s mortar. He shall carry them out of the city into an unclean place.
- American Standard Version (ASV)
- And he shall break down the house, the stones of it, and the timber thereof, and all the mortar of the house; and he shall carry them forth out of the city into an unclean place.
- Bible in Basic English (BBE)
- And the house will have to be pulled down, the stones of it and the wood and the paste; and everything is to be taken out to an unclean place outside the town.
- Darby Translation (DBY)
- And they shall break down the house, the stones of it, and the timber thereof, and all the mortar of the house, and shall carry them forth out of the city to an unclean place.
- Webster's Bible (WBS)
- And he shall break down the house, its stones, and its timber, and all the mortar of the house: and he shall carry [them] forth out of the city to an unclean place.
- Young's Literal Translation (YLT)
- 'And he hath broken down the house, its stones, and its wood, and all the clay of the house, and he hath brought [them] forth unto the outside of the city, unto an unclean place.
Read in context
- 43ಅವನು ಆ ಮನೆಯ ಕಲ್ಲುಗಳನ್ನು ತೆಗೆಸಿ ಅದನ್ನು ಕೆರೆದು ಗಿಲಾವು ಮಾಡಿಸಿದ ಮೇಲೆ ಆ ವ್ಯಾಧಿಯು ತಿರಿಗಿ ಕಾಣಬಂದರೆ
- 44ಯಾಜಕನು ಬಂದು ನೋಡ ಬೇಕು. ಆಗ ಇಗೋ, ವ್ಯಾಧಿಯು ಮನೆಯಲ್ಲಿ ಹರಡಿ ಕೊಂಡಿದ್ದರೆ ಆ ಮನೆಯಲ್ಲಿ ಅದೊಂದು ಪೀಡಿ ಸುವ ಕುಷ್ಠವಾಗಿರುವದು; ಅದು ಅಶುದ್ಧವಾದದ್ದು.
- 45ಅವನು ಆ ಮನೆಯನ್ನು ಕೆಡವಿಹಾಕಿ ಅದರ ಕಲ್ಲು ಗಳನ್ನೂ ಮರಗಳನ್ನೂ ಆ ಮನೆಯ ಎಲ್ಲಾ ಧೂಳನ್ನೂ ತೆಗೆದು ಅವುಗಳನ್ನು ಪಟ್ಟಣದ ಹೊರಗೆ ಅಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
- 46ಇದಲ್ಲದೆ ಆ ಮನೆಯು ಮುಚ್ಚಲ್ಪಟ್ಟ ಕಾಲದಲ್ಲೆಲ್ಲಾ ಅದರೊಳಗೆ ಹೋಗುವವನು ಸಾಯಂಕಾಲದ ವರೆಗೆ ಅಶುದ್ಧ ನಾಗಿರುವನು.
- 47ಆ ಮನೆಯೊಳಗೆ ಮಲಗಿಕೊಳ್ಳುವ ವನೂ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು, ಅಲ್ಲದೆ ಆ ಮನೆಯೊಳಗೆ ತಿನ್ನುವವನೂ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು.
Cross references
- Ezekiel 5:4 ಯೆಹೆಜ್ಕೇಲನು 5:4ತಿರುಗಿ ಅವುಗಳೊಳಗಿಂದ ತೆಗೆದು ಬೆಂಕಿಯ ಮಧ್ಯದಲ್ಲಿ ಹಾಕಿ ಅವುಗಳನ್ನು ಬೆಂಕಿಯಿಂದ ಸುಡು; ಇದರಿಂದ ಆ ಬೆಂಕಿಯು ಸಮಸ್ತ ಇಸ್ರಾಯೇಲಿನ ಮನೆತನದವರೆಗೂ ಹೋಗುವದು.
- 2 Kings 10:27 2 ಅರಸುಗಳು 10:27ಇದಲ್ಲದೆ ಅವರು ಬಾಳನ ವಿಗ್ರಹ ವನ್ನು ಒಡೆದುಹಾಕಿ ಬಾಳನ ಮನೆಯನ್ನು ಕೆಡವಿಬಿಟ್ಟು ಅದನ್ನು ಈ ಹೊತ್ತಿನ ವರೆಗೂ ತಿಪ್ಪೆಯಾಗಿ ಮಾಡಿದರು.
- Matthew 24:2 ಮತ್ತಾಯನು 24:2ಆಗ ಯೇಸು ಅವರಿಗೆ--ಇವುಗಳನ್ನೆಲ್ಲಾ ನೀವು ನೋಡುತ್ತೀರಲ್ಲಾ. ಎಲ್ಲಾ ಕೆಡವ ಲ್ಪಡದು ಕಲ್ಲಿನ ಮೇಲೆ ಕಲ್ಲು ಒಂದು ಇಲ್ಲಿ ಬಿಡಲ್ಪ ಡುವದಿಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳು ತ್ತೇನೆ ಅಂದನು.
- Jeremiah 52:13 ಯೆರೆಮೀಯ 52:13ಕರ್ತನ ಆಲಯವನ್ನೂ ಅರಸನ ಮನೆಯನ್ನೂ ಯೆರೂಸಲೇಮಿನ ಎಲ್ಲಾ ಮನೆಗಳನ್ನೂ ದೊಡ್ಡವರ ಎಲ್ಲಾ ಮನೆಗಳನ್ನೂ ಬೆಂಕಿಯಿಂದ ಸುಟ್ಟು ಬಿಟ್ಟನು;
- 1 Kings 9:6–9 1 ಅರಸುಗಳು 9:6–9ನೀವಾದರೂ ನಿಮ್ಮ ಮಕ್ಕಳಾದರೂ ನಾನು ನಿಮ್ಮ ಮುಂದೆ ಇಟ್ಟ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಕೈಕೊಳ್ಳದೆ ನನ್ನ ಕಡೆಯಿಂದ ಹೊರಟುಹೋಗಿ ಅನ್ಯ ದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ ನಾನು ಆಗ ಇಸ್ರಾಯೇಲಿಗೆ ಕೊಟ್ಟ ಭೂಮಿಯಲ್ಲಿಂದ ಅವ ರನ್ನು ಕಡಿದುಬಿಟ್ಟು ನನ್ನ ಹೆಸರಿಗೋಸ್ಕರ ಪರಿಶುದ್ಧ ಮಾಡಿದ ಈ ಮಂದಿರವನ್ನು ನನ್ನ ಎದುರಿನಿಂದ ತೆಗೆದು ಬಿಡುವೆನು. ಇಸ್ರಾಯೇಲು ಸಮಸ್ತ ಜನಗಳಲ್ಲಿ ಗಾದೆ ಯಾಗಿಯೂ ಅಪಹಾಸ್ಯವಾಗಿಯೂ ಇರುವದು. ಇದ ಲ್ಲದೆ ಈ ಎತ್ತರವಾಗಿರುವ ಮನೆಯನ್ನು ಹಾದುಹೋಗು ವವರೆಲ್ಲರೂ ಅದಕ್ಕೆ ಆಶ್ಚರ್ಯಪಟ್ಟು--ಛೀ ಅಂದುಕರ್ತನು ಈ ದೇಶಕ್ಕೂ ಈ ಮಂದಿರಕ್ಕೂ ಹೀಗೆ ಯಾಕೆ ಮಾಡಿದನು ಎಂದು ಅನ್ನುವರು. ಅವರು ಪ್ರತ್ಯುತ್ತರವಾಗಿ--ತಮ್ಮ ತಂದೆಗಳನ್ನು ಐಗುಪ್ತದೇಶ ದೊಳಗಿಂದ ಬರಮಾಡಿದ ತಮ್ಮ ದೇವರಾದ ಕರ್ತ ನನ್ನು ಬಿಟ್ಟು ಅನ್ಯದೇವರುಗಳನ್ನು ಹೊಂದಿಕೊಂಡು ಅವುಗಳಿಗೆ ಅಡ್ಬಬಿದ್ದು ಸೇವಿಸಿದ್ದರಿಂದ ಕರ್ತನು ಈ ಕೇಡನ್ನೆಲ್ಲಾ ನಮ್ಮ ಮೇಲೆ ಬರಮಾಡಿದನೆಂದು ಹೇಳು ವರು ಅಂದನು.
- 2 Kings 18:4 2 ಅರಸುಗಳು 18:4ಅವನು ಉನ್ನತ ಸ್ಥಳಗಳನ್ನು ತೆಗೆದುಹಾಕಿ, ವಿಗ್ರಹ ಗಳನ್ನು ಒಡೆದುಬಿಟ್ಟು, ತೋಪುಗಳನ್ನು ಕಡಿದುಹಾಕಿ, ಮೋಶೆಯು ಮಾಡಿದ ತಾಮ್ರದ ಸರ್ಪವನ್ನು ಚೂರುಚೂರು ಮಾಡಿದನು. ಆ ದಿವಸಗಳ ವರೆಗೂ ಇಸ್ರಾ ಯೇಲಿನ ಮಕ್ಕಳು ಅದಕ್ಕೆ ಧೂಪಸುಡುತ್ತಿದ್ದರು. ಅದನ್ನು ತಾಮ್ರದ ತುಂಡು ಎಂದು ಅವನು ಕರೆದನು.
- 2 Kings 25:25–26 2 ಅರಸುಗಳು 25:25–26ಆದರೆ ಏಳನೇ ತಿಂಗಳಲ್ಲಿ ರಾಜ ಸಂತಾನದವನಾದ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇ ಲನು ಅವನ ಸಂಗಡ ಹತ್ತು ಮಂದಿ ಬಂದು ಗೆದಲ್ಯ ನನ್ನೂ ಅವನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರನ್ನೂ ಕಸ್ದೀಯರನ್ನೂ ಹೊಡೆದು ಕೊಂದುಹಾಕಿದರು. ಆಗ ಹಿರಿ ಕಿರಿಯರಾದ ಎಲ್ಲಾ ಜನರೂ ದಂಡುಗಳ ಅಧಿ ಪತಿಗಳೂ ಎದ್ದು ಐಗುಪ್ತಕ್ಕೆ ಹೋದರು; ಯಾಕಂದರೆ ಕಸ್ದೀಯರಿಗೆ ಭಯಪಟ್ಟರು.
- 2 Kings 25:4–12 2 ಅರಸುಗಳು 25:4–12ಪಟ್ಟಣವು ವಿಭಾಗಿಸಲ್ಪಟ್ಟಿದ್ದರಿಂದ ಸೈನ್ಯದ ಜನರೆಲ್ಲರೂ ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದಲ್ಲಿ ಬಾಗಲ ಮಾರ್ಗವಾಗಿ ಓಡಿಹೋದರು; ಆದರೆ ಅರಸನು ಬಯಲು ಮಾರ್ಗ ವಾಗಿ ಹೋದನು. ಕಸ್ದೀಯರು ಪಟ್ಟಣದ ಬಳಿಯಲ್ಲಿ ಇದ್ದದರಿಂದ ಅವರ ದಂಡು ಅರಸನನ್ನು ಹಿಂಬಾಲಿಸಿ ಯೆರಿಕೋವಿನ ಬಯಲು ಸ್ಥಳಗಳಲ್ಲಿ ಅವನನ್ನು ಹಿಡು ಕೊಂಡರು. ಅವನ ದಂಡೆಲ್ಲಾ ಅವನ ಕಡೆಯಿಂದ ಚದರಿ ಹೋಯಿತು. ಅವರು ಅರಸನನ್ನು ಹಿಡಿದು ಕೊಂಡು, ರಿಬ್ಲದಲ್ಲಿರುವ ಬಾಬೆಲಿನ ಅರಸನ ಬಳಿಗೆ ತಕ್ಕೊಂಡು ಬಂದು ಅವನ ಮೇಲೆ ನ್ಯಾಯವನ್ನು ನಿರ್ಣಯಿಸಿದರು. ಅವರು ಚಿದ್ಕೀಯನ ಮಕ್ಕಳನ್ನು ಅವನ ಕಣ್ಣೆದುರಿನಲ್ಲಿಯೇ ಕೊಂದ ತರುವಾಯ ಅವನ ಕಣ್ಣುಗಳನ್ನು ಕಿತ್ತುಹಾಕಿ ಅವನಿಗೆ ಹಿತ್ತಾಳೆಯ ಬೇಡಿ ಹಾಕಿ ಅವನನ್ನು ಬಾಬೆಲಿಗೆ ತಕ್ಕೊಂಡು ಹೋದರು. ಐದನೇ ತಿಂಗಳಿನ ಏಳನೇ ದಿವಸಕ್ಕೆ ಸರಿಯಾಗಿ ಬಾಬೆಲಿನ ಅರಸನಾದ ನೆಬೂಕದ್ನೆಚರನ ಆಳ್ವಿಕೆಯ ಹತ್ತೊಂಭತ್ತನೇ ವರುಷದಲ್ಲಿ ಬಾಬೆಲಿನ ಅರಸನ ಸೇವಕ ನಾದ ಕಾವಲಿನ ಅಧಿಪತಿಯಾದ ನೆಬೂಜರದಾನನು ಯೆರೂಸಲೇಮಿಗೆ ಬಂದು, ಕರ್ತನ ಮನೆಯನ್ನೂ ಅರಮನೆಯನ್ನೂ ಯೆರೂಸಲೇಮಿನಲ್ಲಿರುವ ಎಲ್ಲಾ ಮನೆಗಳನ್ನೂ ಪ್ರತಿ ದೊಡ್ಡ ಮನುಷ್ಯನ ಮನೆಯನ್ನೂ ಬೆಂಕಿಯಿಂದ ಸುಟ್ಟು ಬಿಟ್ಟನು. ಕಾವಲುಗಾರರ ಅಧಿಪತಿಯ ಸಂಗಡದಲ್ಲಿದ್ದ ಕಸ್ದೀಯರ ಸೈನ್ಯದವರೆ ಲ್ಲರೂ ಯೆರೂಸಲೇಮಿನ ಸುತ್ತಲೂ ಇರುವ ಗೋಡೆ ಗಳನ್ನು ಕೆಡವಿಬಿಟ್ಟರು. ಪಟ್ಟಣದಲ್ಲಿ ಉಳಿದ ಜನ ರನ್ನೂ ಬಾಬೆಲಿನ ಅರಸನ ಕಡೆಗೆ ಬಿದ್ದವರನ್ನೂ ಗುಂಪಿ ನಲ್ಲಿ ಮಿಕ್ಕ ಜನರನ್ನೂ ಕಾವಲಿನ ಅಧಿಪತಿಯಾದ ನೆಬೂಜರದಾನನು ಸೆರೆಯಾಗಿ ಒಯ್ದನು. ಆದರೆ ಕಾವಲಿನ ಅಧಿಪತಿಯು ದ್ರಾಕ್ಷೇತೋಟ ಮಾಡುವ ಹಾಗೆಯೂ ಬೇಸಾಯ ಮಾಡುವ ಹಾಗೆಯೂ ದೇಶದ ಬಡವರನ್ನು ಉಳಿಸಿಬಿಟ್ಟನು.
- Romans 11:7–11 ರೋಮಾಪುರದವರಿಗೆ 11:7–11ಹಾಗಾದರೇನು? ಇಸ್ರಾ ಯೇಲ್ಯರು ತಾವು ಹುಡುಕಿದ್ದನ್ನು ಹೊಂದಿಕೊಳ್ಳಲಿಲ್ಲ; ಆದರೆ ಆಯ್ಕೆಯಾದವರು ಅದನ್ನು ಹೊಂದಿಕೊಂಡರು. (ಬರೆದಿರುವಂತೆ ದೇವರು ಅವರಿಗೆ ತೂಕಡಿಕೆಯ ಆತ್ಮವನ್ನೂ ಕಾಣದ ಕಣ್ಣುಗಳನ್ನೂ ಕೇಳದ ಕಿವಿಗಳನ್ನೂ ಕೊಟ್ಟಿದ್ದಾನೆ). ಉಳಿದವರು ಈ ದಿನದ ವರೆಗೂ ಕುರುಡರಾಗಿದ್ದಾರೆ. ಇದಲ್ಲದೆ ದಾವೀದನು--ಅವರ ಊಟವು ಅವರಿಗೆ ಉರ್ಲೂ ಬೋನೂ ಅಭ್ಯಂತರವೂ ಪ್ರತಿಫಲವೂ ಆಗಲಿ. ನೋಡದಂತೆ ಅವರ ಕಣ್ಣು ಗಳು ಮೊಬ್ಬಾಗಲಿ; ಅವರ ಬೆನ್ನು ಯಾವಾಗಲೂ ಬೊಗ್ಗಿಕೊಂಡಿರಲಿ ಎಂದು ಅನ್ನುತ್ತಾನೆ. ಹಾಗಾದರೆ--ಅವರು ಬಿದ್ದುಹೋಗುವಂತೆ ಎಡವಿದರೆಂದು ನಾನು ಹೇಳಬೇಕೋ? ಹಾಗೆ ಎಂದಿಗೂ ಆಗಬಾರದು; ಆದರೆ ಅವರಲ್ಲಿ ಹುರುಡು ಹುಟ್ಟಿಸುವದಕ್ಕಾಗಿ ಅವರ ಬೀಳುವಿಕೆಯ ಮೂಲಕವೇ ಅನ್ಯಜನರಿಗೆ ರಕ್ಷಣೆಯುಂಟಾಯಿತು.
- Matthew 22:7 ಮತ್ತಾಯನು 22:7ಆದರೆ ಅರಸನು ಅದನ್ನು ಕೇಳಿ ಕೋಪೋದ್ರೇಕವುಳ್ಳವನಾಗಿ ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹ ರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.
- Revelation 11:2 ಪ್ರಕಟನೆ 11:2ಆದರೆ ಆಲಯದ ಹೊರಗಿರುವ ಅಂಗಳವನ್ನು ಅಳೆಯದೆ ಬಿಟ್ಟುಬಿಡು; ಯಾಕಂದರೆ ಅದು ಅನ್ಯ ಜನರಿಗೆ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು ನಾಲ್ವತ್ತೆರಡು ತಿಂಗಳು ತುಳಿದಾಡುವರು.
- 2 Kings 17:20–23 2 ಅರಸುಗಳು 17:20–23ಆದದರಿಂದ ಕರ್ತನು ಇಸ್ರಾಯೇಲಿನ ಸಂತತಿ ಯನ್ನೆಲ್ಲಾ ಅಲಕ್ಷ್ಯಮಾಡಿಬಿಟ್ಟು ಅವರನ್ನು ಕುಂದಿಸಿ ಅವರನ್ನು ತನ್ನ ಸಮ್ಮುಖದಿಂದ ತಳ್ಳಿಬಿಡುವ ವರೆಗೆ ಅವರನ್ನು ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟನು. ಅವನು ಇಸ್ರಾಯೇಲನ್ನು ದಾವೀದನ ಮನೆಯಿಂದ ಹರಿದುಬಿಟ್ಟನು; ಅವರು ನೆಬಾಟನ ಮಗನಾದ ಯಾರೊಬ್ಬಾಮನನ್ನು ಅರಸನನ್ನಾಗಿ ಮಾಡಿಕೊಂಡರು. ಆಗ ಯಾರೊಬ್ಬಾಮನು ಇಸ್ರಾಯೇಲ್ಯರನ್ನು ಕರ್ತ ನನ್ನು ಹಿಂಬಾಲಿಸುವದರಿಂದ ತಪ್ಪಿಸಿ ಅವರನ್ನು ಮಹಾ ಪಾಪಮಾಡಲು ಪ್ರೇರೇಪಿಸಿದನು. ಕರ್ತನು ಪ್ರವಾ ದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ ಹಾಗೆ ಅವನು ಇಸ್ರಾಯೇಲನ್ನು ತನ್ನ ಸಮ್ಮುಖದಿಂದ ತೆಗೆದು ಹಾಕುವ ವರೆಗೆ ಇಸ್ರಾಯೇಲಿನ ಮಕ್ಕಳು ಯಾರೊ ಬ್ಬಾಮನು ಮಾಡಿದ ಎಲ್ಲಾ ಪಾಪಗಳಲ್ಲಿ ನಡೆದರು; ಅವುಗಳನ್ನು ತೊರೆದು ಬಿಡಲಿಲ್ಲ. ಹೀಗೆಯೇ ಇಸ್ರಾ ಯೇಲಿನವರು ಇಂದಿನ ವರೆಗೂ ತಮ್ಮ ದೇಶದಿಂದ ಅಶ್ಶೂರಿಗೆ ಸೆರೆಯಾಗಿ ಒಯ್ಯಲ್ಪಟ್ಟರು.